ಹಲ್ಲೆ
ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ನರೋಣಾ
ಠಾಣೆ : ಶ್ರೀ.ಪ್ರೇಮಸಿಂಗ ತಂದೆ ಭೀಮಶ್ಯಾ ಜಾದವ್, ಸಾ:ದಣ್ಣೂರತಾಂಡಾ ರವರು ದಿನಾಂಕ: 21/03/2019 ರಂದು ಮಧ್ಯಾಹ್ನ ಇಬ್ಬರು ಜನರು ನಾನು ಇಲ್ಲದ ಸಮಯದಲ್ಲಿ ದಾವಲ ಮಲ್ಲಿಕ ದರ್ಗಾದ
ಹೊಟೆಲನಲ್ಲಿ ಬಂದು ಕುಳಿತು ಆ ಭೋಸಡಿ ಮಗ ಕಳ್ಳ ಲಮಾಣ್ಯಾಗ ಕಡಿಯುತ್ತೇವೆ ಮತ್ತು ಹೊಡೆಯುತ್ತೇವೆ
ಹಾಗೂ ನಮ್ಮ ನೆಲ್ಲೂರದ ರಸ್ತೆ ಬಂದ ಮಾಡುತ್ತೇವೆಂದು ಅವಾಚ್ಯ ಶಬ್ದಗಳಿಂದ ನಮ್ಮ ತಂದೆ ಮತ್ತು
ನನ್ನ ಕಾಕಾನಾದ ತುಕಾರಾಮ್, ಲುಂಬು, ಮತ್ತು ಇನ್ನೀತರ ಜನರ ಎದುರಗಡೆ ದಮಕಿಕೊಟ್ಟು ಹೊಗಿದ್ದಾರೆ. ಆದರೆ ದಿನಾಂಕ:22/03/2019 ರಂದು
ಸಾಯಂಕಾಲ ನನ್ನ ಮನೆಗೆ ಬಂದು ನಡಿ ಭೋಸಡಿ ಮಗನಾ ನಿನಗ ಹಣಮಂತರಾವ ಎಸ್ ಖ್ಯಾಮದಿ ಸಾ:ನೆಲ್ಲೂರ
ಗ್ರಾಮದವರು ನಮಗೆ ನಿನಗೆ ಕರೆದುಕೊಂಡು ಬಾ ಎಂದು ಕೈಹಿಡಿದು ಗಾಡಿಯ ಮೇಲೆ ಕೂಡು ಮಗನಾ ಅಂತಾ
ಕೈಹಿಡಿದು ಎಳೆದು ಬಾಯಿಗೆ ಬಂದಂತೆ ಬೈದರು ನಮ್ಮ ತಾಂಡಾದ ಜನರು ಬಿಡಿಸಿ ಕಳಿಸಿದರು, ಆರೋಪಿತ ಗುಂಡಾಗಳಾದ 1)ಸುನೀಲ ಎಸ್ ಅಂಬಲಗಿ, 2)ಮಲ್ಲು ಬಿರಾದಾರ
ಸಾ:ನೆಲ್ಲುರ, ಇವರಿಬ್ಬರಿಗೆ ಕಾರಣಬೂತನಾಗಿದ ಶ್ರೀ.ಹಣಮಂತರಾವ ಎಸ್ ಪಾಟೀಲ್ ಸಾ:ನೆಲ್ಲೂರ
ಸದರಿಯವರ ಮೇಲೆ ಕಾನೂನು ಕ್ರಮ ಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ
ಠಾಣೆ : ಶ್ರೀ.ಲಕ್ಕಪ್ಪಾ ತಂದೆ ಕಲ್ಲಪ್ಪಾ ಕಾಂಬಳೆ, ಸಾ:ದಣ್ಣೂರ ರವರ ಅಣನಾದ್ಣ
ದಶರಥನಿಗೆ ವಯಸ್ಸಿಗೆ ಬಂದ ಹೆಣ್ಣು ಹುಡಗಿಯರು ಇದ್ದು ಸುದೀರ ತಂದೆ ಬಾಬು ಜಮದಾರ ಈತನು ನಮ್ಮ
ಮನೆಯ ಮುಂದೆ ದಿನಾಲು ತಿರುಗಾಡುತ್ತಿದ್ದುದ್ದರಿಂದ ನಾನು ಸುಮಾರು 3-4 ದಿವಸಗಳ ಹಿಂದ
ಸುದೀರನಿಗೆ ಹೀಗೆ ತಿರುಗಾಡಬೇಡಾ ಇದು ಸರಿಯಲ್ಲಾ ಅಂತಾ ತಾಕೀತು ಮಾಡಿರುತ್ತೇನೆ. ಅಂದಿನಿಂದ
ಸುದೀರನು ನನಗೆ ಗುರಾಯಿಸುತ್ತಾ ಬಂದಿರುತ್ತಾನೆ. ದಿನಾಂಕ:22/03/2019 ರಂದು ಸಾಯಂಕಾಲ ನಾನು ನಮ್ಮ ಮನೆಯ ಮುಂದೆ ನಿಂತಾಗ
1)ಸುದೀರ ತಂದೆ ಬಾಬು ಜಮಾದಾರ, 2)ಬಾಬು ತಂದೆ ರಾಯಪ್ಪಾ ಜಮಾದಾರ ಇಬ್ಬರು ಅಲ್ಲಿಗೆ ಬಂದು ನನ್ನ ಸಂಗಡ ಜಗಳ ಮಾಡಿ
ಅದರಲ್ಲಿ ಸುದೀರನು ನನಗೆ ಏ ರಂಡಿಮಗನೆ ಮಾದಿಗ ಸೂಳೆಮಗನೆ ನನಗೆ ನೀ ಏನು ತಾಕಿತ್ತು ಮಾಡತಿ ನಿನಗೆ
ಒಂದು ಕೈ ನೋಡೆ ಬಿಡುತ್ತೇವು. ಇವತ್ತು ಅಂತಾ ಬೈದು ನನಗೆ ಜಗ್ಗಾಡಿ ಕೈಯಿಂದ ಹೊಟ್ಟೆಗೆ
ಗುದ್ದಿದನು ಬಾಬು ತಂದೆ ರಾಯಪ್ಪಾ ಜಮಾದಾರ ಇವನು ಒಂದು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನನ್ನ ಹೆಂಡತಿ
ಶಶಿಕಲಾ ಇವಳು ಜಗಳ ನೋಡಿ ಬಿಡಿಸಲು ಬಂದಾಗ ಅವಳಿಗೆ ಸುದೀರನು ಸೀರೆ ಸೆರಗು ಹಿಡಿದು ಜಗ್ಗಾಡಿ
ಕೈಯಿಂದ ಕಪಾಳ ಮೇಲೆ ಹೊಡೆದನು ಇಬ್ಬರು ಕೂಡಿ ಮಾದಿಗ ಸೂಳೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ
ಅಂತಾ ಚಿರಾಡುತ್ತಿದ್ದಾಗ ಕ್ಷೇಮಲಿಂಗ ತಂದೆ ಶಿವಪ್ಪಾ ಧನ್ನಿ ಶರಣಬಸು ತಂದೆ ಕ್ಷೇಮಲಿಂಗ ಧನ್ನಿ
ಇವರು ನೋಡಿ ಬಿಡಿಸಿ ಕಳಿಸಿರುತ್ತಾರೆ. ನಾನು ನಮ್ಮೂರಿನಿಂದ ನರೋಣಾ ಗ್ರಾಮಕ್ಕೆ ಬಂದು ನನಗೆ ಜಗಳದಲ್ಲಿ
ತಲೆಗೆ ರಕ್ತಗಾಯ ಆಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಬಂದಿರುತ್ತೇನೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಗಜಾನಂದ ತಂದೆ ಲಕ್ಷ್ಮಣ ನಿಂಬಾಳ ಸಾ:
ಚಿಂಚೋಳಿ ತಾ: ಅಫಜಲಪೂರ ರವರು ಮಲ್ಲಾಬಾದ ಗ್ರಾಮದಲ್ಲಿ ನಮ್ಮ ಸಂಬಂಧಿಕರೊಬ್ಬರಿಗೆ ಆರಾಮ ಇಲ್ಲದ ಕಾರಣ ನಮ್ಮ ತಂದೆಯವರಾದ ಲಕ್ಷ್ಮಣ ಹಾಗೂ ನಮ್ಮ ಜಾತಿಯವರಾದ ಕಾಂತಾಬಾಯಿ ಗಂಡ ಸೈದಪ್ಪ ಸಾಮನೂರ ಇವರಿಗೆ ಮಲ್ಲಾಬಾದ ಗ್ರಾಮಕ್ಕೆ ಕಳಿಸಿಕೊಡುವ ಕುರಿತು ನಾನು ದಿನಾಂಕ
21-03-19 ರಂದು ಮಧ್ಯಾಹ್ನ ಚಿಂಚೋಳಿ ಗ್ರಾಮದಿಂದ ಅಫಜಲಪೂರಕ್ಕೆ ನಮ್ಮ ತಂದೆಗೆ ಮತ್ತು ಕಾಂತಾಬಾಯಿ ರವರಿಗೆ ಕರೆದುಕೊಂಡು ಬಂದು ಅಫಜಲಪೂರದಿಂದ ಮಲ್ಲಾಬಾದ ಕಡೆ ಹೋಗುತ್ತಿದ್ದ ಟಂಟಂ ನಂ ಕೆಎ-32-ಸಿ-3214
ನೇದ್ದರಲ್ಲಿ ಇಬ್ಬರಿಗೆ ಕೂಡಿಸಿ ಕಳುಹಿಕೊಟ್ಟೆನು ನಂತರ
4:15 ಪಿ.ಎಮ್ ಸುಮಾರಿಗೆ ನಮ್ಮ ಹೋಮ್ ಗಾರ್ಡ ಯುನಿಟದಲ್ಲಿ ಕೆಲಸ ಮಾಡುತ್ತಿರುವ ಭವಂತ ಆರೇಕರ ಇತನು ನನಗೆ ಫೋನ್ ಮಾಡಿ ಮಲ್ಲಾಬಾದ ಮತ್ತು ನಿರಾವರಿ ಆಫೀಸ್ ಮಧ್ಯದಲ್ಲಿ ಟಂಟಂ ನಂ ಕೆಎ-32-ಸಿ-3214
ನೇದ್ದು ಪಲ್ಟಿಯಾಗಿದ್ದು ಸದರಿ ಟಂಟಂ ದಲ್ಲಿದ್ದ ನಿಮ್ಮ ತಂದೆಗೆ ಮತ್ತು ಕಾಂತಾಬಾಯಿ ಹಾಗೂ ಅಫಜಲಪೂರದ ಜಗದೇವಿ ಎಂಬ ಹೆಣ್ಣು ಮಗಳು ಇವರೆಲ್ಲರೂ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟು ಆಗಿರುತ್ತದೆ ಅಂತಾ ತಿಳಿಸಿದನು ಕೂಡಲೇ ನಾನು ಮತ್ತು ಕಾಂತಾಬಾಯಿಯ ಮಗನಾದ ಸಂಜುಕುಮಾರ @ ಚಂದಪ್ಪ ಇಬ್ಬರು ಘಟನೆ ಜರುಗಿದ ಸ್ತಳಕ್ಕೆ ಬಂದಿರುತ್ತೇವೆ ಅಷ್ಟರಲ್ಲೇ ಸ್ಥಳಕ್ಕೆ 108 ವಾಹನ ಬಂದಿದ್ದು ನಾವು ಸದರಿಯವರಿಗೆ ಆಗಿರುವ ಗಾಯಗಳನ್ನು ನೋಡಿ
108 ವಾಹನದಲ್ಲಿ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾಗ ಸಾಯಂಕಾಲ 5:30 ಪಿ.ಎಮ್ ಕ್ಕೆ ಕಾಂತಾಬಾಯಿ ಶರಣಶಿರಸಗಿ ಹತ್ತಿರ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ ನಂತರ ನನ್ನ ತಂದೆಗೆ ಕಲಬುರಗಿಯ ಜಿ.ಜಿ.ಹೆಚ್ ಯಲ್ಲಿ ಸೇರಿಕೆ ಮಾಡಿ ಕಾಂತಾಬಾಯಿಯ ಶವವವು ಶವಗಾರದಲ್ಲಿ ಹಾಕಿಸಿರುತ್ತೇವೆ. ಜಗದೇವಿ ಸಂಬಂಧಿಕರು ಬಂದು ಅವಳಿಗೆ ಉಪಚಾರ ಕುರಿತು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ದಿನಾಂಕ 21-03-19 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಅಫಜಲಪೂರ ಮಲ್ಲಾಬಾದ ರೋಡಿಗೆ ಮಲ್ಲಾಬಾದ ಗ್ರಾಮ ಇನ್ನು ಅಂದಾಜು
02 ಕಿ.ಮೀ ಅಂತರದಲ್ಲಿರುವಾಗ ಟಂಟಂ ನಂ ಕೆಎ-32-ಸಿ-3214 ನೆದ್ದರ ಚಾಲಕನಾದ ತಿಪ್ಪಣ್ಣ ತಂದೆ ಭೀರಣ್ಣ ಕೊಕಟನೂರ ಸಾ: ದೇಸಾಯಿ ಕಲ್ಲೂರ ಎಂಬಾತನು ಟಂಟಂ ಪಲ್ಟಿ ಮಾಡಿ ಅಫಘಾತ ಪಡೆಸಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣಗಳು :
ನರೋಣಾ
ಠಾಣೆ : ಶ್ರೀ. ಉದಯ ತಂದೆ ಕಲ್ಯಾಣರಾವ ಖ್ಯಾಮದಿ ಮು:ನೆಲ್ಲೂರ ಗ್ರಾಮ ರವರು ದಿನಾಂಕ:22/03/2019 ರಂದು ದೇವರ
ದರ್ಶನ ಕುರಿತು ನಾನು ಮತ್ತು ನಮ್ಮ ಚಿಕ್ಕಪ್ಪನ ಮಗನಾದ ಹಣಮಂತರಾಯ ತಂದೆ ಶ್ರೀಮಂತರಾಯ ಖ್ಯಾಮದಿ, ಮಲ್ಲಿಕಾರ್ಜುನ ತಂದೆ
ಗೌಡಪ್ಪಾ ಬಿರಾದಾರ, ಸುನೀಲ ತಂದೆ ಶಿವಶಂಕರ ಅಂಬಲಗಿ ಹಾಗೂ ಅವನ ತಾಯಿಯಾದ ಶ್ರೀಮತಿ.ಉಮಾದೇವಿ ಗಂಡ
ಶಿವಶಂಕರ ಅಂಬಲಗಿ ಎಲ್ಲರೂ ಕೂಡಿ ನಾವು ದಣ್ಣೂರ ತಾಂಡಾದ ದಾವಲಮಲಿಕ ದರ್ಗಾಕ್ಕೆ ಹೋಗಿ ದೇವರ
ದರ್ಶನಮಾಡಿಕೊಂಡು ವಾಪಸ್ಸು ಬರಬೇಕೆಂದು ದೇವಸ್ಥಾನದ ಮುಂದೆ ನಿಂತಾಗ ದಣ್ಣೂರ ತಾಂಡಾದ 1)ಪ್ರೇಮಸಿಂಗ ತಂದೆ
ಭೀಮಶ್ಯಾ ಜಾದವ್, 2)ಪ್ರಭು ಜಾದವ್, 3)ಕಾಂತು ಜಾದವ್, 4)ತುಕಾರಾಮ ಜಾದವ್ ಎಲ್ಲರೂ ಅಲಿಗೆ ಬಂದು ಇರಲ್ಲಿ ಪ್ರಭು ಜಾದವ ಈತನು ಹಣಮಂತರಾಯ
ಇವರಿಗೆ ಏ ರಂಡಿಮಗನೆ ನಮ್ಮ ತಾಂಡಾದಾಗ ಸಿಸಿ ರೋಡ ಮಾಡಿಸುವ ಸಲುವಾಗಿ ಜಿ.ಓ ಟ್ಯಾಗ್ ಫೊಟೋ
ತಗೆಯಲು ನೀನು ಬಂದಿದ್ದ ನಿನಗ ಸೊಕ್ಕ ಬಹಳ ಬಂದಿದೆ ರಂಡಿಮಗನೆ ಅಂತಾ ಅವಾಚ್ಯವಾಗಿ ಬೈದು ಎದೆಯ
ಮೇಲಿನ ಅಂಗಿಹಿಡಿದು ಜಗ್ಗಾಡುತ್ತಿದ್ದಾಗ ಶ್ರೀಮತಿ.ಉಮಾದೇವಿ ಇವರು ಮದ್ಯ ಪ್ರವೇಶಿಸಿ ಜಗಳ
ಬಿಡಿಸಲು ಹೋದಾಗ ಅವರಿಗೆ ಕೈಹಿಡಿದು ಜಗ್ಗಾಡಿ ನೂಕಿಕೊಟ್ಟಿರುತ್ತಾನೆ. ಆಗ ಉಳಿದ ನಾವೆಲ್ಲರೂ
ಕೇಳಲು ಹೋದಾಗ ನನಗೆ ಪ್ರೇಮಸಿಂಗನು ಕೈಯಿಂದ ಕಪಾಳ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾನೆ.
ಸುನೀಲನಿಗೆ ಪ್ರಭು ಈತನು ನೆಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ, ಕಾಂತು ಮತ್ತು ತುಕಾರಾಮ್
ಇವರು ಈ ರಂಡಿಮಕ್ಕಳಿಗೆ ಬಿಡಬ್ಯಾಡರಿ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ
ಠಾಣೆ : ಶ್ರೀ. ಮನ್ನು ತಂದೆ ಗೇಮು ರಾಠೋಡ್ ರವರು
ದಿನಾಂಕ:22/03/2019 ರಂದು ಭೂಸನೂರ ಫ್ಯಾಕ್ಟರಿಯಲ್ಲಿ ನಮ್ಮ ಕೆಲಸ ನಿಮಿತ್ಯ ನಾನು ಮತ್ತು ನನ್ನ
ಅಳಿಯನಾದ ಅನೀಲ ತಂದೆ ರಾಜು ಪವಾರ ಇಬ್ಬರು ನಮ್ಮ ಸ್ವಂತ ಮೊಟಾರ್ ಸೈಕಲ್ ಮೇಲೆ ಹೋಗಿದ್ದು ಕೆಲಸ
ಮುಗಿದ ನಂತರ ಅದೇ ಮೊಟಾರ್ ಸೈಕಲ್ ಮೇಲೆ ಮರಳಿ ಊರಿಗೆ ಬರುವಾಗ ಚಿಂಚೋಳಿ ಕ್ರಾಸ್ ಹತ್ತಿರ ಮೊಟಾರ್
ಸೈಕಲ್ ನಿಲ್ಲಿಸಿ ಒಂದು ಹೊಟೇಲ್ ಮುಂದೆ ನಾವು ಕುಳಿತಾಗ ಒಬ್ಬ ವ್ಯಕ್ತಿ ಧುತ್ತರಗಾಂವ ಕಡೆಯಿಂದ
ಮೊಟಾರ್ ಸೈಕಲ್ ಮೇಲೆ ಅಲ್ಲಿಗೆ ಬಂದು ನಾವು ಭೂಸನೂರ ಫ್ಯಾಕ್ಟರಿ ಹತ್ತಿರ ಇರುವ ವೈನ್ಸಶಾಫ್
ನಲ್ಲಿ ತಂದ ಸರಾಯಿ ನೋಡಿ ತನಗೆ ಕುಡಿಯಲು ಸಾರಾಯಿ ಕೊಡಿ ಅಂತ ಬೇಡಿದನು. ಆಗ ನಮಗೂ ಮತ್ತು ಅವನಿಗೆ
ಸ್ವಲ್ಪ ತಕರಾರು ಆಯಿತು ಆಗ ಆತ ಅಲ್ಲಿಂದ ಹೋಗಿ ಸ್ವಲ್ಪ ಹೊತ್ತಿನಲ್ಲಿಯೇ ತನ್ನ ಸಂಗಡ ಸುಮಾರು 8-10 ಜನರನ್ನು ಕರೆದುಕೊಂಡು
ಅಲ್ಲಿಗೆ ಬಂದು ತಮ್ಮ ಸಂಗಡ ಜಗಳ ಮಾಡಿ ನನಗೆ ರಂಡಿಮಗನೆ ಕುಡಿಯಲು ದಾರು ಬೇಡಿದರೆ ಇಲ್ಲಾ ಅಂತಾ
ಬೈದು ಕೈಯಲ್ಲಿದ್ದ ಕಟ್ಟಿಗೆಯಿಂದ ಬಲಗೈ ಮೇಲೆ ಹೊಡೆದಾಗ ಬಲಗೈ ಕಿರು ಬೆಳಿಗೆ ಭಾರಿ ಒಳಪೆಟ್ಟು
ಆಗಿರುತ್ತದೆ. ಇನ್ನೊಬ್ಬ ಅಲ್ಲೇ ನಿಂತಿದ್ದ ಹಾಲಿನ ಗಾಡಿಯಲ್ಲಿದ ಖಾಲಿ ಕ್ಯಾರೇಟ್ ಬಾಕ್ಸ್
ತಗೆದುಕೊಂಡು ಅದರಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿದನು. ಇನ್ನೊಬ್ಬ ತನ್ನ
ಟೆಕ್ಕೆಯಲ್ಲಿ ನನಗೆ ತಗೆದುಕೊಂಡು ರೋಡಿನ ಮೇಲೆ ಎತ್ತಿ ನೆಲಕ್ಕೆ ಹಾಕಿ ಕಾಲಿ ಹಿಡಿದು
ಎಳೆದಾಡಿದನು. ನನ್ನ ಬಲ ಮಗ್ಗಲಿಗೆ ತರಚಿದ ರಕ್ತಗಾಯಗಳು ಆದವು. ಮತ್ತೊಬ್ಬ ಅನೀಲನಿಗೆ ತನ್ನ
ಕೈಯಿಂದ ಬಲಕಪಾಳಕ್ಕೆ ಎಡ ಮಗ್ಗಲಿಗೆ ಗುದ್ದಿ ಗುಪ್ತಗಾಯ ಪಡಿಸಿದನು. ಅಸ್ಟರಲ್ಲಿ ಇನ್ನೊಬ್ಬ
ಅಳಿಯನಾದ ದೇವಿದಾಸ ತಂದೆ ಹರಿಶ್ಚಂದ್ರ ಜಾದವ್ ಈತನು ಅಲ್ಲಿಗೆ ಬಂದು ಜಗಳ ಬಿಡಿಸುವಾಗ ಅವನಿಗೂ
ಕೂಡ ನನಗೆ ಕಟ್ಟಿಗೆಯಿಂದ ಹೊಡೆದ ವ್ಯಕ್ತಿಯೇ ಅದೇ ಕಟ್ಟಿಗೆಯಿಂದ ಎಡ ಮುಂಡಿಗೆ ಹೊಡೆದು
ಭಾರಿಗುಪ್ತಗಾಯ ಪಡಿಸಿದನು. ಮತ್ತು ಕೈಯಿಂದ ಎಡಕಪಾಳ ಮೇಲೆ ಹೊಡೆದನು. ಉಳಿದವರು ಎಲ್ಲರೂ
ರಂಡಿಮಕ್ಕಳ್ಯಾ ನಿಮಗೆ ಬಹಳ ಸೊಕ್ಕು ಬಂದಾದ ನಿಮಗೆ ಬಿಡಂಗಿಲ್ಲ ಅಂತಾ ಬೈದು ಜೀವಭಯ ಪಡಿಸಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ
ಠಾಣೆ : ಶ್ರೀ ಬಾಬು ತಂದೆ ರಾಯಪ್ಪಾ ಜಮಾದಾರ ಸಾ:ದಣ್ಣೂರ ರವರು ದಿನಾಂಕ:22/03/2019 ರಂದು
ಸಾಯಂಕಾಲ ತನ್ನ ಮಗನಾದ ಜಗು ಈತನು ಬಣ್ಣ ಆಡಿ ಮೈತೊಳೆದುಕೊಳ್ಳುವ ಸಲುವಾಗಿ ನಮ್ಮ ಅಣ್ಣನಾದ ಧರ್ಮಣ್ಣಾ
ಇವರ ಮನೆಯ ಕಡೆಗೆ ಹೋದಾಗ ಧರ್ಮಣ್ಣನ ಮನೆಯ ಹತ್ತಿರ ಇರುವ ಲಕ್ಕಪ್ಪಾ ತಂದೆ ಕಲ್ಲಪ್ಪಾ ಕಾಂಬಳೆ
ಈತನು ನನ್ನ ಮಗನಿಗೆ ಹೊಲಸು ಬೈದು ನಮ್ಮ ಮನೆಯ ಕಡೆಗೆ ಯಾಕೆ ಹೆಚ್ಚು ಓಡಾಡುತ್ತಿ ಅಂತಾ
ಬೆದರಿಸಿರುತ್ತಾನೆ. ಈ ವಿಷಯ ನನ್ನ ಮಗ ನನ್ನ ಮುಂದೆ ತಿಳಿಸಿದ್ದು ನಾನು ಸಾಯಂಕಾಲ ಲಕ್ಕಪ್ಪನ ಮನೆಯ
ಕಡೆಗೆ ಹೋಗಿ ಲಕ್ಕಪ್ಪನಿಗೆ ವಿಚಾರಿಸಿದಾಗ ಲಕ್ಕಪ್ಪನು ನನಗೂ ದಬಾಯಿಸಿ ಕಳುಹಿಸಿರುತ್ತಾನೆ. ಸಾಯಂಕಾಲ ನಾನು ನಮ್ಮೂರಿನ ಪೂಜಾರಿ ಲಕ್ಷ್ಮೀಕಾಂತ ಇವರ
ಹೊಟೆಲ್ ಮುಂದೆ ನಿಂತಾಗ ಲಕ್ಕಪ್ಪಾ ತಂದೆ ಕಲ್ಲಪ್ಪಾ ಕಾಂಬಳೆ, ಶಶಿಕಲಾ ಗಂಡ ಲಕ್ಕಪ್ಪಾ ಕಾಂಬಳೆ, ಇಬ್ಬರು ಅಲ್ಲಿಗೆ ಬಂದು ನನ್ನ ಸಂಗಡ ಜಗಳ ಮಾಡಿ ಲಕ್ಕಪ್ಪನು ನನಗೆ ಏ ರಂಡಿಮಗನೆ
ನಿನಗೆ ಇವತ್ತು ಜೀವ ಸಹಿತ ಬಿಡಂಗಿಲ್ಲಾ ನೀನು ನನ್ನ ಮಗನ ಮೇಲಕಟ್ಟಿ ಬಂದು ನಮಗೆ ಕೇಳತಿ ಅಂತಾ
ಬೈದು ನನಗೆ ತನ್ನ ಕೈಯಲ್ಲಿದ್ದ ಹಿಡಿಗಾತ್ರದ ಕಲ್ಲಿನಿಂದ ಜೋರಾಗಿ ಹೊಟ್ಟೆಗೆ ಹೊಡೆದನು ನಾನು
ಹೊಟ್ಟೆಗೆ ಗುಪ್ತಗಾಯವಾಗಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಲಕ್ಕಪ್ಪನು ನನಗೆ ಕೊಲೆ ಮಾಡುವ
ಉದ್ದೇಶದಿಂದ ಒಂದು ಬಂಡೆಕಲ್ಲು ನನ್ನ ತಲೆಯ ಮೇಲೆ ಎತ್ತಿ ಒಗೆದನು ಆಗ ನನ್ನ ತಲೆಗೆ ಗಂಬೀರ
ರಕ್ತಗಾಯವಾಗಿ ನಾನು ಒದ್ದಾಡುತ್ತಿದ್ದಾಗ ನಮ್ಮೂರಿನ ರವಿ @ ರವೀಂದ್ರ ತಂದೆ ತಿಪ್ಪಣ್ಣಾ ಹಾಗರಗಿ ಈತನು ಬಿಡಸಲು ಬಂದಾಗ ಲಕ್ಕಪ್ಪ ಆತನ ಹೆಂಡತಿ
ಶಶಿಕಲಾ ಇಬ್ಬರು ಆತನಿಗೆ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಲಕ್ಕಪ್ಪನು ರವಿಗೆ ರಂಡಿಮಗನೆ
ನಮ್ಮಿಬ್ಬರ ಜಗಳದಾ ನಿನಗೇನು ಕೆಲಸ ಅವರ ಮೇಲುಕಟ್ಟಿ ಬರತಿರಾ ಅಂತಾ ಬೈದು
ಹಿಡಿಗಲ್ಲಿನಿಂದ ಹಣೆಯ ಎಡಭಾಗಕ್ಕೆ ಹೊಡೆದು ಭಾರಿರಕ್ತಗಾಯ ಪಡಿಸಿದನು. ನಾನು ಒದ್ದಾಡುತ್ತಿದ್ದಾಗ
ಶಶಿಕಲಾ ಇವಳು ಇನ್ನೊಂದು ಕಲ್ಲು ಎತ್ತಿ ನನ್ನ ತಲೆಯ ಮೇಲೆ ಹಾಕುತ್ತಿದ್ದಾಗ ನಾನು
ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಲ್ಲು ನನ್ನ ಹೆಡಕಿನ ಮೇಲೆ ಬಿದ್ದು ಭಾರಿಗುಪ್ತಪೆಟ್ಟು
ಆಗಿರುತ್ತದೆ. ಆಗ ನಾನು ಒದ್ದಾಡುತ್ತಿದ್ದಾಗ ಇಬ್ಬರು ಸೇರಿ ನನ್ನ ಎರಡು ಕೈ ಮುಷ್ಠಿಗೆ
ಕಲ್ಲಿನಿಂದ ಜಜ್ಜಿ ರಕ್ತಗಾಯ ಪಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ
ನಗರ ಠಾಣೆ : ಶ್ರೀಮತಿ ಮಹಾದೇವಿ ಗಂಡ
ರಾಮಚಂದ್ರ ಅಪಚಂದ ಇವರ ಮಗಳಾಸ ಶ್ರೀಮತಿ ವಿಜಯಲಕ್ಷ್ಮಿ ಗಂಡ ತುಳಸಿರಾಮ ಬಂಡೆ ಸಾ|| ಸಂಗಮೇಶ್ವರ ಕಾಲೋನಿ ಕಲಬುರಗಿ ರವರು. ದಿನಾಂಕ; 20/03/2019
ರಂದು ರಾತ್ರಿ 9;30 ಪಿ.ಎಮ್ ಸುಮಾರಿಗೆ ಪ್ರತಿ ವರ್ಷದಂತೆ ಈ ವರ್ಷವು
ಸಹ ನಮ್ಮ ಓಣಿಯಲ್ಲಿ ಸಾರ್ವಜನಿಕವಾಗಿ ಹೋಳಿ ಹುಣ್ಣಿಮೆಯ ಹಬ್ಬದ ನಿಮಿತ್ಯ ಕಾಮದಹನ ಇದ್ದು ನಮ್ಮ
ತಾಯಿಯವರಾದ ಶ್ರೀಮತಿ ಮಹಾದೇವಿ ಗಂಡ ರಾಮಚಂದ್ರ ಅಪಚಂದ ಇವಳು ಕಾಮದಹನ ಕಟ್ಟಿಗೆಗಳಿಗೆ ಪೂಜೆ
ಮಾಢಲು ದೀಪ ಹಚ್ಚಿ ಪೂಜೆ ಮಾಡುತ್ತಿದ್ದಾಗ ಕಾಮದಹನಕ್ಕಾಗಿ ರೆಡಿಯಾಗಿದ್ದ ಕಟ್ಟಿಗೆಗಳ ಮೇಲೆ ನಮ್ಮ
ಓಣಿಯ ಗಣೇಶ ತಂದೆ ಸಂಜುಕುಮಾರ ಗಾಯಕವಡ ಇತನು ಕೈಯಲ್ಲಿ ಪೆಟ್ರೋಲ ತುಂಬಿದ ಬಾಟಲಿ ಹಿಡಿದುಕೊಂಡು
ನಿಂತಿದ್ದನು ನಾನು ಹಾಗೂ ನಮ್ಮ ತಾಯಿ ಮಹಾದೇವಿ ಇಬ್ಬರೂ ಗಣೇಶನಿಗೆ ದೀಪ ಹಚ್ಚಿದ್ದೇವೆ ಇನ್ನೂ
ಪೂಜೆ ಮಾಡುವದಿದೆ ಹಾಗೂ ಜನ ಬರುತ್ತಾರೆ ನೀನು ಪೆಟ್ರೋಲ ಹಾಕಬೇಡ ಅಂತಾ ಅಂದಾಗ ಸದರಿಯವನು ನಮ್ಮ
ಮಾತು ಕೇಳದೆ ಹಾಗೆಯೇ ತನ್ನ ಕೈಯಲ್ಲಿದ್ದ ಪೆಟ್ರೋಲನ್ನು ಕಾಮ ದಹನದ ಕಟ್ಟಿಗೆಯ ಮೇಲೆ ಉಗ್ಗಿದನು
(ಚಲ್ಲಿದನು) ಆಗ ಬುಗ್ಗನೆ ಬೆಂಕಿ ಎದ್ದಿತು ಮತ್ತೋಮೆ ಪೆಟ್ರೋಲ ಉಗ್ಗಿದ್ದು ಆಗ ಒಮ್ಮೇಲೆಗೆ
ಬೆಂಕಿ ಎದ್ದು ಪೂಜೆ ಮಾಡುತ್ತಿದ್ದ ನಮ್ಮ ತಾಯಿಯ ಬಟ್ಟೆಗೆ ಹತ್ತಿ ಮೈಯಲ್ಲಾ ಬೆಂಕಿ ಹತ್ತಿತ್ತು
ಅಲ್ಲೇ ಇದ್ದ ನಾನು ಹಾಗೂ ನನ್ನ ತಂಗಿ ಅಶ್ವಿನಿ, ತಮ್ಮ ರಾಹುಲ ಹಾಗೂ ಇತರರು ಕೂಡಿ ನಮ್ಮ ತಾಯಿಗೆ
ಹತ್ತಿದ್ದ ಬೆಂಕಿಯನ್ನು ಆರಿಸಿದೆವು ನಮ್ಮ ತಾಯಿಯ ಎರಡು ಕಾಲುಗಳಿಗೂ, ತೊಡೆಗಳಿಗೆ, ಹೊಟ್ಟೆ,
ಬೆನ್ನು, ಎದೆ ಹಾಗೂ ಎರಡು ಕೈಗಳಿಗೆ ಸುಟ್ಟಗಾಯ ಹಾಗೂ ಭಾರಿ ಸುಟ್ಟಗಾಯಗಳಾಗಿದ್ದು ನಾವು
ಕೂಡಲೆ ಖಾಸಗಿ ವಾಹನದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ವೈದ್ಯರ ಸಲಹೆಯಂತೆ
ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ದಿ:21/03/2019 ರಂದು ರಾತ್ರಿ ಸೇರಿಕೆ ಮಾಡಿದ್ದೇವೆ. ಕಾರಣ ನಮ್ಮ
ತಾಯಿ ಕಾಮ ದಹನದ ಸಲುವಾಗಿ ಪೂಜೆ ಮಾಡುತ್ತಿರುವಾಗ ಗಣೇಶ ಇತನಿಗೆ ಪೆಟ್ರೋಲ ಕಟ್ಟಿಗೆಯ ಮೇಲೆ
ಹಾಕಬೇಡ ಅಂದರೂ ಸಹ ಆತನು ಕೇಳದೆ ಅಲಕ್ಷ್ಯ ಮಾಡಿ ಕಟ್ಟಿಗೆಯ ಮೇಲೆ ಪೆಟ್ರೋಲ ಉಗ್ಗಿದ್ದು ಅದರಿಂದ
ದೀಪಕ್ಕೆ ಹಚ್ಚಿದ ಬೆಂಕಿ ಬುಗ್ಗನೆ ಉರಿದು ನಮ್ಮ ತಾಯಿಯ ಮೈ ಕೈಗೆ ಹತ್ತಿ ಸುಟ್ಟಗಾಯ ಹಾಗು ಭಾರಿ
ಸುಟ್ಟಗಾಯಗಳಾಗಿದ್ದು ಸದರಿ ಗಣೇಶನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment