Police Bhavan Kalaburagi

Police Bhavan Kalaburagi

Saturday, July 6, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 05-07-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಲ್ಲಾಬಾದ ಗ್ರಾಮದ ವಿಜಯಲಕ್ಮೀ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ  ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಬಾದ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣ ಹತ್ತೀರ ನಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ವಿಜಯಲಕ್ಮೀ ದೇವಸ್ಥಾನದ ಮರೆಯಲ್ಲಿ ನಿಂತು  ನೋಡಲು, ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ ಇದು ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಗಣಪತಿ ತಂದೆ ಬಸಣ್ಣ ಕಂಠೋಳ್ಳಿ ಸಾ||ಮಲ್ಲಬಾದ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1020/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಪೆನ್ನ ದೊರೆತವು, ಸದರಿಯವುಗಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 116/2019 ಕಲಂ 78 (3) ಕೆ.ಪಿ.ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:04/07/2019 ರಂದು ಅಫಜಲಪೂರ ಠಾಣಾ ವ್ಯಾಪ್ತಿ  ಮಾಶಾಳ ಗ್ರಾಮದ ಗುಜಮುಕ್ಕಮ್ಮ ದೇವರ ಗುಡಿಯ ಮುಂದೆ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸದ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಗುಜಮುಕಮ್ಮನ ದೆವರ ಗುಡಿಯಿಂದ ಸ್ವಲ್ಪ ದೂರು ಜಿಪ ನಿಲ್ಲಿಸಿ ಕಾಲ ನಡಿಗೆಯ ಮೂಲಕ ಹೋಗಿ ಮರೆಯಾಗಿ ನಿಂತು ನೋಡಲು ಜಟ್ಟಿಂಗರಾಯ ಗುಡಿಯ ಮುಂದೆ 04 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ ದಾಳಿ ಮಾಡಿ ಜೂಜಾಡುತ್ತಿದ್ದ 04 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ರಪೀಕ ತಂದೆ ಅಮಿನಸಾಬ ಖಸಾಯಿ 2) ಬೀರಪ್ಪ ತಂದೆ ಈಶ್ವ ರಪ್ಪ ಪೂಜಾರಿ 3)ಉಮೇಶ ತಂದೆ ಹಣಮಂತ ಕೌಂಟಗಿ 4)ಗೌತಮಬುದ್ದ ತಂದೆ ತುಕ್ಕಪ್ಪ ತೆಲ್ಲೂಣಗಿ ಸಾ|| ಎಲ್ಲರು ಮಾಶಾಳ ಗ್ರಾಮದವರು ಅಂತಾ ತಿಳಿಸಿದ್ದು ಸದರಿಯವರು ಜೂಜಾಟಕ್ಕೆ ಬಳಸಿದ  ಒಟ್ಟು 1580/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು  ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 112/2019 ಕಲಂ 87 ಕೆ.ಪಿ ಆಕ್ಟ ನೇದ್ದರಲ್ಲಿ ಪ್ರರಕಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟೆಂಪೂ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 05-07-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಮಣ್ಣೂರ ಗ್ರಾಮದ ಭೀಮಾನದಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಟೆಂಪೊದಲ್ಲಿ ಮರಳು ತುಂಬುತ್ತಿದ್ದಾರೆ ಅಂತ  ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮ ತಲುಪಿ ಮಣ್ಣೂರ ಗ್ರಾಮದಿಂದ ಶೇ಼ಷಗಿರಿ ಗ್ರಾಮಕ್ಕೆ ಹೋಗುವ ಶೇ಼ಷಗಿರಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟೆಂಪೋ ನಮ್ಮ ಎದುರುಗಡೆ ಬರುತ್ತಿರುವದನ್ನು ಕಂಡು ಅದರ ಚಾಲಕನಿಗೆ ನಿಲ್ಲಸೂವಂತೆ ಕೈ ಸೂಚನೆ ಕೊಟ್ಟಾಗ ಆತನು ಸದರಿ ಟೆಂಪೋ ನಿಲ್ಲಿಸಿ ಓಡಿ ಹೋದನು ಆಗ ನಾವು ಬೆನ್ನಟ್ಟಿದ್ದರು ಸಿಗಲಿಲ್ಲ  ಆಗ ನಾವು ಪಂಚರ ಸಮಕ್ಷಮ ಸದರಿ ಟೆಂಪೊ ಚೆಕ್ಕ ಮಾಡಲು  ಟಾಟಾ ಕಂಪನಿಯ ಟೆಂಪೊ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆ,-37 4248 ನೇದ್ದು ಇತ್ತು ಸದರಿ ಟೆಂಪೊ .ಕಿ 2,00,000/-ರೂ  ಇರಬಹುದು. ಸದರಿ ಟೆಂಪೊದಲ್ಲಿದ್ದ ಮರಳಿನ .ಕಿ 5.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟೆಂಪೊ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 115/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದವರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ದಿನಾಂಕ 05-07-2019 ರಂದು ಹಿಂಚಗೇರಾ ಗ್ರಾಮ ಲೆಕ್ಕಾಧಿಕಾರಿಗಳಾದ ಗಂಗಾಧರ ತಂದೆ ಅವಲಪ್ಪ ಹಚ್ಚದ ಹಾಗೂ ಶರಣಪ್ಪ ತಂದೆ ಭಗವಂತ ವಾಲಿಕಾರ ಗ್ರಾಮ ಸಹಾಯಕ ಹಿಂಚಗೇರಾ ರವರೆಲ್ಲರುಗಳು ಮಾನ್ಯ ಮದುರಾಜ ತಸಿಲ್ದಾರರು ಅಫಜಲಪೂರ ಮತ್ತು ಶ್ರೀ ಮಂಜುನಾಥ ಹುಗಾರ ಆರಕ್ಷಕ ಉಪ ನೀರಿಕ್ಷಕರು ಅಫಜಲಪೂರ ರವರ ನಿರ್ದೇಶನದಂತೆ ಹಿಂಚಗೇರಾ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹಿಸಿದ ನಿಖರವಾದ ಮಾಹಿತಿ ಮೇರೆಗೆ ಹಿಂಚಗೆರಾ ಗ್ರಾಮದ ಸರ್ವೆ ನಂ:1/2 ರಲ್ಲಿ ವಿಸ್ತೀರ್ಣ 2 ಎಕರೆ 15 ಗುಂಟೆ ಜಮೀನಿನ ಪಟ್ಟೆದಾರರಾದ ಮೃತ ಗುರಣ್ಣ ತಂದೆ ಪಿರಪ್ಪ ಶಿವಣಗಿ ಸಾ: ಹಿಂಚಗೇರಾ ಇವರ ಜಮೀನಿನಲ್ಲಿ ಸದರಿ ಜಮೀನಿನ ವಾರಸದಾರರಾದ ಸುಭಾಷ ತಂದೆ ಗುರಣ್ಣ ಶಿವಣಗಿ ಇವರು 150 ಟಿಪ್ಪರದಷ್ಟು ಅಕ್ರಮ ಮರಳು ಸಂಗ್ರಹಿಸಿರುತ್ತಾರೆ ಸದರಿ ಮರಳಿನ ಅಂದಾಜು ಕಿಮ್ಮತ್ತು 15,00,000/- ರೂ ಇರುತ್ತದೆ. ಸದರಿ ಮರಳನ್ನು ಜಪ್ತಿ ಪಡಿಸಿಕೊಂಡಿದ್ದು ನಂತರ ಸದರಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು PWD ಇಲಾಖೆಗೆ ಹಸ್ತಾಂತರ ಮಾಡಿ  ಅಫಜಲಪೂರ  ಪೊಲೀಸ್ ಠಾಣೆಗೆ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಸುಭಾಷ ತಂದೆ ಗುರಣ್ಣ ಶಿವಣಗಿ ಸಾ||ಹಿಂಚಗೇರಾ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 117/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಭೀರಪ್ಪ ತಂದೆ ಶಿವಪ್ಪ ಹಿರೇಕುರುಬ ಕಂದಾಯ ನಿರೀಕ್ಷಕರು ಅಫಜಲಪೂರ ರವರು ದಿನಾಂಕ 03-07-2019 ರಂದು 10:20 ,ಎಮ್ .ಕ್ಕೆ ಮಾನ್ಯ ಮದುರಾಜ ತಹಸಿಲ್ದಾರರು ಅಫಜಲಪೂರ ರವರು ಮತ್ತು ನಾನು ಹಾಗೂ ಹಿಂಚಗೇರಾ ಗ್ರಾಮ ಲೆಕ್ಕಾಧಿಕಾರಿಗಳಾದ ಗಂಗಾಧರ ತಂದೆ ಅವಲಪ್ಪ ಹಚ್ಚದ ಹಾಗೂ ಶರಣಪ್ಪ ತಂದೆ ಭಗವಂತ ವಾಲಿಕಾರ ಗ್ರಾಮ ಸಹಾಯಕ ಹಿಂಚಗೇರಾ ಮತ್ತು ಪೊಲೀಸ್ ಇಲಾಖೆಯಿಂದ ಮಂಜುನಾಥ ಹುಗಾರ ಪಿ,ಎಸ್,.ಅಫಜಲಪೂರ ಪೊಲೀಸ್ ಠಾಣೆ ರವರೊಂದಿಗೆ ನಿಖರವಾದ ಮಾಹಿತಿ ಮೇರೆಗೆ ಹಿಂಚಗೇರಾ ಗ್ರಾಮದ ಹೊಲ ಸರ್ವೆ ನಂ:11/3 ವಿಸ್ತಿರ್ಣ 04-20 ಗುಂಟೆ ಜಮೀನಿಗೆ ಬೇಟಿ ಕೊಟ್ಟು 10-30 ,ಎಮ್.ಕ್ಕೆ ದಾಳಿ ಮಾಡಿದಾಗ ಸದರಿ ಜಮೀನಲ್ಲಿ ಸುಮಾರು 80 ಟಿಪ್ಪರನಷ್ಟು ಅಕ್ರಮ ಮರಳು ಸಂಗ್ರಹಿರುತ್ತಾರೆ ಇದರ ಮೂಲ ಪಟ್ಟೆದಾರರಾದ ಈರಣ್ಣ ತಂದೆ ಅಡಿವೆಪ್ಪ ಸುತಾರ ಇವರ ಜಮೀನಿನಲ್ಲಿ ಮರಳು ಸಂಗ್ರಹಿಸಿರುತ್ತಾರೆ ಇದರ ಜೋತೆ ಇನ್ನಿತರರು ಕೂಡಿ ಮರಳು ಸಂಗ್ರಹಿಸಿರುತ್ತಾರೆ ಇದರ :ಕಿ:8,00,000/- ಲಕ್ಷ ರೂ ಇರುತ್ತದೆ. ಹಾಗೂ ಇದರ ಪಕ್ಕದಲ್ಲೆ ಪುನರ್ವಸತಿ ಕೇಂದ್ರ ,ನಂ:4/1 ರಲ್ಲಿ 02-00 ಜಮಿನಿನಲ್ಲಿ(ಸರಕಾರಿ ಜಮೀನು) ಸುಮಾರು 05 ಟಿಪ್ಪರನಷ್ಟು ಮರಳು ಸಂಗ್ರಹಿಸಿರುತ್ತಾರೆ ಅನಾಮಿಕ ವ್ಯಕ್ತಿಗಳು ಸಂಗ್ರಹಿಸಿದ್ದು ಇವರ ಹೆಸರು ನಿಖರವಾಗಿ ತಿಳಿದು ಬಂದಿರುವದಿಲ್ಲ ಇದರ :ಕಿ:50,000/-ರೂ ಇರುತ್ತದೆ.ನಂತರ 10-30 .ಎಮ್.ದಿಂದ 11-00 ,ಎಮ್.ವರೆಗೆ ಸದರಿ ಮರಳನ್ನು ಜಪ್ತಿ ಪಡಿಸಿಕೊಂಡಿದ್ದು ನಂತರ ಸದರಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು PWD ಇಲಾಖೆಗೆ ಹಸ್ತಾಂತರ ಮಾಡಿ  ಅಫಜಲಪೂರ ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 109/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ ಆರ್ ಆಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಭಿರಪ್ಪ ತಂದೆ ಶಿವಪ್ಪ ಹಿರೇಕುರುಬ ಕಂದಾಯ ನಿರೀಕ್ಷಕರು ಅಫಜಲಪೂರ ರವರು ದಿನಾಂಕ 03-07-2019 ರಂದು  ನಾನು ಹಾಗೂ ಹಿಂಚಗೇರಾ ಗ್ರಾಮ ಲೆಕ್ಕಾಧಿಕಾರಿಗಳಾದ ಗಂಗಾಧರ ತಂದೆ ಅವಲಪ್ಪ ಹಚ್ಚದ ಹಾಗೂ ಶರಣಪ್ಪ ತಂದೆ ಭಗವಂತ ವಾಲಿಕಾರ ಗ್ರಾಮ ಸಹಾಯಕ ಹಿಂಚಗೇರಾ ರವರೆಲ್ಲರುಗಳು ನಾವು ಮಾನ್ಯ ಮದುರಾಜ ತಸಿಲ್ದಾರರು ಅಫಜಲಪೂರ ಮತ್ತು ಮಾನ್ಯ ಮಂಜುನಾಥ ಹುಗಾರ ಆರಕ್ಷಕ ಉಪ ನೀರಿಕ್ಷಕರು ಅಫಜಲಪೂರ ರವರ ನಿರ್ದೇಶನದಂತೆ ಹಿಂಚಗೇರಾ ಗ್ರಾಮಕ್ಕೆ ಹಾಜರಾದೇವು ನಂತರ ಅಕ್ರಮ ಮರಳು ಸಂಗ್ರಹಿಸಿದ ನಿಖರವಾದ ಮಾಹಿತಿ ಮೇರೆಗೆ ಹಿಂಚಗೆರಾ ಗ್ರಾಮದ ಸರ್ವೆ ನಂ:10/2 ರಲ್ಲಿ ವಿಸ್ತೀರ್ಣ 3 ಎಕರೆ 09 ಗುಂಟೆ ಜಮೀನಿನಲ್ಲಿ ಹಾಗೂ ಸರ್ವೆ ನಂ:10/2 ರಲ್ಲಿ ವಿಸ್ತೀರ್ಣ 3 ಎಕರೆ ಕ್ರಮವಾಗಿ ಶಿವರಾಯ ತಂದೆ ರೇವಣಸಿದ್ದಪ್ಪ ಸೋನ್ನ ಇವರ ಜಮೀನಲ್ಲಿ ಅಂದಾಜು 05 ಟಿಪ್ಪರದಷ್ಟು ಮರಳು ಸಂಗ್ರಹಿಸಿರುತ್ತಾರೆ ಮತ್ತು ಅಮೋಗಿ ತಂದೆ ಶಿವಪ್ಪ ಸೋನ್ ಇವರ ಜಮೀನಿನಲ್ಲಿ ಅಂದಾಜು 05 ಟಿಪ್ಪರದಷ್ಟು ಮರಳು ಸಂಗ್ರಹಿಸಿರುತ್ತಾರೆ ಹೀಗೆ ಒಟ್ಟು  10 ಟಿಪ್ಪರದಷ್ಟು ಮರಳು ಅಂ||ಕಿ||1,00,000/- ಗಳಾಗಬಹುದು ಸದರಿ ಮರಳನ್ನು ಸಮಯ 11-20 ,ಎಮ್.ದಿಂದ 11-50 ,ಎಮ್.ಮಧ್ಯದ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡಿದ್ದು ನಂತರ ಸದರಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು PWD ಇಲಾಖೆಗೆ ಹಸ್ತಾಂತರ ಮಾಡಿ  ನಂತರ ಅಫಜಲಪೂರ ಠಾಣೆಗೆ  ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 111/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 03.07.2019 ರಂದು ಸಾಯಂಕಾಲ ಶ್ರೀ ನಾಗರಾಜ ತಂದೆ ಆದಪ್ಪಾ ಡೋಣುರ  ಸಾ: ಲಕ್ಷ್ಮಿಪೂರ  ತಾ: ಸೋರಾಪೂರ ಜಿ: ಯಾದಗೀರ  ರವರು ಮತ್ತು  ಮೃತ ಆದಪ್ಪ ಮತ್ತು ತಮ್ಮ ರಾಮಪ್ರಸಾದ ಮೂರು ಜನರು ನಮ್ಮ  ಮಾವನಾದ ಆರೋಪಿ ಚಂದ್ರಶೇಖರ ಇವರು ಚಲಾಯಿಸುತ್ತಿರುವ ಕಾರ ನಂಬರ ಕೆಎ-36/ಎನ್-7511 ನೇದ್ದರಲ್ಲಿ ಆದಪ್ಪಾ ಇವರಿಗೆ ಆರ್ಯುವೇದಿಕ  ಔಷಧ ತರುವ ಸಲುವಾಗಿ ಬೀದರ ಜಿಲ್ಲೆಯ ಭಾಲ್ಕಿಗೆ ಹೋಗಿ ವಾಪಸ್ಸ ಊರಿಗೆ ಹೋಗುವ ಸಲುವಾಗಿ ಬಾಲ್ಕಿಯಿಂದ ಕಲಬುರಗಿ ಮುಖಾಂತರ ಲಕ್ಷ್ಮಿಪೂರ ಗ್ರಾಮಕ್ಕೆ ಹೋಗುವಾಗ ಫರಹತಾಬಾದ ದಾಟಿದ ನಂತರ ಚಂದ್ರಶೇಖರ ಇತನು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ರೋಡ ಎಡ ಬಲ ತಿರುಗಿಸುತ್ತಾ ಹೋಗಿ ರಾಷ್ಟ್ರಿಯ ಹೆದ್ದಾರಿ ಕಲಬುರಗಿ ಜೇವರಗಿ  ಮದ್ಯದಲ್ಲಿ ಬರುವ ಸರಡಗಿ ಗ್ರಾಮದ ಖಣಿ ಹತ್ತೀರ ರೋಡ ಮೇಲೆ ಒಮ್ಮಲೆ ಎಡಗಡೆ ತಿರುಗಿಸಿ ಕಾರ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಆದಪ್ಪ ಇವರಿಗೆ ಭಾರಿ ಪೆಟ್ಟು ಬಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದು ಹಾಗೂ  ನಾನು ಭಾರಿಗಾಯಹೊಂದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ ಗುನ್ನೆ ನಂ 80/2019 ಕಲಂ 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಪಿರೋಜ ತಂದೆ ಅಲ್ಲಾಭಕ್ಷ ಕ್ವಾಟಿ ಸಾ: ಹೊನಗುಂಟಾ ರವರು ದಿನಾಂಕ: 02/07/2019 ರಂದು ಮುಂಜಾನೆ ತನ್ನ ಮೋಟಾರ ಸೈಕಲ ನಂಬರ ಕೆ.. 32 ಇಸಿ 9828 ನೇದ್ದರ ಮೇಲೆ ತನ್ನ ಮಗನಾದ ಇಸ್ಮಾಯಿಲ ವಯಾ: 6 ವರ್ಷ ಇತನಿಗೆ ಕೂಡಿಸಿಕೊಂಡು ಹೊನಗುಂಟಾ ದಿಂದ ಶಹಾಬಾದಕ್ಕೆ ಹೋಗುತ್ತಿದ್ದಾಗ ವಡ್ಡರ ವಾಡಿ ಹತ್ತಿರ ಬಂದಾರ ವಡ್ಡರ ವಾಡಿಯ ಹೊಟೇಲ ಹತ್ತಿರ ಬಾಬು ನಿಂತಿದ್ದು ಅವನು ನಮಗೆ ನೋಡಿ ನಾನು ಶಹಾಬಾದಕ್ಕೆ ಬರುತ್ತೇನೆ ಅಂತಾ ಅಂದಿದ್ದಕ್ಕೆ ಅವನು ನನ್ನ ಮೋಟಾರ ಸೈಕಲ ಕುಳಿತುಕೊಂಡು ಆಗ ಶಹಾಬಾದಕ್ಕೆ ಹೋಗುತ್ತಿದ್ದಾಗ ವಡ್ಡರ ವಾಡಿ ಗ್ರಾಮದ ಮರಗಮ್ಮ ಗುಡಿಯ ಹತ್ತಿರ ಹೋಗುತ್ತಿದ್ದಾಗ ನಮ್ಮ ಹಿಂದುಗಡೆಯಿಂದ  ಮೋಟಾರ ಸೈಕಲ ನಂಬರ ಕೆ.. 32 0124 ನೇದ್ದರ ಚಾಲಕ ವಿರೇಶ ಇತನು ತನ್ನ ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಾವು ಮೂರು ಜನರು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದದ್ದರಿಂದ ನನ್ನ ಮಗ ಇಸ್ಮಾಯಿಲನಿಗೆ ಎಡಗಾಲ ಮೊಳಕಾಲ ಕೆಳಗೆ & ಪಾದದ ಹತ್ತಿರ ಗುಪ್ತ ಪೆಟ್ಟಾಗಿ ಮುಖಕ್ಕೆ ತರಚಿದ ರಕ್ತಗಾಯಾವಾಗಿತ್ತು  ನನಗೆ ಮುಖಕ್ಕೆ ತರಚಿದ್ದು ಬಾಬು ಇತನಿಗೆ ನೋಡಲಾಗಿ ಬಲಗಾಲ ಮೊಳಕಾಲ ಹತ್ತಿರ ರಕ್ತಗಾಯಾ ಮತ್ತು ಗುಪ್ತಪೆಟ್ಟಾಗಿರುತ್ತದೆ. ಆಗ ನಮಗೆ ಆದ ಗಾಯಾ ಪೆಟ್ಟು ನೋಡಿ ಮೋಟಾರ ಸೈಕಲ ಚಾಲಕ ತನ್ನ ಮೋಟಾರ ಸೈಕಲ ದೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆ ಗುನ್ನೆ ನಂಬರ 79/2019 ಕಲಂ 279 337 338 ಐಪಿಸಿ ಸಂಗಡ 187 ಎಮ್ ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಸಾಬಣ್ಣ ತಂದೆ ಮಲ್ಲಣ್ಣ ಮಡಿವಾಳ ಸಾ: ಶಂಕರವಾಡಿ ರವರು ದಿನಾಂಕ: 30/06/2019 ರಂದು ತನ್ನ ಮೋಟಾರ ಸೈಕಲ ನಂಬರ ಕೆ 32 ಯು 3151 ನೇದ್ದರ ಮೇಲೆ ಕುಳಿತುಕೊಂಡು ಶಂಕರವಾಡಿ ಗ್ರಾಮದಿಂದ ಶಹಾಬಾದಕ್ಕೆ ಸಂತಿಗೆ ಹೋಗಿ ಶಹಾಬಾದದಲ್ಲಿ ಸಂತೆ ಮಾಡಿಕೊಂಡು ಮರಳಿ ಶಂಕರವಾಡಿ ಗ್ರಾಮಕ್ಕೆ ಅದೆ ಮೊಟಾರ ಸೈಕಲ ಮೇಲೆ ಹೋಗುತ್ತಿದ್ದಾಗ ಮದ್ಯಾಹ್ನ 3-00 ಗಂಟೆಗೆ ಎಸ್ ಆಸ್ಪತ್ರೆಯ ಹತ್ತಿರ ರೋಡಿನಲ್ಲಿ ವಾಡಿ ಕಡೆಯಿಂದ ಒಬ್ಬ ಟವೇರ ವಾಹನ ನಂಬರ ಕೆ.. 19 ಎಮ್ಎಮ್‌ 0123 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿ ಡಿಕ್ಕಿ ಪಡಿಸಿದರಿಂದ ಪಿರ್ಯಾದಿ ಮೋಟಾರ ಸೈಕಲ ಸಮೇತ ರೋಡಿನಲ್ಲಿ ಬಿದ್ದರಿಂದ  ಬಲಗಾಲ ಕಪಗಂಡ ಹತ್ತಿರ ಭಾರಿ ರಕ್ತಗಾಯಾವಾಗಿದ್ದು ಮತ್ತು ಅಲಲ್ಲಿ ತರುಚಿದ ಗಾಯಾವಾಗಿರುತ್ತದೆ ಆಗ ಸದರಿ ಟವೇರ ವಾಹನದ ಚಾಲಕನು ನನಗೆ ಆದ ಗಾಯಾ ಪೆಟ್ಟು ನೋಡಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಆಗ ನಾನು ನನಗೆ  ಪರಿಚಿಯದ ನಾಗರಾಜ ಇತನಿಗೆ ತಿಳಿಸಿದರಿಂದ ಅವನು ಬಂದು ನನಗೆ ಉಪಚಾರ ಕುರಿತು ಧನ್ವಂತರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ ಕಾರಣ ಸದರಿ ಟವೇರ ವಾಹನ ಚಾಲಕ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯ ಗುನ್ನೆ ನಂಬರ 75/2019 ಕಲಂ 279 338 ಐಪಿಸಿ ಸಂಗಡ 187 ಎಮ್ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ : ಶ್ರೀ ಗಣೇಶ ತಂದೆ ಮಹಾದೇವ ತಾಮೆಲರ ಸಾ:ಬಲರಾಮಚೌಕ ವಾಡಿ ರವರು ,ದಿನಾಂಕ 25/06/2019 ರಂದು ಬೆಳಗ್ಗೆ ತಾನು ತನ್ನ ತಂದೆ ಮಹಾದೇವ ಇವರೊಂದಿಗೆ ತಮ್ಮ ತಂದೆಯ ಮೊಟರ ಸೈಕಲ ನಂಬರ ಕೆಎ-32 ಇಜೆ-5154 ನೇದ್ದರ ಮೇಲೆ ಕುಳಿತುಕೊಂಡು ಬೆಂಗಳೂರದಿಂದ ವಾಡಿಗೆ ಬರುವ ತಮ್ಮ ಸಂಬಂಧಿಕರಿಗೆ ಕರೆದುಕೊಂಡು ಬರಲು ರೇಲ್ವೇ ಸ್ಟೇಷನಗೆ ಬರುವ ಕಾಲಕ್ಕೆ ಮೊಟರ ಸೈಕಲ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟು ಮುಂದೆ ವಾಲ್ಮೀಖಿ ನಾಯಕ ರವರ ಮನೆಯ ಮುಂದುಗಡೆ ರೊಡ ಜಂಪದಲ್ಲಿ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ನಾನು ಕೆಳಗಡೆ ಬಿದ್ದ ಪರಿಣಾಮ ನನ್ನ ಎಡ ಮೊಳಕಾಲ ಕೆಳಗಡೆ ಭಾರಿ ಗಾಯವಾಗಿ ಬಲ ತಲೆಗೆ ರಕ್ತಗಾಯವಾಗಿದ್ದು ನಂತರ ಇದನ್ನು ನೋಡಿದ ರಾಜು ತಂದೆ ಬಸವರಾಜ ಇವರು ಬಂದು ನನಗೆ ಎಬ್ಬಿಸಿ  ಕೂಡಿಸಿದ್ದು ನಂತರ ನಮ್ಮ ತಂದೆ ನನಗೆ ಉಪಚಾರ ಕುರಿತು ಹೆಲ್ತ ಕೇರ್ ಆಸ್ಪತ್ರೆಗೆ ತೆಗೆದುಕೊಂಡು ಉಪಚರಿಸಿಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಕುರಾಳ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆ ಗುನ್ನೆ ನಂ 75/2019 ಕಲಂ 279,338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಜಗದೇವಿ ಗಂಡ ಕಿರಣ ನಾಕಮನ್ ಸಾ|| ಆಲೂರ (ಬಿ) ತಾ|| ಆಳಂದ ಜಿ|| ಕಲಬುರಗಿ ರವರ ತಂದೆ ತಾಯಿಯವರು ನಮ್ಮ ಸಂಪ್ರದಾಯದಂತೆ ಕಿರಣ ತಂದೆ ಜಗನ್ನಾಥ ನಾಕಮನ್ ಸಾ|| ಆಲೂರ (ಬಿ) ತಾ|| ಆಳಂದ ಜಿ|| ಕಲಬುರಗಿ ಇವರೊಂದಿಗೆ ನನ್ನ ಮದುವೆ ಮಾಡಿ 2 ವರ್ಷ ಆಗಿರುತ್ತದೆ. ಮದುವೆಯಾದ ನಂತರ ಒಂದೆರೆಡು ತಿಂಗಳಲ್ಲಿ ನನಗೆ ನನ್ನ ಗಂಡ, ಅತ್ತೆ ಅನ್ನಪೂರ್ಣ, ಮಾವ ಜಗನ್ನಾಥ, ನಾದಿನಿಯಾದ ಮೀನಾಕ್ಷಿ ಮತ್ತು ಪೂಜಾ, ಮೈದುನ ಅರುಣ ಇವರೆಲ್ಲರೂ ನ್ನನ ತವರು ಮನೆಯಿಂದ ಬಂಗಾರ ತರಬೇಕು ಅಂತಾ ಕಿರುಕುಳ ನೀಡಿ ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ. ಈಗ ನನಗೆ ಒಂದು ಹೆಣ್ಣು ಮಗು ಇರುತ್ತದೆ. ಹೀಗಿದ್ದು ದಿನಾಂಕ 17/06/2019 ರಂದು ಸಾಯಂಕಾಲ 6 ಗಂಟೆಯ ಸೂಮಾರಿಗೆ ನನಗೆ ನನ್ನ ಗಂಡ ಕಿರಣ, ಅತ್ತೆ ಅನ್ನಪೂರ್ಣ, ಮಾವ ಜಗನ್ನಾಥ ನಾದಿನಿಯಾದ ಮೀನಾಕ್ಷಿ ಮತ್ತು ಪೂಜಾ, ಮೈದುನ ಅರುಣ ಇವರೆಲ್ಲರೂ ಕೂಡಿಕೊಂಡು ನನಗೆ ಹೊಡೆ ಬಡೆ ಮಾಡಿ ಮನೆಯಲ್ಲಿ ತುಂಬಾ ತೊಂದರೆ ನೀಡುತ್ತಿದ್ದು ಮನೆಯಲ್ಲಿ ಊಟ ಕೊಡದೇ ಉಪವಾಸ-ವನವಾಸ ಹಾಕುತ್ತಿದ್ದ ಎಲ್ಲರೂ ಕೂಡಿ ನನ್ನ ಕೈ ಒತ್ತೀ ಹಿಡಿದು ನನ್ನ ಮೇಲೆ ನನಗೆ ಭಾರಿ ಗುಪ್ತಗಾಯಗೊಳಿಸಿ ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ ನೀನು ನಿನ್ನ ತವರು ಮನೆಯಿಂದ ಬಂಗಾರು ತೆಗೆದುಕೊಂಡು ಬಾ ಅಂತಾ ಹೇಳುತ್ತಾ ನನ್ನ ಬಾಯಿಯಲ್ಲಿ ಬಟ್ಟೆ ತುರುಕಿ ಹೊಡೆಯುತ್ತಾರೆ ಅಲ್ಲದೇ ನನ್ನ ಮೇಲೆ ಸೀಮೆ ಎಣ್ಣೆ ಹಾಕಿ ಜೀವದ ಭಯ ಹಾಕುತ್ತಾ ಚಿತ್ರಹಿಂಸೆ ನೀಡುತ್ತಿದ್ದು ಇವರ ಚಿತ್ರಹಿಂಸೆ ತಾಳಲಾರದೇ ನಾನು ನನ್ನ ತವರು ಮನೆಯಾದ ದಸ್ತಾಪೂರ ತಾ|| ಜಿ|| ಕಲಬುರಗಿ ಇಲ್ಲಿಯೂ ಬಂದು ಉಳಿದುಕೊಂಡಿರುತ್ತೇನೆ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ 96/19 ಕಲಂ 498(ಎ), 323.504.506 ಸಂ 149 ಐಪಿಸಿ ಮತ್ತು 3, 4 ಡಿಪಿ ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  
ವಾಹನಗಳ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವರಾಜ ತಂದೆ ತಮ್ಮಣ್ಣ ಬಳೂತಿ ಸಾ|| ಹೋನ್ನಳ್ಳೀ ತಾ|| ಜಿ|| ವಿಜಯಪೂರ ರವರದು ಹೊಂಡಾ ಶೈನ್ ಕಂಪನಿಯ ಮೋಟಾರ ಸೈಕಲ ಇದ್ದು, ಅದರ ನಂಬರ ಕೆಎ-28 ಇಎಲ್-4799 ಅಂತಾ ಇರುತ್ತದೆ, ಚೆಸ್ಸಿ ನಂಬರ:- ME4JC652DGT109663 ಇಂಜೆನ ನಂಬರ:- JC65ET0335377 ಅಂತಾ ಗ್ರೇ ಬಣ್ಣದ್ದು ಇರುತ್ತದೆ. ಅಂದಾಜು 25,000/- ರೂ ಕಿಮ್ಮತ್ತಿನದು ಇರುತ್ತದೆ.  ದಿನಾಂಕ 12-06-2019 ರಂದು ನಮ್ಮೂರಿನಿಂದ ಸದರಿ ಮೇಲೆ ತಿಳಿಸಿದ ನನ್ನ ಮೋಟರ ಸೈಕಲ ಮೇಲೆ ಮದುವೆಗೆಂದು ಅಫಜಲಪೂರಕ್ಕೆ ಬಂದಿರುತ್ತೇನೆ. ಮದ್ಯಾಹ್ನ 1:00 ಗಂಟೆಗೆ ಸದರಿ ನನ್ನ ಮೋಟರ ಸೈಕಲನ್ನು ಅಫಜಲಪೂರ ಪಟ್ಟಣದ ಮಣೂರ ಪಂಕ್ಷನ ಹಾಲ್ ಮುಂದೆ ನಿಲ್ಲಿಸಿ ಮದುವೆಗೆ ಹೋಗಿರುತ್ತೇನೆ. ಮದುವೆ ಮುಗಿಸಿಕೊಂಡು ಮರಳಿ 2:00 ಗಂಟೆಗೆ ನನ್ನ ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲ. ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ಸದರಿ ನನ್ನ ಮೋಟಾರ ಸೈಕಲನ್ನು ಕಳ್ಳತನವಾದ ದಿನದಿಂದ ಇಂದಿನವರೆಗೆ ನಾನು ಮತ್ತು ನನ್ನ ಅಣ್ಣನಾದ ರಾಜಕುಮಾರ ಬಳೂತಿ, ಹಾಗೂ ನಮ್ಮ ಸಂಭಂದಿಕನಾದ ಶರಣಗೌಡ ತೆಗ್ಗೆಳ್ಳಿ ಮೂರು ಜನರು ಕೂಡಿ ದುದನಿ, ಘತ್ತರಗಾ, ಚವಡಾಪೂರ ಮತ್ತು ಅಫಜಲಪೂರ,ಆಲಮೇಲ್ ಇಂಡಿ, ವಿಜಯಪೂರ, ಸಿಂದಗಿ ನಾನಾ ಕಡೆ ಹುಡಕಾಡಿದರು ಕಳ್ಳತನವಾದ ನನ್ನ ಮೋಟರ ಸೈಕಲ್ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಕಪೂರ ಠಾಣೆಯ ಗುನ್ನೆ ನಂ 110/2019 ಕಲಂ 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ  ದಾಖಲಿಸಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ನಾಗರಾಜ ತಂದೆ ಚಂದ್ರಶ್ಯಾ ಕ್ಷತ್ರಿ ಸಾ|| ಪ್ಲಾಟ ನಂ 96, ಭಾಗ್ಯವಂತಿ ಕಾಂಪ್ಲೆಕ್ಸ, ಆಳಂದ ಚೆಕ್ ಪೋಸ್ಟ್ ಹತ್ತಿರ ಡಿ.ಕೆ. ಪಂಕ್ಷನ ಹಾಲ ಪಕ್ಕದಲ್ಲಿ ಆಳಂದ ರೋಡ್, ಕಲಬುರಗಿ, ರವರು ಅಶೋಕ ಲೈಲ್ಯಾಂಡ ದೋಸ್ತ್ತ ವಾಹನ ಸಂಖ್ಯೆಃ ಕೆ.ಎ 32 ಸಿ 9957 ನೆದ್ದು ಖರಿದಿಸಿದ್ದು, ಆ ವಾಹನದಲ್ಲಿ ನಾನು ಗೂಡ್ಸ ಸಾಮಾನುಗಳು ಬಾಡಿಗೆಯಿಂದ ಸಾಗಿಸಿ ಉಪಜೀವನ ಮಾಡಿಕೊಂಡು ಇರುತ್ತೇನೆ.   ದಿನಾಂಕ 20-06-2019 ರಂದು ನಾನು ದಿನನಿತ್ಯದಂತೆ ನನ್ನ ಅಶೋಕ ಲೈಲ್ಯಾಂಡ ದೋಸ್ತ್ತ ವಾಹನ ಸಂಖ್ಯೆಃ ಕೆ.ಎ 32 ಸಿ 9957 ನೆದ್ದು ತೆಗೆದುಕೊಂಡು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ಕಿರಾಯಿ ಹೊಡೆದು 04-00 ಪಿ.ಎಮ್ ಕ್ಕೆ ಮನೆಗೆ ಬಂದು ನನ್ನ ವಾಹನವನ್ನು ನಮ್ಮ ಮನೆಯ ಎದುರಿಗೆ ಇರುವ ಆಳಂದ ರೋಡ ಪಕ್ಕದಲ್ಲಿ ಖುಲ್ಲಾ ಜಾಗದಲ್ಲಿ ನಿಲ್ಲಿಸಿದ್ದು ಇರುತ್ತದೆ. ನಾವು ಅಂದು ರಾತ್ರಿ ದಿನಾಂಕ 21-06-2019 ರಂದು 00-30,ಎಮ್ ವರೆಗೆ ನಾನು ಮತ್ತು ನಮ್ಮ ತಂದೆಯಾದ ಚಂದ್ರಶ್ಯಾ ಮತ್ತು ಅಣ್ಣ ಧನರಾಜ ಕೂಡಿ ಮನೆಯಲ್ಲಿ ಕೆಲಸ ವಿದ್ದ ಕಾರಣ ಎಚ್ಚರವಿದ್ದು ನಾವು ಮಲಗುವವರೆಗೂ ನಮ್ಮ ವಾಹನ ರೋಡಿಗೆ ಇತ್ತು. ದಿನಾಂಕ 21-06-2019 ರಂದು ಬೆಳಿಗ್ಗೆ 04-30 ಎ.ಎಮ್ ಸುಮಾರಿಗೆ ನಾನು ಎದ್ದು ಹೊರಗಡೆ ಬಂದು ನಮ್ಮ ಅಶೋಕ ಲೈಲ್ಯಾಂಡ ದೋಸ್ತ್ತ ವಾಹನ ಸಂಖ್ಯೆಃ ಕೆ.ಎ 32 ಸಿ 9957 ಕಾಣಿಸಲಿಲ್ಲ, ನಾನು ಗಾಬರಿಯಾಗಿ ನಮ್ಮ ಅಣ್ಣ ಮತ್ತು ನಮ್ಮ ತಂದೆಗೆ ಎಬ್ಬಿಸಿ ಎಲ್ಲರೂ ಕೂಡಿ ನೋಡಿ ಸುತ್ತಮುತ್ತಲೂ ವಾಹನ ಹುಡುಕಾಡಿದ್ದು ನಮ್ಮ ವಾಹನ ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿದ್ದು ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ನಾನು ಮತ್ತು ನಮ್ಮ ಮನೆಯವರು ಅಂದಿನಿಂದ ಇಲ್ಲಿಯವರೆಗೂ ಕಲಬುರಗಿ ನಗರದಲ್ಲಿ ಮತ್ತು ಆಳಂದ, ಕಮಲಾಪೂರ, ಅಫಜಲಪೂರ, ಸೇಡಂ ಮತ್ತು ಮುಧೋಳ ಕಡೆ ಹೋಗಿ ಹುಡುಕಾಡಿದ್ದು ನಮ್ಮ ವಾಹನ ಸಿಕ್ಕಿರುವುದಿಲ್ಲಾ ಕಳ್ಳತನವಾದ ಅಶೋಕ ಲೈಲ್ಯಾಂಡ ದೋಸ್ತ್ತ ವಾಹನ ಸಂಖ್ಯೆಃ ಕೆ.ಎ 32 ಸಿ 9957 ನೆದ್ದರ Chessi No MB1AA22E4HRY75295 &  Engine No YHH031212P ಕಲರ್ - ಐರೀಶ ಕ್ರೀಂ, 2017 ಮಾಡೆಲ್ ಅದರ ಅ.ಕಿ. 3,00,000/- ಅಂತಾ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯ ಗುನ್ನೆ ನಂ 170/*2019 ಕಲಂ 379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.

No comments: