Police Bhavan Kalaburagi

Police Bhavan Kalaburagi

Friday, December 7, 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀ ಬಸವರಾಜ ತಂದೆ ಸಿದ್ದಪ್ಪಾ ಕಟ್ಟಿ ಸಾ|| ಅಕ್ಕಮಹಾದೇವಿ ಕಾಲೋನಿ ಹೈಕೋರ್ಟ ಹತ್ತಿರ ಕಲಬುರಗಿ ರವರ ಮಗಳಾದ ಮೀನಾಕ್ಷಿ ಇವಳಿಗೆ ಆನಂದ ತಂದೆ ಓಂಪ್ರಕಾಶ ಸಾ|| ಅಂಬಿಕಾ ನಗರ ಕಲಬುರಗಿ ಇತನೊಂದಿಗೆ ದಿನಾಂಕ 19.04.2016 ರಂದು ಸಾಯಿಮಂದಿರ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆಯಾದ 5-6 ದಿವಸಗಳ ನಂತರ ಅವಳಿಗೆ ಗಂಡ ಆನಂದ ಅತ್ತೆಯಾದ ಸುಮಂಗಲಾ ಮಾವ ಓಂಪ್ರಕಾಶ ನಾದಿನಿ ಪೂಜಾ ಇವರೆಲ್ಲರೂ ಕೂಡಿಕೊಂಡು ತೊಂದರೆ ಕೊಡಲು  ಪ್ರಾರಂಭಿಸಿದರು. ಆಗ ನನ್ನ ಮಗಳು ಮನೆಗೆ ಬಂದು ನನ್ನ ಅತ್ತೆ ಮಾವ ಗಂಡ ಎಲ್ಲರು ತವರು ಮನೆಯಿಂದ ಹಣ ತೆಗೆದುಕೊಂಡು ಬರಬೇಕು ಅಂತಾ ಫೋಟು ಸ್ಟುಡಿಯೋಕೆ ಹಣ ಬೇಕಾಗಿದೆ ತರದೆ ಇದ್ದಲ್ಲಿ ನೀನು ಬರಬೇಡಾ ಅಂತಾ ಹೇಳಿದರು ಆಗ ನಾನು ನನ್ನ ಮಗಳ ಗಂಡನಿಗೆ ವಿಚಾರಿಸಿದಾಗ ನೀವು ಮದುವೆಯ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ಕೊಟ್ಟಿಲ್ಲಾ ಅದಕ್ಕಾಗಿ ನನಗೆ ಒಂದು ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಮಗಳಿಗೆ ಮನೆಯಲ್ಲಿ ಇಟ್ಟುಕೊಳ್ಲುತ್ತೇವೆ ಇಲ್ಲವಾದರೆ ಬೇಡಾ ಎಂದು ಹೇಳಿದರು ಆಗ ಅವರ ತಂದೆತಾಯಿವರಿಗೆ ವಿಚಾರಿಸಿದಾಗ ನಾವು ನಮ್ಮ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಹೇಳಿರುತ್ತಾರೆ. ಆಗ ನಾನು ಸಾಲಾ ಮಾಡಿ ನನ್ನ ಮಗಳ ಕೈಯಲ್ಲಿ 50 ಸಾವಿರ ರೂಪಾಯಿ ಕೊಟ್ಟು ಗಂಡನ ಮನೆಗೆ ಕಳುಹಿಸಿರುತ್ತೇನೆ. ಆದರು ದಿನಾಲೂ ನನ್ನ ಮಗಳಿಗೆ ಅತ್ತೆ ಮಾವ ನಾದಿನಿ ಮತ್ತು ಆನಂದನ ಅಣ್ಣ ಜಮದಗ್ನಿ ಇವರೆಲ್ಲರು ಸೇರಿ ದಿನಾಲೂ ತೊಂದರೆ ಕೊಡಲು ಪ್ರಾರಮಭಿಸಿದರು ಆಗ ನನ್ನ ಮಗಳು ಮನೆಗೆ ಬಂದು ನಮ್ಮ ಮನೆಯಲ್ಲಿಯೆ ಉಳಿದಿರುತ್ತಾಳೆ. ಆಗ ನಾಲಕೈದು ಜನರು ಸೇರಿ ನಮ್ಮ ಮನೆಗೆ ಬಂದು ನ್ಯಾಯಾಪಂಚಾಯಿತಿ ಮಾಡಿ ನಮ್ಮ ಮಗಳಿಗೆ 2017ರ ದೀಪಾವಳಿ ಹಬ್ಬದ ನಂತರ ಗಂಡನ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ನನ್ನ ಮಗಳಿಗೆ ಅವಳ ನಾದಿನಿ ಪೂಜಾ ಬಾಯಿಗೆ ಬಂದಂತೆ ಬೈದರೆ ಗಂಡ ಅತ್ತೆ ಮಾವ ಇವರೆಲ್ಲರು ಸೇರಿ ವಾರದಲ್ಲಿ 2-3 ಸಲ ಹೊಡೆಯುತ್ತಿದ್ದರು ಮತ್ತು ವರದಕ್ಷಿಣೆ ತರಬೇಕು ಅಂತಾ ಹೇಳುತ್ತಿದ್ದರು ನಾವು ಮದುವೆಯ ಸಮಯದಲ್ಲಿ 2-3 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿರುತೇವೆ ನಂತರ ನಮ್ಮ ಕೈಲಾದಷ್ಟು ಹಣ ನೀಡಿದ್ದೇವೆ. ನನ್ನ ಮಗಳಿಗೆ ಎಷ್ಟ ಕಷ್ಟ ಕೊಟ್ಟರು ನನಗೆ ಗಂಡ ಬೇಕು ಅಂತಾ ಹೇಳುತ್ತಿದ್ದಳು. ದಿನಾಂಕ 05.12.2018 ರಂದು ರಾತ್ರಿ ಜಗಳ ಮಾಡಿ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಅತ್ತೆ ಸುಮಂಗಲಾ ಗಂಡ ಆನಂದ ಮಾವ ಓಂಪ್ರಕಾಶ ನಾದಿನಿ ಪೂಜಾ ಇವರೆಲ್ಲರು ಸೇರಿ ನನ್ನ ಮಗಳು ಮೀನಾಕ್ಷಿ ಇವಳಿಗೆ ಹೊಡೆದು ಕೊಲೆ ಮಾಡಿರುತ್ತಾರೆ. ನನ್ನ ಮಗಳ ಮಾವನಾದ ಓಂಪ್ರಕಾಶ ಇವರು ಇಂದು ದಿನಾಂಕ 06.12.2018 ರಂದು ಬೆಳಿಗ್ಗೆ 7-20 ಗಂಟೆಗೆ ನಮ್ಮ ಮನೆಗೆ ಪೋನ್ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ತಿಳಿಸಿದ್ದಾರೆ. ಆಗ ನಾವೆಲ್ಲರು ಸೇರಿ ಅವಳ ಮನೆಗೆ ಹೋಗಿ ನೋಡಿದಾಗ ಅವಳಿಗೆ ಗಂಡ ಅತ್ತೆ ಮಾವ ನಾದಿನಿ ಇವರೆಲ್ಲಾ ಸೇರಿ ಕೊಲೆ ಮಾಡಿರುತ್ತಾರೆ ಅಂದು ತಿಳಿಯಿತು. ಕಾರಣ ನನ್ನ ಮಗಳಾದ ಮೀನಾಕ್ಷಿ ಇವಳಿಗೆ ಕೊಲೆ ಮಾಡಿದ ಅವಳ ಗಂಡ ಆನಂದ ಅತ್ತೆ ಸುಮಂಗಲಾ ಮಾವ ಓಂಪ್ರಕಾಶ ನಾದಿನಿ ಪೂಜಾ ಮತ್ತು ಆನಂದ ಇವನ ಅಣ್ಣ ಜಮದಗ್ನಿ ಇವರೆಲ್ಲರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಅಡಿವೆಪ್ಪ ಗೌಂಡಿ ಸಾ: ಮಲ್ಲಾ (ಕೆ) ತಾ: ಸುರಪುರ ಜಿ: ಯಾದಗೀರ ರವರು ಮಗಳಾದ ಅನಿತಾ ಇವಳಿಗೆ 4 ವರ್ಷದ ಹಿಂದೆ ಕಣಮೇಶ್ವರ ಗ್ರಾಮದ ನನ್ನ ಹೆಂಡತಿಯ ತಮ್ಮನಾದ ಪ್ರಕಾಶ ತಂದೆ ನಿಂಗಪ್ಪ ತಳಕೇರಿ ಇವನೊಂದಿಗೆ ಸಂಪ್ರದಾಯದಂತೆ ಕಣಮೇಶ್ವರ ಗ್ರಾಮದಲ್ಲಿ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯ ಕಾಲಕ್ಕೆ ಒಂದು ತೋಲಿ ಬಂಗಾರ ಮತ್ತು 50000/- ಸಾವಿರ ರೂಪಾಯಿ ವರದಕ್ಷಿಣೆ ಮಾತುಕತೆಯಾಗಿದ್ದು, ಅದರಲ್ಲಿ ಮದುವೆ ಕಾಲಕ್ಕೆ ನಮ್ಮ ಅಳಿಯನಿಗೆ ಒಂದು ತೋಲಿ ಬಂಗಾರ ಹಾಕಿದ್ದು ಸಂಸಾರದ ಅಡಚಣೆಯಲ್ಲಿ 50,000ರೂ ಕೊಡಲು ಆಗದ ಕಾರಣ ಅವರಿಗೆ ಆ ಹಣ ನಂತರ ಕೊಡುವದಾಗಿ ಹೇಳಿದ್ದೆವು. ಈಗ ಕೆಲವು ತಿಂಗಳಿಂದ ನಮ್ಮ ಮಗಳು ಅನಿತಾ ನಮಗೆ ಆಗಾಗ ಹೇಳಿದೆನೆಂದರೆ ನನ್ನ ಗಂಡ ಮತ್ತು ಅವರ ಮನೆಯವರು ಮದುವೆ ಕಾಲಕ್ಕೆ ಮಾತನಾಡಿದಂತೆ  ವರದಕ್ಷಣೆ ಹಣ 50,000ರೂ ತಗೆದುಕೊಂಡು ಬಾ ಇಲ್ಲವಾದರೇ ನಿನಗೆ ಖಲಾಸ ಮಾಡಿ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೆವೆ ಅಂತ ಅನ್ನುತ್ತಾ ನನಗೆ ಕಿರುಕುಳ ಕೊಡುತ್ತಿದ್ದಾರೆ  ಅಂತ ಹೇಳಿದ್ದರಿಂದ ಒಂದು ದಿನ ನಾನು ಮತ್ತು ನನ್ನ ತಮ್ಮಂದಿರರಾದ ದೇವಿಂದ್ರಪ್ಪ ಹಾಗೂ ಶಂಕರ ಕೂಡಿ ಕಣಮೇಶ್ವರ ಗ್ರಾಮಕ್ಕೆ ಹೋಗಿ ಮುಂದೆ ಬರುವ ಯುಗಾದಿ ಹಬ್ಬಕ್ಕೆ ಹಣ ಕೊಡುತ್ತೇವೆ ಅಂತ ನಮ್ಮ ಅಳಿಯನಿಗೆ ಹಾಗು ಅವನ ಮನೆಯವರಿಗೆ ಹೇಳಿ ಬಂದಿದ್ದು ಇರುತ್ತದೆ. ದಿನಾಂಕ: 05-12-2018 ರಂದು ರಾತ್ರಿ  ನನ್ನ ಮಗಳು ನಮಗೆ ಪೋನ ಮಾಡಿ, ನನ್ನ ಗಂಡ ಪ್ರಕಾಶ ತಳಕೇರಿ, ಭಾವ ಹುಸನಪ್ಪ ತಳಕೇರಿ, ಅತ್ತೆ ಕಾಳಮ್ಮ ತಳಕೇರಿ, ಮಾವ ನಿಂಗಪ್ಪ ತಂದೆ ನಿಜಗಪ್ಪ ತಳಕೇರಿ, ನಾದಿನಿಯರಾದ ಸುನೀತಾ ತಂದೆ ನಿಂಗಪ್ಪ ತಳಕೇರಿ, ಮತ್ತು ಯಲ್ಲಮ್ಮ ಗಂಡ ಸಿದ್ದಪ್ಪ ಗೋಲಗೇರಿ, ಅವಳ ಗಂಡನಾದ ಸಿದ್ದಪ್ಪ ಗೊಲಗೇರಿ ಇವರು ನನಗೆ ತವರು ಮನೆಯಿಂದ ಹಣ ತಗೆದುಕೊಂಡು ಬಾ ಇಲ್ಲವಾದರೆ ನಿನ್ನ ಜೀವ ತಗೆಯುತ್ತೆವೆ ಅಂತ ಹೇಳುತ್ತಿದ್ದಾರೆ ನೀವು ಅವರಿಗೆ ಹಣ ಕೋಟ್ಟು ಬಿಡರೀ ಅಂತ ಹೇಳಿದ್ದಳು. ಆಗ ನಾನು ಅವಳಿಗೆ ಮುಂಜಾನೆ ಬರುತ್ತೆನೆ ಅಂತ ಹೇಳಿದ್ದೆ, ದಿನಾಂಕ: 06-12-2018 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ನಮ್ಮ ಬೀಗರ ಸಂಬಂದಿಕರು ನನಗೆ ಪೋನ ಮಾಡಿ ನಿಮ್ಮ ಮಗಳಾದ ಅನೀತಾ ಸತ್ತಿರುತ್ತಾಳೆ. ಅಂತ ಹೇಳಿದ್ದರಿಂದ ನಮ್ಮೂರಿನಿಂದ ನಾನು ಮತ್ತು ನಮ್ಮ ತಮ್ಮಂದಿರರಾದ ದೇವಿಂದ್ರಪ್ಪ ತಂದೆ ಅಡಿವೆಪ್ಪ, ಶಂಕರ ತಂದೆ ಅಡಿವೇಪ್ಪ  ಹಾಗೂ ನಮ್ಮ ಸಂಬಂದಿಕರಾದ ಮರೇಪ್ಪ ತಂದೆ ಶಿವಲಿಂಗಪ್ಪ ಗೌಂಡಿ, ಮಾನಪ್ಪ ತಂದೆ ರಾಮಪ್ಪ ಗೌಂಡಿ, ವಿಠ್ಠಲ್ ತಂದೆ ರಾಮಪ್ಪ ಗೌಂಡಿ ರವರು ಕೂಡಿಕೊಂಡು ಕಣಮೇಶ್ವರ ಗ್ರಾಮಕ್ಕೆ ನಮ್ಮ ಮಗಳ ಮನೆಗೆ ಹೋಗಿ ನೋಡಲಾಗಿ ನನ್ನ ಮಗಳು ಸತ್ತಿದ್ದಳು. ಅವಳ ಕುತ್ತಿಗೆಗೆ ಬಲಭಾಗ ಮತ್ತು ಕುತ್ತಿಗೆಯ ಕೆಳಗಡೆ ಕಂದುಗಟ್ಟಿದ ಗಾಯಗಳು ಆಗಿದ್ದವು. ಅವಳಿಗೆ ಆದ ಗಾಯಗಳನ್ನು ನೋಡಿದರೆ ನನ್ನ ಮಗಳಿಗೆ ನಮ್ಮ ಅಳಿಯ ಪ್ರಕಾಶ ಹಾಗೂ ಮೇಲ್ಕಂಡ ಅವನ ಮನೆಯರೆಲ್ಲರು ಸೇರಿ ಅವಳಿಗೆ ಕುತ್ತಿಗೆ ಒತ್ತಿ ಅಥವಾ ಯಾವುದೊ ವಸ್ತುವಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು ಕಂಡು ಬರುತ್ತದೆ. ಅಲ್ಲದೆ ಈ ಕೊಲೆ ನಿನ್ನೆ ದಿ: 5-12-18 ರಂದು ರಾತ್ರಿ 9-00 ಗಂಟೆಯಿಂದ ದಿ: 6-12-18 ರಂದು ಬೆಳಿಗ್ಗೆ 5-00 ಗಂಟೆ ಮದ್ಯದ ಅವಧಿಯಲ್ಲಿ  ಅಗಿರಬಹುದು ಮೇಲ್ಕಂಡ 7 ಜನರು ಕೂಡಿ ನನ್ನ ಮಗಳಿಗೆ ತವರು ಮನೆಯಿಂದ ವರದಕ್ಷಿಣೆಯ ಹಣ 50,000ರೂ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ತೊಂದರೆ ಕೊಡುತ್ತಾ ಬಂದು ಅದೆ ಕಾರಣಕ್ಕೆ ಅವಳಿಗೆ ಕುತ್ತಿಗೆ ಒತ್ತಿ ಅಥವಾ ಯಾವುದೆ ವಸ್ತುವಿನಿಂದ ಬಿಗಿದು ಕೊಲೆ ಮಾಡಿದವರ ವಿರುದ್ಧ ಕಾನೂನಿನ ಕ್ರಮ ಜರುಗಿಸ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-11-2018 ರಂದು ಮಾಶಾಳ ಗ್ರಾಮದ ಚೌಡೇಶ್ವರಿ ಹೋಟೆಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.  ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ  ಚೌಡೇಶ್ವರಿ ಹೋಟೆಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುರೆಶ ತಂದೆ ಶಿವಪುತ್ರ ರಾವೂರ ಸಾ||ಮಾಶಾಳ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 750/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-11-2018 ರಂದು ಸೊನ್ನ ಗ್ರಾಮದ ಡಾ||ಬಾಬಾ ಸಾಹೇಬ ಅಂಬೇಡ್ಕರ  ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.  ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಗ್ರಾಮಕ್ಕೆ ಹೋಗಿ  ಡಾ||ಬಾಬಾ ಸಾಹೇಬ ಅಂಬೇಡ್ಕರ  ವೃತ್ತದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡಪ್ಪ ಕುದರಿ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1410/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು,  ಸದರಿಯವುಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವನೊಂದಿಗೆ ಅಫಜಲಪೂರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 05/12/18 ರಂದು ಹೇರೂರ(ಬಿ) ಗ್ರಾಮ ದ ಹನುಮಾನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೇರುರ ಬಿ ಗ್ರಾಮಕ್ಕೆ ಹೋಗಿ ಹನುಮಾನ ಗುಡಿಯ ಮರೆಯಲ್ಲಿ ನಿಂತು ನೋಡಲು  ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಹೇಳಿ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲು1) ಅಣ್ಣಾರಾಯ ತಂದೆ ಸಾಯಿಬಣ್ಣಾ ಕ್ಯಾಸ   ಸಾ; ಹೇರೂರ (ಬಿ) 2) ವಿಠಲ ತಂದೆ ಬಸವರಾಜ ಫರತಾಬಾದ ಸಾ; ಹೇರೂರ (ಬಿ) ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 480/- ರೂ 2) ಎರಡು ಬಾಲ ಪೇನ 3) ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು  ಸದರಿಯವರೊಂದಿಗೆ ಫರಥಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶಿವಪ್ಪ ತಂದೆ ಭೀಮಶಪ್ಪ ವರಿಕೇರಿ ವಯ 22 ವರ್ಷ ಉ; ಪೊಲೀಸ್ ಕಾನ್ಸಟೇಬಲ್, ಸಿಪಿಸಿ 181 ಜೇವರಗಿ ಪೊಲೀಸ್ ಠಾಣೆ ಸಾ; ಗೊಂದೇನೂರ ತಾ; ಶಹಾಪೂರ ಜಿ; ಯಾದಗಿರ ಹಾ.ವ ಪೊಲೀಸ್ ಕ್ವಾಟ್ರಸ್ ಜೇವರಗಿ ರವರು  ಜೇವರಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ; 03/07/2017 ರಿಂದ ಇಲ್ಲಿಯವರೆಗೆ ಪೊಲೀಸ್ ಕಾನ್ಸಟೇಬಲ್ ಎಂದು ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ದಿನಾಂಕ; 03/12/2018 ರಂದು ಮದ್ಯಾಹ್ನ 1-00 ಪಿ.ಎಮ್ ಸುಮಾರಿಗೆ ನಾನು ಕೋರ್ಟದಲ್ಲಿ ಇದ್ದಾಗ ಬಸವರಾಜ ತಂದೆ ಶಂಕರೆಪ್ಪ ಬಸವಪಟ್ಟಣ ವಕೀಲ ಈತನು ನನ್ನ ಹತ್ತಿರ ಬಂದು ಜೇವರಗಿ ಠಾಣೆ ಗುನ್ನೆ ನಂ; 211/2018 ಪ್ರಕರಣದಲ್ಲಿ ಪಿ.ಎಫ್ ನೋಡುತ್ತೇನೆ ತೋರಿಸು ಎಂದು ಕೇಳಿದಾಗ ನಾನು ಪಿ.ಎಫ್ ನಿಮಗೆ ಯಾಕೆ ತೋರಿಸಬೇಕು ಕೋರ್ಟದಲ್ಲಿ ಕೊಡುತ್ತೇನೆ ಎಂದು ಅಂದಿದ್ದಕ್ಕೆ ನನ್ನೊಂದಿಗೆ ತಕರಾರು ಮಾಡಿ ಹೋಗಿರುತ್ತಾನೆ. ದಿನಾಂಕ; 04/12/2018 ರಂದು ಬೆಳಗ್ಗೆ 10-00 ಗಂಟೆಗೆ ನಾನು ಎಂದಿನಂತೆ ಮಾನ್ಯ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಕೋರ್ಟ ಕರ್ತವ್ಯಕ್ಕೆ ಹಾಜರಾಗಿ ಕೋರ್ಟದಲ್ಲಿ ಇದ್ದಾಗ ಬೆಳಿಗ್ಗೆ 10-45 .ಎಮ್ ವೇಳೆಗೆ ನಾನು ಸಹಾಯಕ ಸರಕಾರಿ ಅಭಿಯೋಜಕರ ಕಾರ್ಯಾಲಯದ ಹತ್ತಿರ ಕರ್ತವ್ಯದ ಮೇಲೆ ಇದ್ದಾಗ ಬಸವರಾಜ ತಂದೆ ಶಂಕರೆಪ್ಪ ಬಸವಪಟ್ಟಣ ವಕೀಲ ಈತನು ನನ್ನ ಹತ್ತಿರ ಬಂದು ಭೋಸಡಿ ಮಗನೆ, ಕುಂಡಿ ಕಡಿತದ ಏನು, ಪಿ.ಎಫ್ ಕೋರ್ಟದಲ್ಲಿ ಕೊಟ್ಟಿರುವದಿಲ್ಲ ಯಾಕೆ?. ಮೈಯಲ್ಲಿ ಸೊಕ್ಕು ಬಂದಿದೆ ನಿನಗೆ, ರಂಡಿ ಮಗನೆ ನಾನು ನಿನ್ನಂತವರನ್ನು ಎಷ್ಟು ಜನರನ್ನು ನೋಡಿಲ್ಲ ಎಂದು ಅವಾಚ್ಯವಾಗಿ ಜೋರಾಗಿ ಬೈದು, ಸಿಟ್ಟಿನಿಂದ ಹಲ್ಲು ಕಡಿಯುತ್ತಾ ಬಲ ಕೈಯಿಂದ ನನ್ನ ಎಡಗಡೆ ಕಪಾಳ ಮೇಲೆ ಜೋರಾಗಿ ಹೊಡೆದನು. ಮತ್ತು ನನ್ನ ಮೈ ಮೇಲಿನ ಸಮವಸ್ತ್ರ ಹಿಡಿದು ಜಗ್ಗಿ, ಎಳೆದಾಡಿ ನನಗೆ ಗೋಡೆಗೆ ನೂಕಿಸಿ ಕೊಟ್ಟನು. ಆಗ ನಾನು ಗೋಡೆ ಮೇಲೆ ಬಿದ್ದುದ್ದರಿಂದ ನನ್ನ ಬೆನ್ನಿಗೆ ತರಚಿದ ಗಾಯವಾಗಿರುತ್ತದೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ರಾಮರಾವ ತಂದೆ ಬಸವಂತ್ರಾಯ ಜಗತಾಪ ಮತ್ತು  ಗುರುಬಸಪ್ಪ ತಂದೆ ಫ್ರಭಾಕರ್ ಮತ್ತು ಭಾಗಣ್ಣ ಹೆಚ್.ಸಿ 395 ನೆಲೋಗಿ ಪೊಲೀಸ್ ಠಾಣೆ ಇವರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿಕೊಂಡರು. ನಂತರ ಅವನು ನನಗೆ ಭೋಸಡಿ ಮಗನೆ ನೀನು ಜೇವರಗಿಯಲ್ಲಿ ಹೇಗೆ ಕೆಲಸ ಮಾಡುತಿ ನೀನಗೆ ನೋಡಿಕೊಳ್ಳುತ್ತೆನೆ. ಎಂದು ನನಗೆ ಜೀವದ ಬೇದರಿಕೆ ಹಾಕಿರುತ್ತಾನೆ, ನಂತರ ನಾನು ಕೋರ್ಟ್ ಕರ್ತವ್ಯ ಮುಗಿಸಿಕೊಂಡು ಠಾಣೆಗೆ ಬಂದು ನಮ್ಮ ಮೇಲಾಧಿಕಾರಿಗಳೊಂದಿಗೆ ವಿಚಾರಿಸಿ ದೂರು ನೀಡುತ್ತಿದ್ದೇನೆ. ಕಾರಣ ಬಸವರಾಜ ತಂದೆ ಶಂಕರೆಪ್ಪ ಬಸವಪಟ್ಟಣ ವಕೀಲ ಈತನು, ನಾನು ಮಾನ್ಯ ನ್ಯಾಯಾಲಯದಲ್ಲಿ ಕರ್ತವ್ಯದ ಮೇಲೆ ಇದ್ದಾಗ ನನಗೆ ಅವಾಚ್ಯವಾಗಿ ಬೈದು, ಸಮವಸ್ತ್ರ ಹಿಡಿದು ಎಳೆದಾಡಿ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಸರಕಾರಿ ಕರ್ತವ್ಯಕ್ಕೆ ಅಡೆ-ತಡೆ ಮಾಡಿ ಜೀವದ ಭೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 05-2-2018 ರಂದು ಕುಮಾರಿ ಕಲ್ಪನಾ ತಂದೆ ಧರ್ಮಸಿಂಗ ರಾಠೋಡ  ಸಾ|| ಬಳೂರ್ಗಿ ತಾಂಡಾ ರವರಿಗೆ ಯಾವುದೊ ಒಂದು ವಾಹನ ಅಪಘಾತ ಮಾಡಿ ಗಾಯಗೋಳಿಸಿ ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ನೀಲಕಂಠ ಮಡಿವಾಳ  ಸಾ:ಇಟಗಾ (ಕೆ) ತಾ:ಜಿ:ಕಲಬುರಗಿ ರವರ ಮಗಳಾದ ಲಕ್ಷ್ಮೀ ಇವಳಿಗೆ ಎಪ್ರೀಲ್ತಿಂಗಳ 25 ತಾರೀಕಿನಂದು ಕೋನಾಳ ಗ್ರಾಮದ ಶಿವಶರಣಪ್ಪಾ ಮಡಿವಾಳ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಾದ ನಂತರ ನನ್ನ ಮಗಳು ಅಳಿಯ ಕಲಬುರಗಿ ನಗರದಲ್ಲಿ ಮನೆ ಮಾಡಿಕೊಂಡಿದ್ದು ನಾನು ಮನೆಯಲ್ಲಿ ಒಬ್ಬಳೆ ಇದ್ದಿದ್ದುರಿಂದ ಮಗಳ ಹತ್ತಿರ ಬಂದಿರುವದಿಲ್ಲಾ ನನ್ನ ಮಗಳು ಒಂದು ಸಲ ನನ್ನ ಹತ್ತಿರ ಬಂದು ಗಂಡ ಅವನ ಮನೆಯವರು ತನ್ನ ಸಂಗಡ ಆಗಾಗ ತಕರಾರು ಮಾಡುತ್ತಾರೆ ಎಂದು ಹೇಳಿದ್ದಾಳೆ ದಿನಾಂಕ:10/11/2018 ರಂದು ನನ್ನ ಮಗಳಿಗೆ ಸುಟ್ಟಗಾಯಗಳಾಗಿದ್ದು ಅವಳಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ ಗೊತ್ತಾಗಿ ನಾನು ಬಂದು ನನ್ನ ಮಗಳಿಗೆ ನೋಡಿದ್ದು ಅವಳ ಕುತ್ತಿಗೆ ಹತ್ತಿರ & ಎರಡು ಕೈಗಳ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು ನನ್ನ ಮಗಳು ಪೊಲೀಸರ ಮುಂದೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಟ್ಟಗಾಯ ವಾಗಿರುತ್ತದೆ. ಅಂತಾ ಹೇಳಿಕೆ ನೀಡಿದ್ದು ಇರುತ್ತದೆ. ದಿನಾಂಕ:03/12/18 ರಂದು ನನ್ನ ಮಗಳಿಗೆ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ನಿನ್ನೆ ದಿನಾಂಕ:04/12/18 ರಂದು ಬೆಳಗ್ಗೆ 7.30 ಸುಮಾರಿಗೆ ನನ್ನ ಬಿಗರಾದ ಆದಪ್ಪ ಅವರಿಗೆ ಪೋನ್ಮಾಡಿದಾಗ ಅವರು ತಿಳಿಸಿದ್ದೇನೆಂದರೆ ಲಕ್ಷ್ಮೀ ಇವಳು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾಳೆ ಮರಳಿ ಬರುತ್ತಿದ್ದೇವೆ ಎಂದು ತಿಳಿಸಿರುತ್ತಾರೆ ನನ್ನ ಮಗಳ ಶವವನ್ನು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿದ್ದು ನನ್ನ ಮಗಳ ಸಾವಿನಲ್ಲಿ ನನಗೆ ಸಂಶಯವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: