ಅಪಘಾತ ಪ್ರಕರಣಗಳು
:
ನರೋಣಾ
ಠಾಣೆ : ಶ್ರೀ ಅಸ್ಲಂ ತಂದೆ ಅಮೀರಸಾಬ ಮುಲ್ಲಾ, ಸಾ:ಮುನ್ನಳ್ಳಿ ಗ್ರಾಮ
ರವರು ದಿನಾಂಕ:10/01/2019 ರಂದು ರಾತ್ರಿ ಸಮೂರಿನ ಬಂಡಪ್ಪಾ ಜಮಾದಾರ ಇವರ ಹೊಲಕ್ಕೆ ಟ್ರ್ಯಾಕ್ಟರ್ ಗಳ್ಯಾ
ಕೂಲಿಕೆಲಸಕ್ಕೆ ಹೋಗಿದ್ದು, ಗಳ್ಯಾ ಹೊಡೆಯಲು ಟ್ರ್ಯಾಕ್ಟರ್ ಕೆಎ32ಟಿಬಿ3281 ನೇದ್ದರ ಚಾಲಕ ರಾಜಕುಮಾರ ತಂದೆ ಬಬ್ರುವಾಹನ ಆಳಂಗೆ ಸಾ:ಕಣ್ಮಸ್ ಈತನು ಇದ್ದು
ಸದರಿಯವನು ಹಾಗೂ ನಾನು ರಾತ್ರಿ 8-30 ರಿಂದ 11-30 ಪಿ.ಎಂ ವರೆಗೆ ಹೊಲದಲ್ಲಿ ಗಳ್ಯಾ ಹೊಡೆದು ನಾನು ಟ್ರ್ಯಾಕ್ಟರ್ ಹಿಂದೆ ಗಳ್ಯಾ
ಹೊಡೆಯುವ ಕಾಲಕ್ಕೆ ನೆಲದಿಂದ ಏಳುವ ಕಟ್ಟಿಗೆ ಹಾಗೂ ಬಂಡೆ ಕಲ್ಲು ತಗೆದಿರುತ್ತೇನೆ ರಾತ್ರಿ 11-30ಕ್ಕೆ ಬಂದಾರಿ ಹತ್ತಿರ
ಇನ್ನು ಕೆಲವು ಕಟ್ಟಿಗೆ ಮತ್ತು ಕಲ್ಲು ತಗೆಯುತ್ತಿರುವಾಗ ರಾಜಕುಮಾರ ಈತನು ಟ್ರ್ಯಾಕ್ಟರ್
ತಿರುಗಿಸಲು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಟ್ರ್ಯಾಕ್ಟರ್ ಚಲಾಯಿಸುತ್ತಾ ಬಂದಾರಿ ಕಡೆಗೆ
ಬಂದು ನನಗೆ ಜೋರಾಗಿ ಡಿಕ್ಕಿಹೊಡೆದು ಅಪಾಘಾತ ಪಡಿಸಿದನು. ಆಗ ನನಗೆ ಎಡಗಾಲಿ ಮೇಲೆ ಟ್ರ್ಯಾಕ್ಟರ್
ಹಾಯ್ದು ಗಂಭೀರಗಾಯವಾಗಿ ನಾನು ನೆಲಕ್ಕೆ ಬಿದ್ದಾಗ ನನಗೆ ರಾಜಕುಮಾರನು ಅಲ್ಲಿಂದ ಎತ್ತಿ ಈ ವಿಷಯ
ಕುಪೇಂದ್ರ ತಂದೆ ಶಂಕರ ಇವರಿಗೆ ತಿಳಿಸಿದ್ದರಿಂದ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ನನಗೆ
ಉಪಚಾರಕ್ಕಾಗಿ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ತಂದು
ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ದಿನಾಂಕ 15/01/19 ರಂದು ಕಲಬುರಗಿ ಅಫಜಲಪೂರ ರೋಡಿನ ಕೊಳ್ಳೂರ ಕ್ರಾಸ
ಇನ್ನೂ 2 ಕಿ.ಮಿ ದೂರ ಇರುವಂತೆ ರೋಡಿನ ಮೇಲೆ ಕಾರ ನಂ ಕೆಎ-2 ಎಮ್-5012 ನೇದ್ದರ ಚಾಲಕನದ
ರಾಚಯ್ಯ ಇತನು ಕಾರನು ಅತೀ ವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ
ರೋಡಿನ ಪಕ್ಕದಲ್ಲಿ ಪಲ್ಟಿ ಆಗಿದ್ದರಿಂದ ಕಾರಿನಲ್ಲಿದ್ದ ಶ್ರೀ ಸೂಮಶೇಖರ ತಂದೆ ಈರಯ್ಯ ಹೀರೆವ್ಮಠ
ಸಾಃ ಜೇಮಶೆಟ್ಟಿ ನಗರ ಕಲಬುರಗಿ ರವರಿಗೆ ಹಾಗು ಇನ್ನಿತರರಿಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದಊರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment