Police Bhavan Kalaburagi

Police Bhavan Kalaburagi

Saturday, March 30, 2019

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ತಂದೆ ಮಲ್ಲಿನಾಥ ಪಾಟೀಲ್ ಸಾ|| ಮನೆ ನಂ 1-12/6, ಬಲಗಟ್ ಕಂಪೌಂಡ್, ಖೂಬಾ ಪ್ಲಾಟ್ ಕಲಬುರಗಿ ರವರದು  ಇಂಡಸ್ಟ್ರೀಯಲ್ ಏರಿಯಾದ 2ನೇ ಪೇಸ್ ನಲ್ಲಿ ಬೇಲೂರ ಕ್ರಾಸ್ ಎದುರಿಗೆ ಪ್ಲಾಟ್ ನಂ 200 ಮತ್ತು 203 ನೆದ್ದರಲ್ಲಿ ರಾಜೇಶ್ವರಿ ದಾಲ್ ಮಿಲ್ ಇರುತ್ತದೆ.  ದಿನಾಂಕ 28-03-2019 ರಂದು  ನಾನು ಸಂಜೆ 08-00 ಪಿ.ಎಮ್ ಸುಮಾರಿಗೆ ಮನೆಗೆ ಹೋಗುವಾಗ ನನ್ನ ಹತ್ತಿರ ಇದ್ದ ಹಣವನ್ನು ನಮ್ಮ ದಾಲ್ ಮಿಲ್ ಕಾರ್ಯಾಲಯದಲ್ಲಿರುವ ಟ್ರಜರಿಯಲ್ಲಿ  ರೂ 4,15,000/- ಇಟ್ಟು ಲಾಕ್ ಮಾಡಿ ನಂತರ ಬಾಗಿಲು ಲಾಕ್ ಮಾಡಿಕೊಂಡು ಮತ್ತು ವಿಶ್ರಾಂತಿ ಕೋಣೆ ಕೂಡಾ ಲಾಕ್ ಮಾಡಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ 29-03-2019 ರಂದು ಬೆಳಿಗ್ಗೆ 06-00 ಎ.ಎಮ್ ಸುಮಾರಿಗೆ ನಮ್ಮ ದಾಲ್ ಮಿಲ್ ದಲ್ಲಿರುವ ಇಸ್ಮಾಯಿಲ್ ಇತನು ಪೋನ್ ಮಾಡಿ ನಮ್ಮ ಕಾರ್ಯಾಲಯ ಮತ್ತು ವಿಶ್ರಾಂತಿ ಕೋಣೆ ಬಾಗಿಲ ಕೀಲಿ ಮತ್ತು ಕೊಂಡಿ ಮುರಿದು ಬಿದ್ದರುತ್ತವೆ, ಕಳ್ಳತನವಾದಂತೆ ಕಂಡು ಬರುತ್ತಿದೆ ಅಂತಾ ತಿಳಿಸಿದ ಮೇರೆಗೆ  ನಾನು ಮತ್ತು ನಮ್ಮ ತಂದೆ 06-30 ಎ.ಎಮ್ ಕ್ಕೆ  ಹೋಗಿ ನೋಡಲು ನಮ್ಮ ದಾಲ್ ಮಿಲ್ಲಿನ ಎಲ್ಲಾ ಕೆಲಸಗಾರರು ನೆರೆದಿದ್ದು, ನೋಡಲಾಗಿ ನಮ್ಮ ಕಾರ್ಯಾಲಯದ ಬಾಗಿಲ ಕೀಲಿ ಮುರಿದು ಬಿದ್ದಿದ್ದು ಒಳಗಡೆ ಹೋಗಿ ನೋಡಲು ಟ್ರಜರಿ ಬಾಗಿಲ ಮುರಿದು ಒಳಗಡೆಯ ಲಾಕರ್ ಮುರಿದು ಅದರಲ್ಲಿದ್ದ 415000/- ನಗದು ಹಣ ಕಳತನವಾಗಿರುತ್ತದೆ. ನಂತರ ಪಕ್ಕದಲ್ಲಿರುವ ವಿಶ್ರಾಂತಿ ಕೊಣೆಗೆ ಹೋಗಿ ನೋಡಲು ಅದರ ಬಾಗಿಲ ಮುರಿದು ಬೆಡ್ ರೂಮಿನಲ್ಲಿದ್ದ ಟ್ರಜರಿ ಬಾಗಿಲ ಮುರಿದು ಅದರಲ್ಲಿದ್ದ 2000/- ನಗದು ಹಣ ಮತ್ತು 5 ತೊಲೆ ಬೆಳ್ಳಿ ಗಣೇಶನ ಮೀರ್ತಿ ಕಳ್ಳತನವಾಗಿರುತ್ತವೆ. ದಿನಾಂಕ 28-03-2019 ರಂದು 08-00 ಪಿ.ಎಮ್ ದಿಂದ ದಿನಾಂಕ 29-03-2019 ರಂದು 06-00 ಎ.ಎಮ್ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ರಾಜೇಶ್ವರಿ ದಾಲ್ ಮಿಲನಲ್ಲಿನ ಕಾರ್ಯಾಲಯದ ಮತ್ತು ವಿಶ್ರಾಂತಿ ಕೊಣೆಯ ಬಾಗಿಲ ಕೀಲಿ ಮತ್ತು ಕೊಂಡಿ ಮುರಿದು ಒಳಗಡೆ ಇದ್ದ ಟ್ರಜರಿಗಳ ಬಾಗಿಲನ್ನು ಮುರಿದು ಅದರಲ್ಲಿದ್ದ 1) ನಗದು ಹಣ 4,17,000=00 ಮತ್ತು 2) 5 ತೊಲೆ ಬೆಳ್ಳಿಯ ಗಣೇಶನ ಮೂರ್ತಿ ಅ.ಕಿ. 1000/- ರೂ ಹೀಗೆ ಒಟ್ಟು 4,18,000/- ರೂಗಳ ಕಿಮ್ಮತ್ತಿನದು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ನಾಂಕ 29/03/2019 ರಂದು 8.30 ಪಿ.ಎಮಕ್ಕೆ ದಿನಾಂಕ 28/03/2019 ರಂದು 1.15 ಪಿ.ಎಮಕ್ಕೆ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ಕೈದಿಗಳಾದ 1) ವಿಕ್ರಮ ಪ್ರಸಾದ ತಂದೆ ಬಸವರಾಜ ಯು.ಟಿ.ಪಿ ನಂ 1059 2) ಶ್ರೀಶೈಲ ತಂದೆ ಸಾಗರ @ ಮಲ್ಲಿಕಾರ್ಜುನ ಯು.ಟಿ.ಪಿ ನಂ 7370 3) ಉಮೇಶ ತಂದೆ ಯಲ್ಲಪ್ಪ ಯು.ಟಿ.ಪಿ ನಂ 10861 4) ಬಾಬು @ ಬಾಬ್ಯಾ ತಂದೆ ಮೇಘು ರಾಠೋಡ ಯು.ಟಿ.ಪಿ ನಂ 10862 ಇವರುಲು ವಿಚಾರಣೆ ಕೈದಿಯಾದ ಗುರುರಾಜ ತಂದೆ ಶೇಷಪ್ಪ ಯು.ಟಿ.ಪಿ ನಂ 7587 ಇತನು ಇರುವ ಕೋಠಾಡಿ ನಂ 03 ಕ್ಕೆ ದುರುದ್ದೇಶದಿಂದ ಹೊಗಿ ಮನೊರಂಜನೆಗಾಗಿ ಕೊಟ್ಟ ಕ್ಯಾರಾಮ ಬೊರ್ಡನ್ನು ಮುರಿದು ಅದರ ಚೌಕಟ್ಟಿನಿಂದ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಶ್ರೀ ಕೃಷ್ಣಕುಮಾರ ಮುಖ್ಯ  ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: