Police Bhavan Kalaburagi

Police Bhavan Kalaburagi

Sunday, December 16, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.12.2018 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಹನುಮಾನ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ .ಎಸ್‌‌.  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಮರೆಯಲ್ಲಿ ನಿಂತು ಹನುಮಾನ ದೇವರ ಗುಡಿ ಮುಂದಿನ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮೊಸ ಮಾಡಿ ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಬಸವರಾಜ ತಂದೆ ರಾಮಚಂದ್ರಪ್ಪ ಕೂಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 765/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 15-12-2018 ರಂದು ಬೆಳಗ್ಗೆ  ನಮ್ಮ ತಂದೆಯವರು ನಮ್ಮ ಅಕ್ಕಳ ಗಂಡನಾದ  ಸೈಯದ ರೀಯಾಜ್ ತಂದೆ ಬಾಬು ಪಟೇಲ್ ಇವರಿಗೆ ಕಲಬುರಗಿ ನಗರದಲ್ಲಿ ಪ್ಲಾಟ ಖರೀದಿ ಮಾಡಬೇಕಾಗಿರುವದರಿಂದ ನಮ್ಮ ತಂದೆ ಹಾಗೂ ಅಕ್ಕನ ಗಂಡ ಸೈಯದ ರಿಯಾಜ್ ಹಾಗೂ ಪರಿಚಯದ ಇಬ್ರಾಹಿಂಸಾಬ ತಂದೆ ನಬಿಸಾಬ ಮುಲ್ಲಾ (ವಕೀಲ) ಇವರೊಂದಿಗೆ ಮಾಮನವರ ಎಕ್ಟೀವ್ ಮೋ.ಸೈಕಲ ನಂ ಟಿ.ಎಸ್-12-ಇಹೆಚ್-6235 ಮತ್ತು ಇಬ್ರಾಹಿಂಸಾಬ ಇವರಿಗೆ ಸಂಭಂದಪಟ್ಟ ಹಿರೋ ಹೊಂಡಾ ಸ್ಪೇಂಡರ್ ಮೋ.ಸೈಕಲ್ ನಂ ಕೆಎ-32-ಇಸಿ-7601 ನೇದ್ದನ್ನು ತೆಗೆದುಕೊಂಡು ಎಕ್ಟೀವ್ ಗಾಡಿಯ ಮೇಲೆ ನಮ್ಮ ತಂದೆ ಹಾಗೂ ಇಬ್ರಾಹಿಂಸಾಬ ಮೋ. ಸೈಕಲ್ ಮೇಲೆ ಮಾಮ ಸೈಯದ ರಿಯಾಜ್ ಇವರು ಬಸವಕಲ್ಯಾಣದಿಂದ ಕಲಬುರಗಿಗೆ ಹೋಗುತ್ತೇನೆ ಅಂತಾ ಮುಂಜಾನೆ 9 ಗಂಟೆಗೆ ಹೋದರು. ಮರಳಿ ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ತಂದೆಯವರು ನನಗೆ ಪೋನ ಮಾಡಿ ಕಲಬುರಗಿಗೆ ಬಂದಿರುವ ಕೆಲಸ ಆಗಿರುತ್ತದೆ. ಈಗ ಮರಳಿ ಬರುತ್ತೇವೆ ಅಂತಾ ಹೇಳಿದ್ದು. ನಾವು ಅವರ ಹಾದಿಯನ್ನು ಕಾಯುತ್ತಿರುವಾಗ ರಾತ್ರಿ 8 ಗಂಟೆಯ ನಂತರ ಯಾರೋ ನಮ್ಮಗೆ ಪೋನ ಮಾಡಿ ತಿಳಿಸಿದೆನೆಂದರೆ ಕಮಲಾಪೂರದ ಮುಂದೆ ಹುಮನಾಬಾದ ರೋಡಿನ ಕಡೆಗೆ ರೇಲ್ವೆ ಓವರ್ ಬ್ರೀಡ್ಜ್ದ ಚಾರ ಕಮಾನದ ಬ್ರೀಡ್ಜಿನ ಮೇಲೆ ರಸ್ತೆ ಅಪಘಾತದಲ್ಲಿ ನಿಮ್ಮ ನಂಬರ ಡೈರಿ ಇಟ್ಟಿಕೊಂಡವರು ಭಾರಿ ಗಾಯದಿಂದ ಇವರು ಮತ್ತು ಇನ್ನೊಬ್ಬರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದಕ್ಕೆ ಗಾಬರಿಗೊಂಡು  ನಾನು ನನ್ನ ಗೆಳೆಯರಾದ ಮಹಮ್ಮದ ಫಿರೋಜ ಬೇನಕುನೆ,   ಗಫರ ತಂದೆ ಫಾರುಖಮಿಯಾ , ಇಬ್ರಾಹಿಂಸಾಬ ಇವರ ಮಗನಾದ ಖಾಲೀದ ಮುಲ್ಲಾ ಕೂಡಿಕೊಂಡು ರಾತ್ರಿ 9 ಗಂಟೆಯ ನಂತರ ಘಟನ ಸ್ಥಳವಾದ ಚಾರ ಕಮನಾದ ಬ್ರೀಡ್ಜಿನ ಮೇಲೆ ಬಂದು ನೋಡಲಾಗಿ ನಮ್ಮ ತಂದೆ ಶೇಖ ನಿಜಾಮೋದ್ದಿನ ರೋಡಿನ ಮೇಲೆ ಅಂಗಾತವಾಗಿ ಬಿದ್ದಿದ್ದು, ಇವರ ತೆಲೆಗೆ , ಮುಖಕ್ಕೆ ರಕ್ತಗಾಯ , ಮುಗೂ , ಬಾಯಿ, ಕಿವಿಯಿಂದ ರಕ್ತ ಬಂದಿದ್ದು, ಬಲಗೈ ಮುಂಗೈಯಿಂದ ಮೋಣಕೈ ವರೆಗೆ ಭಾರಿ ಪ್ರಮಾಣದ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದರು. ಅಲ್ಲೆ ಬದಿಯಲ್ಲಿರುವ ಇಬ್ರಾಹಿಂಸಾಬ ತಂದೆ ನಬಿಸಾಬ ಮುಲ್ಲಾ (ವಕೀಲ) ಇವರು ಕೂಡಾ ಅಂಗಾತವಾಗಿ ಬಿದ್ದಿದ್ದು, ಇವರ ಬಾಯಿಂದ ರಕ್ತ ಬಂದು, ಬಲಗೈ ಕೈ ಮುರಿದ್ದು , ಬಲ ತೋಡೆಯಿಂದ ಕಪಗಡಿನವರೆಗೆ ಭಾರಿ ಪ್ರಮಾಣ ಗಾಯ ಹೊಂದಿ, ಮೌಂಸ ಖಂಡ ಹೋರ ಬಂದು ಸ್ಥಳದಲ್ಲೆ ಮೃತಪಟ್ಟಿದ್ದರು, ನಮ್ಮ ಮಾಮ ಸೈಯದ ರಿಯಾಜ್ ಈತನ ಬಗ್ಗೆ ವಿಚಾರಿಸಲಾಗಿ ಈತನು ಕಾಣಲಿಲ್ಲಾ 108 ಅಂಬುಲೆನ್ಸ್ ದಲ್ಲಿ ಕಲಬುರಗಿ ದವಾಖಾನೆ ಕಡೆಗೆ ಹೋಗಿರುವ ಬಗ್ಗೆ ಗೋತ್ತಾಯಿತು. ಅಲ್ಲೆ ಸ್ವಲ್ಪ ಅಂತರದಲ್ಲಿ ಬಿದ್ದಿರುವ ಎಕ್ಟೀವ್ ಗಾಡಿ ನಂ ಟಿ.ಎಸ್-12-ಇಹೆಚ್-6235 ಮತ್ತು ಹಿರೋ ಹೊಂಡಾ ಸ್ಪೇಂಡರ್ ಕೆಎ-32-ಇಸಿ-7601 ನೇದ್ದವುಗಳು ಪೂರ್ತಿಯಾಗಿ ಜಖಂಗೊಂಡು ಬಿದ್ದಿದ್ದು, ಬದಿಯಲ್ಲಿ ಕಬ್ಬಿನ ಲೋಡ ಇರುವ ಲಾರಿ ನಂ ಎಪಿ-13-ಡ್ಬ್ಲೂ-6781 ಮಗ್ಗಲಾಗಿ ಬಿದಿದ್ದು, ಅದರ ಬದಿಯಲ್ಲಿ ಒಂದು ಕ್ರೋಜರ ಜೀಪ್ ನಂ ಕೆಎ-27--598 ನೇದ್ದು ಜಖಂಗೊಂಡು ನಿಂತಿದ್ದು, ಸ್ವಲ್ಪ ಅಂತರದಲ್ಲಿ ಇನ್ನೊಂದು ಕಬ್ಬು ಲೋಡ ತುಂಬಿದ ಲಾರಿ ನಂ ಎಮ್.ಹೆಚ್-25-ಬಿ-9302 ನೇದ್ದು ಮುಂದಿನ ಭಾಗ ಜಖಂಗೊಂಡು ನಿಂತಿದ್ದು, ಅಲ್ಲೆ ಬದಿಯಲ್ಲಿ ಪೀಕಪ್ ಗಾಡಿ ನಂ ಕೆಎ-22-ಸಿ-4151 ನೇದ್ದು ಕೂಡ ಜಖಂವಾಗಿ ನಿಂತಿದ್ದು, ಈ ಬಗ್ಗೆ ವಿಚಾರಿಸಲಾಗಿ ಅಲ್ಲೆ ಇರುವ ಕ್ರೋಜರ ಜೀಪ ಚಾಲಕ ಸೂರ್ಯಕಾಂತ ತಂದೆ ಸುಧಾಕರ ಚವ್ಹಾಣ , ರೇವಣಯ್ಯ ತಂದೆ ಗುರಯ್ಯ ನಾವದಗಿ ಹಾಗೂ ಪೀಕಪ್ ವಾಹನದ ಚಾಲಕ ಸರತಾಜಬಾಬ ತಂದೆ ಫತೃ ಪಟೇಲ್ ಮುಡ್ಡಿ ವಿಚಾರಣೆಯಲ್ಲಿ ಹೆಸರು ತಿಳಿದುಕೊಂಡಿದ್ದು. ಇವರೆಲ್ಲರೂ ತಿಳಿಸಿದೆನೆಂದರೆ ಈಗ ರಾತ್ರಿ 7-45 ಗಂಟೆ ಸುಮಾರಿಗೆ ಈ ಸ್ಥಳದಲ್ಲಿ ಎಕ್ಟೀವ್ ಮೋಟಾರ ಸೈಕಲ್ ಮೇಲೆ ಇಬ್ಬರು ಮತ್ತು ಸ್ಪೇಂಡರ ಮೋಟಾರ ಸೈಕಲ್ ಮೇಲೆ ಒಬ್ಬರು ಕಲಬುರಗಿ ರೋಡಿನ ಕಡೆಯಿಂದ ಹುಮನಾಬಾದ ರೋಡಿನ ಕಡೆಗೆ ಹೋಗುವಾಗ ಎದುರಗಡೆ ರೋಡಿನ ಕಡೆಯಿಂದ ಲಾರಿ ನಂ ಎಪಿ-13-ಡ್ಬ್ಲೂ-6781 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎರಡು ಮೋಟಾರ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ ಮಾಡಿಕೊಂಡಿದ್ದು, ಅಲ್ಲೆ ಕ್ರೋಜರ ಜೀಪ್  ಹುಮನಾಬಾದ ರೋಡಿನ ಕಡೆಗೆ ಹೋಗುವಾಗ ಇದರ ಎದುರಿನ ರೋಡಿನ ಕಡೆಯಿಂದ ಇನ್ನೊಂದು ಕಬ್ಬು ತುಂಬಿದ ಲಾರಿ ನಂ ಎಮ್.ಹೆಚ್-25-ಬಿ-9302 ನೇದ್ದರ ಚಾಲಕನು ಕೂಡ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಆ ಮೋಟಾರ ಸೈಕಲಗಳಿಗೆ ಮತ್ತು ಆ ಜನರಿಗೆ ಹಾಯಿಸಿಕೊಂಡು ,ಕ್ರೋಜರ ಜೀಪಿಗೆ ಡಿಕ್ಕಿ ಹೊಡೆದು, ಹಾಗೆ ಹಿಂದೆ ಬರುತ್ತಿರುವ ಪೀಕಪ್ ಗಾಡಿ ನಂ ಕೆಎ-22-ಸಿ-4151 ನೇದ್ದಕ್ಕೆ ಡಿಕ್ಕಿ ಹೊಡೆದುಕೊಂಡಿದ್ದು ಇದ್ದರಿಂದ ಇವರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು ಮತ್ತು ಇನ್ನೋಬ ಗಾಯಾಳುವಿನ ತೆಲೆಗೆ ಮತ್ತು ಬಲಕಾಲಿಗೆ ಭಾರಿ ಗಾಯವಾಗಿದ್ದರಿಂದ ಉಪಚಾರ ಕುರಿತು 108 ಅಂಬುಲೆನ್ಸ್ ದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ ಇನ್ನೂ ಈ ಘಟನೆಯಲ್ಲಿ ಯಾರಿಗಾದರು ಗಾಯಗಳು ಆಗಿರಬಹುದು ಮತ್ತು ಅಪಘಾತ ಪಡಿಸಿದ ಲಾರಿ ಚಾಲಕರನ್ನು ನೋಡಿದ್ದು ಅವರು ಇಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಶ್ರೀ. ಶೇಖ ಖಾಜಾ ತಂದೆ ಶೇಖ ನಿಜಾಮೋದ್ದಿನ ಶೇಖ ಸಾ: ಅರಫತ ಕಾಲೋನಿ ಬಸವಕಲ್ಯಾಣ ಜಿ. ಬೀದರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: