Police Bhavan Kalaburagi

Police Bhavan Kalaburagi

Tuesday, November 27, 2018

BIDAR DISTRICT DAILY CRIME UPDATE 27-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-11-2018

ಮಾರ್ಕೇಟ್ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2018, ಕಲಂ. 174(ಸಿ) ಸಿ.ಆರ್.ಪಿ.ಸಿ :-
ದಿನಾಂಕ 26-11-2018 ರಂದು ಫಿರ್ಯಾದಿ ಪೀರಪ್ಪಾ ತಂದೆ ಝರೆಪ್ಪಾ ಬಸಣ್ಣೂರ ವಯ: 51 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಶಾಹಾಪೂರ ಗ್ರಾಮ, ತಾ: & ಜಿ: ಬೀದರ ರವರು ತಮ್ಮೂರ ಉಮೇಶ ತಂದೆ ನಿರಂಜಪ್ಪಾ ಇಬ್ಬರು ಕೂಡಿ ಬೀದರ ನಗರದ ಶಾಹಾಪೂರ ಗೇಟ ಕಡೆಗೆ ಬಂದಾಗ ಅಲ್ಲಿ ಗೋತ್ತಾಗಿದ್ದೆನಂದರೆ ಬೀದರ ಜಹಿರಾಬಾದ ರೋಡ ದೇವ ದೇವ ವನದ ಹತ್ತಿರ ಇರುವ ಒಂದು ಬ್ರಿಜ್ಜ ಕೆಳಗೆ ಅರಣ್ಯ ಪ್ರದೇಶದಲ್ಲಿ ಒಬ್ಬ ಗಂಡು ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾನೆಂದು ಗೋತ್ತಾಗಿ ಇಬ್ಬರು ಕೂಡಿ ಸ್ಥಳಕ್ಕೆ ಬಂದು ನೋಡಲಾಗಿ ಒಬ್ಬ ಅಪರಿಚಿತ ವ್ಯಕ್ತಿ ವಯ ಅಂದಾಜು 35-40 ವರ್ಷ ವಯಸ್ಸಿನವನು ಮೃತಪಟ್ಟಿದ್ದು ಇರುತ್ತದೆ, ಮೃತ ಅಪರಿಚಿತ ಈಗ ಸುಮಾರು 6-7 ದಿವಸಗಳ ಹಿಂದೆ ಬೀದರ ದೇವ ದೇವ ವನದ ಹತ್ತಿರ ಇರುವ ಬ್ರಿಜ್ಜ ಹತ್ತಿರ ಕುಳಿತ್ತಿದ್ದ ಸ್ಥಳದಲ್ಲಿಯೇ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು, ಆದರು ಕೂಡಾ ಸದರಿ ಮೃತ ವ್ಯಕ್ತಿಯ ಮರಣದ ಬಗ್ಗೆ ಸಂಶಯ ಇರುತ್ತದೆ, ಮೃತ ದೇಹವು ಸಂಪೂರ್ಣವಾಗಿ ಕೊಳೆತ್ತಿದ್ದು ಇರುತ್ತದೆ, ಮೃತ ದೇಹದ ಮೇಲೆ ಒಂದು ಕಪ್ಪು ಬಣ್ಣದ ಪ್ಯಾಂಟ್, ಒಂದು ಬಿಳಿ ಲೈನಿಂಗ ಉಳ್ಳ ಟಿ-ಶರ್ಟ ಹಾಗೂ ಒಂದು ತಿಳಿ ಕಂದು ಬಣ್ಣದ ಅಂಡರ ವಿಯರ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 138/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 26-11-2018 ರಂದು ಫಿರ್ಯಾದಿ ಲಾಲಮ್ಮಾ ಗಂಡ ಸಂಬಣ್ಣಾ ಮಗೆನವರವಯ: 50 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಮುಸ್ತರಿ, ತಾ: ಹುಮನಾಬಾದ ರವರು ತನ್ನ ಮಗನಾದ ಆನಂದ ತಂದೆ ಸಂಬಣ್ಣಾ ಮಗೆನವರ ಕೂಡಿಕೊಂಡು ಫಿರ್ಯಾದಿಗೆ ಆರಾಮ ಇಲ್ಲದೆ ಇರುವದರಿಂದ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಮೊಟಾರ ಸೈಕಲ ನಂ. ಕೆಎ-39/ಕ್ಯೂ-7402 ನೇದ್ದರ ಮೇಲೆ ತಮ್ಮೂರಿನಿಂದ ಮನ್ನಾಎಖೇಳ್ಳಿ ಮುಖಾಂತರ ಬೀದರಕ್ಕೆ ಬರುತ್ತಿರುವಾಗ ಬೀದರ ಗಾಂಧಿಗಂಜ ರೈಲ್ಷೆ ಸ್ಟೇಷನ್ ಹೋಗುವ ದಾರಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಿದ್ರಿ ಕಡೆಯಿಂದ ಒಂದು ಟವೆರಾ ಜೀಪ ನಂ. ಕೆಎ-17/ಬಿ-2425 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸಿದಂತೆ ಮಾಡಿ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯ, ಎಡಗಣ್ಣಿನ ಕೆಳಗೆ ಗುಪ್ತಗಾಯವಾಗಿರುತ್ತದೆ, ಮಗನಾದ ಆನಂದ ಈತನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ, ನಂತರ ಮಗನಾದ ಆನಂದ ಈತನು ಅದೇ ಮೊಟಾರ ಸೈಕಲ ಮೇಲೆ ಫಿರ್ಯಾದಿಗೆ ಚಿಕಿತ್ಸೆ ಕುರಿತು ಅಪೆಕ್ಸ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 295/2018, ಕಲಂ. 457, 380 ಐಪಿಸಿ :-
ದಿನಾಂಕ 24-11-2018 ರಂದು 2030 ಗಂಟೆಗೆ ಚಂದ್ರಕಾಂತ ತಂದೆ ಸೂರ್ಯಕಾಂತ ಬಳತೆ ಸಾ: ಖಂಡ್ರೆ ಗಲ್ಲಿ ಹಳೆ ಭಾಲ್ಕಿ ರವರು ತನ್ನ ಘಡಿ ಅಂಗಡಿಗೆ ಕೀಲಿ ಹಾಕಿ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಅಂಗಡಿಯ ತಗಡ ಎತ್ತಿ ಮೇಲಿಂದ ಒಳಗೆ ಇಳಿದು ಅಂಗಡಿಯಲ್ಲಿನ ಎಲ್.ಜಿ ಕಂಪನಿಯ ಎರಡು ಕೈ ಗಡಿಯಾರ ಅ.ಕಿ 1000/- ರೂ ಮತ್ತು ನಗದು ಹಣ 10,000/- ರೂ., ಒಂದು ನೋಕಿಯಾ ಕಂಪನಿಯ ಮೊಬೈಲ ಅ.ಕಿ 700/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-11-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 296/2018, ಕಲಂ. 317 ಐಪಿಸಿ :-
ದಿನಾಂಕ 24-11-2018 ರಂದು ಹಿರೆಮಠ ಸಂಸ್ಥಾನ ವಿಧ್ಯಾಪಿಠ ಟ್ರಸ್ಟಿ (ರಿ) ಭಾಲ್ಕಿ ಮಠದ ಜ್ಞಾನ ಮಂದಿರದಲ್ಲಿ ಯಾರೋ ಅಪರಿಚಿತ ಮಹಿಳೆ ಅಂದಾಜು 2-3 ದಿವಸದ ಗಂಡು ನವಜಾತ ಶಿಶುವನ್ನು ಅನಾಥವಾಗಿ ತೋರೆದು ಬಿಟ್ಟು ಹೋಗಿರುವದರಿಂದ ಮಠದಲ್ಲಿ ಕಾರ್ಯ ನಿರ್ವಹಿಸುವ ಸಂಗಮ್ಮ ಎಂಬುವವರು ಧ್ಯಾನ ಮಂದಿರಕ್ಕೆ ಬೀಗ ಹಾಕಲು ಹೋಗಿರುವಾಗ ಮಗು ಅಳುತ್ತಿರುವ ಶಬ್ದ ಕೇಳಿ ತಕ್ಷಣ ದತ್ತು ಕೆಂದ್ರದ ಅಧ್ಯಕ್ಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ದತ್ತು ಕೆಂದ್ರದ ಅಧ್ಯಕ್ಷರಾದ ಅನೀಲಕುಮಾರ ಹಾಲಕೂಡೆ ರವರು ದೂರುದಾರರಿಗೆ ತಿಳಿಸಿದರಿಂದ ದೂರುದಾರರು ದತ್ತು ಕೆಂದ್ರದ ಅಂಬ್ಯೂಲೇನ್ಸ ತೆಗೆದುಕೊಂಡು ಮಠಕ್ಕೆ ಬಂದು ಮಗುವನ್ನು ತೆಗೆದುಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿ ಮಕ್ಕಳ ರಕ್ಷಣೆ ವ್ಯವಸ್ಥೆ ಇಲ್ಲದ ಕಾರಣ ಅದೆ ದಿವಸ ಬಿದರಕ್ಕೆ ಕಳಿಸಿದ್ದರಿಂದ ಮಗುವನ್ನು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ, ಸದ್ಯ ಮಗು ಸುರಕ್ಷಿತವಾಗಿ ಮತ್ತು ಕ್ಷೇಮವಾಗಿ ಇರುತ್ತದೆ ಅಂತ ಫಿರ್ಯಾದಿ ಸುಧಾರಾಣಿ ತಂದೆ ಮಲ್ಲಯ್ಯಾ ಮಠಪತಿ ವಯ: 24 ವರ್ಷ, ಜಾತಿ: ಸ್ವಾಮಿ, ಸಾ: ಹಿರೆಮಠ ಸಂಸ್ಥಾನ ವಿಧ್ಯಾಪೀಠ ಟ್ರಸ್ಟ(ರಿ) ದತ್ತು ಕೇಂದ್ರ ಕರಡಿಯಾಳ ರವರು ನೀಡಿದ ಸಾರಾಂಶದ ಮೇರೆಗೆ ದಿನಾಂಕ 26-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: