ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-03-2020
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 50/2020, ಕಲಂ.
454, 380 ಐಪಿಸಿ :-
ದಿನಾಂಕ 22-03-2020
ರಂದು 1400 ಗಂಟೆಯಿಂದ 1630 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಜಗನ್ನಾಥ ತಂದೆ ಶಿವಕುಮಾರ ಬುಟ್ಟೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಶ್ರೀ ಕಾಲೋನಿ ಅಮಲಾಪೂರ ರಸ್ತೆ,
ಬೀದರ ರವರ ಮನೆಯ ಮಖ್ಯ ದ್ವಾರದ ಕೊಂಡಿಯನ್ನು ಯಾರೋ ಅಪರಿಚಿ ಕಳ್ಲರು ಮುರಿದು ಮಲಗುವ ಕೊಣೆಯಲ್ಲಿ ಸೇಲ್ಪನಲ್ಲಿ
ಲೇಡಿಸ್ ಪರ್ಸನಲ್ಲಿಟ್ಟ ನಾಲ್ಕು ವರೆ ತೋಲೆ ಬಂಗಾರದ ಗಂಟನ ಅ.ಕಿ 1,80,000/- ರೂಪಾಯಿ ನೇದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 27/2020, ಕಲಂ.
269, 270 ಐಪಿಸಿ :-
ನಿರ್ಣಾ ಗ್ರಾಮದ ಸೋಮಶೇಖರ ತಂದೆ ಷಣ್ಮುಕಯ್ಯಾ ಸ್ವಾಮಿ ಇತನು ಕೂಲಿ ಕೆಲಸ ಕುರಿತು ದುಬೈಗೆ ಹೋಗಿ ನಂತರ ದಿನಾಂಕ 12-03-2020 ರಂದು ಸಾಯಂಕಾಲ ಮರಳಿ ನಿರ್ಣಾ ಗ್ರಾಮಕ್ಕೆ ಬಂದಿರುತ್ತಾನೆ, ಅದರಂತೆ ಸದರಿ ಸೋಮಶೇಖರ ತಂದೆ ಷಣ್ಮುಕಯ್ಯಾ ಸ್ವಾಮಿ ಇತನು ನಿರ್ಣಾ ಗ್ರಾಮಕ್ಕೆ ಆಗಮಿಸಿದ ನಂತರ ಫಿರ್ಯಾದಿ
ಸುನಿತಾ ಪಿಎಸ್ಐ ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರು ಮತ್ತು ನಿರ್ಣಾ ಗ್ರಾಮದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರಾದ ಚಂದ್ರಶೇಖ ರವರು ಆಗಾಗ ಸದರಿಯವನ ಮನೆಗೆ ಭೇಟ್ಟಿ ನೀಡಿ ಅವನಿಗೆ ಗೃಹ ನಿರ್ಭಂಧದಲ್ಲಿ ಇರಲು, ಗ್ರಾಮದಲ್ಲಿ ತಿರುಗಾಡದಂತೆ ಸೂಚಿಸಿ ಕೋರಾನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿ ಹೇಳಿದ್ದು ಇರುತ್ತದೆ,
ಹೀಗಿರುವಾಗ ದಿನಾಂಕ
22-03-2020 ರಂದು ಫಿರ್ಯಾದಿಯವರಿಗೆ
ಮಾಹಿತಿ ಬಂದಿದ್ದೆನಂದರೆ ನಿರ್ಣಾ ಗ್ರಾಮದ ಬಸವೇಶ್ವರ ವ್ರತದ ಹತ್ತಿರ ಕೊರಾನಾ ವೈರಸ್ ಶಂಕಿತನಾದ ಸೋಮಶೇಖರ ತಂದೆ ಷಣ್ಮುಕಯ್ಯಾ ಸ್ವಾಮಿ ವಯ: 26 ವರ್ಷ, ಜಾತಿ: ಸ್ವಾಮಿ, ಸಾ: ನಿರ್ಣಾ, ತಾ: ಚಿಟಗುಪ್ಪ, ಜಿ: ಬೀದರ ಇತನು ಮನೆಯಲ್ಲಿ ಇರದೇ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುತ್ತಿದ್ದು ಇದರಿಂದ ಸಾರ್ವಜನರಿಕರು ಭಯ ಭೀತರಾಗಿರುತ್ತಾರೆ ಅಂತಾ ಮಾಹಿತಿ ಬಂದ ಕೂಡಲೇ ಪಿಎಸ್ಐ
ರವರು ತನ್ನ ಜೊತೆಯಲ್ಲಿ ಸಿಬ್ಬಂದಿಯವರೊಡನೆ
ನಿರ್ಣಾ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಗೆ ಹೋಗಿ ಕರ್ತವ್ಯ ನಿರತ ವೈದ್ಯಾಧಿಕಾರಿಯಾವರಾದ ಹೈದರಲಿ ಖಾನ್ ರವರಿಗೆ ಮಾಹಿತಿ ತಿಳಿಸಿ ಅವರೊಂದಿಗೆ ಬಸವೇಶ್ವರ ವೃತ್ತಕ್ಕೆ ಹೋಗಿ ಅಲ್ಲಿಯೇ ಇದ್ದ ಕೊರಾನಾ ವೈರಸ್ ಶಂಕಿತನಾದ ಸೋಮಶೇಖರ ತಂದೆ ಷಣ್ಮುಕಯ್ಯಾ ಸ್ವಾಮಿ ಇತನಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಕುರಿತು ಬೀದರನಲ್ಲಿರುವ ಬ್ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸದರಿಯನಿಗೆ
ವೈದ್ಯಾಧೀಕಾರಿಗಳು ಗೃಹ ನಿರ್ಭಂಧಲ್ಲಿ ಇರಲು ಸೂಚಿಸಿದರು ಸಹ ಬೇಕಾಬೇಟ್ಟಿಯಾಗಿ ಗ್ರಾಮದಲ್ಲಿ ತಿರುಗಾಡುತ್ತಿರುವುದಲ್ಲದೇ, ತನ್ನಿಂದ ಮುಂದೆ ಕೋರಾನಾ ವೈರಸ್ ಹರಡಬಹುದು ಅಂತಾ ಗೊತ್ತಿದ್ದು, ಉದ್ದೇಶಪೂರ್ವಕವಾಗಿ ಗ್ರಾಮದಲ್ಲಿ ಸದರಿ ಕೋರಾನಾ ಸೊಂಕಿನ ಮುಂಜಾಗ್ರತ ಕ್ರಮಗಳು ಪಾಲಿಸದೇ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದನು, ಆತನಿಗೆ ಹಾಗೇಯೇ ಬಿಟ್ಟಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣ ಆಗುವುದಲ್ಲದೇ, ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಮುಂದೆ ಕೋರಾನಾ ಸೊಂಕು ಹರಡುವ ಸಂಭವ ಇರುತ್ತದೆ, ಕಾರಣ ಕೊರಾನಾ ಶಂಕಿತನಾದ ಸೋಮಶೇಖರ ತಂದೆ ಷಣ್ಮುಕಯ್ಯಾ ಸ್ವಾಮಿ ವಯ: 26 ವರ್ಷ, ಜಾತಿ: ಸ್ವಾಮಿ, ಸಾ: ನಿರ್ಣಾ, ತಾ:
ಚಿಟಗುಪ್ಪ
ಇತನ ವಿರುದ್ದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ
ಪೊಲೀಸ್ ಠಾಣೆ ಅಪರಾಧ ಸಂ. 26/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 22-03-2020
ರಂದು ತಾನಾಜಿ ಪಿಎಸ್‌ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ
ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಾಂಡೇಶ್ವರ ಗ್ರಾಮಕ್ಕೆ ಹೋಗಿ
ಚಾಂಡೇಶ್ವರ ಗ್ರಾಮದ ಪಿಕೆಪಿಎಸ್ ಬ್ಯಾಂಕನಿಂದ ನಡೆದುಕೊಂಡು ಸ್ವಲ್ಪ ದೂರದಲ್ಲಿ ಹೊಗಿ
ಪೊಲೀಸರಿಗೆ ಸಮವಸ್ತ್ರದಲ್ಲಿ ನೋಡಿದ ಆರೋಪಿ ಉಮಾಕಾಂತ ಸೊನಾಳೆ ಸಾ: ನಾಗರಾಳ, ಸದ್ಯ: ಚಾಂಡೇಶ್ವರ ಇತನು
ತನ್ನ ಹತ್ತಿರವಿದ್ದ ಕೈಚೀಲ ಬಿಟ್ಟು ಓಡಿ ಹೊಗಿದ್ದು, ಪಂಚರ ಸಮಕ್ಷಮ ಸದರಿ ಕೈಚೀಲದಲ್ಲಿ ನೋಡಲು
1) ಓಲ್ಡ ಟಾರ್ವನ 180 ಎಮ್.ಎಲ್ ನ 5 ಪೇಪರ ಪೌಚಗಳು ಅ.ಕಿ 370/- ರೂ., 2) ಬ್ಯಾಗ ಪೈಪರ ಡಿಲಕ್ಸ್
ವಿಸ್ಕಿ 180 ಎಮ್.ಎಲ್ ನ 3 ಪೇಪರ ಪೌಚಗಳು ಅ.ಕಿ 270/- ರೂ., 3) ಓರಿಜಿನಲ್ ಚಾಯಿಸ್
ಡಿಲಕ್ಸ ವಿಸ್ಕಿ 90 ಎಮ್.ಎಲ್ ನ 45 ಪೇಪರ ಪೌಚಗಳು ಅ.ಕಿ 1364/- ರೂ. ನೇದ್ದು ಇದ್ದು, ನಂತರ
ಸದರಿ ಸರಾಯಿ ಪೌಚಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment