Police Bhavan Kalaburagi

Police Bhavan Kalaburagi

Monday, February 25, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕಃ 24-02-2019 ರಂದು ನನ್ನ ತಾಯಿಯಾದ ಪದ್ಮಾವತಿ ಇವಳು ನಮ್ಮ ಮನೆಯ ಮುಂದಿನ ಅಂಗಳಕ್ಕೆ ಹತ್ತಿಕೊಂಡು ರಸ್ತೆಯ ಪಕ್ಕದಲ್ಲಿ ಕಸ ಗುಡಿಸುತ್ತಿರುವಾಗ ನಮ್ಮೂರಿನ ಶ್ರೀಶೈಲ ತಂದೆ ಶರಣಪ್ಪಾ ಪಾಟೀಲ ಇವರ ಇಚರ್ ವಾಹನ ನಂಬರ ಎಮ್.ಹೆಚ್-13 ಕೆ-4893 ನೇದ್ದನ್ನು ನಮ್ಮೂರಿನ ವಿಜಯಕುಮಾರ@ಬಾಳು ತಂದೆ ಶ್ರೀಶೈಲ ಪಾಟೀಲ ಇತನು ಸದರಿ ಇಚರ್ ವಾಹನವನ್ನು ನಮ್ಮೂರಿನ ಸರ್ಕಾರಿ ಬಾವಿಯಿಂದ ಹಿಂದಿನಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮನೆಯ ಮುಂದೆ ಕಸಗುಡಿಸುತ್ತಿರುವ ನನ್ನ ತಾಯಿ ಪದ್ಮಾವತಿಯ ತಲೆಗೆ ಡಿಕ್ಕಿಪಡಿಸಿದ್ದು ನನ್ನ ತಾಯಿಯ ಎಡ ಮೇಲಿಕಿಗೆಕಿವಿಯ ಮೇಲೆ ಭಾರಿ ರಕ್ತಗಾಯ ಮತ್ತು ತಲೆಯ ಮೇಲೆ ಭಾರಿ ರಕ್ತಗಾಯ ಮಾಡಿದ್ದು ಆಗ ನಾನು ನೋಡಿ ಚೀರಾಡುವದನ್ನು ನೋಡಿ ಸದರಿ ವಾಹನದ ಚಾಲಕನು ತನ್ನ ವಾಹನ ಸಮೇತ ಓಡಿಹೋಗಿದ್ದು ನಂತರ ನನ್ನ ತಾಯಿಗೆ ಉಪಚಾರ ಕುರಿತು ನಾನು ನನ್ನ ಮಗ ಚಿದಾನಂದತಮ್ಮ ಜಗನ್ನಾಥಹೆಂಡತಿ ಕಾಶಿಬಾಯಿ ರವರೆಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಮರ್ಗಾಕ್ಕೆ ತಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ. ನನ್ನ ತಾಯಿಯ ಸಾವಿಗೆ ಕಾರಣನಾದ ಇಚರ್ ವಾಹನ ನಂಬರ್ ಎಮ್.ಹೆಚ್-13 ಕೆ-4893 ನೇದ್ದರ ಚಾಲಕ ವಿಜಯಕುಮಾರ @ಬಾಳು ತಂದೆ ಶ್ರೀಶೈಲ ಪಾಟೀಲ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ. ಸಿದ್ದಾರಾಮ ತಂದೆ ಶಂಕರ ಕಂಬಾರ ಸಾಃ ಆಳಂಗಾ ತಾಃ ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ:22/02/2019 ರಂದು ನನ್ನ ಅಣ್ಣನಾದ ಶಿವಶರಣ ಈತನು ದೇ.ಗಾಣಗಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಮೋ ಸೈ.ನಂ:ಎಮ್.ಹೆಚ್-13 ಸಿ,ಎಫ್-5317 ನೇದ್ದನು ತಗೆದುಕೊಂಡು ನಮ್ಮ ಮನೆಯಿಂದ 5 ಪಿ,ಎಮ್.ಸುಮಾರಿಗೆ ನಮಗೆ ಹೇಳಿ ಹೋಗಿರುತ್ತಾನೆ ನಂತರ ರಾತ್ರಿ 10-30 ಪಿ,ಎಮ್.ಸುಮಾರಿಗೆ ನನಗೆ ಪರಿಚಯವರಾದ ಬಸವರಾಜ ತಂದೆ ಬಾಬಯ್ಯ ವಸ್ತ್ರದ ಸಾ:ಮಂಗಳೂರ ರವರು ನನಗೆ ಪೊನ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಅಣ್ಣನಾದ ಶಿವಶರಣನು 7 ಪಿ.ಎಮ್,ಸುಮಾರಿಗೆ ಕರಜಗಿ-ಮಣ್ಣೂರ ರೊಡಿನ ಮೇಲೆ ಶಿವೂರ ಕ್ರಾಸ್ ಹತ್ತಿರ ಮೋಟಾರ ಸೈಕಲ ಮೇಲೆ ಕರಜಗಿ ಗ್ರಾಮದ ಕಡೆ ಹೋಗುತ್ತೀರುವಾಗ ಮೋ ಸೈ.ನಂ:ಕೆ,-32 ಇಎಫ್-9302 ನೇದ್ದರ ಚಾಲಕನು ಹಿಂದಿನಿಂದ ತನ್ನ ಮೋ ಸೈಕಲನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನಿನ್ನ ಅಣ್ಣನಿಗೆ ತಲೆಗೆ ಬಾರಿ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ ಅಪಘಾತಪಡಿಸಿದ ಮೋ ಸೈ ಸವಾರನು ತನ್ನ ಮೋಟಾರ ಸೈಕಲನ್ನು ನಿಲ್ಲಿಸಿ ನೋಡಿ ಅಲ್ಲಿಂದ ತನ್ನ ಮೋಟಾರ ಸೈಕಲನ್ನು ತಗೆದುಕೊಂಡು ಹೋಗಿರುತ್ತಾನೆ ನಾನು ನಿನ್ನ ಅಣ್ಣನಿಗೆ ಕಲಬುರ್ಗಿಯ ಸನ ರೈಸ ಆಸ್ಪತ್ರೇಗೆ ತಂದು ಸೇರಿಕೆ ಮಾಡಿರುತ್ತೆನೆ ನಿನು ಬಾ ಅಂತಾ ತಿಳಿಸಿದ ಮೇರೆಗೆ ನಾನು ಕಲಬುರ್ಗಿಗೆ ಬಂದು ನನ್ನ ಅಣ್ಣನಿಗೆ ನೋಡಲಾಗಿ ನನ್ನ ಅಣ್ಣ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅವನ ತೆಲೆಯ ಹಿಂಭಾಗಕ್ಕೆ ರಕ್ತಗಾಯ ಮತ್ತು ಒಳಪೆಟ್ಟು ಬಲಗೈ ಮೇಲೆ ತರಚಿದ ಗಾಯ ಮುಂಗೈಗೆ ತರಚಿದ ರಕ್ತಗಾಯ ಬಲಗಾಲಮೊಣಕಾಲಿಗೆ ರಕ್ತಗಾಯ ಬೆನ್ನ ಹಿಂದೆ ಭುಜಕ್ಕೆ ತರಚಿದಗಾಯ ಮತ್ತು ಒಳಪೆಟ್ಟುಗಳಾಗಿದ್ದು ಇರುತ್ತದೆ,ಸದರಿ ಅಪಘಾತದಲ್ಲಿ ಆದ ಗಾಯಗಳಿಂದ ಉಪಚಾರ ಪಡೆಯುತ್ತೀದ್ದ ನನ್ನ ಅಣ್ಣನು ಉಪಚಾರ ಫಲಿಸದೆ ನಿನ್ನೆ ದಿನಾಂಕ:23/02/2019 ರಂದು 10-18 ಪಿ,ಎಮ್ಸುಮಾರಿಗೆ ಸನ್ ರೈಸ ಆಸ್ಪತ್ರೇಯಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಶಿವಾಜಿ ತಂದೆ ಚಂದ್ರಶೇಖರ ಕೋರೆ ಸಾ:ಗುಡ್ಡೆವಾಡಿ ತಾ:ಅಕ್ಕಲಕೋಟ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ: 24/02/2019 ರಂದು 5-00 ಪಿ.ಎಂಕ್ಕೆ ನಮ್ಮ ಸಂಬಂದಿ ಗುಂಡಪ್ಪಾ ತಂದೆ ಪೀರಪ್ಪಾ ಚಿಂಚೋಳಿ ಸಾ:ದಣ್ಣೂರ ಇವರು ಫೋನ ಮಾಡಿ ನನ್ನ ಮಗ ವಿಠಲ್ ಈತನಿಗೆ ಕಡಗಂಚಿ ಗ್ರಾಮ ಮೌಂಟ್ ಕಾರ್ಮೇಲ್ ಶಾಲೆಯ ಹತ್ತಿರ ಆತನ ಮೋಟಾರ್ ಸೈಕಲಗೆ ಬಸ್  ಡಿಕ್ಕಿಹೊಡೆದು ಸ್ಥಳದಲ್ಲಿಯೇ ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಕಲ್ಯಾಣಿ ತಂದೆ ಮಹಾದೇವ ಜಮಾದಾರ ಮತ್ತು ಕಲ್ಯಾಣಿ ತಂದೆ ಸಾಯಬಣ್ಣಾ ಜಮದಾರ ರವರೆಲ್ಲರೂ ಕೂಡಿಕೊಂಡು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗನು ರಸ್ತೆಯ ಮೇಲೆ ಭಾರಿರಕ್ತಗಾಯವಾಗಿ ಮೃತ ಪಟ್ಟಿದ್ದು ನಿಜವಿದ್ದು. ಸಂಬಂಧಿ ಗುಂಡಪ್ಪಾ ಚಿಂಚೋಳಿ ರವರಿಗೆ ವಿಚಾರಿಸಲಾಗಿ ನನ್ನ ಮಗನನ್ನು ಮೊಟಾರ್ ಸೈಕಲ್ ನಂಬರ್ ಕೆಎ32ವ್ಹಿ9661 ನೇದ್ದರ ಮೇಲೆ ಕಡಗಂಚಿ ಕಡೆಯಿಂದ ಆಳಂದ ಕಡೆಗೆ ಬರುವಾಗ ನಾನು ಕುಳಿತು ಹೊರಟ ಬಸ್ ನಂಬರ್ ಕೆಎ32ಎಫ್2371 ನೇದ್ದರ ಚಾಲಕನು ಆಳಂದ ದಿಂದ ಕಲಬುರಗಿ ಕಡೆಗೆ ಕಡಗಂಚಿ ಗ್ರಾಮದ ಹತ್ತಿರ ಅತೀವೇಗ ಮತ್ತು ಅಲಕ್ಷತನಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಲಾರಿಹಿಂದಿನಿಂದ ಬರುವ ನನ್ನ ಮಗನ ಮೊಟಾರ್ ಸೈಕಲ್ ಡಿಕ್ಕಿ ಪಡಿಸಿರುತ್ತಾರೆ. ಸದರಿ ಮೊಟಾರ್ ಸೈಕಲ್ ಮೇಲೆ ನನ್ನ ಮಗ ಬರುತ್ತಿದ್ದು ಅಂತಾ ತಿಳಿಸಿರುತ್ತಾರೆ. ಕಾರಣ ನನ್ನ ಮಗ ವಿಠಲ್ ಈತನು ಮೊಟಾರ್ ಸೈಕಲ್ ನಂಬರ್ ಕೆಎ32ವ್ಹಿ9661 ನೇದ್ದರ ಮೇಲೆ ಕಲಬುರಗಿಯಿಂದ ನಮ್ಮೂರಿಗೆ ಒಬ್ಬನೆ ಬರುತ್ತಿರುವಾಗ ಕಡಗಂಚಿ ಗ್ರಾಮದ ಮೌಂಟ್ ಕಾರ್ಮೇಲ ಶಾಲೆಯ ಹತ್ತಿರ ರೋಡಿನ ಇಳಿಜಾರಿನಲ್ಲಿ ಆಳಂದ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ32ಎಫ್2371 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿ ನನ್ನ ಮಗನ ಸಾವಿಗೆ ಕಾರಣನಾದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಗುಂಡಪ್ಪಾ ತಂದೆ ಮಹಾದೇವ ಜಮಾದಾರಸಾ:ಕೊಡಲಹಂಗರಗ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 23.02.2019 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಹನುಮಾನ ದೇವರ ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ  ಶ್ರೀ ಶಿವಯೋಗಿ ಎ.ಎಸ್‌‌.ಐ  ರಾಘವೇಂದ್ರ ನಗರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಗುಡಿಯ ಪಕ್ಕದಲ್ಲಿ ಇರುವ ಸಾರ್ವಜನಿಕ ಸ್ಥಳಲ್ಲಿ 6 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಸಿದ್ದು ತಂದೆ ಫ್ರಭುಲಿಂಗ ತಳವಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ. 2) ಅಂಬ್ರೇಶ ತಂದೆ ಶಂಕರ ತಳವಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 3) ಅಯ್ಯಪ್ಪ ತಂದೆ ಲಕ್ಷ್ಮಣ ತಳವಾರ ಸಾ : ಗಂಗಾ ನಗರ ಹನುಮಾನ ಗುಡಿಯ ಹತ್ತಿರ ಕಲಬುರಗಿ 4) ಬಾಬು ತಂದೆ ಲಕ್ಷ್ಮಣ ತಳವಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 5) ಶಿವಕುಮಾರ ತಂದೆ ಬಂಡೆಪ್ಪ ಯಾದವ ಸಾ:ಜೋಡಯಲ್ಲಮ್ಮಾ ಗುಡಿಯ ಹತ್ತಿರ ಬ್ರಹ್ಮಪೂರ ಕಲಬುರಗಿ 6) ಶಾಂತಕುಮಾರ ತಂದೆ ಶರಣು ಕೌವಲಗಿ ಸಾ:ಗಂಗಾನಗರ ಹನುಮಾನ ಗುಡಿಯ ಹತ್ತಿರ ಕಲಬುರಗಿ  ಅಂತಾ ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ  52 ಇಸ್ಪೇಟ ಎಲೆಗಳನ್ನು ಮತ್ತು ನಗದು ಹಣ 2130/- ರೂ ಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಜಾತಿ ನಿಂದನೆ ಮಾಡಿ ಅಪಹರಣ ಮಾಡಿಕೊಂಡು ಹೋದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 07/02/2019 ರಂದು ಸಾಯಂಕಾಲ ನಾನು ಪೂನಾದಲ್ಲಿ ಇದ್ದಾಗ ನನ್ನ ಗಂಡ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆನಮ್ಮೂರ ದೇವಪ್ಪ ತಂದೆ ಸೋಮಣ್ಣ ತಳವಾರ ಈತನು ನಮ್ಮ ಮಗಳು ಸವಿತಾ ಇವಳಿಗೆ ಚುಡಾಯಿಸುತ್ತಾ ಬಂದು ಇಂದು ಮದ್ಯಾಹ್ನ 3-00 ಘಂಟೆ ಸುಮಾರಿಗೆ ನಾನು ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ಬಂದು ಮಗಳಿಗೆ ಚುಡಾಯಿಸುತ್ತಿದ್ದಾನೆ ನೀನು ಬಂದು ಮಗಳಿಗೆ ಪೂನಾಕ್ಕೆ ಕರೆದುಕೊಂಡು ಹೋಗು ಎಂದು ತಿಳಿಸಿದನುನಂತರ ನಾನು ಅಂದೇ ರಾತ್ರಿ ನಮ್ಮೂರಿಗೆ ಹೊರಟು ಟ್ರೇನ್ ಮೂಲಕ ಕಲಬುರಗಿಗೆ ಬಂದು ನಮ್ಮೂರಿಗೆ ಬಂದಿರುತ್ತೇನೆನಂತರ ನಮ್ಮ ಮಗಳಿಗೆ ವಿಚಾರಿಸಲು ಅವಳು ಹೇಳಿದ್ದೇನೆಂದರೆ; ದೇವಪ್ಪ ತಳವಾರ ಈತನು ನನ್ನ ಹಿಂದೆ ಬಿದ್ದಿದ್ದಾನೆನಾನು ಹೋದ ಕಡೆಗೆ ಬರುತ್ತಿದ್ದಾನೆ. ಮತ್ತು ನಿನಗೆ ಪ್ರೀತಿ ಮಾಡುತ್ತೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ನನ್ನ ಹಿಂದೆ ಬಿದ್ದು ಚುಡಾಯಿಸುತ್ತಿದ್ದಾನೆ. ನಾನು ಅವನಿಗೆ ನಮ್ಮದು ಲಂಬಾಣಿ ಜಾತಿ ನಿಮ್ಮದು ಕಬ್ಬಲಿಗ ಜಾತಿ ಇದೆ ಹೀಗೆಲ್ಲ ಮಾಡುವದು ಸರಿ ಅಲ್ಲ ಎಂದು ಹೇಳಿದರು ಕೂಡ ಅವನು ನನ್ನ ಹಿಂದೆ ಬಿದ್ದು ದಿನಾಂಕ; 07/02/2019 ರಂದು ಮನೆಯಲ್ಲಿ ಯಾರು ಇಲ್ಲದಾಗ ಮನೆಗೆ ಬಂದು ತೊಂದರೆ ಕೊಟ್ಟಿರುತ್ತಾನೆ. ಮತ್ತು ಆಗ ನನ್ನ ತಂದೆಯವರು ದೇವಪ್ಪನಿಗೆ ಮನೆಗೆ ಯಾಕೆ ಬಂದಿದಿ ಎಂದು ಕೇಳಿದ್ದಕ್ಕೆ ‘ಭೋಸಡಿ ಮಗನೆ ಲಮಾಣೆ ನೀನೇನು ಕೇಳುತ್ತಿ ಎಂದು ಜಾತಿ ಎತ್ತಿ ಬೈದು ನೂಕಿಸಿಕೊಟ್ಟು ಓಡಿ ಹೋಗಿರುತ್ತಾನೆ. ಎಂದು ವಿಷಯ ತಿಳಿಸಿದಳುನಂತರ ನಾನು ಮತ್ತು ನನ್ನ ಗಂಡ ಮನೆಯಲ್ಲಿ ವಿಚಾರ ಮಾಡಿ ಮಗಳು ಸವಿತಾ ಇವಳು ಇಲ್ಲಿ ಇರುವದು ಬೇಡ ಅವಳಿಗೆ ನನ್ನ ಸಂಗಡ ಪೂನಾಕ್ಕೆ ಕರೆದುಕೊಂಡು ಹೋದರಾಯಿತು ಎಂದು ದಿನಾಂಕ; 09/02/2019 ರಂದು ಸಾಯಂಕಾಲ 4-30 ಪಿ.ಎಮ್ ವೇಳೆಗೆ ನಾನು ಮತ್ತು ನಮ್ಮ ಮಗಳು ಕೂಡಿಕೊಂಡು ಗಂವಾರ ಗ್ರಾಮದಿಂದ ಚಿಗರಳ್ಳಿಗೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೇವುಅದೇ ವೇಳೆಗೆ ನಾನು ತಿನ್ನಲು ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಾಗ ನಮ್ಮೂರ ದೇವಪ್ಪ ತಂದೆ ಸೋಮಣ್ಣ ತಳವಾರ ಈತನು ಒಂದು ಮೋಟಾರ ಸೈಕಲ್ ಮೇಲೆ ಬಂದುವನೆ ನಮ್ಮ ಮಗಳಿಗೆ ಒತ್ತಾಯಪೂರ್ವಕವಾಗಿ ಕೂಡಿಸಿಕೊಂಡು ಸ್ಪೀಡಾಗಿ ಮೋಟಾರ ಸೈಕಲ್ ಚಲಾಯಿಸಿಕೊಂಡು ಜೇವರಗಿ ಕಡೆಗೆ ಹೋದನುಆಗ ನಾನು ಚೀರುತ್ತಾ ಹಿಂದೆ ಬೆನ್ನು ಹತ್ತಿದರು ಕೂಡ ಅವನು ಹೊರಳಿ ನೋಡದೆ ನಮ್ಮ ಮಗಳಿಗೆ ಕೂಡಿಸಿಕೊಂಡು ಹೋಗಿರುಯ್ಯಾನೆ ಅಂತಾ ಶ್ರೀಮತಿ ನಾಗಮ್ಮ ಗಂಡ ನಾನು ನಾಯಕ್ ಸಾಗಂವಾರ ತಾಂಡಾ ತಾಜೇವರಗಿ ಜಿಕಲಬುರಗಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಪರಮಾನಂದ ತಂದೆ ಸಿದ್ದಪ್ಪ ಶರ್ಮಾ ಸಾಯಲಗೋಡ ರವರದು ಯಲಗೋಡ ಸೀಮಾಂತರದಲ್ಲಿ  ಸರ್ವೆ ನಂಬರ 49/4 ರಲ್ಲಿ 3 ಎಕರೆ 37 ಗುಂಟೆ ಜಮೀನು ಇದ್ದುಸಾಗುವಳಿ ಮಾಡಿಕೊಂಡು ಉಪಜೀವಿಸುತ್ತಿದ್ದೆನೆಬರಗಾಲದಿಂದ ಹೊಲದಲ್ಲಿ ಬೆಳೆದ ಬೆಳೆ  ಹಾನಿಯಾಗಿದ್ದು ಸರಕಾರದಿಂದ ಮಂಜೂರಾದ ಬೆಳೆ ವಿಮೆ ಪರಿಹಾರ ಹಣವು ಯಲಗೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೊಂದಣಿ ಮಾಡಲಾದ ನನ್ನ ಬ್ಯಾಂಕ ಖಾತೆ  ನಂಬರ 198002025062 ನೇದ್ದರಲ್ಲಿ ದಿನಾಂಕ: 11-10-2018 ರಂದು ರೂಪಾಯಿ 16983/- ಜಮಾ ಆಗಿರುತ್ತದೆಆ ಸಂದರ್ಭದಲ್ಲಿ ಬ್ಯಾಂಕಿನ ಪಾಸಬುಕ್  ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯಾದ ರಾಯಪ್ಪಗೌಡ ತಂದೆ ಶಿವಪ್ಪಗೌಡ ಅಣಜಗಿ ಇವರ ಹತ್ತಿರ ಇದ್ದುಹಲವು ಭಾರಿ ಪಾಸಬುಕ್ ಕೊಡು ಅಂತ ಕೇಳಲಾಗಿ ಕೊಟ್ಟಿರುವುದಿಲ್ಲಾಹೀಗಿರುವಾಗ ನಿನ್ನೆ ದಿನಾಂಕ: 22-02-2019 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಯಲಗೋಡದ  ಸಹಕಾರಿ ಸಂಘಕ್ಕೆ ಹೋಗಿ ರಾಯಪ್ಪಗೌಡನಿಗೆ ನನ್ನ ಪಾಸಬುಕ್ ಕೊಡು ಅಂತ ಕೇಳಿದಕ್ಕೆ ಆಗ ರಾಯಪ್ಪಗೌಡನು ಪಾಸಬುಕ್ ಕೊಟ್ಟನುಆಗ ನಾನು ಪಾಸಬುಕ್ ತೆರೆದು ನೋಡಲಾಗಿ ದಿನಾಂಕ: 21-10-2018 ರಂದು ನನ್ನ ಬ್ಯಾಂಕ ಖಾತೆಯಿಂದ ರೂಪಾಯಿ 12000/- ಕಡಿತವಾಗಿರುತ್ತದೆಆಗ ನಾನು ಕಡಿತವಾದ ಹಣದ ಬಗ್ಗೆ ರಾಯಪ್ಪಗೌಡನಿಗೆ ವಿಚಾರಿಸಲಾಗಿ  ನನಗೆ ಎಲೇ ಹೊಲೆಯ ಸೂಳೆ ಮಗನೇ ಪರಮ್ಯಾ ನಾನು ಕೋ ಆಪರೇಟಿವ್ ಬಾಸ್ ಇದ್ದಿನಿ ಯಾವುದೇ ದುಡ್ಡು ತೊಗೊತ್ತಿನಿಬಿಡತ್ತಿನಿನಿನ್ನ ದುಡ್ಡು ತಗೊಂಡಿನಿ ಮಗನೇ ಸುಮ್ಮನೇ ಹೋಗು ಅಂತ ಕಪಾಳಕ್ಕೆ ಹೊಡೆದನುನನಗೆ ಹಣ ಬೇಕಾಗಿತ್ತುತಗೆದುಕೊಂಡಿದ್ದೆನೆಏನು ಮಾಡುತ್ತಿಯಾ ತಾಕತ್ ಇದ್ದರೇ ವಸೂಲಿ ಮಾಡಿಕೋ ನನಗೆ ಕೇಳಲು ಬಂದರೇ ನಿನಗೆ ಖಲಾಸ ಮಾಡುತ್ತೆನೆ ಅಂತ ನನಗೆ ಹೊಡೆಯಲು ಬಂದಾಗ ಅಲ್ಲಿಯೇ ಇದ್ದ ಸಿದ್ದಪ್ಪ ಕಟ್ಟಿಮನಿ ಸಾ:ಮಂಗಳೂರರವಿಕುಮಾರ ಬರ್ಮಾ ಸಾಯಲಗೋಡ ಇವರು ಬಂದು ಜಗಳ ಬಿಡಿಸಿದರು ನಂತರ ರಾಯಪ್ಪಗೌಡ ಇತನು ಈ ಹೊಲೆಯ ಸೂಳೆ ಮಕ್ಕಳದ್ದು ಬಹಳ ಆಗಿದೆ ಅಂತ ಬೈದು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ  ಬಿಸ್ಮಿಲ್ಲಾ ಗಂಡ ಇಮಾಮಸಾಬ ಚೌಧರಿ ಸಾ;ಇಂದಿರಾ ನಗರ ಮಣ್ಣೂರ ಪಂಕ್ಷನ ಹಾಲ ಹತ್ತಿರ ಅಫಜಲಪೂರ ರವರ ಗಂಡನು ಹೊರದೇಶದಲ್ಲಿದ್ದು ನಾನು ಮೂರು ಮಕ್ಕಳೊಂದಿಗೆ ಉಪ ಜೀವನ ಸಾಗಿಸಿಕೊಂಡಿರುತ್ತೇನೆನಮ್ಮ ಓಣಿಯ ಬಾನು ಗಂಡ ಚಾಂದ ಸೊನ್ನ ರವರು ನಳದ ನೀರಿನ ವಿಷಯವಾಗಿ ನನ್ನ ಜೋತೆ ವಾರದ ಹಿಂದೆ ತಕರಾರು ಮಾಡಿಕೊಂಡು ನನ್ನ ಮೇಲೆ ದ್ವೇಷ ಸಾದಿಸಿಕೊಂಡು ಬಂದಿರುತ್ತಾರೆ.ಹೀಗಿದ್ದು ದಿನಾಂಕ:19/02/2019 ರಂದು 9 ಪಿ.ಎಮ್.ಸುಮಾರಿಗೆ ನಾನು ಮನೆಯ ಮುಂದಿನ ರೋಡಿನ ಮೇಲೆ ನಿಂತಾಗ 01) ಬಾನು ಗಂಡ ಚಾಂದ ಸೋನ್ನ 02)ಚಾಂದ ಸೋನ್ನ 03)ಅಶ್ಪಕ ಹಟ್ಟಿ,03)ಸಲ್ಮಾ ಬೇಗ ಗಂಡ ಮಂಜೂರ ಬೇಗ ಎಲ್ಲರೂ ಕೂಡಿಕೊಂಡು ನನ್ನ ಹತ್ತಿರ ಬಂದು ಅದರಲ್ಲಿ ಸಲ್ಮಾ ಬೇಗ ಈವಳು ನನಗೆ  ರಂಡಿ ನಳ ಏನು ನಿನ್ನ ಗಂಡ ಹಡಿಸಿ ಗಳಿಸಿದ್ದು ಅದಾ ಏನು ಸರಕಾರ ನಳ ಅದಾ ಅಂದರು ನಿನು ಇಷ್ಟು ದಿಮಾಕ ಮಾಡತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದನು ಚಾಂದ ಈತನು ನನ್ನ ಬಲಗೈ ಹಿಡಿದು ತಿರುವಿ  ರಂಡಿಗೆ  ಊರು ಬಿಡಿಸಿ ಕಳೂಹಿಸಬೇಕು ಅಂತಾ ಅಂದು ನನ್ನ ಕಪಾಳ ಮೇಲೆ ಹೋಡೆದು ನನಗೆ ದಂಗಾ ಮುಸ್ತಿ ಮಾಡಿ ನನ್ನ ಮಾನಕ್ಕೆ ಕುಂದುಂಟು ಮಾಡಿರುತ್ತಾನೆಬಾನು ಈವಳು ನನಗೆ ತನ್ನ ಕಾಲಿನಿಂದ ಒದ್ದಳು ಆಗ ನಾನು ಓಡಿ ಹೋಗ ಬೇಕೆನ್ನುವಷ್ಟರಲ್ಲಿ ಅಶ್ಪಕನು ನನಗೆ ಮುಂದೆ ಹೋಗದಂತೆ ತಡೆದನು ನಂತರ ನಮ್ಮ ಓಣಿಯ ಮಹ್ಮದ ಜೋಗುರ ರವರು ಬಂದು ಬಿಡಿಸಿದರು ಅಶ್ಪಕ ಮತ್ತು ಚಾಂದ ಇಬ್ಬರು ಕೂಡಿ ನನಗೆ ಇಂದು ಮಹ್ಮದರವರು ಬಿಡಿಸಿದ್ದರಿಂದ ನೀನು ಜೀವ ಸಹಿತ ಊಳಿದಿರುವಿ ಇಲ್ಲ ಅಂದರೆ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ,

No comments: