Police Bhavan Kalaburagi

Police Bhavan Kalaburagi

Wednesday, February 19, 2020

BIDAR DISTRICT DAILY CRIME UPDATE 19-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-02-2020

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 20/2020, ಕಲಂ. 20(ಬಿ) (2), (ಬಿ), 20 (ಸಿ) ಎನ್.ಡಿ.ಪಿ.ಎಸ್ ಕಾಯ್ದೆ :-
ದಿನಾಂಕ 17-02-2020 ರಂದು ಹುಮನಾಬಾದ ನೂರು ಧಾಬಾದ ಹತ್ತಿರ ಇಬ್ಬರು ವ್ಯಕ್ತಿಗಳು ಒಂದು ಬಿಳಿ ಬಣ್ಣದ ಟಾಟಾ ಸಫಾರಿ ವಾಹನ ಸಂ. ಎಂ.ಎಚ-12/ಎಚ.ಎನ-9978 ನೇದ್ದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಕುರಿತು ಗಾಂಜಾವನ್ನು ತೆಗೆದುಕೊಂಡು ಹೊಗುತ್ತಿದ್ದಾರೆಂದು ರವಿಕುಮಾರ ಪಿಎಸಐ ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿ ಹಾಗೂ ಗೇಜೇಟೆಡ ಅಧಿಕಾರಿ ನಾಗಯ್ಯಾ ಸ್ವಾಮಿ ತಾಲೂಕಾ ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರು ಹಾಗೂ ತೂಕ ಮಾಡುವ ಗಾಜಿ ಖಾನ ಸಾ: ಶಿವನಗರ ಹುಮನಾಬಾದ ರವರೊಂದಿಗೆ ಹುಮನಾಬಾದ ನೂರು ದಾಭಾದ ಹತ್ತಿರ ಹೋಗಿ ನೋಡಲು ಸಫಾರಿ ವಾಹನದಲ್ಲಿ ಯಾರು ಇರಲಿಲ್ಲ, ಸ್ವಲ್ಪ ಸಮಯ ಅಲ್ಲೆ ನಿಂತು ನೋಡಲು ನಂತರ ಆರೋಪಿತರಾದ 1) ಗಾಯಸೋದ್ದಿನ ತಂದೆ ರಜೀಯೋದ್ದಿನ ಶೇಖ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಕಾಳ ಮಾರತಿ ಚೌಕ ಹತ್ತಿರ ಉಸ್ಮಾನಾಬಾದ, ಮಹಾರಾಷ್ಟ್ರ ರಾಜ್ಯ, 2) ಸಲ್ಮಾನ ತಂದೆ ಉಸ್ಮಾನ ಶೇಖ, ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ತಾಲೀಮ ಚೌಕ ಉಸ್ಮಾನಾಬಾದ ಇವರಿಬ್ಬರು ವಾಹನದಲ್ಲಿ ಬಂದು ಕುಳಿತ ನಂತರ ಅವರ ಮೇಲೆ ದಾಳಿ ಮಾಡಿ ಹಿಡಿದು ಗೇಜೇಟೆಡ್ ಅಧಿಕಾರಿ ಮತ್ತು ಪಂಚರ ಸಮಕ್ಷಮ ವಾಹನ ಚೇಕ ಮಾಡಿ ನೋಡಲು ವಾಹನದಲ್ಲಿ 4 ಚೀಲಗಳಲ್ಲಿ 20 ಪಾಕೇಟಗಳು ಇದ್ದು ಇವುಗಳಲ್ಲಿ ಏನಿದೇ ಎಂದು ಕೇಳಲಾಗಿ ಗಾಂಜಾ ತುಂಬಿರುವ ಪ್ಲಾಸ್ಟಿಕ್ ಕವರ್ ಸುತ್ತಿದ್ದ ಪಾಕೇಟಗಳಿರುತ್ತವೆ ಅಂತ ತಿಳಿಸಿದಾಗ ಅವುಗಳನ್ನು ಪರಿಶೀಲಿಸಿ ನೋಡಲು ಪ್ರತಿಯೊಂದು ಪಾಕೆಟ ಪ್ಲಾಸ್ಟೀಕ ಕವರಿನ ಸಮೇತ 2 ಕೆ.ಜಿ ತೂಕ ಇದ್ದು ಒಟ್ಟು 80 ಪ್ಯಾಕೇಟಗಳು 160 ಕೆ.ಜಿ ಗಾಂಜಾ ಇರುವುದು ಕಂಡು ಬಂದಿದ್ದು, ನಂತರ ಸದರಿ ಗಾಂಜಾ .ಕಿ 16,00,000/- ರೂ., ಸಫಾರಿ ವಾಹನ .ಕಿ 8,00,000/- ರೂ., ಹಾಗೂ ನಗಹು ಹಣ 900/- ಎಲ್ಲವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 14/2020, ಕಲಂ. 498(), 504, 506, 323 ಜೊತೆ 34 .ಪಿ.ಸಿ :-
ಫಿರ್ಯದಿ ನೀಲಮ್ಮ ಗಂಡ ಅಂಬ್ರೀಷ ಮಡಿವಾಳ ವಯ 30 ವರ್ಷ, ಸಾ: ಬಂಕಲಗಿ, ಸದ್ಯ: ಯಳವಂತಗಿ ಗ್ರಾಮ ರವರು ಸಂಪ್ರದಾಯದಂತೆ ಬಂಕಲಗಿ ಗ್ರಾಮದ ಅಂಬ್ರೀಷ ತಂದೆ ಭಿಕ್ಷಣ್ಣ ಮಡಿವಾಳ ಇವರ ಜೊತೆ ವಿವಾಹವಾಗಿ ಇಂದಿಗೆ ಸುಮಾರು 13 ವರ್ಷಗಳು ಕಳೆದಿದ್ದು, ಫಿರ್ಯಾದಿಯವರಿಗೆ ಸದ್ಯ ಭ್ಯಾಗ್ಯಶ್ರೀ 10 ವರ್ಷ ಮತ್ತು ಪೂಜಾ 07 ವರ್ಷ ಹಾಗೂ ಐಶ್ವರ್ಯ 5 ವರ್ಷದ ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ, ಮಗಳು ಐಶ್ವರ್ಯ ಇವಳು ಹುಟ್ಟಿದ 2 ತಿಂಗಳಿಗೆ ಗಂಡ ಫಿರ್ಯಾದಿಗೆ ತೋರೆದು ದೇಶಾಂತರ ಪತ್ತೆಯಿಲ್ಲದೆ ಹೋಗಿ ಮನೆಗೆ ಬಂದು ಇಂದಿಗೆ ಸುಮಾರು 5 ತಿಂಗಳಾಗಿರುತ್ತವೆ, ಗಂಡ ಮನೆ ಬಿಟ್ಟು ಹೋದ ನಂತರ ಫಿರ್ಯಾದಿಯು ತನ್ನ ಗಂಡನ ಮನೆಯಾದ ಬಂಕಲಗಿಯಲ್ಲೆ ತನ್ನ ಮಕ್ಕಳೊಂದಿಗೆ ಕೂಲಿ ನಾಲಿ ಮಾಡಿಕೊಂಡಿದ್ದು, ಗಂಡ ಇಲ್ಲದಿರುವಾಗ ಅತ್ತೆ ಫಿರ್ಯಾದಿಗೆ ಅವಾಚ್ಯವಾಗಿ ಬೈಯುವದು, ನಿಂದಿಸುವದು ಮಾಡಿ ನಿನ್ನ ಗಂಡನೆ ಇಲ್ಲದಿದ್ದ ಮೆಲೆ ನಿನ್ಯಾಕೇ ಇರ್ತಿ ಈ ಮನೆಯಲ್ಲಿ ಅಂತಾ ಕಿರುಕುಳ ಕೊಟ್ಟರು ಸಹ ಫಿರ್ಯಾದಿಯು ಹಾಗೆ ವಾಸವಾಗಿದ್ದು, ಗಂಡ ದೇಶ್ಯಾಂತರದಿಂದ ಮನೆಗೆ ಬಂದು ಫಿರ್ಯಾದಿ ಮತ್ತು ಮಕ್ಕಳಿಗೆ ಹೊಡೆಯುವದು, ಬಯ್ಯುವದು, ಕಚ್ಚುವದು ಮಾಡಿ ಚಾಕು ತೋರಿಸಿ ಹೆದರಿಸುತ್ತಿದ್ದನು, ಈ ಕಿರುಕುಳಕ್ಕೆ ಬೇಸತ್ತು ಫಿರ್ಯಾದಿಯು ತನ್ನ ಗಂಡನ ಮನೆ ಬಿಟ್ಟು ತನ್ನ ಮಕ್ಕಳೊಂದಿಗೆ ತವರು ಮನೆಯಾದ ಯಳವಂತಗಿ ಗ್ರಾಮದಲ್ಲಿ ಬಂದು ವಾಸವಾಗಿದ್ದು, ಹಿಗಿರುವಾಗ ದಿನಾಂಕ 16-01-2020 ರಂದು ಗಂಡ ಅಂಬ್ರೀಷ ಇತನು ತವರು ಮನೆಗೆ ಬಂದು ಮನೆಯ ಮುಂದೆ ರೋಡಿನ ಮೇಲೆ ನಿಂತು ಫಿರ್ಯಾದಿಗೆ ಬಾ ಹೊರಗೆ ಅಂತಾ ಬೈಯುತ್ತಿದ್ದಾಗ ಫಿರ್ಯಾದಿಯ ಅತ್ತಿಗೆ ರೋಡಿಗೆ ಬಂದು ಹೀಗೆ ರೋಡಿನ ಮೇಲೆ ನಿಂತು ಬೈಯುವದು ಸರಿಯಲ್ಲ ಮನೆಯಲ್ಲಿ ಬಂದು ಕುಳಿತು ನಿಧಾನಕ್ಕೆ ಮಾತನಾಡಿ ಅಂದಾಗ ನಿನ್ನ ಜೊತೆ ಏನು ಮಾತನಾಡುವದಿದೆ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿಯ ಮೈಮೆಲೆ ಬಿದ್ದು ಹೊಡೆಯುವದು ಮಾಡುತ್ತಿದ್ದಾಗ, ಫಿರ್ಯಾದಿಯವರ ತಾಯಿ ಹೊರಗಡೆಯಿಂದ ಮನೆಗೆ ಬಂದು ನಾಗರಾಜ ತಂದೆ ಬಸವರಾಜ ಮಾಲಗತ್ತೆ ಇವರಿಗೆ ಕರೆದುಕೊಂಡು ಬಂದು ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 18-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 21/2020, ಕಲಂ. 366(ಎ) ಐಪಿಸಿ :-
ದಿನಾಂಕ 18-02-2020 ರಂದು ಫಿರ್ಯಾದಿ ಜಗದೇವಿ ಗಂಡ ಲ್ಲಿಕಾರ್ಜುನ ಸ್ವಂತದೂರ, ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಗಾಂಧಿನಗರ ಹುಮನಾಬಾದ ರವರ ಮಗಳಾದ ಗೀತಾ ಇವಳು ವೀರಭದ್ರೇಶ್ವರ ಕಾಲೇಜದಲ್ಲಿ ಪಿ.ಯು.ಸಿ ಆಟರ್ಸ್ 2ನೇ ವರ್ಷದಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು, ಹಿಗಿರುವಾಗ ಅವಳು ದಿನಾಂಕ 14-02-2019 ರಂದು 0900 ಗಂಟೆಗೆ ಕಾಲೇಜಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವಳು ಮರಳಿ ಮನೆಗೆ ಬರದೇ ಇರುವದರಿಂದ ಫಿರ್ಯಾದಿಯು ಎಲ್ಲಾಕಡೆ ಹುಡಕಾಡಿ ನೋಡಲು ಎಲ್ಲಿಯು ಸಿಕ್ಕಿರುವುದಿಲ್ಲ, ಮಗಳು ಗೀತಾ ಇವಳಿಗೆ ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಸಂಶಯ ಇರುತ್ತದೆ, ಅವಳ ಚಹರೆ ಪಟ್ಟಿ 1) ವಯ: 17 ವರ್ಷ, ಜಾತಿ: ಲಿಂಗಾಯತ, 2) ಉದ್ದನೆಯ ಮುಖ, ಗೋಧಿ ಬಿಳಪು ಮೈ ಬಣ್ಣ, 3) ಎತ್ತರ: 5 ಅಡಿ ಎತ್ತರ, 4) ಮಾತಾಡುವ ಭಾಷೆ: ಕನ್ನಡ ಹಾಗೂ 5) ಧರಿಸಿರುವ ಡುಪು: ಹಳದಿ ಬಣ್ಣದ ಟಾಪ, ಬಿಳಿ ಬಣ್ಣದ ಲೆಗಿನ ಮತ್ತು ಬಿಳಿ ಬಣ್ಣದ ವೇಲ್ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ ಠಾಣೆ ಅಪರಾಧ ಸಂ. 11/2020, ಕಲಂ. 279, 337, 338 ಐಪಿಸಿ :-
ದಿನಾಂಕ 18-02-2020 ರಂದು ಫಿರ್ಯಾದಿ ಸಲೀಂ ಸಾಬ ತಂದೆ ಸೈಯದ ಸಾಬ ಮುಲ್ಲಾ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಕೊರೆಕಲ, ತಾ: ಔರಾದ(ಬಿ) ರವರು ಹಿಪ್ಪಳಗಾಂವ ಗ್ರಾಮದಲ್ಲಿ ಸೆಂಟ್ರಿಂಗ್ ಕೆಲಸ ಮಾಡಲು ಹೋಗಿ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಹಿಪ್ಪಳಗಾಂವದಿಂದ ಕಾಲುದಾರಿ ಮುಖಾಂತರ ನಡೆದುಕೊಂಡು ತಮ್ಮೂರ ಕೊರೆಕಲ್ ಗ್ರಾಮಕ್ಕೆ ಹೋಗುತ್ತಿರುವಾಗ ಕುಶನೂರ ಕಡೆಯಿಂದ ಅಂದರೆ ಹಿಂದಿನಿಂದ ಮೋಟಾರ ಸೈಕಲ್ ನಂ. ಎಪಿ-09/ಸಿಸಿ-6094 ನೇದರ ಚಾಲಕನಾದ ಆರೋಪಿ ನರಸಿಂಗ್ ತಂದೆ ಶ್ರಾವಣ ಸೂರ್ಯವಂಶಿ ಸಾ: ಕೊರೆಕಲ್ ಇತನು ತನ್ನ ವಾಹನವನ್ನು ಅತೀ ವೇಗವಾಗಿ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಮಾಡಿ ಮೋಟಾರ ಸೈಕಲ್ ಸಮೇತ ಅವನು ಕೆಳಗೆ ಬಿದ್ದಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗಾಲ ಮೊಳಕಾಲ ಕೆಳಭಾಗದಲ್ಲಿ ಭಾರಿ ರಕ್ತಗಾಯವಾಗಿ ಎಲುಬು ಮುರಿದಿರುತ್ತದೆ ಮತ್ತು ಎಡಗೈ ಮೊಳಕೈ, ಬಲಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಗೂ ಸಹ ಗಾಯಗಳಾಗಿರುತ್ತವೆ, ಸದರಿ ಅಪಘಾತ ನೋಡಿದ ತಮ್ಮೂರ ಮುಜಾಹಿದ್ ಅತ್ತಾರ ಮತ್ತು ಹುಸೇನ್ ಅತ್ತಾರ ಇವರು 108 ಅಂಬುಲೆನ್ಸ್ ಕರೆಸಿ ಕುಶನೂರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: