ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-02-2020
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ
ಯು.ಡಿ.ಆರ್ ಸಂ. 04/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 20-02-2020 ರಂದು ಫಿರ್ಯಾದಿ ಹೇಮಾ ಕನೋಜಿಯಾ ಗಂಡ ಸುರೇಶಕುಮಾರ ಕನೋಜಿಯಾ ಸಾ: ಎಸ.ಎಮ.ಕ್ಯೂ ಪಿಎನ-19/1 ವಿ.ಎಸ.ವಿ ಎರಿಯಾ ಎರಫೊರ್ಸ ಸ್ಟೇಷನ ಬೀದರ ರವರ ಗಂಡನಾದ ಸುರೇಶಕುಮಾರ ಕನೋಜಿಯಾ ತಂದೆ ಮೆವಾಲಾಲ ಕನೋಜಿಯಾ ವಯ: 50 ವರ್ಷ, ಜಾತಿ: ಧೋಬಿ, ಸಾ: ಎಸ.ಎಮ.ಕ್ಯೂ
ಪಿಎನ-19/1 ವಿ.ಎಸ.ವಿ ಎರಿಯಾ ಎರಫೊರ್ಸ ಸ್ಟೇಷನ ಬೀದರ ರವರು ಕಾರ್ಡಿಯೋ ರೆಸಪಿರೆಯಟರಿ ಅರೆಸ ನಿಂದ
ಮೃತಪಟ್ಟಿರುತ್ತಾರೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ದಿನಾಂಕ 23-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ
ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 23-02-2020 ರಂದು
ಫಿರ್ಯಾದಿ ಹಣಂತರಾಯ ತಂದೆ
ಯಶವಂತರಾವ ಮಾದಗೊಂಡ ವಯ: 56 ವರ್ಷ, ಜಾತಿ: ಲಿಂಗಾಯತ, ಸಾ: ಕಡಗಂಚಿ, ತಾ: ಆಳಂದ, ಜಿ: ಕಲಬುರ್ಗಿ
ರವರ ಮಗಳಾದ ಮಗಳು ರೇಖಾ ಇವಳು ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಬಸವಕಲ್ಯಾಣದಲ್ಲಿ ತಾನು
ಬಾಡಿಗೆಯಿಂದ ಇರುವ ಮನೆಯಲ್ಲಿ ಓಡಣಿಯಿಂದ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ತನ್ನ ಮಗಳ ಸಾವಿನ ಬಗ್ಗೆ ಯಾರ ಮೇಲೆ
ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಗದಲ್
ಪೊಲೀಸ್ ಠಾಣೆ ಅಪರಾಧ ಸಂ. 16/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 23-02-2020 ರಂದು ಫಿರ್ಯಾದಿ ಮಹಾದೇವಿ ಗಂಡ ರಮೇಶ ಹಂಗರಗಿ ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ಲಾಡಗೇರಿ ಬೀದರ ರವರ ಮಗನಾದ ಹಣಮಂತ ತಂದೆ ರಮೇಶ ಹಂಗರಗಿ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ:
ಲಾಡಗೇರಿ ಬೀದರ ಈತನು ತನ್ನ ಸೋದರ ಮಾವನಾದ ಶಿವಕುಮಾರ ತಂದೆ ಶೆಂಕ್ರೇಪ್ಪಾ ಪೊಲೀಸ ಪಾಟೀಲ್ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಮರ್ಜಾಪರು (ಟಿ.ಎಸ್) ರವರ ಜೋತೆ
ಮೊಟಾರ ಸೈಕಲ್ ನಂ. ಟಿ.ಎಸ್.-15/ಈಟಿ-7872 ನೇದ್ದರ ಮೇಲೆ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಸ್ಧಾನಕ್ಕೆ ದರ್ಶನಕ್ಕಾಗಿ ಹೋಗಿ ಚಾಂಗಲೇರಾ ವೀರಭದ್ರೇಶ್ವರ ದೇವಸ್ಧಾನದಲ್ಲಿ ದರ್ಶನ ಮುಗಿಸಿಕೊಂಡು ಮರಳಿ ಬೀದರಗೆ ಸದರಿ ಮೋಟಾರ ಸೈಕಲ್ ನೇದರ ಮೇಲೆ ಬರುತ್ತಿದ್ದಾಗ ಬೀದರ - ಬಗದಲ ರೋಡಿನ ಮೇಲೆ ಬಗದಲ ಧರಿ ಗಿಂತ ಸ್ವಲ್ಪ ಹಿಂದೆ ವಕೀಲಸಾಬ ರವರ ಮಳದ ಹತ್ತಿರ ಫಿರ್ಯಾದಿಯವರ ಅಣ್ಣನಾದ ಶಿವಕುಮಾರ ಈತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ರೋಡಿನ ಬದಿಯಿಂದ ಒಮ್ಮೇಲೆ ಒಂದು ನಾಯಿ ಓಡಿ ಬಂದಿದ್ದರಿಂದ ವೇಗವಾಗಿದ್ದ ಮೋಟಾರ ಸೈಕಲ್ ಚಾಲಕ ಶಿವಕುಮಾರ ಈತನು ಕಂಟ್ರೋಲ್ ಮಾಡದೆ ಒಮ್ಮೇಲೆ ಬ್ರೇಕ್ ಹಾಕಿ ನಾಯಿಗೆ ಡಿಕ್ಕಿ ಮಾಡಿದ ಪ್ರಯುಕ್ತ ಇಬ್ಬರು ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದರುತ್ತಾರೆ, ಶಿವಕುಮಾರ ಇತನು ಹೆಲ್ಮೇಟ ಧರಿಸಿದ್ದ ಪ್ರಯುಕ್ತ ಗಾಯಗಳಾಗಿಲ್ಲಾ ಮತ್ತು ಹಿಂದೆ ಕುಳಿತ ಹಣಮಂತ ಈತನು ಹಾರಿ ಬಿದ್ದ ಪ್ರಯುಕ್ತ ಅವನ ತಲೆಯಲ್ಲಿ ಭಾರಿ ಓಳಟ್ಟಾಗಿದ್ದು ಮತ್ತು ತಲೆಯ ಎಡ ಕಿವಿಯ ಹತ್ತಿರದ ಭಾಗದಲ್ಲಿ ಭಾರಿ ಉಬ್ಬಿದ ಗಾಯವಾಗಿ ಬಾಯಿಯಿಂದ ಮತ್ತು ಕಿವಿಗಳಿಂದ ರಕ್ತ ಬರುತ್ತಿದ್ದ
ಪ್ರಯುಕ್ತ ಅವನಿಗೆ ಅಂಬುಲೇನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತರುತ್ತಿರುವಾಗ ಬಗದಲ ಧರಿಯ ಮೇಲ್ಗಡೆ ತಾಂಡಾ ಹತ್ತಿರ ಸದರಿ ಭಾರಿಗಾಯಗೊಂಡ ಫಿರ್ಯಾದಿಯಹವರ ಮಗನಾದ ಹಣಮಂತ ಈತನು ಮೃತಪಟ್ಟಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 11/2020, ಕಲಂ. 498(ಎ),
323, 504 ಜೊತೆ 34 ಐಪಿಸಿ ಮತ್ತು ಕಲಂ. 3
& 4 ಡಿ.ಪಿ ಕಾಯ್ದೆ :-
ಫಿರ್ಯಾದಿ ಅಂಬಿಕಾ ಗಂಡ ಭೀಮರಾವ @ ರಾಜು ಬಿರಾದರ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಇಬ್ರಾಮಪುರ (ಟಿ.ಎಸ್), ಸದ್ಯ: ಪ್ರತಾಪನಗರ ನೌಬಾದ ಬೀದರ ರವರ ಮದುವೆಯು ತೆಲಂಗಾಣದ ಇಬ್ರಾಮಪುರ ಗ್ರಾಮದ ಚಂದ್ರಶೇಖರ ಬಿರಾದರ ರವರ ಮಗನಾದ ಭೀಮರಾವ ರವರೊಂದಿಗೆ ಹಿಂದು ಧರ್ಮದ ಪ್ರಕಾರ ಬೀದರ ಶಿವನಗರದ ಶ್ರೀ ರಾಮ
ಸಮರ್ಥ ಕಲ್ಯಾಣ ಮಂಟಪದಲ್ಲಿ ದಿನಾಂಕ 02-05-2018 ರಂದು ಫಿರ್ಯಾದಿಯವರ ತಂದೆ, ತಾಯಿಯವರು ಸುಮಾರು 15-20 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟಿರುತ್ತಾರೆ,
ಮದುವೆಯಲ್ಲಿ ತಂದೆಯವರು ನಿಶ್ಚಿತಾರ್ಥ ಸಮಯದಲ್ಲಿ ಗಂಡನಿಗೆ ವರೋಪಚಾರವಾಗಿ 45 ತೊಲೆ ಬಂಗಾರ, 20 ಲಕ್ಷ ರೂಪಾಯಿ ನೌಬಾದನಲ್ಲಿರುವ ಪ್ಲಾಟನ್ನು ಮಾರಿ ತಂದು ಕೋಟ್ಟಿರುತ್ತಾರೆ, ಮದುವೆಯಾದ ನಂತರ ಫಿರ್ಯಾದಿಗೆ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಕೂಡಿ ಹೈದ್ರಾಬಾದದ ಜಿಯಾಗುಡ್ಡದಲ್ಲಿದ್ದ ಮನೆಗೆ ಕರೆದುಕೊಂಡು ಹೋಗಿರುತ್ತಾರೆ, ಅಲ್ಲಿ ಸ್ವಲ್ಪ ದಿವಸಗಳ ಕಾಲ ಚೆನ್ನಾಗಿ ನೋಡಿಕೊಂಡರು, ಅದಾದ
ನಂತರ ಗಂಡ
ಭೀಮರಾವ ಇವರು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದರಿಂದ ಅವರು ಫಿರ್ಯಾದಿಗೆ ತನ್ನ ತಂದೆ, ತಾಯಿಯ ಬಳಿ ಬಿಟ್ಟು ಅವರು ಬೆಂಗಳೂರಿನಲ್ಲಿಯೇ ಉಳಿದುಕೊಂಡರು, ನಂತರ
ಫಿರ್ಯಾದಿಗೆ ಅತ್ತೆ, ಮಾವ ಇವರಿಬ್ಬರು ನಿನಗೆ ಮನೆ ಕೆಲಸ ಮಾಡಲು ತಂದಿದ್ದೆವೆ, ನಿನಗೆ ಕೆಲಸ ಮಾಡಲು ಬರುವುದಿಲ್ಲ ಅಂತ
ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು, ನಾದನಿ ಸುನಿತಾ ಇವಳು ಫಿರ್ಯಾದಿಯ ಮೊಬೈಲ್ ತೆಗೆದುಕೊಂಡು ಬೇರೆಯವರ ಜೊತೆ ತಾನೇ ಮಾತನಾಡಿ ಫಿರ್ಯಾದಿಯ ಗಂಡನಿಗೆ ನಿನ್ನ ಹೆಂಡತಿ ಯಾವಾಗಲೂ ಮೋಬೈಲನಲ್ಲಿ ಬೇರೆಯವರ ಜೊತೆ ಮಾತನಾಡುತ್ತಾಳೆ, ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ ಅಂತ ಕಿವಿ
ತುಂಬುತ್ತಿದ್ದಳು, ಫಿರ್ಯಾದಿಯು ಅತ್ತೆ, ಮಾವ, ನಾದನಿಯಂದಿರಿಗೆ, ನಾದನಿಯ ಗಂಡನಾದ ಮಲ್ಲೇಶ ರವರೆಲ್ಲರಿಗೆ ನಾನು ಗಂಡನ ಜೊತೆ ಬೆಂಗಳೂರಿಗೆ ಹೋಗುತ್ತೆನೆ ಅಂತ ಹೇಳಿದಾಗ ನಾದನಿಯ ಗಂಡನಾದ ಮಲ್ಲೇಶ ಇತನು ನೀನು ನನ್ನ ಹತ್ತಿರವೇ ಸಂಸಾರ ಮಾಡು ಅಂತ ಮತ್ತು ನೀನು ಇಲ್ಲಿಯೇ ಬಿದ್ದಿರಬೇಕು ಆತನಿಗೆ ನಾವು ಇನ್ನೊಂದು ಮದುವೆ ಮಾಡುತ್ತೆವೆ ಅಂತ
ಹೇಳಿದ್ದು ಹಾಗೂ ನೀನು ಬೆಂಗಳೂರಿಗೆ ನಿನ್ನ ಗಂಡನ ಜೊತೆ ಹೋಗಬೇಕಾದರೆ ನಿನ್ನ ತಂದೆ ತಾಯಿಯ ಮನೆಯಿಂದ 15-20 ಲಕ್ಷ ರೂಪಾಯಿ ತಂದರೆ ಮಾತ್ರ ನಿನಗೆ ಕಳುಹಿಸುತ್ತೆವೆ ಅಂತ ಹಿಯಾಳಿಸಿ ಮಾತನಾಡುವುದು ಮಾಡುತ್ತಿದ್ದರು, ಗಂಡ
ಬೆಂಗಳೂರಿನಿಂದ ಹೈದ್ರಾಬಾದಗೆ ಬಂದಾಗ ಆತನು ಸಹ ಫಿರ್ಯಾದಿಗೆ ನಮ್ಮ ತಂದೆ, ತಾಯಿ, ಅಕ್ಕ, ತಂಗಿಯಂದಿರು ಹೇಳಿದ ಮಾತು ಕೇಳಿಕೊಂಡು ಇಲ್ಲಿಯೇ ಬಿದ್ದಿರಬೇಕು ನೀನು
ಬೆಂಗಳೂರಿಗೆ ಬಂದು ಏನು ಮಾಡುತ್ತಿ ಅಂತ ತಲೆಯ ಕೂದಲು ಹಿಡಿದು ಏಳೆದು ಅನೇಕ ಸಲ ಕಪಾಳ ಮೇಲೆ, ಬೆನ್ನ ಮೇಲೆ ಹೊಡೆದಿರುತ್ತಾರೆ, ಗಂಡನೂ ಸಹ ಇನ್ನು ನಿಮ್ಮ ತಂದೆ ತಾಯಿ ಮನೆಯಿಂದ 15-20 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು, ಸದರು ವಿಷಯವನ್ನು ಫಿರ್ಯಾದಿಯು ತನ್ನ ತಂದೆ, ತಾಯಿಯವರಿಗೆ ತಿಳಿಸಿದಾಗ ಅವರು ಹೈದ್ರಾಬಾದಗೆ ಬಂದು ಗಂಡ ಹಾಗೂ ಗಂಡನ ಮನೆಯವರಿಗೆ ಏಕೆ ತೊಂದರೆ ಕೊಡುತ್ತಿದ್ದಿರಿ ನಿಮಗೆ ಮದುವೆಯಲ್ಲಿ ಬಂಗಾರ ಮತ್ತು ನಗದು ಹಣ ಸಹ ಕೊಟ್ಟಿರುತ್ತೆವೆ ಇನ್ನು ನಿಮಗೆ 15-20 ಲಕ್ಷ ರೂಪಾಯಿ ಬೇಕಾದರೆ ಮುಂದೆ ಕೊಡುತ್ತೆವೆ ಅವಳಿಗೆ ಚೆನ್ನಾಗಿ ನೋಡಿಕೊಳ್ಳಿರಿ ಅವಳು ವಿದ್ಯಾವಂತಳಿದ್ದಾಳೆ ಅಂತ ಬುದ್ದಿವಾದ ಹೇಳಿದಾಗ ಅವರೆಲ್ಲರಿಗೂ ನೀವೆನು ನಮಗೆ ಬುದ್ದಿ ಹೇಳುತ್ತಿರಿ ನಾವು ಹೇಳಿದ ಹಾಗೇ ನಿಮ್ಮ ಮಗಳು ನಮ್ಮ ಮನೆಯಲ್ಲಿ ಬಿದ್ದು ಇರಬೇಕು ಅವಳಿಗೆ ಬೆಂಗಳೂರಿಗೆ ಗಂಡನ ಜೊತೆ ಕಳುಹಿಸುವುದಿಲ್ಲ ಅಂತ ಅವರೊಂದಿಗೂ ಸಹ ವಾದ
ಮಾಡಿ ಕಳುಹಿಸಿರುತ್ತಾರೆ, ನಂತರ ಆರೋಪಿತರಾದ ಗಂಡ ಹಾಗೂ ಗಂಡನ ಮನೆಯವರು
ಫಿರ್ಯಾದಿಗೆ ಮೇಲಿಂದ ಮೇಲೆ ಜಗಳ ತೆಗೆಯುವುದು, ಹೊಡೆ ಬಡೆ ಮಾಡುತ್ತಾ ಬಂದು ನವೆಂಬರ್-2019 ನೇ ತಿಂಗಳಲ್ಲಿ ಅವರೆಲ್ಲರೂ ಜಗಳ ತೆಗೆದು ಹೊಡೆ, ಬಡೆ ಮಾಡಿ ತವರು ಮನೆಗೆ ಕಳುಹಿಸಿರುತ್ತಾರೆ, ಅಂದಾಜು ದಿನಾಂಕ 25-12-2019 ರಂದು
ಗಂಡ ಭೀಮರಾವ, ಮಾವ ಚಂದ್ರಶೇಖರ, ಅತ್ತೆ ಚಂದ್ರಮ್ಮ, ನಾದನಿ ಸುನಿತಾ, ಸಂಗಿತಾ ಗಂಡ ಮಲ್ಲೇಶ, ಅನೀತಾ ಗಂಡ ರವಿ ರವರೆಲ್ಲರೂ ಬೀದರಗೆ ಬಂದು
ಫಿರ್ಯಾದಿಗೆ ನಿನಗೆ ಹಣ ತೆಗೆದುಕೊಂಡು ಬಾ ಅಂದರೆ ಇನ್ನು ನಿನ್ನ ತಂದೆ, ತಾಯಿಯ ಮನೆಯಲಿಯೇ ಉಳಿದುಕೊಂಡಿದ್ದಿ ಭೀಮರಾವನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತ ಜಗಳ ಮಾಡುತ್ತಿದ್ದಾಗ ಫಿರ್ಯಾದಿಯ ತಂದೆ, ತಾಯಿ ಮತ್ತು ಪಕ್ಕದ ಮನೆಯವರು ಬಂದು
ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿ ಗಂಡ ಹಾಗೂ ಗಂಡನ ಮನೆಯವರಿಗೆ ಏಕೆ ಸುಮ್ಮನೆ ಜಗಳ ಮಾಡುತ್ತಿದ್ದಿರಿ ಹುಡುಗಿಗೆ ಚೆನ್ನಾಗಿ ನಡೆಸಿಕೊಳ್ಳಿರಿ ಅವಳಿಗೆ ಕರೆದುಕೊಂಡು ಹೋಗಿರಿ ಅವಳು ವಿದ್ಯಾವಂತಳಿದ್ದಾಳೆ, ತಿಳುವಳಿಕೆದವಳಿದ್ದಾಳೆ ಅಂತ ಬುದ್ದಿವಾದ ಹೇಳಿ ಅªÀರಿಗೆ ಸಮಜಾಯಿಸಿ ಕಳುಹಿಸಿರುತ್ತಾರೆ, ಆದರೂ
ಕೂಡ ಇಲ್ಲಿಯವರೆಗೆ ಫಿರ್ಯಾದಿಗೆ ಕರೆಯಲು ಬಂದಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 23-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 09/2020, ಕಲಂ.
457, 380 ಐಪಿಸಿ :-
ದಿನಾಂಕ 16-02-2020 ರಂದು 2300 ಗಂಟೆಗೆ
ಫಿರ್ಯಾದಿ ಧರ್ಮೆಂದ್ರ ತಂದೆ ನುಮಾನಸಿಂಗ ಠಾಕೂರ್ ವಯ: 31 ವರ್ಷ, ಜಾತಿ: ರಾಜಪೂತ, ಸಾ: ರಾಜಪೂತ್ ಗಲ್ಲಿ
ಒಳಕೋಟೆ ಬೀದರ ರವರು ಮಲಗಿಕೊಂಡು ಮರುದಿನ ದಿನಾಂಕ 17-02-2020 ರಂದು 0600 ಗಂಟೆ
ಸುಮಾರಿಗೆ ಎದ್ದು ನೋಡಲು ಮನೆಯ ಪಡಸಾಲೆಯಲ್ಲಿದ್ದ ಅಲಮಾರಿಯ ಬಾಗಿಲು ತೆರೆದಿದ್ದು ಅಲಮಾರಿ ಒಳಗಡೆ
ಇಟ್ಟಿದ
1) 2 ಗ್ರಾಂ.
ಎರಡು ಬಂಗಾರದ ಲೇಡಿಸ್ ಉಂಗುರಗಳು ಅ.ಕಿ 6,000/- ರೂ., 2) 20 ಗ್ರಾಂ. 4 ಬೆಳ್ಳಿಯ ಬಟ್ಟಲುಗಳು
ಒಟ್ಟು
80 ಗ್ರಾಂ.
ಬೆಳ್ಳಿಯ ಬಟ್ಟಲಿನ ಅ.ಕಿ 2000/- ರೂ. ಹಾಗೂ 3) ನಗದು ಹಣ 14,000/- ರೂ. ಹೀಗೆ ಒಟ್ಟು 22,000/- ರೂ ಬೆಲೆ ಬಾಳುವ
ಬಂಗಾರ,
ಬೆಳ್ಳಿಯ
ಆಭರಣಗಳು ಮತ್ತು ನಗದು ಹಣ ಇರಲಿಲ್ಲಾ, ಯಾರೊ ಅಪರಿಚಿತ ಕಳ್ಳರು ದಿನಾಂಕ 16-02-2020 ರಂದು 2300 ಗಂಟೆಯಿಂದ
ದಿನಾಂಕ
17-02-2020 ರಂದು 0600 ಗಂಟೆ
ಅವಧಿಯಲ್ಲಿ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರಿಯಲ್ಲಿಯ ಬಂಗಾರ, ಬೆಳ್ಳಿಯ ಒಡವೆಗಳು
ಮತ್ತು ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ
ಸಾರಾಂಶದ ಮೇರೆಗೆ ದಿನಾಂಕ 23-02-2020 ರಂದು ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ
ಅಪರಾಧ ಸಂ. 30/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 23-02-2020 ರಂದು
ಗಾಂಧಿಗಂಜದಲ್ಲಿರುವ ಎ.ಪಿ.ಎಮ್.ಸಿ ಯಲ್ಲಿ ಕೃಷಿ ಉತ್ಪನ ಮಾರುಕಟ್ಟೆ ಕಛೇರಿಯ ಹತ್ತಿರ ಕೃಷಿ ಉತ್ಪನ ಮಾರುಕಟ್ಟೆ ಗೋದಾಮ ಮುಂದೆ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದ ಪಕ್ಕದಲ್ಲಿ ಇಸ್ಪಿಟ್ ಜೂಜಾಟ್ ಆಡುತ್ತಿದ್ದಾರೆ ಅಂತಾ ಪಿಎಸ್ಐ (ಕಾಸು) ಗಾಂದಿಗಂಜ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಗಾಂಧಿಗಂಜದಲ್ಲಿರುವ ಎ.ಪಿ.ಎಮ್.ಸಿ. ಕಛೆರಿಯ ಸಮೀಪ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1)
ಪ್ರಶಾಂತ ತಂದೆ ಶಶಿಕಾಂತ ಪಾಟೀಲ್ ವಯ: 28 ವರ್ಷ, ಜಾತಿ: ಲಿಂಗಾಯತ, 2) ಪ್ರಭು ತಂದೆ ಬಕ್ಕಪ್ಪಾ ಕೊಂಡಾ ವಯ: 34 ವರ್ಷ, ಜಾತಿ: ಲಿಂಗಾಯತ, 3) ಅಂಬಾದಾಸ ತಂದೆ ಅರ್ಜುನ ಮಾಳಗೆ ವಯ: 32 ವರ್ಷ, ಜಾತಿ: ದಲಿತ, 4) ಸಿದ್ದಲಿಂಗ ತಂದೆ ಹಣಮಂತಪ್ಪಾ ಬಾಬಶೇಟ್ಟಿ ವಯ: 24 ವರ್ಷ, 4 ಜನ ಸಾ: ಗುಮ್ಮಾ, ತಾ: ಬೀದರ ಹಾಗೂ 5) ಲೋಕೇಶ ತಂದೆ ಸಿದ್ದಪ್ಪಾ ಕೋಳಾರ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಮಳಚಾಪುರ, ತಾ: ಭಾಲ್ಕಿ,
ಇವರೆಲ್ಲರೂ ಎ.ಪಿ.ಎಮ್.ಸಿ ಪಕ್ಕದಲ್ಲಿರುವ ಗೋದಾಮ ಮುಂದೆ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಎಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ 52
ಇಸ್ಪೀಟ್ ಎಲೆಗಳು ಮತ್ತು ನಗದು ಹಣ 14,500/- ರೂಪಾಯಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 61/2020, ಕಲಂ.
32, 34 ಕೆ.ಇ ಕಾಯ್ದೆ :-
ದಿನಾಂಕ 23-02-2020 ರಂದು ಜ್ಯೋಶಿ ನಗರ ಹನುಮಾನ ಪ್ರೌಢ ಶಾಲೆಯ
ಎದುರಿಗೆ ಬಾಬು ತಂದೆ ಭಿಮರಾವ ಏಣಗೆ ಸಾ: ಜ್ಯೋಶಿ ನಗರ ಇವನು ತನ್ನ ಮನೆ ಮುಂದೆ ಸಂಬಂಧಪಟ್ಟ
ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತಾ
ಶಿವಕುಮಾರ ಎ.ಎಸ್.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭೀಮನಗರ ಓಣಿಯಲ್ಲಿ ಮರೆಯಲ್ಲಿ
ನಿಂತು ನೋಡಲು ಹನುಮಾನ ಪ್ರೌಢ ಶಾಲೆ ಎದುರಿಗೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಆರೋಪಿ ಬಾಬು
ತಂದೆ ಭಿಮರಾವ ಏಣಗೆ ವಯ: 36 ವರ್ಷ, ಜಾತಿ: ವಡ್ಡರ, ಸಾ:
ಜ್ಯೋಶಿ ನಗರ ಭಾಲ್ಕಿ ಇತನು ತನ್ನ ವಶದಲ್ಲಿ ಒಂದು ಕಪ್ಪು ಬಣ್ಣದ ಕ್ಯಾರಿಬ್ಯಾಗ ಇಟ್ಟುಕೊಂಡು ನಿಂತಿರುವುದನ್ನು
ನೋಡಿ ಪಂಚರ ಸಮಕ್ಷಮ ಅವನ ಮೇಲೆ ದಾಳಿ ಮಾಡುವಷ್ಟರಲ್ಲಿ ಅವನು ತನ್ನ ವಶದಲ್ಲಿದ್ದ ಕ್ಯಾರಿಬ್ಯಾಗ
ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ, ನಂತರ ಆತನು ಬಿಟ್ಟು ಓಡಿ ಹೋದ ಕ್ಯಾರಿಬ್ಯಾಗ
ಪರಿಶೀಲಿಸಿ ನೋಡಲು ಅದರಲ್ಲಿ 39 ಓರಿಜಿನಲ್ ಚಾಯಿಸ್
ವಿಸ್ಕಿ 90 ಎಮ್.ಎಲ್ ಪೇಪಟ ಪಾಕೇಟಗಳು ಮತ್ತು 2 ಓಲ್ಡ ಟಾವರ್ನ ವಿಸ್ಕಿ
180 ಎಮ್.ಎಲ್ ಪೇಪರ ಪಾಕೇಟಗಳು ಅ.ಕಿ 1330/- ರೂ., ಸದರಿ ಮಧ್ಯದ ಪಾಕೇಟಗಳು ಆರೋಪಿಯು ಜೈ ಭವಾನಿ
ವೈನ ಶಾಪ ಮಾಲೀಕ ಮಾರಾಟ ಮಾಡಲು ಪೂರೈಸುತ್ತಾನೆ ಅಂತಾ ಗೊತ್ತಾಗಿರುತ್ತದೆ, ನಂತರ ಪಂಚರ ಸಮಕ್ಷಮ
ಎಲ್ಲಾ ಮಧ್ಯದ ಪಾಕೇಟಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ.
09/2020, ಕಲಂ. 447, 435 ಜೊತೆ 34 ಐಪಿಸಿ :-
ದಿನಾಂಕ 23-02-2020 ರಂದು ರಾತ್ರಿ 12:45 ಗಂಟೆಯ ಸುಮಾರಿಗೆ ಹಾಲಹಳ್ಳಿ ಶಿವಾರದ ಫಿರ್ಯಾದಿ ಗೊವಿಂದರಾವ ತಂದೆ ಸುಬ್ಬಾರಾವ ಪಾಟೀಲ ವಯ: 57 ವರ್ಷ, ಜಾತಿ: ಮರಾಠಾ, ಸಾ: ಹಾಲಳ್ಳಿ ರವರ ಹೊಲ ಸರ್ವೆ ನಂ. 32 ನೇದರಲ್ಲಿ ಆರೋಪಿತರಾದ 1) ಅನೀಲ ತಂದೆ ರಾಮರಾವ ಪಾಟೀಲ ವಯ: 45 ವರ್ಷ, ಜಾತಿ: ಮರಾಠಾ ಮತ್ತು 2) ಮಾರುತಿ ತಂದೆ ಅನೀಲ ಪಾಟೀಲ ವಯ: 21 ವರ್ಷ, ಜಾತಿ: ಮರಾಠಾ, ಇಬ್ಬರು ಸಾ: ಹಾಲಳ್ಳಿ ಇವರಿಬ್ಬರು ಅತಿಕ್ರಮ ಪ್ರವೇಶ ಮಾಡಿ ಕಡ್ಲಿ ಬಣವಿಗೆ ಬೆಂಕಿ ಹಚ್ಚಿ ಅ.ಕಿ 90,000/- ರೂಪಾಯಿ ಬೆಲೆ ಬಾಳುವ ಸುಮಾರು 20 ಚೀಲ ಕಡ್ಲಿ ಬಣವಿ ಸುಟ್ಟು ಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 19/2020, ಕಲಂ. 279, 338
ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ 23-02-2020 ರಂದು ಫಿರ್ಯಾದಿ ರಾಮ ತಂದೆ ಕಾಶಿರಾಮ ಮೇತ್ರೆ ವಯ: 34 ವರ್ಷ, ಜಾತಿ: ಕುರುಬ, ಸಾ: ಇಂಚೂರ, ತಾ: ಭಾಲ್ಕಿ ರವರು ತನ್ನ ಹೆಂಡತಿ
ಲಕ್ಷ್ಮೀಬಾಯಿ ವಯ: 34 ವರ್ಷ ಇಬ್ಬರು ಭಾತಂಬ್ರಾ ಶಿವಾರದಲ್ಲಿದ್ದ
ಹೋಲದಿಂದ ತಮ್ಮ ಗ್ರಾಮ ಇಂಚೂರ ಗ್ರಾಮದ ಕಡೆಗೆ ಭಾತಂಬ್ರಾ ಹುಲಸೂರ ರೋಡ ಮುಖಾಂತರ ನಡೆದುಕೊಂಡು ಹೋಗುವಾಗ
ದಾರಿ ಮಧ್ಯ ಭಾತಂಬ್ರಾ ಶಿವಾರದ ಲಕ್ಷ್ಮಿ ಪಾಟಿ ಹತ್ತಿರ ಹಿಂದಿನಿಂದ
ಭಾತಂಬ್ರಾ ಕಡೆಯಿಂದ ಕಾರ ನಂ. ಎಮ.ಹೆಚ-12/ಕೆ.ಎನ-6948 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ
ಹಾಗೂ ಅಜಾಕುರುಕತೆಯಿಂದ ಚಾಲಾಯಿಸಿಕೊಂಡು ಬಂದು ಫಿರ್ಯಾದಿಯ ಹೆಂಡತಿ ಲಕ್ಷ್ಮಿಬಾಯಿಗೆ ಡಿಕ್ಕಿ
ಮಾಡಿ ವಾಹನ ಸ್ಥಳದಲ್ಲಿಯೇ ಬಿಟ್ಟು
ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿ ಹೆಂಡತಿಗೆ ಮುಖದ ಮೇಲೆ ಭಾರಿ ರಕ್ತಗಾಯವಾಗಿ
ಕಿವಿಯಿಂದ ರಕ್ತ ಬಂದಿರುತ್ತದೆ ಮತ್ತು ಎಡಗೈಗೆ ಗುಪ್ತಗಾಯವಾಗಿರುತ್ತದೆ ಮತ್ತು ನಂತರ ಗಾಯಗೊಂಡ ಲಕ್ಷ್ಮಿಬಾಯಿ
ರವರಿಗೆ ಚಿಕಿತ್ಸೆ ಕುರಿತು ಫಿರ್ಯಾದಿ ಮತ್ತು ಸಂದೀಪ ಬಿರಾದಾರ ರವರು ಕೂಡಿ ಹುಲಸೂರ ಸರಕಾರಿ
ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ
ಸಂ. 25/2020, ಕಲಂ. 279, 338 ಐಪಿಸಿ :-
ದಿನಾಂಕ 23-02-2020 ರಂದು ಫಿರ್ಯಾದಿ
ನಾಗನಾಥ ತಂದೆ ಮಾಣಿಕಪ್ಪಾ ಮೇತ್ರೆ ಸಾ: ಹುಣಸಗೇರಾ, ತಾ: ಹುಮನಾಬಾದ ರವರು ತನ್ನ ಲಾರಿ ಸಂ.
ಎಮ್.ಹೆಚ್-25/ಯು-7769 ನೇದನ್ನು ರೋಡಿನ ಒಂದು ಕಡೆ ಚಲಾಯಿಸಿಕೊಂಡು ಹುಣಸಗೇರಾದಿಂದ ಹುಮನಾಬಾದ
ಮುಖಾಂತರ ಹೈದ್ರಾಬಾದಕ್ಕೆ ಹೋಗುತ್ತಿರುವಾಗ ಸೋನಕೇರಾ ಕ್ರಾಸ್ ಹತ್ತಿರ ಬಂದಾಗ ಅದೇ ವೇಳೆಗೆ
ಹುಮನಾಬಾದ ಕಡೆಯಿಂದ ಮೋಟಾರ್ ಸೈಕಲ್ ಸಂ. ಕೆಎ-39/ಕ್ಯೂ-7876 ನೇದರ ಚಾಲಕನಾದ ಆರೋಪಿ ಸಂತೋಷ
ತಂದೆ ರಾಜಪ್ಪಾ ಮಡಿವಾಳ ಸಾ: ಗಾಂಧಿ ನಗರ ಹುಮನಾಬಾದ ಇವನು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ
ಅತಿ ಜೋರಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಲಾರಿಯ
ಬಲಗಡೆಯ ಹಿಂದಿನ ಟೈರಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ
ಬಿದ್ದಿರುತ್ತಾನೆ, ನಂತರ ಸಂತೋಷ ಇವನಿಗೆ ನೋಡಲಾಗಿ ಆತನ ಬಲಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯ
ಮತ್ತು ಬಲಗೈ ಮೊಣಕೈ ಕೆಳಗೆ ರಕ್ತಗಾಯಗಳು ಆಗಿರುತ್ತವೆ, ನಂತರ ತಮ್ಮೂರ ಬಸವರಾಜ ತಂದೆ ಭೀಮಶಾ
ಸಿಂಧೋಲೆ ರವರು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿ ಗಾಯಾಳು ಸಂತೋಷ ಇವನಿಗೆ ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ
ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment