ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-11-2019
ಹೊಕ್ರಾಣಾ ಪೊಲೀಸ್ ಠಾಣೆ ಯು.ಡಿ.ಆರ್ ನಂ.
04/2019, ಕಲಂ. 174 ಸಿ.ಆರ್.ಪಿ.ಸಿ
:-
ಫಿರ್ಯಾದಿ ಸಂತರಾಮ ತಂದೆ ಗಣೇಶ
ವಾಗ್ಮಾರೆ ವಯ: 59
ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ರಾವಣಕೊಳ, ತಾ: ಜಳಕೊಟ (ಎಮ್.ಎಸ್) ರವರ ಮಗಳಾದ ರೂದ್ರಾ @ ಸುಲೋಚನಾ ವಯ: 28 ವರ್ಷ ಇವಳಿಗೆ 2 ನೇ ಹೆರಿಗೆ ಆದ
ನಂತರ ಸುಮಾರು ಮೂರು ವರ್ಷದಿಂದ ಹೊಟ್ಟೆ ಬೇನು ಇರುತ್ತದೆ, ಹೀಗಿರುವಾಗ ದಿನಾಂಕ 02-11-2019 ರಂದು ರವರು ರೂದ್ರಾ ಇಕೆಯು ಮನೆಯಲ್ಲಿರುವಾಗ
ಹೊಟ್ಟೆ ಬೆನೆ ಎದ್ದಾಗ ಅವಳು ಬೆನೆ ತಾಳಲಾರದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು
ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಿಂದ ಆನಂದ ಚವ್ಹಾಣ ರವರ ಹೊಲದಲ್ಲಿರುವ ಗೋ ಕಟ್ಟಾ ಕೃಷಿ
ಹೊಂಡದ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಅವಳ
ಸಾವಿನಲ್ಲಿ ಯಾರ
ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ದಿನಾಂಕ
03-11-2019 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 03-11-2019 ರಂದು ಫಿರ್ಯಾದಿ ಉಮೇಶ ತಂದೆ ಗೋವಿಂದ ವಾಘಮಾರೆ ವಯ: 38 ವರ್ಷ, ಜಾತಿ: ವಡ್ಡರ, ಸಾ: ಬೇಟಬಾಲಕುಂದಾ ರವರ ತಮ್ಮನಾದ ಅಶೋಕ ವಯ: 24 ವರ್ಷ ಇತನು ಏಕಾಂತದಲ್ಲಿ ಇದ್ದು, ಯಾರೊಂದಿಗೂ ಹೆಚ್ಚಾಗಿ ಮಾತನಾಡದೆ, ಹೆಂಡತಿಯೊಂದಿಗೂ ಹೆಚ್ಚಾಗಿ ಬೆರೆಯದೇ, ದಾಪಂತ್ಯ ಜೀವನದಲ್ಲಿ ಜಿಗುಪ್ಸೆಗೊಂಡು, ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಬಸಲಿಂಗೆ ರವರ ಬಂದಾರಿ ಮೇಲಿನ ನೆರಳೆ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಅವನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಂತಾಕಿ
ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 03-11-2019 ರಂದು ಫಿರ್ಯಾದಿ ಪಾರ್ವತಿ ಗಂಡ
ರಾಚಪ್ಪಾ ಪಾಟೀಲ್ ವಯ:
52 ವರ್ಷ, ಜಾತಿ: ಲಿಂಗಾಯತ, ಸಾ: ನಾಗನಪಲ್ಲಿ ಗ್ರಾಮ, ತಾ: ಔರಾದ(ಬಿ) ರವರ ಗಂಡನಾದ ರಾಚಪ್ಪಾ ಇವರಿಗೆ ಎಸ್.ಬಿ.ಐ ಮತ್ತು ಪಿಕೆಪಿಎಸ್ ಬ್ಯಾಂಕಿನ ಸಾಲ
ಹೆಚ್ಚಾಗಿರುವುದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಬೆಳೆ ಬೆಳೆಯದೆ ಸದರಿ
ನೋವಿನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿ ಸಂಶಯ ಇರುವುದಿಲ್ಲ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 96/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 03-11-2019 ರಂದು ಫಿರ್ಯಾದಿ ಹಣಮಂತ ತಂದೆ ಸಿದ್ರಾಮ ವಜನಮ್ ವಯ: 43 ವರ್ಷ, ಜಾತಿ: ಹೇಳವ, ಸಾ: ಮಲ್ಕಾಪುರ ಗ್ರಾಮ, ತಾ: ಜಿ: ಬೀದರ ರವರು ತನ್ನ ಗೆಳೆಯನಾದ ಸಂಗಪ್ಪಾ ತಂದೆ ಶರಣಪ್ಪಾ ಸಾ: ಮಲ್ಕಾಪುರ ಗ್ರಾಮ ಇವರಿಬ್ಬರು ಫಿರ್ಯಾದಿಯ ಟಿ.ವಿ.ಎಸ್ ಎಕ್ಸ್.ಎಲ್ ದ್ವಿಚಕ್ರ ವಾಹನ ನಂ. ಕೆಎ-38/ಡಬ್ಲು-3916 ನೇದರ ಮೇಲೆ ಬೀದರ ನರಸಿಂಹ ಝರಣಾ ರೋಡದಿಂದ ಮಲ್ಕಾಪುರ ಗ್ರಾಮಕ್ಕೆ ಹೋಗುವಾಗ ಮಲ್ಕಾಪುರ ರಿಂಗ ರೋಡ್ ಹತ್ತಿರ ಬಂದಾಗ ಚಿಕಪೇಟ ಕಡೆಯಿಂದ ಒಂದು ಅಪರಿಚಿತ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಗೆ ಸಾದಾ ಗಾಯಗಳು ಹಾಗೂ ಸಂಗಪ್ಪಾ ಇವರಿಗೆ ಎಡಗಾಲಿನ ಮೊಳಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಆರೋಪಿಯು ಅಪಘಾತ ವೆಸಗಿ ತನ್ನ ಕಾರನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ
ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 143/2019, ಕಲಂ. 143 ಐಪಿಸಿ
ಮತ್ತು 87 ಕೆ.ಪಿ ಕಾಯ್ದೆ :-
ದಿನಾಂಕ 02-11-2019 ರಂದು ವಳಸಂಗ ಗ್ರಾಮದ
ಬಸಪ್ಪಾ ಪಾಟೀಲ್ ರವರ ಕಿರಾಣಾ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ
ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಹುಲಗೇಶ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್
ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ
ಸಿಬ್ಬಂದಿಯವರೊಡನೆ ವಳಸಂಗ ಗ್ರಾಮದ ಬಸಪ್ಪಾ ಪಾಟೀಲ್ ರವರ ಕಿರಾಣಾ ಅಂಗಡಿಯ ಸ್ವಲ್ಪ
ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ಅಂಗಡಿಯ ಪಕ್ಕದಲ್ಲಿ ಕರೆಂಟ ಲೈಟಿನ ಬೆಳಕಿನಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಅಜಯ ತಂದೆ ಶಾಲಿವಾನ ವಯ 23 ವರ್ಷ ಜಾತಿ: ಎಸ್.ಸಿ,
2) ಹರಿನಾಥ ತಂದೆ ನಾಗನಾಥ ಮೇತ್ರೆ ವಯ: 53 ವರ್ಷ, ಜಾತಿ: ಕುರುಬ, 3) ರಾಹೂಲ ತಂದೆ ಪ್ರಭುರಾಜ
ವಾಗ್ಮಾರೆ ವಯ: 26 ವರ್ಷ, ಜಾತಿ: ಎಸ್.ಸಿ, 4) ಉಮಾಕಾಂತ ತಂದೆ ಸಂಗ್ರಾಮ ಕಾಂಬಳೆ ವಯ: 32 ವರ್ಷ,
ಜಾತಿ: ಎಸ್.ಸಿ 4 ಜನ ಸಾ: ವಳಸಂಗ, 5) ಅನೀಲಕುಮಾರ ತಂದೆ ದೇಶಮುಖ ವಯ: 26 ವರ್ಷ, ಜಾತಿ: ಲಿಂಗಾಯತ,
ಸಾ: ಭಾಲ್ಕಿ, 6) ಪ್ರಕಾಶ ತಂದೆ ಮಾರುತಿ ಬಿರಾದಾರ ವಯ: 42 ವರ್ಷ, ಜಾತಿ: ಮರಾಠಾ, ಸಾ: ನಿಟ್ಟೂರ,
7) ಹಣಮಂತ ತಂದೆ ನಾಗನಾಥ ಬೆಲ್ದಾಳೆ ವಯ: 39 ವರ್ಷ, ಜಾತಿ: ಲಿಂಗಾಯತ, 8) ಕಲ್ಲಪ್ಪಾ ತಂದೆ
ಮಲ್ಲಪ್ಪಾ ಮೇತ್ರೆ ವಯ: 31 ವರ್ಷ, ಜಾತಿ: ಕುರುಬ ಹಾಗೂ 9) ಕುಮಾರ ತಂದೆ ಮಾಣಿಕರಾವ ಡಿಗ್ಗೆ ವಯ:
26 ವರ್ಷ, ಜಾತಿ: ಎಸ್.ಸಿ, ಮೂವರು ಸಾ: ಮುರಾಳ ಇವರೆಲ್ಲರೂ ಅಕ್ರಮವಾಗಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು
ಪರೇಲ ಎಂಬ ನಸಿಬಿನ ಜೂಜಾಟಾ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ
ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ಅವರಿಂದ 52 ಇಸ್ಪೀಟ ಎಲೆಗಳು ಹಾಗೂ 20,700/- ರೂ ನಗದು
ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment