ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-11-2019
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 75/2019, ಕಲಂ. 379 ಐಪಿಸಿ :-
ದಿನಾಂಕ 21-10-2019 ರಂದು ಫಿರ್ಯಾದಿ ಅಂಕುಶ ತಂದೆ ಸಂಬಾಜಿ ಕೆ.ದೊಡ್ಡಿ ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮಿರಾಗಂಜ್ ಗ್ರಾಮ ರವರು ತನ್ನ ಬಜಾಜ್ ಪಲ್ಸರ್ ಎನ್.ಎಸ್-200 ಸಿಸಿ ಮೊಟಾರ ಸೈಕಲ್ ನಂ. ಕೆಎ-38/ವಿ-4622 ನೇದ್ದರ ಹ್ಯಾಂಡಲ್ ಲಾಕ್
ಮಾಡದೇ ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೋಗಿ ಮರಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಸದರಿ
ಮೊಟಾರ ಸೈಕಲ ಮೇಲೆ ಎರಡು ಜನ ಕುಳಿತುಕೊಂಡು ಕಳವು ಮಾಡಿಕೊಂಡು ಓಡಿ ಹೋದರು, ಫಿರ್ಯಾದಿಯು ನೋಡಿ
ಅವರಿಗೆ ಹಿಂಬಾಲಿಸಿ ಹೋಗುವಷ್ಟರಲ್ಲಿ ಅವರು ಓಡಿ ಹೋದರು, ಸದರಿಯವರಿಗೆ ಫಿರ್ಯಾದಿಯು ಪುನ: ನೋಡಿದಲ್ಲಿ ಗುರ್ತಿಸುತ್ತಾರೆ, ಸದರಿ ಮೊಟಾರ ಸೈಕಲನ ಚಾಸಿಸ್ ನಂ.
ಎಮ್.ಡಿ.2.ಎ.36.ಎಫ್.ವಾಯ್.0.ಜೆ.ಸಿ.ದಿ.53315, ಇಂಜಿನ್ ನಂ. ಜೆ.ಎಲ್.ವಾಯ್.ಸಿ.ಜೆ.ಡಿ.97829 ಇರುತ್ತದೆ,
ಬಣ್ಣ ಬಿಳಿ (ಮುತ್ತಿನ ಬಣ್ಣ) ಬಣ್ಣ, ಅ.ಕಿ 48,000/- ರೂಪಾಯಿ ಬೆಲೆ ಬಾಳುವುದು ಇರುತ್ತದೆ, ಅಂತ
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-11-2019 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 76/2019, ಕಲಂ. 3, 14(ಎ) ಬಾಲ
ಕಾರ್ಮಿಕ ತಡೆ ಕಾಯ್ದೆ :-
ದಿನಾಂಕ 30-07-2019 ರಂದು ಬೆಳಿಗ್ಗೆ 0800 ಗಂಟೆಯಿಂದ 1000 ಗಂಟೆಯವರೆಗೆ ಫಿರ್ಯಾದಿ ಪ್ರಸನ್ನ ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಅಧಿಕಾರಿಗಳ ಕಚೇರಿ
ಎಸ್ಬಿ ಟಾವರ್ ಹರಳಯ್ಯಾ ಚೌಕ ಬೀದರ ರವರು ಬೀದರ ನಗರಾದ್ಯಂತ ವಿವಿಧ ಇಲಾಖೆಗಳ
ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಪೊಲೀಸ ಇಲಾಖೆ ಸೇರಿದಂತೆ ಗೌರವಾನ್ವಿತ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಇವರ ನೇತೃತ್ವದಲ್ಲಿ ಜರುಗಿದ ಬೀದರ ನಗರದ ಚಿಂದಿ ಆಯುವ ಹಾಗೂ
ಬಿಕ್ಷೆ ಬೇಡುವ ಮತ್ತು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ
ಕಂಡು ಬಂದ ಕು.ಮೊಹ್ಮದ ಮೊಸಿನ ತಂದೆ
ಮೊಹ್ಮದ ಮೌಲಾನಾ ಗ್ರಾಮ ಅಮಲಾಪೂರ ತಾ:ಜಿ: ಬೀದರ ಬಾಲ ಕಾರ್ಮಿಕನನ್ನು
ಕೆಲಸದಿಂದ ಬಿಡುಗಡೆಗೊಳಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಬೀದರ ವಶಕ್ಕೆ ಒಪ್ಪಿಸಿ, ಬಾಲಕರ ಬಾಲಮಂದಿರ ಮೈಲೂರ ಬೀದರ ಇಲ್ಲಿಗೆ ಸೇರಿಸಲಾಯಿತು, ನಂತರ
ಬಾಲಕಾರ್ಮಿಕರ ವಯಸ್ಸಿನ ದೃಢಿಕರಣಕ್ಕಾಗಿ ಸದರಿ ಬಾಲಕರು ವಿದ್ಯಾಭ್ಯಾಸ ಮಾಡಿದ ಶಾಲೆಗಳಿಗೆ ಭೇಟಿ
ನೀಡಿ ಶಾಲಾ ಮುಖ್ಯಸ್ಥರಿಂದ ಪಡೆಯಲಾದ ವಯಸ್ಸಿನ ದೃಢಿಕರಣ ಪ್ರಮಾಣ ಪತ್ರ ಪಡೆದು ಈ ಪತ್ರದೊಂದಿಗೆ
ಲಗತ್ತಿಸಿದೆ, ಸದರಿ ಪ್ರಮಾಣ ಪತ್ರದ ಪ್ರಕಾರ ಬಾಲಕಾರ್ಮಿಕ/ಕಿಶೋರ ಕಾರ್ಮಿಕರ ವಯಸ್ಸಿಗಿಂತ ಕಡಿಮೆ ಇರುವುದು ಕಂಡು
ಬಂದಿರುತ್ತದೆ, ಅದರಂತೆ ಮಾಲಿಕರು ಬಾಲಕಾರ್ಮಿಕ/ಕಿಶೋರಕಾರ್ಮಿಕರ (ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ
-2016, ಸೆಕ್ಷನ್-03 ಎ ರ ಉಲ್ಲಂಘನೆ ಮಾಡಿರುತ್ತಾರೆ, ಸದರಿ ಉಲ್ಲಂಘನೆಯು ಕಾಗ್ನಿಜೇಬಲ್
ಅಫೇನ್ಸ ಆಗಿರುವುದರಿಂದ ಆರೋಒಪಿ ಮೊಹ್ಮದ ಗೌಸೊದ್ದೀನ ತಂದೆ ಮೊಹ್ಮದ ಮೈನೊದ್ದೀನ ಮಾಲಿಕರು ಮೆ|| ನಯಾಬ
ಬಿರಿಯಾನಿ ಹೋಟಲ ನಯಾ ಕಮಾನ ಹತ್ತಿರ ಬೀದರ ರವರ ವಿರುದ್ಧ ದಿನಾಂಕ 13-11-2019 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ
ಸಂ. 104/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 13-11-2019 ರಂದು ಹಳ್ಳಿಖೇಡ[ಬಿ] ಪಟ್ಟಣದ ಐ.ಬಿ ಹಿಂದುಗಡೆ ಸಾರ್ವಜನಿಕ ಖುಲ್ಲಾ
ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ
ಆಡುತ್ತಿದ್ದಾರೆ ಅಂತ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು
ಪಂಚರನ್ನು ಬರಮಾಡಿಕೊಂಡು,
ಠಾಣೆಯ
ಸಿಬ್ಬಂದಿಯವರೊಡನೆ ಬಾತ್ಮಿ ಪ್ರಕಾರ ಹಳ್ಳಿಖೇಡ[ಬಿ] ಪಟ್ಟಣದ ಐ.ಬಿ ಹಿಂದುಗಡೆ ಸಾರ್ವಜನಿಕ ಖುಲ್ಲಾ
ಜಾಗಾದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಐಬಿ ಹಿಂದುಗಡೆ ಖುಲ್ಲಾ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತರಾದ 1) ಈರಪ್ಪಾ ತಂದೆ ನಾಗಪ್ಪಾ ಮೇತ್ರೆ ವಯ: 26 ವರ್ಷ, ಜಾತಿ: ಕುರುಬ, 2) ತುಕರಾಮ ತಂದೆ ಶgÀಣಪ್ಪಾ ಕೂಡಂಬಲ ವಯ: 32 ವರ್ಷ, ಜಾತಿ: ಕುರುಬ, 3) ಮೊಹ್ಮದ ಸಿದ್ದಿಕ ತಂದೆ ಹಯದರಸಾಬ ಡೊಂUÀರಿ ವಯ: 26 ವರ್ಷ, ಜಾತಿ: ಮುಸ್ಲಿಂ, 4) ರಾಮಶೆಟ್ಟಿ ತಂದೆ ಶರಣಪ್ಪಾ ಉಪಾರ ವಯ: 29 ವರ್ಷ, ಜಾತಿ: ಉಪಾರ ಹಾಗೂ 5) ಅಲಂಖಾನ ತಂದೆ ಬಹಾದ್ದುರ ಖಾನ ಪಠಾಣ ವಯ: 26 ವರ್ಷ, ಜಾತಿ:
ಮುಸ್ಲಿಂ, ಎಲ್ಲರೂ ಸಾ: ಹಳ್ಳಿಖೇಡ (ಬಿ) ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ
ಪಡಿಸಿಕೊಂಡು ಸದರಿಯವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 1950/- ರೂ. ಮತ್ತು 52
ಇಸ್ಪಿಟ
ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ
ಪೊಲೀಸ್ ಠಾಣೆ ಅಪರಾಧ ಸಂ. 161/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 13-11-2019 ರಂದು ಹುಮನಾಬಾದ ಪಟ್ಟಣದ ಎಂ.ಎಸ.ಐ.ಎಲ್ ಅಂಗಡಿ ಹತ್ತಿರ ರೋಡಿನ
ಮೇಲೆ ಕುಳಿತು ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹೇಬರ ಎಂಬ ನಸೀಬಿನ ಇಸ್ಪಿಟ
ಜೂಜಾಟವನ್ನು ಆಡುತ್ತಿದ್ದಾರೆ ಅಂತ ಪಂಡಿತ ಎಎಸಐ ಹುಮನಾಬಾದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ
ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು
ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆರೋಪಿತರಾದ
1) ಮಹ್ಮದ ಮೂಸಾ ತಂದೆ ಕರೀಮಸಾಬ
ಮುಲ್ಲಾವಾಲೆ ಸಾ:
ಮಂಗಲಗಿ, 2) ಶಿವರಾಮ ತಂದೆ ಗುಂಡೇರಾವ
ಜಾಧವ ಸಾ: ಶಿವಪುರ ಗಲ್ಲಿ ಹುಮನಾಬಾದ, 3) ಸಿದ್ದಲಿಂಗ ತಂದೆ ತಿಥಯ್ಯಾ
ಮಠಪತಿ, ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಬೆ¼Àಕೇರಾ, ತಾ: ಚಿಟ್ಟಗುಪ್ಪಾ, 4) ಮಡಿವಾಳಯ್ಯಾ ತಂದೆ
ವೀರಭದ್ರಯ್ಯಾ ಸಾ:
ಬೆಳಕೇರಾ
ಮತ್ತು 5) ರಾಮಯ್ಯಾ ತಂದೆ ಶಿವಯ್ಯಾ
ತೆಲಂಗ, ಸಾ: ಕಪನೂರ ಕಲಬುರ್ಗಿ ಇವರೆಲ್ಲರೂ
ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹೇಬರ ಎಂಬ ನಸೀಬಿನ ಇಸ್ಪಿಟ ಜೂಜಾಟವನ್ನು ಆಡುತ್ತಿರುವಾಗ ಅವರ
ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ 1) ನಗದು 2400/- ರೂ. ನಗದು ಹಣ, 2) 52 ಇಸ್ಪೀಟ ಎಲೆಗಳು ಜಪ್ತಿ
ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment