ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-12-2019
ಬಸವಕಲ್ಯಾಣ
ಗ್ರಾಮೀಣ ಪೊಲೀಸ್ ಯು.ಡಿ.ಆರ್ ನಂ. 18/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 29-11-2019 ರಂದು
ಫಿರ್ಯಾದಿ ತಾನಾಜಿ
ತಂದೆ ಸಂಭಾಜಿ ಜಾಧವ ವಯ: 56 ವರ್ಷ, ಸಾ: ರಾಮತೀರ್ಥ(ಕೆ) ರವರ ತಾಯಿಯವರಾದ ಸೊಜರಾಬಾಯಿ ಗಂಡ ಸಂಬಾಜಿ ಜಾಧವ ವಯ: 76 ವರ್ಷ, ಸಾ: ರಾಮತೀರ್ಥ(ಕೆ) ರವರು ಚಳಿಗಾಲ ಇದ್ದರಿಂದ ಮನೆಯಲ್ಲಿದ್ದ ಇದ್ದಿಲಿಗೆ ಬೆಂಕಿ ಹಚ್ಚಿ ಕಾಸುಕೊಳ್ಳುತ್ತಿದ್ದಾಗ ಆಕಸ್ಮೀಕವಾಗಿ ಬೆಂಕಿ ಅವರ ಸಿರಿಗೆ ಹತ್ತಿ ಮೈಗೆ ಬೆಂಕಿ ಹತ್ತಿರುತ್ತದೆ ಆಗ ಬೆಂಕಿಯನ್ನು ಆರಿಸಿದ್ದು, ಸದರಿ ಬೆಂಕಿಯಿಂದ ಅವರ ಸಂಪೂರ್ಣ ದೇಹ ಸುಟ್ಟು ಹೋಗಿದ್ದರಿಂದ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಉಮರ್ಗಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ನೀಡಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಲಾತೂರಿನ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫಿರ್ಯಾದಿಯವರ ತಾಯಿ ದಿನಾಂಕ 01-12-2019 ರಂದು ಲಾತೂರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ದೂರು ಸಂಶಯ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 114/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ದಿನಾಂಕ
16-12-2019 ರಂದು
ಫಿರ್ಯಾದಿ ಇಪ್ತಾಕರ ಅಹ್ಮದ್ ತಂದೆ ಮುಕ್ತಾರಮಿಯ್ಯಾ ವಯ: 37 ವರ್ಷ, ಜಾತಿ: ಮುಸ್ಲಿಂ, ಸಾ: ಅಮಲಾಪೂರ, ಬೀದರ
ರವರು ಅಡುಗೆ ಕೆಲಸ ಕುರಿತು ಬೀದರಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಚಿಟ್ಟಾ ಕ್ರಾಸ್ ಕಡೆಯಿಂದ ಅಮಲಾಪೂರ
ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿರುವಾಗ ನಿಸರ್ಗ ಡೇವಲಪರ್ಸ್ ಹತ್ತಿರ ಬಂದಾಗ ಎದುರಿನಿಂದ ಅಂದರೆ
ಅಮಲಾಪೂರ ಗ್ರಾಮದ ಕಡೆಯಿಂದ ಆಟೋ ನಂ. ಕೆಎ-38/5298 ನೇದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ
ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ಆಟೋ ನಿಲ್ಲಿಸಿದ ಹಾಗೇ ಮಾಡಿ ಆಟೋ ಸಮೇತ
ಚಿಟ್ಟಾ ಕ್ರಾಸ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ಬಲಗಾಲಿನ ಮೀನಖಂಡದ
ಎಲುಬಿಗೆ ಗುಪ್ತಗಾಯ, ಬಲಗಾಲಿನ ಹಿಮ್ಮಡಿಗೆ ಭಾರಿ ಗುಪ್ತಗಾಯವಾಗಿರುತ್ತದೆ, ಆಗ
ಅಲ್ಲಿಂದಲೆ ಹೋಗುತ್ತಿದ್ದ ಎಂಡಿ ಶರೀಫ್ ತಂದೆ ಎಂಡಿ ಕರೀಮ್ ಸಾ: ಅಮಲಾಪೂರ ರವರು ಫಿರ್ಯಾದಿಗೆ ಆದ
ಗಾಯಗಳನ್ನು ನೋಡಿ ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು
ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ
ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 158/2019, ಕಲಂ. 279, 337, 338 ಐಪಿಸಿ :-
ಫಿರ್ಯಾದಿ ಪಾಂಡುರಂಗ
ಭಾನುದಾಸ ಸಿಂಧೆ ವಯ: 49
ವರ್ಷ,
ಜಾತಿ: ಎಸ.ಸಿ ಮಾಂಗ, ಸಾ: ಅಟೊಲಾ, ತಾ: ಚಾಕೂರ, ಜಿ: ಲಾತೂರ ರವರು ಬಸ ನಂ. ಎಮ.ಹೆಚ-20/ಬಿ.ಎಲ-3607
ನೇದರ
ಮೇಲೆ ಚಾಲಕನಾಗಿದ್ದು ಮತ್ತು ಅದೆ ಬಸ್ಸ ಮೇಲೆ ಬಂಡೆವಾರ ತಂದೆ ಜಯರಾಜ ಭೊಜರಾಜ ವಯ: 40
ವರ್ಷ,
ಜಾತಿ: ಎಸ.ಸಿ ಮಾಂಗ, ರವರು ನಿರ್ವಾಹಕ ಕೆಲಸ ಮಾಡಿಕೊಂಡಿರುತ್ತಾರೆ, ಹೀಗಿರುವಾಗ ದಿನಾಂಕ 16-12-2019
ರಂದು
0600 ಗಂಟೆಗೆ ಯಥಾ ಪ್ರಕಾರವಾಗಿ ಫಿರ್ಯಾದಿಯು ತನ್ನ ಬಸ ಹೈದ್ರಾಬಾದ ಬಸ ನಿಲ್ದಾಣದಿಂದ ಭಾಲ್ಕಿ, ಭಾತಂಬ್ರಾ
ಮಾರ್ಗವಾಗಿ ಲಾತೂರ ಕಡೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಸಿದ್ದಾಪೂರವಾಡಿ ಕ್ರಾಸ ಹತ್ತಿರ ಎದುರುಗಡೆಯಿಂದ
ಅಂದರೆ ಭಾತಂಬ್ರಾ ಕಡೆಯಿಂದ ಟ್ರ್ಯಾಕ್ಟರ ನಂ. ಕೆಎ-39/ಟಿ-4408
ನೇದ್ದರ
ಚಾಲಕನಾದ ಆರೋಪಿ ಚಂದ್ರಕಾಂತ ತಂದೆ ಅಡೇಪ್ಪಾ ಗ್ರಾಮ ಸಿದ್ದಾರ್ಥ ನಗರ ಭಾಲ್ಕಿ ಇತನು ತನ್ನ ವಾಹನವನ್ನು
ಅತಿವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿ ಫಿರ್ಯಾದಿಯವರ
ಬಸ್ಸಿಗೆ ಡಿಕ್ಕಿ ಮಾಡಿರುತ್ತಾನೆ ಮತ್ತು ಭಾತಂಬ್ರಾ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ ನಂ.
ಕೆಎ-39/ಎಲ್-5307 ನೇದಕ್ಕೂ ಸಹ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಯವರ
ಬಸ ಬಲಭಾಗದ ಹಿಂಭಾಗ ಜಖಂಗೊಂಡಿರುತ್ತದೆ ಮತ್ತು ಮೋಟಾರ ಸೈಕಲ ಸಹ ರೋಡಿನ ಪಕ್ಕದಲ್ಲಿ ಬಿದ್ದು ಜಖಂಗೊಂಡಿರುತ್ತದೆ
ಹಾಗೂ ಸದರಿ ಮೋಟಾರ ಸೈಕಲ ಹಿಂಬದಿ ಕುಳಿತ ಸಂಜೀವಕುಮಾರ ಇವರಿಗೆ ಸೊಂಟದ ಹತ್ತಿರ ಭಾರಿ ಗುಪ್ತಗಾಯ,
ತಲೆಯಲ್ಲಿ ರಕ್ತಗಾಯಗಳಾಗಿದ್ದು ಇರುತ್ತದೆ, ಮೋಟಾರ ಸೈಕಲ ಚಾಲಕ ಶರಣಪ್ಪಾ ಇವರಿಗೆ ಬಲಮೊಳಕೈಗೆ ತರಚಿದ
ಗಾಯವಾಗಿರುತ್ತದೆ, ನಂತರ ಗಾಯಗೊಂಡ ಜನರಿಗೆ ಅಲ್ಲೆ ಮೋಟಾರ ಸೈಕಲ ಮೇಲೆ ಬಂದ ಜನರು ಮೋಟಾರ ಸೈಕಲ ಮೇಲೆ
ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ.
91/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 16-12-2019
ರಂದು ಹಾರಕೂಡ ಗ್ರಾಮದಲ್ಲಿನ ಬಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ
ಬರೆದುಕೊಳ್ಳುತ್ತಿದ್ದಾನೆ ವಾಸೀಂ ಪಟೇಲ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ
ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ
ಸಿಬ್ಬಂದಿಯವರೊಡನೆ ಹಾರಕೂಡ ಗ್ರಾಮದ ಸರಕಾರಿ ಆಸ್ಪತ್ರೆ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ
ಆರೋಪಿ ರಾಮಸ್ವಾಮಿ ತಂದೆ ನಾಗಪ್ಪ ಲಸ್ಕರ ವಯ: 29 ವರ್ಷ ಸಾ: ಹಾರಕೂಡ ಇತನು ಸಿದ್ರಾಮ
ಗುದಗೆರವರ ಹಾಲಿನ ಡೈರಿಯ ಮುಂದೆ ರೋಡಿನ ಮೇಲೆ ಸಾರ್ವಜನೀಕ ಸ್ಥಳದಲ್ಲಿ ನಿಂತುಕೊಂಡು ಮಟಕಾ ಆಡಿರಿ
01/- ರೂಪಾಯಿಗೆ 90/- ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು
ಬರೆದುಕೊಳ್ಳುತ್ತಿದ್ದನು, ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ
ಮಾಡಿ ಹಿಡಿದು ಅವನಿಂದ 2 ಮಟಕಾ ಚೀಟಿಗಳು, ನಗದು ಹಣ 2860/- ರೂಪಾಯಿಗಳು ಮತ್ತು ಒಂದು ಬಾಲ
ಪೆನ್ನ ಇವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment