ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-01-2020
ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ.ಪಿ.ಸಿ :-
ದಿನಾಂಕ 15-01-2020 ರಂದು ಫಿರ್ಯಾದಿ ಅಶ್ವಿನಿ ಗಂಡ ರವಿ ಸೊಮವಂಶಿ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಿಡೆಬಾನ ಗ್ರಾಮ, ತಾ: ಉದಗೀರ, ಸದ್ಯ: ಬೆಲ್ದಾಳ ಗ್ರಾಮ, ತಾ: ಔರಾದ(ಬಿ) ರವರ ಗಂಡನಾದ ರವಿ ತಂದೆ ಪ್ರಕಾಶ ಸೊಮೌಂಶಿ ವಯ: 35 ವರ್ಷ ಇತನು ಸರಾಯಿ ಕುಡಿದ ಅಮಲಿನಲ್ಲಿ ಯಾವುದೋ ಒಂದು ಕ್ರಿಮಿಕಿಟ ಔಷಧವನ್ನು ಸೇವನೆ ಮಾಡಿ ಮ್ರತಪಟ್ಟಿರುತ್ತಾನೆ, ಆತನ ಸಾವಿನ ಮೇಲೆ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ.
10/2020, ಕಲಂ. 392
ಐಪಿಸಿ :-
ದಿನಾಂಕ 28-12-2019 ರಂದು 1800 ಗಂಟೆಗೆ ಫಿರ್ಯಾದಿ ಸರೋಜಾ ಗಂಡ ಧೈರ್ಯವಾನ ಸಾಳೊಂಕೆ ವಯ:
58 ವರ್ಷ, ಜಾತಿ: ಮರಾಠಾ, ಸಾ: ಶಿವಾಜಿ ನಗರ
ಬಸವಕಲ್ಯಾಣ ರವರು ಪಾಟೀಲ್
ಆಸ್ಪತ್ರೆಯ ಎದುರುಗಡೆ ಇದ್ದ ಕಿರಾಣಿ ಅಂಗಡಿಗೆ ಹೋಗಿ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ಮನೆಗೆ ಹೋಗುವಾಗ 1830 ಗಂಟೆಗೆ ಪಾಟೀಲ್
ಆಸ್ಪತ್ರೆಯ ಪಕ್ಕದ ಶಿವಾಜಿ ನಗರಕ್ಕೆ ಹೋಗುವ ರೋಡಿನ ಮೇಲೆ ಎದುರಿನಿಂದ ಒಂದು ಮೋಟಾರ
ಸೈಕಲ್ ಮೇಲೆ
ಇಬ್ಬರೂ ಅಪರಿಚಿತ ವ್ಯಕ್ತಿಗಳು ಕುಳಿತುಕೊಂಡು ಪಿüರ್ಯಾದಿಯವರ ಹತ್ತಿರ ಬಂದು ಮೋಟಾರ್ ಸೈಕಲ್ ಸ್ವಲ್ಪ ನಿಧಾನ ಮಾಡಿ
ಒಮ್ಮೇಲೆ ಮೋಟಾರ
ಸೈಕಲ್ ಹಿಂದೆ ಕುಳಿತ್ತಿದ್ದ ವ್ಯಕ್ತಿ ಪಿüರ್ಯಾದಿಯವರ ಕೊರಳಿಗೆ ಕೈ ಹಾಕಿ ಕೊರಳಿನಲ್ಲಿದ್ದ 4 ತೊಲೆ ಬಂಗಾರದ ಗಂಟನ್ ಅ.ಕಿ 1,20,000/- ರೂ. ನೇದನ್ನು ಎಳೆದು ದೋಚಿಕೊಂಡು ತನ್ನ ಮೋಟಾರ ಸೈಕಲ್
ಮೇಲೆ ಓಡಿ ಹೋಗಿದ್ದು, ನಂತರ ಪಿüರ್ಯಾದಿಯು ಚೀರಾಡಿದರು ಯಾರು ಬರಲಿಲ್ಲ, ಹಾಗೂ ಫಿರ್ಯಾದಿಯವರು ಮೋಟಾರ ಸೈಕಲ್
ನ ನಂಬರ್ ನೋಡಿರುವುದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-01-2019 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ.
04/2020, ಕಲಂ. 498(ಎ), 323, 504, 354 ಜೊತೆ 34 ಐಪಿಸಿ :-
ಫಿರ್ಯಾದಿ ಕಲ್ಪನಾ ಗಂಡ ಶ್ರೀಕಾಂತ
ಇಪ್ಪಿ ವಯ: 24
ವರ್ಷ,
ಜಾತಿ:
ಕಬ್ಬಲಿಗ,
ಸಾ:
ಹಿರನಾಗಾಂವ
ರವರ ಮದುವೆಯಾಗಿ ಸುಮಾರು ಆರು ವರ್ಷಗಳು ಆಗಿದ್ದು, ಸುಮಾರು ಒಂದು ವರ್ಷದ ಹಿಂದೆ ಗಂಡನ ಮನೆಯಲ್ಲಿ
ಫಿರ್ಯಾದಿಗೆ ಗಂಡ ಶ್ರೀಕಾಂತ ತಂದೆ ಕುಪ್ಪಣ್ಣಾ ಇಪ್ಪಿ ಇವರು ಮತ್ತು ಅತ್ತೆ ಶಾಂತಾಬಾಯಿ, ಮಾವ ಕುಪ್ಪಣ್ಣ ಮತ್ತು
ಮೈದುನ ವರೆಲ್ಲರು ಕೂಡಿ ಕಿರುಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿರುವದರಿಂದ ತನ್ನ ತಂದೆಯ ಮನೆಯಲ್ಲಿ
ತಂದೆ ತಾಯಿಯವರೊಂದಿಗೆ ವಾಸವಾಗಿದ್ವು, ಹೀಗಿರುವಾಗ ದಿನಾಂಕ 15-01-2020 ರಂದು 2000 ಗಂಟೆಯ
ಸುಮಾರಿಗೆ ಮನೆಯಲ್ಲಿದ್ದಾಗ ಜೊತೆ ಅಕ್ಕ ರೇಣುಕಾ ಇರುತ್ತಾಳೆ, ಆಗ ಗಂಡ ಶ್ರೀಕಾಂತ ಇತನು ಬಂದು ಇಲ್ಲೆ
ಎಷ್ಟು ದಿವಸ ಕುಡತಿ ಬಾ ಹೊರಗೆ ನಿನಗೆ ನೋಡಕೋತಿನಿ ಅಂತಾ ಬೈಯುತ್ತಿದ್ದಾಗ ಫಿರ್ಯಾದಿ ಹಾಗೂ ಅಕ್ಕ
ಇಬ್ಬರು ಹೊರಗೆ ಬಂದಾಗ ಇಬ್ಬರಿಗೂ ಅವರೆಲ್ಲರೂ ಕೈಯಿಂದ ಹೊಡೆಯುವದು ಕಾಲಿನಿಂದ ಒದೆಯುವದು ಮಾಡಿದಾಗ
ಹೊರಗಡೆಯಿಂದ ತಾಯಿ ಬಿಡಿಸಲು ಬಂದಾಗ ಅವಳಿಗೆ ಬಲಗೈ ಹಿಡಿದು ಜಿಂಜಾ ಮುಷ್ಠಿ ಮಾಡಿರುತ್ತಾನೆ ಮತ್ತು
ಫಿರ್ಯಾದಿಗೆ ಎದೆಯಲ್ಲಿ ಒದ್ದಿರುವುದರಿಂದ ನೋವು ಆಗಿರುತ್ತದೆ, ಅಕ್ಕನ ಬಲಗೈಯನ್ನು ಹಿಡಿದು ಮುರಿದಿರುತ್ತಾನೆ,
ನಂತರ ಜಗಳ ನೋಡಿ ಮಕ್ತಮ್ ಸಾಮ ಮುಲ್ಲಾ, ನಿಲಮ್ಮ ನಾಗೂರೆ ಇವರು ಬಂದು ಬಿಡಿಸಿಕೊಂಡಾಗ ಮೈದುನ ತಂದೆಗೆ
ಹೊಡೆದಿರುತ್ತಾನೆಂದು ಕೊಟ್ಟ ಫಿರ್ಯಾಧಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ
ನಗರ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ
ಕಾಯ್ದೆ :-
ದಿನಾಂಕ 15-01-2020 ರಂದು ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಫಿರ್ಯಾದಿ ದಿಲೀಪ ತಂದೆ ಕಾಶಿನಾಥ ಸಿರಾಪೂರೆ, ವಯ: 30 ವರ್ಷ, ಜಾತಿ: ವಡ್ಡರ, ಸಾ: ದೇವಣಿ ರವರು ತನ್ನ ಹೆಂಡತಿ ಮೀನಾ ಹಾಗೂ 4 ವರ್ಷದ ಮಗಳಾದ ಮಹೇಶ್ವರಿ ಕೂಡಿ ತನ್ನ ಮೊಟಾರ್ ಸೈಕಲ ನಂ. ಎಂಎಚ-24/ಬಿ.ಇ-1558 ನೇದ್ದರ ಮೇಲೆ ತಮ್ಮೂರಿನಿಂದ ಬಿಟ್ಟು ಭಾಲ್ಕಿ ಮಾರ್ಗವಾಗಿ ಜೋಳದಾಬಕಾ ಗ್ರಾಮಕ್ಕೆ ಭಾಲ್ಕಿ ಹುಮನಾಬಾದ ರೋಡ ಮುಖಾಂತರ ಹೋಗುವಾಗ ಆರ್.ಇ.ಸಿ ಕಾಲೇಜ ಹತ್ತಿರ ಹೋದಾಗ ಅದೇ ಸಮಯಕ್ಕೆ ಕಲವಾಡಿ ಕಡೆಯಿಂದ ಟ್ರಾಕ್ಟರ ನಂ. ಎಪಿ-22/ಕೆ-7146 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರ ಅತಿವೇಗ ಹಾಗು ನಿಷ್ಕಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಘಟನೆಯಲ್ಲಿ ಫಿರ್ಯಾದಿಗೆ ಬಲಗಾಲ ಹೆಬ್ಬೆಟ್ಟು ಮತ್ತು ಬಲ ಮೊಣಕಾಲಿಗೆ, ಬಲಗೈ ರಟ್ಟೆಗೆ ರಕ್ತ ಮತ್ತು ಗುಪ್ತಗಾಯಗಳು ಆಗಿರುತ್ತವೆ, ಹೆಂಡತಿ ಮೀನಾ ಇವಳಿಗೆ ತಲೆಯಲ್ಲಿ ರಕ್ತಗಾಯವಾಗಿರುತ್ತದೆ ಹಾಗೂ ಮಗಳಾದ ಮಹೇಶ್ವರಿ ಇವಳಿಗೆ ಬಲಗಾಲಿಗೆ ಭಾರಿ ಗಾಯವಾಗಿ ಕಾಲು ಮುರಿದಿರುತ್ತದೆ, ಆಗ ಅಲ್ಲೆ ಇದ್ದ ಯಾರೋ ಒಬ್ಬರು ಅಂಬುಲೆನ್ಸಗೆ ಕೆರ ಮಾಡಿ ಚಿಕಿತ್ಸೆ
ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ
ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ದಿನಾಂಕ 15-01-2020 ರಂದು ಫಿರ್ಯಾದಿ ಸಿದ್ದಪ್ಪಾ ತಂದೆ ಜೀತಪ್ಪಾ ಕಪಲಾಪರೆ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಅಲಿಯಂಬರ್, ತಾ: ಬೀದರ ರವರು ಓಂಕಾರ ಸಾ: ಅಲಿಯಂಬರ್ ಇರವರ ಜೊತೆಯಲ್ಲಿ ಇಬ್ಬರು ಓಂಕಾರ ಇವರ ಮೊಟಾರ ಸೈಕಲ ನಂ. ಕೆಎ-38/ಎಸ್-2061 ನೇದರ ಮೇಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಸಂಗಮೇಶ್ವರ ದೇವಾಲಕ್ಕೆ ಬಂದು ಅಲ್ಲಿ ದರ್ಶನ ಮಾಡಿಕೊಂಡು ಮರಳಿ ತಮ್ಮೂರಿಗೆ ಹೊಗಲು ಸದರಿ ಮೊಟಾರ ಸೈಕಲ ಮೇಲೆ ಬೀದರ-ಹುಮನಾಬಾದ ರಸ್ತೆಯ ನಿಲಮನಳ್ಳಿ ತಾಂಡದ ಹತ್ತಿರ ಸಂಗಮೆಶ್ವರ ದೇವಾಲಯದ ಕಮಾನ ಹತ್ತಿರ ಬಂದಾಗ ಎದರುಗಡೆಯಿಂದ ಅಂದರೆ ಬೀದರ ಕಡೆಯಿಂದ ಸ್ಕಾರ್ಪಿವೊ ಕಾರ ನಂ. ಕೆಎ-20/ಸಿ-5950 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಸಾರ್ವಜನಿಕ
ರಸ್ತೆಯಲ್ಲಿ ಅತಿವೇಗ
ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡ ಬಂದು ಫಿರ್ಯಾದಿಯವರು ಕುಳಿತ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ಓಡಿಸಿಕೊಂಡು ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಬಲಗಾಲು ಮೊಳಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ಭುಜಕ್ಕೆ ಗುಪ್ತಗಾಯ, ಎಡಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ, ಓಂಕಾರ ಇತನಿಗೆ ತಲೆಯ ಬಲಭಾಗದಲ್ಲಿ ಭಾರಿ ರಕ್ತಗಾಯ, ಬಲ ಮೆಲಕಿನ ಮೇಲೆ ತರಚಿದ ರಕ್ತಗಾಯ, ಎಡಗೈ ಮುಂಗೈ ಕೆಳಗೆ, ಎಡಗಾಲು ಕೀರು ಬೆರಳಿಗೆ ತರಚಿದ ಗಾಯ ಮತ್ತು ಎಡಗಾಲು ಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ಆಗ ಹಿಂದೆ ಬರುತ್ತಿದ್ದ ತಮ್ಮೂರ ಕಾಮಶೇಟ್ಟಿ ತಂದೆ ಶಿವರಾಯ ಬಿರಾದಾರ ಮತ್ತು ಅಶೋಕ ತಂದೆ ಬಂಡೆಪ್ಪಾ ಗಾದಗೆ ಇವರು ಘಟನೆ ನೋಡಿ ಗಾಯಗೊಂಡ ಎಲ್ಲರಿಗೂ ಖಾಸಗಿ ವಾಹನದಲ್ಲಿ ಹಾಕಿಕೊಂಡು ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ
ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment