ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-09-2019
ಭಾಲ್ಕಿ
ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 28-09-2019
ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ಸತೀಷ ಜಾಧವ ಸಾ: ಸಾವಳಿ, ಸದ್ಯ: ಡೊಣಗಾಪೂರ ರವರ ಗಂಡನಾದ ಸತೀಷ
ತಂದೆ ಚಿಮಣಾಜಿ ಜಾಧವ ವಯ: 35 ವರ್ಷ, ಸಾ: ಸಾವಳಿ ರವರು ಡೊಣಗಾಪೂರ ಶಿವಾರದ ಮಲ್ಲಪ್ಪಾ ಕುಲಕರ್ಣಿ ರವರ
ಹೊಲದಲ್ಲಿ ಅವರ ಎತ್ತುಗಳ ಮೈ ತೊಳೆಯಲು ಮಾಂಜ್ರಾ ನದಿಯ ನೀರಿನಲ್ಲಿ ಹೋಗಿ ಎತ್ತುಗಳ ಮೈ
ತೊಳೆಯುವಾಗ ಒಮ್ಮೆಲೆ ಗಂಡ ಸತಿಷ ರವರು ನೀರಿನಲ್ಲಿ ಮುಳಗಿ ಮ್ರತಪಟ್ಟಿರುತ್ತಾರೆ, ಅವರ ಮ್ರತ ದೇಹ
ದಿನಾಂಕ 29-09-2019 ರಂದು 1200 ಗಂಟೆಗೆ ಮಾಂಜ್ರಾ ನದಿಯ ನೀರಿನ ಮೇಲೆ ತೇಲಿರುತ್ತದೆ, ಅವರ
ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ
ವಗೈರೆ ಇರುವದಿಲ್ಲಾ ಅಂತ ನೀಡಿದ ಫಿರ್ಯಾದಿಯವರ ಲಿಖಿತ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ.
22/2019, ಕಲಂ. 174 ಸಿ.ಆರ್.ಪಿ.ಸಿ
:-
ದಿನಾಂಕ 29-09-2019 ರಂದು ಫಿರ್ಯಾದಿ ಸಂಜೀವಕುಮಾರ
ತಂದೆ ನರಸಿಂಗರಾವ ವಯ: 45 ವರ್ಷ, ಜಾತಿ: ಬುರುಡ, ಉ: ಭಾರತೀಯ ಪುರಾತತ್ವ ಇಲಖೆ ಬೀದರನಲ್ಲಿ ಸ್ವಾರಕ ಸಂರಕ್ಷಕರು, ಸಾ: ಮನೆ ಸಂ. 9-7-344 ಖಾಜಿ ಕಾಲೊನಿ ಬೀದರ ರವರು
ಸಬ್ಬಲ್ ಬರೀದ
ಗಾರ್ಡನ ಮೇನ ಗೇಟ್ ತೆಗೆದು ನಂತರ ಅಂದಾಜು 1400 ಗಂಟೆಗೆ
ಪುನಃ ರೌಂಡಿಗ್ ಮೇಲೆ ಸಬ್ಬಲ ಬರೀದಗೆ ಬಂದಾಗ ಗೊತ್ತಾಗಿದ್ದೆನೆಂದರೆ ಸಬ್ಬಲ ಬರೀದ ಗಾರ್ಡನ ಪುರ್ವ ದಿಕ್ಕಿಗೆ ಒಬ್ಬ ಅಪರಿಚಿತ ವ್ಯಕ್ತಿಯು ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ಗೊತ್ತಾಗಿ ಫಿರ್ಯಾದಿ ಮತ್ತು ಲೇಬರ ಪಂಢರಿ ಇಬ್ಬರು ಕೂಡಿ ಹೋಗಿ ನೋಡಲಾಗಿ ಒಂದು ಜಂಗ್ಲಿ ಮರದ ಟೊಂಗೆಗೆ ತನ್ನ ಅಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ನೋಡಿದ್ದು, ಸದರಿ ಅಪರಿಚಿತ ವ್ಯಕ್ತಿಯ ವಯಸ್ಸು 35-40 ವರ್ಷ ಇರುತ್ತದೆ, ಸದರಿಯವನು ಯಾವ ಕಾರಣಕ್ಕೆ ಮೃತಪಟ್ಟಿರುತ್ತಾನೆಂದು ಗೊತ್ತಿರುವುದಿಲ್ಲಾ, ಸದರಿ ಅಪರಿಚಿತ ವ್ಯಕ್ತಿಯು ದಿನಾಂಕ 29-09-2019 ರಂದು 0600
ಗಂಟೆಯಿಂದ 1400 ಗಂಟೆಯ
ಅವಧಿಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ
ಸಂ. 105/2019, ಕಲಂ. 279, 337, 338 ಐಪಿಸಿ :-
ದಿನಾಂಕ 29-09-2019 ರಂದು ಫಿರ್ಯಾದಿ ಬಸವರಾಜ ತಂದೆ ಚಂದ್ರಕಾಂತ ಜಪನಬಾಯಿ, ವಯ: 22 ವರ್ಷ, ಜಾತಿ: ಕಬ್ಬಲಿಗ, ಸಾ: ಉಡಬಾಳ ರವರು ತಮ್ಮ ಭಾವನಾದ ರಮೇಶ ತಂದೆ ಶರಣಪ್ಪಾ ಮಾಚೆನೊರ ವಯ: 28 ವರ್ಷ ಇಬ್ಬರೂ ತಮ್ಮೂರಿನಿಂದ ಚಿಟಗುಪ್ಪಾಕ್ಕೆ ಮೋಟರ ಸೈಕಲ ನಂ. ಎಪಿ-28/ಎಸಿ-9568 ನೇದರ ಮೇಲೆ ಬಂದು ಮರಳಿ ತಮ್ಮೂರಿಗೆ ಹೋಗುವಾಗ ರಮೇಶ ರವರು ಮೋಟರ ಸೈಕಲನ್ನು ಚಲಾಯಿಸುತ್ತಿದ್ದು ಅವರು ಚಿಟಗುಪ್ಪಾ-ಉಡಬಾಳ ರೋಡ ಮೇಲೆ ಕ್ರೀಶ್ಚಿಯನ ರುದ್ರ ಭೂಮಿ ಹತ್ತಿರ ಮೋಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಣ್ಣಿನ ಹತ್ತಿರ, ಎರಡೂ ಭುಜಗಳಿಗೆ ತರಚಿದ ಗಾಯಗಳಾಗಿದ್ದು, ರಮೇಶ ರವರಿಗೆ ತಲೆ ಹಿಂದೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತಸ್ರಾವವಾಗಿರುತ್ತದೆ, ಬಲಗಣ್ಣಿನ ಹತ್ತಿರ ತರಚಿದಗಾಯಗಳಾಗಿ ಬೇಹೋಷಾಗಿರುತ್ತಾರೆ, ನಂತರ ದಾರಿ ಹೋಕರು ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 160/2019,
ಕಲಂ. 379 ಐಪಿಸಿ :-
ಫಿರ್ಯಾದಿ ಅಬ್ದುಲ್ ಜುನೇದ ತಂದೆ ಅಬ್ದುಲ ನಜೀರ ವಯ: 23 ವರ್ಷ, ಸಾ: ಮಾಸೂಮ ಪಾಶಾ ಕಾಲೋನಿ ಭಾಲ್ಕಿ ರವರು ಭಾಲ್ಕಿಯ ಚೂಡಿ ಬಜಾರದಲ್ಲಿ ಮೇನ್ಸ ಟೇಲರ ಮತ್ತು ಬಟ್ಟೆ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 25-09-2019 ರಂದು 2130
ಗಂಟಗೆ ತನ್ನ ಅಂಗಡಿಯನ್ನು ಬಂದು ಮಾಡಿ ತನ್ನ ಹೊಂಡಾ ಲಿವೊ ಮೋಟರ ಸೈಕಲ ನಂ. ಕೆಎ-39/ಕ್ಯೂ-0063, ಬಣ್ಣ ಕಪ್ಪು ನೇದನ್ನು ಅಂಗಡಿ ಹತ್ತಿರ ಪಾರ್ಕ ಮಾಡಿ ತನಗೆ ಅವಶ್ಯಕ ಕೆಲಸವಿದ್ದ ಕಾರಣ ತನ್ನ ಗೆಳೆಯನ ಜೊತೆ ಕಾರನಲ್ಲಿ ಬೀದರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ದಿನಾಂಕ 26-09-2019 ರಂದು ತನ್ನ ಅಂಗಡಿ ಹತ್ತಿರ ಬಂದು ನೋಡಲು ಫಿರ್ಯಾದಿಯು ನಿಲ್ಲಿಸಿ ಹೋದ ಸದರಿ ಮೋಟಾರ ಸೈಕಲ ಇರಲಿಲ್ಲ, ನಂತರ ಫಿರ್ಯಾದಿಯು ಅಂದಿನಿಂದ ಇಂದಿನವರೆಗೂ ತನ್ನ ಮೋಟರ ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಎಲ್ಲಿಯೂ ಪತ್ತೆ ಆಗಿರುವದಿಲ್ಲ, ಫಿರ್ಯಾದಿಯವರ ಮೋಟಾರ್ ಸೈಕಲ್ ನಂ.
ಕೆಎ-39/ಕ್ಯೂ-0063, ಅ.ಕಿ 40,000/- ರೂ. ಬೆಲೆವುಳ್ಳದ್ದು ಯಾರೋ ಕಳ್ಳರು ದಿನಾಂಕ 25-09-2019 ರಂದು 2130 ಗಂಟೆಯಿಂದ ದಿನಾಂಕ 26-09-2019 ರಂದು 0030 ಗಂಟೆಯ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಫಿರ್ಯಾದಿಯವರು ದಿನಾಂಕ 29-09-2019 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment