Police Bhavan Kalaburagi

Police Bhavan Kalaburagi

Tuesday, June 11, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಕುಂಚಾವಂ ಠಾಣೆ : ದಿನಾಂಕ 09-06-2019 ರಂದು 10-00 ಎ.ಎಂಕ್ಕೆ ಶ್ರೀ ಮಹೇಶ ತಂದೆ ಶರಣಪ್ಪ ಬೋಯಾ ಸಾ : ಇಂದಿರಾ ನಗರ ತಾಂಡೂರ ರವರ  ಅಣ್ಣ ಹಣಮಂತ ತಂದೆ ಶರಣಪ್ಪ ಇತನು ಮೋಟಾರ ಸೈಕಲ್ ನಂ. ಎಪಿ-09 ಎಜಿ-3899 ನೇದ್ದನ್ನು ಕುಂಚಾವರಂ-ಚಿಂಚೋಳಿ ರೋಡಿನ ಪೆದ್ದಮ್ಮ ಗುಡಿಯ ಹತ್ತಿರ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಸ್ಕ್ರೀಡ್ ಆಗಿ ಬಿದ್ದಿದ್ದರಿಂದ ಹಣಮಂತುಗೆ ಭಾರಿಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆ ಗುನ್ನೆ ನಂ 28/2019 ಕಲಂ 279, 304(ಎ) ಐಪಿಸಿನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ 09-06-2019 ರಂದು 09-00 ಎ.ಎಂಕ್ಕೆ ಶ್ರೀ ಭೀಮಾಶಂಕರ ತಂದೆ ಶಿವಶರಣಪ್ಪ ಕಲಶೆಟ್ಟಿ ಸಾ : ಹೆಬಳಿ ತಾ : ಆಳಂದರವರ  ತಮ್ಮ ಮಲ್ಲಿಕಾರ್ಜುನ  ಇತನು ಮೋಟಾರ ಸೈಕಲ್ ನಂ. ಕೆಎ-32 ಇಎಫ್-9604 ನೇದ್ದರ ಮೇಲೆ ಆಳಂದ-ಕಲಬುರಗಿ ರೋಡಿನ ಲಾಡಚಿಂಚೋಳಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಕ್ರೂಜರ್ ಜೀಪ ನಂ.ಕೆಎ-14 ಎ-3276 ನೇದ್ದರ ಚಾಲಕ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಮಲ್ಲಿಕಾರ್ಜುನನಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆ ಗುನ್ನೆ ನಂ 83/2019 ಕಲಂ 279, 304(ಎ) ಈಪಿಸಿ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ವಿ. ಹೊದಲೂರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ 10/06/2019 ರಂದು ರಾತ್ರಿ ಮಾನ್ಯ ತಹಸಿಲ್ದಾರರು ಅಫಜಲಪೂರ ರವರೊಂದಿಗೆ ನಾನು ಮತ್ತು ಬಿರಪ್ಪ  ಗ್ರಾಮ ಲೇಕ್ಕಾಧಿಕಾರಿ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕರು ಅಫಜಲಪೂರ ಇಬ್ಬರೂ ಗಸ್ತು ತಿರುಗುತ್ತಾ ಸೊನ್ನ ಗ್ರಾಮದಿಂದ ಅಫಜಲಪೂರ ಪಟ್ಟಣಕ್ಕೆ ಬರುವ ಮುಖ್ಯ ರಸ್ತೆ ಮೇಲೆ ಕರಜಗಿ ಕ್ರಾಸ್ ಹತ್ತೀರ ಇದ್ದಾಗ ಒಂದು ಅಕ್ರಮವಾಗಿ ಮರಳು ತುಂಬಿದ್ದ ಟ್ಯಾಕ್ಟರ ಸಿಕ್ಕಿದ್ದು ಅದನ್ನು ನಿಲ್ಲಿಸಲು ಅದರ ಚಾಲಕನಿಗೆ ಸೂಚನೆ ಕೊಟ್ಟಾಗ ಸದರಿ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿ ನಮ್ಮನ್ನು ನೋಡಿ ಓಡಿ ಹೋಗಿದ್ದು ನಂತರ ನಾವು ಟ್ರ್ಯಾಕ್ಟರ ನಂಬರ ನೋಡಲು ಅದರ ನೊಂದಣಿ ಸಂಖ್ಯೆ ಕೆಎ-28 ಟಿಸಿ-0982 ಇರುತ್ತದೆ ಸದರಿ ಜಪ್ತಿ ಮಾಡಲಾಗಿ ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಟ್ರ್ಯಾಕ್ಟರದಲ್ಲಿದ್ದ ಮರಳಿನ ಕಿಮ್ಮತ್ತು ಅಂದಾಜು 3000/- ರೂ ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದರಿಂದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿದ್ದು ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆ ಗುನ್ನೆ ನಂ 84/2019 ಕಲಂ 379 ಐಪಿಸಿ & 21(1) ಎಮ್ ಎಮ್ ಡಿ ಆರ್ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ .
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ದಿನಾಂಕ 08-12-2015 ರಂದು ಶ್ರೀಮತಿ ಭವಾನಿಬಾಯಿ ಗಂಡ ನಾರಾಯಣಸಿಂಗ ಠಾಕೂರ ಸಾ : ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ ರವರ  ಮಗಳು ರೀನಾ ಇವಳಿಗೆ ಬಹದ್ದೂರಸಿಂಗ ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 50 ಗ್ರಾಂ ಬಂಗಾರ ನೀಡಿದ್ದು ನಂತರ ಕೆಲದಿನಗಳ ನಂತರ ಬಹದ್ದೂರಸಿಂಗ ಸಂಗಡ ಒಬ್ಬಳು ಸಾ : ಸೋಲಾಪೂರ ಹಾ : ವ : ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ ರವರು  ಕೂಡಿ ನಿನ್ನ ತವರು ಮನೆಯಿಂದಒಂದು ಕಾರು ಹಾಗೂ ಮನೆ ಕಟ್ಟಲು ಹಣ ತೆಗೆದುಕೊಂಡು ಬಾ ಅಂತ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದು ದಿನಾಂಕ 03-06-2019 ರಂದು 11-30 ಪಿ.ಎಂದಿಂದ 04-06-201912-00 ಎ.ಎಂ ಅವಧಿಯಲ್ಲಿ ಆರೋಪಿ ಬಹದ್ದೂರಸಿಂಗ ಇತನು ಕಲಬುರಗಿಯ ಕೊಂಡೆದಗಲ್ಲಿಯಲ್ಲಿರುವ ಮನೆಯಲ್ಲಿ ರೀನಾಳಿಗೆ ದೈಹಿಕ ಮಾನಸಿಕ ಕಿರುಕುಳ ನೀಡಿ ಕಾಲಿನಿಂದ ಹೊಟ್ಟೆಗೆ ಒದ್ದಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿಯಾಗದೆ ದಿನಾಂಕ 07-06-2019 ರಂದು 04-00 ಪಿ.ಎಂಕ್ಕೆ ರೀನಾ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆ ಗುನ್ನೆ ನಂ 72/2019 ಕಲಂ 498(ಎ) 302, 304(ಬಿ) ಸಂಗಡ 34 ಐಪಿಸಿ ಮತ್ತು 3, 4 ಡಿ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: