Police Bhavan Kalaburagi

Police Bhavan Kalaburagi

Wednesday, March 18, 2020

BIDAR DISTRICT DAILY CRIME UPDATE 18-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-03-2020

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 04/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 17-03-2020 ರಂದು ಫಿರ್ಯಾದಿ ಶಕುಂತಲಾ ಗಂಡ ರಾಜಕುಮಾರ ತುಕದೆ ಸಾ: ಡಾವರಗಾಂವ  ಗಂಡ ರಾಜಕುಮಾರ ತಂದೆ ರಾಮರಾವ ವಯ 45 ವರ್ಷ, ಸಾ: ಡಾವರಗಾಂವ, ತಾ: ಭಾಲ್ಕಿ ರವರು ಫಿರ್ಯಾದಿಯವರ ಮಾವನ ಹೆಸರಿನಲ್ಲಿರುವ ಹೊಲದ ಮೇಲೆ ಒಕ್ಕಲುತನಕ್ಕೆಮದು ಮಾಡಿದ ಸಾಲ ಹೇಗೆ ತಿರಿಸಬೆಕೆಂದು ಚಿಂತೆ ಮಾಡಿ ಅದೇ ಚಿಂತೆಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮೂರ ಹಳ್ಳದ ಹತ್ತಿರ ಒಂದು ಬೆವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವು ರೈತ ಆತ್ಮಹತ್ಯೆ ಪ್ರಕರಣ ಎಂದುಯ ಪರಿಗಣಿಸಿ ಮುಂದಿನ ಕ್ರಮ ಜರೂಗಿಸಲು ವಿನಂತಿ ಇರುತ್ತದೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 14/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 16-03-2020 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ ಮಲ್ಲಮ್ಮಾ ಗಂಡ ನರಸಪ್ಪಾ ನಡವಿನದೊಡ್ಡಿ ವಯ: 45 ವರ್ಷ, ಜಾತಿ: ಎಸ್.ಸಿ, ಸಾ: ದಾಮರಗಿದ್ದಿ ಗ್ರಾಮ, ತಾ: ನಾರಾಯಣಖೇಡ್, ಜಿ: ಸಂಗಾರೆಡ್ಡಿ ರವರ ಮಗಳಾದ ಕು.ಪ್ರಿಯಾ ತಂದೆ ನರಸಪ್ಪಾ ನಡವಿನದೊಡ್ಡಿ ವಯ: 21 ವರ್ಷ ಇವಳು ಬೀದರ ನಗರದ ಹೊರ ಶಾಹಗಂಜದಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ಅಂಗಡಿಗೆ ಹೋಗುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ, ಅಪರಾಧ ಸಂ. 38/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 09-03-2020 ರಂದು ಫಿರ್ಯಾದಿ ಮೋನಿಕಾ ಗಂಡ ಮಾರುತಿ ಪಂಚಾಳ ಸಾ: ಲುಂಬಿಣಿ ನಗರ ನೌಬಾದ, ಬೀದರ ರವರ ಗಂಡ ಮಾರುತಿ ರವರು ಕೆಲಸಕ್ಕೆಂದು ಮನೆಯಿಂದ 1000 ಗಂಟೆಯ ಸುಮಾರಿಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು 2200 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲಾ, ಆಗ ಫಿರ್ಯಾದಿಯು ತಮ್ಮ ಗಂಡ ಕೆಲಸ ಮಾಡುವ ಅಂಗಡಿಯ ಮಾಲಿಕರಾದ ರಾಜಪ್ಪ ರವರನ್ನು ವಿಚಾರಿಸಲು ಗಂಡ ತನ್ನ ಅಂಗಡಿಗೆ ಕೆಲಸಕ್ಕೆ ಬಂದಿರುವುದಿಲ್ಲಾ ಎಂದು ತಿಳಿಸಿದರು, ನಂತರ ಫಿರ್ಯಾದಿಯು ಸದರಿ ವಿಷಯ ತಮ್ಮ ಮೈದುನನಿಗೆ ತಿಳಿಸಿದಾಗ ಅವರು ಅಂದೇ ರಾತ್ರಿ ಮಳಚಾಪುರ ಗ್ರಾಮದಿಂದ ನೌಬಾದಗೆ ಬಂದಿದ್ದು ಫಿರ್ಯಾದಿ ಮತ್ತು ಮೈದುನ ಕೂಡಿಕೊಂಡು ಅಂದು ರಾತ್ರಿ ವೇಳೆಯಲ್ಲಿ ಬೀದರ ನಗರದ ಗಾಂಧಿಗಂಜ ಏರಿಯಾದಲ್ಲಿ ಎಲ್ಲಾ ಕಡೆಗೆ ಹುಡಕಾಡಿದ್ದು ಗಂಡನು ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ, ತನ್ನ ಗಂಡ ಕಾಣೆಯಾದಾಗಿನಿಂದ ಇಲ್ಲಿಯವರೆಗೆ ತಮ್ಮ ಸಂಬಂಧಿಕರ ಹತ್ತಿರ ಹಾಗೂ ಇತರೆ ಕಡೆಗೆ ಹುಡಕಾಡಿದ್ದು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ, ಕಾಣೆಯಾದ ಗಂಡನ ವಿವರ 1) ಹೆಸರು: ಮಾರುತಿ ತಂದೆ ಶಿವಪ್ಪ ಪಂಚಾಳ, 2) ವಯ: 44 ವರ್ಷ, 3) ಎತ್ತರ: ಫೀಟ 5 ಇಂಚ್, 4) ಚಹರೆ ಪಟ್ಟಿ: ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಇರುತ್ತದೆ, 5) ಧರಿಸಿದ ಬಟ್ಟೆಗಳು: ಒಂದು ಆರೆಂಜ ಬಣ್ಣದ ಅಂಗಿ ಕೆಂಪು ಬಣ್ಣದ ಪ್ಯಾಂಟು ಧರಿಸಿರುತ್ತಾರೆ, 6) ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ಮರಾಠಿ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 46/2020, ಕಲಂ. 379 ಐಪಿಸಿ :-
ದಿನಾಂಕ 01-12-2019 ರಂದು 2200 ಗಂಟೆಯಿಂದ ದಿನಾಂಕ 02-12-2019 ರಂದು 0100 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಮಲ್ಲಿಕಾರ್ಜುನ ಚಿದ್ರೆ ತಂದೆ ಮಾಣಿಕರಾವ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಪ್ಲಾಟ ನಂ. 39 ವಿಶ್ವೇಶ್ವರಯ್ಯಾ ಕಾಲೋನಿ ಗುಂಪಾ ಎದುರಗಡೆ ಬೀದರ ರವರ ಮೋಟಾರ ಸೈಕಲ ನಂ. ಕೆಎ-38/ಜೆ-3269 ನೇದನ್ನು ಫಿರ್ಯದಿಯಹವರ ಮನೆಯ ಕಂಪೌಂಡಿನಲ್ಲಿಟ್ಟಿರುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಸಿ.ಡಿ ಡಿಲಕ್ಸ್ಮೋಟಾರ್ ಸೈಕಲ್ ನಂ. ಕೆಎ-38/ಜೆ-3269, 2) ಚಾಸಿಸ್ ನಂ. 05.ಎಮ್.29.ಎಫ್.28581, 3) 05.ಎಮ್.29..08756, 4) .ಕಿ 14,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :-
ಫಿರ್ಯಾದಿ ಪೂನಂ ಗಂಡ ಅವದೂತ ಪೊದ್ದಾರ ವಯ: 24 ವರ್ಷ, ಜಾತಿ: ಬ್ರಾಹ್ಮಣ, ಸಾ: ತಡಕಲ, ತಾ: ಅಳಂದ, ಸದ್ಯ: ರೋಳಾ ಗ್ರಾಮ ರವರ ಮದುವೆ ದಿನಾಂಕ 06-12-2019 ರಂದು ಸಂಪ್ರದಾಯಿಕವಾಗಿ ಬಸವಕಲ್ಯಾಣ ನಗರದ ವರ್ಷಾ ಫಂಕ್ಷನ ಹಾಲನಲ್ಲಿ ತಡಕಲ ಗ್ರಾಮದ ಅವದೂತ ತಂದೆ ಮನೊಹರ ಪೊದ್ದಾರ ಇವರ ಜೊತೆ ಆಗಿದ್ದು, ಮದುವೆಯಾಗಿ ಒಂದು ವಾರದ ವರೆಗೆ ಮನೆಯಲ್ಲಿ ಫಿರ್ಯಾದಿಗೆ ಸರಿಯಾಗಿ ನೋಡಿಕೊಂಡು ನಂತರ ಗಂಡ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಹೊಡೆಯುವುದು, ಬೈಯುವುದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದಾಗ ಫಿರ್ಯಾದಿಯು ತನ್ನ ಅತ್ತೆಗೆ ನಿಮ್ಮ ಮಗನಿಗೆ ಬುದ್ದಿವಾದ ಹೇಳಿ ಅಂತ ಅಂದಾಗ ಅವರು ಸಹ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ, ಗಂಡ ಹೈದ್ರಾಬಾದಗೆ ಹೊದಾಗ ಅತ್ತೆ ಭಾವನಾದ ಶಂಕರ ಇವರಿಗೆ ಕರೆಯಿಸಿ ಇಬ್ಬರು ಕೂಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೊಡೆ ಬಡೆಮಾಡಿ ಕಿರುಕುಳ ನೀಡಿರುತ್ತಾರೆ, ಆಗ ಫಿರ್ಯಾದಿಯು ಬೇಸತ್ತು ತನ್ನ ತವರು ಮನೆಗೆ ಬಂದಾಗ ದಿನಾಂಕ 25-1-2020 ರಂದು ಹೈದ್ರಾಬಾದನಿಂದ ನೇರವಾಗಿ ತವರು ಮನೆಗೆ ಬಂದು ಮರು ದಿವಸ ದಿನಾಂಕ 26-01-2020 ರಂದು ಬೆಳಿಗ್ಗೆ ಫಿರ್ಯಾದಿಯ ಜೊತೆ ಜಗಳ ತೆಗೆದು ನನ್ನ ಜೊತೆ ನಿನ್ನ ಯಾವುದೆ ಸಂಬಂದ ಇರುವುದಿಲ್ಲ ಅಂತ ಕುತ್ತಿಗೆಯ ತಾಳಿ ಕಡಿಯಲು ಬಂದಾಗ ತಂದೆ ಬಿಡಿಸಲು ಬಂದಾಗ ಅವರಿಗೆ ಕೈಯಿಂದ ತಳ್ಳಿ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಮನೆಯಿಂದ ಹೊರಗೆ ದರದರನೆ ಎಳೆದುಕೊಂಡು ಬಂದು  ಬಿದಿಯಲ್ಲಿ ಹೊಡೆಯುತ್ತಿದ್ದಾಗ ತಾಯಿ ಬಂದು ಗಂಡನಿಗೆ ಹೊಡೆಯಬೇಡಿ ಅಂದರು ಕೆಳದೆ ಇದ್ದಾಗ ಗಲಾಟೆ ಕೇಳಿ ಪಕ್ಕದ ಮನೆಯವರಾದ ಬಕುಲಾಬಾಯಿ ಗಂಡ ಸೂರ್ಯಕಾಂತ ಪಾಟೀಲ್ ಮತ್ತು ಕೃಷ್ಣಾಬಾಯಿ ಗಂಡ ಚಂದ್ರಕಾಂತ ಇವರು ಬಂದು ಬಿಡಿಸಿಕೊಂಡು ಬುದ್ದಿವಾದ ಹೇಳಿದಾಗ ಅದಕ್ಕೆ ಗಂಡ ನನದು ತಪ್ಪಾಗಿದೆ ಇನ್ನು ಮುಂದೆ ತಿದ್ದಿಕೊಂಡು ನಡೆಯುತ್ತೇನೆ ಅಂದು ನಾನು ತಡಕಲ ಗ್ರಾಮಕ್ಕೆ ಹೊಗುತ್ತಿದ್ದೆನೆ ನಿನ್ನ ತಂದೆ-ತಾಯಿಗೆ ಕರೆದುಕೊಂಡು ಬಾ ಸರಿಯಾಗಿ ಇಟ್ಟುಕೋಳ್ಳುತ್ತೆವೆ ಅಂತ ಹೇಳಿ ಹೊಗಿರುತ್ತಾನೆ, ಒಂದು ವಾರದ ನಂತರ ತಂದೆ ತಾಯಿ ತಡಕಲ ಗ್ರಾಮಕ್ಕೆ ಬಿಟ್ಟು ಬಂದಾಗ ಮರು ದಿನದಿಂದಲೆ ಕಿರುಕುಳ ನಿಡುತ್ತಿದ್ದರು, ಊಟ ಕೊಡುತ್ತಿರಲಿಲ್ಲ, ದಿನಾಂಕ 08-02-2020 ರಂದು ಅತ್ತೆ ಕೂದಲು ಹಿಡಿದು ನಿನ್ನ ಗಂಡನೆ ಇಲ್ಲಿ ಇಲ್ಲದಿದ್ದ ಮೇಲೆ  ಈ ಮನೆಯಲ್ಲಿ ನಿನಗೇನು ಕೆಲಸ ಅಂತ ಬೈದು ಹೊರ ಹಾಕಿದ್ದಾರೆ, ಹೊರ ಹಾಕಿದ ನಂತರ ಬಿದಿಯಲ್ಲಿ ನೆಲಕ್ಕೆ ಹಾಕಿ ಕೈಯಿಂದ ಹೊಡೆ ಬಡೆ ಮಾಡಿದಾಗ ಫಿರ್ಯಾದಿಯವರ ತಂದೆ – ತಾಯಿ ಈ ಘಟನೆಯನ್ನು ಕಣ್ಣಾರೆ ಕಂಡು ಬಿಡಿಸಿಕೊಂಡು ಈ ಮನೆಯಲ್ಲಿ ಇರಬೇಡಾ ಇದ್ದರೆ ನಿನಗೆ ಜಿವಕ್ಕೆ ಅಪಾಯ ಇದೆ ಅಂತ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ, ತವರು ಮನೆಯಲ್ಲಿಯೆ ಇಲ್ಲಿಯವರೆಗೆ ಇದ್ದು ಗಂಡ ಸುಧಾರಿಸಿಕೊಂಡು ಕರೆಯಲು ಬರಬಹುದು ಅಂತ ದಾರಿ ಕಾದು ನೋಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 17-03-2020 ರಂದು ಚಾಂಗಲೇರಾ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಗಂಗಮ್ಮ ಪಿಎಸ್ಐ  ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಾಂಗಲೇರಾ ಗ್ರಾಮಕ್ಕೆ ಹೋಗಿ ಅಂಬೇಡ್ಕರ ವೃತ್ತದ ಹತ್ತಿರ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿತನಾದ ನಾಗಶೇಟ್ಟಿ ತಂದೆ ಬಸವಣಪ್ಪಾ ರಾಚೊಟ್ಟಿ  ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಕಾರಪಾಕಪಳ್ಳಿ ಇತನು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂ.ಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಿಎಸ್ಐ ರವರು ತಮ್ಮ ಸಿಬ್ಬಂದಿಯವರ ಜೊತೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1600/- ರೂಪಾಯಿಗಳು ಮತ್ತು ಮಟಕಾ ನಂಬರ ಬರೆದ 2 ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 17-03-2020 ರಂದು ರಾಜೇಶ್ವರ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯ ಮೇಲೆ ಕೆಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ವಸೀಮ್ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಮರೆಯಾಗಿ ನೋಡಲು ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ರಾಜು ತಂದೆ ಶಂಕರ ರಾಠೋಡ ವಯ: 70 ವರ್ಷ, ಜಾತಿ: ಲಮಾಣಿ, ಸಾ: ತಡೊಳಾ ತಾಂಡಾ, 2) ತಾಜೋದ್ದಿನ ತಂದೆ ವಜೀರಸಾಬ ಟಪ್ಪೆವಾಲೆ ವಯ: 52 ವರ್ಷ, ಜಾತಿ: ಮುಸ್ಲಿಂ, 3) ಶರಣಪ್ಪಾ ತಂದೆ ತುಕಾರಾಮ ಖಿನಗಿವಾಡಿ ವಯ: 60 ವರ್ಷ, ಜಾತಿ: ಕಬ್ಬಲಿಗ, 4) ಖಮರೋದ್ದಿನ ತಂದೆ ಬೀಸಮಿಲ್ಲಾಸಾಬ ಹಾಡವಾಲೆ ವಯ: 50 ವರ್ಷ, ಜಾತಿ: ಮುಸ್ಲಿಂ, 5) ಜಬ್ಬಾರ ತಂದೆ ಇಸ್ಮಾಯಿಲ ಇಮಾಮಶಾವಾಲೆ ವಯ: 55 ವರ್ಷ, ಜಾತಿ: ಮುಸ್ಲಿಂ, 4 ಜನ ಸಾ: ತಡೊಳಾ ಹಾಗೂ 6) ಶಿವಾನಂದ ತಂದೆ ಈರಣ್ಣಾ ಮಚಕೂರಿ ವಯ: 32 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಭೀಮನಗರ ರಾಜೇಶ್ವರ ಇವರೆಲ್ಲರೂ ಹಣ ಕಟ್ಟಿ ಪಣ ತೊಟ್ಟು ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿತರಿಗೆ ಸುತ್ತುವರೆದು ಎಲ್ಲರಿಗೂ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಟೀಟ ಎಲೆಗಳು ಮತ್ತು 5,980/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 24/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 17-03-2020 ರಂದು ಮುಡಬಿ ವಾಡಿ ಗ್ರಾಮದ ಸಾರ್ವಜನೀಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮುಡಬಿ ವಾಡಿ ಗ್ರಾಮ ಶಿವಾರದ ಅಣ್ಣಾರೆಡ್ಡಿ ರವರ ಹೊಲದ ಹತ್ತಿರ ಕಲಬುರಗಿ-ಬಸವಕಲ್ಯಾಣ ರೋಡಿನ ಮೇಲೆ ಮುಡಬಿ ವಾಡಿ ಕ್ರಸನಿಂದ ಮರೆಯಾಗಿ ನಿಂತು ನೋಡಲು ಮುಡಬಿ ವಾಡಿ ಗ್ರಾಮದ ಬಸ ನಿಲ್ದಾಣದ ಶ್ರೀಕೃಷ್ಣ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪಿಟ್ ಜೂಜಾಟ ಆಡುತ್ತಿರುವ ಆರೋಪಿತರಾದ 1) ಅಶೋಕ ತಂದೆ ಅಂಬಣ್ಣ ಕೊಳಿ ವಯ: 42 ವರ್ಷ, ಜಾತಿ: ಗೊಲ್ಲ, 2) ಭಿಮಶ್ಯಾ ತಂದೆ ರಾಮಣ್ಣ ದಾಸರಿ ವಯ: 52 ವರ್ಷ, ಜಾತಿ: ಗೊಲ್ಲ, 3) ಜೈಶಂಕರ ತಂದೆ ಹಣಮಂತಪ್ಪಾ ಯಾದವ ವಯ: 52 ವರ್ಷ, ಜಾತಿ: ಗೊಲ್ಲ ಹಾಗು 4) ತುಕಾರಾಮ ತಂದೆ ನಾಗಪ್ಪ ಪಾಲಾಡಿ ವಯ: 54 ವರ್ಷ, ಜಾತಿ: ಗೊಲ್ಲ, ಎಲ್ಲರೂ ಸಾ: ಮುಡಬಿ ವಾಡಿ ಗ್ರಾಮ ಇವರ ಮೇಲೆ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ ಆರೋಪಿತರಿಗೆ ಹಿಡಿದು ಅವರಿಂದ ನಗದು ಹಣ ಒಟ್ಟು 5000/- ರೂಪಾಯಿಗಳು ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 279, 337, 338 ಐಪಿಸಿ :-
ದಿನಾಂಕ 17-03-2020 ರಂದು ಫಿರ್ಯಾದಿ ಪೀರಪ್ಪಾ ತಂದೆ ಶೇಷಪ್ಪಾ ಬುಕ್ಕಾ ವಯ: 25 ವರ್ಷ, ತಿ: ಕುರುಬ, ಸಾ: ಹಳ್ಳಿಖೇಡ (ಕೆ), ತಾ: ಹುಮನಾಬಾದ ರವರು ತನ್ನ ಚಿಕ್ಕಪ್ಪನ ಮಗನಾದ ದತ್ತು ತಂದೆ ಶರಣಪ್ಪಾ ಬುಕ್ಕ ಹಾಗೂ ಇನ್ನೋಬ್ಬ ಚಿಕ್ಕಪ್ಪನ ಮಗನಾದ ರವಿ ತಂದೆ ಬಂಡೆಪ್ಪಾ ಬುಕ್ಕಾ ಮೂರು ಜನರು ಕೂಡಿಕೊಂಡು ಮ್ಮ ಮೋಟರ ಸೈಕಲ್ ನಂ. ಕೆಎ-39/ಆರ್-7909 ನೇದನ್ನು ತೆಗೆದುಕೊಂಡು, ತೆಲಂಗಾಣ ರಾಜ್ಯದ ಜಹೀರಾಬಾದ ತಾಲ್ಲೂಕಿನಲ್ಲಿ ಬರುವ ಧನಶ್ರಿ ಗ್ರಾಮಕ್ಕೆ ಮ್ಮ ಸಂಭಂಧಿಕರ ಹತ್ತಿರ ಖಾಸಗಿ ಕೆಲಸ ಕುರಿತು ಮ್ಮ ಗ್ರಾಮದಿಂದ ಬಿಟ್ಟು ಹುಮನಾಬಾದ ಮನ್ನಾಎಖೇಳ್ಳಿ ಮಾರ್ಗವಾಗಿ ಧನಶ್ರೀ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೋಗಿ ಕೆಲಸ ಮುಗಿಸಿಕೊಂಡು ನಂತರ ಅಲ್ಲಿಂದ ಬಿಟ್ಟು ಮನ್ನಾಎಖೇಳ್ಳಿ ಮಾರ್ಗವಾಗಿ ಹುಮನಾಬಾದ ಕಡೆಗೆ ಹೋಗುತ್ತಿರುವಾಗ ತಾಳಮಡಗಿ ಶಿವಾರದಲ್ಲಿ ಅಂದರೆ ಬ್ರಿಡ್ಜ ಹತ್ತಿರ ಎನ್.ಎಚ್-65 ರೋಡಿನ ಮೇಲೆ ಹೋಗುತ್ತಿರುವಾಗ ತಮ್ಮ ದ್ವೀಚಕ್ರ ವಾಹನ ಚಲಾಯಿಸುತ್ತಿದ್ದ ದತ್ತು ತಂದೆ ಶರಣಪ್ಪಾ ಬುಕ್ಕ ಇತನು ಸದರಿ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಿಂದ್ದೋಮ್ಮೇಲೆ ವಾಹನ ಹಿಡಿತ ತಪ್ಪಿ ರೋಡಿನ ಡಿವೈಡರಗೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಯವರ ಕಾಲಿಗೆ ಮತ್ತು ಕೈಗಳಿಗೆ ಸಣ್ಣ-ಪುಟ್ಟ ಗುಪ್ತಾಗಾಯಗಳು ಆಗಿರುತ್ತª, ವಾಹನ ಚಲಾಯಿಸುತ್ತಿದ್ದ ದತ್ತು ಇತನಿಗೆ ನೋಡಲು ಆತನಿಗೆ ಬಲಗೈಯ ಹತ್ತಿರ ರಕ್ತಗಾಯ, ಹಣೆಯ ಹತ್ತಿರ ಗುಪ್ತಗಾಯ, ಬಲಗಾಲಿನ ಪಾದದ ಹತ್ತಿರ ರಕ್ತಗಾಯ ಹಾಗು ತಲೆಯಲ್ಲಿ ಭಾರಿ ರಕ್ತಗಾಯವಾಗಿರುತ್ತದೆ, ಅದೇ ರೀತಿಯಾಗಿ ರವಿ ಇತನಿಗೆ ನೋಡಲು ಆತನಿಗೂ ಕೂಡ ಬಲಗಾಲಿನ ಮೋಳಕಾಲಿನ ಹತ್ತಿರ ತರಚಿದ ಗಾಯ, ತಲೆಯಲ್ಲಿ ಗುಪ್ತಗಾಯ ಹಾಗೂ ಮೈತುಂಬ ಸಣ್ಣ-ಪುಟ್ಟ ಗಾಯಗಳು ಆಗಿರುತ್ತವೆ, ಅದೇ ಸಮಯಕ್ಕೆ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದು ನೋಡಿ ಗಾಯಗಳು ಆಗಿರುವುದು ಕಂಡು ಚಿಕಿತ್ಸೆ ಕುರಿತು ತಮ್ಮ ಪೊಲೀಸ್ ವಾಹನದಲ್ಲಿಯೇ ಕೂಡಿಸಿಕೊಂಡು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 80/2020, ಕಲಂ. 279, 337, 338 ಐಪಿಸಿ :-
ದಿನಾಂಕ 17-03-2020 ರಂದು ಫಿರ್ಯಾದಿ ಸಚಿನ ತಂದೆ ಬಾಲಾಜಿ ಗಾಜರೆ, ಸಾ: ಹಲಸಿ ತೂಗಾಂವ ರವರು ತಮ್ಮೂರ ಶಿವಕುಮಾರ ತಂದೆ ರಾಮರಾವ ಹಡೋಳೆ ರವರು ಶಿವಕುಮಾರ ತಂದೆ ರಾಮರಾವ ಹಡೋಳೆ ರವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಾಗರಾಳ ಗ್ರಾಮಕ್ಕೆ ಮೊಟಾರ್ ಸೈಕಲ ನಂ. ಕೆಎ-39/ಆರ್-1128 ನೇದ್ದರ ಮೇಲೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ನಾಗರಾಳ ಗ್ರಾಮದಿಂದ ಮ್ಮೂರಿಗೆ ಹೋಗುವಾಗ ಮೋಟಾರ್ ಸೈಕಲ ಮನೋಜ ಲಿಂಬೋನೆ ಇವನು ಚಲಾಯಿಸಿ ಭಾಲ್ಕಿಯ ಶಂಕರಲಿಂಗ ಮಠ ದಾಟಿ ಸ್ವಲ್ಪ ಮುಂದೆ ಬಂದಾಗ ಧನರಾಜ ರಿಕ್ಕೆ ರವರ ಹೊಲದ ಹತ್ತಿರ ಬಂದಾಗ ಭಾಲ್ಕಿ ಕಡೆಯಿಂದ ಮೊಟಾರ್ ಸೈಕಲ ನಂ. .ಪಿ-28/ಎಂ-1731 ನೇದರ ಚಾಲಕನಾದ ಆರೋಪಿಯು ತನ್ನ ಮೊಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬರುವಾಗ ಮನೋಜ ಲಿಂಬುನೆ ಇವನು ಕೂಡಾ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗುವಾಗ ಎರಡು ಮೋಟಾರ ಸೈಕಲ ಚಾಲಕರು ಒಬ್ಬರಿಗೊಬ್ಬರು ಪರಸ್ಪರ ಡಿಕ್ಕಿ ಮಾಡಿಕೊಂಡಿದ್ದರಿಂದ ಫಿರ್ಯಾದಿಯ ಬಲಗೈ ಮೊಣಕೈ ಮತ್ತು ಅಂಗೈಯಲ್ಲಿ ರಕ್ತಗಾಯವಾಗಿರುತ್ತದೆ, ಮನೋಜ ಇವನಿಗೆ ತಲೆಯಲ್ಲಿ, ಮುಖಕ್ಕೆ ರಕ್ತಗಾಯ ಮತ್ತು ಬಲಗಾಲ ಮೊಣಕಾಲ ಮೇಲೆ ರಕ್ತಗಾಯವಾಗಿರುತ್ತದೆ, ಸಚಿನ ತಂದೆ ಶಿವರಾಜ ಇವನಿಗೆ ಮುಖಕ್ಕೆ, ಹಣೆಗೆ ಮತ್ತು ಬಲಗೈ ಮೊಣಕೈಗೆ ರಕ್ತಗಾಯವಾಗಿರುತ್ತದೆ ಹಾಗೂ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ಚಾಲಕ ನರಸಿಂಗ ತಂದೆ ನಾಗಪ್ಪಾ ಜಾಧವ ಸಾ: ಖಂಡ್ರೆ ತಾಂಡಾ ಭಾಲ್ಕಿ ಇತನಿಗೆ ಸೊಂಟದಲ್ಲಿ ಗುಪ್ತಗಾಯ ಮತ್ತು ಬಲ ಭುಜದಲ್ಲಿ ರಕ್ತಗಾಯವಾಗಿರುತ್ತದೆ, ಅದೇ ಸಮಯಕ್ಕೆ ಹಿಂದೆ ಬರುತ್ತಿದ್ದ ಮ್ಮೂರ ವಾಮನ ತಂದೆ ದತ್ತು ಸಾಳಂಕೆ, ಅಭಿಷೇಕ ತಂದೆ ಸಂಜೀವ ಪಿಚಾರೆ ರವರು 108 ಅಂಬಿಲೆನ್ಸಗೆ ಕರೆ ಮಾಡಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ನಂತರ ಮನೊಜ ಮತ್ತು ಸಚಿನ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: