Police Bhavan Kalaburagi

Police Bhavan Kalaburagi

Tuesday, June 25, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ:24.06.2019 ರಂದು ಅಶೋಕ ನಗರ  ಠಾಣಾ ವ್ಯಾಪ್ತಿಯ ಕನಕ ತ್ರಿಶೂಲ್ ಬಾರ ಹತ್ತಿರ  ಇಬ್ಬರು  ವ್ಯಕ್ತಿಗಳು  ಸಾರ್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತ ಮಾಹಿತಿ ಬಂದ ಮೆರೆಗೆ ಪಿ.ಅಶೋಕ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತ್ರಿಶೂಲ್ ಬಾರ ಹತ್ತಿರ  ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಇಬ್ಬರು ವ್ಯಕ್ತಿಗಳು  1/- ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳನ್ನು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದುಕೊಂಡಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವರು ತಮ್ಮ ಹೆಸರು 1) ರಹಮತ ತಂದೆ ಸುಭಾನ ಖಾನ ಸಾ|| ಜಿಲಾನಾಬಾದ ಕಲಬುರಗಿ 1) ಎರಡು ಮಟಕಾ ಚೀಟಿ .ಕಿ. 00 2) ಒಂದು ಬಾಲ ಪೇನ್ .ಕಿ. 00/- 3) ನಗದು ಹಣ 370/- ದೊರೆತಿದ್ದು ಇರುತ್ತವೆ. 2) ಈರಣ್ಣಾ ತಂದೆ ಶರಣಪ್ಪಾ ಮಾಹೂರಕರ್ ಸಾ|| ಬಿದ್ದಾಪೂರ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಹತ್ತಿರ 1) ಒಂದು ಮಟಕಾ ಚೀಟಿ .ಕಿ. 00/- 2) ಒಂದು ಬಾಲ್ ಪೆನ್ .ಕಿ. 00/- ಮತ್ತು 3) ನಗದು ಹಣ 2800/-  ಗಳು ದೊರೆತಿದ್ದು ಸದರಿ ಮುದ್ದೆ ಮಾಲನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ. 51/2019  ಕಲಂ 78(3) ಕೆ.ಪಿ. ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಮತ್ತು ಟೆಂಪೂ ಜಪ್ತಿ :
ವಾಡಿ ಠಾಣೆ : ದಿನಾಂಕ 24/06/2019 ರಂದು ಮದ್ಯಾಹ್ನ ವಾಡಿ ಠಾಣಾ ವ್ಯಾಪ್ತಿಯ ಇಂಗಳಗಿ ಗ್ರಾಮದ ಕಾಗಿಣಾ ನದಿಯಿಂದ ಯಾರೋ ಅನಧಿಕೃತವಾಗಿ ಕಳ್ಳತನದಿಂದ ತಮ್ಮ ಟ್ರ್ಯಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಮೇರೆಗೆ ಪಿ.ಎಸ್.ಐ (ಕಾಸು)  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು ಮುಂದೆ ಇಂಗಳಗಿ ಗ್ರಾಮ ದಾಟಿ ಶಹಾಬಾದ ಕಡೆಗೆ ಹೋಗುವ ಫೂಲ್ ಹತ್ತಿರ ರೊಡಿನ ಸಮೀಪ ಒಂದು ಟ್ರ್ಯಾಕ್ಟರ ಶಹಾಬಾದ ಕಡೆಗೆ ಹೊರಟಿದ್ದು ಸಂಶಯ ಬಂದು ಟ್ರ್ಯಾಕ್ಟರ ಸಮೀಪ ಹೋಗಿ ಟ್ರ್ಯಾಕ್ಟರ ಚಾಲಕನಿಗೆ ಕೈ ಸನ್ನೆ ಮಾಡಿ ನಿಲ್ಲಿಸಲು ಹೇಳಿದರು ಸಹ ಟ್ರ್ಯಾಕ್ಟರ ಹಾಗೇ ಓಡಿಸಿಕೊಂಡು ಹೊರಟು  ಸ್ವಲ್ಪ ಮುಂದೆ ಹೋಗಿ ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರ ನಿಲ್ಲಿಸಿ  ನಮ್ಮ ಪೊಲೀಸ ಜೀಪ ನೋಡಿ ಓಡಿ ಹೋದನು. ಆತನಿಗೆ ಸಿಬ್ಬಂದಿಯ ಸಹಾಯದಿಂದ ಬೆನ್ನು ಹತ್ತಿದರು ಸಹ  ಸಿಗಲಿಲ್ಲ. ನಂತರ ಸದರಿ ಟ್ರ್ಯಾಕ್ಟರ ಪರಿಶೀಲಿಸಿ ನೋಡಲಾಗಿ ಅದು ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಇಂಜಿನ ನಂಬರ ಕೆಎ-32 ಟಿಬಿ-5214 ಮತ್ತು ಟ್ರ್ಯಾಲಿ ನಂಬರ ಕೆಎ-32 ಟಿಬಿ ಅಂತಾ ಬರೆದಿದ್ದು ಸದರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಅಂದಾಜು 01 ಸಾವಿರ ರೂಪಾಯಿದಷ್ಟು ಮರಳು ತುಂಬಿದ್ದು ಟ್ರ್ಯಾಕ್ಟರ ಕಿಮ್ಮತ್ತು ಅಂದಾಜು 01 ಲಕ್ಷ ರೂಪಾಯಿ ಆಗುತ್ತದೆ. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ವಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 69/2019 ಕಲಂ:379 ಐಪಿಸಿ ಸಂಗಡ 21 ಎಮ್.ಎಮ್.ಅರ.ಡಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಅಫಜಲಪೂರ ಠಾಣೆ : ದಿನಾಂಕ 24-06-2019 ರಂದು ಅಫಜಲಪೂರ ಠಾಣಾ ವ್ಯಪ್ತಿಯ  ಮಣ್ಣೂರ ಗ್ರಾಮದ ಭೀಮಾನದಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಟೆಂಪೊದಲ್ಲಿ ಮರಳು ತುಂಬುತ್ತಿದ್ದಾರೆ ಅಂತ  ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮ ತಲುಪಿ ಮಣ್ಣೂರ ಗ್ರಾಮದಿಂದ ಶೇ಼ಷಗಿರಿ ಗ್ರಾಮಕ್ಕೆ ಹೋಗುವ ಶೇ಼ಷಗಿರಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟೆಂಪೋ ನಮ್ಮ ಎದುರುಗಡೆ ಬರುತ್ತಿರುವದನ್ನು ಕಂಡು ಅದರ ಚಾಲಕನಿಗೆ ನಿಲ್ಲಸೂವಂತೆ ಕೈ ಸೂಚನೆ ಕೊಟ್ಟಾಗ ಆತನು ಸದರಿ ಟೆಂಪೋ ನಿಲ್ಲಿಸಿ ಓಡಿ ಹೋದನು ಆಗ ನಾವು ಬೆನ್ನಟ್ಟಿದ್ದರು ಸಿಗಲಿಲ್ಲ  ಆಗ ನಾವು ಪಂಚರ ಸಮಕ್ಷಮ ಸದರಿ ಟೆಂಪೊ ಚೆಕ್ಕ ಮಾಡಲು 1) ಟಾಟಾ ಕಂಪನಿಯ ಟೆಂಪೊ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಎಮ್.ಹೆಚ್-10 ಕೆ-5103 ನೇದ್ದು ಇತ್ತು ಸದರಿ ಟೆಂಪೊ .ಕಿ 2,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 5.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟೆಂಪೊ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ  97/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: