ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-02-2020
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 279, 337, 338
ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 09-02-2020 ರಂದು ಫಿರ್ಯಾದಿ ಶ್ರೀಕಾಂತ ತಂದೆ ಘಾಳೆಪ್ಪಾ ಔಟಗೆ ವಯ: 18 ವರ್ಷ, ಜಾತಿ: ಕುರುಬ, ಸಾ: ಕುತ್ತಾಬಾದ ರವರು ತಮ್ಮೂರ ಮಾರುತಿ ತಂದೆ ನರಸಪ್ಪಾ ಬೀರಗೊಂಡ ವಯ: 18 ವರ್ಷ, ಸತೀಷ ತಂದೆ ಝೆರೆಪ್ಪಾ ಭಾಲ್ಕೆ ವಯ: 20 ವರ್ಷ, ಮತ್ತು ದೀಪಕ ತಂದೆ
ಧನರಾಜ ಹಿರೆಮನಿಕರ ವಯ: 19 ವರ್ಷ ಎಲ್ಲರು ದೀಪಕ ರವರ ಮೋಟಾರ ಸೈಕಲ ನಂ. ಕೆಎ-38/ಎಚ್-8203 ನೇದರ ಮೇಲೆ ತಮ್ಮೂರಿನಿಂದ ವೆಟರನರಿ ಕಾಲೇಜನಲ್ಲಿ ಕಾರ್ಯಕ್ರಮ ನೋಡಲು ಬರುತ್ತಿರುವಾಗ ಮೊಟಾರ
ಸೈಕಲನ್ನು ದೀಪಕ ಇತನು ಚಲಾಯಿಸುತ್ತಿದ್ದು, ಎಲ್ಲರೂ ಕುತ್ತಾಬಾದ - ಯದಲಾಪೂರ ಮದ್ಯ ಬಂದಾಗ
ಎದುರಿನಿಂದ ಆಟೋ ನಂ. ಕೆಎ-38/9379 ನೇದರ ಚಾಲಕನಾದ ಆರೋಪಿ ಗಣಪತಿ ತಂದೆ ಮಾರುತಿ ಸಾ:
ಕುತ್ತಾಬಾದ ಇತನು ತನ್ನ ಆಟೋವನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ
ಬಲಗಾಲ ಮೋಳಕಾಲಿಗೆ ಭಾರಿ ರಕ್ತಗಾಯಗಿರುತ್ತದೆ ಮತ್ತು ಮಾರುತಿ ತಂದೆ ನರಸಪ್ಪಾ ಇತನಿಗೆ ಬಲಗಾಲ ತೊಡೆಗೆ
ಮತ್ತು ಪಾದಕ್ಕೆ ಸಾದಾ ರಕ್ತಗಾಯವಾಗಿರುತ್ತದೆ, ಅಲ್ಲದೆ ದೀಪಕ ಇತನಿಗೆ ಬಲಗೈ ಮೋಳಕೈ ಹತ್ತಿರ, ಬಲಗಾಲ
ಮೋಳಕಾಲಿಗೆ ರಕ್ತಗಾಯ ಮತ್ತು ಬಲಗಾಲ ಪಾದಕ್ಕೆ ಭಾರಿ ಗಾಯವಾಗಿದ್ದು ಇರುತ್ತದೆ ಮತ್ತು ಸತೀಷನಿಗೆ
ಸಣ್ಣಪುಟ್ಟ ಗಾಯವಾಗಿರುತ್ತದೆ, ಅಪಘಾತ ಪಡಿಸಿದ ಆರೋಪಿಯು ತನ್ನ ಆಟೋ ನಿಲ್ಲಿಸಿ ಓಡಿ
ಹೋಗಿರುತ್ತಾನೆ, ಕೂಡಲೇ ಎಲ್ಲರು ಚಿಕಿತ್ಸೆಗೆ 108 ಅಂಬುಲೆನ್ಸದಲ್ಲಿ
ಬೀದರ ಸರಕಾರಿ ಆಸ್ಪತ್ರಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ
ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 18/2020, ಕಲಂ. 279, 337, 338
ಐಪಿಸಿ :-
ದಿನಾಂಕ 09-02-2020 ರಂದು ಫಿರ್ಯಾದಿ ಎಮ್.ಡಿ ಷರೀಫ ತಂದೆ ಎಮ್.ಡಿ ಹಸನಭಾಯಿ ಸೈಯದ ಸಾ: ತೋಫ ಗಲ್ಲಿ, ಸದ್ಯ: ಫಕೀರ ಟೆಕಡಾ ಹುಮನಾಬಾದಹ
ರವರು ಸಲ್ಮಾನಶಾ ತಂದೆ ತಜಮುಲ್ಲಾಶಾ ದರವೇಶ ಹಾಗು ಎಮ್.ಡಿ ಖಮ್ರಾನಶಾ ತಂದೆ ಇರ್ಫಾನಶಾ ರವರುಗಳೊಂದಿಗೆ ಮಾತನಾಡುತ್ತಾ ಫಕೀರ
ಟೆಕಡಾದಲ್ಲಿ ನಿಂತಾಗ ಫಿರ್ಯಾದಿಯವರ ಪತ್ನಿ ಫರ್ಜಾನಾಬೇಗಂ ಇವಳು ಒಂದುವರೆ ವರ್ಷದ ಮಗ ಸೂಫಿಯಾನ ಹಸನ ಇವನಿಗೆ ಎತ್ತಿಕೊಂಡು ಬಜಾರ ಮಾಡಲು ಮನೆಯಿಂದ ಹುಮನಾಬಾದಕ್ಕೆ ಬಂದು ಬಜಾರ ಮಾಡಿಕೊಂಡು ಮರಳಿ ಮನೆಗೆ ಬರುವ ಪ್ರಯುಕ್ತ ಆಟೋದಲ್ಲಿ ಕುಳಿತುಕೊಂಡು ಫಕೀರ ಟೆಕಡಕ್ಕೆ ಬಂದು ಆಟೋದಿಂದ ಕೆಳಗಡೆ ಇಳಿದು ರೋಡ ಕ್ರಾಸ್ ಮಾಡುತ್ತಿದ್ದಾಗ ಅದೇ ವೇಳೆಗೆ ರಾ.ಹೆ-65 ರ ಮೇಲೆ ಹುಡಗಿ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ್ ಸಂ.
ಕೆಎ-39/ಕೆ-1861 ನೇದರ ಚಾಲಕನಾದ ಆರೋಪಿ ನಾಗಪ್ಪಾ ತಂದೆ ದಶರಥ ಸಾ: ಸೀತಾಳಗೇರಾ ಇವನು ತನ್ನ ಮೋಟಾರ್ ಸೈಕಲ್ ನೇದರ ಮೇಲೆ ವಿಜಯಕುಮಾರ ತಂದೆ ದಶರಥ ಸಾ: ಸೀತಾಳಗೇರಾ ಇವನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು
ಅತಿ ಜೋರಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಪತ್ನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾರೆ,
ಫಿರ್ಯಾದಿಯು ಹೋಗಿ
ತನ್ನ ಪತ್ನಿಗೆ ನೋಡಲಾಗಿ ಅವಳ ಬಲಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾಯ,
ತಲೆಯ ಹಿಂದೆ ರಕ್ತಗಾಯ ಮತ್ತು ಬಲಗೈ ಮುಂಗೈಗೆ ತರಚಿದ ಗಾಯಗಳು ಆಗಿರುತ್ತವೆ,
ಮಗ ಸೂಫಿಯಾನ ಹಸನ ಇವನಿಗೆ ಎಡಗಾಲ ಕಪ ಗಂಡಕ್ಕೆ ಗುಪ್ತಗಾಯವಾಗಿರುತ್ತದೆ, ಮೋಟಾರ್ ಸೈಕಲ್ ಚಾಲಕ ಆರೋಪಿ ನಾಗಪ್ಪಾ ಇವನಿಗೆ ಮೂಗಿದೆ
ಎಡಗಾಲ ಮೊಣಕಾಲ ಕೆಳಗೆ ರಕ್ತಗಾಯಗಳು ಆಗಿರುತ್ತವೆ,
ವಿಜಯಕುಮಾರ ಇವನಿಗೆ ಎಡಗೈ ಮೊಣಕೈ ಕೆಳಗೆ,
ಎಡಗಾಲ ಮೊಣಕಾಲಗೆ,
ಬಲಗೈ ಮೊಣಕೈಗೆ, ಬಲಗಾಲ ಮೊಣಕೈ ಕೆಳಗೆ ತರಚಿದ ಗಾಯಗಳು ಆಗಿರುತ್ತವೆ,
ನಂತರ ಮೂವರಿಗೆ ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ
ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 21/2020, ಕಲಂ. 279, 338 ಐಪಿಸಿ :-
ದಿನಾಂಕ
09-02-2020 ರಂದು ಫಿರ್ಯಾದಿ ಸೂರ್ಯ ಕಾಂತ ತಂದೆ ವೈಜಿನಾಥ
ಕೊರೆ, ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕೌಠಾ (ಬಿ),
ತಾ: ಔರಾದ, ಸದ್ಯ: ಮೈಲೂರ ಬೀದರ ರವರ ಮಗನಾದ ಅಭಿಷೆಕ ತಂದೆ ಸೂರ್ಯಕಾಂತ ವಯ: 21 ವರ್ಷ ಈತನು
ಮೊಟಾರ ಸೈಕಲ ನಂ. ಕೆಎ-38/ಎಲ್-1204 ನೇದ್ದನ್ನು ಕೋಳಾರ ಕಡೆಯಿಂದ ಬೀದರ ಕಡೆಗೆ ಅತೀವೇಗ ಹಾಗು
ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಎದುರುನಿಂದ ಅಂದರೆ ನೌಬಾದ ಕಡೆಯಿಂದ ಮೊಟಾರ
ಸೈಕಲ ನಂ. ಕೆಎ38/ಹೆಚ್-9214 ನೇದ್ದರ ಚಾಲಕನಾಧ ಆರೋಪಿಯು ಕೂಡ ಅತೀವೇಗ ಹಾಗು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ನೌಬಾದ ಮಹಿಂದ್ರಾ ಶೋ ರೂಂ ಹತ್ತಿರ ಇಬ್ಬರು ಡಿಕ್ಕಿ ಮಾಡಿಕೊಂಡು ಇಬ್ಬರು ಮೊಟಾರ
ಸೈಕಲ ಸಮೇತ ಬಿದ್ದಿರುತ್ತಾರೆ, ಪರಿಣಾಮ ಅಭಿಷೇಕ ಈತನಿಗೆ ತಲೆಯಲ್ಲಿ ಭಾರಿ ರಕ್ತ ಗುಪ್ತಗಾಯವಾಗಿ,
ಎಡ ಕಿವಿಯಿಂದ, ಮೂಗಿನಿಂದ ರಕ್ತ ಬಂದಿರುತ್ತದೆ, ಮೂಗಿನ ಮೇಲೆ, ಎಡಗಾಲಿನ ಬೆರಳ ಮೇಲೆ, ಎಡಗಾಲಿಗೆ
ತರಚಿದ ರಕ್ತಗಾಯವಾಗಿರುತ್ತದೆ, ಎದುರಿನ ಮೊಟಾರ ಸೈಕಲ ಸವಾರನಾದ ಮಂಜುನಾಥ ತಂದೆ ಎಕನಾಥ ಪಾಂಚಾಳ,
ವಯ: 34 ವರ್ಷ, ಜಾತಿ: ಪಂಚಾಳ, ಸಾ: ಕಪಲಾಪೂರ, ತಾ: ಬೀದರ, ಸದ್ಯ: ಚಿಟ್ಟಾವಾಡಿ ಬೀದರ ಈತನಿಗೆ
ಎಡಗಣ್ಣಿನ ಮೇಲೆ, ತಲೆಯ ಮೇಲೆ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ,
ಆಗ ಫಿರ್ಯಾದಿ ಮತ್ತು ಅಲ್ಲಿಂದಲೆ ಹೋಗುತ್ತಿದ್ದ ಪ್ರಹ್ಲಾದ ತಂದೆ ಬಾಳಪ್ಪಾ ಮತ್ತು ಪಾಂಡು ತಂದೆ ಜಗನ್ನಾಥ ರವರು
ಕೂಡಿ 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಇಬ್ಬರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ
ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 19/2020, ಕಲಂ. ಮಹಿಳೆ ಮತ್ತು
ಮಗು ಕಾಣೆ :-
ದಿನಾಂಕ 02-02-2020 ರಂದು 1400 ಗಂಟೆಯ ಸುಮಾರಿಗೆ ಸೀತಾಳಗೇರಾ ಗ್ರಾಮದ ಫಿರ್ಯಾದಿ ವಿದ್ಯಾವತಿ ಗಂಡ ಪಂಡಿತ ಜಮಾದರ ವಯ: 40 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸೀತಾಳಗೇರಾ ರವರ ಮನೆಯಿಂದ ಫಿರ್ಯಾದಿಯವರ ಮಗಳಾದ
ಮಮಿತಾ ವಯ 22 ವರ್ಷ ಇವಳು ತನ್ನ 3 ವರ್ಷದ ಮಗನಾದ ದತ್ತು ಅವನಿಗೆ ತೆಗೆದುಕೊಂಡು ಎಲ್ಲಿಗೊ ಹೋಗಿದ್ದು, ನಂತರ ಅವಳು ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಅವಳನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ
ಪತ್ತೆಯಾಗಿರುವುದಿಲ್ಲ, ಕಾಣೆಯಾದ ಮಗಳ ಚಹರೆ ಪಟ್ಟಿ 1) ಮಮಿತಾ ಗಂಡ ಲಾಲಪ್ಪಾ ಮಹೇಶಗೊಂಡ ವಯ: 22
ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮಾಡಗುಳ, ಸದ್ಯ: ಸೀತಾಳಗೇರಾ, 2) ತೆಳ್ಳನೆ ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯ ಮೇಲೆ ಕಪ್ಪು ಕೂದಲು, ನೇರವಾದ ಮೂಗು ಹೊಂದಿರುತ್ತಾಳೆ, 3) ಕೆಂಪು ಬಣ್ಣದ ಚುಕ್ಕೆವುಳ್ಳ ಕಪ್ಪು ಸೀರೆ ಹಾಗು ಕಪ್ಪು ಬಣ್ಣದ ಬ್ಲೌಜ ಧರಿಸಿರುತ್ತಾಳೆ ಮತ್ತು 4) ಅವಳು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ, 5) ಅವಳ 03 ವರ್ಷದ ಮಗ ದತ್ತು ಇವನ ಮೈಮೇಲೆ ಹಸಿರು ಬಣ್ಣದ ಶರ್ಟ ಮತ್ತು ನೀಲಿ ಬಣ್ಣದ ಪ್ಯಾಂಟ ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-02-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment