Police Bhavan Kalaburagi

Police Bhavan Kalaburagi

Sunday, October 27, 2019

KALABURAGI DISTRICT REPORTED CRIME

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಂಗಪ್ಪ ಕೆ ಬಗಲಿ ಕಂದಾಯ ನಿರೀಕ್ಷಕರು ಅಫಜಲಫೂರ ರವರು ದಿನಾಂಕ 26-10-2019 ರಂದು 06:00  ,ಎಮ್ ಕ್ಕೆ  ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಸಂಗಡ ನಾನು ಮತ್ತು ಬೀರಪ್ಪ ಗ್ರಾಮ ಲೇಕ್ಕಾಧಿಕಾರಿ ಬನ್ನೇಟ್ಟಿ ಮತ್ತು ಅಫಜಲಪೂರ ಗ್ರಾಮ ಸಹಾಯಕರವರಾದ ಯಲ್ಲಪ್ಪ ಜಮಾದಾರ, ಲಕ್ಷ್ಮೀಪುತ್ರ ಕೋಳಿಗೇರಿ, ಶೀವಶರಣ ಜಮಾದಾರ ರವರೆಲ್ಲರೂ ಗಸ್ತು ತಿರುಗುತ್ತಿದ್ದಾಗ ಅಫಜಲಪೂರ ಘತ್ತರಗಾ ರೋಡಿಗೆ ಇರುವ ಬನ್ನೇಟ್ಟಿ ಕ್ರಾಸ್ ಹತ್ತಿರ ಟಿಪ್ಪರದಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಅಶೋಕ ಲೈಲೆಂಡ್ ಕಂಪನಿ ಟಿಪ್ಪರ ನಂ: ಎಮ್.ಹೆಚ್-04 ಡಿಎಸ್-1504 ನೇದ್ದನ್ನು ಜಪ್ತಿ ಮಾಡಲಾಗಿರುತ್ತದೆ. ಹಾಗೂ ಸದರಿ ಟಿಪ್ಪರ ಚಾಲಕನನ್ನು ಹಿಡಿದಿದ್ದು, ಅವನ ಹೆಸರು ವಿಳಾಸ ಅಮೋಗಿ ತಂದೆ ಬಸವರಾಜ ಪೂಜಾರಿ ಸಾ|| ಅಮೋಘಸಿದ್ದ ಗುಡಿಯ ಹತ್ತಿರ ಅಫಜಲಪೂರ ತಿಳಿಸಿದ್ದು, ಸದರಿ ಚಾಲಕನಿಗೆ ಟಿಪ್ಪರ ಮಾಲಿಕನ ಹೆಸರು ವಿಳಾಸ ವಿಚಾರಿಸಲು ಈಶ್ವರ ತಂದೆ ಶಿವಪುತ್ರ ಪೂಜಾರಿ ಸಾ|| ಅಫಜಲಪೂರ ಅಂತಾ ತಿಳಿಸಿರುತ್ತಾನೆ. ಸದರಿ ಜಪ್ತ ಮಾಡಿಕೊಂಡ ಟಪ್ಪರಿನ ಅಂದಾಜು ಕಿಮ್ಮತ್ತು 10,00,000/- ಮತ್ತು ಅದರಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು ಕಿಮ್ಮತ್ತು 10,000/- ರೂ ಇರುತ್ತದೆ. ಸದರಿ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಚಾಲಕ ಮತ್ತು ಸದರಿ ಟಿಪ್ಪರ ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ.ಮಹ್ಮೊದ ಶೇಖ್ ಅಮಜದ್ ರವರ ತಮ್ಮನಾದ ನಸೀರುದ್ದಿನ ಈತನು ಕಲಬುರಗಿಯ ಪಾಲಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಸದ್ಯ ಪರೀಕ್ಷೇ ಬರೆಯುತ್ತಿದ್ದಾನೆ, ಹೀಗಿದ್ದು ದಿನಾಂಕ:25/10/2019 ರಂದು ಬೆಳಿಗ್ಗೆ 0900 ಗಂಟೆಗೆ ನಸೀರುದ್ದಿನನು, ತಾನು ಆಳಂದ ಪಟ್ಟಣದ ಲಾಡ್ಲೇಮಶಾಖ ದರ್ಗಾಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ನಮಗೆ ತಿಳಿಸಿ. ನಮ್ಮ ಪರಿಚಯದವರ ಮೊಟಾರ್ ಸೈಕಲ್ ನಂಬರ್ ಕೆಎ29-ಆರ್9009 ನೇದ್ದನ್ನು ತಗೆದುಕೊಂಡು ಒಬ್ಬನೆ ಹೋಗಿರುತ್ತಾನೆ. ಮಧ್ಯಾಹ್ನ ವಾದರು ಇನ್ನು ಮನೆಗೆ ಬರಲಾದರ ಕಾರಣ ನನ್ನ ಇನ್ನೊಬ್ಬ ತಮ್ಮ ತಖರೇಜ್ ಈತನು ನಾವೆಲ್ಲರೂ ಮನೆಯಲ್ಲಿದ್ದಾಗ ತನ್ನ ಮೊಬೈಲನಿಂದ 2-51 ಪಿ.ಎಂಕ್ಕೆ ನಸೀರುದ್ದಿನ ಈತನ ಮೊಬೈಲಗೆ ಫೋನಮಾಡಿದಾಗ ನಸೀರುದ್ದಿನನ ಮೊಬೈಲ್ ಕರೆಯನ್ನು ಯಾರೋ ಸ್ವೀಕರಿಸಿ ಕಡಗಂಚಿ ಮೌಂಟ್ ಕಾರ್ಮೆೇಲ್ ಸ್ಕೂಲ್ ಹತ್ತಿರ ಕಲಬುರಗಿ ಆಳಂದ ಎಸ್.ಹೆಚ್-10 ರೋಡಿನ ಮೇಲೆ ನಸೀರುದ್ದಿನನ ಮೊಟಾರ್ ಸೈಕಲಗೆ ಲಾರಿ ಡಿಕ್ಕಿಹೊಡೆದು ಅಪಘಾತವಾಗಿದ್ದು, ನಸೀರುದ್ದಿನನ ತಲೆಗೆ ಗಂಭೀರ ರಕ್ತಗಾಯ ವಾಗಿದ್ದರಿಂದ ಆತನ ಮಾತನಾಡುವ ಸ್ಥಿತಿಯಲ್ಲಿಲ್ಲಾ. ಆತನಿಗೆ ಪಟ್ಟಣ ಟೋಲ್ನಾಕಾ ಅಂಬ್ಯೂಲೆನ್ಸನಲ್ಲಿ ಹಾಕಿ ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆ ಕಲಬುರಿಗಿ ಕಡೆ ಕಳಿಸಿ ಕೊಡುತ್ತಿದ್ದೇವೆ ಅಂತಾ ತಿಳಿಸಿದ್ದು, ಈ ವಿಷಯವನ್ನು ನನ್ನ ತಮ್ಮ ತಖರೇಜ್ ಇತನು ನಮಗೆ ತಿಳಿಸಿದ್ದರಿಂದ ಮನೆಯಲ್ಲಿ ನಾನು ನನ್ನ ತಾಯಿ ಶಕೀಲಾಬೇಗಂ ಹಾಗೂ ನನ್ನ ಸಹೋದರರಾದ ಸದ್ದಾಮ್ ಯುಸೂಫ್, ತಖರೇಜ್ ಎಲ್ಲರೂ ಗಾಭರಿಗೊಂಡು ಕೂಡಲೆ ನಾವೆಲ್ಲರೂ ಸೇರಿ ತಕ್ಷಣವೆ ನಮ್ಮ ಮನೆಯಿಂದ ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ಬಂದೇವು, ಸ್ವಲ್ಪ ಹೊತ್ತಿನಲ್ಲಿಯೇ ಪಟ್ಟಣ ಟೋಲ್ನಾಕಾ ಅಂಬ್ಯೂಲೆನ್ಸ್ ವಾಹನವು ಅಲ್ಲಿಗೆ ಬಂದಿದ್ದು, ನಾವೆಲ್ಲರೂ ಸೇರಿ ನನ್ನ ತಮ್ಮ ನಸೀರುದ್ದಿನನಿಗೆ ನೋಡಿದಾಗ ಆತನಿಗೆ ತಲೆಗೆ ಗಂಭೀರ ರಕ್ತಗಾಯವಾಗಿ ಮೆದಳು ಹೊರಬಂದಂತೆ ಕಂಡು ಬಂದಿರುತ್ತದೆ. ಅಲ್ಲದೇ ಬಲಗಾಲ ತೊಡೆಗೆ ಗಂಭೀರ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಕಾಲು ಮುರಿದಂತೆ ಕಂಡು ಬಂದಿರುತ್ತದೆ. ನಾವು ಹಾಗೂ ಅಂಬ್ಯೂಲೆನ್ಸ್ ಸಿಬ್ಬಂದಿಯವರೆಲ್ಲರೂ ಸೇರಿ ನಸೀರುದ್ದಿನನಿಗೆ ಅಂಬ್ಯೂಲೆನ್ಸನಿಂದ ಎತ್ತಿ ಯುನೈಟೇಡ್ ಆಸ್ಪತ್ರೆಗೆ ಸೇರಿಕೆಮಾಡಿ ಆನಂತರ ಅಂಬ್ಯೂಲೆನ್ಸ್ ಸಿಬ್ಬಂದಿಯವರಿಗೆ ವಿಚಾರಿಸಿದಾಗ ಮಧ್ಯಾಹ್ನ ತಮಗೆ ಕಡಗಂಚಿ ಮೌಂಟ್ ಕಾರ್ಮೇಲ್ ಸ್ಕೂಲ್ ಹತ್ತಿರದ ಎಸ್.ಹೆಚ್-10 ಡಾಂಬರ್ ರಸ್ತೆಯ ಮೇಲೆ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಮೇರೆಗೆ ನಾವು ಸ್ಥಳಕ್ಕೆ ಹೋಗಿ ಅಲ್ಲಿ ನೆರದವರಿಗೆ ವಿಚಾರಿಸಿದಾಗ 2-30 ಪಿ.ಎಂ ಸುಮಾರಿಗೆ ಕಲಬುರಗಿ ಕಡೆಯಿಂದ ಲಾರಿ ನಂಬರ್ ಕೆಎ32-ಡಿ4449 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿ ಆಳಂದ ದಿಂದ ಕಲಬುರಿ ಕಡೆಗೆ ಮೊಟಾರ್ ಸೈಕಲ್ ನಂಬರ್ ಕೆಎ29-ಆರ್9009 ನೇದ್ದರ ಮೇಲೆ ಹೊರಟಂತಹ ಮೊಟಾರ್ ಸೈಕಲ್ ಸವಾರನಿಗೆ ಡಿಕ್ಕಿಹೊಡೆದು ಅಪಘಾತ ಪಡಿಸಿ ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದಾಗಿ ತಿಳಿಸಿರುತ್ತಾರೆ. ಮೊಟಾರ್ ಸೈಕಲ್ ಸವಾರನಿಗೆ ತಾವು ಉಪಚಾರ ಕುರಿತು ತಂದಿರುವುದಾಗಿ ನಮ್ಮ ಮುಂದೆ ತಿಳಿಸಿರುತ್ತಾರೆ. ಅಪಘಾತದಲ್ಲಿ ನನ್ನ ತಮ್ಮ ನಸೀರುದ್ದಿನನಿಗೆ ತಲೆಗೆ, ಬಲಗಾಲಿಗೆ, ಗಂಭೀರ ರಕ್ತಗಾಯ ಹಾಗೂ ಗುಪ್ತಗಾಯಗಳು ಆಗಿರುತ್ತವೆ. ಆತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಸದ್ಯ ಉಪಚಾರ ಪಡೆಯುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ವಾಡಿ ಠಾಣೆ : ಶ್ರೀ ಶಾಂತಕುಮಾರ ತಂದೆ ಸಾಮವೇಲ್ ಸೀಮನ್ ಮು:ನಿಜಾಮಗೇಟ ಹತ್ತಿರ ವಾಡಿ ರವರದು 14 ಟೈಯರಿನ ಟ್ಯಾಂಕರ ಲಾರಿ ನಂಬರ ಕೆಎ-32 ಡಿ-5010 ನೇದ್ದು ಇದ್ದು ಅದನ್ನು ನಾನೇ ಚಲಾಯಿಸಿಕೊಂಡು ಬರುತ್ತೆನೆ. ಸದರಿ ಲಾರಿಯಲ್ಲಿ ಫ್ಯಾಕ್ಟರಿಗಳಿಂದ ಸಿಮೆಂಟ ತುಂಬಿಕೊಂಡು ಸಂಬಂಧಪಟ್ಟ ಸ್ಥಳಕ್ಕೆ ಬಾಡಿಗೆ ಹೊಡೆಯುವ ಕೆಲಸ ಮಾಡಿಕೊಂಡಿದ್ದು ಇರುತ್ತದೆ. ಈಗ ದೀಪಾವಳಿ ಹಬ್ಬ ಇರುವದರಿಂದ ನಿನ್ನೆ ದಿನಾಂಕ 25/10/2019 ರಂದು ರಾತ್ರಿ 10-00 ಗಂಟೆ ಸುಮಾರು ನನ್ನ ಲಾರಿಯನ್ನು ವಾಡಿ ಪಟ್ಟಣದ ಬಾಲಯೇಸು ಚರ್ಚ ಮುಂದಿನ ರೊಡ ಪಕ್ಕದಲ್ಲಿ ನಿಲ್ಲಿಸಿ ಮನೆಗೆ ಹೋಗಿ ಮನೆಯಲ್ಲಿ ಮಲಗಿಕೊಂಡೆನು. ನಂತರ ದಿನಾಂಕ 26/10/2019 ರಂದು ಬೆಳಗ್ಗೆ 06-00 ಗಂಟೆ ಸುಮಾರು ನನ್ನ ಲಾರಿ ಹತ್ತಿರ ಬಂದು ನೋಡಲಾಗಿ  ನನ್ನ ಲಾರಿಯ ಡಿಸೇಲ್ ಟ್ಯಾಂಕದ ಡಕ್ಕನ ಮುರಿದಿದ್ದು ಡಿಸೇಲ್ ಟ್ಯಾಂಕ ಖುಲ್ಲಾ ಇದ್ದಿದ್ದನ್ನು ಕಂಡು ನಂತರ ಡಿಸೇಲ್ ಪರಿಶೀಲಿಸಿ ನೋಡಲಾಗಿ ಸುಮಾರು 110 ಲೀಟರ ಡಿಸೇಲ ಇರಲಿಲ್ಲ. ದಿನಾಂಕ 25/10/2019 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 26/10/2019 ರ ಬೆಳಗ್ಗಿನ 06-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಲಾರಿಯ ಡಿಸೇಲ ಟ್ಯಾಂಕದ ಡಕ್ಕನ ಮುರಿದು ಟ್ಯಾಂಕದಲ್ಲಿದ್ದ ಸುಮಾರು 110 ಲೀಟರದಷ್ಟು ಡಿಸೇಲನ್ನು ಕಳವು ಮಾಡಿಕೊಂಡು ಹೋಗಿದ್ದು ಡಿಸೇಲ್ ಅಂದಾಜು ಕಿಮ್ಮತ್ತು 7700/-ರೂಪಾಯಿ ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: