Police Bhavan Kalaburagi

Police Bhavan Kalaburagi

Thursday, December 20, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 18-12-2018 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ  ಪಟ್ಟಣದ ಘತ್ತರಗಾ ರೋಡ ಲಕ್ಷ್ಮೀ ಗುಡಿಯ ಸಮೀಪ ಹೋಗಿ ಲಕ್ಷ್ಮೀ ಗುಡಿಯಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಲಕ್ಷ್ಮೀ ಗುಡಿಯ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸೊಂದಪ್ಪ ತಂದೆ ಅರ್ಜುನ ಮುಗಳಿ ಸಾ|| ಘತ್ತರಗಾ ರೋಡ ಲಕ್ಷ್ಮೀ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 810/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ನಂತರ ಸದರಿಯವನಿಗೆ ಮಟಕಾ ಬರೆದುಕೊಂಡು ಯಾರಿಗೆ ಕೊಡುತ್ತಿ ಎಂಬ ಬಗ್ಗೆ ವಿಚಾರಿಸಲು ಸದರಿ ವ್ಯೆಕ್ತಿ ತಿಳಿಸಿದ್ದೆನೆಂದರೆ, ನಾನು ಜನರಿಂದ ಮಟಕಾ ಬರೆದುಕೊಂಡು ದುಧನಿಯ ಶ್ರೀಕಾಂತ ಪಾನಶಾಫ್ ವ್ಯಾಪಾರಿಗೆ ಕೊಡುತ್ತೇನೆ ಎಂದು ತಿಳಿಸಿರುತ್ತಾನೆ.  ಸದರಿಯವನೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ :  ದಿನಾಂಕ 18-12-2012 ರಂದು  ಬೆಳಿಗ್ಗಿನ ಜಾವ 00.30 ಗಂಟೆಯಿಂದ 4.00 ಗಂಟೆಯ ಮದ್ಯದ ಅವಧಿಯಲ್ಲಿ ಹೊನ್ನಕಿರಣಗಿ ಗ್ರಾಮದಲ್ಲಿ ಎರ್ ಟೆಲ ಟಾವರದಲ್ಲಿದ್ದ  ಶೇಟರದ ಕೀಲಿ ತೆಗೆದು ಒಳಗಡೆ ವಿದ್ಯುತ ಸರಬರಾಜಿಗಾಗಿ ಜೋಡಣೆ ಮಾಡಿದ ಪವರ ಕೇಬಲ ಕಟ್ಟ ಮಾಡಿ ಜೋಡಣೆ ಮಾಡಿದ ಅಮರರಾಜ 600 ಎಎಚ್ 48 ವೋಲ್ಟದ 24 ಬ್ಯಾಟ್ರಿಯ ಸೇಲ್ಲಗಳು ಅ:ಕಿ: 24000-00 ರೂಪಾಯಿ ಕಿಮ್ಮತ್ತಿನವು ಯಾರೋ ಕಳ್ಳರು ಕಳವು ಮಾಡಿಕೊಂಡು.ಹೋಗಿರುತ್ತಾರೆ ಅಂತಾ . ಶ್ರೀ  ಗುರುಲಿಂಪ್ಪಾ ತಂದೆ ಗುರುಬಸಪ್ಪಾ ಮಲ್ಕಪನವರ್ ಸಾ:ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ದಿನಾಂಕ:18/12/2018 ರಂದು ನಮ್ಮ ಚಿಕ್ಕಪ್ಪನಾದ ಶ್ರೀಮಂತ ತಂದೆ ಮಸ್ತಾನಪ್ಪಾ ಬಂದಗೆ ಇವರು ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವಿಯ ದೇವರು ಮಾಡುವ ಕಾರ್ಯಕ್ರಮವಿಟ್ಟುಕೊಂಡಿದ್ದರಿಂದ ಸದರಿ ದೇವರ ಕಾರ್ಯಕ್ರಮಕ್ಕೆ ನಮ್ಮ ಕುಟುಂಬದವರಿಗೂ ಸಹ ಆವ್ಹಾನ ನೀಡಿದ್ದು ಅದರಂತೆ ನಾನು ನನ್ನ ತಮ್ಮನಾದ ಜೈಭೀಮ ಹಾಗೂ ನಮ್ಮ ಚಿಕ್ಕಪ್ಪ ಶ್ರೀಮಂತ ಮತ್ತೆ ನಮ್ಮ ಓಣಿಯಯವರಾದ ಕಾಶಪ್ಪಾ ತಂದೆ ಹಣಮಂತ ಬಂದಗೆ, ಶಾಂತಬಾಯಿ ಗಂಡ ಸೂರ್ಯಕಾಂತ ಬಂದಗೆ, ನೀಲಮ್ಮ ಗಂಡ ಶ್ರೀಮಂತ ಬಂದಗೆ, ಗುಂಡಮ್ಮ ಗಂಡ ಹಣಮಂತರಾಯ ಬಂದಗೆ, ಮತ್ತು ಲಕ್ಷ್ಮಣ ತಂದೆ ಲಕ್ಕಪ್ಪಾ ಕಾಂಬಳೆ ರವರುಗಳು ಕೂಡಿಕೊಂಡು ನನ್ನ ಕ್ರೂಜರ್ ಜೀಪಿನಲ್ಲಿಯೇ ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವರಿಗೆ ಹೋದಾಗ ಮಧ್ಯಾಹ್ನ ಸದರಿ ದೇವಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳು ದೇವರ ದರ್ಶನ ಮಾಡುವ ಸಂದರ್ಭದಲ್ಲಿ ನನ್ನ ತಮ್ಮನಾದ ಜೈಭೀಮ ಮುಂಡಾ ಹೊಡೆದ ತಕಾರರು ಮಾಡಿರುತ್ತಾರೆ. ನಂತರ ಸಂಜೆ 7-30 ಗಂಟೆಯ ಸುಮಾರಿಗೆ ಕಾರ್ಯಕ್ರಮ ಮುಗಿದ ನಂತರ ನಾವುಗಳು ಮತ್ತೆ ವಾಪಸ ನಮ್ಮೂರಿಗೆ ಬರುವ ತಯಾರಿಯಲ್ಲಿದ್ದಾಗ ಮಧ್ಯಾಹ್ನ ತಕರಾರು ಮಾಡಿದ ಇಬ್ಬರು ವ್ಯಕ್ತಿಗಳು ತಮ್ಮೊಂದಿಗೆ ಇನ್ನು 16 ರಿಂದ 18 ಜನರನ್ನು ಕರೆದುಕೊಂಡು ಬಂದು ನನ್ನ ತಮ್ಮನಾದ ಜೈಭೀಮನಿಗೆ ಏ ಭೋಸಡಿ ಮಗನೆ ಮಧ್ಯಾಹ್ನ ನಮ್ಮೊಂದಿಗೆ ತಕರಾರು ಮಾಡಿದ್ದಿಯಾ ಎಂದು ಅವಾಚ್ಯವಾಗಿ ಏರುಧ್ವನಿಯಲ್ಲಿ ಬೈಯುತ್ತಾ ಅಲ್ಲಿಯೇ ಬಿದ್ದಿರುವ ಬಡಿಗೆಯನ್ನು ತಗೆದುಕೊಂಡು ನನ್ನ ತಮ್ಮನ ತಲೆಯ ಮೇಲೆ ಹೊಡೆಯುತ್ತಿದ್ದರು. ಆಗ ನಾನು  ಜಗಳ ಬಿಡಿಸಲು ಹೋದಾಗ ಎಲ್ಲರೂ ಸೇರಿ ನನಗೆ ನೆಲಕ್ಕೆ ಕೆಡವಿ ಬಡಿಗೆಯಿಂದ ಕಬ್ಬಿಣದ ರಾಡಿನಿಂದ ಮತ್ತು ಕಲ್ಲಿನಿಂದ ಹೊಡೆದ್ದಿದ್ದರಿಂದ ನನ್ನ ಮುಂದಿನ ಮೇಲ್ಭಾಗದ 4ಹಲ್ಲುಗಳು ಬಿದ್ದು ಅಲ್ಲದೆ ತಲೆಗೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತಗಾಯಗಳಾಗಿರುತ್ತದೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮೂರಿನ ಕಾಶಪ್ಪಾ ಬಂದಗೆ, ಶ್ರೀಮಂತ ಬಂದಗೆ, ಶಾತಾಬಾಯಿ ಬಂದಗೆ, ನೀಲಮ್ಮ ಬಂದಗೆ, ಗುಂಡಮ್ಮ ಬಂದಗೆ, ಹಗೂ ಲಕ್ಷ್ಮಣ ಕಾಂಬಳೆ ರವರುಗಳು ಜಗಳಾ ನೋಡಿ ಬಿಡಿಸಿರುತ್ತಾರೆ. ನಂತರ ನಮ್ಮ ಚಿಕ್ಕಪ್ಪ ಶ್ರೀಮಂತ ಇವರು ನನಗೆ ಹಾಗೂ ನನ್ನ ತಮ್ಮನಿಗೆ ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ನನಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಜೈಭೀಮನಿಗೆ ಯುನೈಟೇಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನಾವುಗಳಿಬ್ಬರು ಸದ್ಯ ಉಪಚಾರ ಹೊಂದುತ್ತಿದ್ದೇವೆ. ಸದರಿ ನಮಗೆ ಹಲ್ಲೆ  ಮಾಡಿದ ವ್ಯಕ್ತಿಗಳ ಹೆಸರು ನಮಗೆ ಗೊತ್ತಿರುವುದಿಲ್ಲ ಅವರುಗಳನ್ನು ನೋಡಿದಲ್ಲಿ ಗುರ್ತಿಸುತ್ತೇವೆ ಸದರಿ 16 ರಿಂದ 20 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀ ಮಲ್ಲಪ್ಪಾ ತಂದೆ ಭೀಮಣ್ಣಾ ಚೀಟನಳ್ಳಿ ಸಾ: ಸಿರಸಿ(ಎ) ಹಾಲಿ ವಸತಿ ಮುಗಳಖೋಡ  ರವರ ತಮ್ಮನಾದ ಪ್ರದಿಪ ಈತನು ಏಳು-ಎಂಟು ವರ್ಷದ ಹಿಂದೆ ಗುಜರಾತಿನಲ್ಲಿ ಲೇಬರ ಕೆಲಸಕ್ಕೆ ಹೋದಾಗ ಅಲಿಗೆ ಚಿಂಚನಸೂರ ಗ್ರಾಮದ ಅಂಬವ್ವಾ ಉರಕನ ಇವರ(ಮಗಳಾದ) ದೇವಿದಾಶಿ ಲಕ್ಷ್ಮಿ ಇವರು ಸಹ ಗುಜರಾತನಲ್ಲಿ ಕೆಲಸಕ್ಕೆ ಹೋದಾಗ ಲಕ್ಷ್ಮಿ ಇವರಿಗೆ ಗಂಡ ಮತ್ತು ಎರಡು ಮಕ್ಕಳು ಇದ್ದರು ಸಹ ನಮ್ಮ ತಮ್ಮ ಪ್ರದಿಪ ಲಕ್ಷ್ಮಿ ಇವಳೊಂದಿಗೆ ಪ್ರೀತಿಸಿದ್ದು ಆಗ ಲಕ್ಷ್ಮಿ ಅವರು ತನ್ನ ಗಂಡ ತುಕಾರಾಮ ವಾಲಿಕಾರ ತಂದೆ ಶಿವರಾಜ ವಾಲಿಕರ ಸಾ: ಅಹಮದಬಾದ ಇವರನ್ನು ಭಿಟ್ಟು ತಮ್ಮನೊಂದಿಗೆ ಏಂಟು ವರ್ಷಗಳಿಂದ ಸಂಸಾರ ಮಾಡಿದ್ದು  ಅವರಿಗೆ ಏಳು ವರ್ಷದ ಗಂಡು ಮಗು ರಾಜೇಶ ಅಂತ ಇದ್ದು ಅವರು ಎರಡು ವರ್ಷ ಗುಜರಾತನಲ್ಲಿ ಇದ್ದು ನಂತರ ಐದು ವರ್ಷದಿಂದ ಚಿಂಚನಸೂರ ಗ್ರಾಮದಲ್ಲಿ ವಾಸವಿದ್ದು  ನಮ್ಮ ತಮ್ಮ ಕೆಲಸಕ್ಕೆ ಗುಜರಾತಕ್ಕೆ ಹೋಗಿ ಬರುವುದು ಮಾಡುತ್ತಿದ್ದರು ಅದರಂತೆ ನಿನ್ನೆ ದಿನಾಂಕ 18/12/2018 ರಂದು 3 ಪಿ,ಎಮ್, ಸುಮಾರಿಗೆ ನಮ್ಮ ತಮ್ಮನ ಹೆಂಡತಿ ಲಕ್ಷ್ಮಿ ಇವಳು ನಮ್ಮ ಗ್ರಾಮದ ಹಾಗು ನಮ್ಮ ಸಮಾಜದ ಅಣತಮಕಿಯ ತುಕಾರಾಮ ಭಾವಿದೊಡ್ಡಿ ಇವರಿಗೆ ಫೋನಮಾಡಿ ತಿಳಿಸಿದರು ಅವರು ತಿಳಿಸಿದ ನಂತರ ನನ್ನ ತಮ್ಮ ಪ್ರದಿಪ ಇತನು ಕಳೆದೊಂದು ವಾರದಿಂದ ಅತಿಯಾದ ಹೊಟ್ಟೆಬೆನೆ ಇದ್ದು ಮತ್ತು ಅತಿಆದ ಸರಾಯಿ ಸೇವಿಸಿ ನಾನು ಲಕ್ಷ್ಮಿ ಜವಳಗ ಗ್ರಾಮಕ್ಕೆ ಕೂಲಿ ಕೆಲಸ ಹೊಗಿದಾಗ ಅಂದಾಜು 1 ಪಿ,ಎಮ್, ಸುಮಾರಿಗೆ ಮನೆಯಲ್ಲಿ ಮನೆಯ ಮೇಲಿನ ಪತ್ರ ಸೆಡ್ಡಿನ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು  ನಾನು ಮನೆಗೆ ಬಂದು ನೋಡಲು ನನ್ನ ತಮ್ಮನು ಕುಡಿತದ ದಾಸನಾಗಿದ್ದು ಮತ್ತು ಅತಿವ್ಯ ಹೊಟ್ಟೆಬೆನೆಯಿಂದ ತಾಳದೆ ಜೀವನಕ್ಕೆ ಜಿಗುಪ್ಸೆ ಹೊಂದಿ ಈ ರೀತಿ ನೇಣು ಹಾಕಿಕೊಂಡು ಸತ್ತಿದ್ದು ಅವನ ಮರಣದಲ್ಲಿ  ಯಾರ ಮೇಲೆಯೂ ಯಾವುದೇ ತರಹದ ಸಂಶಯ ಇರುವುದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: