Police Bhavan Kalaburagi

Police Bhavan Kalaburagi

Sunday, January 12, 2020

KALABURAGI DISTRICT REPORTED CRIMES

ಇಸ್ಪೀಟ ಜೂಜಾಟಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 08/01/2020 ರಂದು ನರೋನಾ ಠಾಣಾ ವ್ಯಾಪ್ತಿಯ  ಕಡಗಂಚಿ ಗ್ರಾಮದ ಚಂದ್ರತಾಯಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಕಡಗಂಚಿ ಗ್ರಾಮದ ಚಂದ್ರತಾಯಿ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 4 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮೂರು ಜನರನ್ನು ಹಿಡಿದಿದ್ದು, ಒಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ.  ವಶಕ್ಕೆ ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಭೀಮರಾವ ತಂದೆ ಮಾಳಪ್ಪಾ ಮರ್ತೂರ, ವಯಾ: ಸಾ:ಕಡಗಂಚಿ ಗ್ರಾಮ, 2) ಶರಣಪ್ಪಾ ತಂದೆ ಬಸವಣ್ಣಪ್ಪಾ ಫೂಲಾರೆ, ಸಾ:ಗಂಗಾ ಅಪಾರ್ಟ್‌‌‌ ಮೆಂಟ್‌‌ ಖಾದರಿ ಚೌಕ್‌, ಸಾ:ಕಲಬುರಗಿ, 3) ಈರಣ್ಣಾ ತಂದೆ ಚಂದಪ್ಪಾ ಮಾದಗೊಂಡ, ಸಾ:ಕಡಗಂಚಿ, ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  26620/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು, ಓಡಿ ಹೋದವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಈ ಮೇಲಿನವರ ಆತನ ಹೆಸರು ನಾಗಪ್ಪಾ ತಂದೆ ಶರಣಪ್ಪಾ ಬಟಗೇರಿ, ಸಾ:ಕಡಗಂಚಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ; 08.12.2019 ರಂದು ಮದ್ಯಾಹ್ನ  ಜೇವರಗಿ ಠಾಣಾ ವ್ಯಾಪ್ತಿಯ  ತಾಲೂಕಿನ ಮಾರಡಗಿ (ಎಸ್.) ಗ್ರಾಮ ಸೀಮಾಂತರ ಪಡದಳ್ಳಿ ರೋಡಿನ ಪಕ್ಕದಲ್ಲಿ ರೋಡಿನ ಹತ್ತಿರ ಸಾರ್ವಜನಿಕ ಪ್ರದೇಶದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ. ಸಾಹೇಬ ಗ್ರಾಮಿಣ ಉಪ ವಿಬಾಗ ಕಲಬುರಗಿ, ಮಾನ್ಯ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮೀ ಬಂದ ಸ್ಥಳಕ್ಕೆ ಹೊರಟು ಮಾರಡಗಿ (ಎಸ್.) ಸೀಮಾಂತರ ಪಡದಳ್ಳಿ ಕಡೆಗೆ ಹೋಗುವ ರೊಡಿನ ಪಕ್ಕದಲ್ಲಿ ಹೋಗಿ ಗಿಡ ಕಂಠಿಗಳ ಮರೆಯಲ್ಲಿ ನಿಂತು ನೋಡಲಾಗಿ ಕೇನಾಲ್ ಹತ್ತಿರ ನಿಂತು ನೋಡಲಾಗಿ ಕೇನಾಲ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವದು ಖಚಿತ ಪಡಿಸಿಕೊಂಡು ದಾಳಿ ಮಾಡಿ  12 ಜನರನ್ನು ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1). ಸಾಹೇಬಗೌಡ ತಂದೆ ಜೊತೇಪ್ಪಗೌಡ ಮಾಲಿ ಬಿರಾದಾರ ಸಾಃ ಹುಲಕಲ್ ತಾಃ ಶಹಾಪೂರ 02). ರಾಜ ತಂದೆ ಅಂಭಣ್ಣ ದೇವಾಪೂರ  ಸಾಃ ಬಾಪುಗೌಡ ನಗರ ಶಹಾಪೂರ 3) ತಿಪ್ಪಣ್ಣ ತಂದೆ ಪೋಮುನಾಯಕ ರಾಠೋಡ  ಸಾಃ ಡಿಗ್ಗಿತಾಂಡಾ ತಾಃ ಶಹಾಪೂರ 4) ಶಿವಣ್ಣ ತಂದೆ ಹಣಮಂತ ಕೊಲಿ ಸಾಃ  ಹತ್ತಿಗೂಡೂರ ತಾಃ ಶಹಾಪೂರ 5) ನಿಂಗಪ್ಪ ತಂದೆ ಸಂಗಣ್ಣಾ ಪೂಜಾರಿ ಸಾಃ  ಹೊತಪೇಟ್ ತಾಃ ಶಹಾಪೂರ 6) ತಾಯಣ್ಣ ತಂದೆ ಹಣಮಂತ್ರಾಯ ಕವಾಲ್ದಾರ ಸಾಃ ಚಂದಾಪೂರ ತಾಃ ಶಹಾಪೂರ 7) ಗುಂಟೇಪ್ಪ ತಂದೆ ಬಾಲಪ್ಪ ಜಟ್ಟೂರ ಸಾಃ  ಮೂಡಬೂಳ ತಾಃ ಶಹಾಪೂರ, 8) ಸಕ್ಕಪ್ಪ ತಂದೆ ಸಿದ್ದಪ್ಪ ಬ್ಕಾರಿ ಸಾಃ ಮಾರಡಗಿ (ಎಸ್.) 9) ಶಿವಪ್ಪ ತಂದೆ ಭೀಮರಾಯ ಬಿರಾಳ ಸಾಃ  ಮಾರಡಗಿ (ಎಸ್.) ತಾಃ ಜೇವರಗಿ 10) ಮಲ್ಲಪ್ಪ ತಂದೆ ತಮ್ಮಣ್ಣ ಗೋಗಿ ಸಾಃ ಖಾದ್ಯಾಪೂರ ತಾಃ ಜೇವರಗಿ 11) ಚಂದ್ರು ತಂದೆ ದೀಪಲೂ ಜಾದವ ಸಾಃ ಖಾದ್ಯಾಪೂರ ತಾಃ ಜೇವರಗಿ 12) ಚಂದ್ರಾಮ ತಂದೆ ಮಲ್ಲಪ್ಪ ಬೇಲೂರ ಸಾಃ  ಖಾದ್ಯಾಪೂರ ತಾಃ ಜೇವರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ಒಟ್ಟು 7100/- ರೂ, ಮತ್ತು 52 ಇಸ್ಪೀಟ್ಎಲೆಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಜೇವರಗಿ ಠಾಣೆ : ದಿನಾಂಕ10/01/2020 ರಂದು ಮುಂಜಾನೆ ಜೇವರಗಿ ಠಾಣಾ ವ್ಯಾಪ್ತಿಯ ಗಂವ್ಹಾರ ಗ್ರಾಮದಲ್ಲಿ ಅಖೈನಿಸಾಬ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿರುತ್ತಾನೆಂದು ಖಚಿತ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿ.ಐ ಸಾಹೇಬ ಜೇವರಗಿ ಮತ್ತು ಮಾನ್ಯ ಡಿ.ಎಸ್.ಪಿ ಸಾಹೇಬರು ಗ್ರಾಮೀಣ ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಗಂವ್ಹಾರ ಗ್ರಾಮ ತಲುಪಿ ಬಾತ್ಮೀ ಬಂದ ಸ್ಥಳ ತಲುಪಿದ ನಂತರ ಸ್ವಲ್ಪ ದೂರದಲ್ಲಿ ಹೊಟೇಲ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಅಖೈನಿಸಾಬ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು 1/- ರುಪಾಯಿಗೆ 80/- ರೂಪಾಯಿ ಗೆಲ್ಲಿರಿ ಭಾಗ್ಯ ಲಕ್ಷ್ಮೀ ನಿಮ್ಮ ಮನೆಗೆ ಬರುತ್ತಾಳೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಅಂಕಿ ಸಂಖ್ಯೆಯುಳ್ಳ ಮಟಕಾ ಚೀಟಿ ಬರೆದುಕೊಡುತ್ತಿದ್ದನು. ನಾವು ಸದರಿ ವ್ಯೆಕ್ತಿ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಬರೆಯಿಸಲು ಬಂದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು.  ಸದರ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಒಬ್ಬನಿಗೆ ನಾವು ಬೆನ್ನು ಹತ್ತಿ ಹಿಡಿದು ಅವನ ಹೆಸರು ವಿಳಾಸ ಕೇಳಲಾಗಿ ಅವನು ತನ್ನ ಹೆಸರು ಅಬ್ದುಲ್ ಬಾಷಾ ತಂದೆ ಖಾಜಾ ಹುಸೇನಿ ಅಕ್ಕಲಕೊಟ ಸಾ// ಸಾ: ಗಂವ್ಹಾರ, ತಾ// ಜೇವರಗಿ ಅಂತಾ ಹೇಳಿದನು ಅವನಿಗೆ ಅಂಗಶೋದನೆ ಮಾಡಲಾಗಿದೆ ಅವನ ಹತ್ತಿರ ನಗದು ಹಣ 450-/-ರೂ, ಒಂದು ಮಟಕಾ ಚೀಟಿ ಅ.ಕಿ=00 ಒಂದು, ಬಾಲ್ ಪೆನ್ ಸಿಕ್ಕಿದ್ದು ಅ.ಕಿ=00 ಸಿಕ್ಕಿದ್ದು ಸದರಿಯವುಗಳನ್ನು ವಶಕ್ಕೆ ಪಡೆದು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿದವರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ಶ್ರೀ ಮೋದಿನ ತಂದೆ ಮಹೇಬೂಬಸಾಬ ಭಾಗವಾನ ಆರ್.ಐ ಕರಜಗಿ ರವರು ದಿನಾಂಕ 10-01-2020 ರಂದು ಬೆಳಿಗ್ಗೆ 11:00 ಗಂಟೆಗೆ ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರೊಂದಿಗೆ ನಾನು ಮತ್ತು ಮಣೂರ ಗ್ರಾಮ ಸಹಾಯಕರಾದ ನಂದೇಶ ತಂದೆ ನಾಗಪ್ಪ ಪ್ಯಾಟಿ ಹಾಗೂ ಮಲ್ಲಿಕಾರ್ಜುನ ತಂದೆ ಗುರಣ್ಣ ಜಮಾದಾರ ಎಲ್ಲರೂ ಕೂಡಿ ಮಣೂರ ಗ್ರಾಮಕ್ಕೆ ಬೇಟ್ಟಿ ನೀಡಿದಾಗ ಶ್ರೀ ಚನ್ನಗೊಂಡ ತಂದೆ ದ್ಯಾವಪ್ಪ ಬಗಲಿ ಸಾ|| ಮಣೂರ ಇವರು ತಮ್ಮ ಹೊಲ ಸರ್ವೆ ನಂ 837/3 ನೇದ್ದರಲ್ಲಿ ಅಂದಾಜು 200 ಮೆಟ್ರಿಕ್ ಟನ್ ಮರಳನ್ನು (ಅಕಿ- 2 ಲಕ್ಷ ರೂಪಾಯಿ) ಅಕ್ರಮವಾಗಿ ಸಂಗ್ರಹಿಸಿದ್ದು, ಸದರಿ ಮರಳನ್ನು ಮಾನ್ಯ ತಹಸಿಲ್ದಾರ ಸಾಹೇಬರ ಸಮ್ಮುಖದಲ್ಲಿ ಪಂಚರಾದ ನಂದೇಶ ತಂದೆ ನಾಗಪ್ಪ ಪ್ಯಾಟಿ ಗ್ರಾಮ ಸಹಾಯಕ ಮಣೂರ ಹಾಗೂ ಮಲ್ಲಿಕಾರ್ಜುನ ತಂದೆ ಗುರಣ್ಣ ಜಮಾದಾರ ಗ್ರಾಮ ಸಹಾಯಕ ಮಣೂರ ರವರ ಸಮಕ್ಷಮ 11:15 ಎ ಎಮ್ ದಿಂದ 12:15 ಪಿ ಎಮ್ ವರೆಗೆ ಜಪ್ತ ಮಾಡಿಕೊಂಡು, ಸದರಿ ಜಪ್ತ ಮಾಡಿಕೊಂಡ ಮರಳನ್ನು ಪಿ.ಡಬ್ಲ್ಯೂ.ಡಿ ಇಲಾಖೆ ಅಫಜಲಪೂರ ರವರ ಹಸ್ತಾಂತರಕ್ಕೆ ಒಪ್ಪಿಸಲಾಗಿದೆ. ನಂತರ ಮಾನ್ಯ ತಹಸಿಲ್ದಾರ ಸಾಹೇಬರ ಮೌಖಿಕ ಆದೇಶದ ಮೇರೆಗೆ ಸದರಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಹೊಲ ಸರ್ವೆ ನಂ 837/3 ನೇದ್ದರ ಮಾಲಿಕನಾದ ಶ್ರೀ ಚನ್ನಗೊಂಡ ತಂದೆ ದ್ಯಾವಪ್ಪ ಬಗಲಿ ಸಾ|| ಮಣೂರ ರವರ ಮೇಲೆ ಕಾನೂನು ಕ್ರಮ ಜರೂಗಿಸಲು ದೂರು ಸಲ್ಲಿಸಲಾಗಿದೆ. ಕಾರಣ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಈ ಮೇಲೆ ತಿಳಿಸಿದ ಹೊಲ ಸರ್ವೆ ನಂ 837/3   ನೇದ್ದರ ಪಟ್ಟೆದಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಧಾನಮ್ಮ @ ಆರಾಧ್ಯಣ ಗಂಡ ಭಿಮಾಶಂಕರ ಸಾಬನಿ ಸಾ||ಉಮದಿ ತಾ||ಜತ್ತ ಜಿ||ಸಾಂಗ್ಲಿ ರವರ ತಂದೆಯಾದ ಶರಣಬಸಪ್ಪ ತಂದೆ ಶಿವಣ್ಣ ಮಲಘಾಣ ಇವರು ದಿನಾಂಕ:27-01- 2019 ರಂದು ಉಮದಿ ಗ್ರಾಮದ ಭಿಮಾಶಂಕರ ತಂದೆ ಮಲ್ಲಿಕಾರ್ಜುನ ಸಾಬನಿ ಇವರೊಂದಿಗೆ ಮಾಶಾಳ ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ.   ಮದುವೆ ಕಾಲಕ್ಕೆ ನಮ್ಮ ತಂದೆವರು ನನ್ನ ಗಂಡನ ಮನೆಯವರಿಗೆ 02 ತೋಲಿ ಬಂಗಾರ ವರದಕ್ಷಿಣೆ ಅಂತ ಕೊಟ್ಟು 15 ಲಕ್ಷ ರೂಪಾಯಿವರೆಗೆ ಹಣ ಖರ್ಚುಮಾಡಿ ಮಾಡಿಕೊಟ್ಟಿರುತ್ತಾರೆ ನನ್ನ ಗಂಡ ಪೂಣಾ ಜಿಲ್ಲೆಯಲ್ಲಿ ವೇಂದಕೀನ್ ಎಂಬ ಕಂಪನಿಯಲ್ಲಿ ಸಾಫ್ಟವೇರ ಇಂಜೀನಿಯರ  ಅಂತಾ ಕೆಲಸ ಮಾಡಿಕೊಂಡಿದ್ದು ಅಲ್ಲೆ ಒಂದು ಬಾಡಿಗೆ ಮನೆ ಮಾಡಿರುತ್ತಾನೆ. ಮದುವೆಯಾದ 1 ವಾರದವರೆಗೆ  ನನ್ನ ಗಂಡ ಮತ್ತು ಅತ್ತೆಮಾವರವರು ಉಮದಿ ಗ್ರಾಮದಲ್ಲಿ ನನ್ನನ್ನು ಚನ್ನಾಗಿ ನೊಡಿಕೊಂಡಿರುತ್ತಾರೆ ನಂತರ ಸ್ವಲ್ಪ ದಿನಗಳಾದ ನಂತರ ನಾನು ಮತ್ತು ಅತ್ತೆಯವರು ಪೂಣಾಕ್ಕೆ ಹೋಗಿರುತ್ತೇವೆ ಪೂಣಾಕ್ಕೆ ಹೋದ 2-3 ದಿನಗಳ ಕಾಲ ನನ್ನನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆ ನಂತರ ಅವರು ಮತ್ತು ನನ್ನ ಗಂಡ ಕೂಡಿ ನೀನು ನೋಡಲು ಚೆನ್ನಾಗಿಲ್ಲ ನಿನಗೆ ಅಡುಗೆ ಮಾಡಲು ಬರುವದಿಲ್ಲ ನಿನ್ನ ಅಪ್ಪ ಮದುವೆ ಸಮಯದಲ್ಲಿ ನಮ್ಮ ಮನೆತನಕ್ಕೆ ತಕ್ಕಂತೆ ವರದಕ್ಷಣೆ ಕೋಟ್ಟಿಲ್ಲವೆಂದು ನನ್ನ ಗಂಡನ ಮನೆಗೆ ಬಂದ ನನ್ನ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಮಾಡಿ ನನಗೆ ಮತ್ತು ನನ್ನ ತಂದೆಗೆ ಮನೆಯಿಂದ ಆಚೆ ಹಾಕಿರುತ್ತಾರೆ  2 ಲಕ್ಷ ರೂಪಾಯಿ ತಗೆದುಕೊಂಡು ಬಂದರೆ ನಮ್ಮ ಮನೆಗೆ ಬಾ ಇಲ್ಲಂದರೆ ಬರಬೇಡ ಎಂದು ಹೇಳಿದರು ನಂತರ ನಾವು ನಮ್ಮ ಗ್ರಾಮಕ್ಕೆ ಬಂದೆವು ನಾನು ನಡೆದ ಘಟೆನೆ ಬಗ್ಗೆ ನಮ್ಮ ತಂದೆ ತಾಯಿಯ ಮುಂದೆ ಹೇಳಿದಾಗ ನನ್ನ ತಂದೆಯವರು ನಮ್ಮ ಗ್ರಾಮದ ಶಿವಪುತ್ರಪ್ಪ ಜಿಡ್ಡಗಿ,ತುಕಾರಾಮ ಹೂಗಾರರವರಿಗೆ ಮತ್ತು ಪಂಡಿತ ತಂದೆ ಮಲ್ಲಪ್ಪ ನಾವಿ ಕೀರು ಪೂಜಾರಿ ಇವರೆಲ್ಲರಿಗೂ ಕರೆದು ಅವರಿಗೆ ವಿಷಯ ತಿಳಿಸಿ ನನ್ನ ಗಂಡನ ಮತ್ತು ಮನೆಯವರಿಗೆ ಉಮದಿ ಗ್ರಾಮಕ್ಕೆ ಕರೆಯಿಸಿ ಅಲ್ಲಿ ನ್ಯಾಯ ಪಂಚಾಯತಿ ಮಾಡಿದರು ನಂತರ ಸ್ವಲ್ಪ ದಿನಗಳ ನಂತರ ನಾನು ಮತ್ತೆ ಗಂಡನ ಮನೆಗೆ ಹೋದೆನು. ನನ್ನ ಗಂಡನ ಮನೆಯವರು ಮತ್ತೆ ಮೊದಲಿನಿಗಿಂತ ಹೆಚ್ಚಾಗಿ ನನ್ನ ಅತ್ತೆಯಾದ ವಿಜಯ ಮತ್ತು ಮಾವ ಮಲ್ಲಿಕಾರ್ಜುನ ಹಾಗೂ ಗಂಡ ದಿನಾಲು ನೀನು 2 ಲಕ್ಷ ರೂಪಾಯಿ ತರದೆ ನಮ್ಮ ಮನೆಗೆ ಯಾಕೆ ಬಂದೆ ಎಂದು ದಿನಾಲು ಬೈಯುತ್ತ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಗಂಡನು ದೈಹಿಕವಾಗಿ ನೀಣು ನೋಡಲು ಚೆನ್ನಾಗಿಲ್ಲವೆಂದು ಹಣ ತಂದಿಲ್ಲವೆಂದು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದನು ಇದನ್ನು ತಾಳಲಾರದೆ ನಾನು ಮತ್ತೆ ನಮ್ಮ ಗ್ರಾಮಕ್ಕೆ ಬಂದೆನು.ದಿನಾಂಕ 11-08-2019 ರಂದು ನಮ್ಮ ಗ್ರಾಮವಾದ ಮಾಶಾಳ ಗ್ರಾಮಕ್ಕೆ ನಮ್ಮ ಅತ್ತೆ ಮಾವ ಗಂಡ ಮತ್ತು ಭಾವ ಎಲ್ಲರು ಬಂದು ನೀನು 2 ಲಕ್ಷ ತಗೆದುಕೊಂಡು ನಮ್ಮ ಮನೆಗೆ ಬಾ ಇಲ್ಲಂದರೆ ಇಲ್ಲೆ ಇರು ಎಂದು ಬೈದು ಹೋಗಿರುತ್ತಾರೆ   ಕಾರಣ ನನಗೆ ಸರಿಯಾಗಿ ನೋಡಿಕೊಳ್ಳದೆ ದೈಹಿಕ ಮತ್ತು ಮಾನಸಿಕ ಹಿಂಸೆಕೊಟ್ಟು ವರದಕ್ಷೀನೆ ಕಿರುಕುಳ ಕೊಟ್ಟ ನನ್ನ ಗಂಡನಾದ ಭೀಮಾಶಂಖರ ಮತ್ತು ಅತ್ತೆಯಾದ ವಿಜಯಾ ಹಾಗೂ ಭಾವನಾದ ವಿಶ್ವನಾಥ ತಂದೆ ಮಲ್ಲಿಕಾರ್ಜುನ ಸಾಬನಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬಸಮ್ಮ ಗಂಡ ಅರ್ಜುನ ಕಾಮಶೇಟ್ಟಿ ಸಾ||ನಂದರ್ಗಿ ಗ್ರಾಮ ತಾ||ಅಫಜಲಪೂರ ರವರ ಗಂಡ ಅರ್ಜುನ ತಂದೆ ಭೀಮಶ್ಯಾರ ಕಾಮಶೇಟ್ಟಿ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಇರುತ್ತದೆ ನಂದರ್ಗಿ ಸಿಮಾಂತರದಲ್ಲಿ ನನ್ನ ಗಂಡ ಹಾಗೂ ನನ್ನ ಹಿರಿಯ ಮಗನಾದ ಚಂದ್ರಶ್ಯಾ ಇವರ ಹೆಸರಿನಲ್ಲಿ 5 ಎಕರೆ ಜಮೀನು ಇರುತ್ತದೆ ಸದರಿ ಜಮೀನಿನ ಒಕ್ಕಲುತನ ಕೆಲಸ ನನ್ನ ಗಂಡನೆ ನಿರ್ವಹಣೆ ಮಾಡಿಕೊಂಡಿರುತ್ತಾನೆ  ನಾವು ಆರ್ಥಿಕವಾಗಿ ಹಿಂದುವುಳಿದಿದ್ದು ನನ್ನ ಗಂಡನು ಒಕ್ಕಲುತನದ ಸಲುವಾಗಿ ಅಫಜಲಪೂರದ ಕೆ,ಜಿ,ಬಿ.ಬ್ಯಾಂಕಿನಲ್ಲಿ 2009 ನೇ ಸಾಲಿನಲ್ಲಿ 90 ಸಾವೀರ ರೂಪಾಯಿ ಸಾಲ ಮಾಡಿರುತ್ತಾನೆ ನಮ್ಮ ಹೊಲದಲ್ಲಿ ಬೇಳೆಯ ಉತ್ಪಾದನೆ ಸರಿಯಾಗಿ ಬರದ ಕಾರಣ ನನ್ನ ಗಂಡನಿಗೆ ಸದರಿ ಸಾಲ ಮರುಪಾವತಿಸಲು ಆಗಿರುವದಿಲ್ಲ ಮತ್ತು ಅಲ್ಲದೆ ನನ್ನ ಗಂಡನು ಖಾಸಗಿಯಾಗಿ ಕೂಡ ನಮ್ಮ ಗ್ರಾಮದಲ್ಲಿ ಮತ್ತು ನಮ್ಮ ಸಂಬಂಧಿಕರಲ್ಲಿ ಸಾಲ ಮಾಡಿರುತ್ತಾನೆ.ಇತ್ತಿಚಿನ ದಿನಗಳಲ್ಲಿ ನನ್ನ ಗಂಡನು ತಾನು ಮಾಡಿದ ಸಾಲ ಮರುಪಾವತಿಸುವದು ಹೇಗೆ ಎಂದು ಚಿಂತೆಗಿಡಾಗಿದ್ದನು ಹಲವಾರು ಬಾರಿ ನಾನು ಮತ್ತು ನನ್ನ ಮಕ್ಕಳು ಮತ್ತು ನಮ್ಮ ಮನೆಯ ಅಕ್ಕಪಕ್ಕದವರು ಕೂಡಿಕೊಂಡು ನನ್ನ ಗಂಡನಿಗೆ ಈ ವರ್ಷ ಆಗದಿದ್ದರು ಮುಂದಿನ ವರ್ಷದಲ್ಲಿ ಬೇಳೆಯ ಮೇಲೆ ಸಾಲ ತಿರಿಸಿದರಾಯಿತು ಚಿಂತೆ ಮಾಡಬೇಡ ಅಂತ ಬುದ್ದಿವಾದ ಹೇಳಿರುತ್ತೇವೆ.       ಹೀಗಿದ್ದು ನಿನ್ನೆ ರಾತ್ರಿ 9-00 ಪಿ,ಎಮ್,ಸುಮಾರಿಗೆ ನಾನು ನನ್ನ ಗಂಡ ಮತ್ತು ನನ್ನ ಎರಡು ಮಕ್ಕಳೂ ಮತ್ತು ನಮ್ಮ ಸೊಸೆಯಂದಿರರು ಕೂಡಿ ಉಟ ಮಾಡುತ್ತಿರುವಾಗ ನನ್ನ ಗಂಡನು ಇವತ್ತಿಗೆ ನಂದು ಮುಗಿತು ಇನ್ನು ಮುಂದೆ ಎಲ್ಲಾ ಭಾರ ಹಿರಿಯ ಮಗನ ಮೇಲೆ ಬಿಳುತ್ತಾದ ಅಂತ ಅನ್ನಲು ಸುರುಮಾಡಿದನು ಆಗ ನಾವೆಲ್ಲರು ಬೈದು ಸುಮ್ಮನಿರು ಅಂತ ಹೇಳಿರುತ್ತವೆ ನಿನ್ನೆ ರಾತ್ರಿ 9-30 ಗಂಟೆಗೆ ಊಟ ಮಾಡಿ ನಾವೆಲ್ಲರು ಮಲಗಿಕೊಂಡಿರುತ್ತೆವೆ ನಂತರ ರಾತ್ರಿ ನಾನು 11-30 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಎದ್ದಾಗ  ನನ್ನ ಗಂಡನು ನನ್ನ ಹತ್ತಿರ ಮಲಗಿದ ಜಾಗದಿಂದ ಎದ್ದು ಪಕ್ಕದ ಕೊಣೆಯಲ್ಲಿ ಹೋಗಿ ಅಂಗಾತವಾಗಿ ಬಿದ್ದಿದ್ದನು ನಾನು ಹತ್ತೀರ ಹೋಗಿ ನೋಡಿದಾಗ ಕ್ರೀಮಿನಾಶಕ ಔಷಧಿ ವಾಸನೆ ಬರುತ್ತಿತ್ತು ಪಕ್ಕದಲ್ಲಿ ತೋಗರಿಗೆ ಹೋಡೆಯುವ ಔಷದಿ ಡಬ್ಬಿ ಬಿದ್ದಿತ್ತು ನಂತರ ನಾನು ನನ್ನ ಮಕ್ಕಳಿಗೆ ಮತ್ತು ಬಾಜು ಮನೆಯವರಾದ 1)ಚನ್ನಬಸಯ್ಯ ತಂದೆ ಸಿದ್ಯಯ್ಯ ಹೀರೆಮಠ 2)ಸಿದ್ರಾಮಪ್ಪ ತಂದೆ ಚಂದ್ರಶ್ಯಾ ರೇವೂರ ಕರೆಯಿಸಿ ನೋಡಲಾಗಿ ನನ್ನ ಗಂಡನು ಮೃತಪಟ್ಟಿದ್ದನು ನನ್ನ ಗಂಡನು ಒಕ್ಕಲುತನದ ಸಲುವಾಗಿ ಮಾಡಿದ ಸಾಲ ಮರುಪಾವತಿಸುವದು ತನ್ನಿಂದಾಗುವದಿಲ್ಲ ಅಂತ ಚಿಂತೆಗಿಡಾಗಿ ಮನನೊಂದು ನಮ್ಮ ಮನೆಯವರೆಲ್ಲ ಮಲಗಿದ್ದಾಗ ಸಮಯ ನೋಡಿ ದಿನಾಂಕ:08/01/2020 ರಂದು 9-30 ಪಿ,ಎಮ್,ದಿಂದ 11-30 ಪಿ,ಎಮ್. ಮದ್ಯದ ಅವದಿಯಲ್ಲಿ ತೊಗರಿಗೆ ಹೊಡೆಯುವ ಎಣ್ಣಿ ಕುಡಿದು ಆತ್ಮ ಹತ್ಯೆ  ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: