Police Bhavan Kalaburagi

Police Bhavan Kalaburagi

Friday, February 28, 2020

BIDAR DISTRICT DAILY CRIME UPDATE 28-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-02-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 24/2020, ಕಲಂ. 379 ಐಪಿಸಿ :-
ದಿನಾಂಕ 03-01-2020 ರಂದು 1030 ಗಂಟೆಗೆ ಫಿರ್ಯಾದಿ ಮಲ್ಲಿಕಾರ್ಜುನ್ ತಂದೆ ಶಿವರಾಜಪ್ಪಾ ಕುಂಬಾರ ವಯ: 38 ವರ್ಷ, ಜಾತಿ: ಕುಂಬಾರ, ಸಾ: ಗಡವಂತಿ, ತಾ: ಹುಮನಾಬಾದ ರವರು ತಮ್ಮ ಗ್ರಾಮದಿಂದ ಕೆಲಸದ ನಿಮಿತ್ಯ ನ್ನ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-39/ಕೆ-7992 ನೇದ್ದರ ಮೇಲೆ ಬಸವಕಲ್ಯಾಣಕ್ಕೆ ಬಂದು ಬಸವಕಲ್ಯಾಣದಲ್ಲಿ ಓಡಾಡಿ 1500 ಗಂಟೆಯ ಸುಮಾರಿಗೆ ಬಸವಕಲ್ಯಾಣ ನಗರದ ಮಿನಿ ವಿಧಾನ ಸೌಧ ಕಂಪೌಂಡ್ ಹೊರಗಡೆ ಸದರಿ ಮೋಟಾರ್ ಸೈಕಲನ್ನು ಪಾರ್ಕ ಮಾಡಿ ಮಿನಿ ವಿಧಾನ ಸೌಧ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು 1515 ಗಂಟೆಗೆ ಹೊರಗಡೆ ಬಂದಾಗ ಪಾರ್ಕ ಮಾಡಿದ ಸ್ಥಳದಲ್ಲಿ ಸದರಿ ಮೋಟಾರ್ ಸೈಕಲ್ ಇರಲಿಲ್ಲಾ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 27-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 32/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 14-08-2019 ರಂದು 0900 ಗಂಟೆಗೆ ಫಿರ್ಯಾದಿ ಸನಾಬೇಗಂ ಗಂಡ ಮಹ್ಮದ ರಿಜ್ವಾನ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟ್ಟಾ, ಬೀದರ ರವರ ಗಂಡನಾದ ಮಹ್ಮದ ರಿಜ್ವಾನ ತಂದೆ ಅಹ್ಮದ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾಃ ಚಿಟ್ಟಾ, ಬೀದರ ಇತನು ಮನೆಯಿಂದ ಕೆಲಸಕ್ಕೆಂದು ಹೋಗಿ ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ, ಕಾರಣ ಫಿರ್ಯಾದಿಯು ಇಲ್ಲಿಯವರೆಗೆ ತನ್ನ ಗಂಡನಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದು ಆದರೆ ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 457, 380 ಐಪಿಸಿ :-
ದಿನಾಂಕ 26-02-2020 ರಂದು 2100 ಗಂಟೆಯಿಂದ ದಿನಾಂಕ 27-02-2020 ರಂದು 0700 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿ ಅರುಣಕುಮಾರ ತಂದೆ ಬಾಬುರಾವ ಹೋಸ್ಸಳೆ ವಯ: 28 ವರ್ಷ, ಜಾತಿ: ಲಿಂಗಾಯತ, : ಪೊಲೀಸ ಪೇದೆ, ಸಾ: ಕೊನಮೆಳಕುಂದಾ ರವರು ಹೊಸದಾಗಿ ಕಟ್ಟುತ್ತಿರುವ ಮನೆಯ ಪಕ್ಕದ ಮನೆಯವರಾದ ಸಂದೀಪ ತಂದೆ ವಿಶ್ವನಾಥ ಕಾರಾಮುಂಗೆ ಇವರ ಮನೆಯ ಬಾಗಿಲ ಕೊಂಡಿಯನ್ನು ಯಾರೋ ಅಪರಿಚಿತ ಕಳ್ಳರು ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿದ್ದ 1) 2.5 ತೊಲಿ ಬೆಳ್ಳಿಯ ಲಕ್ಷ್ಮೀ ಮೂರ್ತಿ .ಕಿ 1000/- ರೂ., 2) 5 ತೊಲಿ ಬೆಳ್ಳಿಯ ಗಣೇಶ ಮೂರ್ತಿ .ಕಿ 2500/- ರೂ,, 3) 5 ತೊಲಿ ಬೆಳ್ಳಿಯ ಎರಡು ಬಟ್ಟಲುಗಳು .ಕಿ 2500/- ರೂ., 4) 2.5 ತೊಲಿ ಬೆಳ್ಳಿಯ ಪಂಚಪಳ .ಕಿ 1000/- ರೂ., 5) 5 ತೊಲಿ ಬೆಳ್ಳಿಯ 2 ಪ್ಲೇಟಗಳು .ಕಿ 2500/- ರೂ., 6) 3 ತೊಲಿ ಬೆಳ್ಳಿಯ ಕುಂಕುಮ್ ಡಬ್ಬಾ .ಕಿ 1250/- ರೂ., 7) 5 ತೊಲಿ ಬೆಳ್ಳಿಯ 2 ಆರ್ತಿಗಳು .ಕಿ 2500/- ರೂ ಮತ್ತು 8) 6 ತೊಲಿ ಬೆಳ್ಳಿಯ ಶೋಕೆಷ .ಕಿ 3000/- ರೂ. ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 15/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 27-02-2020 ರಂದು ಅಳವಾಯಿ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಪೇಪರ ಕಾಟೂನದಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟಾ ಮಾಡುತ್ತಿದ್ದಾನೆ ಅಂತ ಕಾಶಪ್ಪ ಪಿ.ಎಸ್.ಐ ಮೇಹಕರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಳವಾಯಿ ಗ್ರಾಮದ ಶಿವಾಜಿ ಚೌಕ ಬಳಿ ಹೋಗುತ್ತಿರುವಾಗಲೇ ಸದರಿ ಚೌಕಿನ ಬಳಿ ಒಂದು ಪೇಪರ ಕಾಟೂನ ಇಟ್ಟುಕೊಂಡು ಸರಾಯಿ ಮಾರಾಟ ಮಾಡುತ್ತ ನಿಂತ್ತಿದ್ದ ಆರೋಪಿ ಹಣಮಂತ ತಂದೆ ಕೇಶವ ಕೊಟಮಾಳೆ ವಯ: 35 ವರ್ಷ, ಜಾತಿ: ಮರಾಠಾ, ಸಾ: ಅಳವಾಯಿ ಇತನು ಕಾಟೂನನ್ನು ಅಲ್ಲಿಯೇ  ಬಿಟ್ಟು ಪೊಲೀಸ ಜೀಪ ನೋಡಿ ಓಡಲು ಹತ್ತಿದಾಗ ಪೊಲೀಸ ಜೀಪ ನಿಲ್ಲಿಸಿ ಅವನಿಗೆ ಸಿಬ್ಬಂದಿಯವರು ಬೆನ್ನಟಿದ್ದು ಆದರೆ ಅವನು ಸಿಗದೇ ಓಡಿ ಹೋಗಿರುತ್ತಾನೆ, ನಂತರ ಗೊತ್ತಾಗಿದ್ದೆನೆಂದರೆ ಸದರಿ ಆರೋಪಿಯು ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದು ಇವನು ಮೇಹಕರ ಗ್ರಾಮದ ಭವಾನಿ ಬಾರ ಮತ್ತು ವೈನಶ್ಯಾಪ ಅಂಗಡಿಯ ಮಾಲಿಕನಿಂದ ತಂದು ಮಾರಾಟ ಮಾಡುತ್ತಿರುತ್ತಾನೆ, ಆಗ ಆರೋಪಿಯು ಬಿಟ್ಟು ಹೋದ ಕಾಟೂನ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ ಒಂದು ಪೇಪರ ಕಾಟೂನದಲ್ಲಿ 90 ಎಮ.ಎಲ್ ಸಾಮಥರ್ಯ್ವುಳ್ಳ ಒಟ್ಟ್ಟು 80 ಯು.ಎಸ್ ವಿಸ್ಕಿ ಸರಾಯಿ ಬಾಟಲುಗಳು ಅ.ಕಿ 2400/- ರೂ. ಇರುತ್ತವೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: