Police Bhavan Kalaburagi

Police Bhavan Kalaburagi

Tuesday, December 10, 2019

BIDAR DISTRICT DAILY CRIME UPDATE 10-12-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-12-2019

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 90/2019, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 08-12-2019 ರಂದು ಪಿüರ್ಯಾದಿ ಎಮ್.ಡಿ ಪಿüರೋಜ ಅಹ್ಮದ ತಂದೆ ಅಬ್ದುಲ್ ಹೀದ ಮೋಜನ ವ: 28 ರ್ಷ, ಜಾತಿ: ಮುಸ್ಲಿಂ, ಸಾ: ಸಿಂದೋಲ ರವರು ತನ್ನ ತಾಯಿ ಆಶಾಬೆಗಂ ಗಂಡ ಅಬ್ದುಲ್ ಹೀದ ಮೋಜ : 42 ರ್ಷ ಹಾಗೂ ತಮ್ಮ ಸಂಬಂದಿ ಅಬ್ದುಲ್ ಸುಕುರ ತಂದೆ ಅಬ್ದುಲ್ ಜಲೀಲ ಬ್ಯಾಲಹಳ್ಳೆ ಸಾ: ರಕುಂದಾ ಎಲ್ಲರು ತಮ್ಮೂರ ಎಮ.ಡಿ ಮುಸಾಮಿಯ್ಯ ತಂದೆರೀಫೋದ್ದಿನ ರವರ ಅಟೋ ನಂ. ಕೆ.-38/-2319 ನೇದರಲ್ಲಿ ಅಮಲಾಪುರದಲ್ಲಿ ಸಂಬಂಧಿಕರ ಕ್ಕರೆ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಮುಗಿಸಿಕೊಂಡು ಅಮಲಾಪುರದಿಂದ ತಮ್ಮೂರಿಗೆ ದರಿ ಆಟೋದಲ್ಲಿ ಹೋಗುವಾಗ ಬೀದರ-ಮನ್ನಳಿ ರಸ್ತೆಯ ಮೇಲೆ ಯದಲಾಪುರ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋದಾಗ ಎದುರಿನಿಂದ ಒಂದು ಲಾರಿ ನಂ. ಎನ್.ಎಲ್-02/ಎಲ್-1185 ನೇದ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೆಗ ತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ಅಟೋಕ್ಕೆ ಅಪಘಾತ ಪಡಿಸಿದಾಗ ಅಟೋದಲ್ಲಿದ್ದ ಫಿರ್ಯಾದಿಯ ತಾಯಿ ಆಶಾಬೆಗಂ ರವರು ಕೆಳಗೆ ಬಿದ್ದಾಗ ಸದರಿ ಲಾರಿ ಅವರ ಮೇಲಿಂದ ಹಾದು ಹೋಗಿದ್ದರಿಂದ ಅವರ ಬಲಗಡೆಯ ತಲೆಗೆ, ಮುಖಕ್ಕೆ, ಹೊಟ್ಟೆಗೆ ತ್ತು ಬಲಗಾಲ ತೋಡೆಗೆ ಭಾರಿ Àಕ್ತಗಾಯವಾಗಿ ಮಾಂಸಖಂಡ ಹೋರಗೆ ಬಂದು ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾರೆ ತ್ತು ಆಟೋದಲ್ಲಿದ್ದ ಫಿರ್ಯಾದಿ ಹಾಗೂ ಇತರರಿಗೆ ಗಾಯ ಗೈರೆ ಆಗಿರುವುದಿಲ್ಲ, ಅಪಘಾತ ಪಡಿಸಿದ ನಂತರ ಆರೋಪಿಯು ತನ್ನ ವಾಹನ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 09-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 65/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 09-12-2019 ರಂದು ಕಪಲಾಪೂರ ಗ್ರಾಮದ ಹನುಮಾನ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಮಡಿವಾಳಪ್ಪ ಪಿ.ಎಸ್. ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಪಲಾಪೂರ() ಗ್ರಾಮದ ಹನುಮಾನ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಹಣಮಂತರಾವ ತಂದೆ ಮಾಣಿಕರಾವ ಹಳೆಂಬರೆ, 2) ಆನಂದ ತಂದೆ ಮಾಣಿಕ ನಿಟ್ಟೂರೆ, 3) ನಿರಂಜನ ತಂದೆ ಬಸವರಾಜ ಜಾಡರ, 4) ಶಿವಕುಮಾರ ತಂದೆ ಶ್ಯಾಮರಾವ ಖೆಮಶೆಟ್ಟಿ, 5) ಚಂದ್ರಕಾಂತ ತಂದೆ ಶಿವರಾಜ ಗುಂಜಟ್ಟೆ, 6) ಹಣಮಂತರಾವ ತಂದೆ ಬಸವರಾಜ ಬಿರಾದಾರ ಎಲ್ಲರೂ ಸಾ: ಕಪಲಾಪೂರ() ಗ್ರಾಮ ಇವರೆಲ್ಲರ ಮೇಲೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 12,740/- ರೂ.ಗಳು ಮತ್ತು 104 ಇಸ್ಪಿಟ್ ಎಲೆಗಳು ಅ.ಕಿ 50/- ರೂ. ಇವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 112/2019, ಕಲಂ. 279, 338 ಐಪಿಸಿ :-
ಫಿರ್ಯಾದಿ ಲಕ್ಷ್ಮೀ ಗಂಡ ಸೈದಪ್ಪಾ ಸಾ: ಮೀನಕೇರಾ ರವರ ಮನೆ ಮೀನಕೇರಾ ಗ್ರಾಮದಲ್ಲಿ ಚಿಂಚೊಳ್ಳಿ-ಮನ್ನಾಎಖ್ಳೇಳ್ಳಿ ರಸ್ತೆಗೆ ಸಮೀಪವಾಗಿ ಇದ್ದು ಹೀಗಿರುವಾಗ ದಿನಾಂಕ 09-12-2019 ರಂದು ಫಿರ್ಯಾದಿಯವರ ಮಗಳಾದ ಸಿಂಚನಾ ಇವಳಿಗೆ ಮನೆಯಿಂದ ಅಂಗಡಿಗೆ ಸಾಮಾನು ತರಲು ಕಳುಹಿಸಿದ್ದು ಅವಳು ತಮ್ಮೂರ ರಾಜು ರಂಜೋಳ ಇವರ ಹೋಟಲ ಹತ್ತೀರ ರಸ್ತೆ ದಾಟುವಾಗ ಚಿಂಚೊಳಿಯಿಂದ ಮನ್ನಾಎಖೇಳ್ಳಿ ಕಡೆಗೆ ಹೊಗುವ ಮೋಟಾರ ಸೈಕಲ್ ನಂ. ಕೆಎ-32/.ಯು-5217 ನೇದರ ಚಾಲಕನಾದ ಆರೋಪಿಯು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ನಿಶ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಸಿಂಚನಾ ಇವಳಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಸಿಂಚನಾ ಇವಳ ಎಡಗಾಲು ಮೊಳಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯ ಮತ್ತು ನಡು ತಲೆಯ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 208/2019, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಉಮೇಶ ತಂದೆ ನಾಗಶೆಟ್ಟಿ ಸಂಗಮೆ, ಸಾ: ಗೋಪಾಳಗಲ್ಲಿ ಭಾಲ್ಕಿ ರವರ ಹೆಂಡತಿ ಪ್ರೀಯಾ ವ: 25 ರ್ಷ ಇವಳು ದಿನಾಂಕ 11-11-2019 ರಂದು 1000 ಗಂಟೆಯಿಂದ 1300 ಗಂಟೆಯ ಧ್ಯದ ಅವಧಿಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 210/2019, ಕಲಂ. 279, 304() ಐಪಿಸಿ :-
ದಿನಾಂಕ 09-12-2019 ರಂದು ಫಿರ್ಯಾದಿ ಚಂದ್ರಕಾಂತ ತಂದೆ ಬಾಲಾಜಿರಾವ ಬಾಚಿಪಾಡೆ ಸಾ: ಕೊಟಗ್ಯಾಳ ವಾಡಿ, ತಾ: ಭಾಲ್ಕಿ ರವರು ತಮ್ಮೂರ ಲಹುಕುಮಾರ ತಂದೆ ವೆಂಕಟರಾವ ಬಿರಾದಾರ ರವರ ಜೊತೆಯಲ್ಲಿ ಭಾಲ್ಕಿ ಭಾತಂಬ್ರಾ ರೋಡ ಮುಖಾಂತರ ಮೋಟಾರ ಸೈಕಲ ಮೇಲೆ ಭಾಲ್ಕಿ ಕಡೆಗೆ ಬರುವಾಗ ಅವರ ಮುಂದೆ ಮುಂದೆ ಮೋಟಾರ ಸೈಕಲ ನಂ ಎಂ.ಹೆಚ್-03/ಹೆಚ್.ಡಬ್ಲ್ಯೂ-4163 ನೇದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಭಾಲ್ಕಿ ಬಸ್ಸ್ ಡೀಪೊ ಹತ್ತಿರ ರೋಡಿನ ಬದಿಯಲ್ಲಿರುವ ಕರಿ ಕಲ್ಲಿಗೆ ಡಿಕ್ಕಿ ಹೋಡೆದು ಅಲ್ಲೆ ಇರುವ ಗೋಡೆಗೆ ಡಿಕ್ಕಿ ಮಾಡಿ ಭಾರಿ ಗಾಯಗೊಂಡು ಬಿದ್ದಾಗ ಫಿರ್ಯಾದಿಯು ಸಮೀಪ ಹೋಗಿ ನೋಡಲು ಅವನು ಹಲಗರಾ ಗ್ರಾಮದ ಸಂಬಂಧಿಕ ಕ್ರೀಷ್ಣಾ ತಂದೆ ಸೂರ್ಯಕಾಂತ ರೋಳೆ ವಯ: 21 ವರ್ಷ ಇವನೆ ಇರುವದರಿಂದ ಅವನಿಗೆ ಪರಿಶೀಲಿಸಿ ನೋಡಲು ಅವನ ಹಣೆಗೆ, ಎರಡು ಕಣ್ಣುಗಳಿಗೆ ಭಾರಿ ಗಾಯವಾಗಿದ್ದು ಮತ್ತು ಬಲಗೈ ಮುಂಗೈ ಹತ್ತಿರ ಭಾರಿ ಗಾಯವಾಗಿ ಕೈ ಮುರಿದಿರುವದರಿಂದ ಅಂಬುಲೇನ್ಸಗೆ ಕರೆ ಮಾಡಿ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈದ್ಯರು ತಪಾಷಣೆ ಮಾಡಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 154/2019, ಕಲಂ. 498(ಎ), 504, 506 ಐಪಿಸಿ ಜೊತೆ 149 ಐಪಿಸಿ ಮತ್ತು 3, 4 ಡಿ.ಪಿ ಕಾಯ್ದೆ :-
ಫಿರ್ಯಾದಿ ಅನೀತಾ ಗಂಡ ಶಿವಾಜಿ ಬಿ ಬಾನೋತ ಸಾ: ತಿಮ್ಮಾನಗರ ಥಾಂಡಾ, ಮಂಡಲ್: ಪಿಟ್ಲಂ, ತಾ: ಭಾಸವಾಡಾ, ಜಿ: ಕಾಮಾರೆಡ್ಡಿ, ಸದ್ಯ: ರಾಮಗೊಂಡಮ್ ಥರಮಲ್ ಪಾವರ ಸ್ಟೆಶನ್ (ಎನ್.ಟಿ.ಪಿ.ಸಿ.) ಪೋಸ್ಟ ಜ್ಯೋತಿ ನಗರ, ತಾ: ಪೆದ್ದಾಪಲ್ಲಿ, ಜಿ: ಕರೀಮನಗರ (ತೆಲಂಗಾಣಾ), ಸದ್ಯ: ಬೀರಿ(ಬಿ) ಥಾಂಡಾ, ತಾ: ಭಾಲ್ಕಿ, ಜಿ: ಬೀದರ ರವರ ಮದುವೆ ಶಿವಾಜಿ ಬಿ ಬಾನೋತ ತಂದೆ ಬನ್ಸಿಲಾಲ ಬಾನೊತ ಸಾ: ತಿಮ್ಮಾನಗರ ಥಾಂಡಾ ಇವನೊಂದಿಗೆ ದಿನಾಂಕ 19-06-2013 ರಂದು ಲಂಬಾಣಿ ಸಮಾಜದ ವಿಧಿವಿಧಾನದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯ ನಂತರ ಫಿರ್ಯಾದಿಯು ತನ್ನ ಗಂಡನೊಂದಿಗೆ ವಾಸವಾಗಿದ್ದು, ಸುಮಾರು ಒಂದು ವರ್ಷದ ನಂತರ ಫಿರ್ಯಾದಿಯು ಗರ್ಭಿಣಿಯಾದಾಗ ಎಬೊರ್ಷನ್ ಮಾಡಿಕೋ ಅಂತ ಗಂಡ ಶಿವಾಜಿ, ಮಾವ ಬನ್ಸಿಲಾಲ, ಅತ್ತೆ ಚವಳಾಬಾಯಿ ಇವರು ಒತ್ತಾಯಿಸಿದ್ದು ಅದಕ್ಕೆ ಫಿರ್ಯಾದಿಯು ನಿರಾಕರಿಸಿದ್ದರಿಂದ ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಪ್ರಾರಂಭಿಸಿದ್ದು, ಆರೋಪಿತರಾದ ಗಂಡ ಶಿವಾಜಿ, ಮಾವ, ಅತ್ತೆ, ಮೈದುನ ರಮೇಶ, ಸುದೇಶ ಮತ್ತು ನೇಗೆಣಿ ಮಾರುಣಿ ಇವರೆಲ್ಲರು ಕೂಡಿಕೊಂಡು ಎಬೊರ್ಷನ ಮಾಡಿಕೋ ಇಲ್ಲವಾದರೆ ನಿನ್ನ ತಂದೆಯವರಿಂದ ಹಣ ತೆಗೆದುಕೊಂಡು ಬಾ ಇಲ್ಲವಾದರೆ ನೀನು ನಮ್ಮ ಮನೆಯಲ್ಲಿ ಇರಬೇಡ ಹೊರಟು ಹೊಗು, ನಾವು ಬೇರೆ ಮದುವೆ ಮಾಡಿತ್ತೇವೆಂದು ದಿನಾ ರಾತ್ರಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲಾರಂಭಿಸಿದಾಗ ಫಿರ್ಯಾದಿಯು ಸದರಿ ವಿಷಯ ತಮ್ಮ ತಂದೆ, ತಾಯಿಯವರಿಗೆ ತಿಳಿಸಿದಾಗ ಅವರು ಇತರೆ ಜನರೊಂದಿಗೆ ಕ್ವಾಟರ್ಸಗೆ ಬಂದು ತಿಳಿ ಹೇಳಿ ಸರಿಯಾಗಿ ಇರಲು ತಿಳಿಸಿರುತ್ತಾರೆ ಮತ್ತು ಯಾವುದೆ ರೀತಿಯ ಹಿಂಸೆ ಕೊಡಬೇಡ ಎಂದು ತಿಳಿ ಹೇಳಿರುತ್ತಾರೆ, ನಂತರ ಫಿರ್ಯಾದಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವಳ ಹೆಸರು ಅನನ್ಯಾ ಇರುತ್ತದೆ, ಫಿರ್ಯಾದಿಗೆ ಹೆಣ್ಣು ಮಗು ಹುಟ್ಟಿದಾಗಿನಿಂದ ಸದರಿ ಆರೋಪಿತರು ತಿರ್ವವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲಾರಂಬಿಸಿರುತ್ತಾರೆ, ಸದರಿ ವಿಷಯವನ್ನು ತಂದೆ, ತಾಯಿಗೆ ತಿಳಿಸಿದ್ದು, ಅವರು ದಿನಾಂಕ 15-11-2019 ರಂದು ಬಂದು ಪುನಃ ತಿಳಿ ಹೇಳಿದ್ದು, ನಂತರ ಫಿರ್ಯಾದಿ ಹಾಗೂ ಹೆಣ್ಣು ಮಗಳಿಗೆ ಮನೆಯಿಂದ ಹೊರ ಹಾಕಿ ಮರಳಿ ಮನೆಗೆ ಬಂದರೆ ಕೊಲೆ ಮಾಡಿ ಬಿಡುತ್ತೇನೆ ಎಂದು ಜಿವದ ಬೆದರಿಕೆ ಹಾಕಿರುತ್ತಾರೆ, ಆಗ ಫಿರ್ಯಾದಿಯು ತವರು ಮನೆಗೆ ಬಂದು ವಾಸವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: