¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-01-2019
§¸ÀªÀPÀ¯Áåt £ÀUÀgÀ
¥Éưøï oÁuÉ C¥ÀgÁzsÀ ¸ÀA. 02/2019, PÀ®A. 363 L¦¹ :-
ದಿನಾಂಕ 09-12-2018 ರಂದು ರಾತ್ರಿ 1200 ಗಂಟೆಯ ಸುಮಾರಿಗೆ ಫಿರ್ಯಾದಿ ರೇಖಾ ಗಂಡ ದಿಲೀಪ್ ಪಾಟೀಲ್ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಬಸವಕಲ್ಯಾಣ, ಸದ್ಯ: ಹಿರೆಮಠ ಗಲ್ಲಿ ಭಾಲ್ಕಿ ರವರ ಮಗಳು ಕು:ಮಿಂಚು ಇವಳು ಮೂತ್ರ ವಿಸರ್ಜನೆಗೆ ಅಂತ ಫಿರ್ಯಾದಿಗೆ ಎಬ್ಬಿಸಿ ಮನೆಯಿಂದ ಹೋರಗೆ ಹೋದಳು ಅರ್ಧ ಗಂಟೆಯಾದರು ಮನೆಯ ಒಳಗೆ ಬರದೆ ಇದ್ದುದ್ದರಿಂದ ಫಿರ್ಯಾದಿಯು ಮನೆಯ ಹೋರಗೆ ಬಂದು ನೋಡಲು ಮಗಳು ಇರಲಿಲ್ಲ, ನಂತರ ಫಿರ್ಯಾದಿಯು
ದಿನಾಂಕ 10-12-2018 ರಂದು ಬಸವಕಲ್ಯಾಣ ನಗರದ ತ್ರಿಪುರಾಂತ ಓಣಿಯಲ್ಲಿರುವ ತನ್ನಅತ್ತೆ, ಮಾವ, ಮತ್ತು ಮೈದುನ ಇವರಿಗೆ ಕರೆ ಮಾಡಿ ಮಗಳು ಬಸವಕಲ್ಯಾಣಕ್ಕೆ ಬಂದ ಬಗ್ಗೆ ವಿಚಾರಿಸಿದಾಗ ಅವರು ಬಂದಿರುವುದಿಲ್ಲ ಅಂತ
ತಿಳಿಸಿರುತ್ತಾರೆ, ಫಿರ್ಯಾದಿಯು ಬಸವಕಲ್ಯಾಣ ನಗರದಲ್ಲಿ ಮತ್ತು ಭಾಲ್ಕಿಯಲ್ಲಿ ಹುಡುಕಾಡಲು ಮಗಳು ಸಿಕ್ಕಿರುವುದಿಲ್ಲ, ಕಾರಣ ದಿನಾಂಕ 09-12-2018 ರಂದು ರಾತ್ರಿ 12:00 ಗಂಟೆಯ ಸುಮಾರಿಗೆ ಭಾಲ್ಕಿಯಲ್ಲಿರುವ ಫಿರ್ಯಾದಿಯವರ ಮನೆಗೆ ಕೃಷ್ಣಾ ತಂದೆ ಚಂದ್ರಕಾಂತ ಕಾಂಬಳೆ ಸಾ: ಬಸವಕಲ್ಯಾಣ ಇವನು ದ್ವಿಚಕ್ರ ವಾಹನದ ಮೇಲೆ ಬಂದು ಫಿರ್ಯಾದಿಯ ಮಗಳಾದ ಕು:ಮಿಂಚು ತಂದೆ ದಿಲೀಪ್ ಪಾಟೀಲ್ ವಯ: 16 ವರ್ಷ ಇವಳಿಗೆ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ
ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment