ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-02-2020
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
25/2020, ಕಲಂ. 379 ಐಪಿಸಿ
:-
ದಿನಾಂಕ 12-02-2020 ರಂದು 2130 ಗಂಟೆಯಿಂದ 2230 ಗಂಟೆಯ ಅವಧಿಯಲ್ಲಿ ಬೀದರ ನಗರದ ಗುರುನಾನಕ ಕಾಲೋನಿಯಲ್ಲಿರುವ ಶಿವಮಂದಿರದ ಹತ್ತಿರ ನಿಲ್ಲಿಸಿದ ಪಿüರ್ಯಾದಿ ಆನಂದ ತಂದೆ ಸಂಗಪ್ಪ ಸಾ: ಗೊರನಳ್ಳಿ, ತಾ: ಬೀದರ ರವರು ತನ್ನ ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-38/ಕ್ಯೂ-6335 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು0 ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ-38/ಕ್ಯೂ-6335, 2) ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.10.ಎ.ಎಮ್.ಡಿ.ಹೆಚ್.ಕೆ.29156, 3) ಇಂಜಿನ್ ನಂ. ಹೆಚ್.ಎ.10.ಇ.ಜೆ.ಡಿ.ಹೆಚ್.ಕೆ.04341, 4) ಮಾಡಲ್: 2013, 5) ಬಣ್ಣ: ಕಪ್ಪು ಬಣ್ಣ ಹಾಗೂ 6) ಅ.ಕಿ 20,000/- ರೂ. ಇರುತ್ತದೆ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
26/2020, ಕಲಂ. 379 ಐಪಿಸಿ
:-
ದಿನಾಂಕ 05-02-2020 ರಂದು 2200 ಗಂಟೆಗೆ ಪಿüರ್ಯಾದಿ ಸೈಯದ ಮಹ್ಮದ ಸಲ್ಮಾನ ಜಯದಿ ತಂದೆ ಅಖ್ತರ ಮೆಹಂದಿ ಜಯದಿ ವಯ: 49 ವರ್ಷ, ಜಾತಿ: ಮುಸ್ಲಿಂ, ಸಾ: ನಾಗಪೂರ ಮಹಾರಾಷ್ಟ್ರ, ಸದ್ಯ: ನಿರ್ಮಲ ನಗರ ಶಾರದಾ ಪ್ರೌಢ ಶಾಲೆಯ ಹತ್ತಿರ ನೌಬಾದ, ಬೀದರ ರವರು ತನ್ನ ಕೆಲಸದ ನಂತರ ತಮ್ಮ ಬಾಡಿಗೆ ಮನೆಗೆ ಹೋಗಿ ಮನೆಯ ಮುಂದೆ ತನ್ನ ಮೋಟರ ಸೈಕಲನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ದಿನಾಂಕ 06-02-2020 ರಂದು 0600 ಗಂಟೆಗೆ ಎದ್ದು ನೋಡಲು ಮೋಟರ ಸೈಕಲ ಇರಲಿಲ್ಲ, ತನ್ನ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಎಲ್ಲಿಯೂ ಮೋಟರ ಸೈಕಲ ಪತ್ತೆಯಾಗಲಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಮೋಟಾರ್ ಸೈಕಲ್ ವಿವರ 1) ಹೊಂಡಾ ಶೈನ ಮೋಟರ ಸೈಕಲ ನಂ. ಎಮ್.ಹೆಚ್-31/ಡಿ.ಕ್ಯೂ-6653, 2) ಚಾಸಿಸ್ ನಂ. ಎಮ್.ಇ.4.ಜೆ.ಸಿ.36.ಸಿ.ಎಪ್.ಬಿ.8249787, 3) ಇಂಜಿನ್ ನಂ. ಜೆ.ಸಿ.36.ಇ.2379078, 4) ಮಾಡಲ್: 2011, 5) ಬಣ್ಣ: ಕೆಂಪು ಬಣ್ಣ ಹಾಗೂ 6) ಅ.ಕಿ 17,000/- ರೂ ಇರುತ್ತದೆ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 09/2020, ಕಲಂ. 363 ಐಪಿಸಿ :-
ಪಿüರ್ಯಾದಿ ತುಕಾರಾಮ ತಂದೆ ಅಡೆಪ್ಪಾ ವರ್ಮಾ
ವಯ 45 ವರ್ಷ, ಜಾತಿ: ಕ್ರಿಶ್ಚಿಯನ, ಸಾ: ಬೇತ್ಲಹೇಮ ಕಾಲೋನಿ ಮಂಗಲಪೇಟ ಬೀದರ ರವರ ಮಗನಾದ
ಪ್ರವೀಣ ತಂದೆ
ತುಕಾರಾಮ ವರ್ಮಾ
ವಯ: 16 ವರ್ಷ ಇತನು ದಿನಾಂಕ 14-2-2020 ರಂದು 1000 ಗಂಟೆ ಸುಮಾರಿಗೆ ಮನೆಯಿಂದ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು
ಮರಳಿ ಮನೆಗೆ ಬಂದಿರುವುದಿಲ್ಲ, ಸದರಿಯವನಿಗೆ ಯಾರೋ ಅಪರಿಚಿತರು ಅಪಹರಣ ಮಾಡಿರಬಹುದು ಎಂದು ಇರುವ ದೂರಿನ ಮೇರೆಗೆ
ದಿನಾಂಕ 16-02-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
27/2020, ಕಲಂ. 224
ಐಪಿಸಿ :-
ಫಿರ್ಯಾದಿ
ಶಿವಪುತ್ರಪ್ಪ ಪ್ರಭಾರಿ ಅಧೀಕ್ಷಕರು ಜಿಲ್ಲಾ ಕಾರಾಗೃಹ ಬೀದರ ರವರು ಪೊಲೀಸ ಠಾಣೆಗೆ ಹಾಜರಾಗಿ
ತನ್ನದೊಂದು ಕನ್ನಡದಲ್ಲಿ ಟೈಪ ಮಾಡಲಾದ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಕಾರಾಗೃಹದ
ವಿಚಾರಣೆ ಬಂಧಿ ಸಂಖೆ. 6851 ರಾಘವೆಂದ್ರ@ಚಾಪಾತ್ಯ ತಂದೆ ಸುರೇಶ ಜೋತೆಪ್ಪ ಸಾ: ಭಾರತ
ಪಬ್ಲೀಕ ಸ್ಕೂಲ್ ಲೆಕ್ಚರ್ ಕಾಲೋನಿ ಭಾಲ್ಕಿ ಇತನು ಭಾಲ್ಕಿ ನಗರ ಠಾಣೆಯ ಪ್ರಕರಣ ಸಂ. ಸಿ.ಆರ್. 04/2020 ಗೌ. ಸಿಜೆ ಮತ್ತು ಜೆಎಮ್ಎಫ.ಸಿ ನ್ಯಾಯಾಲಯ ಭಾಲ್ಕಿ
ರವರ ಆದೇಶದ ಮೇರೆಗೆ ದಿನಾಂಕ 11-01-2020 ರಂದು ಈ ಕಾರಾಗೃಹದಲ್ಲಿ ಹೊಸದಾಗಿ
ದಾಖಲಾಗಿರುತ್ತಾನೆ, ಇದನ್ನು ಹೊರತುಪಡಿಸಿ ಸದರಿ ಬಂಧಿಯ ಮೇಲೆ ಇನ್ನೂ 2 ಪ್ರಕರಣಗಳು ಬಾಕಿ
ಇರುತ್ತವೆ, ಪ್ರಕರಣ ಸಂ. ಸಿಸಿ 400/2019 ಭಾಲ್ಕಿ ಗ್ರಾಮೀಣ ಠಾಣೆ ಗೌ. ಸಿಜೆ ಮತ್ತು ಜೆಎಮ್ಎಫಸಿ
ನ್ಯಾಯಾಲಯ ಭಾಲ್ಕಿ ನ್ಯಾಯಲಯ ಮತ್ತು ಭಾಲ್ಕಿ ನಗರ ಪೊಲೀಸ್ ಠಾಣೆ ಸಿಆರ್ ನಂ. 161/2019 ರ ಗೌ. ಸಿಜೆ ಮತ್ತು ಜೆಎಮ್ಎಫಸಿ ನ್ಯಾಯಾಲಯ
ಭಾಲ್ಕಿ ರವರಲ್ಲಿ ಇರುತ್ತವೆ, ಸದರಿ ರಾಘವೆಂದ್ರ@ಚಾಪಾತ್ಯ ಈತನು ದಿನಾಂಕ 16-02-2020 ರಂದು 1818 ನಿಮಿಷಕ್ಕೆ ಕಾರಾಗೃಹದ ಮುಖ್ಯ ಗೋಡೆಯಿಂದ ಜಿಗಿದು ಓಡಿ
ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ)
ಪೊಲೀಸ್ ಠಾಣೆ ಅಪರಾಧ ಸಂ. 16/2020, ಕಲಂ.
279, 338 ಐಪಿಸಿ :-
ದಿನಾಂಕ
16-02-2020 ರಂದು ಔರಾದ(ಬಿ) ತಾಲೂಕಿನ ಗೌಂಡಗಾಂವ ಗ್ರಾಮದಲ್ಲಿ ಫಿರ್ಯಾದಿ ಕೃಷ್ಣಾ ತಂದೆ ಗೊವಿಂದ ಪಾಟೀಲ್ ಸಾ: ಲಿಂಬಗಾಂವ, ತಾ: ಉದಗೀರ, ಜಿ: ಲಾತೂರ, ಸದ್ಯ: ಹೈದ್ರಾಬಾದ ರವರ ಸಂಬಂಧಿ ಮ್ರತಪಟ್ಟಿದ್ದರಿಂದ ಫಿರ್ಯಾದಿ ಮತ್ತು ಫಿರ್ಯಾದಿಯ ಗೆಳೆಯ ಸತೀಷ ತಂದೆ ಮಾಧವರಾವ ಸಿಂಧೆ ಸಾ: ಉದಗೀರ ಇಬ್ಬರೂ ಮೋಟಾರ ಸೈಕಲ್ ನಂ. ಟಿ.ಎಸ್-13/ಇ.ಎಫ್-1030 ನೇದರ ಮೇಲೆ ಹೈದ್ರಾಬಾದನಿಂದ ಗೌಂಡಗಾಂವ ಗ್ರಾಮಕ್ಕ ಹೋಗುತ್ತಿರುವಾಗ ಗಣೇಶಪುರ(ಎ) ಗ್ರಾಮ ದಾಟಿದ ನಂತರ ಎದುರಿನಿಂದ ಕಾರ ನಂ. ಎಪಿ-10/ಎಎಂ-0288 ನೇದರ ಚಾಲಕನಾದ ಆರೋಪಿ ನಾಗೇಂದ್ರ ತಂದೆ ಗೊವಿಂದರಾವ ಸಾವಳೆ ಸಾ: ಚಿಮ್ಮೆಗಾಂವ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿನತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲ ಮೂಳೆ ಮುರಿದು ಕತ್ತರಿಸಿ ಭಾರಿ ರಕ್ತಗಾಯವಾಗಿರುತ್ತದೆ ಹಾಗು ಸತೀಷ ಇತನಿಗೆ ಬಲಗಾಲ ಮೊಳಕಾಲಿಗೆ ಭಾರಿ ರಕ್ತ ಹಾಗೂ ಭಾರಿ ಗುಪ್ತಗಾಯ, ಬಲಗಾಲ ಪಾದದ ಮೇಲೆ ರಕ್ತಗಾಯ ಮತ್ತು ಬಲಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಆರೋಪಿಯು 108 ಅಂಬುಲೇನ್ಸ ಕರೆಯಿಸಿ ಚಿಕಿತ್ಸೆ ಕುರಿತು ಇಬ್ಬರಿಗೂ ಔರಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment