ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-11-2019
ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ.
09/2019, ಕಲಂ. 174 ಸಿ.ಆರ್.ಪಿ.ಸಿ
:-
ದಿನಾಂಕ 24-11-2019 ರಂದು ಫಿರ್ಯಾದಿ ಬಬೀತಾ ಗಂಡ ನಾರಾಯಣ ಕೋಳಿ ವಯ: 45 ವರ್ಷ, ಜಾತಿ: ಕೋಳಿ, ಸಾ: ಕರಂಜಿ(ಕೆ) ರವರ ಗಂಡನಾದ ನಾರಾಯಣ ತಂದೆ ರಾಮಣ್ಣಾ ಕೋಳಿ ವಯ: 55 ವರ್ಷ ರವರು ವಿ.ಎಸ್.ಎಸ್.ಎನ್. ಕರಂಜಿ(ಬಿ) ನೇದರಲ್ಲಿ ತಮ್ಮ ಹೊಲದ ಮೇಲೆ 25,000/- ರೂಪಾಯಿ ಸಾಲ, ಮನೆಯ ಸಂಕಷ್ಟಕ್ಕಾಗಿ, ಹೊಟ್ಟೆಯ ಉಪಜೀವನಕ್ಕಾಗಿ ಹೊರಗಿನ ಖಾಸಗಿ ಸಾಲ ಅಂದಾಜು 2,00,000/-(ಎರಡು ಲಕ್ಷ) ರೂ. ಸಾಲ ಮಾಡಿದ್ದು, ಸದರಿ ಸಾಲವನ್ನು ತಿರಿಸಲು ಆಗದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕ್ರಿಮಿ ಕಿಟನಾಶಕ ಔಷಧಿಯನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ
ಗ್ರಾಮೀಣ
ಪೊಲೀಸ್
ಠಾಣೆ
ಯು.ಡಿ.ಆರ್ ನಂ. 11/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಲಕ್ಷ್ಮಿಬಾಯಿ ಗಂಡ ಪ್ರಭು ವಯ: 60 ವರ್ಷ, ಜಾತಿ: ಎಸ್.
ಟಿ ಗೊಂಡ, ಸಾ: ಭಾಲ್ಕಿ ರವರ ಮಗಳಾದ ಶಾಮಲಾ ಗಂಡ ಕಾಳಪ್ಪಾ ಇವಳಿಗೆ ಒಂದು ವರ್ಷದಿಂದ ಹೊಟ್ಟೆ
ನೋವು ಇದ್ದು ಖಾಸಗಿ ಚಿಕಿತ್ಸೆ ತೆಗೆದುಕೂಂಡಿದ್ದು ಕಡಿಮಯಾಗದ ಕಾರಣ 24-11-2019 ರಂದು ಹೊಟ್ಟೆ
ನೋವು ತಾಳಲಾರದೆ ಹೋಲದಲ್ಲಿ ಬೆಳಗೆ ಹೋಡೆಯುವ ಔಷದ ಕೂಡಿದಿದ್ದು ಚಿಕಿತ್ಸೆಗಾಗಿ ಬೀದರ ಸರಕಾರಿ
ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ಆಕೆಯ ಸಾವಿನ ಬಗ್ಗೆ ಯಾವುದೇ
ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 93/2019, ಕಲಂ. 279, 304(ಎ) ಐಪಿಸಿ :-
ದಿನಾಂಕ 23-11-2019 ರಂದು ಫಿರ್ಯಾದಿ ರಂಜೀತ ತಂದೆ ವಿಠಲ ಜಾಧವ ಜಾತಿ: ಮರಾಠಾ, ಸಾ: ಚಿತ್ತಕೋಟಾ(ಬಿ) ತಾ: ಬಸವಕಲ್ಯಾಣ ರವರ ಭಾಗಾದಿ ಸುನೀಲ ತಂದೆ ಬಾಲಾಜಿ ಜಾಧವ ವಯ: 22 ವರ್ಷ, ಜಾತಿ: ಮರಾಠಾ, ಸಾ: ಚಿತ್ತಕೋಟಾ, ಸದ್ಯ: ಭೋಸಗಾ, ತಾ: ಬಸವಕಲ್ಯಾಣ ಇವನು ಬೋಸಗಾ-ಜೋಗೆವಾಡಿ ರೋಡಿನ ಮೇಲೆ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-56/ಜೆ-1535 ನೇದ್ದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಅದರ ಮೇಲಿನ ನಿಯಂತ್ರಣ
ಕಳೆದುಕೊಂಡು ರೋಡಿನ ಪಕ್ಕದಲ್ಲಿ ಸ್ಕಿಡ್ ಮಾಡಿ ರೋಡಿನ ಪಕ್ಕ ತಗ್ಗಿನಲ್ಲಿ ಮೋಟಾರ್ ಸೈಕಲ ಸಮೇತ ಬಿದ್ದಿದ್ದರಿಂದ ಮುಖಕ್ಕೆ ಕಲ್ಲು ಬಡಿದು ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 174/2019, ಕಲಂ. 279, 338 ಐಪಿಸಿ
:-
ದಿನಾಂಕ 24-11-2019 ರಂದು ಫಿರ್ಯಾದಿ ಗೋರಖ
ತಂದೆ ಮಾಣಿಕ ಸಂತಪೂರೆ ವಯ: 50 ವರ್ಷ, ಜಾತಿ: ಎಸ.ಸಿ ಹೊಲಿಯಾ, ಸಾ: ಅಮದಾಬಾದ
ರವರು ತನ್ನ ಮಗಳಾದ ಕು.ಮಂಜುಳಾ ತಂದೆ ಗೋರಖ ಸಂತಪೂರೆ ವಯ: 25 ವರ್ಷ ಇವಳ ಜೊತೆಯಲ್ಲಿ ಇಬ್ಬರು
ನೀರು ತರಲು ತಮ್ಮ ಗ್ರಾಮದ ಹಲಬರ್ಗಾ ಅಂಬೇಸಾಂಗವಿ ರೋಡಿನ ಪಕ್ಕದಲ್ಲಿ ಹೊದಾಗ ಹಲಬರ್ಗಾ ಕಡೆಯಿಂದ ಬಜಾಜ್
ಪಲ್ಸರ್ ಮೋಟಾರ ಸೈಕಲ ನಂ. ಕೆಎ-38/ಡಬ್ಲು-4866 ನೇದರ ಸವಾರನಾದ ಆರೋಪಿ ಸಚಿನ ತಂದೆ ಸಂಜುಕುಮಾರ
ಸಾ: ಸೇವಾನಗರ ತಾಂಡಾ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿಯಿಂದ
ಚಲಾಯಿಸಿಕೊಂಡು ಬಂದು ಮಂಜುಳಾ ಇವಳಿಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಮಂಜುಳಾ ಇಕೆಯ ಬಲಗಾಲ
ಮೋಳಕಾಲ ಕೆಳಗೆ ರಕ್ತಗಾಯ ಹಾಗು ಭಾರಿ ಗುಪ್ತಗಾಯ, ಎಡಗಾಲು ಮುರಿದು ಭಾರಿ ಗುಪ್ತಗಾಯ, ಮತ್ತು
ಎಡಗೈ ಮುಂಗೈ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ತನ್ನ ಮಗಳಿಗೆ ಒಂದು ಜೀಪನಲ್ಲಿ
ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು
ಬೀದರ ಭಾಲ್ಕೆ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment