Police Bhavan Kalaburagi

Police Bhavan Kalaburagi

Saturday, January 18, 2020

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕ್ರೀಷ್ಟಿನಾ ತಂದೆ ರಮೇಶ ಹಿಪ್ಪಳಗಾಂವ ಸಾ: ಹಿಪ್ಪಳಗಾಂವ ತಾ: ಬೀದರ ಹಾ:ವ:ಅಫಜಲಪೂರ ತಮ್ಮ ಗೆಳತಿಯರಾದ  ರೂತ ಮತ್ತು ರೈಚಲ್ ಇವರೊಂದಿಗೆ ಅಫಜಲಪೂರದಲ್ಲಿ ಬಾಡಿಗೆ ಮನೆ ಹಿಡೆದು ಶ್ರೀ ಗುರು ಮಳೇಂದ್ರ ಶೀಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾವು ದಿನಾಲು ಮುಂಜಾನೆ ನನ್ನ ಗೆಳತಿಯರೊಂದಿಗೆ ವ್ಯಾಯಾಮಕ್ಕೆ ಹೋಗುವುದು ಅಬ್ಯಾಸ ಇರುತ್ತದೆ. ದಿ: 13-01-2020 ರಂದು 6:00 ಎ.ಎಮ್ ರಂದು ನಾನು ಎಂದಿನಂತೆ ನನ್ನ ಗೆಳತಿಯರೊಂದಿಗೆ ಅಫಜಲಪೂರ/ವಿಜಯಪೂರ ರೋಡ ಮೇಲೆ ವಾಕಿಂಗಕ್ಕೆ ಹೋಗುತ್ತಿದ್ದಾಗ ಅಫಜಲಪೂರ ಹಳೆ ಕೋರ್ಟ ಹತ್ತಿರ ರೋಡಿನ ಮೇಲೆ ಕರಜಗಿ ಕ್ರಾಸ್ ದಿಂದ ಮರಳಿ ಅಫಜಲಪೂರಕ್ಕೆ ಬರುವಾಗ ಅಫಜಲಪೂರ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಗುದ್ದಿದ್ದರಿಂದ ನಾನು ಒಮ್ಮೆಲೆ ನೆಲಕ್ಕೆ ಬಿದ್ದಾಗ ಮೋಟಾರ ಸೈಕಲ್ ಚಾಲಕನು ಮೋಟಾರನ್ನು ನನ್ನ ಎಡಗಾಲಿನ ಮೇಲೆ ಹಾಯಿಸಿಕೊಂಡು ಹೋಗಿದ್ದು ನನ್ನ ಎಡಗಾಲಿಗೆ ಭಾರಿ ರಕ್ತಗಾಯ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ. ಎಡಗೈ ಮುಂಗೈಗೆ ತರಚಿದ ರಕ್ತಗಾಯವಾಗಿರುತ್ತದೆ. ನಾನು ಕೆಳಗಡೆ ಬಿದ್ದಾಗ ನನ್ನ ಗೆಳತಿಯಾದ ರೂತ ತಂದೆ ರಮೇಶ ನನಗೆ ಡಿಕ್ಕಿ ಪಡೆಸಿದ ಮೋಟಾರ ಸೈಕಲ್ ನಂಬರ ನೋಡಲಾಗಿ ಎಮ್.ಹೆಚ್-13-ಸಿ-ಹೆಚ್-1639 ಅಂತಾ ಇದ್ದುದ್ದು ಸದರಿಯವರ ಹೆಸರು ಗೊತ್ತಿರುವುದಿಲ್ಲಾ ನೋಡಿದರೆ ಗುರುತಿಸುತ್ತೇನೆ. ನಾನು ಬಿದ್ದು ಒದ್ದಾಡುವುದನ್ನು ನೋಡಿದ ನನ್ನ ಗೆಳತಿ ಬೇರೆಯವರ ಸಹಾಯದಿಂದ ಖಾಸಗಿ ಆಸ್ಪತ್ರೆ ಅಫಜಲಪೂರದಲ್ಲಿ ಸೇರಿದ್ದು ಹೆಚ್ಚಿನ ಉಪಚಾರಕ್ಕೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಸೇರಿಕೆಯಾಗಿ ಇನ್ನು ಹೆಚ್ಚಿನ ಉಪಚಾರಕ್ಕೆ 108 ವಾಹನದಲ್ಲಿ ಹಾಕಿಕೊಂಡು ಚಿರಾಯು ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ  ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ತಂದೆ ಭೀಮಶಾ ತೆಲ್ಕರ ಸಾ: ಗುಡ್ಡೇವಾಡಿ ರವರು ದಿನಾಂಕ 16-01-2020 ರಂದು ದೇಸಾಯಿ ಕಲ್ಲೂರ ಗ್ರಾಮದಲ್ಲಿ ಮೇಲಿನ ಮಠದ ಜಾತ್ರೆ ಇದ್ದ ಪ್ರಯುಕ್ತ ನಾನು ಗುಡ್ಡೇವಾಡಿ ಗ್ರಾಮದಿಂದ ದೇಸಾಯಿ ಕಲ್ಲೂರಿಗೆ ನಡೆದುಕೊಂಡು ಹೊಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ರಾಯಪ್ಪ ಪೂಜಾರಿ ಇವರ ಹೊಲದ ಹತ್ತಿರ 4:00 ಎ.ಎಮ್ ಸುಮಾರಿಗೆ ದೇಸಾಯಿ ಕಲ್ಲೂರ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿದ್ದು ಆಗ ನಾನು ಕೆಳಗೆ ಬಿದ್ದಾಗ ಸದರಿ ಮೋಟಾರ ಸೈಕಲ್  ನನ್ನ ಎಡಕಾಲಿನ ತೊಡೆಯ ಮೇಲೆ ಹಾಯಿದಿರುತ್ತದೆ ಅದೆ ಸಮಯಕ್ಕೆ ಕಾರ್ಖಾನೆಗೆ ಹೋಗುತ್ತಿದ್ದ ಮಡಿವಾಳ ವರಗಿ ರವರು ನನಗೆ ನೋಡಿ ಎಬ್ಬಿಸಿದ್ದು ನನಗೆ ಅಪಘಾತ ಪಡೆಸಿದ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ನನಗೆ ಹಾಯಿಸಿದಾಗ ಮೋಟಾರ ಸೈಕಲ್ ಬಂದು ಬಿದ್ದಿದ್ದು ಆಗ ನಾನು ಮತ್ತು ಮಡಿವಾಳ ಅದರ ನಂಬರ ನೋಡಲಾಗಿ ಹಿರೋ ಹೊಂಡಾ ಸಿ.ಡಿ 100  ಕೆಎ-32-ಕೆ-8533 ಅಂತಾ ಇರುತ್ತದೆ ನಂತರ ನನಗೆ ಅಪಘಾತವಾದ ವಿಷಯವನ್ನು ಮಡಿವಾಳ ರವರು ನನ್ನ ತಮ್ಮ ಶಿವಲಿಂಗಪ್ಪ ರವರಿಗೆ ತಿಳಿಸಿದ್ದರಿಂದ ನನ್ನ ತಮ್ಮ ಮತ್ತು ಅಳಿಯ ರಾಜು ರವರು ಬಂದು ನನಗೆ ಕಲಬುರಗಿಗೆ ತಂದು ಪಿ.ಜಿ ಶಾಹಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: