Police Bhavan Kalaburagi

Police Bhavan Kalaburagi

Friday, March 8, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.03.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಮದಿನಾ ಕಾಲೋನಿ ಮಕ್ಕಾ ಮಜ್ಜಿದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ ಎ.ಎಸ್‌‌‌.ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಕ್ಕಾ ಮಜ್ಜಿದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ನಿಂತುಕೊಂಡು ನೋಡಲಾಗಿ ಮಕ್ಕಾ ಮಜ್ಜಿದ ಹತ್ತಿರ  ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಸೈಯದ ಯುನುಸ್ ತಂದೆ ಸೈಯದ ಪಾಷುಮಿಯಾ ಸಾ: ಇಲಾಯಿ ಮಜ್ಜಿದ ಹತ್ತಿರ ಎಮ್.ಎಸ್.ಕೆ.ಮೀಲ್ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1100/-ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣದಳು :
ರಾಘವೇಂದ್ರ ನಗರ ಠಾಣೆ : ಕುಮಾರಿ ಸರಳಾ ವ:18 ದಿ:02/08/2011 ರಂದು ಮನೋವಿಕಲ ಬಾಲಕಿಯರ ಬಾಲ ಮಂದಿರ ಹುಬ್ಬಳ್ಳಿಯಿಂದ ವರ್ಗಾವಣೆಯಾಗಿ ಸರ್ಕಾರಿ ಬುದ್ದಿಮಾಂದ್ಯ ಬಾಲಕಿಯ ಬಾಲಮಂದಿರಕ್ಕೆ ಬಂದಿರುತ್ತಾಳೆ. ಸದರಿಯವಳು ಅನಾಥಳಾಗಿರುತ್ತಾಳೆ, ಮಾತು ಬರುವದಿಲ್ಲಾ ಇವಳಿಗೆ ದಿನನಿತ್ಯದ ಚಟುವಟಿಕೆಗಳು ಆಯಾಗಳಿಂದಲೆ ಮಾಡಿಸಬೇಕಾಗುತ್ತದೆ. ದಿ:08/02/2019 ರಂದು ಸಂಸ್ಥೆಯಲ್ಲಿಯೇ ಜಿಲ್ಲಾ ಆಸ್ಪತ್ರೆಯಲ್ಲಿಯೇ ಮನೋರೋಗ ವೈದ್ಯರು ತಪಾಸಣೆ ಮಾಡಿರುತ್ತಾರೆ. ಹಾಗೂ ಸದರಿಯವಳಿಗೆ ಪ್ರತಿ ತಿಂಗಳು ಸಂಸ್ಥೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರಿಂದ ಆರೋಗ್ಯ  ತಪಾಸಣೆ ಮಾಡಿಸುತ್ತೇವೆ. ಸದರಿಯವಳಿಗೆ ಪಿಡ್ಸ್‌‌ ಇರುತ್ತದೆ. ಸಿ.ವಿ.ಆರ್‌‌.ಎಲ್‌.ಆರ್‌‌ (ಐ.ಕ್ಯೂ)20% ಆಗಿರುತ್ತಾಳೆ. ನಿವಾಸಿಯು ಎಂದಿನಂತೆ ದಿ:07/03/19 ರಂದು ಬೆಳಗ್ಗೆ 9.00 ಎ.ಎಂಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಬೆಳಗಿನ ತಿಂಡಿ ತಿನ್ನಿಸುವದಕ್ಕೆ ಹೋದಾಗ ಬಾಲಕಿಗೆ ಅನಾರೋಗ್ಯ ಕಂಡು ಬಂದ ತಕ್ಷಣ 108 ಅಂಬುಲೇನ್ಸ್ ಗೆ ಕಾಲ ಮಾಡಿ ಅಂಬುಲೇನ್ಸ್‌ ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ತಪಾಸಣೆ ನಡೆಸಿ ಸದರಿ ಬಾಲಕಿಯು ಮರಣ ಹೊಂದಿದ್ದನ್ನು 11.00 ಎ.ಎಂಕ್ಕೆ ದೃಢಪಡಿಸಿರುತ್ತಾರೆ. ಅಂತಾ ಶ್ರೀಮತಿ ಭೀಮಬಾಯಿ ಪ್ರಭಾರ ಅಧೀಕ್ಷಕರು ಬುದ್ದಿಮಾಂದ್ಯ ಬಾಲಕಿಯರ ಬಾಲಮಂದಿರ ಕಲಬುರಗಿ ವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಕುಮಾರಿ ಸೌಮ್ಯ ವ:16 ದಿನಾಂಕ :13/02/2018 ರಂದು ದೇವಲಗಾಣಗಾಪೂರ ಪೊಲೀಸ ಠಾಣೆಯಿಂದ ಸರ್ಕಾರಿ ಬುದ್ದಿಮಾಂದ್ಯ ಬಾಲಕಿಯರ ಬಾಲಮಂದಿರಕ್ಕೆ ಬಂದಿರುತ್ತಾಳೆ. ಸದರಿಯವಳು ಅನಾಥಳಾಗಿರುತ್ತಾಳೆ. ಮಾತು ಬರುವದಿಲ್ಲಾ ಇವಳಿಗೆ ದಿನನಿತ್ಯದ ಚಟುವಟಿಕೆಗಳು ಆಯಾಗಳಿಂದಲೆ ಮಾಡಿಸಬೇಕಾಗುತ್ತದೆ. ಸದರಿಯವಳು ದಿ:21/12/2018 ರಿಂದ 25/12/18 ರವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲೆಯಾಗಿರುತ್ತಾಳೆ. ಹಾಗೂ ಸದರಿಯವಳಿಗೆ ಪ್ರತಿ ತಿಂಗಳು ಸಂಸ್ಥೆಯಲ್ಲಿ ಜಿಲ್ಲಾ ಆಸ್ಪತ್ರೆ ಮನೋರೋಗ ವೈದ್ಯರು ಆರೋಗ್ಯ ತಪಾಸಣೆ ಮಾಡಿಸುತ್ತೇವೆ. ಸದರಿಯವಳ ಮಾಡರೇಟ್‌‌ ಎಮ್‌‌.ಆರ್‌ (ಐ.ಕ್ಯೂ)35% ಆಗಿರುತ್ತಾಳೆ. ನಿವಾಸಿಯು ಎಂದಿನಂತೆ ದಿ:07/03/19 ರಂದು ಮಧ್ಯಾನ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮಧ್ಯಾನ 1.00 ಗಂಟೆಗೆ ಊಟ ತಿನ್ನಿಸುವದಕ್ಕೆ ಹೋದಾಗ ಬಾಲಕಿಗೆ ಅನಾರೋಗ್ಯ ಕಂಡು ಬಂದ ತಕ್ಷಣ ಆಟೋದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ತಪಾಸಣೆ ನಡೆಸಿ ಸದರಿ ಬಾಲಕಿಯು ಮರಣ ಹೊಂದಿದ್ದನ್ನು 2.00 ಪಿ.ಎಂಕ್ಕೆ  ದೃಢಪಡಿಸಿರುತ್ತಾರೆ. ಹಾಗೂ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಂಡಿರುತ್ತಾರೆ. ಅಂತಾ  ಕಾರಣ ಸದರಿ ಬಾಲಕಿಯ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀಮತಿ ಭೀಮಬಾಯಿ ವ:46  ಪ್ರಭಾರ ಅಧೀಕ್ಷಕರು ಬುದ್ದಿಮಾಂದ್ಯ ಬಾಲಕಿಯರ ಬಾಲಮಂದಿರ ಕಲಬುರಗಿ ವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ;06/03/2019 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನನ್ನ ಅಣ್ಣ ಸತ್ಯನಾರಾಯಣನು ದೇವಲಗಾಣಗಾಪೂರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬರುತ್ತೇನೆ ಅಂತ ಅವನು ತನ್ನ ಮೋಟಾರ ಸೈಕಲ ಎಮ್,ಎಚ್-13 ಸಿಜೆಡ್-8493 ನೆದ್ದು ನಡೆಸಿಕೊಂಡು ಬಂದಿರುತ್ತಾನೆ. ದಿವಸ ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಅಣ್ಣ ಸತ್ಯ ನಾರಾಯಣನ ಮೋಬೈಲ ಪೋನ ನಂಬರ 9922974052 ನೇದ್ದರಿಂದ ಯಾರೋ ಒಬ್ಬರು ನನ್ನ ಮೋಬೈಲ ಪೋನ ನಂಬರ 9175303349 ನೆದ್ದಕ್ಕೆ ಪೋನ ಮಾಡಿ ತಮ್ಮ ಹೆಸರು ರಾಜಕುಮಾರ ಮಾಡಿಯಾಳ ಸಾ:ಅಫಜಲಪೂರ ಅಂತ ತಿಳಿಸಿ ಮೋಬೈಲ ಪೋನ ಇದ್ದ ವ್ಯಕ್ತಿಯ ಮೋಟಾರ ಸೈಕಲ ನಂಬರ ಎಮ್,ಎಚ್-13 ಸಿಜೆಡ್-8493 ನೆದ್ದಕ್ಕೆ ಅಫಜಲಪೂರ-ದುಧನಿ ರೋಡಿನ ಮೇಲೆ ಅಫಜಲಪೂರ ಬಸ್ ಡಿಪೊ ಹತ್ತೀರ ಸಾಯಂಕಾಲ 5-15 ಗಂಟೆ ಸುಮಾರಿಗೆ ಅಶೋಕ ಲೈಲ್ಯಾಂಡ ಕಂಪನಿಯ ಮಿನಿ ಗೂಡ್ಸ ವಾಹನ ನಂ:ಕೆಎ-28 ಸಿ-6031 ನೆದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ದುಧನಿ ಕಡೆಯಿಂದ ನಡೆಸಿಕೊಂಡು  ಎದುರುಗಡೆಯಿಂದ ಬಂದು ಮೋಟಾರ ಸೈಕಲಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ಮತ್ತು ಅಪಘಾತ ಸಂಭವಿಸಿದ ನಂತರ ಸದರಿ ವಾಹನದ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಘಟನೆಯಲ್ಲಿ ಮೋಟಾರ ಸೈಕಲ ನಡೆಸಿಕೊಂಡು ದುಧನಿ ಕಡೆಗೆ ಹೊರಟಿದ್ದ ವ್ಯಕ್ತಿಯ ತಲೆಗೆ ,ಮುಖಕ್ಕೆ ಭಾರಿ ರಕ್ತಗಾಯಗಳಾಗಿ ಮತ್ತು ಮೈ ಕೈಗಳಿಗೆ ಒಳಪೆಟ್ಟು ಹಾಗು ತರಚಿದ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ನಾನು ಮೃತ ಪಟ್ಟ ವ್ಯಕ್ತಿಯ ಪೋನಿನಿಂದಲೆ ಪೋನ ಮಾಡಿರುತ್ತೇನೆ ಅಂತ ತಿಳಿಸಿದ್ದರಿಂದ ನಾನು ಸದರಿಯವನಿಗೆ ಪೋನ ಇದ್ದ ವ್ಯಕ್ತಿ ನನ್ನ ಖಾಸ ಅಣ್ಣನಿರುತ್ತಾನೆ ಅಂತ ತಿಳಿಸಿ ನಂತರ ನಾನು ವಿಷಯವನ್ನು ನಮ್ಮ ಮನೆಯಲ್ಲಿ ಎಲ್ಲರಿಗೂ ತಿಳಿಸಿ ನನ್ನ ಗೆಳೆಯನಾದ ಅಂಬಾದಾಸ ತಂದೆ ವಾಸುದೇವ ಲಖಾಪತಿ ಇಬ್ಬರು ಕೂಡಿಕೊಂಡು ರಾತ್ರಿ 8-00 ಗಂಟೆಯ ಸುಮಾರಿಗೆ ಘಟನೆ ಜರುಗಿದ ಸ್ಥಳಕ್ಕೆ ಬಂದಾಗ ನನ್ನ ಅಣ್ಣನ ಶವವನ್ನು ಅಫಜಲಪೂರದ ಸರಕಾರಿ ದವಾಖಾನೆಯಲ್ಲಿ ಹಾಕಿರುವ ಬಗ್ಗೆ ಗೊತ್ತಾಗಿ ನಾನು ಮತ್ತು ಅಂಬಾದಾಸ ಇಬ್ಬರು ದವಾಖಾನೆಗೆ ಹೋಗಿ ನನ್ನ ಅಣ್ಣನ ಶವ ಮತ್ತು ಅವನಿಗೆ ಆಗಿರುವ ಗಾಯಗಳನ್ನು ನೋಡಿರುತ್ತೇವೆ. ಅಂತಾ ಶ್ರೀ ರಾಮು ತಂದೆ ಮಲ್ಲೇಶಮ್ಮ ಬೇತ ಸಾ: ನವಿನ ಗರಕುಲ ಕುಂಬಾರಿ ತಾ||ದಕ್ಷಿಣ ಸೋಲಾಪೂರ ಜಿ||ಸೋಲಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: