Police Bhavan Kalaburagi

Police Bhavan Kalaburagi

Tuesday, February 25, 2020

BIDAR DISTRICT DAILY CRIME UPDATE 25-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-02-2020

ಬೇಮಳಖೇಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 23-02-2020 ರಂದು 1600 ಗಂಟೆಯ ಸುಮಾರಿಗೆ ಫಿರ್ಯಾದಿ ಯಾಧವರಾವ ತಂದೆ ಶೇಶಿರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, ಸಾ: ಕಾರಾಮುಂಗಿ, ತಾ: ನಾರಾಯಣಖೇಡ, ಜಿ: ಮೇದಕ, ಸದ್ಯ: ಸಂಗೊಳಗಿ, ತಾ: ಜಿ: ಬೀದರ ರವರ ತಮ್ಮನಾದ ಪ್ರಭು ತಂದೆ ಶೇಶಿರಾವ ಬಿರಾದಾರ ವಯ: 35 ವರ್ಷ ಇತನು ಚಾಂಗಲೇರಾ ಶಿವಾರದ ಅರರಣ್ಯ ಪ್ರದೇಶದಲ್ಲಿ ಜಡಿ ಬೂಟಿ ಹುಡುಕುವಾಗ ಆಕಸ್ಮಿಕವಾಗಿ ಯಾವುದೋ ಒಂದು ವಿಷ ಜಂತು (ಹಾವು) ಪ್ರಭು ಇತನ ಎಡಗೈ ಮುಂಗೈಗೆ ಕಚ್ಚಿದ್ದರಿಂದ ಆತನಿಗೆ ಖಾಸಗಿ ಔಷಧ ಹಾಕಿದರು ಸಹ ಸದರಿ ಗುಣಮುಖವಾಗದೆ ದಿನಾಂಕ: 24-02-2020 ರಂದು ಮೃತಪಟ್ಟಿರುತ್ತಾನೆ, ಪ್ರಭು ಇತನ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹ ಸಂಶಯ ಇರುವುದ್ದಿಲ್ಲ ಅಂತಾ ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 05/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಪುಜಾ ಗಂಡ ಶಿವಪ್ರಕಾಶ ಗಾರಂಪಳ್ಳಿ ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಹಿಲಾಲಪುರ, ಸದ್ಯ: ಕೈಲಾಶ ನಗರ ಗುಂಪಾ ಬೀದರ ರವರ ಗಂಡನಾದ ಶಿವಪ್ರಕಾಶ ತಂದೆ ಬಸವಂತ ಗಾರಂಪಳ್ಳಿ ವಯ: 29 ವರ್ಷ ರವರು ಹೊಟ್ಟೆ ಬೇನೆಯಿಂದ ನರಳಿ ಹೊಟ್ಟೆ ಬೇನೆ ಕಡಿಮೆ ಆಗದೇ ಇರುವುದರಿಂದ ದಿನಾಂಕ 24-02-2020 ರಂದು 0900 ಗಂಟೆಯಿಂದ 1100 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಮರಣದಲ್ಲಿ ಯಾವುದೇ ರೀತಿಯ ಯಾರ ಮೇಲೆಯೂ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 06/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ಮಹ್ಮದ ಯುಸುಫ ತಂದೆ ಬಸಿರೋದ್ದಿನ್ ನಿಲಂಗೆ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಬುನಕರ ಕಾಲೋನಿ ತ್ರೀಪೂರಾಂತ ಬಸವಕಲ್ಯಾಣ ರವರ ತಂದೆಯಾದ ಬಸಿರೋದ್ದಿನ್ ನಿಲಂಗೆ ರವರು ಬಸವಕಲ್ಯಾಣ ನಗರದ ಶಾಹಪೂರ ಓಣಿಯಲ್ಲಿರುವ ತಾಜೋದ್ದಿನ್ ಸಾಮಿಲನಲ್ಲಿ ಸುಮಾರು 4 ವರ್ಷದಿಂದ ವಾಚನ್ ಕೆಲಸ ಮಾಡುತ್ತಿದ್ದು, ಪ್ರತಿ ದಿವಸ 2000 ಗಂಟೆಗೆ ಹೋಗಿ 0800 ಗಂಟೆಗೆ ಮರಳಿ ಮನೆಗೆ ಬರುತ್ತಿದ್ದರು, ಹೀಗಿರುವಾಗ ಪ್ರತಿ ದಿವಸದಂತೆ ದಿನಾಂಕ 23-02-2020 ರಂದು 2200 ಗಂಟೆಗೆ ವಾಚಮೇನ್ ಕರ್ತವ್ಯಕ್ಕೆ ಹೋಗಿ ಸದರಿ ಸಾಮಿಲನಲ್ಲಿ ಮಲಗಿಕೊಳ್ಳಲು ಒಂದು ಕಬ್ಬಿಣದ ಪಲಂಗ ಮೇಲೆ ಹಾಸಿಗೆ ಹಾಸಿಕೊಂಡು ಮಲಗಿದ್ದು ಪಕ್ಕದಲ್ಲೆ ಎರ್ ಕೂಲರ್ ಇದ್ದು ಸದರಿ ಕೂಲರಗೆ ವಿದ್ಯುತ ಸಂಪರ್ಕ ಕುರಿತು ಅಲ್ಲೆ ಒಂದು ಸ್ವಿಚ್ ಬೋರ್ಡ ಇದ್ದು ತಂದೆಯ ಕಾಲಿಗೆ ಕಸ್ಮಿಕವಾಗಿ ವಿದ್ಯುತ್ ವೈರ ತಗುಲಿ ಬೆಂಕಿಯಾಗಿ ಮೈಮೇಲೆ ಇದ್ದ ಬಟ್ಟೆಗಳಿಗೆ ಮತ್ತು ಹಾಸಿಗೆಗಳಿಗೆ ಬೆಂಕಿ ಹತ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಮಲಗಿದ ಸ್ಥಳದಲ್ಲಿ ಮೃತಪಟ್ಟಿರಬಹುದು, ಸದರಿ ಘಟನೆಯು ದಿನಾಂಕ 23-02-2020 ರಂದು 2300 ಗಂಟೆಯಿಂದ ದಿನಾಂಕ 24-02-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ, ತಂದೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುತ್ತಾರೋ ಅಥವಾ ಬೆಂಕಿ ಹತ್ತಿ ಮೃತಪಟಿರುತ್ತಾರೋ ಎಂಬುವ ಬಗ್ಗೆ ತಂದೆಯ ಸಾವಿನ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 10/2020, ಕಲಂ. 177 ಐಪಿಸಿ :-
ದಿನಾಂಕ 20-02-2020 ರಂದು ಫಿರ್ಯಾದಿ ಸಂಗಶೆಟ್ಟಿ ವಯ: 59 ವರ್ಷ, : ಮುಖ್ಯ ಆಡಳಿತ ಅಧಿಕಾರಿ, ಪ್ರಿನ್ಸಿಪಲ್ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಬೀದರ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸಾರಂಶವೆನಂದರೆ ಮಲ್ಲಿಕಾರ್ಜುನ ತಂದೆ ಹಣಮಂತ ಸಾ: ಅಲಿಯಂಬರ ಗ್ರಾಮ, ತಾ: ಬೀದರ ಇವನು ಮೊದಲು 1) ಎಸ್.ಸಿ ನಂ. 01/2018 ಮತ್ತು 2) ಎಸ್.ಸಿ ನಂ. 402/2017 ನೇದರಲ್ಲಿ ಆರೋಪಿತರಿಗೆ ಜಾಮೀನು ನೀಡಿದ್ದು ಸದರಿಯವನು ದಿನಾಂಕ 20-02-2020 ರಂದು 1730 ಗಂಟೆಯ ಸುಮಾರಿಗೆ ಮಾನ್ಯ ಪ್ರಿನ್ಸಿಪಲ್ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಬೀದರ ಎಸ್.ಸಿ ನಂ. 04/2020 ನೇದರಲ್ಲಿ ಆರೋಪಿತರಿಗೆ ಜಾಮೀನು ನೀಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ನಾನು ಮೊದಲು ಯಾರಿಗೂ ಜಾಮೀನು ನೀಡಿರುವದಿಲ್ಲಾ ಎಂದು ಸುಳ್ಳು ಅಫಿಡೇವಿಟ್ ಹಾಜರುಪಡಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಅಪರಾಧ ವೆಸಗಿರುತ್ತಾನೆಂದು ಇರುವ ದೂರಿನ ಸಾರಂಶವು ಅಸಂಜ್ಞೆ ಅಪರಾಧ ಇರುವುದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಮನವಿ ಪತ್ರದ ಮೂಲಕ ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ 2 ನೇ ನ್ಯಾಯಾಲಯ ಬೀದರ ರವರಲ್ಲಿ ವಿನಂತಿಸಿಕೊಂಡಾಗ ಮಾನ್ಯ ನ್ಯಾಯಾಲಯದ ಅನುಮತಿ ಮೇರೆಗೆ ಸದರಿ ಆರೋಪಿ ಮಲ್ಲಿಕಾರ್ಜುನ ಇತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 19/2020, ಕಲಂ. 379 ಐಪಿಸಿ :-
ದಿನಾಂಕ 23-02-2020 ರಂದು ನಸುಕಿನ ಜಾವ ಅಮರೇಶ್ವರ ರಥೋತ್ಸವದ ಮೇರವಣಿಗೆ ಅಮರೇಶ್ವರ ಮಂದಿರದಿಂದ ಅಗ್ನಿ ಕುಂಡದವರೆಗೆ ಬರುವ ಕಾಲಕ್ಕೆ ಫಿರ್ಯಾದಿ ಡಾ: ಮಹೇಶ ತಂದೆ ಸೂರ್ಯಕಾಂತ ಫುಲಾರಿ ಸಂಜೀವಿನಿ ಆಸ್ಪತ್ರೆ ಔರಾದ(ಬಿ) ರವರ ಮನೆಯ ಮುಂದೆ ರಥೋತ್ಸವ ಇರುವಾಗ 0530 ಗಂಟೆಗೆ ಫಿರ್ಯಾದಿಯವರ ತಂಗಿ ರೇಖಾದೇವಿ ಹಾಗೂ ಚಿಕ್ಕಮ್ಮಾ ಸುನೀತಾ ಗಂಡ ಸಂಜುಕುಮಾರ ರವರು ರಥೋತ್ಸವದಲ್ಲಿರುವ ಅಮರೇಶ್ವರ ದೇವರ ದಶರ್ನ ಪಡೆಯಲು ರಥದ ಹತ್ತಿರ ಬಂದಾಗ ಹೆಚ್ಚಿನ ಜನ ಸಂಧಣಿಯಲ್ಲಿ ನೂಕು ನುಗ್ಗಲು ಇದ್ದು ಈ ವೇಳೆಗೆ ಜನ ಸಂಧಣಿಯಲ್ಲಿ ತಂಗಿ ರೇಖಾದೇವಿ ಇವಳ ಕೊರಳಿನಲ್ಲಿದ್ದ 4.5 ತೊಲೆಯ ಬಂಗಾರದ ಗಂಟನ ಚೈನು ಅ.ಕಿ 1,35,000/- ರೂ. ನೇದು ಹಾಗೂ ಚಿಕ್ಕಮ್ಮ ಸುನೀತಾ ಇವರ ಕೊರಳಿನಲ್ಲಿದ್ದ 2 ತೊಲೆಯ ಬಂಗಾರದ ಲಾಕೇಟ ಅ.ಕಿ 60,000/- ರೂ. ನೇದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ  ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. ಕರಡಿ ಕಡಿತ ಅಡಿಯಲ್ಲಿ :-
ದಿನಾಂಕ 24-02-2020 ರಂದು ಔರಾದದಲ್ಲಿ ಅಂಗಡಿ ಇದ್ದುದ್ದರಿಂದ ಫೂಲಸಿಂಗ್ ತಾಂಡಾದ ಫಿರ್ಯಾದಿ ಪ್ರಭು ತಂದೆ ಮುನ್ನಾ ಪವಾರ ವಯ: 40 ವರ್ಷ, ಜಾತಿ: ಲಮಾಣಿ, ಸಾ: ಘಮಾ ನಾಯಕ ತಾಂಡ ರವರ ಮಾವನ ದನಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುವ ಕುರಿತು ತಾಂಡದಿಂದ ಫೂಲಸಿಂಗ್ ತಾಂಡಕ್ಕೆ ಕಾಲು ದಾರಿಯಿಂದ ನಡೆದುಕೊಂಡು ಹೋಗುವಾವ ತಾಂಡಾದ ಹಿರಾಮಣ ಇವರ ಹೊಲದ ಹತ್ತಿರ ಹೋದಾಗ ಒಂದು ಕರಡಿ ಬಂದಿದ್ದು ಫಿರ್ಯಾದಿಯು ಅದಕ್ಕೆ ನೋಡಿ ಓಡಿ ಹೋಗಿ ಒಂದು ಮರ ಹತ್ತುವಾಗ ಕರಡಿ ಫಿರ್ಯಾದಿಗೆ ಹಿಂಬಾಲಿಸಿಕೊಂಡು ಬಂದು ಮರ ಹತ್ತುವಾಗ ಎಡ ಕುಂಡಿ ತಿಕಕ್ಕೆ ಕಚ್ಚಿರುತ್ತದೆ ಆಗ ಫಿರ್ಯಾದಿಯು ಜೋರಾಗಿ ಅದರ ಕುದಲು ಹಿಡಿದು ಎಳೆದಾಗ ಫಿರ್ಯಾದಿಗೆ ಬಿಟ್ಟು ಓಡಿ ಹೋಗಿರುತ್ತದೆ, ನಂತರ ಫಿರ್ಯಾದಿಯ ಭಾವ ಮತ್ತು ಮಗ ಚಿಕಿತ್ಸೆಗಾಗಿ ಔರಾದ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆ, ಕರಡಿಯು ಆಕಸ್ಮಿಕವಾಗಿ ಕಚ್ಚಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ದೂರು ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 02/2020, ಕಲಂ. ಕರಡಿ ಕಡಿತ ಅಡಿಯಲ್ಲಿ :-
ದಿನಾಂಕ 24-02-2020 ರಂದು ಫಿರ್ಯಾದಿ ಗೋಪಾಲ ತಂದೆ ಗೋವಿಂದ ರಾಠೋಡ ವಯ: 35 ವರ್ಷ, ಜಾತಿ: ಲಮಾಣಿ, ಸಾ: ಖೇಮಾ ತಾಂಡಾ ಮಹಾಡೊಣಗಾಂವ ರವರ ತಾಂಡದ ಹತ್ತಿರ ಇರುವ ಮಾಣಿಕ ಇವರ ಹೊಲದಲ್ಲಿ ಕರಡಿ ಬಂದಿದ್ದು ಫಿರ್ಯಾದಿ ಮತ್ತು ಫಿರ್ಯಾದಿಯ ಮಕ್ಕಳು ಹಾಗೂ ತಾಂಡದ ರಮೇಶ ಹಾಗು ಇತರೆ ಜನರು ಕರಡಿ ನೋಡಲು ಹೋದಾಗ ಕರಡಿ ಒಮ್ಮೇಲೆ ಫಿರ್ಯಾದಿಯವರ ಮಗ ಅಶೋಕ ಈತನ ಮೇಲೆ ಬಿದ್ದು ತಲೆಗೆ ಕಚ್ಚಿರುತ್ತದೆ ಹಾಗು ಕೈ ಬೆರಳಿನಿಂದ ತಲೆಗೆ ಜೋರಾಗಿ ತರಚಿದ ರಕ್ತಗಾಯ ಪಡಿಸಿರುತ್ತದೆ, ಆಗ ಫಿರ್ಯಾದಿಯು ಚಿರಾಡುವಾಗ ಕರಡಿ ಅಲ್ಲಿಂದ ಓಡಿ ಹೋಗಿರುತ್ತದೆ, ಕರಡಿ ಆಕಸ್ಮಿಕವಾಗಿ ಮಗನಿಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 24-02-2020 ರಂದು ಸಾವರಗಾಂವ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಒಬ್ಬ ವ್ಯಕ್ತಿಯು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಮಲ್ಲಿಕಾರ್ಜುನ ಎ.ಎಸ್.ಐ ಹೊಕ್ರಾಣಾ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಾವರಗಾಂವ ಗ್ರಾಮದ ಬಸ್ಸ ನಿಲ್ದಾಣದ ಸಾರ್ವಜನಿಕ ಸ್ಥಳದ ಹತ್ತಿರ ನಡೆದುಕೊಂಡು ಹೋಗಿ ನೊಡಲು ಅಲ್ಲಿ ಆರೋಪಿ ರಾಮ ತಂದೆ ವೆಂಕಟರಾವ ಬಿಚ್ಚಲವಾಡೆ ವಯ: 23 ವರ್ಷ, ಜಾತಿ: ಕೋಳಿ, ಸಾ: ಸಾವರಗಾಂವ ಇತನು ಪ್ಲಾಸ್ಟೀಕ ಪಟ್ಟಾ ಪಟ್ಟಿ ಕೈಚೀಲದಲ್ಲಿ ಸರಾಯಿ ಡಬ್ಬಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದನ್ನು ನೊಡಿ ಓಮ್ಮೆಲೆ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದುಕೊಂಡು ಆತನ ಹತ್ತಿರ ಇದ್ದ ಚೀಲ ಪರೀಶಿಲಿಸಿ ನೊಡಲು ಅದರಲ್ಲಿ ಬೆಂಗಳೂರ ವಿಸ್ಕಿ 90 ಎಮ್.ಎಲ್ ನ ಒಟ್ಟು 41 ಡಬ್ಬಿಗಳು ಅ.ಕಿ 1003.27 ಇದ್ದು, ಎಲ್ಲಾ ಡಬ್ಬಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಲೈಸನ್ಸ ಪಡೆದ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಸರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಯಾವುದೆ ಲೈಸನ್ಸ ಇರುವುದಿಲ್ಲ ಎಂದು ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: