Police Bhavan Kalaburagi

Police Bhavan Kalaburagi

Saturday, August 10, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ: 09.08.2019 ರಂದು ಮದ್ಯಾಹ್ನ ಜೇವರಗಿ ಪಟ್ಟಣದ ಕನಕದಾಸ್ ಕಟ್ಟೇಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆದು ಒಬ್ಬ ಮನುಷ್ಯ  ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಮತ್ತು ಮಟಕಾ ಜೂಜಾಟದಲ್ಲಿ ತೊಡಗಿರುತ್ತಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ,  ಪಿ.ಎಸ್.ಐ. ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿ. ಜೇವರಗಿ ಮತ್ತು ಮಾನ್ಯ ಡಿ.ಎಸ್.ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ನಡೆದುಕೊಂಡು ಹೋಗಿ ಮನೆಯ ಗೋಡೆಗಳ ಮರೆಯಲ್ಲಿ ನಿಂತು ನೋಡಲಾಗಿ ಕನಕದಾಸ್ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮನುಷ್ಯನು  ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅಂಕಿ ಸಂಖ್ಯೆಯುಳ್ಳ ಮಟಕಾ ಚೀಟಿ ಬರೆದು ಕೊಡುತ್ತಾ 10/- ರುಪಾಯಿಗೆ 800/- ರೂಪಾಯಿ ಗೆಲ್ಲಿರಿ ಭಾಗ್ಯ ಲಕ್ಷ್ಮೀ ನಿಮ್ಮ ಮನೆಗೆ ಬರುತ್ತಾಳೆ, ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಬರೆಯಿಸಲು ಬಂದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು. ನಾವು ಮಟಕಾ ಬರೆದು ಕೊಳ್ಳುತ್ತಿದ್ದವನಿಗೆ ಹಿಡಿದು ಹೆಸರು ವಿಳಾಸ ಕೇಳಿ ಅಂಗಶೊಧ ಮಾಡಲಾಗಿ ಅವನು ತನ್ನ ಹೆಸರು  ಹಣಮಂತ ತಂದೆ ಶರಣಪ್ಪ ತಳವಾರ  ಸಾ; ಖಾಜಾ ಕಾಲೊನಿ ಜೇವರಗಿ  ಎಂದು ಹೇಳಿದನು. ಅವನ ಹತ್ತಿರ ಮಟಕಾ ಬರೆದುಕೊಂಡು ಸಂಗ್ರಹಿಸಿದ ನಗದು ಹಣ 420/- ರೂ ಮತ್ತು ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ಸದರಿಯವನಿಗೆ ಹಣದ ಬಗ್ಗೆ ವಿಚಾರಿಸಲು ಮಟಕಾ ಬರೆದುಕೊಂಡು ಸಂಗ್ರಹಿಸಿದ ಹಣ ಎಂದು ತಿಳಿಸಿದ್ದು ಸದರಿಯವಗಳನ್ನು ಜಪ್ತಿ ಮಾಡಿಕೊಂಡು ಸದರಿಯಬನೊಂದಿಗೆ ಜೇವರಗಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 159/2019 ಕಲಂ 78 (3) ಕೆ.ಪಿ.ಎಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಡಿ ಠಾಣೆ ದಿನಾಂಕ:07/08/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ ಲಕ್ಷ್ಮೀಪೂರವಾಡಿಯ ಯಂಕಪ್ಪ ಭಾಗೋಡಿ ರವರ ಚಡ್ಡಿ ಹೊಟೇಲ ಮುಂದಿನ ರೊಡಿಗೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಿದ್ದಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ಗಾಂಧಿನಗರ ಲಕ್ಷ್ಮೀಪೂರವಾಡಿಯ ಯಂಕಪ್ಪ ಭಾಗೋಡಿ ರವರ ಚಡ್ಡಿ ಹೊಟೇಲ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಚೀಟಿ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ವಿಚಾರಿಸಲು ರಾಮು ತಂದೆ ದುರ್ಗಪ್ಪ ಪವಾರ ಸಾ:ಗಾಂಧಿನಗರ ಲಕ್ಷ್ಮೀಪೂರ ವಾಡಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 2340/-ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂ; 86/2019 ಕಲಂ;78 [III] ಕೆ.ಪಿ.ಆಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ದರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 09-08-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಗುಡ್ಡೆವಾಡಿ ಗ್ರಾಮದ ಕಡೆಯಿಂದ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಮಾರ್ಗವಾಗಿ ದುಧನಿ ರೋಡಿನ ಕಡೆ ಬರುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ - ದುಧನಿ ರೋಡಿಗೆ ಇರುವ ಬಸ್ ಘಟಕದ ಹತ್ತಿರ ಹೋಗಿ ನಿಂತಾಗ ಬಸವೇಶ್ವಲರ ವೃತ್ತದ ಕಡೆಯಿಂದ ದುಧನಿ ರೋಡ ಮಾರ್ಗವಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ಆಗ ನಾವು ಸದರಿ ಟ್ರ್ಯಾಕ್ಟರ ನಿಲ್ಲಿಸಿ ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಸ್ವರಾಜ ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂಬರ ನೋಡಲಾಗಿ ಕೆಎ-32 ಟಿಎ-7837 ಇದ್ದು ಟ್ರೈಲಿಗೆ ನಂಬರ ಹಾಕಿರುವದಿಲ್ಲ, ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಸದರಿ ಟ್ರ್ಯಾಕ್ಟರದಲ್ಲಿದ್ದ ಮರಳಿನ .ಕಿ 3.000/- ರೂ ಇರಬಹುದು. ಸದರಿ ಟ್ರ್ಯಾಕ್ಟರ ಚಾಲಕನಿಗೆ ಹಿಡಿದಿದ್ದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಖಾಜಪ್ಪ ತಂದೆ ಅಮೋಘಿ ಹರನಾಳ ಸಾ||ಅಫಜಲಪೂರ ಅಂತ ತಿಳಿಸಿದ್ದು, ಸದರಿ ಚಾಲಕನಿಗೆ ಟ್ರ್ಯಾಕ್ಟರ ಮಾಲಿಕನ ಹೆಸರು ವಿಳಾಸಲು ಅದರ ಮಾಲಿಕ ನಾನೆ ಇರುತ್ತೇನೆ ಅಂತಾ ತಿಳಿಸಿರುತ್ತಾನೆ. ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಮತ್ತು ಟ್ರ್ಯಾಕ್ಟರ ಚಾಲಕನನ್ನು ನಮ್ಮ ಸಿಬ್ಬಂದಿಯವರ ಸಹಾಯದಿಂದ ಅಫಜಲಪೂರ ಠಾಣೆಗೆ ತಂದು, ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಟ್ರ್ಯಾಕ್ಟರ ಚಾಲಕ ಮತ್ತು ಅದರ ಮಾಲಿಕನಾದ ಖಾಜಪ್ಪ ತಂದೆ ಅಮೋಘಿ ಹರನಾಳ ಸಾ||ಅಫಜಲಪೂರ ಈತನ ವಿರುದ್ದ ಮುಂದಿನ ಕ್ರಮ ಕೈಗೊಳ್ಳುವಂತೆ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯ ಗುನ್ನೆ ನಂ 135/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.      
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಜಗನ್ನಾಥ ಹೆಚ್.ಸಿ-360 ಮಾಡಬೂಳ ಪೊಲೀಸ್ ಠಾಣೆ ಮತ್ತು ಅಮ್ರುತ ಪಿ.ಸಿ-709 ಇಬ್ಬರೂ ಕೂಡಿಕೊಂಡು ಪಿ.ಎಸ್.ಐ. ಮಾಡಬೂಳ ಠಾಣೆ ರವರ ಆದೇಶದಂತೆ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಟಮ್ಮ ದೇವರ ಹಳ್ಳಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಂಡು ಹೋಗಲು ಪಿಕೆಟಿಂಗ ಕರ್ತವ್ಯಕ್ಕೆ ನೇಮಿಸಿ ಕಳುಹಿಸಿಕೊಟ್ಟಿದ್ದು ಅದರಂತೆ ನಾನು ಮತ್ತು ಅಮ್ರುತ ಪಿ.ಸಿ-709 ಇಬ್ಬರೂ ಕಾಟಮ್ಮ ದೇವರ ಹಳ್ಳಿ ಗ್ರಾಮದಲ್ಲಿ ಪಿಕೆಟಿಂಗ ಕರ್ತವ್ಯದಲ್ಲಿದ್ದಾಗ ನಿನ್ನೆ ದಿನಾಂಕ:06/08/2019 ರಂದು ಸಾಯಂಕಾಲ 10-00 ಗಂಟೆಗೆ ಗ್ರಾಮದ ಹನುಮಾನ ಮಂದಿರ ಹತ್ತಿರ ಜಗನ್ನಾಥ ಹರಕತ್ತಿ ಮತ್ತು ಗೌತಮ, ರಾಘವೇಂದ್ರ, ಮಹೇಶ, ರಮೇಶ, ಹಾಗು ವಿಶ್ವನಾಥ ಯಾಗಾಪೂರ ಇವರೆಲ್ಲರೂ ವಯಕ್ತಿಕ ಕ್ಷುಲಕ ವಿಷಯದ ಬಗ್ಗೆ ತಮ್ಮ ತಮ್ಮಲ್ಲೆ ಕಿರಿಕಿರಿ ಮಾಡಿಕೋಳ್ಳುತ್ತಿರುವಾಗ ಅದನ್ನು ಕಂಡು ನಾನು ಮತ್ತು ಅಮ್ರುತ ಇಬ್ಬರೂ ಹೋಗಿ ನೀವು ಜಗಳ ಮಾಡಿಕೊಳ್ಳಬೇಡಿ ಅಂತಾ ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿರುತ್ತೇವೆ. ರಾತ್ರಿ ಅಲ್ಲಿಯೇ ಗ್ರಾಮದಲ್ಲಿಯೇ ಕರ್ತವ್ಯ ನಿರ್ವಹಿಸಿಕೊಂಡು ವಸತಿ ಮಾಡಿರುತ್ತೇವೆ.  ಇಂದು ದಿನಾಂಕ:07/08/2019 ರಂದು ಬೆಳಿಗ್ಗೆ 07-30 ಗಂಟೆಗೆ ನಾನು ಮತ್ತು ಅಮ್ರುತ ಪಿ.ಸಿ-709 ಇಬ್ಬರೂ ಗ್ರಾಮದಲ್ಲಿ ಸುತ್ತಾಡುತ್ತಾ ಅಗಸಿ ಹತ್ತಿರ ಬೆಳಿಗ್ಗೆ 08-00 ಗಂಟೆಗೆ ಬಂದು ನಿಂತಾಗ ಅಲ್ಲಿ ಜಗನ್ನಾಥ ಹರಕತ್ತಿ ಜೊತೆಯಲ್ಲಿ ಗೌತಮ ಮತ್ತು ರಘು ತಂದೆ ಶರಣಪ್ಪ ಹರಕತ್ತಿ, ಮಹೇಶ ತಂದೆ ಸಾಬಣ್ಣ, ವಿಶ್ವನಾಥ ತಂದೆ ಗಂಗಪ್ಪ ಯಾಗಾಪೂರ, ರಮೇಶ, ಶಿವು ತಂದೆ ಶರಣಪ್ಪ ಅಗಸರ ಮತ್ತು ಮುರಳಿ ಮಡಿವಾಳ ಇವರೆಲ್ಲರೂ ಚಿರಾಡಿ ಜಗಳ ಮಾಡುತ್ತಿದ್ದರು. ಏನಾದರು ಅನಾಹುತ ಆಗಬಹುದು ಅಂತಾ ತಿಳಿದು ನಾನು ಮದ್ಯ ಹೋಗಿ ಜಗಳ ಬಿಡಿಸಲು ಹೋದಾಗ ಗೌತಮ ಎಂಬಾತನು ತನ್ನ ಕೈಯಿಂದ ನನ್ನ ಸಮವಸ್ತ್ರ (ಅಂಗಿ) ಹಿಡಿದು ನೀಯೇನು ಮದ್ಯ ಬರುತ್ತಿ ಅಂತಾ ಹೇಳಿ ಜೋರಾಗಿ ದಬ್ಬಿ ಕರ್ತವ್ಯಕ್ಕೆ ಅಡ್ಡಿಪಡಿಸಿದನು. ನಂತರ ಅಷ್ಟರಲ್ಲಿ ಅರುಣ ಯಾಗಾಪೂರ ಎಂಬಾತ ಸ್ಥಳಕ್ಕೆ ಬಂದು ಈ ಪೊಲೀಸನದು ಬಹಳ ಆಗ್ಯಾದ ನೀನು ಇಲ್ಲಿ ಡ್ಯೂಟಿ ಮಾಡಬೇಡ ಅಂತಾ ಅಂದು ನನಗೆ ಜೋರಾಗಿ ದಬ್ಬಿದನು. ನಂತರ ನನ್ನ ಜೊತೆಯಲ್ಲಿದ್ದ ಅಮ್ರುತ ಪಿ.ಸಿ ಇವರು ಮದ್ಯ ಬಂದು ತಿಳಿ ಹೇಳಲು ಹೋದಾಗ ಪೊಲೀಸರು ನೀವು ಏನು ಸೆಂಟಾ ಕಿತ್ತುಕೊಳ್ಳುವುದಿಲ್ಲ ಅಂತಾ ಅರುಣ ಇತನು ಅವಾಚ್ಯವಾಗಿ ಬೈದು ನಂತರ ಗೌತಮನನ್ನು ಕರೆದು ನಿಮ್ಮ ಆಯಿಗೆ ಹಿಡಕೊಳ್ಳಲಿಕ್ಕೆ ಬಂದಿದ್ದಾರೆ ಅಂತಾ ಪೊಲೀಸರ ಮೇಲೆ ಕಂಪ್ಲೇಂಟ್ ಕೋಡು ಮತ್ತು ಕಲಬುರಗಿಗೆ ಹೋಗಿ ದವಾಖಾನೆಗೆ ಅಡ್ಮೀಟ್ಟು ಆಗು ಪೊಲೀಸರ ಮೇಲೆ ಎಮ್.ಎಲ್.ಸಿ ಮಾಡಿಸೋಣ ಅಂತಾ ಆತನಿಗೆ ಹೇಳಿದನು. ಅವನ ಜೊತೆಯಲ್ಲಿದ್ದ ರಘು ತಂದೆ ಶರಣಪ್ಪ ಹರಕತ್ತಿ, ಮಹೇಶ ತಂದೆ ಸಾಬಣ್ಣ, ವಿಶ್ವನಾಥ ತಂದೆ ಗಂಗಪ್ಪ ಯಾಗಾಪೂರ, ರಮೇಶ, ಶಿವು ತಂದೆ ಶರಣಪ್ಪ ಅಗಸರ ಮತ್ತು ಮುರಳಿ ಮಡಿವಾಳ ಇವರು ಕೂಡಾ ಪೊಲೀಸರು ಏನು ಕಿತ್ತಕೋತ್ತಿರಿ ಕಿತ್ತ್ಕೊಳ್ಳಿ ಅಂತಾ ಧಮ್ಕಿ ಹಾಕಿ ಹೋದರು. ನಂತರ ನಾನು ಮತ್ತು ಅಮ್ರುತ ಇಬ್ಬರೂ ನಮ್ಮ ಕರ್ತವ್ಯ ಮುಗಿಸಿಕೊಂಡು ನಂತರ ಠಾಣೆಗೆ ಬಂದಿರುತ್ತೇವೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆ ಗುನ್ನೆ ಸನಂ:64/2019 ಕಲಂ:143, 147, 353, 332, 186, 504, 506 ಸಂ. 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸುಲೆಪೇಟ ಠಾಣೆ : ಶ್ರೀ ಅಭಿಶೇಕ ತಂದೆ ರಾಜಪ್ಪ ಮಲ್ಲೇಶಪೂರ ಮು: ಪೆಂಚನಪಳ್ಳಿ ರವರು ದಿನಾಂಕ: 07/08/2019 ರಂದು ಬೆಳಗ್ಗೆ 09.30 ಗಂಟೆಯ ಸುಮಾರಿಗೆ ನಾನು ಪ್ರತಿ ದಿವಸದಂತೆ ಜೀವನ ಸಾಧನ ಶಾಲೆ ಸುಲೇಪೇಟಕ್ಕೆ ಹೋದೆನು ಮಧ್ಯಾಹ್ನ 01.15 ಗಂಟೆಗೆ ನಾನು ಊಟ ಮಾಡಿದ ಬಳಿಕ ಶಾಲೆಯಲ್ಲಿದ್ದಾಗ ನಮ್ಮ ಗ್ರಾಮದ ದಯಾನಂದ ತಂದೆ ನಾಗೇಂದ್ರಪ್ಪಾ ಸಂತಾಳ ಇವರು ಮೋಟಾರ್ ಸೈಕಲ ಮೇಲೆ ಬಂದು ನಿನ್ನ ಬ್ಯಾಗ ತೆಗೆದುಕೊಂಡು ಬಾ ಅಂತ ಹೇಳಿದಾಗ ಆಗ ನಾನು ಶಾಲೆಯಲ್ಲಿದ್ದ ಬ್ಯಾಗ ತೆಗೆದುಕೊಂಡು ಅವರ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಾಗ ಅವರು ನನಗೆ ಸರಕಾರಿ ಆಸ್ಪತ್ರೆ ಸುಲೇಪೇಟಕ್ಕೆ ತಂದರು ನಂತರ ಆಸ್ಪತ್ರೆಯಲ್ಲಿದ್ದ ನನ್ನ ತಂದೆಯಾದ ರಾಜಪ್ಪ ಇವರಿಗೆ ಏನಾಗಿದೆ ಅಂತ ಕೇಳಿದಾಗ ಅವರು ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ತಾಯಿ ಗಂಗಮ್ಮ ಇಬ್ಬರೂ ಕೂಡಿ ಸಿಲೇಂಡರ್ ಗ್ಯಾಸ್ ಕಂಪನಿಗೆ (ಆಫೀಸಗೆ) ಹೆಬ್ಬಟ್ಟಿನ ಗುರುತು ಕೊಡಲು ನಿಡಗುಂದಾ ಗ್ರಾಮಕ್ಕೆ ನಮ್ಮ ಸೂಪರ ಎಕ್ಸ್ ಎಲ್ 100 ಟಿವಿಎಸ್ ಮೋಟಾರ್ ಸೈಕಲ ನಂ ಕೆಎ-32 ಇಪಿ- 8607 ನೇದ್ದರ ಮೇಲೆ ಹೋಗಿ ಹೆಬ್ಬಟ್ಟಿನ ಗುರುತು ಕೊಟ್ಟು ಮರಳಿ ಊರಿಗೆ ಬರುವಾಗ ನಿಡಗುಂದಾ ದಾಟಿ ಇರಕಪಳ್ಳಿ ಕ್ರಾಸ ಇನ್ನೂ ಸ್ವಲ್ಪ ಇರುವಾಗಲೇ ನಿಮ್ಮ ತಾಯಿಯ ಮೈಮೇಲೆ ಇದ್ದ ಸೀರೆಯು ಮೋಟಾರ್ ಸೈಕಲ ಹಿಂದಿನ ಗಾಲಿಗೆ ಸುತ್ತುತ್ತಿದ್ದಾಗ ನನಗೆ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ ಮೇಲಿಂದ ನಿಮ್ಮ ತಾಯಿ ಕೆಳಗಡೆ ಬಿದ್ದಿದ್ದು, ಅವಳ ತಲೆಯ ಹಿಂಭಾಗಕ್ಕೆ ಭಾರಿ ರಕ್ತವಾಗಿದ್ದು ಅಲ್ಲದೆ ಎರಡು ಮೋಳಕಾಲು ಮೇಲೆ, ಎಡ ಭುಜದ ಮೇಲೆ, ಗದ್ದಕ್ಕೆ ಹತ್ತಿ ಗಾಯಾಗಳಾಗಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ ಈ ಘಟನೆ ಜರುಗಿದಾಗ ಅಂದಾಜು ಮಧ್ಯಾಹ್ನ  12.15 ಗಂಟೆಯಾಗಿತ್ತು ಅಷ್ಟರಲ್ಲಿ ಹಿಂದುಗಡೆಯಿಂದ ಇಬ್ಬರು ಪೊಲೀಸರು ಬಂದಿದ್ದು, ಇದನ್ನು ನೋಡಿ ಅವರು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವದರಿಂದ ನಿಮ್ಮ ತಾಯಿಯ ಮೃತ ದೇಹವನ್ನು ಒಂದು ಟಂ ಟಂ ದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸುಲೇಪೇಟಕ್ಕೆ ತಂದಿರುತ್ತೇವೆ ಅಂತ ತಿಳಿಸಿದರು. ನಂತರ ಸುಲೇಪೇಟ ವೈದ್ಯಾಧಿಕಾರಿಗಳು ಇರದ ಕಾರಣ ಚಿಂಚೋಳಿ ಆಸ್ಪತ್ರೆಗೆ ತಂದಿರುತ್ತೇವೆ. ಸದರಿ ಘಟನೆ ಜರುಗಲು ಕಾರಣವೇನೆಂದರೆ ನಮ್ಮ ತಂದೆಯವರಾದ ರಾಜಪ್ಪ ತಂದೆ ಮಲ್ಲಪ್ಪ ಮಲ್ಲೇಶಪ್ಪನೋರ ಇವರು ತನ್ನ ವಶದಲ್ಲಿದ್ದ ಸೂಪರ ಎಕ್ಸ್ ಎಲ್ 100 ಟಿವಿಎಸ್ ಮೋಟಾರ್ ಸೈಕಲ ಅನ್ನು ಅತಿ ವೇಗದಿಂದ ಚಲಾಯಿಸಿದ್ದು ಅಲ್ಲದೆ ಅತೀವ ನಿಷ್ಕಾಳಿಜಿತನ ತೋರಿಸಿ ನಮ್ಮ ತಾಯಿಗೆ ಸೀರಿ ಸರಿಯಾಗಿ ಹಿಡಿದುಕೊಳ್ಳುವಂತೆ ತಿಳಿಸದ ಕಾರಣ ಅವಳ ಸೀರಿಯು ಹಿಂದಿನ ಗಾಲಿಯಲ್ಲಿ ಸುತ್ತಿದ್ದರಿಂದ ಅವಳು ಕೆಳಗೆ ಬಿದ್ದು ತಲೆಗೆ ಭಾರಿ ರಕ್ತವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೆಪೇಟ ಠಾಣೆ ಗುನ್ನೆ ನಂ 79/2019 ಕಲಂ 279, 304 () ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ಶ್ರೀ ಪ್ರೇಮಕುಮಾರ ತಂದೆ ಯಮನಪ್ಪಾ ಕಟ್ಟಿ  ಸಾ|| ಖಾಜಾ ಕಾಲೋನಿ ಜೇವರಗಿ ತಾ|| ಜೇವರಗಿ ರವರು ದಿನಾಂಕ 07.08.2019 ರಂದು ಸಾಯಂಕಾಲ ನನ್ನ ಗೆಳೆಯನಾದ ಅರುಣಕುಮಾರ ತಂದೆ  ಶಂಕರೆಪ್ಪಾ ಜಾನಕರ ಸಾ//
ಚೆನ್ನೂರ ಇಬ್ಬರೂ ಕೂಡಿಕೊಂಡು ನಮ್ಮ ಗೇಳೆಯನಾದ ಅಪ್ಪಾಪಟೇಲ ಸಾ// ಕುಮ್ಮನ ಸಿರಸಗಿ ಇವರ ಸ್ಕಾರ್ಪಿಯೋ ಜೀಪಿನಲ್ಲಿ ಜೇವರಗಿ ತಾಲೂಕಿನ ಇಟಗಿ ಗ್ರಾಮಕ್ಕೆ ಹೋಗಿರುತ್ತೇವೆ. ಸ್ಕಾರ್ಪಿಯ KA-32 C- 0928 ನೇದ್ದನ್ನು ಚಾಲಕ ಬಲಭೀಮ ತಂದೆ ಪೀರಪ್ಪಾ ಬಂಗಿ ಸಾ// ನೆಲೋಗಿ ಇತನು ಚಲಾಯಿಸುತ್ತಿದ್ದನು.ಇಟಗಿ ಗ್ರಾಮಕ್ಕೆ ಹೋಗಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಜೇವರಗಿಗೆ ಬರುವ ಕುರಿತು ಸದರಿ ಸ್ಕಾರ್ಪಿಯೋ ಜೀಪಿನಲ್ಲಿ ನಾವು ರಾತ್ರಿ 8 ಪಿ.ಎಮ್ ಸುಮಾರಿಗೆ  ಇಟಗಿ ಗ್ರಾಮದಿಂದ ಹೊರಟಿದ್ದು ನಮ್ಮ ಜೀಪ ನಂ KA-32 C- 0928 ನೆದ್ದರ  ಚಾಲಕ ಬಲಭೀಮ ಇತನು ವಿಜಯಪೂರ - ಜೇವರಗಿ ರೋಡಿನ ಮೇಲೆ ಜೇವರಗಿ ಬೈ ಪಾಸ್ ಹತ್ತೀರ ಜೀಪ ಚಲಾಯಿಸಿಕೊಂಡು ತನ್ನ ಬದಿಗೆ ಹೋಗುತ್ತಿದ್ದಂತೇ ಎದುರಿನಿಂದ ಒಂದು Ashok Layland Goods ವಹಾನ ನಂ KA-33 A-5772 ನೇದ್ದರ ಚಾಲಕ ತನ್ನ ವಹಾನವನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಜೀಪಿಗೆ ಡಿಕ್ಕಿ ಪಡಿಸಿದ್ದರಿಂದ ಒಳಗೆ ಕುಳಿತಿರುವ ನನಗೆ ಹಣೆಗೆ ರಕ್ತಗಾಯ ಎದೆಗೆ ಒಳಪೆಟ್ಟು ಹಾಗೂ ಎರಡು ಕಾಲುಗಳಿಗೆ ಒಳಪೆಟ್ಟಾಗಿರುತ್ತದೆ. ಅರುಣಕುಮಾರ ಜಾನಕರ ಇತನಿಗೆ ಹಣೆಗೆ ಮತ್ತು ಮುಖಕ್ಕೆ  ಭಾರಿ ರಕ್ತಗಾಯವಾಗಿರುತ್ತದೆ. ನಮ್ಮ ಜೀಪ ಚಾಲಕ ಬಲಭೀಮ ಇತನಿಗೆ ಎದೆಗೆ ಒಳಪೆಟ್ಟಾಗಿರುತ್ತದೆ.ನಮ್ಮ ಸ್ಕಾರ್ಪಿಯೋ ಜೀಪಿಗೆ ಿಕ್ಕಿ ಪಡಿಸಿದ Ashok Layland Goods ವಹಾನದ ಚಾಲಕ ನಮಗಾದ ಗಾಯ ನೋಡಿ ತನ್ನ ವಹಾನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಘಟನೆ ನಡೆದಾಗ ಸಮಯ ರಾತ್ರಿ 8-30 ಪಿ.ಎಮ್ ಆಗಿರುತ್ತದೆ. ನಂತರ ನಾವು 108 ವಹಾನದಲ್ಲಿ ಚಿಕಿತ್ಸೆಗಾಗಿ ಸರಕಾರಿ ಅಸ್ಪತ್ರೆ ಜೇವರಗಿಗೆ ಬಂದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದು ನನಗೆ ಮತ್ತು ಅರುಣಕುಮಾರ ಜಾನಕರ ಇಬ್ಬರಿಗೆ ನಮ್ಮ ಗೇಳೆಯರಾದ ಶಣ್ಮುಖ ಗೌನಳ್ಳಿ ಮತ್ತು ಶಿವುಕುಮಾರ ಭಜಂತ್ರಿ ಸಾ// ಇಬ್ಬರೂ ಜೇವರಗಿ ಇವರು ಬಂದು ನಮಗೆ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ. ನಮ್ಮ ಜೀಪಿಗೆ ಡಿಕ್ಕಿ ಪಡಿಸಿದ Ashok Layland Goods ವಹಾನ ನಂ KA-33 A-5772 ನೇದ್ದರ ಚಾಲಕನ ಹೆಸರು ಗೋತ್ತಾಗಿರುವದಿಲ್ಲಾ ಅವನನ್ನು ನೋಡಿದರೆ ಗುರುತಿಸುತ್ತೇನೆ. ಅಂತಾ  ಸಲ್ಲಿಸಿದ ಧೂರು ಸಾರಾಂಶದ ಮೆಲೀಮದ ಜೇವರಗಿ ಠಾಣೆಯ ಗುನ್ನೆ ನಂ 157/2019 ಕಲಂ 279,337,338 ಐಪಿಸಿ ಮತ್ತು 187 .ಎಮ್.ವ್ಹಿ ಯಾಕ್ಟ ಪ್ರಕಾರ ಪ್ರಕರಣ  ಧಾಖಲಿಸಲಾಗಿದೆ.
ಹಲ್ಲೆ ಮಾಡಿಜಾತಿ ನಿಂದನೆ ಮಾಡಿದ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಗಿರಿರಾವ ತಂದೆ ರೇಕುನಾಯಕ ರಾಠೋಡ ಸಾ:ಶ್ರೀನಿವಾಸನಗರ ಕುರಕುಂಟಾ ರವರು ಸುಮಾರು ಒಂದು ವರ್ಷದಿಂದ ಲಾರಿ ನಂಬರ KA32D3147 ನೇದ್ದರ ಮೇಲೆ ಚಾಲಕ ಕೆಲಸ ಮಾಡುತ್ತೇನೆ. ಸದರಿ ಲಾರಿಯ ಮೇಲೆ ನನ್ನಂತೆಯೇ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ ಹಿರೇಕುರಬುರ ಸಾ:ರುದನೂರ ಈತನು ಸಹ ಲಾರಿಚಾಲಕ ಅಂತಾ ಕೆಲಸ ಮಾಡುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ 07-08-2019 ರಂದು ಸಾಯಂಕಾಲ 4-00 ಗಂಟೆಗೆ ನಾನು ಮತ್ತು ಮಲ್ಲಿಕಾರ್ಜುನ ಇಬ್ಬರೂ ಕೂಡಿಕೊಂಡು ನಮ್ಮ ಲಾರಿಯನ್ನು ಸಿಮೆಂಟ ಲೋಡ ಮಾಡುವ ಕುರಿತು ಫ್ಯಾಕ್ಟರಿಯ ಒಳಗಡೆ ತೆಗೆದುಕೊಂಡು ಹೋಗಿ ಮಹೆಬೂಬನಗರಕ್ಕೆ ಸಿಮೆಂಟ ಲೋಡ ಮಾಡಿಕೊಂಡು ಮರಳಿ ರಾತ್ರಿ 10-30 ಗಂಟೆಯ ಸುಮಾರಿಗೆ ಲಾರಿಯನ್ನು ವಾಸವದತ್ತಾ ಫ್ಯಾಕ್ಟರಿಯ ಲಾರಿ ಯಾರ್ಡನಲ್ಲಿ ಹಚ್ಚಿ ನಾವಿಬ್ಬರೂ ಊಟಕ್ಕೆ ಹೋದೆವು. ನಾವಿಬ್ಬರೂ ಊಟ ಮಾಡಿಕೊಂಡು ಮರಳಿ ಇಂದು ದಿನಾಂಕ 08-08-2019 ರಂದು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಲಾರಿಯ ಹತ್ತಿರ ಬಂದೆವು. ನಾವಿಬ್ಬರು ಲಾರಿಯ ಕ್ಯಾಬಿನದಲ್ಲಿ ಮಲಗಿಕೊಳ್ಳೋಣ ಅಂತಾ ಲಾರಿಯ ಕ್ಯಾಬಿನ ಒಳಗೆ ಕುಳಿತೆವು. ಆಗ ಲಾರಿ ಯಾರ್ಡನಲ್ಲಿ ತಿರುಗಾಡುತ್ತಿದ್ದ ನನಗೆ ಪರಿಚಯದ ಶ್ರೀವಾರಿ ಟ್ರಾನ್ಸಪೋರ್ಟನಲ್ಲಿ ಕೆಲಸ ಮಾಡುವ ಓಂಕಾರ ತಂದೆ ಧರ್ಮೇಶ ತ್ರಿವೇದಿ ಸಾ:ಸೇಡಂ ಈತನು ಬಂದು ನನ್ನ ಲಾರಿಯಲ್ಲಿ ಕುಳಿತುಕೊಂಡು ನನಗೆ ನೀನು ಬಳ್ಳಾರಿಗೆ ಬಿಡಬೇಕು ಅಂತಾ ಅಂದನು. ಆಗ ನಾನು ಅವನಿಗೆ ನಾನು ಬಳ್ಳಾರಿಗೆ ಹೋಗುವದಿಲ್ಲ, ಮಹೆಬೂಬನಗರಕ್ಕೆ ಲೋಡ ಇದೆ, ನಾವು ಇಲ್ಲೇ ಮಲಗಿಕೊಂಡು ನಸುಕಿನಲ್ಲಿ ಹೋಗುತ್ತೇನೆ ಅಂತಾ ಅಂದೆನು. ಆಗ ಅವನು ನನಗೆ ನೀನು ಲಮಾಣ್ಯಾ ಸೂಳೆ ಮಗ ಇದ್ದಿದ್ದಿ, ನನಗೆ ಮಹೆಬೂಬನಗರಕ್ಕೆ ಬಿಡು ನಾನು ಇಲ್ಲೇ ಕೂಡುತ್ತೇನೆ ಅಂತಾ ಕ್ಯಾಬಿನದಲ್ಲಿ ಕುಳಿತನು. ಆಗ ನಾನು ಮತ್ತು ಮಲ್ಲಿಕಾರ್ಜುನ ಇಬ್ಬರೂ ಕೂಡಿ ಅವನಿಗೆ ನೀನು ಕೆಳಗಡೆ ಇಳಿ ಅಂತಾ ಅಂದಾಗ ಅವನು ಲಾರಿಯಿಂದ ಕೆಳಗೆ ಇಳಿದನು. ನಾನು ಸಹ ಕೆಳಗೆ ಇಳಿದೆನು. ಆಗ ಸದರಿ ಓಂಕಾರ ತಂದೆ ಧರ್ಮೇಶ ತ್ರಿವೇದಿ ಈತನು ನನಗೆ ಲಾರಿಯಿಂದ ಇಳಿಸುತ್ತೀ ಸೂಳೆ ಮಗನೇ ನಾನು ಟ್ರಾನ್ಸಪೋರ್ಟ ಮಾಲಿಕ ಇದ್ದೇನೆ ಲಮಾಣ್ಯಾ ರಂಡಿಮಗನೇ ಅಂತಾ ಅವಾಚ್ಯವಾಗಿ ಜಾತಿನಿಂದನೆ ಮಾಡಿ ಬೈಯುತ್ತಾ ನನಗೆ ಕೈಯಿಂದ ಜೋರಾಗಿ ಮುಖಕ್ಕೆ, ಹೊಡೆದಾಗ ನಾನು ಕೆಳಗೆ ಬಿದ್ದೆನು. ನಂತರ ಅವನು ಪುನಃ ನನಗೆ ಕೈಯಿಂದ ಕಾಲಿನಿಂದ ಮೈಮೇಲೆ ಒದೆಯಹತ್ತಿದನು. ಆಗ ನಾನು ಚೀರಾಡುತ್ತಿರುವಾಗ ಅಲ್ಲೇ ಇದ್ದ ನಮ್ಮ ಲಾರಿಯ ಚಾಲಕ ಮಲ್ಲಿಕಾರ್ಜುನ ಮತ್ತು ನಮ್ಮ ಟ್ರಾನ್ಸಪೋರ್ಟ ಮ್ಯಾನೇಜರ ಜಗದೀಶ ತಂದೆ ಮಲ್ಲಣ್ಣ ಮಡಿವಾಳ, ಮತ್ತು ಅಲ್ಲಿದ್ದ ಮತ್ತಿತರರು ಬಂದು ನನಗೆ ಹೊಡೆಯುವದನ್ನು ಬಿಡಿಸಿಕೊಂಡರು, ಇಲ್ಲದಿದ್ದರೆ ಅವನು ಇನ್ನು ಹೊಡೆಯುತ್ತಿದ್ದನು. ಮತ್ತು ಹೋಗುವಾಗ ಸೂಳೆಮಗನೇ ನೀನು ಈಗ ಉಳಿದಿದ್ದಿ ಇನ್ನೊಂದು ಸಲ ಸಿಕ್ಕಲ್ಲಿ ನಿನಗೆ ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 132/2019 ಕಲಂ 323, 504, 506 ಐಪಿ ಗಡ 3(1)(r) SC/ST PA ACT-1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ಶ್ರೀ.ಮಲ್ಲಿಕಾರ್ಜುನ ತಂದೆ ಶಿವರಾಜ್ ಡೋಣಿ, ಸಾ:ಕಡಗಂಚಿ ಗ್ರಾಮ ರವರು  ಕೇಂದ್ರಿಯ ವಿಶ್ವವಿಧ್ಯಾಲಯ ಕಡಗಂಚಿ (ಸಿ.ಯು.ಕೆ) ಇದರಲ್ಲಿ ಬರುವ ಮಹಿಳಾ ವಸತಿ ನಿಲಯ (ಟೀನ್ ಶಡ್) ನಲ್ಲಿ ನಾನು ಅಡುಗೆ ಸಾಹಯಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ:02/08/2019 ರಂದು ಬೆಳಿಗ್ಗೆ 10-30 ಕ್ಕೆ ನನಗೆ ಶ್ರೀ.ಚನ್ನವೀರಯ್ಯ ಆರ್.ಎಂ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳು (ಡಿ.ಎಸ್.ಡ್ಬ್ಲೂ) ಗೇಟ್ ಹೊರಗಡೆ ಕರೆದು ನನಗೆ ನಿನ್ನ ಜಾತಿ ಯಾವುದು ಎಂದು ಕೇಳಿದರು, ಆವಾಗ ನಾನು ಎಸ್.ಸಿ (ಹೊಲೆಯ) ಎಂದು ಹೇಳಿದೇನು. ಆಗ ಸಾಹೇಬರು ಪಕ್ಕಾ ಹೊಲೆಯನಾ? ಪ್ರಶ್ನಿಸಿ ಈಗ ಶ್ರಾವಣ ಮಾಸ ಇರುವುದರಿಂದ ನೀನು ಹೊಲೆಯ ಜಾತಿಗೆ ಸೇರಿರುವುದರಿಂದ ಬೇರೆ ಜಾತಿಯ ವಿದ್ಯಾರ್ಥಿಗಳು ನೀನು ಬಡಸಿದ ಆಹಾರವನ್ನು ನೀರಾಕರಿಸುತ್ತಾರೆ. ಆದ ಕಾರಣ ನೀನು ಕೆಲಸಕ್ಕೆ ಬರಬೇಡಾ ಅಂತಾ ಗದರಿಸಿ ಸೂಳಿ ಮಗನೆ ಅಂತಾ ಬೈದು ಕಳಿಸಿರುತ್ತಾರೆ. ವಿದ್ಯಾರ್ಥಿ ಕಲ್ಯಾಣಧಿಕಾರಿಗಳಿಗೆ ಡಾ||ಬಸವರಾಜ್ ಎಕಾನೋಮಿಕ್ಸ್ ಡಿಪಾರ್ಟ್ಮೆಂಟ್ ಇವರು ಪ್ರಚೋದನೆ ಕೊಟ್ಟಿರುತ್ತಾರೆ. ಇವರನ್ನು ಅಧಿಕಾರಿಗಳಾದ ತಾವುಗಳು ಕಾನೂನು ಕ್ರಮ ಜರುಗಿಸಿಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆ, ಗುನ್ನೆ ನಂ 109/2019 ಕಲಂ 3(1) (ಆರ್), 3(1) (ಎಸ್) ಎಸ್.ಸಿ / ಎಸ್.ಟಿ ಪಿ.ಎ ಆಕ್ಟ್-1989 ಹಾಗೂ 109 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಶರಣಗೌಡ ತಂದೆ ಮಹಾಂತಗೌಡ ಇಮ್ಮಣಿ ಸಾ/ಆಂದೋಲಾ ತಾ// ಜೇವರ್ಗಿ ರವರ ತಂದೆ ದಿ//ಮಹಾಂತಗೌಡ ಇವರು ಒಟ್ಟು ಐದು ಜನ ಅಣ್ಣ ತಮ್ಮಂದಿರು ಇರುತ್ತಾರೆ. ಇವರೆಲ್ಲರೂ ತಮ್ಮ,ತಮ್ಮ ಪಾಲಿನ ಆಸ್ತಿ ( ಜಮಿನು,ಮನೆ ) ಹಂಚಿಕೊಂಡು ಬೇರೆ, ಬೇರೆಯಾಗಿ ವಾಸ ವಾಗಿರುತ್ತಾರೆ. ನನ್ನ ಕೊನೆಯ ಚಿಕ್ಕಪ್ಪನಾದ ನಾಗಣ್ಣ ತಂದೆ ದಿ//ಶರಬಣ್ಣ ಇಮ್ಮಣಿ ಇವರು ಆಂಗವಿಕಲರು ಮತ್ತು ಅವಿವಾಹಿತರಾಗಿರುತ್ತಾರೆ, ಇವರ ಪಾಲಿಗೆ ಸರ್ವೆ ನಂ,95 ರಲ್ಲಿ ಒಟ್ಟು 21 ಎಕರೆ 33 ಗುಂಟೆ ಹೋಲ ಇರುತ್ತದೆ .ಇವರು ನಮ್ಮ ಹತ್ತಿರನೆ ಇದ್ದು ಅವರ ಯೋಗ ಕ್ಷೆಮ ನಾನು ಮತ್ತು ನನ್ನ ಅಣ್ಣ ತಮ್ಮಂದಿರು ನೋಡಿಕೊಂಡು ಬಂದಿರುತ್ತೆವೆ.ಆದ್ದರಿಂದ ಅವರ ಪಾಲಿನ ಹೋಲ ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. ಆದರೆ ನನ್ನ ದೊಡ್ಡಪ್ಪನಾದ ದಿ//ಕರಣಪ್ಪ ಇಮ್ಮಣಿ ಇವರ ಮಕ್ಕಳಾದ 1)ಸುಭಾಸಗೌಡ ತಂದೆ ಕರಣಪ್ಪ ಇಮ್ಮಣಿ 2) ಬಸವರಾಜ ತಂದೆ ಕರಣಪ್ಪ ಇಮ್ಮಣಿ 3) ಚಂದ್ರಶೇಖರ ತಂದೆ ಕರಣಪ್ಪ ಇಮ್ಮಣಿ ಇವರು ವರ್ಷ ನನ್ನ ಚಿಕ್ಕಪ್ಪ ನಾಗಣ್ಣ ಇವರ ಹೋಲದಲ್ಲಿ ನಮಗೂ ಪಾಲು ಬರುತ್ತದೆ ಅಂತಾ ತಕರಾರು ತಗೆದು ವರ್ಷ ಸುಮಾರು 6 ಎಕರೆ ಹೋಲದಲ್ಲಿ ಬಿತ್ತಣಿಕೆ ಮಾಡಿರುತ್ತಾರೆ. ಇದರಿಂದ ನನ್ನ ಚಿಕ್ಕಪ್ಪ ನಾಗಣ್ಣ ಇವರು ಇಂದು ದಿನಾಂಕ 9/8/2019 ಬೇಳಗ್ಗೆ 10 ಗಂಟೆಗೆ ಸುಮಾರಿಗೆ ಅವರ ಮೇಲೆ ಜೇವರ್ಗಿ ಪೊಲೀಸ್ ಠಾಣೆ ಯಲ್ಲಿ ಕೇಸ ಮಾಡಲು ನಾನು ಅವರಿಗೆ ಕರೇದುಕೊಂಡು ಬರಲು ನಮ್ಮ ಹೋಸ ಮನೆಯಿಂದ ಹಳೆ ಮನೆಯಲ್ಲಿ ಇರುವ ನನ್ನ ಚಿಕ್ಕಪ್ಪ ನಾಗಣ್ಣ ಇವರ ಹತ್ತಿರ ಹೋದಾಗ ಇದೇ ವೇಳೆಗೆ ನನ್ನ ದೊಡ್ಡಪ್ಪನ ಮಕ್ಕಳಾದ ,ಬಸವಾರಾಜ ತಂದೆ ಕರಣಪ್ಪ ಇಮ್ಮಣಿ, ಚಂದ್ರಶೇಖರ ತಂದೆ ಕರಣಪ್ಪ ಇಮ್ಮಣಿ ಇವರಿಬ್ಬರೂ ಬಂದವರೇ ನನ್ನ ಚಿಕ್ಕಪ್ಪ ನಾಗಣ್ಣ ಇವರಿಗೆ ಭೋಸಡಿ ಮಗನೇ ನಿನ್ನ ಹೋಲದಲ್ಲಿ ನಮಗೂ ಪಾಲು ಬರುತ್ತದೆ ,ಪಾಲೂ ಕೋಡಲು ಬಿಟ್ಟು ಪೊಲೀಸ್ ಷ್ಟೇಶನಗೆ ನಮ್ಮ ಮೇಲೆ ಕೇಸ್ ಕೋಡಲು ಹೋರಟಿದ್ದಿ ಮಗನೆ ಅಂತ ಅವಾಚ್ಯ ಶಬ್ದಗಳಿಂದ ಬಯುತಿದ್ದಾಗ ನಾನು ಅವರಿಗೆ ಯಾಕೆ ಅರ್ಜಿ ಕೋಡಬಾರದು ಅಂತ ಕೇಳಿದಕ್ಕೆ ಭೋಸಡಿ ಮಗನೆ ಇದೆಲ್ಲಾ ನಿನ್ನದೆ ಆಟ ಅಂತ ನನ್ನನ್ನು ಮುಂದಕ್ಕೆ ಹೋಗದಂತೆ ಬಸವಾರಜನು ತಡೆದು ನಲ್ಲಿಸಿ ಗಟ್ಟಿಯಾಗಿ ಹೀಡಿದುಕೊಂಡಾಗ ಚಂದ್ರಶೇಖರ ಇತನು ತನ್ನ ಕೈಯಲ್ಲಿದ್ದ ಬ್ಲೇಡನಿಂದ ಮಗನೀಗೆ ಇಂದು ಖಲಾಸ ಮಾಡೆ ಬೀಡೋಣಾ ಅಂತ ಜೀವ ಬೇದರಿಕೆ ಹಾಕಿ ಬ್ಲೇಡನೀಂದ ನನ್ನ ಎಡಗೈ, ಮುಂಗೈ ಕೆಳಗೆ ಹಾಗೂ ಬೇನ್ನಿನಲ್ಲಿ ತಿವಿದು ರಕ್ತಗಾಯ ಮಾಡಿರುತ್ತಾನೆ.ಆಗ ನಾನು ಚಿರಾಡುವದನ್ನು ಕೇಳಿ ಓಡಿ ಬಂದ ನನ್ನ ತಮ್ಮ ಶರಬಣ್ಣ ತಂದೆ ದಿ//ಮಹಾಂತಗೌಡ ಇಮ್ಮಣಿ ಹಾಗೂ ನಮ್ಮ ಓಣಿಯ ಜನರು ಬಂದು ಬಿಡಿಸಿರುತ್ತಾರೆ. ನನ್ನ ದೊಡ್ಡಪ್ಪನ ಮಗ ಸುಭಾಸಗೌಡ ತಂದೆ ದಿ//ಕರಣಪ್ಪ ಮ್ಮಣಿ ಇತನ ಕುಮ್ಮಕಿನಿಂದಲೇ ಇತನ ಅಣ್ಣ ತಮ್ಮಂದಿರಾದ ಬಸವರಾಜ ಹಾಗೂ ಚಂದ್ರಶೇಖರ ಇವರಿಬ್ಬರೂ ರೀತಿ ನನಗೆ ಹೋಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆ ಗುನ್ನೆ ನಂ  158/2019 ಕಲಂ 341,324,323,504,506,109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ಶ್ರೀ ಚಂದ್ರಕಾಂತ ತಂದೆ ಶಿವಶರಣಪ್ಪ ಮಾನೆಗಾರ ಸಾಃ ಬಗಲೂರ ತಾಃ ಸಿಂದಗಿ ಜಿಲ್ಲೆಃ ವಿಜಯಪೂರ ಹಾಃವಃ  ಚಿಗರಳ್ಳಿ ಕ್ರಾಸ್ ತಾಃ ಜೇವರಗಿ ರವರು ಜೇವರಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಹತ್ತಿರ ಜೇವರಗಿ-ಶಹಾಪೂರ ರೋಡ ಪಕ್ಕದಲ್ಲಿನ  ಧರ್ಮರಾಜ ಜೋಗುರ ಇವರ ಜೋಗುರ ಪೆಟ್ರೊಲಿಯಂ ಪೆಟ್ರೊಲ್ ಪಂಪನಲ್ಲಿ ಮ್ಯಾನೇಜರ ಅಂತಾ ಸುಮಾರು  5  ವರ್ಷಗಳಿಂದ ಕೆಲಸ ಮಾಡಿಕೊಂಡಿರುತ್ತೆನೆ ಹೀಗಿದ್ದು ದಿನಾಂಕ 08/08/2019 ರಂದು ಮುಂಜಾನೆ ನಾನು ಮತ್ತು ನಮ್ಮ ಪೆಟ್ರೊಲ್ ಪಂಪ್ ನಲ್ಲಿ  ಕೆಲಸ ಮಾಡುವ  ಸಂಗಪ್ಪ ತಂದೆ ಬಸವರಾಜ ಸಜ್ಜನಸೇಟ್ಟಿ, ವಿರೇಶ ತಂದೆ ದೇವಿಂದ್ರಪ್ಪ ಸಗರ ಮೂವರು ಕೆಲಸ ಮಾಡುತ್ತಿದ್ದೆವು. ಮುಂಜಾನೆ  11.30 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ಕಡೆಯಿಂದ ಶಹಾಜಾಖಾನ ಕೊಟಗಿ ಸಾಃ ಸಿಗರಥಹಳ್ಳಿ  ಇತನು  ತನ್ನ ಮೊಟಾರ್ ಸೈಕಲ ಮೇಲೆ ಕುಳಿತುಕೊಂಡು  ನಮ್ಮ ಪೆಟ್ರೊಲ್ ಪಂಪಕ್ಕೆ ಬಂದು ಪೆಟ್ರೊಲ್ ಪಂಪನಲ್ಲಿ ಪೆಟ್ರೊಲ್  ಮತ್ತು ಡೀಸೆಲ್ ಹಾಕುವ ನೌಜಲ್ ಮಸ್ಸಿನ ಹತ್ತಿರ ಬಂದು,  ತನ್ನ ಮೊಟಾರ್ ಸೈಕಲ್ ನಿಲ್ಲಿಸಿ  ತನ್ನ ಮೊಟಾರ್ ಸೈಕಲದಿಂದ ಒಂದು ಕಬ್ಬಿಣ ರಾಡು ತೆಗೆದುಕೊಂಡು ನೌಜಲ್ ಮಸ್ಸಿನಿಗೆ ಕೂಡಿಸಿದ ಎಮ್.ಪಿ.ಡಿ. ಡಿಸ್ ಪ್ಲೇ ಮೇಲಿನ ಗ್ಲಾಸ್ ಕ್ಕೆ ಹೊಡೆದು ಜಖಂ ಮಾಡಿದನು. ಅಲ್ಲಿಯೇ ಇದ್ದ ಸಂಗಪ್ಪ ತಂದೆ ಬಸವರಾಜ ಸಜ್ಜನಸೇಟ್ಟಿ ಇತನು ಅವನಿಗೆ ಯಾಕೆ ರಾಡಿನಿಂದ ಮಸ್ಸಿನಿಗೆ ಹೊಡೆದು ಒಡೆದಿರುವೆ  ಎಂದು ಕೇಳಿದಕ್ಕೆ ಶಹಾಜಾಖಾನ ಈತನು  ಸಂಗಪ್ಪನಿಗೆ  ಬೊಸಡಿ ಮಕ್ಕಳೆ  ನೀಮ್ಮ ಪೆಟ್ರೊಲ್ ಪಂಪನವರಿಗೆ ಸೊಕ್ಕು ಬಹಳ ಆಗಿದೆ ಎಂದು ಅವಾಚ್ಯವಾಗಿ ಬೈಯ್ದು ವಿಷಯ ಯಾರಿಗಾದರೂ ಹೇಳಿದರೆ ನೀಮ್ಮ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿ ತನ್ನ ಮೊಟಾರ್ ಸೈಕಲ್ ಚಾಲು ಮಾಡಿಕೊಂಡು ಹೋಗಿರುತ್ತಾನೆ.  ಅವನು ರಾಡಿನಿಂದ ಪೆಟ್ರೊಲ್ ಪಂಪಿನಲ್ಲಿರುವ ಎಮ್.ಪಿ.ಡಿ. ಡಿಸ್ ಪ್ಲೇ ಮೇಲಿನ ಗ್ಲಾಸ್ ಕ್ಕೆ ಹೊಡೆದು ಜಖಂ ಮಾಡಿದರಿಂದ  ಒಂದು ಲಕ್ಷ ರೂಪಾಯಿಯಷ್ಟು  ನಷ್ಟ ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆ ಗುನ್ನೆ ನಂ 160/2019 ಕಲಂ 427 504 506 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಬಸವರೆಡ್ಡಿ ಇಟಗಿ ಸಾಃ ಬಿರಾಳ (ಕೆ) ತಾಃ ಜೇವರಗಿ ಹಾಃವಃ ಹುಮನಾಬಾದ ರೋಡ ಗಂಜ್ ಏರಿಯಾ ಕಲಬುರಗಿ ರವರದು ಸ್ವಂತ  ಊರು ಬಿರಾಳ (ಕೆ) ಇರುತ್ತದೆ ನಾನು ಕಲಬುರಗಿಯಲ್ಲಿ ದಾಲ್ ಮೀಲ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಕಲಬುರಗಿಯಲ್ಲಿಯೇ ವಾಸವಾಗಿರುತ್ತೆನೆ. ಬೀರಾಳ (ಕೆ) ಸೀಮಾಂತರದಲ್ಲಿ ಹೊಲ ಸರ್ವೆ ನಂ 69 ರಲ್ಲಿ 27 ಎಕರೆ 14 ಗುಂಟೆ ಜಮೀನು ಇರುತ್ತದೆ. ಹೊಲದ ಪಹಣಿ ನನ್ನ ಹೆಸರಿನಲ್ಲಿರುತ್ತದೆ. ಜಮೀನು ನಮ್ಮೂರ ವಜೀರಪ್ಪ ತಂದೆ ಶರಣಪ್ಪ ನಾಯ್ಕೊಡಿ ರವರಿಗೆ ನೋಡಿಕೊಂಡು ಹೋಗುವ ಸಲುವಾಗಿ ಕೂಲಿ ಕೆಲಸಕ್ಕೆ ಬಿಟ್ಟಿರುತ್ತೇನೆ. ನಾನು ಆಗಾಗ ನಮ್ಮ ಹೊಲ ಮನೆ ನೊಡಿಕೊಂಡು ಬರಲು ಊರಿಗೆ ಹೋಗಿ ಬಂದು ಮಾಡುತ್ತೆನೆ. ಮೇಲೆ ನಮೂದಿಸಿದ ಹೊಲದ ವಿಷಯದಲ್ಲಿ ಸೈಯ್ಯದ ರಾಜಾ ಹುಸೇನ ತಂದೆ ಸೈಯ್ಯದ ಮೈನ್ನೊದ್ದೀನ ಸಾಃ ಬಿರಾಳ (ಬಿ) ಹಾಃವಃ ವರ್ಚನಳ್ಳಿ ಇವರು ಇಸ್ವಿ  1973-74 ನೇ ಸಾಲಿನಲ್ಲಿ ಜಮೀನು ಸರ್ವೆ ನಂ: ಸರ್ವೆ ನಂ 69 ರಲ್ಲಿ 27 ಎಕರೆ 14 ಗುಂಟೆ ಜಮೀನು ನನಗೆ ಮಾರಾಟ ಮಾಡಿಕಾಗದ ಪತ್ರಗಳು ಸಹಿ ಮಾಡಿ ಕೊಟ್ಟಿರುತ್ತಾರೆ. ಅಂದಿನಿಂದ ಇಲ್ಲಿಯವರೆಗೆ ಸದರಿ ಜಮೀನು ನಾನು ಉಳುಮೆ ಮಾಡುತ್ತಾ ಬಂದಿರುತ್ತೇನೆ. ಸೈಯ್ಯದ್ ರಾಜಾಹುಸೇನ್ ಈತನು ಈಗ ಸುಮಾರು 8 ತಿಂಗಳ ಹಿಂದೆ ಮೃತಪಟ್ಟಿರುತ್ತಾನೆ. ಆದರೆ ಅವರ ಮರಣದ ನಂತರ ಅವನ ಮಕ್ಕಳಾದ  ಸೈಯದ್ ಬಾಬಾಸಾಬ್ ತಂದೆ ಸೈಯದ್ ರಾಜಾಹುಸೇನ್, ಸೈಯದ್ ಸರಾಮೋದ್ದಿನ್ ತಂದೆ ಸೈಯದ್ ರಾಜಾಹುಸೇನ್ , ಮಹೇಬೂಬ್ ಚಂದಾ ತಂದೆ ಸೈಯದ್ ರಾಜಾಹುಸೇನ್, ಸೈಯದ್ ರಫೀಕ್ ತಂದೆ ಸೈಯದ್ ರಾಜಾಹುಸೇನ್, ಸೈಯದ್ ಶಫಿಕ್ ತಂದೆ ಸೈಯದ್ ರಾಜಾಹುಸೇನ್ ಸಾ; ಎಲ್ಲರೂ ವರ್ಚನಳ್ಳಿ ಇವರು ಸದರಿ ಜಮೀನು ತಮಗೆ ಸೇರಬೇಕು ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದು ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ. ಮತ್ತು ದಿನಾಂಕ 22/04/2019 ರಂದು ನಮ್ಮ ಹೊಲಕ್ಕೆ ಬಂದು ನಮ್ಮ ಹೊಲದಲ್ಲಿ ನೇಗಿಲು ಹೊಡೆದಿರುತ್ತಾರೆ. ವಿಷಯದಲ್ಲಿ ನಾವು ಕೇಳಿದರೆ ನಮಗೆ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ. ಬಗ್ಗೆ ಜೇವರಗಿ ಠಾಣೆಯಲ್ಲಿ ಕೇಸು ಧಾಖಲಾಗಿರುತ್ತದೆ. ಹೀಗಿದ್ದು ದಿನಾಂಕ; 07/8/2019 ರಂದು ಬೆಳಿಗ್ಗೆ 7-00 ಘಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಕೆಲಸ ಮಾಡುವ ಸಾಬಣ್ಣ ತಂದೆ ಈರಪ್ಪ ತಳವಾರ ಸಾ; ಬಿರಾಳ (ಕೆ) ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ಇಂದು ದಿನಾಂಕ; 08/08/2019 ರಂದು ಬೆಳಿಗ್ಗೆ ನಾನು ಹೊಲದ ಕಡೆಗೆ ಹೋದಾಗ ನಿಮ್ಮ ಹೊಲದಲ್ಲಿ  1) ಸೈಯದ್ ಬಾಬಾಸಾಬ್ ತಂದೆ ಸೈಯದ್ ರಾಜಾಹುಸೇನ್ ವಯ; 35 ವರ್ಷ 02) ಸೈಯದ್ ಸರಾಮೋದ್ದಿನ್ ತಂದೆ ಸೈಯದ್ ರಾಜಾಹುಸೇನ್ ವಯ; 33 ವರ್ಷ 03) ಮಹೇಬೂಬ್ ಚಂದಾ ತಂದೆ ಸೈಯದ್ ರಾಜಾಹುಸೇನ್ ವಯ; 330 ವರ್ಷ 04) ಸೈಯದ್ ರಫೀಕ್ ತಂದೆ ಸೈಯದ್ ರಾಜಾಹುಸೇನ್ ವಯ; 27 ವರ್ಷ 05) ಸೈಯದ್ ಶಫಿಕ್ ತಂದೆ ಸೈಯದ್ ರಾಜಾಹುಸೇನ್ ವಯ; 25 ವರ್ಷ ಜಾ; ಮುಸ್ಲಿಂ ಸಾ; ಎಲ್ಲರೂ ವರ್ಚನಳ್ಳಿ ತಾ; ಜೇವರಗಿ ಇವರು ಎಲ್ಲರೂ ಕೂಡಿ ಟ್ರಾಕ್ಟರ್ ನಂ ;ಕೆ.-32-ಟಿ.-5373 ನೇದ್ದರ ಮೂಲಕ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಿತ್ತಿದ್ದ ಹತ್ತಿ ಬೆಳೆ ಹರಗಿ ಹಾಳು ಮಾಡಿರುತ್ತಾರೆ. ನಾನು ಹೊಲಕ್ಕೆ ಹೋದಾಗ ನನಗೆ ನೋಡಿ ಟ್ರಾಕ್ಟರ ಸಮೇತ ಅಲ್ಲಿಂದ ಹೋಗಿರುತ್ತಾರೆ. ಎಂದು ತಿಳಿಸಿದನು. ನಾನು ಮತ್ತು ರಾಕೇಶ ತಂದೆ ನಾಗರಾಜ ಇಟಗಿ, ಮಹಿಪಾಲ್ ರಡ್ಡಿ, ತಂದೆ ಸಿದ್ದರಾಮಪ್ಪ ಇಟಗಿ, ಮತ್ತು ಅಪ್ಪಣ್ಣಗೌಡ ತಂದೆ ಸಿದ್ದರಾಮಪ್ಪ ಇಟಗಿ ರವರು ಕೂಡಿ ಹೊಲಕ್ಕೆ ಹೋಗಿ ನೋಡಲಾಗಿ ಘಟನೆ ನಿಜವಿದ್ದು ಹೊಲದಲ್ಲಿ ಸಂಪೂರ್ಣವಾಗಿ ಟ್ರಾಕ್ಟರ್ ದಿಂದ ಗಳೆ ಹೊಡೆದು ಬಿತ್ತಿದ್ದ ಹತ್ತಿ ಬೆಳೆ ಹರಗಿ ಹಾಳು ಮಾಡಿರುತ್ತಾರೆ. ಸದರಿ ಹೊಲದ ಗಳೆ ಬೀಜ ರಸಗೊಬ್ಬುರ ಮತ್ತು ಬಿತ್ತನೆಗಾಗಿ ಸುಮಾರು 1,00,000/- ರೂ ದಷ್ಟು ಖರ್ಚು ಮಾಡಿರುತ್ತೇವೆ. ಮತ್ತು ಒಂದು ತಿಂಗಳ ಬೆಳೆ ಹಾಳು ಮಾಡಿ ಒಟ್ಟು 1,00,000/- ರೂ ದಷ್ಟು ಹಾಳು ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯ ಗುನ್ನೆ ನಂ ನಂ 161/2019 ಕಲಂ 143,147,447,427 ಐಪಿಸಿ ಪ್ರಕಾರ ಪ್ರಕರಣ ಧಾಖಲಿಸಲಾಗಿದೆ.
ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ಬಾಬುರಾವ ತಂದೆ ಶೀವರಾಯ ನಿಂಬರ್ಗಾ ಸಾ: ಖಾದ್ರಿ ಚೌಕ ಜೆ,ಆರ್ ನಗರ ಕಲಬುರಗಿ ರವರು ದಿನಾಂಕ:07/08/2019 ರಂದು ಮದ್ಯಾಹ್ನ 01.00 ಗಂಟೆಗೆ ಗೊಬ್ಬುರದ ಮಹೇಶ ತಾಂತ್ರಿಕ ನಿರ್ವಾಹಕ ಕೋರೇಡ್ ಕಂಪನಿಯವರು ನಮಗೆ ತಿಳಿಸಿದ್ದು ದಿನಾಂಕ:07/08/2019 ರಂದು 12.30 ಪಿ.ಎಮ್ ಕ್ಕೆ ವಿದ್ಯುತ್ತ್ ಸಂಪರ್ಕ ಬಂದ ಆಗಿದ್ದು ಮದರಾ (ಕೆ) ಗ್ರಾಮದ ಇಂಡಸ್ ನಂ:1247127 ನೇದ್ದರಲ್ಲಿಯ ಬ್ಯಾಟರಿ ಲೋ ಆಗಿದ್ದು ತಾನು ಮದರಾ (ಕೆ) ಗ್ರಾಮಕ್ಕೆ ಹೋಗಿ ಪರಿಶೀಲಿಸಿ ನೋಡಲು ಮೇನ್ ಗೇಟ್ ಲಾಕ್ ಮುರಿದಿದ್ದು ಸೇಲ್ಟರ್ ಕೀಲಿ ಮುರಿದಿದ್ದು ಓಳಗಡೆ 24 ಬ್ಯಾಟರಿ ಸೇಲ್ಲುಗಳು ಕಳುವಾಗಿರುತ್ತವೆ ಅಂತಾ ತಿಳಿಸಿದನು. ಸುದ್ದಿ ತಿಳಿದ ನಾನು ಮದ್ಯಾಹ್ನ 04.00 ಗಂಟೆಗೆ ಮದರಾ (ಕೆ) ಟಾವರ್ ದಲ್ಲಿ ಬಂದು ನೋಡಲು ಕಳುವಾಗಿದ್ದು ನೀಜವಿತ್ತು. ಇಂದು ದಿನಾಂಕ:07/08/2019 ರಂದು ರಾತ್ರಿ 00.30 ಎ,ಎಮ್ ಗಂಟೆಯಿಂದ 12.00 ಪಿ,ಎಮ್ ಮಧ್ಯದ ಸಮಯದಲ್ಲಿ ಯಾರೋ ಕಳ್ಳರು ಟವರ್ ದ ಮೇನ್ ಗೇಟದ ಕೀಲಿ ಮುರಿದು ಓಳಗಡೆ ಹೋಗಿ ಸೇಲ್ಟರ ಕೀಲಿ ಮುರಿದು ಕ್ಯಾಬಿನದ ಬ್ಯಾಟರಿ ಬ್ಯಾಂಕಿಗೆ ಜೋಡಿಸಿದ ಕರೆಂಟ ವಾಯರ ಕಟ್ಟ ಮಾಡಿ ವಿದ್ಯುತ್ತ ಸರಬರಾಜಿಗಾಗಿ ಜೋಡನೆ ಮಾಡಿದ ಅಮರರಾಜ 600 ಎ,ಹೆಚ್ 48 ವೋಲ್ಟೇಜದ 24 ಬ್ಯಾಟರಿ ಸೇಲ್ಲುಗಳು ಅಂ||ಕಿ|| 24,000/- ಸಾವಿರ ರೂಪಾಯಿ ಬೆಲೆಬಾಳುವುದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯ ಗುನ್ನೆ ನಂ:43/2019 ಕಲಂ:379 ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: