ಎಟಿಎಮ್
ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದವರ ಬಂಧನ :
ರಾಘವೇಂದ್ರ
ನಗರ ಠಾಣೆ : ದಿನಾಂಕ: 05/01/2019 ರಂದು ರಾತ್ರಿ 11:15 ಗಂಟೆ ಸುಮಾರಿಗೆ ಎ ಉಪ
ವಿಭಾಗದ ರಾತ್ರಿ ಗಸ್ತು ಚೆಕಿಂಗ್ ಕುರಿತು ಪಿ.ಐ ಬ್ರಹ್ಮಪೂರ ಸಾಹೇಬರು ಮತ್ತು ನಮ್ಮ ಠಾಣೆಯ
ಪಂಡಿತ ಪಿಸಿ-439, ಸುರೇಶ ಪಿಸಿ-959 ರವರೊಂದಿಗೆ ರಾತ್ರಿ ಗಸ್ತು ಚೆಕಿಂಗ್ ಹಾಗೂ ಪೆಟ್ರೊಲಿಂಗ್ ಮಾಡುತ್ತಾ ಜಗತ್ ಏರಿಯಾ, ಸಾರ್ವಜನಿಕ ಉದ್ಯಾನ ವನ, ಲಾಲಗೇರಿ ಕ್ರಾಸ್ ಕಡೆಗೆ
ತಿರುಗಾಡಿ ನಂತರ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯ ಗಂಗಾ ನಗರ ಹಾಗೂ ಚಿಂಚೋಳ್ಳಿ ಲೇಔಟ್
ಇತ್ಯಾಧಿಗಳ ಕಡೆ ತಿರುಗಾಡಿ ದಿನಾಂಕ: 06/01/2019 ರಂದು ಬೆಳಗಿನ ಜಾವ 04:00 ರ ಸುಮಾರಿಗೆ ರಾಘವೇಂದ್ರ
ನಗರ ಠಾಣೆಯ ರಾತ್ರಿ ಗಸ್ತು ಚೆಕಿಂಗ್ ಅಧಿಕಾರಿಗಳಾದ ಎ.ಪೌಲ್ ಎ..ಎಸ್.ಐ ಹಾಗೂ ರಾತ್ರಿ ಗಸ್ತು
ಕರ್ತವ್ಯದಲ್ಲಿದ್ದ ಆನಂದ ಪಿಸಿ- 1126 ಹಾಗೂ ಚಂದ್ರಕಾಂತ ಹೋಮ ಗಾರ್ಡ ನಂ.-26
ಹಾಗೂ ಸಂಗಮನಾಥ ಹೋಮ ಗಾರ್ಡ ನಂ.-253
ಇವರೊಂದಿಗೆ ಪೆಟೊಲಿಂಗ್ ಮಾಡುತ್ತಾ ಅಂದಾಜು 04:30 ಗಂಟೆ ಸುಮಾರಿಗೆ ಶಹಬಜಾರ ನಾಕ ರೋಡದಿಂದ
ಆಳಂದ ಚೆಕ್ ಪೋಸ್ಟಕ್ಕೆ ಹೋಗುವ ರೋಡಿನಿಂದ ಪೆಟ್ರೋಲಿಂಗ್ ಮಾಡುತ್ತಾ ಆಳಂದ ಚೆಕ್ ಪೋಸ್ಟ್ ಕಡೆಗೆ
ಹೋಗುವಾಗ ರೋಡಿನ ಎಡಗಡೆ ಇರುವ ಶಾಂತಪ್ಪ ಕಡಗಂಚಿ ಇವರ ಕಾಂಪ್ಲೆಕ್ಸದ ಕೆನರಾ ಬ್ಯಾಂಕ ಎ.ಟಿ.ಎಮ್.ದ
ಹತ್ತಿರ ಹೋದಾಗ ಅಲ್ಲಿ ಆ ಎ.ಟಿ.ಎಮ್.ನ ಬಾಗಿಲು ತೆರೆದು ಮೂರು ಜನ ಒಳಗೆ ಪ್ರವೇಶ ಮಾಡಿ ತಮ್ಮ
ಕೈಯಲ್ಲಿದ್ದ ರಾಡ್, ಗುದ್ದಲಿಯ ಕಟ್ಟಿಗೆ ಕಾವುಗಳನ್ನು ಹಿಡಿದುಕೊಂಢು ಎ.ಟಿ.ಎಮ್. ಒಡೆದು ಹಣ ಕಳ್ಳತನ
ಮಾಡಲು ಪ್ರಯತ್ನಿಸುವಾಗ ಆಗ ನಾವು ಏನು ಮಾಡುತ್ತಿದ್ದಾರೆ ಅಂತ ಹೋಗಿ ನೋಡಲು ಸದರಿಯವರು ನಮ್ಮನ್ನು
ನೋಡಿದವರೆ ಎ.ಟಿ.ಎಮ್.ನಿಂದ ಹೊರಗೆ ಬಂದು ಓಡಲು ಪ್ರಯತ್ನಿಸುತ್ತಿರುವಾಗ ಅವರನ್ನು ಸಿಬ್ಬಂಧಿಯವರ
ಸಹಾಯದಿಂದ 3 ಜನರನ್ನು ಹಿಡಿದು ಅವರ ಹೆಸರು, ವಿಳಾಸ, ವಿಚಾರಿಸಿ ಶೋಧನೆ ಮಾಡಲಾಗಿ ಅವರು ತಮ್ಮ ಹೆಸರು ಮೊದಲು ಬೇರೆ ಬೇರೆಯಾಗಿ ಹೇಳಿ
ನಂತರ ತಮ್ಮ ನಿಜವಾದ ಹೆಸರು 1) ಸಮೀರ ತಂದೆ ಇಕ್ಬಾಲ ಟಪ್ಪಾ ಸಾ: ಅಂಬೇಡ್ಕರ ಸರ್ಕಲ್ ಹತ್ತಿರ ದೇವಲ ಗಾಣಗಾಪೂರ 2) ಆಸೀಪ ತಂದೆ ಮಲಂಗ ಸಾಬ
ಮಕಂದಾರ ಸಾ: ಬಸ್ ಸ್ಟ್ಯಾಂಡ್ ಹತ್ತಿರ ಮಹಾರಾಜ ಹೋಟೇಲ ಪಕ್ಕದಲ್ಲಿ ದೇವಲಗಾಣಗಾಪೂರ 3) ಹುಸೇನ ತಂದೆ ಬಾಬು
ಮುಜಾವರ್ ಸಾ: ಜಾಮೀಯಾ ಮಸೀದ ಹತ್ತಿರ ಭಾರತ್ ಚೌಕ ದೇವಲ ಗಾಣಗಾಪೂರ ಅಂತ ತಿಳಿಸಿದ್ದು ಅವರ
ಹತ್ತಿರ ಪರೀಶಿಲಿಸಿ ನೋಡಲಾಗಿ ಒಂದು ರಾಡು ಹಾಗೂ ಎರಡು ಗುದ್ದಲಿಯ ಕಟ್ಟಿಗೆಯ ಕಾವುಗಳು ಇದ್ದು
ಇವುಗಳನ್ನು ಎಲ್ಲಿಂದ ಯಾತಕ್ಕಾಗಿ ತಂದಿರುವಿರಿ ಅಂತ ವಿಚಾರಿಸಲು ತಾವು ಕಲಬುರಗಿ ನಗರದ
ಎಲ್ಲಿಯಾದರೂ ಎ.ಟಿ.ಎಮ್. ಒಡೆದು ಹಣ ಕಳ್ಳತನ ಮಾಡಿಕೊಂಡು ಹೋಗಲು ತಾವು ಒಂದು ಡಿಯೋ ಮೊಟರ ಸೈಕಲ
ನಂ. ಕೆಎ-22-ಇವಿ-6831 ನೇದ್ದರ ಮೇಲೆ ಬಂದಿದ್ದು ನಾವು ಎಲ್ಲಾ ಕಡೆಗೆ ಕಲಬುರಗಿ ನಗರದಲ್ಲಿ ತಿರುಗಾಡಿದ್ದು
ಜನರು ಹಾಗೂ ಎ.ಟಿ.ಎಮ್. ಹತ್ತಿರ ಗಾರ್ಡಗಳು ಇರುವದರಿಂದ ನಾವು ಎಲ್ಲಿಯು ಕಳ್ಳತನ ಮಾಡಲು
ಸಾಧ್ಯವಾಗದ ಕಾರಣ ಇಲ್ಲಿ ಬಂದು ಎ.ಟಿ.ಎಮ್. ಒಡೆದು ಹಣ ಕಳ್ಳತನ ಮಾಡ ಬೇಕು ಅಂತ ಪ್ರಯತ್ನಿಸುವಾಗ
ತಮ್ಮ ಕೈಯಲ್ಲಿ ಸಿಕ್ಕಿ ಬಿದ್ದಿರುತ್ತೇವೆ ಅಂತ ತಿಳಿಸಿದರು. ಕಾರಣ ಸದರಿ ಆರೋಪಿತರು ಎ.ಟಿ.ಎಮ್.
ಒಡೆದು ಹಣ ಕಳ್ಳತನ ಮಾಡಿಕೊಂಡು ಹೋಗಲು ತೆಗೆದುಕೊಂಡು ಬಂದ ರಾಡ್, ಗುದ್ದಲಿಯ ಕಟ್ಟಿಗೆ
ಕಾವು ಮತ್ತು ಡಿಯೋ ಮೊಟರ ಸೈಕಲ ನಂ.ಕೆಎ-22-ಇವಿ-6831 ನೇದ್ದು ಮತ್ತು ಎ.ಟಿ.ಎಮ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿತರೊಂದಿಗೆ
ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತ ವ್ಯಕ್ತಿ ಅಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ
: ದಿನಾಂಕ 05/01/2019 ರಂದು ಶ್ರೀ ಅಯುಬಖಾನ
ಎ.ಎಸ್.ಐ ಆಳಂದ ಪೊಲೀಸ್ ಠಾಣೆ ಡೇತ್ ಎಂ,ಎಲ್.ಸಿ ಕುರಿತು ಇಂದು
ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯ ಶವಗಾರ ಕೊಣೆಗೆ ಭೇಟಿ ಕೊಟ್ಟು ನೋಡಲಾಗಿ ಒಬ್ಬ ಅಪರಿಚೀತ
ಗಂಡು ಮನುಷ್ಯ ಅಂದಾಜು 55 ರಿಂದ 60 ವರ್ಷ ಮನುಷ್ಯನು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿದ್ದು
ಇರುತ್ತದೆ. ಸದರಿ ಮೃತನ ವ್ಯಕ್ತಿಯ ಹೆಸರು ವಿಳಾಸ ಗೋತ್ತಾಗಿರುವದಿಲ್ಲ, ಮೃತನು ಗೋದಿ ಮೈ ಬಣ್ಣ
ಹೊಂದಿದ್ದು, ತಲೆಯ ಮೇಲೆ ಅಂದಾಜು ಎರಡು ಇಂಚು ಬಿಳಿ ಕೂದಲು ಇದ್ದು, & ಮುಖದ ಮೇಲೆ ಬಿಳಿ
ದಾಟಿಗಳು ಇರುತ್ತವೆ ಮತ್ತು ಮೈ ಮೇಲೆ ಕೆಂಪು ಬಣ್ಣದ ಕಪ್ಪಗೇರೆವುಳ್ಳ ಪುಲ ಶರ್ಟ & ಕಪ್ಪ ಬಣ್ಣದ ಪ್ಯಾಂಟ
ಧರಿಸಿದ್ದು ಸಾಧಾರಣ ಮೈ ಕಟ್ಟು ಹೊಂದಿರುತ್ತಾನೆ. ವೈದ್ಯಾಧೀಕಾರಿಗಳಲ್ಲಿ ವಿಚಾರಿಸಲಾಗಿ ಮೃತನು
ಉಪಚಾರ ಕುರಿತು ದಿನಾಂಕ 02/01/2019 ರಂದು 10;00 ಎ.ಎಂಕ್ಕೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದ ಕ್ಕೆ ಸೇರಿಕೆಯಾಗಿದ್ದು
ನಂತರ ಅದೇ ದಿನ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆ
ಯಾಗಿದ್ದು ನಂತರ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೇ ದಿನಾಂಕ 04/01/2018 ರಂದು 04;30 ಪಿ,ಎಂಕ್ಕೆ
ಮೃತಪಟ್ಟಿರುತ್ತಾನೆ ಅಂತಾ ವೈದ್ಯರು ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment