Police Bhavan Kalaburagi

Police Bhavan Kalaburagi

Wednesday, April 22, 2020

BIDAR DISTRICT DAILY CRIME UPDATE 22-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 22-04-2020

ಬಗದಲ ಪೊಲೀಸ್ ಠಾಣೆ   ಅಪರಾಧಸಂಖ್ಯೆ 28/2020 ಕಲಂ 32,34 ಕೆಇ ಕಾಯ್ದೆ & 273, 188 ಐಪಿಸಿ  :-

ದಿನಾಂಕ 21/04/2020 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ 1700 ಗಂಟೆಗೆ  ಖಾಸೆಂಪುರ (ಸಿ) ರೋಡ ಬಗದಲ ತಾಂಡ ಹತ್ತಿರ ಭಾಗಮ್ಮಾ ಗುಡಿ  ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಅನಧಿಕೃತವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚೀತ ಭಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಇಬ್ಬರು ವ್ಯಕ್ತಿಗಳು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವದನ್ನು ಖಚೀತ ಪಡಿಸಿಕೊಂಡು ದಾಳಿ ಮಾಡಿದಾಗ  ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು   ಓಡಿಹೊಗಿರುತ್ತಾರೆ ಅವರಿಗೆ ಬೆನ್ನಟ್ಟಿದರು ಸಹ ಇಬ್ಬರು ವ್ಯಕ್ತಿಗಳು ಸಿಕ್ಕಿರುವದಿಲ್ಲಾ ಸ್ಧಳದಲ್ಲಿ ಇದ್ದ ಒಂದು 5 ಲೀಟರ ಪ್ಲಾಸ್ಟಿಕ ಡಬ್ಬಿಯಲ್ಲಿ ನೋಡಲು ಕಳ್ಳಭಟ್ಟಿ ಸರಾಯಿ ವಾಸನೆ ಬಂದಿರುತ್ತದೆ ಅದರಲ್ಲಿ ಅಂದಾಜು 4 ಲೀಟರ ಕಳ್ಳಭಟ್ಟಿ ಸರಾಯಿ ಇರುತ್ತದೆ. ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ  ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಹೆಸರು ವಿಚಾರಿಸಲು ಅನೀಲ ತಂದೆ ಲಕ್ಷ್ಮಣ ವಯ 40 ವರ್ಷ ಜಾತಿ:ಕ್ರಿಶ್ಚನ ಉದ್ಯೋಗ:ಕೂಲಿ ಕೆಲಸ ಸಾ||ಖಶೆಂಪುರ (ಸಿ) ಅಂತ ತಿಳಿಸಿ ಮತ್ತೆ ಹೇಳಿದ್ದೆನೆಂದರೆ ನಮ್ಮ ಗ್ರಾಮ ಪಕ್ಕದಲ್ಲಿ ಇದ್ದ ಬಗದಲ ತಾಂಡದ ಜನರು ಗೊತ್ತಿರುತ್ತಾರೆ. ಇಲ್ಲಿ ಅನಧಿಕೃತವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿಹೊದವರನ್ನು ನೋಡಿದ್ದು ಅವರ ಹೆಸರು ನರೇಶ ತಂದೆ ರೇಕುಸಿಂಗ್ ಪವಾರ ವಯ 34 ವರ್ಷ ಜಾತಿ:ಲಂಬಾಣಿ ಉದ್ಯೋಗ: ಕೂಲಿ ಕೆಲಸ ಇನ್ನೊಬ್ಬನ ಹೆಸರು ಪಪ್ಪು @ ವಿಷ್ಣು ತಂದೆ ವಾಚುಸಿಂಗ್ ರಾಠೋಡ ವಯ 28 ವರ್ಷ ಜಾತಿ: ಲಂಬಾಣಿ ಉದ್ಯೊಗ: ಕೂಲಿ ಕೆಲಸ  ಇಬ್ಬರು ಸಾ|| ಬಗದಲ ತಾಂಡಾ () ಅಂತ  ತಿಳಿದು ಬಂದಿರುತ್ತದೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 45/2020 ಕಲಂ 273, 284 ಐಪಿಸಿ ಜೊತೆ 32, 34 ಕೆ.. ಕಾಯ್ದೆ ;-

ದಿನಾಂಕ: 21/04/2020  ನಾನು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಒಬ್ಬ ವ್ಯಕ್ತಿ  ಬೀರಿ(ಕೆ) ಶಿವಾರದಲ್ಲಿ  ರಾಮಲಿಂಗೇಶ್ವರ ದೇವಸ್ಥಾನ ಹಿಂದೆ ಇರುವ ಹೊನ್ನಮ್ಮಾ ರವರ ಹೊಲದಲ್ಲಿ ಒಂದು ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಇಟ್ಟುಕೊಂಡು ಮಾರಾಟ ಮಾಡುತಿದ್ದಾನೆ ಅಂತ ಖಚೀತ ಬಾತ್ಮಿ ಮೇರೆಗೆ ಸಿಬ್ಬಂದಿಯೊಂದಿಗೆ ರಾಮಲಿಂಗೇಶ್ವರ ದೇವಸ್ಥಾನದ ಸ್ವಲ್ಪ ದೂರುದಲ್ಲಿ   ಹೊಗಿ ಜೀಪ ಮರೆಯಾಗಿ ನಿಲ್ಲಿಸಿ, ನಾವು ಎಲ್ಲರು ಜೀಪನಿಂದ ಕೆಳಗೆ ಇಳಿದು  ನಡೆದುಕೊಂಡು ಹೋಗಿ  ಮರೆಯಾಗಿ ನಿಂತು ನೊಡಲು ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು 20 ಲೀಟರ ನಿರೀನ  ಪ್ಲಾಸ್ಟಿಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ ಇಟ್ಟುಕೊಂಡು ಒಂದು ಗ್ಲಾಸದಿಂದ ಸಾರ್ವಜನಿಕರಿಗೆ ಮಾರಾಟ ಮಾಡುತಿರುವುದನ್ನು ನೊಡಿ ಆತನ ಮೇಲೆ 1645  ಗಂಟೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹೀಡಿದಾಗ ಸರಾಯಿ ಖರೀದಿ ಮಾಡಲು ಬಂದ ವ್ಯಕ್ತಿಗಳು ನಮಗೆ ನೋಡಿ ಓಡಿ ಹೋಗಿರುತ್ತಾರೆ. ನಂತರ ಆತನ ಹೆಸರು ಮತ್ತು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು  ರಾಜಕುಮಾರ @ ಪಪ್ಪು ತಂದೆ ತುಳಸಿರಾಮ ಅವತಾಡೆ ವಯ 35 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಬೀರಿ(ಕೆ) ಅಂತ ತಿಳಿಸಿರುತ್ತಾನೆ. ನಂತರ ಆತನ ಹತ್ತಿರ ಇದ್ದ ಕ್ಯಾನ ನೊಡಲು 20 ಲೀಟರ ನೀರಿನ ಪ್ಲಾಸ್ಟೀಕ  ಕ್ಯಾನ   ಕಲಬರಕೆ ಸರಾಯಿ (ಕಳ್ಳಭಟ್ಟಿ ಸರಾಯಿ  ಆತನ ಅಂಗ ಜಡತಿ ಮಾಡಿ ನೊಡಲಾಗಿ ಆತನ ಶೇರ್ಟಿನ ಜೇಬಿನಲ್ಲಿ 420/- ರೂ ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: