Police Bhavan Kalaburagi

Police Bhavan Kalaburagi

Thursday, November 28, 2019

BIDAR DISTRICT DAILY CRIME UPDATE 28-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-11-2019

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-11-2019 ರಂದು ಫಿರ್ಯಾದಿ ಪ್ರಭು ಧನ್ನೂರ ಸಾ: ಬಸಿರಾಪೂರ ರವರ ಮಗನಾದ ಸಿದ್ದಪ್ಪಾ ವಯ: 22 ವರ್ಷ ಇತನು ನಿರ್ಣಾ ಶಿವಾರದ ಹೋಲ ಸರ್ವೆ ನಂ. 355 ನೇದರಲ್ಲಿ 2 ಎಕರೆ 20 ಗುಂಟೆ ಹೊಲದಲ್ಲಿನ ಜೋಳದ ಬೆಳೆಗೆ ನೀರು ಬಿಡುವಾಗ ರಾತ್ರಿ ಕತ್ತಲಲ್ಲಿ ಹೋಲದಲ್ಲಿದ್ದ ಯಾವುದೋ ಒಂದು ವಿಷ ಜಂತು (ಹಾವು) ಆತನ ಬಲಗಾಲಿನ ಪಾದದ ಮೇಲೆ ಕಚ್ಚಿದ್ದರಿಂದ ಫಿರ್ಯಾದಿಯು ಆತನಿಗೆ ಕೂಡಲೇ ತಮ್ಮ ಗ್ರಾಮದಲ್ಲಿ ಖಾಸಗಿ ಔಷಧ ಕೊಡಿಸಿ ನಂತರ ಸದರಿ ಔಷಧದಿಂದ ಮಗನಿಗೆ ಆರಾಮ ಆಗದೆ ಇರುವದರಿಂದ  ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-11-2019 ರಂದು ಫಿರ್ಯಾದಿಯವರ ಮಗನಾದ ಸಿದ್ದಪ್ಪಾ ಇತನು ಹಾವು ಕಡಿದಿದ್ದರಿಂದ ಮೃತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 107/2019, ಕಲಂ. 279, 304() ಐಪಿಸಿ :-
ದಿನಾಂಕ 27-11-2019 ರಂದು ಫಿರ್ಯಾದಿ ಸನ್ನಿ ತಂದೆ ಅಮೃತ ಉಪ್ಪ ಳಾಂಕರ, ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಅಲಿಯಂಬರ್, ತಾ: ಬೀದರ ರವರ ತಮ್ಮನಾದ ರವಿ ತಂದೆ ಅಮೃತ ಉಪ್ಪಳಾಂಕರ, ವಯ: 28 ವರ್ಷ ಇತನು ಅನೀಲಕುಮಾರ ಇತನ ಅಪ್ಪಿ ಪ್ಯಾಗೋ ಆಟೋ ನಂ. ಕೆಎ38/4887 ನೇದ್ದರಲ್ಲಿ ಚಿಕ್ಕಪೇಟ ಕಡೆಯಿಂದ ಬೀದರಕ್ಕೆ ಬರುತ್ತಿದ್ದು, ಆರೋಪಿ ಅನೀಲಕುಮಾರ ಈತನು ತನ್ನ ಆಟೋವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ವೇಗ ಹತೊಟಿಯಲ್ಲಿ ಇಟ್ಟುಕೊಳ್ಳದೆ ಚಿಕ್ಕಪೇಟ ಹತ್ತಿರ ಭವಾವಿ ಟ್ರಾವೆಲ್ಸ ಗ್ಯಾರೆಜ ಮುಂದೆ ಪಲ್ಟಿ ಮಾಡಿರುತ್ತಾನೆ, ಪರಿಣಾಮ ರವಿ ಈತನ ತಲೆಯ ಹಿಂಭಾಗ ಭಾರಿ ರಕ್ತಗಾಯ ಮತ್ತು ಹೊಟ್ಟೆ ಎಡಭಾಗಕ್ಕೆ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 107/2019, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-11-2019 ರಂದು ಪಿüರ್ಯಾದಿ ಪ್ರಹ್ಲಾದ್ ತಂದೆ ಗುಲಾಬಗಿರಿ ಗೋಸಾಯಿ : 55 ರ್ಷ, ಜಾತಿ: ಗೋಸಾಯಿ, ಸಾ: ಮಂಗಲಗಿ ಗ್ರಾಮ ರವರ ತಂದೆಯಾದ ಗುಲಾಬಗಿರಿ ತಂದೆ ಮಾಣಿಕಗಿರಿ : 80 ರ್ಷ ರವರು ಮಂಗಲಗಿ ವಾಡಿ ಕಡೆಯಿಂದ ಡೆದುಕೊಂಡು ರಾ.ಹೆ ನಂ. 65 ಮಂಗಲಗಿ ಬ್ರಿಜ್ ಹತ್ತಿರ ಮಂಗಲಗಿ ಗ್ರಾಮದ ಕಡೆ ರೋಡ್ ದಾಟುತ್ತಿರುವಾಗ ಹೈದ್ರಾಬಾದ ಕಡೆಯಿಂದ ಒಂದು ಕಾರ್ ನೇದರ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಿüರ್ಯಾದಿಯ ತಂದೆಗೆ ಡಿಕ್ಕಿ ಮಾಡಿ ತನ್ನ ಕಾರ್ ಮೇತ ಹುಮನಾಬಾದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ದರಿ ಡಿಕ್ಕಿಯಿಂದ ಫಿರ್ಯಾದಿಯ ತಂದೆಗೆ ತಲೆಯ ಹಿಂದೆ ಭಾರಿ ರಕ್ತಗಾಯ, ಎಡಗಾಲ ಹಿಮ್ಮಡಿ ಹತ್ತಿರ ಕಾಲು ರಿದಿದ್ದು, ಎಡಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮ್ರತಪಟ್ಟಿರುತ್ತಾರೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ಗರ ಪೊಲೀಸ್ ಠಾಣೆ ಅಪರಾಧ ಸಂ. 166/2019, ಕಲಂ. 379 ಐಪಿಸಿ :-
ದಿನಾಂಕ 24-11-2019 ರಂದು 2230 ಗಂಟೆಗೆ ಪಿüರ್ಯಾದಿ ಶಿವರಾಜ ತಂದೆ ಚಂದ್ರಕಾಂತ ಪಾಟೀಲ : 46 ರ್ಷ, ಜಾತಿ: ಲಿಂಗಾಯತ, ಸಾ: ಕಾರಾಫ ಗುರುನಾಥ ಕೊಳ್ಳೂರ ಜೆಪಿ ಗರ ಬೀದರ ರವರ ಹೀರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ. ಕೆಎ-38/ಜೆ-8577, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್..10..ಜೆ.89.ಸಿ.00477, ಇಂಜಿನ್ ನಂ. ಹೆಚ್..10...89.ಸಿ.01886, ಮಾಡಲ್ ಮಾರ್ಚ್ 2008, ಬಣ್ಣ: ನೀಲಿ, .ಕಿ 25,000/- ರೂ. ನೇದನ್ನು ತನ್ನ ನೆಯ ಮುಂದೆ ನಿಲ್ಲಿಸಿ ನೆಯಲ್ಲಿ ಲಗಿಕೊಂಡು, ರುದಿವಸ ದಿನಾಂಕ 25-11-2019 ರಂದು 0800 ಗಂಟೆಗೆ ಕೆಲಸಕ್ಕೆ ಹೋಗುವ ಮಯದಲ್ಲಿ ತನ್ನ ವಾಹನ ನೋಡಲು ವಾಹನವು ಇರಲಿಲ್ಲ, ನಂತರ ಪಿüರ್ಯಾದಿಯು ತನ್ನ ದರಿ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ, ದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: