Police Bhavan Kalaburagi

Police Bhavan Kalaburagi

Monday, November 18, 2019

BIDAR DISTRICT DAILY CRIME UPDATE 17-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-11-2019

ಬೀದರ ನೂತನ ಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 27/2019, ಕಲಂ. 174 ಸಿ.ಆರ್.ಪಿ.ಸಿ :-
ಪಿüರ್ಯಾದಿ ಇಂದುಮತಿ ಗಂಡ ಶಿವಶಂಕ್ರಯ್ಯಾ ಸ್ವಾಮಿ : 45 ರ್ಷ, ಸಾ: ಕೆಸ್.ಎಸ್.ಆರ್.ಪಿ ಸತಿ ಗೃಹ ನೌಬಾದ ಬೀದರ ರವರ ಗಂಡನಾದ ಶಿವಶಂಕ್ರಯ್ಯಾ ರವರು ಮುನಿರಾಬಾದ .ಆರ್.ಬಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ದ್ಯ ಹೋಮಗಾರ್ಡ ರವರಿಗೆ ಬೆಂಗಳೂರನಲ್ಲಿ ತರಬೇತಿ ನೀಡಲು ಇನ್ಸ್ಟ್ರಕ್ಟರ್ ಅಂತ ನೇಮಕಗೊಂಡು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು, ಸದ್ಯ ರಜೆಯ ಮೇಲೆ ಬೀದರಗೆ ಬಂದಿದ್ದು, ಹೀಗಿರುವಾಗ ದಿನಾಂಕ 16-11-2019 ರಂದು ಫಿರ್ಯಾದಿಯವರ ಗಂಡ 1900 ಗಂಟೆಯ ಸುಮಾರಿಗೆ ಪಿüರ್ಯಾದಿಯವರ ಗಂಡ ಶಿವಶಂಕ್ರಯ್ಯಾ : 51 ರ್ಷ ರವರು ಕೆಸ್.ಎಸ್.ಆರ್.ಪಿ ಗ್ರೌಂಡಿನಲ್ಲಿ ವಾಕಿಂಗ್ ಮಾಡುತ್ತಿರುವಾಗ ಕುಸಿದು ಬಿದಿದ್ದು ತಕ್ಷಣವೇ ಅವರಿಗೆ ಎಬ್ಬಿಸಿ ವಿಚಾರಿಸಲಾಗಿ ಅವರು ತನಗೆ ಎದೆ ನೋವು ಎಂದು ಹೇಳಿದಾಗ ಕೂಡಲೇ ಅವರಿಗೆ ಆಟೊದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿ ಧ್ಯದಲ್ಲಿ 1930 ಗಂಟೆಯ ಸುಮಾರಿಗೆ ಅವರು ಹ್ರದಯಘಾತದಿಂದ ಮ್ರತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 103/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 16-11-2019 ರಂದು ಕಂದಗೂಳ ಗ್ರಾಮದ ಎಸ್.ಟಿ ಕಾಲೋನಿಯ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ್ ಬಾಹರ್ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಸುಭಾಷ ಎಎಸ್ಐ ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ .ಎಸ್. ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮನ್ನಾಎಖೇಳ್ಳಿ ಬೈಪಾಸ ಮುಖಾಂತರವಾಗಿ ಕಂದಗೂಳ ಗ್ರಾಮಕ್ಕೆ ಹೋಗಿ ಗ್ರಾಮದ ಎಸ್ಟಿ ಓಣಿಯ ಸಮುದಾಯ ಭವನದ ಹತ್ತಿರ ಮರೆಯಾಗಿ ನಿಂತು ನೋಡಲು ಸಮುದಾಯ ಭವನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಜಗನ್ನಾಥ ತಂದೆ ಚೆನ್ನಬಸಪ್ಪಾ ಮೂಲಗೆ ವಯ: 45 ವರ್ಷ, ಜಾತಿ: ಲಿಂಗಾಯತ, 2) ಬಸವರಾಜ ತಂದೆ ಶರಣಪ್ಪಾ ಭಾನೋರ ವಯ: 45 ವರ್ಷ, ಜಾತಿ: ಎಸ್ಟಿ ಗೊಂಡ, 3) ಶ್ರೀಕಾಂತ ತಂದೆ ಶಂಕರ ಚಿಮ್ಮನಚೋಡ ವಯ: 28 ವರ್ಷ, ಜಾತಿ: ಎಸ್ಟಿ ಟೋಕರಿ ಕೋಳಿ, 4) ಎಮ್.ಡಿ ಷರೀಫ ತಂದೆ ಶೇಖ ಫರೀದ ವಯ: 30 ವರ್ಷ, ಜಾತಿ: ಮುಸ್ಲಿಂ ಹಾಗೂ 5) ಸತೀಶ ತಂದೆ ತುಕಾರಾಮ ಬೆಮಳಗಿ ವಯ: 35 ವರ್ಷ, ಜಾತಿ: ಎಸ್ಟಿ ಗೊಂಡ ಎಲ್ಲರೂ ಸಾ: ಕಂದಗೂಳ ಇವರೆಲ್ಲರೂ ಗೋಲಾಕಾರವಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಅಚಿದರ ಬಹರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿ ಅವರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 3230/- ರೂ. ಮತ್ತು ಜೂಜಾಟಕ್ಕೆ ಸಂಬಂಧಿಸಿದ 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: