Police Bhavan Kalaburagi

Police Bhavan Kalaburagi

Saturday, May 18, 2019

KALABURAGI DIST REPORTED CRIMES


ರಾಘವೇಂದ್ರ ನಗರ ಠಾಣೆ:
ಕಳವು ಪ್ರಕರಣ: ಶ್ರೀ ವೀರಶೇಟ್ಟಿ ತಂದೆ ಮಾಣಿಕರಾವ ಪಾಟೀಲ ಸಾಃ ವಿಶ್ವರಾದ್ಯ ಕಾಲೋನಿ  ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕಃ 14.05.2019 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ನಮ್ಮ ಮನೆಗೆ ಸರಿಯಾಗಿ ಬಾಗಿಲಗಳಿಗೆ ಚಿಲಕ ಹಾಕಿಕೊಂಡು ನಮ್ಮ ಮನೆಯ ಮೇಲಗಡೆ ಮಲಗಿ ಕೊಂಡಿರುತ್ತೇವೆ. ಮದ್ಯ ರಾತ್ರಿ ಅಂದರೆ ದಿನಾಂಕಃ 15.05.2019 ರಂದು 03.00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವರಾದ ಸಂತೋಷ ತಂದೆ ಬಸವರಾಜ ಪಾಟೀಲ ಇವರು ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾರೋ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಚಿಲಕ ಮುರಿಯುತ್ತಿರುವದನು ನೋಡಿ  ನಮ್ಮಗೆ ಬಂದು ಎಬ್ಬಿಸಿದ್ದಾಗ ನಾವು ಹೋಗಿ ನೋಡುವಷ್ಟರಲ್ಲೆ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೀಲಿ ಮುರಿದ್ದು  ಮನೆಯಲ್ಲಿರುವ ಅಲಮಾರ ಮುರಿದ್ದು ಅಲಮಾರಿಯಲ್ಲಿಟ್ಟಿರುವ 1) ಒಂದು ಬಂಗಾರದ ಲಾಕೇಟ್ 07 ಗ್ರಾಂ ಅಃಕಿಃ 21,000, 2) ಮೂರು  ಉಂಗುರುಗಳು 9 ಗ್ರಾಂ ಅಃಕಿಃ 18,000, 3) ಎರಡು ಜೊತೆ ಕಿವಿಯೋಲೆ 10 ಗ್ರಾಂ ಅಃಕಿಃ 30,00, 4) ಒಂದು ಬಂಗಾರದ ಪದಕ 1 ಗ್ರಾಂ ಅಃಕಿಃ 3000, 5) ಬೆಳ್ಳಿಯ ಉಡದಾರ 2 ತೋಲೆ ಅಃಕಿಃ 600 ರೂ, 6) ಬೆಳ್ಳಿಯ ಖಡಗ್ಗ 2 ತೋಲೆ 5 ಗ್ರಾಂ ಅಃಕಿಃ 700, ಇತರೆ ಬೆಳ್ಳಿಯ ಸಾಮಾನಗಳು  5 ತೋಲೆ 5 ಗ್ರಾಂ ಅಃಕಿಃ 1500 ರೂ, 1500 ನಗದು ಹಣ ಹೀಗೆ ಒಟ್ಟು 2 ತೋಲೆ 7 ಗ್ರಾಂ ಬಂಗಾರದ ಆಭರಣ ಅಃಕಿಃ 72,000 ರೂ ಹಾಗೂ 10 ತೋಲೆ ಬೇಳ್ಳಿ ಆಬರಣಗಳು ಅಃಕಿಃ 2800 ರೂ ಮತ್ತು ನಗದು ಹಣ 1500 ರೂ  ಎಲ್ಲಾ ಸೇರಿ 76,300 ರೂ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ನಮ್ಮ ವಸ್ತಗಳು ನಮ್ಮ ದೂರಕಿಸಿಕೊಡುವಂತೆ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ : ದಿನಾಂಕ:17/05/2019 ರಂದು ಶ್ರೀಮತಿ ಸುರೇಖಾ ಗಂಡ ಅನೀಲ್ ಚವ್ಹಾಣ್ ಸಾ:ನರೋಣಾ ತಾಂಡಾ ನಂ-1 (ಕುಶಪ್ಪನತಾಂಡಾ) ಇವರು ಠಾಣೆಗೆ ಹಾಜರಾಗಿ ನನ್ನ ಗಂಡ ಅನೀಲ್ ತಂದೆ ಟೀಕು ಚವ್ಹಾಣ್ ಇವರು ಇಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಅಂತಾ ಬೋದನ ಗ್ರಾಮಕ್ಕೆ ಹೋಗಿರುತ್ತಾರೆ. ನಾನು ಮತ್ತು ನನ್ನ ಮಗಳಾದ ಅಂಜಲಿ ಇಬ್ಬರು ನಮ್ಮ ಮನೆಯ ಹತ್ತಿರ ಇರುವ ಗಣಪತಿ ಚವ್ಹಾಣ್ ಇವರ ಮನೆಯ ಪಕ್ಕದಲ್ಲಿ ಬ್ಯಾರಲನಲ್ಲಿ ಸಂಗ್ರಹಿಸಿ ಇಟ್ಟಿದ್ದ, ಟ್ಯಾಂಕರ್ ನೀರು ತರಲು ಹೋಗಿರುತ್ತೇವೆ. ನಾನು ಮತ್ತು ನನ್ನ ಮಗಳು ನೀರು ತಗೆದುಕೊಂಡು ನಮ್ಮ ಮನೆ ಕಡೆಗೆ ಬರುತ್ತಿರುವಾಗ ತಾಂಡಾದೋಳಗಿನಿಂದ ವಿಷ್ಣು ತಂದೆ ಮೋತಿರಾಮ್ ರಾಠೋಡ್ ಇವನು ತನ್ನ ಮೊಟಾರ್ ಸೈಕಲ್ ನಂಬರ್ ಕೆಎ32ಇಟಿ2771 ನೇದ್ದನ್ನು ಅತೀವೇಗ ದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳು ಅಂಜಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಅಂಜಲಿ ಇವಳ ತಲೆಗೆ ಭಾರಿ ಒಳಪೆಟ್ಟಾಗಿ ಬಾಯಿ ಯಿಂದ ಕವಿ ಯಿಂದ ಮೂಗಿನಿಂದ ರಕ್ತ ಹೊರಬಂದು ಒದ್ದಾಡುತ್ತಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ಕಾರಣ ನನ್ನ ಮಗಳು ಅಂಜಲಿಗೆ ಮೊಟಾರ್ ಸೈಕಲ್ ಅಪಘಾತ ಪಡಿಸಿ ಓಡಿ ಹೋದ ವಿಷ್ಣು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ಪೊಲೀಸ್ ಠಾಣೆ:
ಸುಲಿಗೆ ಪ್ರಕರಣ: ದಿನಾಂಕ: 17/05/2019 ರಂದು ಶ್ರೀ ಶರಣಯ್ಯ ತಂದೆ ಶಿವಕುಮಾರ ಮಠಪತಿ ಸಾ: ಡೊಣ್ಣೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 16/05/2019 ರಂದು ಕಲಬುರಗಿ ನಂದಿನಿ ಕೆ ಎಮ್ ಫ ಅಪೀಸದಿಂದ ನಂದಿನಿ ಹಾಲು ಮತ್ತು ಇತರೆ ನಂದಿನಿ ಸಾಮಗ್ರಿಗಳನ್ನು 407 ಟೆಂಪೊ ನಂಬರ ಕೆ ಎ 25 ಬಿ 5758 ನೇದ್ದರಲ್ಲಿ  ಹಾಕಿಕೊಂಡು ಸೇಲ್ಸಮ್ಯಾನ ಶರಣಯ್ಯ ಸ್ವಾಮಿ ಇತನೊಂದಿಗೆ ಶಹಾಬಾದ ಮಾರ್ಗವಾಗಿ ಯಾದಗೀರಿಗೆ ಹೋಗಿ ಹಾಲು ಮತ್ತು ಮೊಸರು ಸರಬರಾಜು ಮಾಡಿ ನಂದಿನಿ ಪಾರ್ಲರ ಮತ್ತು ಏಜೆನ್ಸಿರವರಿಂದ ಕಲೇಕ್ಷನ ಹಣ  ಹೀಗೆ ಒಟ್ಟು 108499/- ರೂಪಾಯಿಗಳನ್ನು ಒಂದು ಬ್ಯಾಗನಲ್ಲಿ ಹಾಕಿಕೊಂಡು ಯಾದಗೀರಿಯಿಂದ ವಾಡಿ ಶಹಾಬಾದ ಮಾರ್ಗವಾಗಿ ಕಲಬುರಗಿಗೆ ಹೋಗುತ್ತಿದ್ದಾಗ ಭಂಕೂರ ಕ್ರಾಸ ದಾಟಿ ಮುಂದೆ  ಹೋಗುತ್ತಿದ್ದಾಗ ಇಂದು ನಮ್ಮ ಹಿಂದುಗಡೆಯಿಂದ  ಎರಡು ಮೋಟಾರ ಸೈಕಲಗಳ ಮೇಲೆ  ನಾಲ್ಕು ಜನರು ಬಂದು ನಮ್ಮ 407 ಟೆಂಪೋ ವಾಹನಕ್ಕೆ ತಡೆದು ನನಗೆ ಮತ್ತು ಚಾಲಕ ಬಸವರಾಜ ಹುಂಡೇಕರಗೆ ಹಿಡಿದು ಎಳೆದಾಡಿ ನಮಗೆ ಹೊಟ್ಟೆಗೆ ಮತ್ತು ಬೆನ್ನಿಮೇಲೆ ಮತ್ತು ಮುಖದ ಮೇಲೆ ಹೊಡೆದು ನನ್ನ ಹತ್ತಿರ ಇದ್ದ ಹಣದ ಬ್ಯಾಗ ಹಾಗೂ ನನ್ನ ಮೊಬೈಲ ಮತ್ತು ನನ್ನ ಡ್ರೈವರನ ಮೊಬೈಲಕಸಿದುಕೊಂಡು ಅವರು ತಂದಿರುವ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಕಲಬುರಗಿಗೆ ಕಡೆಗೆ ಓಡಿ ಹೋದರು ಗಾಬರಿಯಲ್ಲಿ ಮೋಟಾರ ಸೈಕಲ ನಂಬರ ನೋಡಿರುವುದಿಲ್ಲಾ ಕಾರಣ ನಮ್ಮ ಟೆಂಪೋ ನಿಲ್ಲಿಸಿ ನಮಗೆ ಹೊಡೆ ಬಡೆ ಮಾಡಿ ಅಂಜಿಸಿ ನಮ್ಮ ಹತ್ತಿರ ಇದ್ದ ನಗದು ಹಣ 108499/- ರೂಪಾಯಿಗಳು ಇದ್ದ ಬ್ಯಾಗ ಹಾಗೂ ನನ್ನ ಮೊಬೈಲ ಅ.ಕಿ 5000/- ರೂ ಮತ್ತು ಡ್ರೈವರ ಹತ್ತಿರ ಇದ್ದ ಮೊಬೈಲ ಕಸಿದುಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ; 17/05/2019 ರಂದು ಶ್ರೀ ಮಹ್ಮದ್ ಖಾಲೀದ್ ತಂದೆ ಅಬ್ದುಲ್ ಸತ್ತಾರ ಸಾಬ್ ಗುತ್ತೆದಾರ ಸಾ; ಜೇವರಗಿ ಈತನಿಗೆ ದಿನಾಂಕ; 13/05/2019 ರಂದು ತನ್ನ ಲಾರಿ ಚಲಾಯಿಸುಕೊಂಡು ಹೋಗುತ್ತಿರುವಾಗ ಜೇವರ್ಗಿಯ ರಿಲಾಯನ್ಸ ಪೆಟ್ರೋಲ್ ಬಂಕ್ ಹತ್ತಿರ ಪೀರಪ್ಪ ತಂದೆ ಬಸಪ್ಪ ಯಾತನೂರ, ಗಂಗಾಧರ ತಂದೆ ನಿಂಗಣ್ಣ ವಿಭೂತಿ, ಗೊಲ್ಲಾಳಪ್ಪ ತಂದೆ ಬಸಪ್ಪ, ಶ್ರೀಕಾಂತ ತಂದೆ ಬಸಪ್ಪ ಮತ್ತು ಆತನ ಸಂಗಡಿಗರು ಬಂದು ಬಿಳಿ ವಿನಾಕಾರಣ ನಮ್ಮ ಹತ್ತಿರ ಹಪ್ತಾ ನೀಡುವಂತೆ ಕೇಳುತ್ತಾ , ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಮ್ಮ ಏರಿಯಾದಲ್ಲಿ ಬಂದು ನಮಗೆ ಹಪ್ತಾ ಕೊಡದೆ ಹೋಗುತ್ತೀರಿ. ಹಪ್ತಾ ಕೊಡು ಇಲ್ಲದಿದ್ದರೆ ಗಾಡಿ ಬಿಡಲ್ಲಎಂದು ನಮ್ಮ ಜೊತೆ ಜಗಳ ತೆಗೆದು ನನ್ನ ಮತ್ತು ನಮ್ಮ ಡ್ರೈವರ್ ಅಂಬರೀಶನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ನನಗೆ ಎದೆಗೆ ಮತ್ತು ಗುಪ್ತಾಂಗಕ್ಕೆ ಹೊಡೆದಿರುತ್ತಾರೆಅಷ್ಟರಲ್ಲಿ ರೌಫ್ ಹವಲ್ದಾರ ಮತ್ತು ಶರಣು ಡಿಂಕೆ ರವರು ಬಂದು ಬಿಡಿಸಿರುತ್ತಾರೆ. ಕಾರಣ ಸದರಿ ಪೀರಪ್ಪ ತಂದೆ ಬಸಪ್ಪ ಯಾತನೂರ ಗಂಗಾಧರ ತಂದೆ ನಿಂಗಣ್ಣ ಮತ್ತು ಇವರ ಸಂಗಡಿಗರ ವಿರುದ್ದ ಕ್ರಮ ಕೈಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: