ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ-10/04/2019
ರಂದು
ಬೆಳಿಗ್ಗೆ ಶಹಬಾದ ರಿಂಗ್ ರೋಡ ಹತ್ತಿರದ ವಿಜಯಕುಮಾರ ಪವಾರ ಇವರ ಪೆಟ್ರೋಲ ಬಂಕ್ ಹತ್ತಿರ
ನಿಲ್ಲಿಸಿದ ಎನ್.ಇ.ಕೆ.ಆರ್.ಟಿ ಸಿ ಬಸ್ ನಂ ಕೆಎ-32
ಎಫ್-1780 ನೇದ್ದ ರ ಮುಂದಿನ ಭಾಗಿಲಿನಿಂದ ಶ್ರೀ
ಶಿವಲಿಂಗಪ್ಪಾ ತಂದೆ ಬಸಣ್ಣ ಮಂಗಲಗಿ ಸಾ ಬಸವೇಶ್ವರ ಚೌಕ ಹತ್ತಿರ ಹಳೆ ಶಾಹಾಬಾದ ರವರ ಮಗನಾದ ಬಸವರಾಜ ವ:
17 ವರ್ಷ ಈತನು ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಾಗ ಬಸ್ ಚಾಲಕ ಅನೀಲ
ಈತನು ಅದನ್ನು ಗಮನಿಸದೆ ನಿಸ್ಕಳಜಿಯಿಂದ ತನ್ನ ಬಸನ್ನು ಅತಿವೇಗವಾಗಿ ಮುಂದಕ್ಕೆ ಚಲಾಯಿಸಿ
ಫಿರ್ಯಾದಿ ಮಗನಿಗೆ ಕೆಳಗೆ ಬಿಳಿಸಿ ಬಸ್ಸಿನ ಹಿಂದಿನ ಟೈರ್ ಆತನ ತೆಲೆ ಮೇಲಿಂದ ಹಾಯಿಸಿ ತೆಲೆಗೆ
ಮತ್ತು ಹಣೆಗೆ ಭಾರಿ ರಕ್ತಗಾಯಗೊಳಿಸಿದರಿಂದ ತೆಲೆಯಿಂದ ಮೆದಳು ಹೊರಗೆ ಬಂದು ಬಸವರಾಜ ಈತನು
ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಎನ್.ಇ.ಕೆ.ಆರ್.ಟಿ.ಸಿ ಬಸ್ ಚಾಲಕ ಅನೀಲ ಈತನ ಮೇಲೆ ಕಾನೂನು
ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ 2 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:11/04/2019 ರಂದು ಶ್ರೀ ವಿಠಲ ತಂದೆ ಶಾಮನಾಯ್ಕ ಸಾ : ವಿ.
ಕೆ. ಸಲಗರ ತಾಂಡಾಕ್ಕೆ ಹೊಂದಿಕೊಂಡೆ ನಮ್ಮ ಹೊಲ
ಇರುತ್ತದೆ. ನಾನು ದಿನಾಂಕ: 10/04/2019 ರಂದು ಬೆಳಿಗ್ಗೆ ನಮ್ಮ ಮನೆಯಿಂದ ಹೊಲದ
ಕಡೆಗೆ ಹೋದಾಗ ನಮ್ಮ ಬಂದಾರಿ ಮೇಲಿರುವ ಬಾರಿಗಿಡವನ್ನು ಯಾರೋ ಕಡಿದಿದ್ದು, ಕಂಡು ಬಂದಿರುತ್ತದೆ. ನಾನು ಬಂದಾರಿ
ಹತ್ತಿರ ಇರುವ ಮನೆಯವನಾದ ದಿಲೀಪ್ ತಂದೆ ಸುಭಾಷ ಚಿನ್ನಿರೋಢ ಈತನಿಗೆ ವಿಚಾರಿಸುತ್ತ ನಿಂತಾಗ ನಮ್ಮ
ಬಾಜು ಹೊಲದವನಾದ 1)ಸುನೀಲ್ @ ಸೋಮ್ಯಾ ತಂದೆ ಕಾನು ಚಿನ್ನಿರಾಠೋಡ್
ಹಾಗೂ ಅವನ ತಮ್ಮನಾದ 2)ಸತೀಶ ತಂದೆ ಕಾನು ಚಿನ್ನಿರಾಠೋಡ್ 3)ಶಾರದಾಬಾಯಿ ಗಂಡ ಕಾನು ಚಿನ್ನಿರಾಠೋಡ್
ಇವರು ಅಲ್ಲಿಗೆ ಬಂದರು ನಾನು ದಿಲೀಪನ ಜೊತೆ ಮಾತನಾಡುತ್ತಿರುವುದನ್ನು ಕೇಳಿ ನನಗೆ ಸುನೀಲ @ ಸೋಮ್ಯಾ ಈತನು ಏ ರಂಡಿ ಮಗನೆ ಗಿಡ
ಕಡಿದರೆ ನಿನಗೇನಾಯಿತು ಅಂತಾ ಬೈದನು ಆಗ ನಾನು ಹಾಗೆಲ್ಲಾ ಬೈಬೇಡಾ ಅಂತಾ ಹೇಳಿದಕ್ಕೆ ಸದರಿಯವನು
ನನಗೆ ಟೆಕ್ಕಿಯಲ್ಲಿ ತಗೆದಕೊಂಡು ಎತ್ತಿ ನೆಲಕ್ಕೆ ಬಡಿದನು ಸತೀಶನು ಕಲ್ಲಿನಿಂದ ಬೆನ್ನಮೇಲೆ
ಹೊಡೆದನು ಶಾರದಾಬಾಯಿ ಇವಳು ಈ ಹಾಟ್ಯಾ ಭಾಡಕೋಗ ಬಿಡಬ್ಯಾಡರಿ ಹೊಡಿರಿ ಅಂತಾ ಬೈದಳು ಈ ಘಟನೆಯನ್ನು
ದಿಲೀಪನು ನೋಡಿ ಬಿಡಿಸದನು ನನಗೆ ನನ್ನ ಹೆಂಡತಿ ಸೋನಾಬಾಯಿ ಮಗಳಾದ ಪೇಮಾಬಾಯಿ ಗಂಡ ಚಂದು ಜಾದವ್
ಇವರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನನಗೆ ಹಣೆಗೆ
ರಕ್ತಗಾಯ ವಾಗಿರುತ್ತದೆ. ಕಾರಣ ನನಗೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:11/04/2019 ರಂದು ಶ್ರೀ ದಾಮು ತಂದೆ ರಾಮು ರಾಠೋಡ
ಸಾ : ಮಡಕಿ ತಾಂಡಾ ರವರ ಹೆಂಡತಿಯ ತಮ್ಮನಾದ ರುಪೇಶ ತಂದೆ ನಾಮದೇವ ಪವಾರ ಸಾ:ಕಡಗಂಚಿಗತಾಂಡಾ
ಈತನಿಗೆ ಅದೇ ಗ್ರಾಮದ ಸವೀತಾ ಇವಳೊಂದಿಗೆ ಸುಮಾರು 18 ವರ್ಷಗಳ ಹಿಂದೆ ಮದುವೆಯಾಗಿ ನಾಲ್ಕು ಮಕ್ಕಳಿರುತ್ತವೆ. ಸವಿತಾ ಇವಳು ಮದುವೆ
ಆದಾಗನಿಂದ ರೂಪೇಶನೊಂದಿಗೆ ಆಗಾಗ ಜಗಳ ತಗೆದು ತನ್ನ ತವರು ಮನೆಗೆ ಹೋಗುವುದು ಮತ್ತೆ ಸ್ವಲ್ಪ
ದಿನಗಳ ನಂತರ ಗಂಡನೊಂದಿಗೆ ಬರುವುದು ಮಾಡುತ್ತಾ ಬಂದಿರುತ್ತಳೆ ಕಳೆದ ನಾಲ್ಕು ತಿಂಗಳ ಹಿಂದೆ
ಮತ್ತೆ ಜಗಳ ಮಾಡಿ ತನ್ನ ತವರು ಮನೆಯಲ್ಲಿ ಹೋಗಿ ಕುಳಿತಿರುತ್ತಾಳೆ. ರೂಪೇಶನು ಹೊಟ್ಟೆಪಾಡಿಗಾಗಿ
ಮುಂಬೈ ನಗರದಲ್ಲಿ ವಾಸಿಸುತ್ತಿದ್ದನು ಅವನಿಗೆ ಅಡುಗೆ ಮಾಡಲು ಯಾರು ಇಲ್ಲದ ಕಾರಣ ಹೇಗಾದರು ಮಾಡಿ
ತನ್ನ ಹೆಂಡತಿಗೆ ತನ್ನ ಸಂಗಡ ಕರೆದುಕೊಂಡು ಹೋಗಬೇಕು ಅಂತಾ ಸುಮರು 2ದಿವಸಗಳ ಹಿಂದೆ ಮಡಕಿತಾಂಡಾಕ್ಕೆ ಬಂದಿರುತ್ತಾನೆ.
ಹೀಗಾಗಿ ದಿನಾಂಕ:10/04/2019 ರಂದು ಮಡಿಕಿತಾಂಡಾದಿಂದ ನಾನು ರುಪೇಶ
ಶಾಂತಾಬಾಯಿ ಗಂಡ ರೇಖು ರಾಠೋಡ್,
ಬಾಬು ತಂದೆ
ಅಂಬ್ರು ರಾಠೋಡ್, ವಿಕ್ಕಿ ತಂದೆ ರೇಖು ರಾಠೋಡ್ ಎಲ್ಲರೂ
ಸೇರಿ ಕಡಗಂಚಿ ತಾಂಡಾಕ್ಕೆ ಬಂದು ಸವಿತಾ ಇವಳಿಗೆ ಮನವಲಿಸಿ ಗಂಡ ಹೆಂಡತಿ ಒಂದು ಮಾಡಲು ಅಂತಾ ಬಂದು
ಕಡಗಂಚಿ ತಾಂಡಾದ ನಾಯಕರಾದ ಲಕ್ಷ್ಮಣ ತಂದೆ ಸೂರ್ಯ ಚವ್ಹಾಣ್ ಇವರಿಗೆ ತಾಂಡಾದ ದುಬೇಶ ತಂದೆ ರೇವು
ಚವ್ಹಾಣ್ ಇವರ ಹೊಟೆಲ್ ಮುಂದೆ ಕರೆಸಿ ನ್ಯಾಯಾ ಪಂಚಾಯಿತಿ ಮಾಡಿ ಸವಿತಾ ಹಾಗೂ ಅವಳ ಮನೆಯವರಿಗೆ
ತಿಳುವಳಿಕೆ ಹೇಳಲು ಕೇಳಿಕೊಳ್ಳುತ್ತಿದ್ದಾಗ, 1)ನಾಮದೇವ ತಂದೆ ಪಾಂಡು ರಾಠೋಡ್, 2)ರವಿ ತಂದೆ ನಾಮದೇವ ರಾಠೋಡ್, 3)ಮಂಗಲಾ ತಂದೆ ಪಾಂಡು ರಾಠೊಡ್, 4)ರಾಜೇಶ ತಂದೆ ನಾಮದೇವ ರಾಠೋಡ್, 5)ಸಾವನ ತಂದೆ ನಾಮದೇವ ರಾಠೋಡ್, 6)ಸುಮ್ಮಿ @
ಸುನೀತಾ ಗಂಡ
ನಾಮದೇವ ರಾಠೋಡ್, 7)ಸವಿತಾ ಗಂಡ ರೂಪೇಶ ಪವಾರ ಇವರು ನಾವು
ಕಡಗಂಚಿ ಕಡಗಂಚಿ ತಾಂಡಾಕ್ಕೆ ಬಂದ ವಿಚಾರ ತಿಳಿದುಕೊಂಡು ಒಮ್ಮಲೇ ಗುಂಪುಕಟ್ಟಿಕೊಂಡು ಅಲ್ಲಿಗೆ
ಬಂದು ಎಲ್ಲರೂ ಏ ರಂಡಿ ಮಕ್ಕಳ್ಯಾ ಏನ ಪಂಚಾಯಿತಿ ಮಾಡತಿರಿ ಸೆಂಟಾ ಅಂತಾ ಬೈದು ನನಗೆ ನಾಮದೇವನು
ಕಲ್ಲಿನಿಂದ ಬಲಗಣ್ಣಿನ ಮೇಲ್ಭಾಗ ಹೊಡೆದು ರಕ್ತಗಾಯ ಪಡಿಸಿದನು. ರವಿ ಈತನು ಕಲ್ಲಿನಿಂದ ಸೊಂಟಕ್ಕೆ
ಹೊಡೆದನು ಮಂಗಲಾ ಹಾಗೂ ರಾಜೇಶ ಇಬ್ಬರು ರಂಡಿಮಕ್ಕಳ್ಯಾ ನೀನು ರೂಪೇಶನ ಮೇಲ ಕಟ್ಟಿ ಬಂದಿರಿ ನಿಮಗ
ಇಡಂಗಿಲ್ಲಾ ಅಂತಾ ಬೈದು ನನಗೆ ಟೆಕ್ಕಿಯಲ್ಲಿ ಹಿಡಿದು ಎತ್ತಿ ನೆಲಕ್ಕೆ ಕೆಡವಿದರು. ಇದನ್ನು ನೋಡಿ
ಬಿಡಿಸಲು ಬಂದ ರೂಪೇಶನಿಗೆ ನಾಮದೇವ, ರವಿ, ಸಾವನ್ ಇವರು ಎಳೆದಾಡಿ ಕೈಯಿಂದ ತಲೆಯ
ಹೊಟ್ಟೆ ಬೆನ್ನಿಗೆ ಗುದ್ದುತ್ತಿದ್ದರು ಆಗ ಸುಮ್ಮಿ ಹಾಗೂ ಸವಿತಾ ಇವರು ಈ ರಂಡಿಮಕ್ಕಳಿಗೆ ಜೀವ
ಸಹಿತಾ ಬಿಡಬ್ಯಾಡರಿ ಅಂತಾ ಭಯ ಪಡಿಸುತ್ತಿದ್ದಾಗ ಲಕ್ಷ್ಮಣ ತಂದೆ ಸೂರ್ಯನಾಯಕ, ದುಬೇಶ ತಂದೆ ರೇವು ಚವ್ಹಾಣ್, ರೇವು ತಂದೆ ರಾಮು ಚವ್ಹಾಣ್ ಇವರು ಜಗಳ
ನೋಡಿ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ಗುರುಬಾಯಿ ಗಂಡ ಆನಂದ ಜಂಗಲೆ ಸಾ; ಭಿಮ ನಗರ ಆಳಂದ ತಾ; ಆಳಂದ ರವರು ತಮ್ಮ
ಭಾವನಾದ ಅಣ್ಣಪ್ಪ ತಂದೆ ಲಕ್ಷ್ಮಣ ಜಂಗಲೆ ಇವರು ನಮ್ಮ ಫಿತ್ರಾರ್ಜಿತ ಮನೆಯ ಜಾಗೆ ಹಂಚಿಕೆ ವಿಷಯದಲ್ಲಿ ಸುಮಾರು ದಿನಗಳಿಂದ ನಮ್ಮೊಂದಿಗೆ ವೈಮನಸ್ಸು
ಮಾಡಿಕೊಂಡಿದ್ದು ಸದ್ಯೆ ಅಣ್ಣಪ್ಪ ಇವರು ತಮ್ಮ ಪಾಲಿಗೆ ಬಂದ ಜಾಗೆದಲ್ಲಿ ಮನೆ ಕಟ್ಟಡ
ಮಾಡುತ್ತಿದ್ದು, ನಮ್ಮ ಪಾಲಿಗೆ ಬಂದ ಜಾಗೆಯಲ್ಲಿ ಪತ್ರಾದ ಮನೆಯಲ್ಲಿ ವಾಸವಾಗಿದ್ದು ಕಾರಣ ನನ್ನ ಗಂಡನು ನಮ್ಮ ಭಾವನಿಗೆ ನಮ್ಮ ಪಾಲಿಗೆ ಬಂದ
ಮನೆ ಜಾಗೆಯವನ್ನು ಖಾಲಿ ಮಾಡಲು ಸುಮಾರು ದಿನಗಳಿಂದ ಹೇಳುತ್ತಾ ಬಂದಿದ್ದರಿಂದ ವೈಮನಸ್ಸು
ಮಾಡಿಕೊಂಡಿದ್ದು ದಿನಾಂಕ 10/04/2019 ರಂದು ನಾನು ನಮ್ಮ ಮನೆಯ ಮುಂದಿನ
ರಸ್ತೆಯ ಮೇಲೆ ಗುಂಡಪ್ಪ ತಂದೆ ಲಕ್ಷ್ಮಣ ಜಂಗಲೆ ಇವರ ಜೋತೆಯಲ್ಲಿ ನಮ್ಮ ಮನೆಯ ಜಾಗದ ವಿಷಯು
ಕುರಿತು ಮಾತನಾಡುತ್ತಾ ನಿಂತಾಗ ನನ್ನ ಹಿಂದಿನಿಂದ ಅಣ್ಣಪ್ಪ ಜಂಗಲೆ ಇವರು ಓಡಿ ಬಂದನೇ ಏ ರಂಡಿ
ನಮ್ಮ ಜಾಗೆ ಕೇಳಲು ನೀನು ಯಾರು ಅಂತಾ ಬೈಯುತ್ತಾ ಸಲಕಿಯಿಂದ ತಲೆಯ ಮೇಲೆ ಹೊಡೆದಿದ್ದು ಭಾರಿ
ರಕ್ತಸ್ರಾವವಾಗಿ ತಲೆ ಸುತ್ತ ಬಂದು ಭಾರಿ ರಕ್ತಗಾಯ ಮಾಡಿದ್ದು, ನೀನು ಇನ್ನೋಮ್ಮೆ ನಮ್ಮ ಜಾಗದ
ವಿಷಯದಲ್ಲಿ ಬಂದರೇ ನೀನ್ನ ಜೀವ ಸಹಿತ ಖಲಾಸ ಮಾಡುತ್ತೇನೆ ಅಂತಾ ಬೈಯುತ್ತಿರುವಾಗ ಗುಂಡಪ್ಪ ಜಂಗಲೆ, ಚಂದ್ರು ತಂದೆ ಗುಂಡಪ್ಪ ಜಂಗಲೆ ಮತ್ತು
ನನ್ನ ಗಂಡ ಮನೆಯೊಳಗಿನಿಂದ ಓಡಿ ಬಂದು ಜಗಳವನ್ನು ಬಿಡಿಸಿದ್ದು ಆಗ ನನ್ನ ಗಂಡನಿಗೆ ಏ ರಂಡಿ ಮಗನೇ
ನೀನ್ನ ಹೆಂಡತಿಗೆ ಸರಿಯಾಗಿ ಹೇಳು ಇನ್ನೋಮ್ಮೆ ನನ್ನ ಹೆಸರಿಗೆ ಬಂದರೆ ನೀನಗೆ ಮತ್ತು ನೀನ್ನ
ಹೆಂಡತಿ ಖಲಾಸ ಮಾಡುತ್ತೇನೆ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ
ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ
ಠಾಣೆ : ಶ್ರೀಮತಿ
ಲಲಿತಾ ಗಂಡ ನಾಗೇಂದ್ರ ಕಡಪಾ ಸಾ: ನ್ಯೂ ಬಸ್ಸ ಸ್ಟ್ಯಾಂಡ ರೋಡ ಆಳಂದ ರವರ ಅತ್ತೆ ಮಾವನವರಿಗೆ
ನನ್ನ ಗಂಡ ನಾಗೇಂದ್ರ & ಚಂದ್ರಕಾಂತ, ಶಶಿಕಾಂತ ಅಂತಾ ಮೂರು ಜನರು ಗಂಡು
ಮಕ್ಕಳಿದ್ದು ಮತ್ತು ಉಮಾದೇವಿ ಮತ್ತು ರಮಾದೇವಿ ಅಂತಾ ಎರಡು ಜನ ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು, ಅವರು ತಮ್ಮ ಗಂಡನ ಮನೆಯಲ್ಲಿ
ವಾಸವಾಗಿರುತ್ತಾರೆ, ಮತ್ತು
ನಮ್ಮ ಮನೆಯಲ್ಲಿ ನಾನೇ ಹಿರಿಯ ಮಗನಿದ್ದು, ನನ್ನ ಮೈದುನಾದ ಶಶಿಕಾಂತ ಇತನು ನಮಗೆ ಸುಮಾರು ಮೂರು ತಿಂಗಳಿಂದ ಮನೆಗಳ
ಹಂಚಿಕೆ ವಿಚಾರದಲ್ಲಿ ನಮ್ಮೊಂದಿಗೆ ತಕರಾರು ಮಾಡಿದ್ದರಿಂದ ನಾನು & ನನ್ನ ಗಂಡ ಕುಟುಂಬ ಸಮೇತ ಬೇರೆ ಕಡೆಗೆ
ಬಾಡಿಗೆ ಮನೆ ಮಾಡಿಕೊಂಡು ಆಳಂದ ಪಟ್ಟಣದಲ್ಲಿಯೇ ವಾಸವಾಗಿದ್ದು, ಮತ್ತು ನನ್ನ ಗಂಡನ ನಮ್ಮ ಮಾವನವರ ಹತ್ತೀರ ಈ
ಒಂದು ವರ್ಷದ ಹಿಂದೆ ಒಂದು ಪ್ಲಾಟ ತಗೆದುಕೊಳ್ಳಲು ಕೈಗಡ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳು
ಹಣವನ್ನು ಪುನಃ ವಾಪಸ್ಚಸ ಕೊಡುತ್ತೇನೆ ಅಂತಾ ತಗೆದುಕೊಂಡಿದ್ದು, ಸದರಿ ಹಣದ ವ್ಯವಹಾರ ಬಗ್ಗೆ ಶಶಿಕಾಂತ ಇವರು
ನಮ್ಮ ಮಾವನವರಿಂದ ತಿಳಿದುಕೊಂಡು ಮೂರು ತಿಂಗಳಿಂದ ನಮ್ಮೊಂದಿಗೆ ವೈಮನಸ್ಸು ಮಾಡಿಕೊಂಡಿದ್ದು ದಿನಾಂಕ
11/04/2019
ರಂದು ಎಂದಿನಂತೆ ಬಾಡಿಗೆ ಮನೆಯಿಂದ ನನ್ನ ಗಂಡನು ದುಕಾನ ಹೊಗಲು ನಮ್ಮ ಮನೆಯ ಮುಂದಿನ ರಸ್ತೆಯ
ಮೇಲೆ ಹೊಗುತ್ತಿರುವಾಗ ಮೈದುನ ಶಶಿಕಾಂತ ಇತನು ಓಡಿ ಬಂದವನೇ ನನ್ನ ಗಂಡನಿಗೆ ಏ ರಂಡಿ ಮಗನೇ
ಎಲ್ಲಿಗೆ ಹೊಗುತ್ತಿದ್ದಿ ಅಪ್ಪಾನ ಹತ್ತೀರ ತಗೆದುಕೊಂಡ ಒಂದು ಲಕ್ಷ ರೂಪಾಯಿಗಳು ಯಾವಾಗ ಕೊಡುತ್ತೀ
ಭಾ ನೀ ದುಕಾನ ಅಂತಾ ಅವಾಚ್ಚ ಶಬ್ದಗಳಿಂದ ಬೈಯುತ್ತಿರುವಾಗ ನಾನು ಶಶಿಕಾಂತ ಇವರಿಗೆ ಯಾಕೆ
ಸುಮ್ಮನೇ ನನ್ನ ಗಂಡನಿಗೆ ಬೈಯುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಏ ರಂಡಿ ನೀನು ನಮ್ಮ ವಿಷಯದಲ್ಲಿ
ಕೇಳಲು ಬರುತ್ತೀ ಭೊಸಡಿ ಅಂತಾ ಬೈದು ಕೈಯಿಂದ ಕಪಾಳದ ಮೇಲೆ ಹೊಡೆದು, ಮೈ ಮೇಲಿನ ಸೀರೆ ಹಿಡಿದು ಜೊಗ್ಗಿ ಅವಮಾನಿಸಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ
ಠಾಣೆ : ಶ್ರೀ.ಶಂಕರರಾವ ತಂದೆ ನಾಗಪ್ಪ ಕಡಪಾ
ಸಾ:ಕೊಟಿಗಲ್ಲಿ ಆಳಂದ ರವರಿಗೆನಾಗೇಂದ್ರ, ಚಂದ್ರಕಾಂತ ಮತ್ತು ಶಶಿಕಾಂತ ಅಂತಾ ಮೂರು ಜನ ಗಂಡು ಮಕ್ಕಳಿದ್ದು, ಉಮಾದೇವಿ & ರಮಾದೇವಿ ಅಂತಾ ಎರಡು ಜನ ಹೇಣ್ಣು
ಮಕ್ಕಳಿದ್ದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಗಂಡು ಮಕ್ಕಳು ತಮ್ಮ ತಮ್ಮ ಹೆಂಡತಿ
ಮಕ್ಕಳೊಂದಿಗೆ ವಾಸವಾಗಿರುತ್ತಾರೆ ನನ್ನ ಹಿರಿಯ ಮಗನಾದ ನಾಗೇಂದ್ರ ಇತನು ನನ್ನ ಹತ್ತೀರ ಸುಮಾರು
ಒಂದು ವರ್ಷದ ಹಿಂದೆ ಪ್ಲಾಟ ತಗೆದುಕೊಳ್ಳಲು ಒಂದು ಲಕ್ಷ ರೂಪಾಯಿಗಳು ತಗೆದುಕೊಂಡಿದ್ದು ಸದರಿ
ಹಣವು ನನಗೆ ವಾಪಸ್ಸ ಒಂದು ವರ್ಷದಲ್ಲಿ ಕೊಡಬೇಕಾಗಿತ್ತು ಆದರೆ ಸದರಿ ಹಣವನ್ನು ಇಲ್ಲಿಯವರೆಗೆ
ವಾಪಸ್ಸ ಕೊಟ್ಟಿರುವದಿಲ್ಲ, ಹೀಗಿದ್ದು
ಇಂದು ದಿನಾಂಕ 11/04/2019 ರಂದು
ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನನ್ನ ಮಗ ನಾಗೇಂದ್ರ ಇತನು ನನಗೆ ಕೊಡಬೇಕಾದ ಒಂದು ಲಕ್ಷ ರೂಪಾಯಿಗಳು
ಹಣದ ವಿಷಯಲ್ಲಿ ನನ್ನೊಂದಿಗೆ ತಕರಾರು ಮಾಡಿ ನಾನು ನೀನಗೆ ಹಣ ಕೊಡುವದಿಲ್ಲ, ನೀನು ನನಗೆ ಮನೆ & ಹಣ ಕೊಡು ರಂಡಿ ಮಗನೇ ಭೊಸಡಿ ಮಗನೇ ಅಂತಾ
ಅವಾಚ್ಚ ಶಬ್ದಗಳಿಂದ ಬೈದು ನೀನು ಇನ್ನೋಮ್ಮೆ ಹಣ ಕೇಳಿದರೆ ನೀನ್ನ ಜೀವ ಸಹಿತ ಖಲಾಸ ಮಾಡುತ್ತೇನೆ
ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಆಳಂದ
ಠಾಣೆ : ಶ್ರೀ ಬಾಲಾಜಿ ತಂದೆ ರಾಮು ಕೋಳಿ ಸಾ|| ಖಜೂರಿ ರವರು ದಿನಾಂಕ 11/04/2019 ರಂದು ತಮ್ಮೂರಿನ
ಸರಕಾರಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಮುಂದಿನ ರೋಡಿನ ಮೇಲೆ ಬರುತ್ತಿರುವಾಗ ನನ್ನ ಎದುರಿನಿಂದ
ನಮ್ಮೂರಿನಿಂದ ಸಿದ್ದಪ್ಪ ತಂದೆ ಶ್ರೀಮಂತ ಗೌಂಡಿ ಇತನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು
ಬಂದವನೇ ನನ್ನ ಎದೆಯ ಮೇಲಿನ ಅಂಗ್ಗಿ ಹಿಡಿದು ಜೋಗ್ಗಿ ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ ಏ
ರಂಡಿ ಮಗನೇ ನೀನಗೆ ನೀನ್ನೆ ರಾತ್ರಿ ಫೋನ ಮಾಡಿ ಬರಲು ಹೇಳಿದರು ಬರಲ್ಲಾ ಭೋಸಡಿ ಮಗನೇ ಅಂತಾ
ಬೈಯುತ್ತಾ ಕೊಡಲಿಯಿಂದ ನನ್ನ ತಲೆಯ ಮೇಲೆ ಎರಡು ಬಾರಿ ಹೊಡೆದು ಭಾರಿ ಗಾಯ ಮಾಡಿದ್ದು ಆಗ ಅಲ್ಲೆ
ರಸ್ತೆಯ ಮೇಲೆ ಹೊಗುತ್ತಿದ್ದ 1) ಲಕ್ಷ್ಮಣ
ತಂದೆ ಮಲ್ಕಪ್ಪ ಕೋಳಿ, 2) ಮಹಾದೇವ
ತಂದೆ ಲಕ್ಷ್ಮಣ ಕೋಳಿ, 3) ಶ್ರೀಮಂತ
ತಂದೆ ನಿಂಗಪ್ಪ ಜವಳಿಗಿ ರವರುಗಳು ಬಂದು ಜಗಳವನ್ನು ನೋಡಿ ಬಿಡಿಸಿರುತ್ತಾರೆ ನಂತರ ನನಗೆ ನನ್ನ
ತಾಯಿ ತಂದೆಯವರು ಉಪಚಾರ ಕುರಿತು ಸರಕಾರಿ ಬಸ್ಸಿನಲ್ಲಿ ಆಳಂದ ಕ್ಕೆ ಬಂದು ಸರಕಾರಿ ಆಸ್ಪತ್ರೆ
ಆಳಂದ ಕ್ಕೆ ಒಯ್ದು ಸೇರಿಕೆ ಮಾಡಿ ಉಪಚಾರ ಪಡೆದುಕೊಂಡಿದ್ದು,
ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಚ
ಶಬ್ದಗಳಿಂದ ಬೈದು ಕೊಡಲಿಯಿಂದ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದ
ಸಿದ್ದಪ್ಪ ತಂದೆ ಶ್ರೀಮಂತ ಗೌಂಡಿ ಇತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment