Police Bhavan Kalaburagi

Police Bhavan Kalaburagi

Tuesday, September 3, 2019

KALABUARGI DISTRICT REPORTED CRIMES

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ; 01/09/2019 ರಂದು ಸಾಯಂಕಾಲ 4-00 ಘಂಟೆಯ ಸುಮಾರಿಗೆ ನನ್ನ ಹೆಂಡತಿ ಸೌಬಾಗ್ಯ ಇವಳು ನಮ್ಮ ಮಗಳಾದ ಸರಸ್ವತಿ ಇವಳಿಗೆ ಭೇಟಿಯಾಗಿ ಮಾತಾನಾಡಿಸಿಕೊಂಡು ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ನಮ್ಮ ಅಣ್ಣ-ತಮ್ಮಕೀಯ ಮಲ್ಲಿಕಾರ್ಜುನ್ ರದ್ದೆವಾಡಗಿ ಈತನು ಚಲಾಯಿಸುವ ಮೋಟಾರ ಸೈಕಲ್ ನಂ; ಕೆ.-32-ವಾಯ್ - 6458 ನೇದ್ದರ ಮೇಲೆ ಕುಳಿತುಕೊಂಡು ಜೇವರಗಿ ಮನೆಯಿಂದ ನರಿಬೋಳಕ್ಕೆ ಹೊದಳು. ಸ್ವಲ್ಪ ಸಮಯದ ನಂತರ ಸಾಯಂಕಾಲ 5-00 ಘಂಟೆಯ ಸುಮಾರಿಗೆ ಮಲ್ಲಿಕಾರ್ಜುನ್ ಈತನು ಪೋನ್ ಮಾಡಿ ವಿಷಯ ತಿಳೀಸಿದ್ದೇನೆಂದರೆ; ಜೇವರಗಿ-ನರಿಬೋಳ ರೋಡಿನ ಮೇಲೆ ನಾನು ನನ್ನ ಮೋಟಾರ ಸೈಕಲ್ ನಂ; ನಂ; ಕೆ.-32-ವಾಯ್ - 6458 ನೇದ್ದರ ಮೇಲೆ, ಹಿಂದೆ ವೈನಿ ಸೌಭಾಗ್ಯ ಇವಳಿಗೆ ಕೂಡಿಸಿಕೊಂಡು ನರಿಬೋಳ ಕಡೆಗೆ ಹೋಗುತ್ತಿದ್ದಾಗ ಸಾಯಂಕಾಲ 4-30 ಘಂಟೆಯ ಸುಮಾರಿಗೆ ಗುಡೂರ ಹಳ್ಳದ ಹತ್ತಿರ ರೋಡ್ ಜಂಪ್ ದಲ್ಲಿ ಆಯಾ ತಪ್ಪಿ ಮೋಟಾರ ಸೈಕಲ್ ಮೇಲಿಂದ ಬಿದ್ದಿರುತ್ತಾಳೆ. ಅವಳಿಗೆ ತಲೆಗೆ ಭಾರಿ ಪೆಟ್ಟಾಗಿ ರಕ್ತ ಸೋರುತ್ತಿದೆ ಎಂದು ತಿಳಿಸಿದನು. ನಾನು ಘಾಬರಿ ಬಿದ್ದು ಸ್ಥಳಕ್ಕೆ ಹೋಗಿ ನೋಡಲಾಗಿ ಘಟನೆ ನಿಜವಿದ್ದು. ನನ್ನ ಹೆಂಡತಿ ತಲೆಗೆ ಮತ್ತು ಬಲ ಕೈ ಮೊಳಕೈ ಹತ್ತಿರ ಭಾರಿ ರಕ್ತಘಾಯವಾಗಿ ಅವಳು ಬೇಹೋಸ್ ಆಗಿದ್ದಳು. ನಂತರ ನಾನು ಮತ್ತು ಮಲ್ಲಿಕಾರ್ಜುನ್ ಮತ್ತು ಅಲ್ಲಿಯೇ ರೋಡಿಗೆ ಹೋಗುತ್ತಿದ್ದವರು ಕೂಡಿಕೊಂಡು ನನ್ನ ಹೆಂಡತಿಗೆ 108 ಅಂಬುಲೆನ್ಸ್ ದಲ್ಲಿ ಹಾಕಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಗೆ ತಂದು ಸೇರಿಕೆ ಮಾಡಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ನಾನು ಮತ್ತು ನನ್ನ ಅತ್ತೆ ಸಿದ್ದಮ್ಮಇಬ್ಬರು ಕೂಡಿಕೊಂಡು ನನ್ನ ಹೆಂಡತಿಗೆ ಅದೇ ಅಂಬುಲೆನ್ಸದಲ್ಲಿ ಹಾಕಿಕೊಂಡು ಕಲಬುರಗಿ ಚಿರಾಯು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಅಲ್ಲಿ ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾಯಂಕಾಲ 7-00 ಘಂಟೆಯ ಸುಮಾರಿಗೆ ನನ್ನ ಹೆಂಡತಿ ಸೌಭಾಗ್ಯ ಇವಳು ಮೃತಪಟ್ಟಿರುತ್ತಾಳೆ. ಅಂತಾ ನಾನು ಶ್ರೀ ನಿಂಗಪ್ಪ ತಂದೆ ಸೈಬಣ್ಣ ರದ್ದೆವಾಡಗಿ ಸಾ; ಕನಕದಾಸ ಚೌಕ್ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯ ಗುನ್ನೆ ನಂ  184/2019 ಕಲಂ; 279 304 () ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ದ್ಯಾವಪ್ಪ ಬೇನಗೀಡ ಸಾ:ಸುಗೂರ (ಎನ) ಗ್ರಾಮ ರವರ ಹೊಲದ ಪಕ್ಕದಲ್ಲಿ ಸೋಮಣ್ಣಾ ಠಣಕೆದಾರ ರವರ ಹೊಲವಿದ್ದು ಸದರಿ ಹೊಲದ ವಿಷಯದಲ್ಲಿ ತಕರಾರು ಇದ್ದು ಬಗ್ಗೆ ಬಸವರಾಜ ಇತನು  ತಕರಾರು ಮಾಡತ್ತ ಬಂದಿರುತ್ತಾನೆ. ಹೀಗಿದ್ದು ದಿನಾಂಕ 31/08/2019 ರಂದು ರಾತ್ರಿ ನಾನು ಸಂಡಾಸಕ್ಕೆ ತಂಬಿಗೆ ತೆಗೆದುಕೊಂಡು ನಮ್ಮ ಮನೆಯ ಹಿಂದುಗಡೆ ಇರುವ ಜಾಗಕ್ಕೆ ಹೊರಟಾಗ ರೊಡ ಮೇಲಿಂದ ಬಸವರಾಜ ಠಣಕೆದಾರ ಇತನು ಬಂದು ನನಗೆ ನೋಡಿ ರಂಡಿ ಬೋಸಡಿ ಅಂತಾ ಬೈಯುತ್ತಿದ್ದಾಗ ನಾನು ಯಾರಿಗೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ನಿನ್ನ ಸೊಕ್ಕು ಹೆಚ್ಚಾಗಿದೆ ಅಲ್ಲೇ ಬಿದ್ದ ಕಲ್ಲಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯಪಡಿಸಿದನು.ಆಗ ಸಂಡಾಸಕ್ಕೆ ಬಂದ ಹೆಣ್ಣು ಮಕ್ಕಳಾದ ದೇವಕಿ ಗಂಡ ಈರಪ್ಪ, ಶಾಂತಮ್ಮ ಗಂಡ ಹಂಪಣ್ಣಾ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಸೂಳೇ ಮಕ್ಕಳದು ಊರಲ್ಲಿ ಹೆಚ್ಚಾಗಿದೆ ಒಬ್ಬೊಬ್ಬರಿಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯ ಗುನ್ನೆ  ನಂಬರ 96/2019 ಕಲಂ:324,504,506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: