Police Bhavan Kalaburagi

Police Bhavan Kalaburagi

Tuesday, October 9, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀ ಸಿದ್ದಪ್ಪ ಕಾಳಗೊಂಡ ಸಾ|| ಗೊಬ್ಬೂರ (ಬಿ) ರವರು ಮೇಲೆ ನಮೋದಿಸಿದ ವಿಳಾಸದಲ್ಲಿ ವಾಸವಾಗಿದ್ದು, ಕೂಲಿಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತನೆ ನನಗೆ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ಕಲಬುರಗಿಯಲ್ಲಿ ಕೆ.ಎಸ್.ಆರ್. ಟಿ. ಸಿ ಬಸ್ ಡಿಪೋದಲ್ಲಿ ಅಪ್ರಂಟಿಸ್ ತರಬೇತಿ ಮಾಡುತ್ತಿದ್ದನು, ದಿನಾಂಕ 06-10-2018 ರಂದು ಮುಂಜಾನೆ ನನ್ನ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ನಮ್ಮ ಸಂಬಂದಿಕನಾದ ಬಂಡೆಪ್ಪ ಮಾಯಗೊಂಡ ಎಂಬುವವರ ಸೈಕಲ ಮೋಟಾರ ನಂ ಕೆಎ-32 ಇಆರ್-0166 ನೇದ್ದನ್ನು ತೆಗೆದುಕೊಂಡು ಅಪ್ರಂಟಿಸ್ ತರಬೇತಿಗೆ ಅಂತ ಕಲಬುರಗಿಗೆ ಬಂದಿದ್ದನು.  ದಿನಾಂಕ 06-10-2018 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕನಾದ ಜೇಟ್ಟೆಪ್ಪ ಪೂಜಾರಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ಮಹಿಬೂಬಸಾಬ ಮಕನದಾರ ಇಬ್ಬರು ಕೂಡಿಕೊಂಡು ಮಹಿಬೂಬಸಾಬನ ಸ್ಕಾರ್ಪಿಯೋ ವಾಹನಕ್ಕೆ ಡಿಸೇಲ ಹಾಕಿಸಿಕೊಂಡು ಬರಲು ನಮ್ಮೂರ ಹತ್ತಿರ ಇರುವ ಪೆಟ್ರೊಲ ಪಂಪಿಗೆ ಹೋಗುತ್ತಿದ್ದಾಗ ರಾತ್ರಿ 8-45 ಗಂಟೆಯ ಸುಮಾರಿಗೆ ದೇಶಮುಖ ರವರ ಹೊಲದ ಹತ್ತಿರ ರೊಡಿನ ಮೇಲೆ ನಿಮ್ಮ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ  ಎಂಬಾತನು ಸೈಕಲ ಮೋಟಾರ ನಂ ಕೆಎ -32 ಇಆರ್-0166 ನೇದ್ದರ ಮೇಲೆ ಕಲಬುರಗಿಯಿಂದ ಊರಿಗೆ ಬರುತ್ತಿದ್ದಾಗ ಹಿಂದಿನಿಂದ ಸೈಕಲ ಮೊಟಾರ ನಂ ಕೆಎ-32 ಇಎಫ-7639 ನೇದ್ದರ ಚಾಲಕನು ತನ್ನ ಸೈಕಲ ಮೋಟಾರನ್ನು ಅತೀವೇಗವಾಗಿ ಮತ್ತು ನೀಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಯಲ್ಲಪ್ಪ @ ಯಲ್ಲಾಲಿಂಗನ ಸೈಕಲ ಮೋಟಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಯಲ್ಲಪ್ಪ@ ಯಲ್ಲಾಲಿಂಗನಿಗೆ ತಲೆಗೆ ಭಾರಿ ರಕ್ತಗಾಯ ಎದೆಗೆ ಭಾರಿ ಗುಪ್ತಗಾಯ ಮೊಣಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ತಮ್ಮನಾದ ಬೀರಪ್ಪ ಕಾಳಗೊಂಡ ಮತ್ತು ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ಮತ್ತಿತರರು  ಕೂಡಿಕೊಂಡು ಘಟನಾ ಸ್ಥಳಕ್ಕೆ ಹೊಗಿ ನನ್ನ ಮಗನಿಗೆ ಆದ ಗಾಯಗಳನ್ನು ನೋಡಿರುತ್ತವೆ, ಸೈಕಲ ಮೋಟಾರ ಚಾಲಕನು ತನ್ನ ಸೈಕಲ ಮೋಟಾರನ್ನು ಅಲ್ಲೆ ಬಿಟ್ಟು ಓಡಿ ಹೊಗಿದ್ದನು. ನಂತರ ನನ್ನ ಮಗನಿಗೆ ಉಪಚಾರ ಕುರಿತು ನಮ್ಮೂರ ಸರಕಾರಿ ದವಾಖಾನೆಗೆ ತೆಗೆದುಕೊಂಡು ಬಂದು ನಂತರ ಹೆಚ್ಚಿನ ಉಪಚಾರಕ್ಕಾಗಿ ನಾನು ನಮ್ಮ ತಮ್ಮನಾದ ಬೀರಪ್ಪ ಕಾಳಗೊಂದ ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ರವರೆಲ್ಲಾರು ಕೂಡಿಕೊಂಡು ನನ್ನ ಮಗನಿಗೆ 108 ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಕಲಬುರಗಿಗೆ ಬರುತ್ತಿದ್ದಾಗ, ಮಾರ್ಗಮದ್ಯ ಶರಣ ಶಿರಸಗಿ ಹತ್ತಿರ ಮೃತಪಟ್ಟಿರುತ್ತಾನೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:07/10/18 ರಂದು ಶ್ರೀ ರಾಹುಲ ತಂದೆ ಚಂದ್ರಕಾಂತ ಜಾಲೇಕರ ಸಾ: ಕುರಿಕೊಟಾ ತಾ:ಜಿ: ಕಲಬುರಗಿ ರವರು ತನ್ನ ಮೋ.ಸೈಕಲ ನಂ. ಕೆ.ಎ-32 ಇಕ್ಯೂ-2513ನೇದ್ದರ ಮೇಲೆ ಗಾಯಾಳು ಮೋಹಿತ ಈತನಿಗೆ ಕೂಡಿಸಿಕೊಂಡು ಕುರಿಕೋಟಾ ಹೊಸ ಸೇತುವೆ ಕಟ್ಟಡ ಕಾಮಗಾರಿ ನೋಡಿಕೊಂಡು ಮರಳಿ ಕುರಿಕೋಟಾ ಕಡೆಗೆ ಬರುತ್ತಿರುವಾಗ ಶಿವಪ್ರಭು ಪೆಟ್ರೋಲ ಪಂಪ ಹತ್ತಿರ ಅಪಾದಿತನು ತನ್ನ ಕಾರ ನಂ ಕೆ.ಎ-32 ಎಂ-7494 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಸಾಧಾ ಗಾಯ ಮತ್ತು ಮೋಹಿತ ಇತನಿಗೆ ಭಾರಿ ಗಾಯ ಪಡಿಸಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ:ಚವ್ಹಾಣ ತಾಂಡಾ ಕಮಲಾಪೂರ ಹಾ:ವ:ಹನುಮಾನ ನಗರ ತಾಂಡಾ ಕಲಬುರಗಿ ರವರ ಮದುವೆಯು ಹಿಂದು ಸಂಪ್ರದಾಯದ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3 ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ಅಂದರೆ ದಿನಾಂಕ: 12.06.2017 ರಂದು ಬೆಳಗ್ಗೆ 11 ಗಂಟೆಗೆ  ನನ್ನ ಪತಿಯವರು ನನ್ನ ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದುನ ಎಲ್ಲರೂ ಕಿರುಕುಳ ನೀಡುತ್ತಿರುವ ಪ್ರಯುಕ್ತ  ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1 ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ ಬರುವುದಿಲ್ಲ ನೀ ಏನು  ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1  ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ ನನ್ನ ತಂದ ತಾಯಿಯವರು ಇರುತ್ತಾರೆ.ಪ್ರಯುಕ್ತ ಮಾನ್ಯರು ಈ ನನ್ನ ಮನವಿಗೆ ಸ್ಪಂದಿಸಿ ಈ ಮೇಲೆ ಹೇಳಿರುವ ನನ್ನ ಅತ್ತೆ ಮಾವ ಹಾಗೂ ಮೈದುನನ್ನ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಕೊಂಡು ಅನ್ಯಾಯಕ್ಕೆ ಒಳಗಾಗಿರುವ ನನಗೆ ಸೂಕ್ತ ನ್ಯಾಯ ಒದಗಿಸಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಸೋಮರಾಯ ತಂದೆ ಹಣಮಂತ ಮಾಂಗ ಸಾ: ಕುರನಳ್ಳಿ ಇವರ ಹೊಲ ಇದ್ದು ಅದರ ಸರ್ವೆ ನಂ. 74 ವಿಸ್ತರ್ಣ 3 ಎಕರೆ 6 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ತೊಗರಿ ಬೆಳೆ ಇರುತ್ತದೆ. ದಿನಾಂಕ: 09-09-2018 ರಂದು ರಾತ್ರಿ ಸಮಯದಲ್ಲಿ ನಮ್ಮೂರ 1] ಗುರುನಾಥ ತಂದೆ ಶ್ರೀಮಂತರಾಯಗೌಡ ಮಾಲಿಪಾಟೀಲ, 2] ಯಮನೂರಗೌಡ ತಂದೆ ಭಗವಂತ್ರಾಯಗೌಡ ಮಾಲಿಪಾಟೀಲ, 3] ಶರಣಗೌಡ ತಂದೆ ಹಣಮಂತ್ರಾಯಗೌಡ ಮಾಲಿಪಾಟೀಲ 4] ಶ್ರೀಶೈಲ ತಂದೆ ಅಮೃತಗೌಡ ಮಾಲಿಪಾಟೀಲ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿನ ಎಣೆ ಹೊಡೆದಿರುತ್ತಾರೆ, ನಾನು ಮರುದಿನ ಅಂದರೆ ದಿನಾಂಕ: 10-09-2018 ರಂದು ಬೆಳೀಗ್ಗೆ 08-00 ಗಂಟೆಗೆ ಗುರುನಾಥಗೌಡ ಮತ್ತು ಶರಣಗೌಡ ಇವರ ಮನೆಗೆ ಹೋಗಿ ಅವರಿಗೆ ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಯಾಕೆ ಹೊಡೆದಿರಿ ಅಂತಾ ಕೆಳಿದ್ದಕ್ಕೆ ಗುರುನಾಥಗೌಡ ಮತ್ತು ಶರಣಗೌಡ ಇವರು ಹೋಗಲೆ ಮಾದಿಗ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಕಳುಹಿಸಿದ್ದು ಇರುತ್ತದೆ. ನಾನು ಈ ಬಗ್ಗೆ ನಮ್ಮ ಮನಯವರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತಿದ್ದು ನಮ್ಮ ಹೊಲದಲ್ಲಿ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಹೊಡೆದು ಅಂದಾಜು 1,60,000=00 ರೂ ಕಿಮ್ಮತ್ತಿನಷ್ಟು ಹಾನಿ ಮಾಡಿದ್ದು ಕೇಳಲು ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: