Police Bhavan Kalaburagi

Police Bhavan Kalaburagi

Monday, March 4, 2019

BIDAR DISTRICT DAILY CRIME UPDATE 04-03-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-03-2019

§UÀzÀ® ¥ÉưøÀ oÁuÉ C¥ÀgÁzsÀ ¸ÀA. 13/2019, PÀ®A. 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 03-03-2019 ರಂದು ಫಿರ್ಯಾದಿ ಚಿತಾನಂದ ತಂದೆ ಸೈದಪ್ಪಾ ಹಲಗೆ ವಯ: 31 ವರ್ಷ, ಜಾತಿ: ಎಸ್.ಸಿ. ಮಾದಿಗ, ಸಾ: ಬರಿದಾಬಾದ, ತಾ: ಬೀದರ ರವರು ತನ್ನ ಹೆಂಡತಿಯಾದ ಲಕ್ಷ್ಮೀ ವಯ: 27 ವರ್ಷ ಹಾಗೂ ಮಕ್ಕಳಾದ ಮಗ ಅಶ್ವಿನ ವಯ: 4 ವರ್ಷ, ಶ್ವೇತಾ ವಯ: 7 ವರ್ಷ, ಅಂಕಿತಾ ವಯ: 5 1/2 ವರ್ಷ ಎಲ್ಲರೂ ಖಾಸಗಿ ಕೆಲಸ ಕುರಿತು ಮ್ಮೂರಿಂದ ಬಸ್ಸಿನ ಸೌಕರ್ಯಿ ಇಲ್ಲದ ಕಾರಣ ಕಾಲು ನಡುಗೆಯಿಂದ ನಡೆದುಕೊಂಡು ಕಾಡವಾದ ಗ್ರಾಮದ ಕಡೆಗೆ ಹೋಗುತ್ತಿರುವಾಗ ಹಿಂದನಿಂದ ಅಂದರೆ ಬರಿದಾಬಾದ ಕಡೆಯಿಂದ ಕಾಡವಾದ ಕಡೆಗೆ ಮೇನ್ ರೋಡ ಮುಖಾಂತರ ಅಪ್ಪೆ ಗುಡ್ಸ ಆಟೋ ರೀಕ್ಷಾ ನಂ. ಕೆಎ-32/ಎ-6616 ನೇದರ ಚಾಲಕನಾದ ಆರೋಪಿಯು ತನ್ನ ಆಟೋ ರೀಕ್ಷಾವನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ್ ಮಾಡದೆ ಇಸ್ಮಾಯಿಲ್ ಖಾದ್ರಿ ದರ್ಗಾದ ಪೊಲ್ ಬಳಿ ಫಿರ್ಯಾದಿಯ ಹೆಂಡತಿಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಹೆಂಡತಿಗೆ ಹಣೆಯ ಮೇಲೆ ಭಾರಿ ರಕ್ತಗಾಯ, ಮೂಗಿನ ಕೆಳಗೆ ರಕ್ತಗಾಯ, ಎದೆಯ ಎಡಭಾಗದಲ್ಲಿ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿತ್ತಾಳೆ, ಹೆಂಡತಿಯ ಕೈ ಹಿಡಿದು ಬರುತ್ತಿದ್ದ ಅಶ್ವಿನ ಇವನಿಗೆ ನಡು ಬೆನ್ನಿನಲ್ಲಿ ತರಚಿದ ರಕ್ತಗಾಯ ಮತ್ತು ಶ್ವೇತಾ ಇವಳಿಗೆ ತಲೆಯ ಹಿಂಭಾಗದಲ್ಲಿ ಒಳಪೆಟ್ಟಾಗಿ ಬುಗುಡಿ ಬಂದಿರುತ್ತದೆ ಮತ್ತು ಫಿರ್ಯಾದಿಗೂ ಸಹ ತಲೆಯ ಹಿಂಭಾಗದ ಎಡಗಡೆಗೆ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ವಾಹನ ಬಿಟ್ಟು ಬರಿದಾಬಾದ ಕಡೆಗೆ ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ತಮ್ಮ ಬಳಗದ ಸಾಮಸನ ತಂದೆ ಸಿದ್ರಾಮ ವಯ: 25 ವರ್ಷ, ಸಾ: ಬುಧೇರಾ ಇವರಿಗೆ ಕರೆಯಿಸಿ ಅವರು ಬಂದಾಗ ಬೇರೊಂದು ಖಾಸಗಿ ವಾಹನದಿಂದ ಮೃತ ಹೆಂಡತಿಯ ಮೃತದೇಹ ಮತ್ತು ಗಾಯಗೊಂಡ ಎಲ್ಲರೂ ಬೀದರ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 18/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಮವಿ ಕಾಯ್ದೆ :-
ದಿನಾಂಕ 03-03-2019 ರಂದು ಫಿರ್ಯಾದಿ ಮಥಿಯಾಸ ಕಿಸ್ಕು ತಂದೆ ಅಂದ್ರಿಯಾ ಕಿಸ್ಕು ಬಹಾಮುರ್ಮು ವಯ: 24 ವರ್ಷ, ಜಾತಿ: ಸಂತಾಲಿ, ಸಾ: ಕಲೆಗಂಜ ಬಾಲುರಘಾಟ, ಜಿಲ್ಲಾ: ದಖ್ಖನ ದಿನಸಪುರ ಪಸ್ಚಿಮ ಬಂಗಾಳ ರವರು ಹಾಮುನಗರ ತಾಂಡದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮುಡಬಿ ಗ್ರಾಮಕ್ಕೆ ಟ್ರ್ಯಾಕ್ಟರ ಸಂ. ಕೆಎ-56/ಟಿ-0489 ಮತ್ತು ಟ್ರ್ಯಾಲಿ ಸಂ. ಕೆಎ-56/ಟಿ-0490 ನೇದರಲ್ಲಿ ಕುಳಿತು ಬರುವಾಗ ಸದರಿ ಟ್ರ್ಯಾಕ್ಟರ ಚಾಲಕನಾದ ಆರೋಪಿ ಹಾಮುನಗರ ತಾಂಡಾದಿಂದ ಸುಮಾರು 1 ಕಿಲೋಮಿಟರ ನಂತರ ಕ್ರಾಸಿನಲ್ಲಿ ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಟ್ರ್ಯಾಲಿಯ ಎಕ್ಸೆಲ್ ಕಟ್ಟಾಗಿ ಟ್ರ್ಯಾಲಿ ಪಲ್ಟಿ ಆದಾಗ ಟ್ರ್ಯಾಲಿಯೊಳಗಿದ್ದ 1) ಝಾಕೀರ ತಂದೆ ಅಬ್ದುಲ ರೋಷಿದ ಶೇಕ ಇತನಿಗೆ ಎಡಗಡೆ ಕಣ್ಣಿನ ಮಗ್ಗಲಿಗೆ, ಬಲಗಡೆ ಹಿಮ್ಮಡಿಗೆ ರಕ್ತಗಾಯ ಮತ್ತು ಎಡಗಡೆ ಮೊಳಕೈಗೆ ತರಚಿದ ಗಾಯವಾಗಿರುತ್ತದೆ, 2) ಜಿಯರುಲ್ಡ ತಂದೆ ಎಸುನಲಿ ಶೇಕ ಇತನಿಗೆ ಗುಪ್ತಾಂಗ(ತರಡು)ಕ್ಕೆ ಮತ್ತು ಮೊಳಕಾಲು ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, 3) ಆನು ತಂದೆ ಬಾಬುರಾವ ಮಡ್ಡಿ ಇತನಿಗೆ ಎಡಗಾಲು ಮೊಳಕಾಲು ಕೆಳಗೆ ಗುಪ್ತಗಾಯವಾಗಿರುತ್ತದೆ, 4) ಚಂದನ ಬರ್ಮನ ತಂದೆ ನಿತಯ ಬರ್ಮನ ಇತನಿಗೆ ತುಟಿಗೆ ತರಚಿದ ಗಾಯ, ಎದೆ ಮತ್ತು ಹೊಟ್ಟೆಯಲ್ಲಿ ಗುಪ್ತಗಾಯವಾಗಿರುತ್ತದೆ, 5) ಪವಲಾಸ ಬರ್ಮನ ತಂದೆ ಛೋತಿಸ ಬರ್ಮನ ಇತನಿಗೆ ಬಲಭುಜಕ್ಕೆ, ಬಲಗಡೆ ಸೊಂಟದ ಕೆಳಗೆ ತರಚಿದ ಗಾಯ ಮತ್ತು ತಲೆಯಲ್ಲಿ ಗುಪ್ತಗಾಯವಾಗಿರುತ್ತದೆ, 6) ಖೊಲ್ಲಾಶ ಬರ್ಮನ ತಂದೆ ನಿರಂಜನ ಬರ್ಮನ ಇತನಿಗೆ ಎಡಗಾಲು ಮೊಳಕಾಲಿಗೆ, ಬಲಗೈ ಮೊಳಕೈಗೆಕುತ್ತಿಗೆಗೆ, ಎಡಗಣ್ಣಿನ ಹತ್ತಿರ ಬಲಗಡೆ ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ, 7) ಬಬಲು ತಂದೆ ಜೀತೆಂದ್ರ ಹಸದಾ ಇತನಿಗೆ ಬಲಹಿಮ್ಮಡಿಗೆ ಗುಪ್ತಗಾಯವಾಗಿರುತ್ತದೆ, 8) ಬದ್ರುನಾಥ ತಂದೆ ಪ್ರೀತಿಹಸದಾ ಇತನಿಗೆ ತಲೆಗೆ ರಕ್ತಗಾಯ ಮತ್ತು ಗುಪ್ತಾಂಗಕ್ಕೆ ಗುಪ್ತಗಾಯವಾಗಿರುತ್ತದೆ, 9) ಅಂಬ್ರೋಸ ತಂದೆ ಅಂತ್ರಿಯಾಸ ಕಿಸ್ಕು ಇತನಿಗೆ ಬಲಗಡೆ ತಲೆಗೆ ಗುಪ್ತಗಾಯ ಬಲ ಭುಜಕ್ಕೆ ರಕ್ತಗಾಯವಾಗಿರುತ್ತದೆ, 10) ಆನಂದ ಮುರ್ಡೆ ತಂದೆ ಸಂಜೀತ ಮುರ್ಡೆ ಇತನಿಗೆ ಎಡ ಮೊಳಕೈ ಮತ್ತು ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿ ಮತ್ತು ವಿವೇಕಾನಂದ ಇತನಿಗೆ ಯಾವುದೆ ಗಾಯಗಳಾಗಿರುವದಿಲ್ಲ, ನಂತರ 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಎಲ್ಲರೂ ಚಿಕಿತ್ಸೆಗಾಗಿ ಮುಡಬಿ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: