Police Bhavan Kalaburagi

Police Bhavan Kalaburagi

Thursday, January 2, 2020

BIDAR DISTRICT DAILY CRIME UPDATE 02-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-01-2020

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 279, 304() ಐಪಿಸಿ :-
ದಿನಾಂಕ 01-01-2020 ರಂದು ಫಿರ್ಯಾದಿ ಪಾಂಡುರಂಗ ತಂದೆ ಗಣಪತಿ ಸೊನಕಾಂಬಳೆ ವಯ: 50 ವರ್ಷ, ಜಾತಿ: ಎಸ್. ಸಿ ಹೊಲಿಯಾ, ಸಾ: ಮೊರಖಂಡಿ ರವರ ಅಳಿಯ ಅಕ್ಷಯ ಗಾಯಕವಾಡ ಇವರು ತಮ್ಮೂರ ಮೋರಖಂಡಿ ಶಿವಾರದಲ್ಲಿರುವ ಸುಭಾಷ ಸೆÆನಕಾಂಬಳೆ ಇವರ ಕಲ್ಲಿನ ಖಣಿಯಿಂದ ಟ್ರ್ಯಾಕ್ಟರ್ನಲ್ಲಿ ಕೆಂಪ್ಪು ಕಲ್ಲು ತುಂಬಿಕೊಂಡು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬರುವಾಗ ಒಮ್ಮೇಲೆ ಟ್ರ್ಯಾಕ್ಟರ್ ಇಂಜಿನ ಮೇಲೆ ಎದ್ದು ಇಂಜಿನ ಟ್ರ್ಯಾಲಿ ನಂ. ಕೆಎ-56/ಟಿ-0459 ನೇದಕ್ಕೆ ತಾಗಿ ಅಕ್ಷಯ ಗಾಯಕವಾಡ ರವರು ಇಂಜಿನದಲ್ಲಿ ಸಿಲುಕಿಕೊಂಡು ಮುಖ ಜಜ್ಜಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 143, 147, 148, 323, 324, 307, 504, 506 ಜೊತೆ 149 ಐಪಿಸಿ ಮತ್ತು 3(1) (ಆರ್) (ಎಸ್), 3(2) (5), 3(2) (5ಎ) ಎಸ್.ಸಿ/ಎಸ್.ಟಿ ಕಾಯ್ದೆ 1989 :-
ದಿನಾಂಕ 31-12-2019 ಫಿರ್ಯಾದಿ ರಾಮ ತಂದೆ ಲಕ್ಷ್ಮಣ ಹಂದಿಕೇರೆ ವಯ: 47 ವರ್ಷ, ಜಾತಿ: ಎಸ್.ಸಿ (ಹೋಲಿಯಾ), ಸಾ: ಸಿಕಿಂದ್ರಬಾದ ವಾಡಿ ರವರು ತಮ್ಮ ಮನೆಯ ಹತ್ತಿರ ಇರುವ ಮರಗೆಮ್ಮಾ ಗುಡಿಯ ಸಮೀಪ ಹೊಸದಾಗಿ ದ್ವಿಚಕ್ರ ವಾಹನ ರಿಪೇರಿ ಅಂಗಡಿಯ ಪೂಜಾ ಕಾರ್ಯಕ್ರಮ ಇಟ್ಟಿಕೊಂಡಿದ್ದರಿಂದ ತಮ್ಮೂರ ನಾಗಪ್ಪಾ, ವಿಠಲ ಗೌತಮ ಹಾಗೂ ಅಣ್ಣನ ಮಗನಾದ ಝರೆಪ್ಪಾ ತಂದೆ ಭೀಮಣ್ಣಾ ಹಾಗೂ ಇತರರೂ ಹಾಜರಿದ್ದರು ಆ ಸಮಯಕ್ಕೆ ತಮ್ಮೂರ ಬಸವರಾಜ ತಂದೆ ಚಂದ್ರಪ್ಪಾ, ನಾಗಪ್ಪಾ ತಂದೆ ಬಾಬುರಾವ ಪರೀಟ ರವರು ಮೋಟಾರ ಸೈಕಲ್ ತೆಗೆದುಕೊಂಡು ಪೂಜಾ ಮಾಡುವ ಸ್ಥಳಕ್ಕೆ ಬಂದು ಫಿರ್ಯಾದಿಯ ಮಗನಾದ ಸುದೀಪ ಇತನಿಗೆ ನಿನಗೆ ಅನ್ನ ಹೆಚ್ಚಾಗಿದೆ, ಹಣ ಹೆಚ್ಚಾಗಿವೆ, ನಿಮಗೆ ಹೊಡೆಯಬೇಕಾಗುತ್ತದೆ ನೀವು ಬಹಳ ಹುಷಾರಕಿ ಮಾಡುತ್ತಿದ್ದರಿ ಅಂತ ಜಾತಿ ನಿಂದನೆ ಮಾಡಿ ಬೈದಾಗ ಸುದೀಪ ಇತನು ನಮ್ಮ ಜಾಗೆಯಲ್ಲಿ ನಾವು ಮಾಡುತ್ತಿದ್ದೆವೆ ನಮಗ್ಯಾಕೆ ಹೀಗೆ ಅನ್ನುತ್ತಿದ್ದರಿ ಅಂತ ಕೇಳಲು ಅಲ್ಲೆ ಇದ್ದ ಅಣ್ಣನ ಮಗನಾದ ಝರೆಪ್ಪಾ ತಂದೆ ಭೀಮಣ್ಣಾ ಇತನಿಗೆ ಬಸವರಾಜ ಇವನು ತನ್ನ ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ ಆಗ ಝರೆಪ್ಪಾ ಇತನು ಒಮ್ಮೆಲೆ ಸಿ.ಸಿ ರೋಡಿನ ಮೇಲೆ ಬೀದ್ದಿರುತ್ತಾನೆ ಇದರಿಂದ ಅವನ ತಲೆಗೆ ಭಾರಿ ರಕ್ತಗಾಯವಾಗಿ ಬೆಹೋಶ ಆಗಿರುತ್ತಾನೆ, ಆಗ ಸುದೀಪ ಇತನು ಹೋಗಿ ನೋಡುತ್ತಿರುವಾಗ ಬಸವರಾಜ ಇತನು ಎ ಹೋಲಿಯಾ ನಿನಗೆ ಖತಂ ಮಾಡುತ್ತೆನೆ ಅಂತ ಕೊಲೆ ಮಾಡುವ ಉದ್ದೇಶದಿಂದ ಆತನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ, ಆಗ ಫಿರ್ಯಾದಿಯು ಯಾಕರೋ ಅವರಿಗೆ ಹೊಡಿತಾ ಇದ್ದರಿ ಅಂತ ಕೇಳಲು ಹೋದಾಗ ನಾಗಪ್ಪಾ ಇತನು ಒಂದು ಹಿಡಿ ಗಾತ್ರದ ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, ಆಗ ಆರೋಪಿತರಾದ 1) ಬಸವರಾಜ ತಂದೆ ಚಂದ್ರಪ್ಪಾ, 2) ನಾಗಪ್ಪಾ ತಂದೆ ಬಾಬುರಾವ ಪರೀಟ ರವರು ಫಿರ್ಯಾದಿಯವರ ಜೊತೆ ಜಗಳ ಮಾಡುವುದನ್ನು ನೋಡಿ ಆರೋಪಿತರಾದ 3) ಅವಿನಾಶ ರೆಡ್ಡಿ, 4) ಉಲ್ಲಾಸ ರೆಡ್ಡಿ ಹಾಗೂ 5) ಬಾಬುರಾವ ರವರುಗಳು ಬಂದು ಎಕೆ ಜಗಳ ಮಾಡತ್ತಾ ಇದ್ದಿರಿ ನಿಮ್ಮದು ಹೆಚ್ಚಾಗಿದೆ ಇಂದು ನಿಮಗೆ ಖತಂ ಮಾಡುತ್ತೆವೆ ಅಂತ ಅಂದರೆ ಅವರ ಪೈಕಿ ಅವಿನಾಶ ರೆಡ್ಡಿ ಇವನು ಒಂದು ಬಡಿಗೆಯಿಂದ ಫಿರ್ಯಾದಿಯವರ ಮಗ ಕಪೀಲ ಇತನ ತಲೆಯ ಮೇಲೆ ಮತ್ತು ಬಾಯಿ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಅಂಗಡಿಯ ಪೂಜಾ ಮಾಡುವ ಸಲುವಾಗಿ ಖಟಕ ಚಿಂಚೋಳಿ ಗ್ರಾಮದ ಅನೀಲ ಇವರ ಸೌಂಡ್ ಬಾಕ್ಸ್ ತಂದು ಹಚ್ಚಿದ್ದು ಅದಕ್ಕೆ ಉಲ್ಲಾಸ ರೆಡ್ಡಿ ಇತನು ಸೌಂಡ್ ಬಾಕ್ಸ್ ಹಚ್ಚಿ ಕುಣಿತಿರಿ ಬಂದ ಮಾಡ್ತಿರಿಲ್ಲಾ ಅಂತ  ಅಂದು ಕಪೀಲ ಇತನಿಗೆ ತನ್ನ ಕೈ ಮುಷ್ಟಿ ಮಾಡಿ ಹೊಟ್ಟೆಯ ಮೇಲೆ ಮುಖದ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ, ಬಾಬುರಾವ ಇವನು ಸಹ ತನ್ನ ಮಕ್ಕಳ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನೆಲಕ್ಕೆ ಬಿದ್ದ ಸುದೀಪ ಇತನ ಹೊಟ್ಟೆಯ ಮೇಲೆ ತನ್ನ ಕಾಲಿನಿಂದ ಒದ್ದಿರುತ್ತಾನೆ, ಜಗಳ ಮಾಡುವುದನ್ನು ನೋಡಿ ಭಾವನಾದ ನಾಗಪ್ಪಾ ತಂದೆ ತುಕ್ಕಪ್ಪಾ ಮೇತ್ರೆ, ವಿಠಲ ತಂದೆ ಮಾಣಿಕ ಮಾಡಗೂಳಕರ, ರಸಿಕಾ ಗಂಡ ರಾಮ ಹಂದಿಕೇರೆ ಎಲ್ಲರೂ ಸಾ: ಸಿಕಿಂದ್ರಬಾದ ವಾಡಿ ರವರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ, ಜಗಳದಲ್ಲಿ ಗಾಯಳುಗಳಾದ ಎಲ್ಲರಿಗೂ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-01-2020 ರಂದು ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 02/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 01-01-2020 ರಂದು ಭಾಲ್ಕಿಯ ಪಾತ್ರೆ ಕ್ರಾಸ್ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆಂದು ಮೋಹನ .ಎಸ್. ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ .ಎಸ್. ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಅಂಚೆ ಕಛೇರಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಪಾತ್ರೆ ಕ್ರಾಸ ಹತ್ತಿರ ಆರೋಪಿ ರಾಜಕುಮಾರ ತಂದೆ ಬಕ್ಕಪ್ಪಾ ಹೂಗಾರ ವಯ: 26 ವರ್ಷ, ಸಾ: ಹರನಾಳ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಅವÀರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ 1) ನಗದು ಹಣ 11,100/- ರೂ., 2) 4 ಮಟಕಾ ಚೀಟಿಗಳು, 3) ಒಂದು ಬಾಲ ಪೆನ್ನ 4) ಒಂದು ಮೊಬೈಲ .ಕಿ 5000/- ರೂ. ನೇದವುಗಲನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: