ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಭಾರತಿಬಾಯಿ
ಗಂಡ ದಿ: ಬಾಬು ಗುತ್ತೇದಾರ ಸಾ: ಬಳೂರ್ಗಿ ರವರ ಮಗನಾದ ದತ್ತು ಇತನು ಕಲಬುರಗಿಯ ತಿಮ್ಮಾಪೂರ ವೃತ್ತದಲ್ಲಿರುವ ಸ್ವಂತ
ಕಟ್ಟಡದಲ್ಲಿ ವೈನಶಾಪ ಇಟ್ಟುಕೊಂಡು ಕೆಲಸ ಮಾಡುತ್ತಾ ಕಲಬುರಗಿಯ ಶಾಂತಿ ನಗರದಲ್ಲಿ ಸ್ವಂತ ಮನೆಯಲ್ಲಿ
ತನ್ನ ಹೆಂಡತಿ ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿರುತ್ತಾನೆ. ಬಳೂರ್ಗಿ ಗ್ರಾಮದಲ್ಲಿ ನಾನು ನಮ್ಮ ಹೊಲ ಮನೆ ನೋಡಿಕೊಳ್ಳುತ್ತಾ ಮನೆಯಲ್ಲಿ ನಾನೋಬ್ಬಳೆ
ವಾಸವಾಗಿದ್ದು ಆಗಾಗ ನನ್ನ ಮಕ್ಕಳ ಹತ್ತಿರ ಹೋಗಿ ಬರುವುದು ಮಾಡುತ್ತೆನೆ. ನನ್ನ ಮಗನಾದ ದತ್ತು ಇತನು ತನ್ನ ವ್ಯಾಪಾರಕ್ಕಾಗಿ ಈಗ ಕೆಲವು ವರ್ಷಗಳ ಹಿಂದೆ ವೈನಶಾಪ
ಇದ್ದ ಕಟ್ಟಡದ ಮೇಲೆ ಕಲಬುರಗಿಯ ವಿಜಯಾ ಬ್ಯಾಂಕ ರವರಲ್ಲಿ ಸುಮಾರು 50 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಸದರಿ ಸಾಲವನ್ನು ತೀರಿಸಲಾಗದೆ ಈಗ ಕೇಲವು ದಿನಗಳಹಿಂದೆ ಕಲಬುರಗಿಯ ವಿಜಯಾ ಬ್ಯಾಂಕನ
ಅಧಿಕಾರಿಗಳು ಸಾಲ ಮರುಪಾವತಿ ಮಾಡಿ ಇಲ್ಲವಾದರೆ ನಿಮ್ಮ ಅಂಗಡಿಯನ್ನು ಹರಾಜು ಮಾಡುತ್ತೇವೆ ಅಂತಾ ನೋಟಿಸ ನೀಡಿರುತ್ತಾರೆ. ಸದರಿ ನೋಟಿಸ್ ನೀಡಿದ ವಿಷಯ ನನ್ನ ಮಗ ನನಗೆ ತಿಳಿಸಿದರಿಂದ ನಾನು ಚಿಂತೆ ಮಾಡಬೇಡಾ
ಕೇಲವು ವರ್ಷಗಳಿಂದ ಹೊಲದ ಆದಾಯದಲ್ಲಿ ನಾನು ಚಿನ್ನಾಭರಣಗಳನ್ನು ಖರೀದಿ ಮಾಡಿ ಇಟ್ಟಿರುತ್ತೇನೆ, ಅವುಗಳನ್ನು ಮಾರಿ ಹಾಗೂ ಉಳಿದ ಹಣವನ್ನು ಹೇಗದಾರು ಮಾಡಿ ಕೂಡಿಸಿ ಸಾಲ ತೀರಿಸೊಣಾ ಅಂತಾ
ನನ್ನ ಮಗನಿಗೆ ಹೇಳಿರುತ್ತೇನೆ. ನನ್ನ ಹತ್ತಿರ ಇದ್ದ ಒಟ್ಟು 28 ತೋಲೆ (280 ಗ್ರಾಂ) ಬಂಗಾರದ ಆಭರಣಗಳನ್ನು ಬಳೂರ್ಗಿ ಗ್ರಾಮದ ನನ್ನ ಮನೆಯ
ಟ್ರಜರಿಯಲ್ಲಿಯೇ ಇಟ್ಟಿರುತ್ತೇನೆ. ನನ್ನ ಗಂಡನ ಪುಣ್ಯ ತಿಥಿ ಇರುವುದರಿಂದ ನಾನು & ನನ್ನ ಮಗ ದತ್ತು ಹಾಗೂ ಮೊಮ್ಮಕ್ಕಳು ಕೂಡಿ ಕಾಶಿಗೆ ಹೋಗಲು
ದಿನಾಂಕ: 28-09-2018 ರಂದು ನಾನು ಬಳೂರ್ಗಿಯಿಂದ ಕಲಬುರಗಿಗೆ ಹೊಗಿ ಅಲ್ಲಿಂದ ಎಲ್ಲರೂ
ಕೂಡಿ ಕಾಶಿಗೆ ಹೋಗಿರುತ್ತೇವೆ ಹೋಗುವಾಗ ನನ್ನ ಹತ್ತಿರವಿದ್ದ ಚಿನ್ನಾಭರಣಗಳನ್ನು ಬಳೂರ್ಗಿ ಗ್ರಾಮದ
ನನ್ನ ಮನೆಯ ಟ್ರಜರಿಯಲ್ಲಿಯೇ ಇಟ್ಟು ಮನೆಗೆ ಕೀಲಿ ಹಾಕಿಕೊಂಡು ಹೋಗಿರುತ್ತೇನೆ. ದಿನಾಂಕ 05-10-2018 ರಂದು ನಾನು
ಕಲಬುರಗಿಯ ನನ್ನ ಮಗನ ಮನೆಯಲ್ಲಿದ್ದಾಗ ನಮ್ಮ ಮೈದುನನಾದ ಅಶೋಕ ತಂದೆ ವೇಂಕಯ್ಯಾ ಗುತ್ತೇದಾರ ಇವರು
ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ: 04-10-2018 ರಂದು ರಾತ್ರಿ 11.30 ಗಂಟೆಯ ಸುಮಾರಿಗೆ ನಾನು ನಂದಿ ಬಸವೇಶ್ವರ ಜಾತ್ರೆಯ ಪುರಾಣ
ಮುಗಿಸಿ ಮನೆಗೆ ಬರುತ್ತಿದ್ದಾಗ ಮನೆಯ ಬಾಗಿಲಿಗೆ ಕೀಲಿಯಿದ್ದು ಇಂದು ಬೆಳಿಗ್ಗೆ ನೋಡಲಾಗಿ ಮನೆಯ ಬಾಗಿಲು
ತೆರೆದಿತ್ತು ನೀವು ಬಂದಿರ ಬಹುದೆಂದು ತಿಳಿದುಕೊಂಡು ಸುಮ್ಮನಿದ್ದು ಎಷ್ಟೋತ್ತಾದರು ನೀವು ಮನೆಯಿಂದ
ಹೊರಗೆ ಬರದೆಯಿದ್ದರಿಂದ ಮನೆಯ ಬಾಗಿಲ ಹತ್ತಿರ ಹೋಗಿ ನೋಡಿದಾಗ ನಿಮ್ಮ ಮನೆಯ ತಲಬಾಗಿಲಿನ ಕೊಂಡಿ ಕತ್ತರಿಸಿದ್ದು
ನೋಡಿ ಕೂಗಿದಾಗ ನೀವು ಇಲ್ಲದೇ ಇರುವುದನ್ನು ನೋಡಿ ನಿಮಗೆ ಪೋನ ಹಚ್ಚಿದ್ದೆನೆ ಬಹುಶಃ ನಿಮ್ಮ ಮನೆ ಕಳ್ಳತನವಾಗಿರ
ಬಹುದು ನೀವು ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಗ ಸೊಸೆ ಹಾಗೂ ನನ್ನ ಮೊಮ್ಮಕ್ಕಳು
ಎಲ್ಲರೂ ಕೂಡಿ ಬಳೂರ್ಗಿಗೆ ಬಂದು ನಮ್ಮ ಮನೆಯನ್ನು ನೋಡಲಾಗಿ ನಮ್ಮ ಮನೆಯ ತೋಲಬಾಗಿಲ ಕೀಲಿಯನ್ನು ಕೊಂಡಿ
ಸಮೇತ ಕತ್ತಿರಿಸಿದ್ದು ಹಾಗೂ ಒಳಕೋಣೆಯ ಬಾಗಿಲ ಕೀಲಿಯನ್ನು ಮುರಿದು ಟ್ರಜರಿಯಲ್ಲಿಟ್ಟಿದ್ದ ನಗದು ಹಣ
ಬಂಗಾರದ ಹೀಗೆ ಒಟ್ಟು ಅ:ಕಿ: 8,90,000/- ರೂಪಾಯಿ ಕಿಮ್ಮತ್ತಿನವುಗಳನ್ನು
ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಫಜಲಪೂರ ಠಾಣೆ : ಶ್ರೀಮತಿ ಶಿ ಸುನಿತಾ ಗಂಡ ಗೌರೀಶ ಮಲ್ಲಿನಾಥ ಸಾ|| ಲಿಂಬಿತೋಟ
ಅಫಜಲಪೂರ ರವರು ದಿನಾಂಕ 03-10-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ನನ್ನ ಮಗನನ್ನು
ಕರೆದುಕೊಂಡು ಹಾಸ್ಟೇಲಿಗೆ ಹೋಗಿರುತ್ತೇನೆ. ಹೋಗುವಾಗ ಮನೆಯ ಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು ಹೋಗಿರುತ್ತೇನೆ.
ನಮ್ಮ ಮನೆಗೆ ಎರಡು ಬಾಗಿಲುಗಳು ಇರುತ್ತವೆ. ನಾನು ಹಾಸ್ಟೇಲಿನಿಂದ ಮರಳಿ ರಾತ್ರಿ 11:00 ಗಂಟೆಗೆ ಮನೆಗೆ
ಬಂದು ನೋಡಲಾಗಿ ಯಾರೊ ಕಳ್ಳರು ನನ್ನ ಮನೆಯ ಹಿಂದಿನ ಬಾಗಿಲದ ಕೊಂಡಿಯನ್ನು ಮುರಿದು ತಗೆದು ನನ್ನ ಮನೆಯ
ಒಳ ಕೋಣೆಯ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಅಕಿ-75,000/- ರೂ ಇವುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಸದರಿ ಕಳ್ಳತನ ನಿನ್ನೆ ದಿನಾಂಕ 03-10-2018 ರಂದು ರಾತ್ರಿ 8:00 ಗಂಟೆಯಿಂದ ರಾತ್ರಿ 11:00 ಗಂಟೆಯ
ಮದ್ಯದ ಅವದಿಯಲ್ಲಿ ನಡೆದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment