ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 28-04-2020
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 32, 34 ಕರ್ನಾಟಕ
ಅಬಕಾರಿ ಕಾಯ್ದೆ :-
ದಿನಾಂಕ: 27/04/2020
ರಂದು 1630 ಗಂಟೆಗೆ ಮೇಹಕರ ಪೊಲೀಸ ಕಾಶಿನಾಥ ರೋಳಾ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ
04 ಜನ ಆರೋಪಿತರು, ಎರಡು ಮೋಟಾರ ಸೈಕಲ್ಗಳು ,
ಒಂದು
ಜ್ಞಾಪನ ಪತ್ರ ಅದರೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಎರಡು ಪ್ರತೇಕವಾದ ಬಟ್ಟೆ
ಚೀಲದಲ್ಲಿ ಹಾಕಿರುವ 650 ಎಮ್.ಎಲ್. ಸಾಮಥ್ರ್ಯವುಳ್ಳ ಒಟ್ಟ್ಟು 24 ಟುಬರ್ಗ ಬಿಯರ
ಬಾಟಲಗಳು ಅ: ಕಿ: 3960/- ಮತ್ತು ಇನ್ನೊಂದು ಬಟ್ಟೆ ಚೀಲದಲ್ಲಿ 180 ಎಮ್.ಎಲ್ ಸಾಮರ್ಥವ್ಯವುಳ್ಳ
40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇದ್ದು ಇವುಗಳ ಅ: ಕಿ: 8,200/-
ನೇದ್ದನ್ನು ಹಾಜರು ಪಡೆಸಿದ್ದು ಅವನ್ನು ಸ್ವೀಕರಿಸಿಕೊಂಡು ಅದರಲ್ಲಿ ಸಾರಾಂಶವೆನೆಂದರೆ,
ಈ
ಮೂಲಕ ನಿಮಗೆ ಜ್ಞಾಪನ ಪತ್ರ ಕೊಡುವುದೇನೆಂದ್ದರೆ, ದಿನಾಂಕ:
27-04-2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೇನೆಂದ್ದರೆ,
ಅಳವಾಯಿ
ಕಡೆಯಿಂದ ಗುಂಜರಗಾ ಮಾರ್ಗವಾಗಿ ಎರಡು ಮೋಟಾರ ಸೈಕಲ್ ಮೇಲೆ ಇಬ್ಬರಿಬ್ಬರೂ ವ್ಯಕ್ತಿಗಳು
ಕುಳಿತುಕೊಂಡು ಸಾರಾಯಿ ತರುತ್ತಿದ್ದಾರೆಂದು ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ 650 ಎಮ್.ಎಲ್ ಸಾಮಥ್ರ್ಯವುಳ್ಳ 24 ಟುಬರ್ಗ (TUBROG
) ಬೀಯರ ಬಾಟಲಗಳು ವಿನೋದ ಮತ್ತು ಅವಿನಾಶ ಇವರ ಮೋಟಾರ
ಸೈಕಲ್ ಮೇಲೆ ಇರುವ ಪೇಪರ ಕಾಟೂನಲಿದ್ದ ವಸ್ತುಗಳ ಬಗ್ಗೆ ಕೇಳಿದಾಗ ಇವನು ಇದರಲ್ಲಿ 180 ಎಮ್.ಎಲ್
ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇರುವುದಾಗಿ ತಿಳಿಸಿದ್ದು
ಇರುತ್ತದೆ ಇವರಿಗೂ ಸಹ ಇದರ ಬಗ್ಗೆ ವಿಚಾರಿಸಿದಾಗ ಯಾವುದೇ ಪ್ರಾಧಿಕಾರದ ಪರವಾನಿಗೆ
ಇರುವುದಿಲ್ಲ ಅನಧಿಕೃತವಾಗಿ ಮಾರಾಟ ಮಾಡಲು ಮೋಟಾರ ಸೈಕಲ ಮೆಲೆ ಒಯ್ಯುತ್ತಿರುವುದಾಗಿ
ತಿಳಿಸಿರುತ್ತಾರೆ. ಪೇಪರ ಕಾಟೂನ ಮತ್ತು ಬಟ್ಟೇ ಚೀಲದಲ್ಲಿನ ಸಾರಾಯಿ ಬಾಟಲಗಳನ್ನು ಪರಿಶೀಲಿಸಿದಾಗ ವಿಮಲ ಪಾನ ಮಸಾಲ ಬರೆದಿರುವ
ಚೀಲದಲ್ಲಿ ಪರಿಶೀಲಿಸಲು ಇದರಲ್ಲಿ 650 ಎಮ್.ಎಲ್ ಸಾಮಥ್ರ್ಯವುಳ್ಳ 24 (TUBROG
) ಬೀಯರ ಬಾಟಲಗಳಿದ್ದು, ಅವುಗಳ
ಅ: ಕಿ: 3,960/- ರೂ ನೇದು ಇರುತ್ತದೆ.
ಮತ್ತು ಇನ್ನೊಂದು ಪೇಪರ ಕಾಟೂನನಲ್ಲಿ 180
ಎಮ್.ಎಲ್ ಸಾಮರ್ಥವ್ಯವುಳ್ಳ 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಇದ್ದು ಇವುಗಳ ಅ:
ಕಿ: 8,200/- ಇರುತ್ತದೆ. ಹೀಗೆ ಒಟ್ಟು
24 (TUBROG ) ಬೀಯರ
ಬಾಟಲಗಳು ಮತ್ತು 40 ರಾಯಲ್ ಚಾಲೆಂಜ್ಸ ವಿಸ್ಕಿ ಸಾರಾಯಿ ಬಾಟಲಗಳು ಸೇರಿ ಅ;
ಕಿ:
12,160/- ರೂ ಇರುತ್ತದೆ. 1. ಹಿರೋ ಹೊಂಡ ಸ್ಲೇಂಡರ ಪಲ್ಸ ಮೋಟಾರ ಸೈಕಲ್
ನಂ ಕೆಎ 39 ಕೆ 2223 : ಕಿ: 25000/- ಮತ್ತು ಇನ್ನೊಂದು ಹೊಂಡ ಶೈನ್ ಮೋಟಾರ ಸೈಕಲ ನಂ ಎಪಿ 13
ಎನ್ 7798 ಅ; ಕಿ: 30,000/-
ರೂ ಇವುಗಳನ್ನು ಸಮೇತ ಜಪ್ತಿ ಮಾಡಿಕೊಂಡ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಾಗಿದೆ.
ಸಂತಪೂರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 31/2020 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕಃ 27/04/2020 ರಂದು ಬೆಳ್ಳಿಗ್ಗೆ 0930 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ ಒಬ್ಬ ವ್ಯಕ್ತಿಯು ತನ್ನ ಮೋಟಾರ ಸೈಕಲ ಮೇಲೆ ಔರಾದ(ಬಿ)
ಕೆಡೆಯಿಂದ ಒಂದು ಬಿಳಿ ಕ್ಯಾನಿನಲ್ಲಿ ಕಳ್ಳ ಭಟ್ಟಿ ಸರಾಯಿ ತುಂಬಿಕೊಂಡು ಮಾರಾಟ ಮಾಡಲು
ತರುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರಗೆ ಸಿಬ್ಬಂದಿಯೊಂದಿಗೆ ಹೊಗಿ ದಾಳಿ ಮಾಡಿ ಸದರಿ
ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ
ವಿಚಾರಿಸಿದ್ದು ಅವನು ತನ್ನ ಹೇಸರು ದಿನಾನಾಥ ತಂದೆ ನಾಮದೇವ ಜಮಾದಾರ ವ/ 23 ವರ್ಷ ಜಾ/ ಟೋಕ್ರಿ ಕೊಳಿ
ಉ/ ಕೂಲಿ ಸಾ/ ಚಾಂಬೋಳ ತಾ/ ಬೀದರ ಜಿಲ್ಲಾ ಬೀದರ
ಅಂತ ತಿಳಿಸಿದ್ದು ನಂತರ ಅವನ ಹತ್ತಿರ ಇದ್ದ ಒಂದು ಬಿಳಿ ಪ್ಲಾಸ್ಟಿಕ ಕ್ಯಾನವನ್ನು ನೋಡಲಾಗಿ
ಅದರಲ್ಲಿ ಅಂದಾಜು 5 ಲೀಟರಿನಷ್ಟು ಕಳ್ಳ ಭಟ್ಟಿ ಸರಾಯಿ ಇದ್ದು ಸದರಿ ಸರಾಯಿಯನ್ನು ಒಂದು ಲೀಟರಿಗೆ 200-/ರೂಪಾಯಿ ಯಂತೆ ಒಟ್ಟು ಅ,ಕಿ 1000/-ರೂಪಾಯಿ ಆಗಬಹುದು.
ಆರೋಪಿತನಿಗೆ ಪಂಚರ ಸಮಕ್ಷಮ ಅಂಗ ಶೋಧನ ಮಾಡಲಾಗಿ ಸದರಿ ಆರೋಪಿತನ ಹತ್ತಿರ ಇದ್ದ ಒಟ್ಟು ನಗದು ಹಣ 1000/-ರೂ.ಪಾಯಿ ಸಿಕ್ಕಿದ್ದು
ಇರುತ್ತದೆ ಮತ್ತು ಅವನ ಹತ್ತಿರ ಇದ್ದ ಮೊಟಾರ ಸೈಕಲವನು ಪರಿಶಿಲಿಸಿ ನೋಡಿದ್ದಾಗ ಪಲ್ಸರ್ ಬಜಾಜ ನಂ
ಟಿ,ಎಸ್, 08 ಜಿ ಕ್ಯೂ 6466 ಇದ್ದು ಅದರ ಕಿಮ್ಮತ್ತು 40.000-/ ನೇದ್ದನ್ನು ಜಪ್ತಿ
ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 273 278 284 ಜೊತೆ 34 ಐಪಿಸಿ ಕಲಂ 7 ಕೊಟ್ಪಾ ಕಾಯ್ದೆ:-
ದಿನಾಂಕ 27-04-2020 ರಂದು 1600 ಗಂಟೆಗೆ ಔರಾದ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ಔರಾದ ಪಟ್ಟಣದಲ್ಲಿ ಸಂಜುಕುಮಾರ ತಂದೆ ಜಗನಾಥ
ನಿಮರ್ೂಳೆ ಇತನು ಶಂಕರ ತಂದೆ ಬಸವರಾಜ ದೇಶಮುಖ ರವರ ಕಾಂಪ್ಲೇಕ್ಸನಲ್ಲಿರುವ ಅಂಗಡಿಯಲ್ಲಿ
ಸಾರ್ವಜನಿಕರಿಗೆ ಹಾನಿಕಾರಕ ಪದಾರ್ಥಗಳಿಂದ ಕಲಬರೆಕೆ ಮಾಡಿ ತಯಾರು ಮಾಡಿದ ತಂಬಾಕು ಹಾಗೂ ಪಾನಮಸಾಲ
ಮಾರಾಟಕ್ಕಾಗಿ ಸಾಗಿಸಲು ಸಂಗ್ರಹಣೆ ಮಾಡಿಕೊಂಡಿರುತ್ತಾರೆ. ಎಂದು ಮಾಹಿತಿ ಬಂದ ಮೇರೆಗೆ
ಸಿಬ್ಬಂದಿಯೊಂದಿಗೆ ಹೋಗಿ ದೇಶಮುಖ ರವರ
ಕಾಂಪ್ಲೇಕ್ಸ ಒಳಗಡೆ ಹೋಗುವಾಗ ಕಿರಾಣಾ ಅಂಗಡಿಯಲ್ಲಿದ್ದ ಒಬ್ಬನು ನೋಡಿ ಓಡಿಹೋಗಿದ್ದು ಇನ್ನೊಬ್ಬನಿಗೆ ಹಿಡಿದುಕೊಂಡು
ವಿಚಾರಿಸಲು ತನ್ನ ಹೆಸರು ಸಂತೋಷ ತಂದೆ ಪ್ರಕಾಶ
ನಿಮರ್ೂಳೆ ವಯ 42 ವರ್ಷ ಜಾತಿ ಲಿಂಗಾಯತ ಉದ್ಯೋಗ ವ್ಯಾಪಾರ ಸಾ: ಔರಾದ(ಬಿ) ಅಂತ ತಿಳಿಸಿ ಓಡಿಹೊದವರು ತನ್ನ
ಚಿಕ್ಕಪ್ಪನ ಮಗ ಸಂಜುಕುಮಾರ ತಂದೆ ಜಗನಾಥ ನಿಮರ್ೂಳೆ ಸಾ: ಔರಾದ(ಬಿ) ರವರು ಇರುತ್ತಾನೆ ಎಂದು
ಹೇಳಿರುತ್ತಾರೆ. ಕಿರಾಣಾ ವಸ್ತುಗಳೋಂದಿಗೆ
ತಂಬಾಕು ಮತ್ತು ಸಾಗರ ಪಾನ ಮಸಲಾ ಇರುವ ಒಟ್ಟು 5 ಬಿಳಿ ಚಿಲಗಳಿದ್ದು ಇವುಗಳು ಎಲ್ಲಿಂದ ತಂದಿರುತ್ತಿರಿ ಎಂದು ಕೇಳಿದಾಗ ಸಾಗರ ಪಾನ ಮಸಲಾ
ಹಾಗೂ ತಂಬಾಕು ವನ್ನು ಮಹಾರಾಷ್ಟ್ರದಲ್ಲಿ ನಿಷೇಧವಾಗಿದ್ದರಿಂದ ನಾವು ಮಹಾರಾಷ್ಟ್ರ ರಾಜ್ಯಕ್ಕೆ
ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸಲು ಕಲಬೆರಕೆ
ಪಾನಮಸಲಾ ಮತ್ತು ತಂಬಾಕನ್ನು ನಾನು ಹಾಗೂ ಸಂಜುಕುಮಾರ ಇಬ್ಬರೂ ಔರಾದ ಪಟ್ಟಣದ ಸಂತೋಷ ಜಿಗರ್ೆ
ರವರಿಂದ ಖರೀದಿಸಿದ್ದು , ಸಂತೋಷ ಜೀಗರ್ೆ ರವರು ಬೀದರ ಕಾಸೀಪ್ ತಂದೆ ಜಾವೀದ ಎನ್ನುವವರಿಂದ ಖರಿದಿಸಿ ನಮಗೆ ಮಾರಾಟಕ್ಕೆ
ಖರೀದಿ ಕೊಟ್ಟಿದ್ದರಿಂದ ಸಂಗ್ರಹಿಸಿಟ್ಟುಕೊಂಡಿರುತ್ತೇವೆ ಎಂದು ತಿಳಿಸಿರುತ್ತಾರೆ. ನಂತರ ಸದರಿ 5 ಚೀಲಗಳಲ್ಲಿ ಪರೀಶೀಲಿಸಿ
ನೋಡಲು 4 ಚೀಲಗಳಲ್ಲಿ ಎಸ್ ಆರ್-1 ಎಂದು ಬರೆದ ತಂಬಾಕಿನ ತಲಾ 52 ಪಾಕೇಟಗಳು ಇದ್ದು ಈ
ಪಾಕೇಟಗಳಲ್ಲಿ ತಲಾ ಎಸ್ ಆರ್ -1 ಎಂದು ಬರೆದ 75 ತಂಬಾಕಿನ ಪೌಚಗಳಿಗರುತ್ತವೆ, ಇದರ ಒಂದ ಪೌಚನ ಬೆಲೆ 1/-ರೂ ಯಂತೆ ಒಟ್ಟು 15,600/-ರೂ ಬೆಲೆಯ ತಂಬಾಕು ಇರುವ ಪೌಚಗಳಿದ್ದು ಹಾಗೂ ಇನ್ನೊಂದು ಬಿಳಿ ಚೀಲದಲ್ಲಿ ಸಾಗರ ಪಾನ ಮಸಲಾ
ಎಂದು ಬರೆದ ಒಟ್ಟು 52 ಪಾಕೇಟಗಳಿದ್ದು ಅದರಲ್ಲಿಯು ಸಹ ಒಟ್ಟು 75 ಪಾನ ಮಸಲಾ ಇರುವ ಪೌಚಗಳಿರುತ್ತವೆ ಇದರ ಒಂದು ಪೌಚನ ಬೆಲೆ 1/-ರೂ. ಯಂತೆ ಒಟ್ಟು 3900/-ರೂ ಬೆಲೆಯುಳ್ಳದ್ದು ಇರುತ್ತವೆ. ಅವುಗಳು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ
ವ್ಯೆಕ್ತಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರನ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 27/2020 ಕಲಂ 379 ಐಪಿಸಿ :-
ದಿನಾಂಕ 12-03-2020 ರಂದು 1500 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ದತ್ತಾತ್ರಿ ಶಂಪೆ ವಯ 28 ವರ್ಷ ಜಾತಿ ಎಸ್.ಸಿ ಉ;ಡಾಟಾ ಇಂಟ್ರಿ ಅಪರೇಟರ
ಜಿಲ್ಲಾಧಿಕಾರಿಗಳ ಕಛೇರಿ ಬೀದರ ಸಾ:ಚಿಮಕೊಡ ಗ್ರಾಮ ತಾ:ಜಿ;ಬೀದರ ದಾರರು ತನ್ನ ಹಿರೊ ಸ್ಪಲೆಂಡರ್ ಪ್ಲಸ್ ದ್ವಿಚಕ್ರ
ವಾಹನ.ನಂ.ಕೆ.ಎ.38-ಯು-9556 ಅ.ಕಿ.24000/-ರೂ ನೇದನ್ನು ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ವಾಹನ ಪಾರ್ಕಿಗನಲ್ಲಿ ನಿಲ್ಲಿಸಿ ಕಛೇರಿಗೆ
ಹೋಗಿ ಮರಳಿ ರಾತ್ರಿ 2000 ಗಂಟೆಗೆ ಬಂದು ನೋಡಲಾಗಿ, ದ್ವಿಚಕ್ರವಾಹನ ಇರಲಿಲ್ಲಾ. ಸದರಿ ದ್ವಿಚಕ್ರವಾಹನವನ್ನು ಯಾರೂ ಅಪರಿಚಿತ ಕಳ್ಳರು ದಿನಾಂಕ 2-03-2020 ರಂದು 1500 ಗಂಟೆಯಿಂದ ರಾತ್ರಿ 2000 ಗಂಟೆಯ ಅವಧಿಯಲ್ಲಿ ಕಳವು
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.