Police Bhavan Kalaburagi

Police Bhavan Kalaburagi

Thursday, January 30, 2020

BIDAR DISTRICT DAILY CRIME UPDATE 29-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-01-2020

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಅಣ್ಣೆಪ್ಪಾ ತಂದೆ ರೇವಣಸಿದ್ದಪ್ಪಾ ಬಳಸೂರೆ ವಯ 40 ವರ್ಷ, ಜಾತಿ: ಕುರುಬ, ಸಾ: ಹೆಬ್ಬಾಳ ಗ್ರಾಮ, ತಾ: ಕಾಳಗಿ, ಜಿ: ಕಲಬುರ್ಗಿ ರವರ ಮಗಳಾದ ಸವೀತಾ ಗಂಡ ಲಿಂಮರಾಜ ಹದಗಲೆ ವಯ 19 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಚಂಡಕಾಪುರ ಇವಳು ತನ್ನ ಅತ್ತೆ ಕಮಳಾಬಾಯಿ ರವರು ತನ್ನ ಮಗಳಿಗೆ ಸರಿಯಾಗಿ ನೋಡಿಕೊ ಅಂತಾ ಅಂದಿದ್ದಕ್ಕೆ ಶಿಟ್ಟಿನ ಆವೇಶದಲ್ಲಿ ಮನೆಯಲ್ಲಿಟ್ಟಿದ ಬೆಳೆಗೆ ಹೊಡೆಯುವ ಔಷಧಿ ಕುಡಿದಿದ್ದರಿಂದ ಅವಳಿಗೆ ಚಿಕಿತ್ಸೆ ಕುರಿತು ಉಮರ್ಗಾ ಗ್ರಾಮದ ವಿಜಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಸೊಲಾಪುರಿನ ಶ್ವೀನಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-01-2020 ರಂದು ಮೃತಪಟ್ಟಿರುತ್ತಾಳೆ, ಅವಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 28-01-2020 ರಂದು ಫಿರ್ಯಾದಿ ಎಂ.ಎ ನಯಿಮ ತಂದೆ ಎಂ.ಎ ಸಲಾಮ್ ಸಾ: ಅಲಿಬಾಗ ಬೀದರ ರವರ ಅಣ್ಣನಾದ ಎಂ.ಎ ಕಲೀಮ ತಂದೆ ಎಂ.ಎ ಸಲಾಮ್ ವಯ: 68 ವರ್ಷ, ಸಾ: ಅಲಿಬಾಗ ಬೀದರ ರವರು ಎರಡು ಕಣ್ಣುಗಳಿಂದ ಕುರುಡನಿದ್ದು ಅವರು ಉಸ್ಮಾನಿಯಾ ಮಜ್ಸಿದನಲ್ಲಿ ಕೈಕಾಲು ತೋಳೆದುಕೋಳ್ಳತ್ತಿದಾಗ, ಬಿ.ಪಿ ಮತ್ತು ಅಸ್ಥಮಾ ಹೆಚ್ಚಾಗಿ ಕೇಳಗೆ ಬೀದ್ದು ತಲೆಗೆ ಗಾಯವಾಗಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿಯಲ್ಲಿ ಮೃತ್ತಪಟ್ಟಿರುತ್ತಾನೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂದೇಹ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ. ಮಹಿಳಾ ಕಾಣೆ :-
ಫಿರ್ಯಾದಿ ಬಸ್ಸಪ್ಪಾ ತಂದೆ ಹಣಮಂತಪ್ಪಾ ಹಿಲಾಲಪುರ ವಯ: 55 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಖೇಣಿ ರಂಜೋಳ ರವರ ದೊಡ್ಡ ಮಗಳಾದ ಗಂಗಾಶ್ರೀ ವಯ: 21 ವರ್ಷ ಇವಳು ಬೀದರ ಜನವಾಡ ರೋಡದಲ್ಲಿದ್ದ ಕಾಲೋನಿಯಲ್ಲಿ ಬಿ. ವಿದ್ಯಾಭ್ಯಾಸ ಮಾಡುತ್ತಿದ್ದಾಳೆ, ಗಂಗಾಶ್ರೀ ಇವಳು ದಿನಾಲು ಖೇಣಿ ರಂಜೋಳದಿಂದ ಹಳ್ಳಿಖೇಡ (ಬಿ) ಮಾರ್ಗವಾಗಿ ಬೀದರಗೆ ಹೋಗಿ ಬರುತ್ತಾಳೆ, ಹೀಗಿರುವಲ್ಲಿ ದಿನನಿತ್ಯದಂತೆ ದಿನಾಂಕ 27-01-2020 ರಂದು ಗಂಗಾಶ್ರೀ ಇವಳು ಮ್ಮೂರಿನಿಂದ 0700 ಗಂಟೆಗೆ ಮನೆಯಿಂದ ಬೀದರಗೆ ಬಸ್ಸಿನಲ್ಲಿ ಹೊಗಿ ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ, ನಂತರ ಫಿರ್ಯಾದಿ ಮತ್ತು ಅಣ್ಣನ ಮಗನಾದ ಸುನೀಲ ತಂದೆ ಬಾಬು ಇಬ್ಬರು ಬೀದರಗೆ ಹೊಗಿ ಮಗಳು ಓದುತ್ತಿರುವ ಕಾಲೇಜಿನಲ್ಲಿ ವಿಚಾರಿಸಿ ಹಾಗು ಬೀದರ ನಗರದಲ್ಲಿ ಹುಡುಕಾಡಿದರು ಮಗಳು ಸಿಕ್ಕಿರುವದಿಲ್ಲಾ, ನಂತರ ಮ್ಮ ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಿದರು ಮಗಳ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲಾ, ಕಾರಣ ಮಗಳಾದ ಗಂಗಾಶ್ರೀ ಇವಳು ಮನೆಯಿಂದ ಕಾಲೇಜಗೆ ಹೊದವಳು ಮನೆಗೆ ಬರದೆ ಕಾಣಿಯಾಗಿರುತ್ತಾಳೆ, ಕಾಣೆಯಾದ ಹುಡುಗಿಯ ಚಹರೆ ಪಟ್ಟಿ 1) ಹೆಸರು: ಗಾಂಗಾಶ್ರೀ ತಂದೆ ಬಸ್ಸಪ್ಪಾ ಹಿಲಾಲಪುರ, 2) ವಯ: 21 ವರ್ಷ, 3) ಎತ್ತರ : '4' ಫೀಟ್ 8 ಇಂಚು, 4) ಬಣ್ಣ : ಗೋಧಿ ಮೈ ಬಣ್ಣ, 5) ಮಾತನಾಡುವ ಭಾಷೆ: ಕನ್ನಡ ಹಿಂದಿ, 6) ಧರಿಸಿದ ಉಡುಪುಗಳು: ಬುದಿ ಬಣ್ಣದ ಟಾಪ್, ಕೆಂಪು ಬಣ್ಣದ ಓಡಣಿ ಹಾಗು ಕೆಂಪು ಬಣ್ಣದ ಪೈಜಾಮಾ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 28-01-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-01-2020 ರಂದು ಫಿರ್ಯಾದಿ ಉಮೇಶ ತಂದೆ ಶರಣಪ್ಪಾ ಜಿವಣಗಿ, ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಡಾಕುಳಗಿ ರವರ ತಂದೆಯಾದ ಶರಣಪ್ಪಾ ತಂದೆ ಶಂಕ್ರೇಪ್ಪಾ ಜೀವಣಗಿ ವಯ: 55 ವರ್ಷ ರವರು ಹಳ್ಳಿಖೇಡ (ಬಿ) ಪಟ್ಟಣಕ್ಕೆ ಹೋಗಿ ನಂತರ ಅಲ್ಲಿಂದ ಹುಮನಾಬಾದ ಜಾತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಮರಳಿ ರಾತ್ರಿ ವೇಳೆಯಲ್ಲಿ ಹಳ್ಳಿಖೇಡ (ಬಿ) ಶಿವಾರ ಬೀರಪ್ಪಾ ದೊಡ್ಡಮನಿ ರವರ ಹೊಲದ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಬರುವಾಗ ಯಾವುದೆ ಅಪರಿಚಿತ ವಾಹನ ಡಿಕ್ಕಿ ಮಾಡಿಕೊಂಡು ಹೋದ ಪರಿಣಾಮ ಅವರ ಭಾರಿ ಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ಅಲ್ಲಿಂದ ಸೋಲಾಪುರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಹುಮನಾಬಾದ ಹತ್ತಿರ ದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 01/2020, ಕಲಂ. 66(ಸಿ), 67(ಡಿ) .ಟಿ ಕಾಯ್ದೆ ಮತ್ತು 419, 420 ಐಪಿಸಿ :-
ದಿನಾಂಕ 16-01-2020 ರಂದು ಯಾರೋ ಅಪರಿಚಿತ ವ್ಯಕ್ತಿ ತನ್ನ ಮೋಬೈಲ್ ಸಂ. 8400205594 ಮತ್ತು 6901003290 ನೇದರಿಂದ ಫಿರ್ಯಾದಿ ಫಿರ್ಯಾದಿ ಸಂತೋó ತಂದೆ ಪ್ರಭುರಾವ ಮಮ್ಮಾ, ವಯ: 38 ವರ್ಷ, ಸಾ: ಗೋರ್ಟ (ಬಿ) ರವರ ಮೋಬೈಲ್ ನಂ. 9730516720 ನೇದಕ್ಕೆ ಕರೆ ಮಾಡಿ ನಾನು ಎಕ್ಸಿಸ್ ಬ್ಯಾಂಕ ಹೆಡ್ ಆಫಿಸ್ದಿಂದ ಕರೆ ಮಾಡುತ್ತಿರುವುದಾಗಿ ಎಂದು ಸುಳ್ಳು ಹೇಳಿ ನಂಬಿಸಿ ಕ್ರೇಡಿಟ್ ಕಾರ್ಡನಲ್ಲಿ ಹಣ ಜಮಾ ಮಾಡಲು ನಿಮ್ಮ ಬಗ್ಗೆ ವೇರಿಫಿಕೇಶನ್ ಮಾಡಬೇಕಾಗುತ್ತದೆ ಅಂತ ಹೇಳಿ ಫಿರ್ಯಾದಿಯವರ ನನ್ನ ಕ್ರೆಡಿಟ್ ಕಾರ್ಡನ ಮಾಹಿತಿ ಧೃಡಪಡಿಸಿಕೊಂಡು   ಮೋಸದಿಂದ ಫಿರ್ಯಾದಿಯ ಕ್ರೇಡಿಟ್ ಕಾರ್ಡದಲ್ಲಿಂದ ಒಟ್ಟು 76,125/- ರೂ. ಹಣ ಲಪಟಾಯಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 04/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 28-01-2020 ರಂದು ಬೀದರ ನಗರದ ಹಳೆ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಗವಾನ ಚೌಕದಿಂದ ಕೋಟೆ ಕಡೆಗೆ ಹೋಗುವ ರೋಡಿನ ಬದಿಯಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತಮ್ಮ ಹತ್ತಿರ ಮಟಕಾ ಜೂಜಾಟ ಆಡಿದರೆ ಒಂದು ರೂಪಾಯಿಗೆ 80/- ರೂ. ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ರಾಜಪ್ಪಾ ಎ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಸರ್ಕಾರಿ ಆಸ್ಪತ್ರೆ  ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ನಿಜಾಮ ತಂದೆ ಫತ್ರುಸಾಬ ವಯ: 35 ವರ್ಷ, ಸಾ: ಬಾಗವಾನ ಗಲ್ಲಿ ಬೀದರ ಇತನು ಸರ್ಕಾರಿ ಆಸ್ಪತ್ರೆ ಹತ್ತಿರ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದುಕೊಂಡು ಸದರಿಯವನ ವಶದಿಂದ ನಗದು ಹಣ 380/- ರೂ., ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೇನ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ ಪೊಲೀಸ್ ಠಾಣೆ ಅಪರಾಧ ಸಂ. 05/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 28-01-2020 ರಂದು ಔರಾದ ಕೆರೆಯ ಕಡೆಗೆ ಅಧಿಕೃತವಾಗಿ ಮಾರಾಟ ಮಾಡಲು ಮೊಟಾರ ಸೈಕಲ್ ಮೇಲೆ ಸಾರಾಯಿ ಸಾಗಿಸಿಕೊಂಡು ಹೋಗುತ್ತಿದ್ದಾರೆಂದು ಡಾ: ದೇವರಾಜ ಬಿ ಡಿಎಸ್ಪಿ ಭಾಲ್ಕಿ ರವರಿಗೆ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಔರಾದ ಕೆರೆಯ ಆಚೆ ಗಣೇಶಪುರ ಕಂಬಾ ರಸ್ತೆಯ ಮೇಲೆ ಹೋದಾಗ ಅಲ್ಲಿ ಮೋಟಾರ ಸೈಕಲ ಮೇಲೆ ಒಂದು ಬಿಳಿ ಚೀಲದಲ್ಲಿ ಕಾಟನಗಳನ್ನು ಇಟ್ಟುಕೊಂಡು ಬರುತ್ತಿರುವದನ್ನು ನೋಡಿ ಸಿಬ್ಬಂದಿ ಮತ್ತು ಪಂಚರ ಸಹಾಯದಿಂದ ಮೋಟಾರ ಸೈಕಲ ತಡೆದು ನಿಲ್ಲಿಸಿ ಮೋಟಾರ ಸೈಕಲ ಮೇಲೆ ಇಟ್ಟುಕೊಂಡ ಚೀಲವನ್ನು ಬಿಚ್ಚಿ ನೋಡಲು ಅದರಲ್ಲಿ ಸರಾಯಿ ಕಾಟನಗಳು ಇದ್ದವು, ಸದರಿ ವ್ಯಕ್ತಿಗಳಿಗೆ ಸದರಿ ಸರಾಯಿ ಸಾಗಾಟ ಮತ್ತು ಮಾರಾಟದ ಬಗ್ಗೆ ದಾಖಲೆಗಳು ಕೆಳಿದಾಗ ಅವರ ಹತ್ತಿರ ಯಾವುದೇ ದಾಖಲೆಗಳು ಇರುವದಿಲ್ಲ, ಅನಧಿಕೃತವಾಗಿ ಮಾರಾಟ ಮಾರಾಟ ಮಾಡಲು ಸರಾಯಿ ಸಾಗಿಸುತ್ತಿರುವದಾಗಿ ತಿಳಿಸಿದ್ದು ಇರುತ್ತದೆ, ನಂತರ ಅವರ ಹೆಸರು ಮತ್ತು ವಿಳಾಸ ಕೆಳಲು 1) ಕೃಷ್ಣಾ ತಂದೆ ಅಶೋಕ ಖುರಾಡೆ ವಯ: 20 ವರ್ಷ, ಜಾತಿ: ವಡ್ಡರ, ಹಾಗು 2) ಅನೀಲ ತಂದೆ ಹಣಮಂತ ಕಾಸಲೆ ವಯ: 22 ವರ್ಷ, ಜಾತಿ: ವಡ್ಡರ, ಇಬ್ಬರು ಸಾ: ಸಾ: ರಾಮನಗರ ಔರಾದ[ಬಿ] ಅಂತ ತಿಳಿಸಿದ್ದು ಇರುತ್ತದೆ, ನಂತರ ಸದರಿಯವರ ಹತ್ತಿರ 1) ಓರಿಜಿನಲ್ ಚಾಯಿಸ್ ಸರಾಯಿ ಇದ್ದು 90 ಎಮ್.ಎಲ್10 ಕಾಟನಗಳು ಅ.ಕಿ 29,107/- ರೂಪಾಯಿ, ಆರೋಪಿ ಅನೀಲ ತಂದೆ ಹಣಮಂತ ಕಾಸಲೆ ಇತನ ಹತ್ತಿರ ಒಂದು ಜಿಯೋ ಕಪ್ಪು ಬಣ್ಣದ ಕೀ ಪ್ಯಾಡ್ ಮೊಬೈಲ್ ಅ.ಕಿ 300/- ಇದ್ದು, ಸದರಿ ಸರಾಯಿ ಹಾಗು ಮೋಬೈಲನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 11/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 28-01-2020 ರಂದು ಹುಮನಾಬಾದ-ಹೈದ್ರಾಬಾದ ರೋಡ ಕಪ್ಪರಗಾಂವ ಗ್ರಾಮದ ಬೊಮ್ಮಗೊಂಡೇಶ್ವರ ಚೌಕ ಹತ್ತಿರ ಇದ್ದಾಗ ಫಿರ್ಯಾದಿ ದಶರಥ ತಂದೆ ಸೈಬಣ್ಣಾ ಮೇತ್ರೆ ಸಾ: ಕಪ್ಪರಗಾಂವ ರವರ ಹೆಂಡತಿಯಾದ ವಿಮಲಾಬಾಯಿ ಇವಳು ಹೊಲದಿಂದ ಮನೆಗೆ ಹುಮನಾಬಾದ-ಹೈದ್ರಾಬಾದ ರೋಡ ನೋಡಿ ದಾಟಿಕೊಂಡು ಹೋಗುವಾಗ ಹೈದ್ರಾಬಾದ ಕಡೆಯಿಂದ ಒಂದು ಕಾರ್ ನಂ. ಎಪಿ-13/ಎನ್-7113 ನೇದ್ದರ ಚಾಲಕನಾದ ಆರೋಪಿ ಸೈಯದ್ ಮುಜಿಬೋದ್ದಿನ್ ಅಹ್ಮದ ತಂದೆ ಸೈಯದ್ ಅಹೆಮೋದ್ದಿನ್ ಸೈಯದ್ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಪ್ಯಾರಾಮೌಂಟ್ ಕಾಲೋನಿ ಟೋಲಿ ಚೌಕಿ ಗೋಲಕೊಂಡ ಹೈದ್ರಾಬಾದ ಇತನು ತನ್ನ ಕಾನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ರೋಡ ದಾಟುತ್ತಿದ್ದ ಫಿರ್ಯಾದಿಯವರ ಹೆಂಡತಿಗೆ ಡಿಕ್ಕಿ ಮಾಡಿ ಕಾರ್ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಅವಳ ತಲೆಗೆ ಮತ್ತು ಬಲ ಭುಜಕ್ಕೆ ಭಾರಿ ಗುಪ್ತಗಾಯ ಹಾಗೂ ಗಟಾಯಿಗೆ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ ಸ್ರಾವವಾಗಿರುತ್ತದೆ, ನಂತರ ಗಾಯಗೊಂಡ ನ್ನ ಹೆಂಡತಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ  ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 05/2020, ಕಲಂ. 498(), 323, 504, 506 ಜೊತೆ 149 ಐಪಿಸಿ ಮತ್ತು 67 ಐಟಿ ಕಾಯ್ದೆ :-
ಫಿರ್ಯಾದಿ ಶಿಲ್ಪಾ ಗಂಡ ಪ್ರಶಾಂತ ಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಭಾಲ್ಕಿ, ಸದ್ಯ: ಬಳತ(ಬಿ) ರವರು ರವರ ಗಂಡ ದಿನಾಲು ಸಾರಾಯಿ ಕುಡಿದು ಬಂದು ಹೊಡೆಯುತ್ತಾನೆ, ಏಕೆ ಹೊಡಿಯಿತ್ತಿರಿ ಎಂದು ಕೇಳಿದಕ್ಕೆ ನಿಮ್ಮ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಇಲ್ಲಾವಾದರೆ ನೀನು ನನ್ನ ಮನೆಯಲ್ಲಿ ಇರಬೇಡ ಎಂದು ವಾದಿಸುತ್ತಿದ್ದಾನೆ, ಮಾತ್ರವಲ್ಲದೆ ಅತ್ತೆ-ಮಾವನಿಗೆ ನಿಮ್ಮ ಮಗ ನನಗೆ ದಿನಾಲು ಕೂಡಿದು ಬಂದು ಹೊಡೆಯುತ್ತಿದ್ದಾರೆ ಏನಾದರು ಹೇಳಿ ಎಂದು ತಿಳಿಸಿದಾಗ, ನಮ್ಮ ಮಗ ಹಿಗೇ ಕೂಡಿಯುತ್ತಾನೆ ನೀನು ಇರಬೇಕಾದರೆ ಇರು ಇಲ್ಲಾ ಅಂದರೆ ನಿಮ್ಮ ತವರು ಮನೆಗೆ ಹೋಗು ಎಂದು ಅವರು ಸಹ ಗಂಡನಿಗೆ ಸಹಕಾರ ಮಾಡುತ್ತಿದ್ದಾರೆ ಹಾಗೂ ನಾದನಿಯಾದ ಪ್ರೀತಿ ಗಂಡ ರಾಜಕುಮಾರ ಸಾ: ಬೀದರ ಇವರು ಸಹ ಅವರ ತಮ್ಮನಿಗೆ ಸಹಾಯ ಮಾಡಿ ತಮ್ಮ ನೀನು ಅವಳಿಗೆ ಬಿಟ್ಟುಕೊಡು ನಾನು ನಿನಗೆ ಬೇರೆ ಮದುವೆ ಮಾಡುತ್ತೇನೆಂದು ಹೇಳಿ ಹೊಡೆಯಲು ಹೇಳುತ್ತಿದ್ದಾರೆ ಮತ್ತು ನೀನಗೆ ಜೈಲಿಗೆ ಹಾಕಿದ್ದರೆ 5 ನೀಮಿಷದಲ್ಲಿ ನಿನಗೆ ಹೋರಗೆ ಕರೆದುಕೊಂಡು ಬರುತ್ತೇನೆ ನೀನು ಏನು ಅಂಜಬೇಡಾ ಎಂದು ಹೇಳುತ್ತಾರೆ, ಹಾಗೂ ಮಾಧ್ಯಮಗಳಲ್ಲಿ ಫಿರ್ಯಾದಿಯ ಭಾವಚಿತ್ರವನ್ನು ಬಿಟ್ಟು ತಂದೆಯ ದೂರವಾಣಿ ನಂ. ಹಾಕುತ್ತಿದ್ದಾರೆ ಮತ್ತು ಭಾವಚಿತ್ರದ ಜೋತೆಗೆ ಬೇರೆ ಹುಡುಗರ ಭಾವಚಿತ್ರ ಹಾಕಿ ಇವಳಿಗೆ ಪ್ರೀತಿ ಮಾಡುವ ಹುಡುಗರು ಇವರು ಎಂದು ತಪ್ಪಾಗಿ ಮಾಧ್ಯಮಗಳಲ್ಲಿ ಅವಾಚ್ಯ ಶಬ್ದಗಳು ಬರೆದು ಬಿಟ್ಟಿದ್ದಾರೆ, ಇದನು ನೋಡಿ ನಾನು ವಿಷ ಸೇವಿಸರುತ್ತೇನೆ ಮತ್ತು ಒಂದು ದಿನ ನನಗೆ ಹೊಡೆದು ಪುಣೆ ಬಸ್ಸ ನಿಲ್ದಾಣದಲ್ಲಿ ಬೆಳ್ಳಿಗೆ ತಂದು ಬಿಟ್ಟು ಹೋಗಿ ನಿನು ನನಗೆ ಬೇಡ ಎಂದು ಚಿಕ್ಕಮಗುವನ್ನು ಬಿಟ್ಟು ಹೋಗಿದ್ದಾರೆ, ಆದರೆ ಅವರ ಮನೆಯವರು ಯಾರು ಕರೆಯಲು ಬಂದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: