Police Bhavan Kalaburagi

Police Bhavan Kalaburagi

Monday, October 14, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಭೈರು ತಂದೆ ರಘುನಾಥ ಪವಾರ ಸಾ|| ಶಕಾಪೂರ ಪಾರ್ದಿ ತಾಂಡಾ ತಾ|| ಆಳಂದ ಜಿ|| ಕಲಬುರಗಿ ರವರ ತಾಯಿ ರಾಜಾಮಾಬಾಯಿ ವಯ|| 67 ವರ್ಷ ಇವಳು ನಮ್ಮ ಹತ್ತಿರ ವಾಸವಾಗಿರುತ್ತಾಳೆ, ನಿನ್ನೆ ದಿನಾಂಕ 12/10/2019 ರಂದು ಬೆಳಿಗ್ಗೆ ನನ್ನ ತಾಯಿ ರಾಜಾಮಾಬಾಯಿ ಹಾಗೂ ನಮ್ಮ ತಾಂಡಾದ ಪಾರ್ವತಿ ಗಂಡ ಸುಭಾಷ ಚವ್ಹಾಣ, ಸಾಲು ತಂದೆ ಹರಿಶ್ಚಂದ್ರ ಪವಾರ, ಎಲ್ಲರೂ ಕೂಡಿ ಆಳಂದ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಇರುವ ನಮ್ಮ ಸಂಭಂದಿಕರಿಗೆ ಮಾತನಾಡಿಸಿಕೊಂಡು ಬರುತ್ತೆವೆ ಅಂತಾ ಹೇಳಿ ಹೊರಟು ಹೋದರು, ನಂತರ ಸಾಯಂಕಾಲ 05-30 ಗಂಟೆಯ ಸುಮಾರಿಗೆ ಸಾಲು ಪವಾರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಾಯಿ ರಾಜಮಾಬಾಯಿ ಇವಳಿಗೆ ಆಳಂದ ಸರ್ಕಾರಿ ಆಸ್ಪತ್ರೆಯ ಎದುರುಗಡೆ, ರಸ್ತೆಯ ಮೇಲೆ ರಸ್ತೆ ಅಪಘಾತವಾಗಿರುತ್ತದೆ, ಆಕೆಗೆ ನಾನು ಹಾಗೂ ಪಾರ್ವತಿ ಇಬ್ಬರೂ ಕೂಡಿ ಪಿ,ಎನ್ ಶಹಾ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ, ಅಂತಾ ತಿಳಿಸಿದಾಗ ನಾನು ಕೂಡಲೆ ಪಿ,ಎನ್, ಶಹಾ ಆಸ್ಪತ್ರೆಗೆ ಹೋಗಿ ನೊಡಲಾಗಿ, ನನ್ನ ತಾಯಿಯ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತ ಗಾಯಗಳಾಗಿದ್ದು ಈ ಘಟನೆ ಹೇಗಾಯಿತು ಅಂತಾ ವಿಚಾರಿಸಿದಾಗ ಸಾಲು ಇತನು ತಿಳಿಸಿದ್ದೆನೆಂದರೆ ಇಂದು ನಾನು ಹಾಗೂ ನಿಮ್ಮ ತಾಯಿ ರಾಜಾಮಾಬಾಯಿ, ಪಾರ್ವತಿ ಎಲ್ಲರೂ ಕೂಡಿ ಆಳಂದ ಸರ್ಕಾರಿ ಆಸ್ಪತ್ರೆಯ ಹತ್ತಿರ ಬಂದು ರೋಡಿನನಿಂದ ಕೆಳಗೆ ಇಳಿಯುವಾಗ ಮಟಕಿ ಕಡೆಯಿಂದ ಒಂದು ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರೋಡ ದಾಟುತ್ತಿರುವ ನಿಮ್ಮ ತಾಯಿಗೆ ಅಪಘಾತ ಪಡಿಸಿ ದುಃಖಪತ ಗೊಳಿಸಿ ತನ್ನ ಟಂಟಂ ಸ್ವಲ್ಪ ಮುಂದೆ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿರುತ್ತಾನೆ, ಟಂಟಂ ಹತ್ತಿರ ಹೋಗಿ ನಂ ನೋಡಲಾಗಿ ಕೆಎ 36 ಎ 9962 ಇರುತ್ತದೆ, ನಂತರ ನಿಮ್ಮ ತಾಯಿಗೆ ಉಪಚಾರ ಕುರಿತು ಪಿ,ಎನ್ ಶಹಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆವೆ, ಅಂತಾ ತಿಳಿಸಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ನನ್ನ ತಾಯಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಇ,ಎಸ್,ಐ ಆಸ್ಪತ್ರೆಗೆ ಬರುವಾಗ ಆಸ್ಪತ್ರೆಯ ಎದುರುಗಡೆ ರಾತ್ರಿ 08-35 ಗಂಟೆಯ ಸುಮಾರಿಗೆ ನನ್ನ ತಾಯಿ ಮೃತಪಟ್ಟಿರುತ್ತಾಳೆ, ಈ ಬಗ್ಗೆ ಮಾನ್ಯರವರು ಟಂಟಂ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಿರುಕಳ ನೀಡಿ ಹೊಡೆಬಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಿವಮ್ಮಾ ಗಮಡ ಭಿಮಾಶಂಕರ ಫುಜಾರಿ ಸಾ|| ಬಳುರ್ಗಿ ರವರದು 15 ವರ್ಷಗಳ ಹಿಂದೆ ಕುಳಕುಮಟಗಿ ಗ್ರಾಮದ ಭೀಮಾಶಂಕರ ಪೂಜಾರಿ ರವರೊಂದಿಗೆ ಮದುವೆ ಆಗಿರುತ್ತದೆ. ನನ್ನ ಗಂಡನು ನನಗೆ ಮದುವೆಯಾದ 2-3 ವರ್ಷಗಳ ವರೆಗೆ ಚೆನ್ನಾಗಿ ನೋಡಿಕೊಂಡು ತದನಂತರ ಸಂಸಾರದ ವಿಷಯವಾಗಿ ನನ್ನೊಂದಿಗೆ ಜಗಳ ತಗೆದು ನನಗೆ ಹೊಡೆಯುವುದು ಬಡೆಯುವುದು ಮಾಡಿ ಕಿರುಕುಳ ನೀಡುತ್ತಿದ್ದನು. ನಾನು ನನ್ನ ಗಂಡನ ಕಿರುಕುಳ ತಾಳಲಾರದೆ ಈಗ ಒಂದು ವರ್ಷದಿಂದ ನನ್ನ ತವರು ಮನೆಯಲ್ಲಿ ಇದ್ದಿರುತ್ತೇನೆ.  ದಿನಾಂಕ 29-09-2019 ರಂದು ಬೆಳಿಗ್ಗೆ 10:00 ಗಂಟೆಗೆ ನನ್ನ ಗಂಡನು ನನ್ನ ತವರು ಮನೆಗೆ ಬಂದು ನನ್ನೊಂದಿಗೆ ಜಗಳ ತಗೆದು ಎನೆ ರಂಡಿ ಬೋಸಡಿ ನಿನ್ನದು ಸೊಕ್ಕ ಬಾಳ ಆಗ್ಯಾದ ನಾನು ಹೇಳಿದ ಹಾಗೇ ಕೇಳಿಕೊಂಡು ಬಿಳೋದು ಬಿಟ್ಟು ತವರು ಮನೆಗೆ ಬಂದು ಇದ್ದಿ ಎಂದು ನನಗೆ ಹೊಡೆದಿರುತ್ತಾನೆ. ನನ್ನ ಗಂಡನು ನನಗೆ ಹೊಡೆಯುತ್ತಿದ್ದಾಗ ನನ್ನ ತಂದೆಯಾದ ಬಸಣ್ಣ ಪೂಜಾರಿ, ತಾಯಿಯಾದ ಮಹಾಧೇವಿ ಪೂಜಾರಿ ರವರು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ. ನಂತರ ದಿನಾಂಕ 30-09-2019 ರಂದು ಸಂಜೆ ನನ್ನ ಅತ್ತೆಯಾದ ಲಕ್ಷ್ಮೀಂಭಾಯಿ ಹಾಗೂ ನಾದನಿಯಾದ ರೇಬಾಯಿ ಇವರು ನನಗೆ ಪೋನ್ ಮಾಡಿ ರಂಡಿ ನನ್ನ ಮಗನು ಮನೆಗೆ ಬಂದಾಗ ಬೋಸಡಿ ಇನ್ನೊಮ್ಮೆ ನನ್ನ ಮಗನ ತಂಟೆಗೆ ಬಂದರೆ ನಾವು ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡನಾದ 1) ಭೀಮಾಶಂಕರ ತಂದೆ ಹಣಮಂತ ಪೂಜಾರಿ ಸಾ|| ಕುಳಕುಮಟಗಿ ತಾ|| ಸಿಂದಗಿ, ಅತ್ತೆಯಾದ 2) ಲಕ್ಷ್ಮೀಂಬಾಯಿ ಗಂಡ ಹಣಮಂತ ಪೂಜಾರಿ ಸಾ|| ಕುಳಕುಮಟಗಿ ತಾ|| ಸಿಂದಗಿ, ನಾದನಿಯಾದ 3) ರೇಬಾಯಿ ಗಂಡ ಭೂತಾಳಿ ಪೂಜಾರಿ ಸಾ|| ಮೋರಟಗಿ ತಾ|| ಸಿಂದಗಿ ಇವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದು, ನನ್ನ ಗಂಡನು ನನಗೆ ಹೊಡೆ ಬಡೆ ಮಾಡಿ, ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನಿಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಶಿಕಲಾ ಗಂಡ ಮಲಕಣ್ಣ ಹೂಗಾರ ಸಾ: ಕೆರಕನಹಳ್ಳಿ ರವರು ತಮ್ಮ ಮನೆಯ ಪಕ್ಕದ ಹತ್ತಿರ ನಾವು ಒಂದು ಹೊಸ ಕೊಣೆ ಕಟ್ಟುವ ಸಲುವಾಗಿ ಪಾಯಾ(ಬೆಸ್ ಮೆಂಟ್) ಹಾಕಿ ಬಿಟ್ಟಿರುತ್ತೇವೆ ಸದ್ಯ ಪಾಯಾದ ಮೇಲೆ ನಾವು ಕಟ್ಟಿಗ್ಗೆ ತಂದು ಹಾಕಿರುತ್ತೇವೆ. ದಿನಾಂಕ:07/10/2019 ರಂದು 6-00 ಪಿ,ಎಮ್,ಸುಮಾರಿಗೆ ನಾನು ಮತ್ತು ನನ್ನ ಗಂಡ ಮಲಕಣ್ಣ ಮತ್ತು ನನ್ನ ಮಗನಾದ ಬುದ್ದಣ್ಣ ಮೂರು ಜನರು ನಮ್ಮ ಮನೆಯ ಮುಂದಿನ ಸಾರ್ವಜನಿಕ ಸಿ,ಸಿ ರಸ್ತೆ ಮೇಲೆ ಮಾತನಾಡುತ್ತಾ ನಿಂತಾಗ ನಮ್ಮ ಮನೆಯ ಎದುರುಗಡೆ ಮನೆಯವರಾದ ಸಿದ್ದಪ್ಪ ತಂದೆ ಈರಪ್ಪ ತಳವಾರ ಮತ್ತು ಅವನ ಮಗನಾದ ರಾಜಕುಮಾರ @ ಕುಮಾರ ಇಬ್ಬರು ಕೂಡಿಕೊಂಡು ನಮ್ಮ ಹತ್ತೀರ ಬಂದವರೆ ಅದರಲ್ಲಿ ಸಿದ್ದಪ್ಪನು ನನ್ನ ಗಂಡನಿಗೆ ನೀವು ಹಾಕಿದ ಕಟ್ಟಿಗೆಯನ್ನು ತಗೆಯಿರಿ ಇದರಿಂದ ನಮಗೆ ಹಾದು ಹೋಗಲು ತೊಂದರೆ ಆಗುತ್ತಿದೆ ಅಂತ ಅಂದನು ಆಗ ನನ್ನ ಮಗ ಬುದ್ದಣ್ಣನು ಕಾಕಾ ನಾವು ನಮ್ಮ ಜಾಗದಲ್ಲಿ ನಾವು ಕಟ್ಟಿಗೆ ಹಾಕಿದ್ದಿವಿ ಅದಕ ನಿನೆಗೆನು ತೊಂದರೆ ಆಗುತ್ತಿದ್ದೆ ತಗಿ ಅಂತ ಯಾಕ ಅನ್ನಾಕತ್ತಿದ್ದಿ ಅಂತ ಅಂದ್ದಿದ್ದಕ್ಕೆ ರಾಜಕುಮಾರ @ ಕುಮಾರ ಈತನು ನನ್ನ ಮಗ ಬುದ್ದಣ್ಣನಿಗೆ ತೆಕ್ಕಿಯಲ್ಲಿ ಹಿಡಿದನು ಆಗ ಸಿದ್ಪಪ್ಪನು ನನ್ನ ಮಗನಿಗೆ ಕಪಾಳ ಮೇಲೆ ಹೊಡೆದನು  ನಂತರ ನನ್ನ ಮಗ ರಾಜಕುಮಾರನ ಕೈಯಿಂದ ಬಿಡಿಸಿಕೊಂಡು ಹೋಗುವಾಗ ಸಿದ್ದಪ್ಪನು ಅಡಗಟ್ಟಿದನು ಆಗ ನಾನು ಮತ್ತು ನನ್ನ ಗಂಡ ಇಬ್ಬರು ಬಿಡಿಸಲು ಹೊದಾಗ ಸಿದ್ದಪ್ಪನು ನನ್ನ ಗಂಡನಿಗೆ ಅವಾಚ್ಯವಾಗಿ ಬೈದು ನನ್ನ ಗಂಡನಿಗೆ ನುಕಿದನು ಸದರಿ ಜಗಳ ನೋಡಿ ಸಿದ್ದಪ್ಪನ ಹೆಂಡತಿಯಾದ ಅನಸುಬಾಯಿ ಇವಳು ಓಡಿ ಬಂದು ನನ್ನ ಹಾಂಟ್ಯಾಗೊಳದು ಬಹಳ ಆಗ್ಯಾದ ಈವರಿಗಿ ಜೀವ ಸಹಿತ ಬಿಡಬ್ಯಾಡ್ರಿ ಅಂತ ಜೀವದ ಭಯ ಹಾಕಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: