Police Bhavan Kalaburagi

Police Bhavan Kalaburagi

Tuesday, February 12, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 10/02/2019 ರಂದು ಬೆಳಗ್ಗೆ ನಮ್ಮೂರಿನಿಂದ ಮಹಾಗಾಂವಕ್ಕೆ ಟಂ ಟಂ ತೆಗೆದುಕೊಂಡು ಹೋಗಿರುತ್ತಾನೆ. ಸಾಯಂಕಾಲ 08.00 ಪಿ.ಎಂ.ಕ್ಕೆ ನಮ್ಮೂರ ರಮೇಶ ತಂದೆ ಬಸಣ್ಣ ಪ್ರಸನ್ ಇವರು ನನಗೆ ಫೋನ್ ಮಾಡಿ ತಿಳಿಸಿದನೆಂದರೆ ನಾನು ಮತ್ತು ಶಿವಕುಮಾರ ತಂದೆ ಬಸಣ್ಣ ಚಿನ್ನಾ ಇಬ್ಬರು ನಮ್ಮ ಕೆಲಸದ ನಿಮಿತ್ಯ ಮೊಟಾರ ಸೈಕಲ್ ಮೇಲೆ ಮಹಾಗಾಂವ ಕ್ರಾಸಿಗೆ ಬಂದಿದ್ದು ಮಹಾಗಾಂವ ಕ್ರಾಸಿನಲ್ಲಿ ನಿಮ್ಮ ಅಣ್ಣ ಶಂಬುಲಿಂಗ ಇತನು ನಮ್ಮೂರ ಗೌತಮ ತಂದೆ ಲಕ್ಷ್ಮಣ ಶಿಲ್ಡ ಇತನಿಗೆ ಟಂ ಟಂ ದಲ್ಲಿ ಕೂಡಿಸಿಕೊಂಡು 07.15 ಪಿ.ಎಂ.ಕ್ಕೆ ಮಹಾಗಾಂವ ಕ್ರಾಸಿನಿಂದ ಹೊಳಕುಂದಾ ಕಡೆಗೆ ಬಂದಿದ್ದು ನಾವು ಕೂಡಾ ಆತನ ಹಿಂದಿನಿಂದ ಮೊಟಾರ ಸೈಕಲ್ ಮೇಲೆ ಹೊಳಕುಂದಾ ಕಡೆಗೆ ಬರುತ್ತಿದ್ದಾಗ ಎನ್.ಹೆಚ್ 218 ರಲ್ಲಿ ಸಿದ್ದಭಾರತಿ ಶಾಲೆಯ ಹತ್ತಿರ ಇರುವ ಪೆಟ್ರೊಲ್ ಪಂಪ ಎದುರುಗಡೆ ಬರುತ್ತಿದ್ದಾಗ ಎದುರುಗಡೆಯಿಂದ ಒಂದು ಕಬ್ಬು ತುಂಬಿದ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೊಗುತ್ತಿದ್ದ ಟಂ ಟಂ ನಂ ಕೆ.ಎ-32 ಬಿ-2913 ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಸದರ ಅಪಘಾತದಿಂದಾಗಿ ಟಂ ಟಂ ಪಲ್ಟಿಯಾಗಿ ರೋಡಿನ ಬದಿಗೆ ಬಿದ್ದಿದ್ದು ಅದರಲ್ಲಿದ್ದ ನಿಮ್ಮ ಅಣ್ಣ ಶಂಬುಲಿಂಗ ಮತ್ತು ಗೌತಮ ಇಬ್ಬರು ರೋಡಿನ ಮೇಲೆ ಬಿದ್ದಿರುತ್ತಾರೆ ಆಗ ನಾನು ಮತ್ತು ಶಿವಕುಮಾರ ಇಬ್ಬರು ನಮ್ಮ ಮೊಟಾರ ಸೈಕಲ್ ನಿಲ್ಲಿಸಿ ಸಮೀಪ ಹೊಗಿ ನೊಡಲಾಗಿ ಶಂಬುಲಿಂಗ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಮುಗಿನ ಹತ್ತಿರ ರಕ್ತಗಾಯಿ ಬಲಗೈ ಮೊಳಕೈ ಕೆಳಗೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ ಬಲಗಾಲ ಹಿಮ್ಮಡಿಗೆ ತರಚಿದ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು ಗೌತಮ ಇತನಿಗೆ ನೊಡಲಾಗಿ ತಲೆಯ ಹಿಂದೆ ಭಾರಿ ರಕ್ತಗಾಯ ಎಡ ಕಿವಿ ಹತ್ತಿರ ರಕ್ತಗಾಯ ಎಡಗೈ ಮಣಿಕಟ್ಟಿನ ಹತ್ತಿರ ರಕ್ತಗಾಯ & ಎಡಗಾಲ ಬೆರಳಿಗೆ ರಕ್ತಗಾಯವಾಗಿ ಬಿದ್ದಿದ್ದಾನೆ ನಾನು ಅಂಬುಲೈನ್ಸಗೆ ಫೋನ ಮಾಡಿದ್ದು ನಿವು ಬೇಗನೆ ಬನ್ನಿ ಅಂತಾ ತಿಳಿಸಿದನು. ಕೂಡಲೆ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಘಟನಾ ಸ್ಥಳಕ್ಕೆ ಬಂದಿದ್ದು ಹಕಿಕತ ನಿಜವಿದ್ದು ಅಪಘಾತ ಪಡಿಸಿದ ಲಾರಿ ಸ್ಥಳದಲ್ಲಿ ನಿಂತಿದ್ದು ಹೊಗಿ ಬರುವ ವಾಹನಗಳ ಲೈಟಿನ ಬೆಳಕಿನಲ್ಲಿ ಲಾರಿ ನಂ ನೊಡಲಾಗಿ ಎಂ ಹೆಚ್. 06 ಎಕ್ಯೂ-5938 ಇದ್ದು ಅದರ ಚಾಲಕನ ಬಗ್ಗೆ ರಮೇಶ ಇವರಿಗೆ ಕೇಳಲಾಗಿ ಲಾರಿ ಚಾಲಕ ಅಪಘಾತ ಪಡಿಸಿದ ನಂತರ ಓಡಿ ಹೊಗಿರುತ್ತಾನೆ, ಅವನಿಗೆ ಪುನಹ ನೊಡಿದರೆ ಗುರುತಿಸುತ್ತೇನೆ. ಅಷ್ಟರಲ್ಲಿ 108 ಅಂಬುಲೈನ್ಸ ಬಂದಿದ್ದು ಅದರಲ್ಲಿ ಗಾಯಾಳು ಗೌತಮ ಇತನಿಗೆ ಹಾಕಿಕೊಂಡು ಅವನ ಸಂಭಂದಿಕರು ಉಪಚಾರ ಕುರಿತು ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ನಮ್ಮ ಅಣ್ಣ ಶಂಬುಲಿಂಗ ಇತನ ಶವ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ನಂತರ ನನಗೆ ಗೊತ್ತಾಗಿದ್ದೆನೆಂದರೆ ರಾತ್ರಿ 10.30 ಪಿ.ಎಂ.ಕ್ಕೆ ಯುನೈಟೆಡ್ ಆಸ್ಪತ್ರೆಯಲ್ಲಿ ಗೌತಮ ತಂದೆ ಲಕ್ಷ್ಮಣ ಶಿಲ್ಡ ಇತನು ಸಹ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆಂದು ಗೊತ್ತಾಗಿರುತ್ತದೆ. ಅಂತಾ ಶ್ರೀ ಗುರುಪುತ್ರ ತಂದೆ ಬಂಡೆಪ್ಪಾ ಚಿನ್ನಾ ಸಾ : ಹೊಳಕುಂದಾ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಸಚಿನ್ ತಂದೆ ಸುರೇಶ ಪಾಟಿಲ್ ಸಾ; ಕಾಚಾಪೂರ ಗ್ರಾಮ ತಾ; ಜೇವರಗಿ ರವರು ದಿನಾಂಕ; 10/02/2019 ರಂದು ಸಾಯಂಕಾಲ ನಾನು ನನ್ನ ಸ್ನೇಹಿತರಿಗೆ ಭೇಟಿಯಾಗಲು ಬೆಳಿಗ್ಗೆ ಜೇವರಗಿಗೆ ಬಂದಿದ್ದೇನು. ಸ್ನೇಹಿತರಿಗೆ ಭೆಟಿಯಾಗಿ ಮರಳಿ ಊರಿಗೆ ಹೋಗಲು ಜೇವರಗಿ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಸಾಯಂಕಾಲ ನಮ್ಮ ಸಂಬಂದಿ ಸುನಿಲ್ ಕುಮಾರ ಈತನು ಭೇಟಿಯಾಗಿ ನಾನು ಊರಿಗೆ ಬರುತ್ತೇನೆ ಎಂದು ಹೇಳಿದ್ದರಿಂದ ನಾವಿಬ್ಬರು ಕೂಡಿ ರಾತ್ರಿ 09-00 ಪಿ.ಎಮ್ ವೇಳೇಗೆ ಮೋಟಾರ ಸೈಕಲ್ ನಂ: ಕೆ.-04-.ಕೆ-5797 ನೇದ್ದರ ಮೇಲೆ ಜೇವರಗಿ ಕಡೆಯಿಂದ ಯಡ್ರಾಮಿ ಕಡೆಗೆ ಹೊರಟಿರುತ್ತೇವೆ. ನಾನು ಮೋಟಾರ ಸೈಕಲ್ ಚಲಾಯಿಸುತ್ತಿದ್ದೇನು. ನಾವು ಯಾಳವಾರ ದಾಟಿ ರೋಡಿನ ಮೇಲೆ ಹೋಗುತ್ತಿದ್ದಾಗ ದಿನಾಂಕ; 10/02/2019 ರಂದು ರಾತ್ರಿ 9-30 ಪಿ.ಎಮ್ ವೇಳೆಗೆ ಎದುರಿನಿಂದ ಅಂದರೆ ಯಡ್ರಾಮಿ ಕಡೆಯಿಂದ ಒಂದು ಕಾರ್ ಚಾಲಕನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವು ರೋಡಿನ ಮೇಲೆ ಬಿದ್ದಿರುತ್ತೇವೆ. ಇದರಿಂದ ನನಗೆ ಬಲ ಕೈ ಮೊಂಗೈ ಮೇಲೆ, ಬೆನ್ನಿಗೆ ತರಚಿದ ಗಾಯವಾಗಿರುತ್ತದೆ. ಸುನಿಲ್ ಕುಮಾರ ಈತನಿಗೆ ಮೈ ಮೇಲೆ, ತಲೆಯ ಮೇಲೆ, ಗುಪ್ತಾಂಗದ ಮೇಲೆ, ಕಾರು ಹರಿದು ಹೋಗಿದ್ದರಿಂದ ಬಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯ ಮೃತಪಟ್ಟಿರುತ್ತಾನೆ. ನಮಗೆ ಅಪಘಾತ ಮಾಡಿದ ಕಾರ್ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಂತು ಹೊರಳಿ ನೋಡುತ್ತಿದ್ದಾಗ ಅಪಘಾತ ಮಾಡಿದ ಕಾರ್ ನಂ: ನೋಡಲಾಗಿ ಎಮ್.ಹೆಚ್;02-ಬಿ.ಟಿ-7410 ಬಿಳಿ ಬಣ್ಣದ ಕಾರು ಇತ್ತು. ನಾವು ಗಾಯವಾಗಿ ಬಿದ್ದಿದ್ದು ನೋಡಿ ಕಾರ್ ಚಾಲಕನು ಕಾರ್ ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶಹಾಬಾಜ ತಂದೆ ಮಹಮ್ಮದ ಹಬೀಬ ಇನಮದಾರ ಸಾ;ಇಮ್ಲಿ ಮೊಹಲ್ಲಾ ಮೋಮಿನಪೂರ ಕಲಬುರಗಿ
ದಿನಾಂಕ. 10-02-2019 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂಗಿ ಸಾಲೆಯಾ ಒಂದು ಮೋಟಾರ ಸೈಕಲ್ ಮೇಲೆ ಮತ್ತು ನನ್ನ ತಂದೆ ಮಹಮ್ಮದ ಹಬೀಬ ಮತ್ತು ತಾಯಿ ಖೈರುನಬೇಗಂ ಇವರು ಒಂದು ಮೋಟಾರ ಸೈಕಲ್ ಮೇಲೆ ಮೊಮಿನ ಪೂರದಿಂದ ಬುಲಂದ ಪವರ್ಕಾಲೂನಿಗೆ ಹೋಗಿ ನಮ್ಮ ಅತ್ತಿಗೆ ಆತೀಫಾ ಇವರ ಮನೆಯ ಎದರುಗಡೆ ನಮ್ಮ ಮೋಟಾರ ಸೈಕಲಗಳನ್ನು ನಿಲ್ಲಿಸಿ ಒಳಗಡೆ ಹೋಗಿದ್ದು 8-30 ಗಂಟೆಯ ಸಮಾರಿಗೆ ಒಬ್ಬ ವ್ಯಕ್ತಿ ಬಂದು ರೋಡ ಪಕ್ಕದಲ್ಲಿ ಹಚ್ಚಿರುವ ಮೋಟಾರ ಸೈಕಲ್ಗಳು ಯಾರವು ಅಂತಾ ಕೇಳುತಿದ್ದಾಗ ನಾನು ಮನೆಯಿಂದ ಹೊರಗಡೆ ಬಂದು ಮೋಟಾರ ಸೈಕಲ ನಮ್ಮವು ಇರುತ್ತವೆ ಅಂತಾ ಅಂದಾಗ ಸದರಿ ವ್ಯಕ್ತಿಯ ಎ ರೋಡ ತುಮಾರಿ ಬಾಪಕ ಹೈ ಕ್ಯಾ  ಅಂತಾ ಅವಾಚ್ಯ ಶಬ್ದಗಳಿಂದ ಬೈಯ ಹತ್ತಿದನ್ನು ಆಗ ನಾನು ಸರಿಯಾಗಿ ಮಾತನಾಡಿ ಬೈ ಬೇಡಾ ಅಂತಾ ಅಂದಾಗ ಸದರಿ ವ್ಯಕ್ತಿ ಹೆಸರು ಕೇಳಿ ಗೊತ್ತಾದ ಅಪ್ಸರಬೇಗ  ಇತನು ಬಂದು ನನ್ನ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೋಡೆದನು ಆಗ ನಾನು ಕೂಡಾ ಆ ವ್ಯಕ್ತಿಯನ್ನು ನೂಕಿಸಿಕೊಟ್ಟೆನು ಆಗ ಸದರಿ ವ್ಯಕ್ತಿಯ ಮಕ್ಕಳು ಹೆಸರು ಕೇಳಿ ಗೊತ್ತಾದ ಮುನ್ನಾವರ ಮತ್ತು ಸಲ್ಮಾನ ಇವರಿಬ್ಬರು ಬಂದವರೆ ನನಗೆ ಹೊಡೆಯುತಿದ್ದಾಗ ನಮ್ಮ ತಂದೆ ಮಹಮ್ಮದ ಹಬೀಬ, ನನ್ನ ತಾಯಿ ಖೈರುನ ಬೇಗಂ ಇವರು ನನಗೆ ಮನೆಯೊಳಗೆ ಕರೆದುಕೊಂಡು ಹೋಗಿದ್ದು ಆಗ ಸದರಿ ಮುನ್ನಾವರ, ಸಲ್ಮಾನ ಹಾಗೂ ಅವರ ಇಬ್ಬರು ಗೆಳೆಯರಾದ ಹೆಸರು ಕೇಳಿ ಗೊತ್ತಾದ ಎಂ.ಜೆ. ಮೆಹರಾಜ @ ಮೋಸಿನ ಜೆನ್ ಹಾಗೂ ಮಜರ ಜವಹಾರ ಹಿಂದ ಸ್ಕೂಲ ಹತ್ತಿರ ಕಲಬುರಗಿ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯೊಳಗೆ ಬಂದು  ನನ್ನನ್ನು ಅಂಗಿ ಹಿಡಿದು ಎಳೆದಾಡುತ್ತಿದ್ದಾಗ ನಾವು ಮನೆಯ ಹೊರಗಡೆ ಬಂದಾಗ ಸದರಿ ಮುನ್ನಾವರ ಹಾಗೂ ಸಲ್ಮಾನ ಇಬ್ಬರು ಸಾಲೆ ಹಮಾರ ಬಾಪಕ ಉಪ್ಪರ ಹಾತಕರತೆ ಸುವರ ಮಾಕೆ ಲವಡೇ ಆಜ ತುಮಾರಕೂ ಖತಮ ಕರದುಂಗೆ ಅಂತಾ ಬೈಯುತ್ತಾಸದರಿ ಮುನ್ನಾವರ ಇತನ ಕೈಯಲ್ಲಿದ್ದ ಮಚ್ಚದಿಂದ ತಲೆಯ ಮೇಲೆ ಹೋಡೆದನು ಮತ್ತು ಸಲ್ಮಾನ ಇತನು ಚಾಕುದಿಂದ ನನ್ನ ತಲೆಯ ಎಡಭಾಗದಲ್ಲಿ ಹೊಡೆದನು ಎಂ.ಜೆ.ಮೆಹರಾಜ @ಮೊಸಿನ ಜೆನ ಇತನು ಒಂದು ಬಡಿಗೆಯಿಂದ ನನ್ನ ಎಡಮಗ್ಗಲಲ್ಲಿ ಹೊಡೆದಿದ್ದು , ಮಜರ ಇತನು ಒಂದುಇಟ್ಟಂಗಿಯಿಂದ ನನ್ನತಲೆಯ ಮೇಲೆ ಹಾಕಿಮರಣಾಂತಿಕ ಹಲ್ಲೆ ಮಾಡಿದ್ದು ಇದರಿಂದ ನನ್ನ ತಲೆಯ ಮೇಲೆ ಭಾರಿ ರಕ್ತಸ್ರಾವವಾಗುತಿದ್ದಾಗ ,ಚೀರಾಡುತ್ತಿರುವಾಗ ನನ್ನ ತಂದೆ ಮಹಮ್ಮದ ಹಬೀಬ, ನನ್ನ ತಾಯಿ ಖೈರುನಬಿ , ನನ್ನ ತಂಗಿ ಸಾಲೆಯಾ  ಹಾಗೂ ಅಲ್ಲಿಯೇ ಇದ್ದ ಹೆಸರು ಕೇಳಿ ಗೊತ್ತಾದ ಅಬ್ದುಲ ಸತ್ತಾರ ತಂದೆ ಮಹಮ್ಮದ ಹುಸೇನ, ಹಾಗೂವಿಷಯ ಗೊತ್ತಾಗಿ ಬಂದ ನನ್ನ ಅಣ್ಣ ಮಹಮ್ಮದ ಸೋಹೆಲ್ ಇವರೆಲ್ಲರೂ ನನಗೆ ಹೋಡೆಯುವದನ್ನು ಬಿಡಿಸಿಕೊಂಡರು ಆಗ ಅವರೆಲ್ಲರೂ ಸಾಲೇ ಆಜ ಬಚಗಯಾ ಅಂತಾ ಅಹಿಂದ ಹಮಾರಿ ಬಾಪಕೀ ಸಾತ ಜಗಡ ಕರೆತೋ ಜಾನಸೇ ಮಾರದೆಂಗೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ರಶೀದ ತಂದೆ ನಬಿಲಾಲ ಸಾ: ಮರತೂರ ರವರು ದಿನಾಂಕ: 08-02-2019 ರಂದು ಮುಂಜಾನೆ 9-30 ಗಂಟೆಗೆ ತಮ್ಮ ಮನೆಯ ಮುಂದೆ ನಿಂತಾಗ ಅಣ್ಣನಾದ ಅಬ್ದುಲ ಮತ್ತು ಅವನ ಮಕ್ಕಳಾದ 1) ಖಲೀಲ 2) ಸುಭಾನ ಅವನ ಹೆಂಡತಿ ಜಾಹೀದ ಬೇಗಂ ಇವರು ಮಕ್ಕಳು ಸಂಡಾಸ ಕೂಡಿಸುವ ವಿಷಯದಲ್ಲಿ ಜಗಳ ತೆಗೆದು ಆಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ  ಜೀವದ ಭಯ ಹಾಕಿರುತ್ತಾರೆ  
ಶಾಹಾಬಾದ ನಗರ ಠಾಣೆ : ಶ್ರೀಮತಿ ಜಹೀದಾ ಬೇಗಂ ಗಂಡ ಅಬ್ದುಲ ಜಜಲಬಾದ ಸಾ: ಮರತೂರ ರವರು ದಿನಾಂಕ: 08-02-2019  ರಂದು ಮುಂಜಾನೆ  ತಮ್ಮ ಮನೆಯ ಮುಂದೆ ಮೈದುನನಾದ ರಸೀದ ತಂದೆ ಅಬ್ದುಲ ಮತ್ತು ಅವನ ಅಳಿಯ ಹುಸೇನಸಾಬ ತಂದೆ ಹಾಜಿಸಾಬ ಮತ್ತು ಅವನ ಹೆಂಡತಿ ರಜೀಯಾ ಬೇಗಂ ಅವನ ಮಗಳಾದ ಸಾಹಿನ ಬೇಗಂ ಇವರು ಮಕ್ಕಳು ಸಂಡಾಸ ಕೂಡುವ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಪಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: