ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-01-2020
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
04/2020, ಕಲಂ.
454, 457, 380 ಐಪಿಸಿ :-
ದಿನಾಂಕ 02-01-2020 ರಂದು 2100 ಗಂಟೆಯಿಂದ ದಿನಾಂಕ 04-01-2020 ರಂದು 1600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ರಾಜಕುಮಾರ ತಂದೆ ದೇವಪ್ಪ ಬೌದ್ಧೇ ವಯ: 47 ವರ್ಷ, ಜಾತಿ: ಎಸ್.ಸಿ ಹೊಲೆಯ, ಉ: ಶಾಖಾಧಿಕಾರಿ ಜೆಸ್ಕಾಂ ಮರ್ಕುಂದಾ, ಸಾ: ಧನ್ನೂರ(ಹೆಚ್), ತಾ: ಭಾಲ್ಕಿ, ಸಧ್ಯ: ಗುರುನಾನಕ ಕಾಲೋನಿ ಬೀದರ ರವರು ವಾಸವಾಗಿದ್ದ ಬಾಡಿಗೆಯ ಮನೆಯಲ್ಲಿಟ್ಟಿರುವ 25 ಗ್ರಾಂ. ಬಂಗಾರದ ಆಭರಣಗಳು ಹಾಗು 41 ಸಾವಿರ ರೂ. ನಗದು ಹಣ ಹಾಗು ಒಂದು ಮೊಬೈಲನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 13-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 05/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 11-01-2020 ರಂದು 1100 ಗಂಟೆಯಿಂದ 1400 ಗಂಟೆಯ ಅವಧಿಯಲ್ಲಿ ಬೀದರ ನಗರದ ವಿದ್ಯಾನಗರ ಕಾಲೋನಿಯಲ್ಲಿ ಫಿರ್ಯಾದಿ ಮಂಜುನಾಥ ತಂದೆ ಮಹಾದೇವಪ್ಪಾ ಹರಿಜನ ವಯ: 29 ವರ್ಷ, ಸಾ: ಬೋಳವಾಡ, ತಾ: ತಾಳಿಕೊಟೆ, ಜಿಲ್ಲಾ: ವಿಜಯಪುರ, ಸದ್ಯ: ವಿದ್ಯಾನಗರ ಕಾಲೋನಿ 11 ನೇ ಕ್ರಾಸ ಬೀದರ ರವರ ಹೆಂಡತಿ ಸಪ್ನಾ ಗಂಡ ಮಂಜುನಾಥ ಹರಿಜನ ವಯ: 23 ವರ್ಷ, ಸಾ: ಬೋಳವಾಡ, ತಾ: ತಾಳಿಕೊಟೆ, ಜಿಲ್ಲಾ: ವಿಜಯಪುರ, ಸದ್ಯ: ವಿದ್ಯಾನಗರ ಕಾಲೋನಿ 11 ನೇ ಕ್ರಾಸ ಬೀದರ ರವರು ವಾಸವಾಗಿರುವ ಬಾಡಿಗೆ ಮನೆಯಿಂದ ಕಾಣೆಯಾಗಿರುತ್ತಾಳೆ, ತನ್ನ ಹೆಂಡತಿಯು ಕಾಣೆಯಾದ ಬಗ್ಗೆ ಇಲ್ಲಿಯವರೆಗೆ ಸಂಬಂಧಿಕರ ಮನೆಯಲ್ಲಿ, ಇತರೆ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 13-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ.
11/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 13-01-2020 ರಂದು ಫಿರ್ಯಾದಿ ಖಮರೊದ್ದಿನ ತಂದೆ ಮೆಹಬೂಬಸಾಬ, ವಯ: 18 ವರ್ಷ, ಜಾತಿ: ಮುಸ್ಲಿಂ, ಸಾ: ಧುಮಸಾಪೂರ ರವರು ಬೀದರ ನಗರದ ವಿದ್ಯಾನಿಕೇತನ ಐಟಿಐ ಕಾಲೇಜ ಬೀದರಗೆ
ಬಂದು ಕಾಲೇಜ ಮುಗಿಸಿಕೊಂಡು ಬೀದರದಿಂದ ಧುಮಸಾಪೂರ ಗ್ರಾಮಕ್ಕೆ ಹೋಗಲು ಬೀದರ ಗಾಂಧಿಗಂಜ ರೈಲ್ವೆ
ಗೇಟ ಹತ್ತಿರ ಬಂದು ಆಟೋ ನಂ. ಕೆಎ38/9958 ನೇದರಲ್ಲಿ ಕುಳಿತು ಹೊರಟಿದ್ದು, ಆಗ ಸದರಿ ಆಟೋ ಚಾಲಕ
ತನ್ನ ಆಟೋವನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ವೇಗ ಹತೋಟಿಯಲ್ಲಿ ಇಟ್ಟುಕೊಳ್ಳದೇ ಚಿದ್ರಿ
ರೋಡ ಕಾಲಿನ ಮಜ್ಜಿದ ಹತ್ತಿರ ಪಲ್ಟಿ ಮಾಡಿ, ನಂತರ ಆಟೋ ಎಬ್ಬಿಸಿಕೊಂಡು ಚಿದ್ರಿ ಕಡೆಗೆ ಆಟೋ ಸಮೇತ
ಓಡಿ ಹೋಗಿರುತ್ತಾನೆ, ಪರಿಣಾಮ ಫಿರ್ಯಾದಿಯ ಬಲಗಾಲ ತೊಡೆಯ ಮೇಲೆ ಭಾರಿ ಗುಪ್ತಗಾಯ, ಸೊಂಟದ
ಎಡಭಾಗದಲ್ಲಿ ರಕ್ತಗಾಯವಾಗಿರುತ್ತದೆ, ಆಗ ಹಿಂದೆ ಬರುತ್ತಿದ್ದ ಅವಿನಾಶ ತಂದೆ ವಸಂತ ಮುರನಾಳೆ
ಮತ್ತು ತಮ್ಮ ಮಹ್ಮದ ಮಾಜಿದ ತಂದೆ ಮೆಹಬೂಬಸಾಬ ಸಾ: ಧೂಮಸಾಪೂರ ರವರು ಕೂಡಿ ಒಂದು ಖಾಸಗಿ
ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ, ನಂತರ
ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಗುರುನಾನಕ ಆಸ್ಪತ್ರೆ ದಾಖಲು ಮಾಡಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment