Police Bhavan Kalaburagi

Police Bhavan Kalaburagi

Wednesday, November 7, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05.11.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ವಿವೇಕಾನಂದ ನಗರದ ಓಂಕಾರೇಶ್ವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂಸ ಮೇರೆಗೆ ಪಿ.ಎಸ್.. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ವಿವೇಕಾನಂದ ನಗರ ಓಂಕಾರೇಶ್ವರು ಗುಡಿ ಯಿಂದ ಸ್ವಲ್ಪ ದೂರದಲ್ಲಿ ಹೋಗಿ ಜೀಪನ್ನು ನಿಲ್ಲಿಸಿ ನಂತರ ಎಲ್ಲರು ಕೂಡಿಕೊಂಡು ನಡೆದುಕೊಂಡು ಓಂಕಾರೇಶ್ವರ ಗುಡಿಯ ಹತ್ತಿರ ಹೋಗಿ ನೋಡಲು ಗುಡಿಯ ಮುಂದಿನ ಸಾರ್ವಜನಿಕ ಸ್ಥಳಲ್ಲಿ 7 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದುಸನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ನಾಗರಾಜ ತಂದೆ ಸಿದ್ರಾಮಪ್ಪ ಪಾಟೀಲ ಸಾ: ಜೆ.ಆರ್.ನಗರ ಕಲಬುರಗಿ  2. ಆನಂದ ತಂದೆ ಅಣ್ಣರಾವ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ  3. ಅಣವೀರಪ್ಪ ತಂದೆ ಸಿದ್ರಾಮಪ್ಪ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ 4. ಬಸಪ್ಪ ತಂದೆ ಶಿವಪ್ಪ ಕರ್ ಸಾ: ಸಂತೋಷ ಕಾಲೋನಿ ಕಲಬುರಗಿ 5. ಸಿದ್ದಪ್ಪ ತಂದೆ ಚಂದ್ರಶ್ಯಾ ಕೋಟೆ ಸಾ: ಆಳಂದ ಕಾಲೋನಿ ಕಲಬುರಗಿ ಇತನ  6. ಜಗನ್ನಾಥ ತಂದೆ ಭೀಮಶ್ಯಾ ವಾಡಿ ಸಾ: ಶಹಾಬಜಾರ ಕಲಬುರಗಿ. 7. ಹಣಮಂತ ತಂದೆ ಕಲ್ಯಾಣಿ ನಗರೆ ಸಾ: ಸಂತೋಷ ಕಾಲೋನಿ ಕಲಬುರಗಿ. ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ ಬಳಸಿದ  ಒಟ್ಟು ನಗದು ಹಣ 5140/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು. ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ.ಶಿವಪುತ್ರ .ಎಸ್. ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫೀರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಾಂಶವೇನೆಂದರೆ. ನಮ್ಮ ರಾಘವೇಂದ್ರ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿಯ ರೌಡಿ ಜನರ ಪರೇಡ ಪ್ರತಿ ತಿಂಗಳು ಕೈಗೊಳ್ಳುತ್ತಾ ಬಂದಿದ್ದು ಠಾಣಾ ವ್ಯಾಪ್ತಿಯಲ್ಲಿಯ ಹಲವಾರು ರೌಡಿ ಜನರು ಪ್ರತಿತಿಂಗಳದ ರೌಡಿ ಪರೇಡಗೆ ಹಾಜರಾಗಿದ್ದು ಇರುತ್ತದೆ. ಕೊನೆ ಬಾರಿಗೆ ಅಕ್ಟೋಬರ ತಿಂಗಳಿನಲ್ಲಿ ನಾವು ರೌಡಿ ಪರೇಡ ನಿಯೋಜನೆ ಮಾಡಿದ್ದು ವೇಳೆಗೆ ಠಾಣೆಯ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥ ಭಾವೆ ಸಾ:ಬೋರಾಬಾಯಿ ನಗರ ಕಲಬುರಗಿ ಇತನಿಗೆ ರೌಡಿ ಪರೇಡಗೆ ಹಾಜರಾಗಲು ಸೂಚಿಸಿದ್ದು ಇರುತ್ತದೆ. ಆದರೆ ರೌಡಿ ಪರೇಡಗೆ ಹಾಜರರಾಗದೇ ಗೈರಹಾಜರಾಗಿದ್ದು ಇರುತ್ತದೆ. ಸದರಿಯವನು ರಾಘವೇಂದ್ರ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಅಲ್ಲದೆ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ  ಭಾಗಿಯಾದ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ:05/11/2018 ರಂದು ರಾತ್ರಿ 8.30 ಪಿ.ಎಂ ಸುಮಾರಿಗೆ ಠಾಣೆಯ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥಭಾವೆ ಸಾ:ಬೋರಾಬಾಯಿ ನಗರ ಕಲಬುರಗಿ ಇತನಿಗೆ ರೌಡಿ ಪರೇಡಗೆ ಕರೆಯಿಸಿ ಆತನ ಚಟುವಟಿಕೆಯ ಮೇಲೆ ಮುಂಜಾಗೃತವಾಗಿ ನಿಗಾ ಇಡುವದಗೋಸ್ಕರ ಆತನ ಇರುವಿಕೆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಮಾನ್ಯ ಪಿ.ಎಸ್. ಸಾಹೇಬರು ನನಗೂ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರು ಎಲ್ಲರೂ ಕೂಡಿಕೊಂಡು ಜೀಪನಲ್ಲಿ ಠಾಣೆಯಿಂದ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥಭಾವೆ :28 ವರ್ಷ ಜಾ:ಮಾದಿಗ ಸಾ:ಬೋರಾಬಾಯಿ ನಗರ ಕಲಬುರಗಿ ಇತನಿಗೆ ಚೆಕ್  ಮಾಡುವ ಸಲುವಾಗಿ ಹೊರಟಿದ್ದು ಅದೆ ರೀತಿ ಪಿ.ಎಸ್. ಸಾಹೇಬರು ಪ್ರಮೋದ ಸಿಪಿಸಿ-249 ಇತನಿಗೆ ಠಾಣೆಗೆ ಒದಗಿಸಿದ ಮೋಟಾರ ಸೈಕಲ ನಂ.ಕೆಎ-32 ಜಿ-629 ನೇದ್ದನ್ನು ತೆಗೆದುಕೊಂಡು ಬರಲು ಮಾನ್ಯ ಪಿ.ಎಸ್. ಸಾಹೇಬರು ತಿಳಿಸಿದ ಮೇರೆಗೆ ಪ್ರಮೋದ ಸಿಪಿಸಿ-249 ಇತನು ಸಹ ಮೋಟಾರ ಸೈಕಲ ತೆಗೆದುಕೊಂಡು ನಮ್ಮ ಜೀಪಿನ ಹಿಂದೆ ಬಂದನು ನಾವುಗಳೆಲ್ಲರೂ ರಾತ್ರಿ 9.00 ಪಿ.ಎಂ ಸುಮಾರಿಗೆ ಬೋರಾಬಾಯಿ ನಗರದ ಪ್ರದೀಪ @ 7 ಸ್ಟಾರ ಪ್ರದೀಪ ಇತನ ಮನೆಯ ಎದರುಗಡೆ ಇರುವ ಜಟಿಂಗರಾಯ ಗುಡಿಯ ಹತ್ತಿರ ಹೋಗಿ ನಮ್ಮ ಜೀಪ ನಿಲ್ಲಿಸಿದ್ದು ಪ್ರಮೋದ ಸಿಪಿಸಿ-249 ಸಹ ಮೋಟಾರ ಸೈಕಲ ತೆಗೆದುಕೊಂಡು ಬಂದು ಜೀಪಿನ ಹತ್ತಿರ ನಿಲ್ಲಿಸಿದ್ದು ಮಾನ್ಯ ಪಿ.ಎಸ್. ಸಾಹೇಬರು ಠಾಣೆಯ ರೌಡಿಶೀಟರನಾದ ಪ್ರದೀಪ @ 7 ಸ್ಟಾರ ಪ್ರದೀಪ ತಂದೆ ವೈಜನಾಥಭಾವೆ ಇತನಿಗೆ ಬರಲು ತಿಳಿಸಿದ ಮೇರೆಗ ಇತನು ಮನೆಯಿಂದ ಹೊರಗಡೆ ಬಂದನು. ಪಿ.ಎಸ್. ಸಾಹೇಬರು ನೀನು ಅಕ್ಟೋಬರ ತಿಂಗಳಿನಲ್ಲಿ ರೌಡಿ ಪರೇಡಗೆ ಹಾಜರಾಗಿಲ್ಲ ಅಲ್ಲದೆ ಹಿಂದಿನ ರೌಡಿ ಪರೇಡಗಳಿಗೂ ಸಹ ಹಾಜರಾಗಿಲ್ಲ ಅದಕ್ಕಾಗಿ ನಾವು ಮುಂದೆ ನಿಯೋಜನೆ ಗೊಳಿಸುವ ರೌಡಿ ಪರೇಡಗೆ ತಪ್ಪದೆ ಹಾಜರಾಗಬೇಕು ಅಂತಾ ತಿಳಿಸಿದಾಗ ಪ್ರದೀಪ @ 7 ಸ್ಟಾರ ಪ್ರದೀಪ ಇತನು ಭೋಸಡಿ ಮಗನೆ ಪಿ.ಎಸ್. ಹೋಸದಾಗಿ ಬಂದಿದ್ದಿ ಈಗೇ ನಿನಗೆ ಇಷ್ಟೊಂದು ಸೊಕ್ಕು ಬಂದಿದೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ನನ್ನ ಹಿಂದೆ ದೊಡ್ಡ ಗ್ಯಾಂಗ್ ಇದೆ ನೀವು ಪೊಲೀಸರು ಏನು ಮಾಡಲು ಸಾದ್ಯ ಇಲ್ಲಾ ಭೋಸಡಿ ಮಗನೆ ಅಂತಾ ನಮ್ಮ ಪಿ.ಎಸ್. ಸಾಹೇಬರಿಗೆ ಬೈಯಲು ಪ್ರಾರಂಭಿಸಿದನು. ಆಗ ಆತನ ಮನೆಯಿಂದ ಆತನ ತಾಯಿಯಾದ ಸರೋಜಾ ಹಾಗೂ ಆತನ ತಂಗಿಯಾದ ಪ್ರತಿಮಾ ಹಾಗೂ ಪ್ರತಿಮಾಳ ಗಂಡ ಸ್ವರಾಜ ಮತ್ತು ಆತನ ಸಹಚರರಾದ 1)ಅಮರ, 2)ಸಂತೋಷ, 3)ರಾಘು, 4)ಸಚಿನ ತಂದೆ ಸೋಮಣ್ಣಾ 5)ಲೋಹಿತ ತಂದೆ ಸಂಬಣ್ಣಾ ಗಡಸೆ ಹಾಗೂ ಇತರರು ಕೂಡಿಕೊಂಡು ಬಂದವರೆ ಅವರಲ್ಲಿ ಪ್ರದೀಪ @ 7 ಸ್ಟಾರ ಪ್ರದೀಪನ ತಾಯಿಯಾದ ಸರೋಜಾ ಇವಳು ಬಂದವಳೆ ನನ್ನ ಮಗನಿಗೆ ನೀವು ಪೊಲೀಸರು ಏನು ಮಾಡಿಕೊಳ್ಳಲು ಆಗುವದಿಲ್ಲಾ ಅಂತಾ ಅವಾಚ್ಯವಾಗಿ ಬೈಯಹತ್ತಿದಳು ಆಗ ನಮ್ಮ ಜೊತೆಗಿದ್ದ ಶೋಬಾ ಮಪಿಸಿ-35 ಇವರು ಹಾಗೆಲ್ಲಾ ಬೈಯಬಾರದು ಅಂತಾ ಅಂದಾಗ ಸರೋಜಾ ಹಾಗೂ ಪ್ರತಿಮಾ ಇಬ್ಬರೂ ಕೂಡಿ ರಂಡಿ  ಇಲ್ಯಾಕ್ ಬಂದಿದಿ ಅಂತಾ ಅವಾಚ್ಯವಾಗಿ ಬೈಯುತ್ತಾ ತಮ್ಮ ಕೈಯಲ್ಲಿದ್ದ ಬಡಿಗೆಯಿಂದ ಮನಬಂದಂತೆ ಹೊಡೆಯಹತ್ತಿದರು ಆಗ ನಮ್ಮ ಪಿ.ಎಸ್. ಸಾಹೇಬರು ಬಿಡಿಸಿಕೊಳ್ಳಲು ಹೋದರೆ ಪ್ರದೀಪ @ 7 ಸ್ಟಾರ ಪ್ರದೀಪ ಇತನು ನಮ್ಮ ಪಿ.ಎಸ್. ಸಾಹೇಬರ ಎದೆಯ ಮೇಲಿನ ಅಂಗಿ ಹಿಡಿದು ಮಗನೆ ನಾನು ದೊಡ್ಡ ಕೇಬಲ್ ಚಾನಲ ನಡೆಸುತ್ತಿದ್ದು ನನಗೆ ನೀವು ಏನು ಮಾಡಿಕೊಳ್ಳಲು ಸಾದ್ಯವಿಲ್ಲಾ ಮಕ್ಕಳೆ ಅಂತಾ ಬೈದು ಮೈಮೇಲಿನ ಬಟ್ಟೆ ಹಿಡಿದು ಮನಬಂದಂತೆ ಜಗ್ಗಾಡಿದನು. ಆಗ ಉಮೇಶ ಪಿಸಿ-834 ಇತನು ಬಿಡಿಸಿಕೊಳ್ಳಲು ಹೋದರೆ ಆತನಿಗೆ ಅಮರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡೆದನು. ಸಂತೋಷ ಇತನು ಕೈಯಿಂದ ಹೊಡೆಬಡೆ ಮಾಡಹತ್ತಿದನು. ರಾಘು, ಸಚಿನ, ಲೋಹಿತ ಹಾಗೂ ಓಣಿಯಲ್ಲಿಯ ಸುಮಾರು 80 ರಿಂದ 100 ಜನ ಗುಂಪುಕಟ್ಟಿಕೊಂಡು ಬಂದು ನಮ್ಮ ಮೇಲೆ ಕಲ್ಲು ತೂರಾಟ ಮಾಡ ಹತ್ತಿದರು ಪ್ರದೀಪ @ 7 ಸ್ಟಾರ ಪ್ರದೀಪ ಇತನು ಅಲ್ಲಿಯೇ ನಿಲುಗಡೆ ಮಾಡಿದ ಪ್ರಮೋದ ಸಿಪಿಸಿ-249 ಇತನು ತಂದಿದ್ದ ಠಾಣೆಯ ಮೋಟಾರ ಸೈಕಲಗೆ ಬಡಿಗೆಯಿಂದ ಹೊಡೆದು ಹಾನಿಗೊಳಿಸಿದನು. ಆಗ ಪ್ರದೀಪ @ 7 ಸ್ಟಾರ ಪ್ರದೀಪ ಇತನ ತಂಗಿಯಾದ ಪ್ರತಿಮಾ ಇವಳು ತನ್ನ ಮೈ, ಕೈ, ತಲೆ ನೆಲಕ್ಕೆ ಗುದ್ದುತ್ತಾ ಗಾಯ ಮಾಡಿಕೊಂಡು ನಾವು ನಿಮ್ಮ ಮೇಲೆ ಕೇಸಮಾಡಿ ನಿಮಗೆ ಜೈಲಿಗೆ ಕಳುಹಿಸುತ್ತೇವೆ ಹಾಟ್ಯಾನ ಮಕ್ಕಳೆ ಪೊಲೀಸರೇ ಅಂತಾ ಬೈಯುತ್ತಿದ್ದಳು ಆಗ ನಾವು ಹೆಚ್ಚಿನ ಸಂಖ್ಯೇಯ ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ ಸದರಿಯವರೇಲ್ಲರು ಓಡಿ ಹೋದರು. ಕಾರಣ ನಾವು ರೌಡಿಶೀಟರದಾರನಾದ ಪ್ರದೀಪ @ 7 ಸ್ಟಾರ ಪ್ರದೀಪ ಇತನ ಚಟುವಟಿಕೆ ಬಗ್ಗೆ ತಿಳಿದುಕೊಂಡು ಮುಂಜಾಗೃತ ಕ್ರಮಕ್ಕಾಗಿ ರೌಡಿ ಪರೇಡಗೆ ಹಾಜರಾಗುವಂತೆ ತಿಳಿಸಿದಾಗ ಪ್ರದೀಪ @ 7 ಸ್ಟಾರ ಪ್ರದೀಪ ಇತನು ಹಾಗೂ ಇತನ ತಾಯಿ ಸರೋಜಾ ಇತನ ತಂಗಿ ಪ್ರತಿಮಾ ಹಾಗೂ ಪ್ರತಿಮಾಳ ಗಂಡ ಸ್ವರಾಜ ಮತ್ತು ಅಮರ, ಸಂತೋಷ, ರಾಘು, ಸಚಿನ, ಲೋಹಿತ ಹಾಗೂ 80 ರಿಂದ 100 ಜನರು ಗುಂಪುಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ನಮ್ಮೆಲ್ಲರ ಮೇಲೆ ಬಡಿಗೆ, ಕಲ್ಲು ಕೈಯಿಂದ ಹೊಡೆಬಡೆಮಾಡಿ ಭಾರಿ ರಕ್ತಗಾಯ, ಗುಪ್ತಗಾಯ ಪಡಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಠಾಣೆಯ ಮೋಟಾರ ಸೈಕಲ ಜಖಂ ಗೊಳಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘೌಏಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವರಾಜ ತಂದೆ ಶರಣಪ್ಪ ಅವಟೆ ಸಾ|| ಅಫಜಲಪೂರ ರವರ  ಅಫಜಲಪೂರ  ಪಟ್ಟಣದ ವ್ಯಾಪ್ತಿಯಲ್ಲಿ ಗುಲಬರ್ಗಾ ರಸ್ತೆಯ ಕಡೆ ಶಿವಶರಣಪ್ಪ ಸರಸಂಬಾ ರವರ ಹೊಲದಿಂದ ಹೋಗುವ ಹಳ್ಯಾಳ ಉಪ ರಸ್ತೆಗೆ ಹೊಂದಿಕೊಂಡ 7 ಎಕರೆ ತೋಟವನ್ನು ಹೊಂದಿದ್ದು ಅದನ್ನು ನಾವೆ ನಿರ್ವಹಣೆ ಮಾಡುತಿದ್ದೇವೆ.  ಸೈಕಲ್ ಮೇಲೆ ನಿನ್ನೆ ಮದ್ಯಾಹ್ನ 3 ಪಿಎಮ್ ಸುಮಾರಿಗೆ ತೋಟದ ಹೊಲದಿಂದ ಮನಿಗೆ ಬರುವಾಗ ಅಫಜಲಪೂರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎದುರುಗಡೆಯಿಂದ ಬಂದ ಭಾರತಬ್ರೇಂಜ್ ಸಿಮೆಂಟ್ ಟ್ಯಾಂಕರ ಲಾರಿ ನಂ ಎಮ್ ಹೆಚ್ 12 ಕ್ಯೂ ಜಿ-0250 ಇದ್ದ ವಾಹನವು ಚಾಲಕನ ನಿರ್ಲಕ್ಷ ಹಾಗು ಬೆಜವ್ದಾರಿಯಿಂದ ರಭಸವಾಗಿ ಬಂದು ರೋಡಿನ ಪಕ್ಕದಿಂದ ಹೊಗುತಿದ್ದ ನನಗೆ ಡಿಕ್ಕಿ ಹೊಡೆದ ಫರಿಣಾಮ ಸೈಕಲದಿಂದ ಕೆಳಗೆ ಬಿದ್ದೇನು. ಅವಾಗ ಅಲ್ಲಿಯೇ ಇದ್ದ  ಧಾನು ತಂದೆ ಮಹಾಂತಪ್ಪ ನೂಲಾ, ಹಾಗು ಶಶಿ ತಂದೆ ಶಿವಪುತ್ರ ಡಾಂಗೆ ಇವರು ತಕ್ಷಣ ಸುತ್ತಮುತ್ತಲಿನ ಜನರನ್ನು ಸೇರಿಸಿ ಡಿಕ್ಕಿ ಹೊಡೆದ ಲಾರಿಯನ್ನು ನಿಲ್ಲಿಸಿ ನನಗೆ ಡಾ||ಶಂಕರ ಮನಮಿ ರವರ ಹತ್ತಿರ ಪ್ರಥಮ ಚಿಕಿತ್ಸೆಯನ್ನು ನೀಡಿ ಹೇಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಪಿಜಿ ಶಾಹ ಅರ್ಥೋಪಿಡಿಕ ಆಸ್ಪತ್ರೆಯಲ್ಲಿ ಖಾಸಗಿ ವಾಹನದಲ್ಲಿ  ಸಂಗು ತಂದೆ ಶರಣಪ್ಪ ಶಿರವಾಳ ನನ್ನ ಹೆಂಡತಿಯಾದ ಶ್ರೀಮತಿ ಶಾಂತಾಬಾಯಿ ಕುಡಿಕೊಂಡು ಸದರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸುತಿದ್ದಾರೆ ಲಾರಿ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ನನಗೆ ಬಲಗೈ, ಮೊಣಕೈ, ಮೆಲ್ಬಾಗದ ಮುಳೆ ಮುರಿದಿದ್ದು ಹಾಗು ಮುಡ್ಡಿ ಹಾಗು ರಟ್ಟೆಯ ಕಿಲು ಮುರಿದಿದ್ದು ಮೊಣಕೈ ಕೆಳಭಾಗದ ಮುಳೆ ಮುರಿದು ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: