Police Bhavan Kalaburagi

Police Bhavan Kalaburagi

Thursday, June 6, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ  ನಾಗಮ್ಮ ಗಂಡ ಶಂಕ್ರೆಪ್ಪಾ ಮ್ಯಾಕೇರಿ ವಯ ಸಾ: ಬೇಳಗುಂಪಾ(ಕೆ) ತಾ.ಜಿ ಕಲಬುರಗಿ ರವರ ಗಂಡನಾದ ಶಂಕ್ರೆಪ್ಪಾ ಈತನು ನಮ್ಮೂರಿನ ಅಡೆಮ್ಮಾ ಗಂಡ ಭೀಮಪ್ಪಾ ಮಾದರ ಇವಳೊಂದಿಗೆ ಈಗ ಸುಮಾರು 2 ವರ್ಷದಿಂದ ಅನೈತಿಕ ಸಂಭಂದ ಹೊಂದಿದ್ದು, ಈ ಬಗ್ಗೆ ನಾವುಗಳು ನನ್ನ ಗಂಡನಿಗೆ ಮತ್ತು ಸದರಿ ಅಡೆಮ್ಮಾ ಇವಳಿಗೆ ಹಲವಾರು ಭಾರಿ ಈ ರೀತಿ ಮಾಡುವದು ಸರಿಯಲ್ಲಾ ಅಂತಾ ತಿಳಿಸಿ ಹೇಳಿದರು ಸಹ ಕೇಳದೆ ತಮ್ಮ ಸಂಭಂದವನ್ನು ಹಾಗೆ ಮುಂದುವರಿಸಿದರು. ಇದ್ದರಿಂದ ಆಕೆಯ ಸಂಭಂದಿಕರಲ್ಲಿ ದ್ವೇಷದ ಬಾವನೆ ಉಂಟಾಗಿತ್ತು. ದಿನಾಂಕ 04-06-2019 ರಂದು ಬೆಳಗ್ಗೆ 8.00 ಗಂಟಯ ಸುಮಾರಿಗೆ ನನ್ನ ಗಂಡನಾದ ಶಂಕ್ರೆಪ್ಪಾ ಈವನು ಎಂದಿನಂತೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ಮನೆಗೆ ಬಂದು ಊಟ ಮಾಡಿ ನಂತರ ಹೋರಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು. ಸಾಯಂಕಾಲ 5-00 ಗಂಟೆ ಸುಮಾರಿಗೆ ನಮ್ಮೂರಿನ ಶರಣು ತಂದೆ ಭೀಮಾಶಂಕರ ದೋಡ್ಡಮನಿ ಈತನು ಬಂದು ತಿಳಿಸಿದೆನೆಂದರೆ ನಿನ್ನ ಗಂಡ ಶಂಕ್ರೆಪ್ಪಾ ಮತ್ತು ಅಡೆಮ್ಮ ಇವರುಗಳಿಗೆ ಅಡೆಮ್ಮನ ಚಿಕ್ಕಪ್ಪನ ಮಗನಾದ (ತಮ್ಮ) ಹಣಮಂತ ತಂದೆ ಸೈದಪ್ಪ ಮಾದರ ಈತನು ಅಡೆಮ್ಮ ಇವಳ ಮನೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ತಿಳಿಸಿದ್ದು ಅಲ್ಲದೆ ಜನರು ಸಹ ನನ್ನ ಗಂಡನು ಕೊಲೆಯಾದ ಬಗ್ಗೆ ಮಾತನಾಡುವದನ್ನು ಕೇಳಿ ನಾವು ಗಾಬರಿಗೊಂಡು ನಾನು ಮತ್ತು ನನ್ನ ಮೈದುನಾದ ದೊಡ್ಡಪ್ಪ ಮ್ಯಾಕೇರಿ, ಬಾವನದ ಹುಲ್ಲೆಪ್ಪಾ ಮ್ಯಾಕೇರಿ ಹಾಗೂ ಇತರರು ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ಗಂಡ ಶಂಕ್ರೆಪ್ಪಾ ಈತನು ಅಡೆಮ್ಮ ಇವಳ ಮನೆಯ ಬಾಗಿಲ ಮುಂದೆ ರಕ್ತದ ಮಡುವಿನಲ್ಲಿ ಬಿದಿದ್ದು, ನೋಡಲಾಗಿ ಕುತ್ತಿಗೆಗೆ & ಎಡಗೈ ಮೋಳಕೈ ಹತ್ತಿರ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದನು. ಮನೆಯ ಒಳಗಡೆ ನೋಡಲಾಗಿ ಒಳ ಮನೆಯ ಬಾಗಿಲ ಹತ್ತಿರ ಅಡೆಮ್ಮ ಇವಳು ರಕ್ತದ ಮಡುವಿನಲ್ಲಿ ಬಿದಿದ್ದು, ನೋಡಲಾಗಿ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ, ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದಳು. ದಿನಾಂಕ 04-06-2019 ರಂದು 4-30 ಪಿ.ಎಮ್ದ ಸುಮಾರಿಗೆ ನಮ್ಮೂರಿನ ಅಡೆಮ್ಮ ಮಾದರ ಇವರ ಮನೆಯಲ್ಲಿ ನನ್ನ ಗಂಡ ಶಂಕ್ರೆಪ್ಪಾ ಮತ್ತು ಅಡೆಮ್ಮ ಇವರುಗಳು ಹೊಂದಿದ್ದ ಅನೈತಿಕ ಸಂಬಂಧ ದ್ವೇಷದ ಹಿನ್ನಲೆಯಲ್ಲಿ ಅಡೆಮ್ಮನ ಸಹೋದರ ಸಂಬಂಧಿಯಾದ (ತಮ್ಮ) ಹಣಮಂತ ತಂದೆ ಸೈದಪ್ಪ ಮಾದರ ಈತನು ಕೊಡಲಿಯಿಂದ ಇಬ್ಬರಿಗೂ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆ ಗುನ್ನೆ ನಂ 80/2019 ಕಲಂ. 302 ಐಪಿಸಿ ನೇದ್ದರ ಪ್ರಕಾರ ಪ್ರಕಾರ ಪದರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಮಾಹಾದೇವಿ ಗಂಡ ಕುಪೇಂದ್ರ ಮಾಲಿಪಾಟೀಲ ಸಾ : ಮೇಳಕುಂದಾ  ರವರ ಮಗಳಾದ ಪ್ರೀತಿ @ ರೂಪಾ ಇವಳಿಗೆ ಈಗ್ಗೆ ಸೂಮಾರು 1 ವರ್ಷ 3 ತಿಂಗಳ ಹಿಂದೆ ಕಡಣಿ ಗ್ರಾಮದ ಶಾಂತಮಲ್ಲಪ್ಪ ಇವರ ಹಿರಿಯ ಮಗನಾದ ಬಸವರಾಜ ಕಡತಾನೋರ ಇತನೊಂದಿಗೆ ಸಂಪ್ರದಾಯಿಕವಾಗಿ ಮದುವೆ ಮಾಡಿಕೋಟ್ಟಿದ್ದು ಮದವೆ ಕಾಲಕ್ಕೆ ಮಾತುಕತೆ ಆಡಿದಂತೆ 51 ಸಾವಿರ ರೂಪಾಯಿ ಹುಂಡಾ ಹಾಗೂ 2 ತೋಲೆ ಬಂಗಾರ ಮತ್ತು ಮದುವೆಗೆ ಬೇಕಾಗುವ ಪಲ್ಲಂಗ ಅಲಮಾರಿ ಹಾಗೂ ಇತರೆ ಮನೆಗೆ ಉಪಯೋಗವಾಗುವ 70-80 ಸಾವಿರ ರೂಪಾಯಿ ಕಿಮ್ಮತ್ತಿನ ಹಾಂಡೆ ಬಾಂಡೆ ಕೋಟ್ಟು ನಮ್ಮೂರ ಭೋಗಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೋಟ್ಟಿರುತ್ತೇವೆ.          ಮದುವೆಯಾದ ಬಳಿಕ 2 ತಿಂಗಳ ವರೆಗೆ ನನ್ನ ಅಳಿಯ ಹಾಗೂ ಅವಳ ಅತ್ತೆ ಅಂಬುಬಾಯಿ ಹಾಗೂ ಮಾವ ಶಾಂತಮಲ್ಲಪ್ಪ ಮೈದುನ ರಾಣೋಜಿ ಇವರು ನನ್ನ ಮಗಳಿಗೆ ಸರಿಯಾಗಿ ನೋಡಿಕೊಂಡಿದ್ದು. ನಂತರ ನನ್ನ ಅಳಿಯ ನನ್ನ ಮಗಳಿಗೆ ನೀನು ನೋಡಲು ಸರಿಯಿಲ್ಲ ನನಗೆ ಜೋಡಿ ಆಗುವುದಿಲ್ಲ ನಾನು ಮೋದಲು ಬೆರೆಯವಳಿಗೆ ಮದುವೆ ಆಗಬೇಕಂತ ಅಂದುಕೊಂಡಿದ್ದೆ ಅಂತಾ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನಿಡುತ್ತಿದ್ದು. ದುಅಲ್ಲದೆ ತವರು ಮನೆಯಿಂದ ಮದುವೆಯಲ್ಲಿ ಫೋಟೋ ತೆಗೆ5 ಸಾವಿರ ರೂಪಾಯಿ ಹಣ ಹಾಗೂ ಅರ್ಧ ತೋಲೆ ಬಂಗಾರ ತರುವಂತೆ ಕಿರುಕುಳ ನಿಡುತ್ತ ಬಂದಿದ್ದು. ಸದರಿ ವಿಷಯವನ್ನು ನನ್ನ ಮಗಳು ಸಾಕಷ್ಟು ಬಾರಿ ಫೋನ ಮೂಲಕ  ಹಾಗೂ ತವರು ಮನೆಗೆ ಬಂದಾಗ ನನಗೆ ಹಾಗೂ ನನ್ನ ಮನೆಯವರಿಗೆ ಹೇಳುತ್ತ ಬಂದಿದ್ದು. ಅದಕ್ಕೆ ನಾವು ನನ್ನ ಮಗಳಿಗೆ ಮುಂದೆ ಹೋದಂತೆ ಸರಿಹೋಗುತ್ತದೆ ಹಾಗೆ ಎಲ್ಲರ ಜೋತೆಗೆ ಸರಿಯಾಗಿ ಇರು ಅಂತಾ ಬುದ್ದಿ ಮಾತು ಹೇಳುತ್ತ ಬಂದಿರುತ್ತೇವೆ. ನಂತರ ಈಗ್ಗೆ ಸೂಮಾರು 3 ತಿಂಗಳ ಹಿಂದೆ ನಾನು ನನ್ನ ಗಂಡ ಹಾಗೂ ಮನೆಯವರು ಕೂಡಿ ನನ್ನ ಅಳಿಯನ ಮನೆಗೆ ಹೋಗಿ ಅರ್ಧ ತೋಲೆ ಬಂಗಾರ ಕೋಟ್ಟು ಬಟ್ಟೆ ಬರೆ ಹೋಲೆಸಿಕೋಳ್ಳಲು 2 ಸಾವಿರ ರೂಪಾಯಿ ಹಣ ಕೋಟ್ಟು ನನ್ನ ಮಗಳಿಗೆ ಸರಿಯಾಗಿ ನೋಡಿಕೋಳ್ಳುವಂತೆ ನನ್ನ ಅಳಿಯ ಹಾಗೂ ಅವರ ಮನೆಯವರಿಗೆ ಬುದ್ದಿಮಾತು ಹೇಳಿ ಬಂದಿದ್ದು ನಂತರ ಸ್ವಲ್ಪ ದಿನಗಳ ವರೆಗೆ ನನ್ನ ಅಳಿಯ ನನ್ನ ಮಗಳೊಂದಿಗೆ ಸರಿಯಾಗಿ ಇದ್ದು ತದನಂತರ ಮತ್ತೆ ಈಗ್ಗೆ 6 ತಿಂಗಳಿಂದ ನನ್ನ ಅಳಿಯ ತನ್ನ ತಂದೆ ತಾಯಿಯ ಹಾಗೂ ತಮ್ಮನ ಮಾತು ಕೇಳಿ ನನ್ನ ಮಗಳಿಗೆ ತವರು ಮನೆಗೆ ಕಳಿಸುತ್ತಿರಲಿಲ್ಲ ಮತ್ತು ನನ್ನ ಮಗಳು ನಮಗೆ ಫೋನ ಮಾಡಬೇಕಾದರೆ ಸ್ಪೀಕರ ಚಾಲು ಮಾಡಿ ನಮ್ಮೊಂದಿಗೆ ಮಾತುಗಳನ್ನು ಆಡಿಸುತ್ತಿದ್ದಾರೆ ಅಂತಾ ನನ್ನ ಮಗಳು ಯುಗಾದಿ ಹಬ್ಬಕ್ಕೆ ಊರಿಗೆ ಬಂದಾಗ ಹೇಳಿದ್ದು. ಆವಾಗಲು ಕೂಡಾ ನಾವು ನನ್ನ ಮಗಳಿಗೆ ಚಿಂತೆ ಮಾಡಬೇಡ ಮುಂದೆ ಸರಿಹೋಗುತ್ತೆ ಅನುಸರಿಸಿಕೊಂಡು ಹೋಗು ಅಂತಾ ಬುದ್ದಿ ಮಾತು ಹೇಳಿ ಕಳಿಸಿದ್ದೇವು.     ದಿನಾಂಕ:04.06.2019 ರಂದು ಮದ್ಯಾಹ್ನದ ವೇಳೆಯಲ್ಲಿ ನನ್ನ ಮಗ ಮಲ್ಲಿಕಾರ್ಜುನ ಇವನು ಗಾಬರಿಯಲ್ಲಿ ಅಳುತ್ತ ಮನೆಯಕಡೆಗೆ ಬಂದು ನನ್ನ ಮಗಳಾದ ಪ್ರೀತಿ @ ರೂಪಾ ಇವಳು ತನ್ನ ಗಂಡನ ಮನೆಯಲ್ಲಿ ನೇಣುಹಾಕಿಕೊಂಡು ಸತ್ತಿರುತ್ತಾಳೆ ಅಂತಾ ಯಾರೋ ಕಡಣಿ ಗ್ರಾಮದವರು ತನಗೆ ಫೋನ ಮಾಡಿರುತ್ತಾರೆ ಅಂತಾ ವಿಷಯ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ಸಂಗಡ ನನ್ನ ಗಂಡ  ಕುಪೇಂದ್ರ, ನಮ್ಮ ಅಣ್ಣತಮ್ಮಕಿಯ ಸಿದ್ದಣ್ಣ ಮಾಲಿಪಾಟಿಲ, ಸಿದ್ದಾರೋಢ ಮಾಲಿಪಾಟಿಲ, ಗಂಗಮ್ಮ ಸರಡಗಿ ಹಾಗೂ ಕಾವೇರಿ ಜೇವರಗಿ ಇವರೆಲ್ಲರೂ ಕೂಡಿ ನನ್ನ ಮಗ ಮಲ್ಲಿಕಾರ್ಜುನ ಸಂಗಡ ಇಂದು ಮದ್ಯಾಹ್ನ 03.30 ಗಂಟೆಯ ಸೂಮಾರಿಗೆ ಕಡಣಿ ಗ್ರಾಮದ ನನ್ನ ಮಗಳ ಗಂಡನ ಮನೆಗೆ ಹೋಗಿ ನೋಡಲು ನನ್ನ ಮಗಳಾದ ಪ್ರೀತಿ @ ರೂಪಾ ಇವಳು ತಾನು ಮಲಗುವ ಕೋಣೆಯ ಛತ್ತಿಗೆ ಇರುವ ಸಿಲಿಂಗ ಫ್ಯಾನಗೆ ಸಿರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದಳು ನಂತರ ಅಲ್ಲೆ ಇದ್ದ ನನ್ನ ಅಳಿಯ ಬಸವರಾಜನಿಗೆ ವಿಚಾರಿಸಲು ನನ್ನ ಮಗಳಾದ ಪ್ರೀತಿ @ ರೂಪಾ ಇವಳಿಗೆ ತವರು ಮನೆಯಿಂದ ಹಣ ತರುವಂತೆ ಹಾಗೂ ನೋಡಲು ಸರಿಯಿಲ್ಲ ಅಂತಾ ನನ್ನ ಅಳಿಯ ತನ್ನ ತಂದೆ ತಾಯಿ ಹಾಗೂ ತಮ್ಮನ ಮಾತುಗಳನ್ನು ಕೇಳಿ ನನ್ನ ಮಗಳಿಗೆ ಇಂದು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ಹೋಡೆದು ನೇಣುಹಾಕಿ ಕೋಲೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರುಇ ಸಾರಾಂಶದ ಮೇಲಿಂದ ಫರತಾಬಾದ ಠಾಣೆ ಗುನ್ನೆ ನಂ 79/2019 ಕಲಂ 498 (ಎ) 302, 304(ಬಿ) ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.    
ಅಪಘಾತ ಪ್ರಕರಣ :
ಸಂಚಾರಿ ಠಾಣೆ 02 : ದಿನಾಂಕ-05/06/2019 ರಂದು ಮಧ್ಯಾಹ್ನ ಈರಣ್ಣ ಈತನು ಟಿವಿಎಸ್ ಎಕ್ಸಲ್ ಮೋಟಾರ ಸೈಕಲ್ ನಂ KA-32 EK-5044 ನೇದ್ದರ ಮೇಲೆ ವೇದಮೂರ್ತಿ ಈತನಿಗೆ ಕೂಡಿಸಿಕೊಂಡು ಪಟ್ಟಣ ಕಡೆಯಿಂದ ನಿಧಾನವಾಗಿ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಭೀಮಳ್ಳಿ ಕ್ರಾಸ್ ಹತ್ತಿರದ ರೋಡಿನ ಮೇಲೆ ಒಂದು ಟಾಟಾ ಸುಮೋ ನಂ MH -13 N-2542 ನೇದ್ದರ ಚಾಲಕ ಕಲಬುರಗಿ ಆಳಂದ ಚೆಕ್ ಪೋಸ್ಟ ಕಡೆಯಿಂದ ತನ್ನ ಟಾಟಾ ಸುಮೋ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಗಂಡ ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ  ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ್ ಸವಾರ ಈರಣ್ಣ ಇತನಿಗೆ ಭಾರಿಗಾಯಗೊಳಿಸಿದ್ದು ಶ್ರೀಮತಿ ಸವಿತಾ ಗಂಡ ವೇದಮೂರ್ತಿ ಸ್ವಾಮಿ ಸಾ:ಸಿದ್ದಲಿಂಗೇಸ್ವರ ಗುಡಿಯ ಹತ್ತಿರ ಭವಾನಿ ನಗರ ಕಲಬುರಗಿ ಗಂಡನಿಗೆ ಭಾರಿಗಾಯಗೊಳಿಸಿದ್ದರಿಂದ ಆತನು ಸ್ಥಳದಲ್ಲಿಯೆ ಮೃತಪಟ್ಟಿದ್ದು, ಟಾಟಾ ಸುಮೋ ವಾಹವನ್ನು ಸ್ಥಳದಲ್ಲಿಯೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ ಗುನ್ನೆ ನಂ 89/2019 ಕಲಂ 279, 338, 304(ಎ) ಸಂಗಡ 187 ಐಎಂವಿ ಎಕ್ಟ ಪ್ರಕರ ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 05-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ದುದ್ದಣಗಿ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ದುದ್ದಣಗಿ ಗ್ರಾಮದ ಭೀಮಾನದಿಯ ಹತ್ತಿರ ಹೋಗುತ್ತಿದ್ದಂತೆ, ಭೀಮಾನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ನಾವು ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಾಗ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು.  ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲಾಗಿ ಅರ್ಜುನ ಮಹೇಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಕೆಎ-28 ಟಿಬಿ-7589. ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆ ಗುನ್ನೆ ನಂ  77/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 05-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ದುದ್ದಣಗಿ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ  ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದುದ್ದಣಗಿ ಗ್ರಾಮದ ಭೀಮಾನದಿಯ ಹತ್ತಿರ ಹೋಗುತ್ತಿದ್ದಂತೆ, ಭೀಮಾನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ನಾವು ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಾಗ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು.  ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಬ್ಯಾಟರಿಯ ಬೆಳಕಿನಲ್ಲಿ ಚೆಕ್ ಮಾಡಲಾಗಿ ಜಾನ ಡಿಯರ್ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವದಿಲ್ಲ ನಂತರ ಅದರ ಇಂಜಿನ ನಂಬರ ನೋಡಲಾಗಿ PY3029D261449 ಇದ್ದು ಚೆಸ್ಸಿ ನಂಬರ ನೋಡಲಾಗಿ PY53108063413. ಇತ್ತು ಅದರ ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ  ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆ ಗುನ್ನೆ ನಂ 78/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಹಣ ಕಸಿದುಕೊಂಡು ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗಂಗಾಧರ ತಂದೆ ಬಾಬುರಾವ ಮದನಕರ್‌ ಸಾ: ತಾಜ್‌‌ ಸುಲ್ತಾನಪೂರ ತಾ:ಜಿ: ಕಲಬುರಗಿ ರವರು ದಿನಾಂಕ 04/06/2019 ರಂದು ರಾತ್ರಿ 8:30 ಗಂಟೆ ಸುಮಾರಿಗೆ ನಾನು ಬರ್ಹಿದೆಸೆಗೆ ಹೊಗುತ್ತಿದ್ದಾಗ ಅಲ್ಲಿ 1) ಕಿರಣಸಿಂಗ್‌‌ ತಂದೆ ನರಸಿಂಗ ಠಾಕೂರ 2) ಜೀವನ ತಂದೆ ಮರೆಪ್ಪ 3) ರಾಹುಲ ತಂದೆ ಬಸವರಾಜ ಧನಪತಿ ಸಾ: ಎಲ್ಲರೂ ಸುಲ್ತಾನಪೂರ ಇವರು ನನಗೆ ಈ ಕಡೆಗೆ ಬಾ ನಿನ್ನ ಹತ್ತಿರ ಸ್ವಲ್ಪ ಮಾತನಾಡುವದಿದೆ ಎಂದು ಹೇಳಿ ನನಗೆ ವೈಷ್ಣವಿ ದೇವರ ಗುಡಿ ಹತ್ತಿರ ಕರೆದುಕೊಂಡು ಬಂದು ಏ ರಂಡಿ ಮಗನೇ ನಿನ್ನ ಹತ್ತಿರ ಇರುವ ಹಣ ಕೊಡು ಇಲ್ಲದಿದ್ದರೆ ನಿನಗೆ ಖಲಾಷ ಮಾಡುತ್ತೇವೆ ಅಂತಾ ಕಿರಣಸಿಂಗ್‌‌ನು ಚಾಕುವನ್ನು ನನ್ನ ಕುತ್ತಿಗೆಗೆ ಹಚ್ಚಿದಾಗ ನಾನು ನನ್ನ ಹತ್ತಿರ ಹಣ ಇಲ್ಲಾ ಅಂದಾಗ ಜೀವನ ಹಾಗು ರಾಹುಲ ನನಗೆ ಒತ್ತಿ ಹಿಡಿದಾಗ ಕಿರಣಸಿಂಗ್‌ ಇತನು ಜಬರದಸ್ತಿಯಿಂದ ನನ್ನ ಜೇಬಿನಲ್ಲಿ ಇದ್ದ 1500/- ರೂಪಾಯಿ ತೆಗೆದುಕೊಂಡಿರುತ್ತಾನೆ . ನಾನು ದಲಿತನೆಂದು ಗೊತ್ತಿದ್ದರೂ ಕಿರಣಸಿಂಗ್‌‌ ಇತನು ನನಗೆ ಅವಾಚ್ಯವಾಗಿ ಬೈದು ಏ ಹೋಲೆಯ ಸುಳೇ ಮಗನೇ ಅಂತಾ ಜಾತಿ ನಿಂದನೆ ಮಾಡಿ ನನಗೆ ನಂತರ ಅದೆ ರಾತ್ರಿ 11 ಗಂಟೆ ಸುಮಾರಿಗೆ ನನಗೆ ಸುಲ್ತಾನಪೂರ ರಿಂಗ್‌‌ ರೋಡಿಗೆ ತಂದು ಬಿಟ್ಟಿರುತ್ತಾರೆ. ಆ ಸಮಯದಲ್ಲಿ ನನಗೆ ರಾತ್ರಿ ತಂದು ಬಿಡುವಾಗ ವಿನೋದ ತಂದೆ ನಾಗಿಂದ್ರಪ್ಪಾ ಡಣ್ಣೂರೆ ಇತನು ನೊಡಿರುತ್ತಾನೆ. ನಂತರ ಇಂದು ದಿನಾಂಕ 05/06/2019 ರಂದು ನನ್ನ ಅಣ್ಣ ಸುನೀಲ ಇತನು ನನ್ನ ತಮ್ಮನಿಗೆ ರಾತ್ರಿ ಯ್ಯಾಕೆ ಹೊಡೆದಿದ್ದಿರಿ ಅಂತಾ ಕೇಳಲು ಹೋದಾಗ ರಾಹುಲ ಇತನು ಕಲ್ಲಿನಿಂದ ಅವನ ಬಲಗಾಲಿನ ಪಾದದ ಮೇಲ್ಬಾಗದಲ್ಲಿ ಹೊಡೆದು ಗುಪ್ತಗಾಯಗೊಳಿಸಿರುತ್ತಾನೆ. ಕಾರಣ ನನಗೆ ಜಬರದಸ್ತಿಯಿಂದ ಹೊಡೆಬಡೆ ಮಾಡಿ ನನ್ನ ಜೇಬಿನಲ್ಲಿ ಇದ್ದ 1500/-  ಕಸಿದಕೊಂಡು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಜಾತಿ ನಿಂದನೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 157/2019 ಕಲಂ 323 324 384 504 506 ಸಂ 34 ಐಪಿಸಿ & ಕಲಂ 2 (V) 3(1) (r) ಎಸ್‌ಸಿ ಎಸ್‌ಟಿ ಪಿಎ ಆಕ್ಟ್‌‌ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಂಜುಳಾ ಗಂಡ ಭೀಮಾಶಂಕರ ಕೌಲಗಿ ಸಾ: ರಾಮಾ ಮೊಹಲ್ಲಾ ಶಹಾಬಾದ ರವರ ಮೈದುನನಾದ ಈಶ್ವರಾದ್ಯ ಇತನು ಬೆಂಗಳೂರಿನಲ್ಲಿ ಕೆಲಸದ ಮೇಲಿಂದ ಶಹಾಬಾದಕ್ಕೆ ಬಂದಿದ್ದನು ನಿನ್ನೆ ದಿನಾಂಕ: 04/06/2019 ರಂದು ಬೆಳ್ಳಿಗೆ ಅತ್ತೆ ಸುಭದ್ರಮ್ಮ ಮಾವ ಮರೇಪ್ಪ ರವರು ಕೌಲಗಿಗೆ ಹೋಗುತ್ತೇವೆಂದು ಹೇಳಿ ಹೋಗಿದ್ದು ನಮ್ಮ ಮೈದುನ ಕೂಡ ಕೌಲಗಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊಗಿದ್ದನು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ ನಾವು ಆತನು ಕುಡಿಯುವ ಚಟ ಇದೆ ಬರುತ್ತಾನೆ ಅಂತಾ ತಿಳಿದು ನಾವು ನನ್ನ ಗಂಡ ಊಟಾ ಮಾಡಿ ಮನೆಯಲ್ಲಿ ಮಲಗಿದದೇವು ರಾತ್ರಿ 12-30 ಎ ಎಮ್ ಕ್ಕೆ ನಮಗೆ ಗೊತ್ತಾಗಿದ್ದೇನೆಂದರೆ ಈಶ್ವರಾದ್ಯನಿಗೆ ಶರಣಬಸವೆಶ್ವರ ಗುಡಿಯ ಹತ್ತಿರ ಯಾರೋ ಚಾಕುದಿಂದ ಹೊಡೆದಿದ್ದಾರೆ ಅಂತಾ ಗೊತ್ತಾಗಿ ನಾನು ನನ್ನ ಗಂಡ ಭೀಮಾಶಂಕರ ನಮ್ಮ ಸಂಬಂಧಿಕಳಾದ ಮಲ್ಲಮ್ಮ ಎಲ್ಲಾರೂ ಕೂಡಿ ಶರಣಬಶವೇಸ್ವರ ಹತ್ತಿರ ಬಂದು ನೋಡಲಾಗಿ ಈಶ್ವರಾದ್ಯ ಹೊಟ್ಟೆಯ ಬಲಭಾಗಕ್ಕೆ ಹರಿದಂತಾಗಿ ಭಾರಿಗಾಯಾವಾಗಿ ರಕ್ತಬಂದಿದ್ದು ಮಾತನಾಡುತ್ತಿರಲ್ಲಾ ನಂತರ ಉಪಚಾರ ಕುರಿತು ಶಹಾಬಾದ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ನನ್ನ ಗಂಡ ಹಾಗೂ ಇತರರು ಕರೆದುಕೊಂಡು ಹೋಗಿರುತ್ತಾರೆ ಯಾರೋ 2 ಜನರು ನನ್ನ ಮೈದುನ ಈಶ್ವರಾದ್ಯನಿಗೆ ನಿನ್ನೆ ದಿನಾಂಕ: 04/06/2019 ರಂದು ರಾತ್ರಿ 11-45 ಪಿ ಎಮ್ ಸುಮಾರಿಗೆ ಶರಣಬಸವೇಶ್ವರ ಗುಡಿಯ ಪಕ್ಕದ ಅವರಣದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಹೊಡೆದು ಗಾಯಾ ಗೊಳಿಸಿದ್ದು ಯಾರೋ ಹೊಡೆದಿದ್ದು ಗೊತ್ತಾಗಿರುವುದಿಲ್ಲಾ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆ  ಗುನ್ನೆ ನಂಬರ 63/2019 ಕಲಂ 323 324 307 504 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ಶ್ರೀ ಅತೀಕ ತಂದೆ ಅಕ್ಬರಮಿಯಾ ಕವಲಗಾ, ಸಾ: ಆಟೋ ಸ್ಟ್ಯಾಂಡ್ ಹತ್ತಿರ ತಾಜನಗರ ಮುಸ್ಲಿಂ ಸಂಘ ಕಲಬುರಗಿ ರವರು ದಿನಾಂಕ.05.06.2019 ರಂದು 4.00 ಪಿ.ಎಂ ಸುಮಾರಿಗೆ ನ್ನ ಗೆಳೆಯನಾದ, ಸಮೀರ ತಂದೆ ದಸ್ತಗೀರ ನನ್ನನ್ನು ಬೇಟಿಯಾಗಲು ರಜಾಕ್ ಸರ್ಕಲಗೆ ಬಂದಿದ್ದನು, ಅಷ್ಟರಲ್ಲಿ ಸಮೀರ ಅವನಿಗೆ ಮೆಹಬೂಬ ಹಾಗೂ ಸಾಬೀರ ಮತ್ತು ಉಮರ ಇವರು ಬಾಯಿಮಾತಿನ ತಕರಾರು ನಡೆದಿತ್ತು. ನಾನು ಅಷ್ಟರಲ್ಲಿ ಸಮೀರ ಅವನಿಗೆ ಎಕೆ? ಜಗಳ ಮಾಡುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಸಾಬೀರ ನೀನು ಯಾರು ಬೋಸಡಿ ಮಗನೆ ಅಂದವನೆ ಬಲ ಮುಷ್ಠಿಯಿಂದ ಬಲ ಹಣೆಯ ಮೇಲೆ ಹೊಡೆದನು. ನಂತರ ಉಮರ ಇವನು ನಿನು ಯಾರು ಅಂದವನೆ ಬಲ ಮುಷ್ಠಿ ಮಾಡಿ ನನ್ನ ಬಲ ಎದೆಯ ಮೇಲೆ ಹೊಡೆದನು. ನಂತರ ಮೆಹಬೂಬ ಈತನು ಇವನ ಸೊಕ್ಕು ಬಹಳ ಆಗಿದೆ ಅಂತಾ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲ ಮೊಳಕಾಲಿಗೆ ಹೊಡೆದನು.ನಂತರ ಅಲ್ಲಿಯೇ ಇದ್ದ ಬಬ್ಲು ಕೂಡಾ ಈ ಮಗಂದು ಬಹಳ ಸೊಕ್ಕು ಆಗಿದೆ ಅಂತಾ ನಡುಬೆನ್ನಿಗೆ ಬಲಗೈಯಿಂದ ಹೊಡೆಯುತ್ತಿದ್ದಾಗ ನಾನು ಚೀರಾಡ ಹತ್ತಿದಾಗ ಅಲ್ಲಿಯೇ ಇದ್ದ ನೌಶಾಧ ಹಾಗೂ ಕಲೀಂ ಇಬ್ಬರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ನನ್ನ ತಂದೆ ಹಾಗೂ ನನ್ನ ಚಿಕ್ಕಪ್ಪ ಖಾಸಗಿ ಕಾರಿನಲ್ಲಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆ ಗುನ್ನೆ ನಂ.61/2019, ಕಲಂ. 323, 324, 504 ಸಂ. 34 ಐಪಿಸಿ ಪ್ರಕಾರ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಸುಲೋಚನಾ ಗಂಡ ಮಲ್ಲಯ್ಯಾ ಲಿಂಗಯ್ಯಾಗೋಳ ಸಾ : ಖೇರಡ ತಾ : ಬಸವಕಲ್ಯಾಣ ಗಂಡ 8 ವರ್ಷಗಳ ಹಿಂದೆ ಖಾಲೆಯಿಂದ ಮೃತಪಟ್ಟಿದ್ದು, ನನಗೆ ಎರಡು ಗಂಡು ಮಕ್ಕಳಿರುತ್ತಾರೆ. ಮೊದಲನೆಯವ ಕರಿಬಸಯ್ಯ 2ನೇಯವ ಚನ್ನವೀರನಿದ್ದು, ಚನ್ನವೀರನಿಗೆ 18 ವರ್ಷ ವಯಸ್ಸಿದ್ದು ಸದರಿಯವನು ಹುಟ್ಟಿದಾಗಿನಿಂದಲು ಬುದ್ದಿ ಮಾಂದ್ಯ ಮೂಖನಿದ್ದು ರಾತ್ರಿವೇಳೆಯಲ್ಲಿ ಕಣ್ಣು ಕಾಣುತ್ತಿರಲಿಲ್ಲ. ಸದರಿಯವನು ಆಗಾಗ ಮೈಮೇಲೆ ಹೆಸಿಗೆ ಮಾಡಿಕೊಳ್ಳುವುದು. ಚೀರಾಡುವುದು ಮೈಮೇಲಿನ ಬಟ್ಟೆ ಕಳೆದುಕೊಳ್ಳುವುದು. ಎಲ್ಲಂದರಲ್ಲಿ ತಿರುಗಾಡುವುದು ಮಾಡುತ್ತಿದ್ದನು. ಇತ್ತಿಚಿಗೆ ಮನೆಬಿಟ್ಟು ನಮ್ಮ ಗ್ರಾಮದಿಂದ ಆಜುಬಾಜು ಹಳ್ಳಿಗೆ ಹೋಗಿ ತಿರುಗಾಡುತ್ತಿದ್ದನು. ನಮ್ಮ ಪರಿಚಯದವರು ಗುರ್ತು ಹಿಡಿದು ನಮ್ಮ ಮನೆಗೆ ತಂದು ಬಿಡುತ್ತಿದ್ದನು. ದಿನಾಂಕ:27/05/2019 ರಂದು 10-00 ಗಂಟೆಗೆ ನಮ್ಮ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಅಂದಿನಿಂದ ನಾನು ಲೇಂಗಟಿ, ಯಳವಂತಗಿ, ಮೈಸಲಗಿ, ವ್ಹಿ.ಕೆ ಸಲಗರ ಗ್ರಾಮಗಳಿಗೆ ಹೋಗಿ ಹುಡುಕಾಡಿರುತ್ತೇನೆ. ದಿನಾಂಕ:04/06/2019 ರಂದು 1100 ಗಂಟೆಗೆ ನಾನು ಮನೆಯೆಲ್ಲಿದ್ದಾಗ ಶ್ರೀ.ರಮೇಶ ತಂದೆ ಅಪ್ಪಾರಾವ ಬೇಡರ್, ಸಾ:ಖೇಡರ್.ಕೆ ವಾಡಿ, ಇವರು ಅಂಬಲಗಾ ಗ್ರಾಮಕ್ಕೆ ಬಂದಾಗ ಲಾಡಮುಗಳಿ ಸೀಮಾಂತರದಲ್ಲಿ ಸಿದ್ದಪ್ಪಾ ತಪಲಿ ಇವರ ಹೊಲದಲ್ಲಿನ ನೀರಿಲ್ಲದ ಬಾವಿಯಲ್ಲಿ ಒಬ್ಬ ಗಂಡು ಮನುಷ್ಯನ ಶವ ಸಿಕ್ಕಿದೆ ಅಂತಾ ಸುದ್ದಿ ತಿಳಿಸಿದ್ದು, ನನಗೆ ಸಂಶಯ ಬಂದು ನನ್ನ ಭಾವ ಬಸವರಾಜ, ಅಣವೀರಯ್ಯ, ಶಾಂತಲಿಂಗಯ್ಯ, ಬಸವಾ ಎಲ್ಲರೂ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಚನ್ನವೀರನ ಶವವು ಬಾವಿಯಲ್ಲಿ ಬೋರಲ್ ಬಿದ್ದಿದ್ದು, ಸದರಿಯವನು 5-6 ದಿವಸಗಳ ಹಿಂದೆ ತಿರುಗಾಡುತ್ತಾ ಬಂದು ರಾತ್ರಿವೇಳೆಯಲ್ಲಿ ಕಣ್ಣು ಕಾಣೆದ ಆಕಸ್ಮಿಕವಾಗಿ ಕಾಲುಜಾರಿ ಬಾವಿಯಲ್ಲಿ ಬಿದ್ದಿರಬಹುದು. ಸದರಿಯವನ ಶವವು ಭಾರಿ ಬಿಸಿಲಿನಿಂದ ಹಾಗೂ ಇತ್ತಿಚಿಗೆ ಸುರಿದ ಮಳೆಯಿಂದ ಶವ ಕೊಳತಿರುತ್ತದೆ. ಸದರಿಯವನ ಸಾವಿನ ಬಗ್ಗೆ ನನಗೆ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆ. ಯು.ಡಿ.ಆರ್. ಸಂ 09/2019 ಕಲಂ 174 ಸಿ.ಆರ್.ಪಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ದೊಡ್ಡಪ್ಪ ತಂದೆ ಬಸಪ್ಪ ಹೊಸಮನಿ ಸಾ||ಪಡಗದಹಳ್ಳಿ ತಾ|| ಜೇವರ್ಗಿ ರವರದು ತಮ್ಮೂರ ಸಿಮಾಂತರದಲ್ಲಿ ನನ್ನ ಮಗ ಸಿದ್ದಪ್ಪನ ಹೆಸರಿನಲ್ಲಿ ಸರ್ವೆ ನಂ 58/2 ರಲ್ಲಿ 3 ಎಕರೆ ಜಮೀನು ಇರುತ್ತದೆ, ನನ್ನ ಮಗ ಹೊಲದ ಸಲುವಾಗಿ ಬಳಬಟ್ಟಿ ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 90 ಸಾವಿರ ಸಾಲ ಮತ್ತು ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದನು, ನನ್ನ ಮಗ ಸಿದ್ದಪ್ಪ ಇತನು ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಈ ಸಲ ಮಳೆಯು ಸರಿಯಾಗಿ ಬಾರದೆ  ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 02-06-2019 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನನ್ನ ಮಗ ಬೈಹಿರದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು, ಸ್ವಲ್ಪ ಹೊತ್ತಾದ ನಂತರ ನನ್ನ ಮಗ ಮನೆಗೆ ಬಂದು ನಾನು ಸಾಲದ ಸಲುವಾಗಿ ವಿಷ ಸೇವನೆ ಮಾಡಿದ್ದೇನೆ ಅಂತಾ ಅಂದು ಒಮ್ಮೇಲೆ ಒದ್ದಾಡಿ ವಾಂತಿ ಮಾಡಿಕೊಳ್ಳುತ್ತಿದ್ದನು, ಆಗ ನಾನು ಗಾಬರಿಗೊಂಡು ನನ್ನ ಮಕ್ಕಳಾದ ಗುರಪ್ಪ ಮತ್ತು ಭೀಮರಾಯ ಅವನ ಹೆಂಡತಿ ಮರೇಮ್ಮ ಎಲ್ಲರೂ ಕೂಡಿ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಶಹಾಪುರ ಸ್ಪಂದನಾ ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಿಗಿಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆದಯುತ್ತಾ ಇಂದು ದಿನಾಂಕ: 04-06-2019 ರಂದು ಬೆಳಗ್ಗೆ 7-40 ಗಂಟೆಗೆ ನನ್ನ ಮಗ ಮೃತ ಪಟ್ಟಿರುತ್ತಾನೆ, ಕಾರಣ ನನ್ನ ಮಗ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು  ದಿನಾಂಕ 02-06-2019 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ  ಯಾವುದೋ ಕ್ರಿಮಿನಾಷಕ ಔಷಧಿ ಸೇವಿಸಿ, ಉಪಚಾರ ಪಡೆಯುತ್ತಾ ಇಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಯು.ಡಿ.ಆರ್. ನಂ; 13/2019 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: